ಪಾಪಡಿ ಚಾಟ್
ಮೂಲ | |
---|---|
ಪ್ರಾಂತ್ಯ ಅಥವಾ ರಾಜ್ಯ | ಭಾರತೀಯ ಉಪಖಂಡ |
ವಿವರಗಳು | |
ಸೇವನಾ ಸಮಯ | ಸಾಂಪ್ರದಾಯಿಕ ತ್ವರಿತ ಆಹಾರ ಮತ್ತು ಬೀದಿ ಆಹಾರ |
ಪಾಪಡಿ ಚಾಟ್ ಭಾರತೀಯ ಉಪಖಂಡದ ಒಂದು ಜನಪ್ರಿಯ ಸಾಂಪ್ರದಾಯಿಕ ತ್ವರಿತ ಆಹಾರ ಮತ್ತು ಬೀದಿ ಆಹಾರ, ಗಮನಾರ್ಹವಾಗಿ ಉತ್ತರ ಭಾರತ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ.[೧][೨][೩] ಭಾರತದಾದ್ಯಂತ ಅನೇಕ ವಿವಿಧ ಹೆಚ್ಚುವರಿ ಖಾದ್ಯಗಳನ್ನು ಕೂಡ ಪಾಪಡಿ ಚಾಟ್ ಎಂದು ಉಲ್ಲೇಖಿಸಲಾಗುತ್ತದೆ.[೧] ಅಮೇರಿಕದಲ್ಲಿ ಕೆಲವು ರೆಸ್ಟೋರೆಂಟ್‍ಗಳು ಈ ಖಾದ್ಯದ ಸಾಂಪ್ರದಾಯಿಕ ರೂಪವನ್ನು ಬಡಿಸುತ್ತವೆ.[೪][೫]
ತಯಾರಿಕೆ
[ಬದಲಾಯಿಸಿ]ಪಾಪಡಿ ಚಾಟ್ ಅನ್ನು ಸಾಂಪ್ರದಾಯಿಕವಾಗಿ ಪಾಪಡಿ ಎಂದು ಕರೆಯಲ್ಪಡುವ ಗರಿಗರಿಯಾದ ಕಣಕದ ಬಿಲ್ಲೆಗಳು, ಜೊತೆಗೆ ಬೇಯಿಸಿದ ಕಡಲೆ, ಬೇಯಿಸಿದ ಆಲೂಗಡ್ಡೆ, ಮೊಸರು, ಮತ್ತು ಹುಣಸೆ ಚಟ್ನಿ ಬಳಸಿ ತಯಾರಿಸಲಾಗುತ್ತದೆ.[೧][೬] ಮೇಲೆ ಚಾಟ್ ಮಸಾಲಾ ಮತ್ತು ಸೇವ್ ಅನ್ನು ಸಿಂಪಡಿಸಲಾಗುತ್ತದೆ.[೧][೭] ಪಾಪಡಿಯನ್ನು ಸಾಮಾನ್ಯವಾಗಿ ಮೈದಾ ಮತ್ತು ತುಪ್ಪ ಅಥವಾ ಎಣ್ಣೆಯಿಂದ ತಯಾರಿಸಲಾಗುತ್ತದೆ.[೮][೯] ಪುದೀನಾ,[೬] ಕೊತ್ತಂಬರಿ[೧೦] ಮತ್ತು ಸಂಬಾರ ಪದಾರ್ಥಗಳನ್ನು[೧೧] ಕೂಡ ಬಳಸಬಹುದು. ಈ ಖಾದ್ಯವು ಸಿಹಿ, ಹುಳಿ, ಕಟುವಾದ ಮತ್ತು ಖಾರದ ರುಚಿಗಳನ್ನು, ಕೆನೆಯಂಥ ಮತ್ತು ಕುರುಕಲು ರಚನೆಯನ್ನು ಹೊಂದಿರುತ್ತದೆ.[೧][೬]
ಬೀದಿ ಆಹಾರ
[ಬದಲಾಯಿಸಿ]ಪಾಪಡಿ ಚಾಟ್ ಅನ್ನು ಭಾರತದಲ್ಲಿ ಹಲವುವೇಳೆ ಚಲಿಸುವ ಆಹಾರ ಮಳಿಗೆಗಳಲ್ಲಿ ಸರಬರಾಜು ಮಾಡಿ ಸೇವಿಸಲಾಗುತ್ತದೆ.[೬] ಭಾರತದಲ್ಲಿ, ಇದು ಇತರ ಪ್ರದೇಶಗಳಿಗೆ ಹೋಲಿಸಿದರೆ ದೇಶದ ಉತ್ತರ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿದೆ.[೧೧]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ Pathak, A. (2015). Secrets From My Indian Family Kitchen. Octopus Books. p. Pt-46. ISBN 978-1-78472-027-8. / Pathak, Anjali (March 22, 2015). "The foodie traveller … in Mumbai, India". the Guardian. Retrieved November 11, 2015.
- ↑ Fodor's Travel Publications, I. (2008). India. Fodor's India. Fodor's Travel Publications. p. 76. ISBN 978-1-4000-1912-0.
- ↑ "Ramazan Radar Chaat up a storm". The Express Tribune. June 25, 2015. Retrieved November 11, 2015.
- ↑ Allen., Jessica (July 1, 1987). "5 Best Restaurants For Chaat In New York City". CBS New York. Retrieved November 11, 2015.
- ↑ Galarneau, Andrew Z. (May 6, 2015). "Dosas steal the show at Chennai Express". Gusto. Retrieved November 11, 2015.
- ↑ ೬.೦ ೬.೧ ೬.೨ ೬.೩ Robertson, R. (2014). Robin Robertson's Vegan Without Borders. Andrews McMeel Publishing, LLC. p. 195. ISBN 978-1-4494-6133-1.
- ↑ World, E.Y.; Siciliano-Rosen, L.; Rosen, S. (2014). Delhi Food and Travel Guide: The inside scoop on the best North Indian foods in Delhi. 107. Eat Your World. p. Pt-25.
- ↑ Gopal, G. (2007). Delicious Dishes (Vegetarian). Sura Books. p. Pt-59. ISBN 978-81-7478-460-5.
- ↑ "Delhi Food and Travel Guide". Retrieved 1 January 2015.
- ↑ Gordon, James (October 1, 2012). "38: Papri Chaat at Jay Bharat". L.A. Weekly. Retrieved November 11, 2015.
- ↑ ೧೧.೦ ೧೧.೧ Batra, N. (2011). 1,000 Indian Recipes. 1,000 Recipes. Houghton Mifflin Harcourt. pp. 48–49. ISBN 978-0-544-18910-2.