ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಸೇವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೇವ್
ಸೇವ್
ಮೂಲ
ಮೂಲ ಸ್ಥಳರತ್ಲಾಮ್
ವಿವರಗಳು
ಸೇವನಾ ಸಮಯಉಪಾಹಾರ
ಮುಖ್ಯ ಘಟಕಾಂಶ(ಗಳು)ಕಡಲೆ ಹಿಟ್ಟು
ಪ್ರಭೇದಗಳುಆಲೂ ಸೇವ್

ಸೇವ್ ಕಡಲೆ ಹಿಟ್ಟಿನಿಂದ ತಯಾರಿಸಲಾದ ಮತ್ತು ಅರಿಶಿನ, ಖಾರದ ಪುಡಿ ಮತ್ತು ಅಜವಾನದಿಂದ ರುಚಿಗೊಳಿಸಲಾದ, ಎಣ್ಣೆಯಲ್ಲಿ ಕರಿಯಲಾದ, ಕುರುಕಲು ಶಾವಿಗೆಯಂತಹ ಸಣ್ಣ ಚೂರುಗಳನ್ನು ಹೊಂದಿರುವ ಒಂದು ಜನಪ್ರಿಯ ಭಾರತೀಯ ಉಪಾಹಾರ.[][][][][] ಸೇವ್ ದಪ್ಪದಲ್ಲಿ ಬದಲಾಗುತ್ತದೆ.[] ಸ್ವಾದಿಷ್ಟ ಸೇವ್ ಸೇರಿದಂತೆ, ಸೇವ್‍ನ ಸೇವಿಸಲು ಸಿದ್ಧವಾದ ವೈವಿಧ್ಯಗಳು ಭಾರತೀಯ ಅಂಗಡಿಗಳಲ್ಲಿ ಲಭ್ಯವಿವೆ.[]

ಸೇವ್‍ನ್ನು ಹಾಗೆಯೇ ತಿನ್ನಲಾಗುತ್ತದೆ ಜೊತೆಗೆ ಭೇಲ್ ಪುರಿ ಮತ್ತು ಸೇವ್ ಪೂರಿಯಂತಹ ಖಾದ್ಯಗಳ ಮೇಲೆ ಅಲಂಕಾರದ ಹರಹಾಗಿಯೂ ತಿನ್ನಲಾಗುತ್ತದೆ. ಸೇವ್‍‍ನ್ನು ಮನೆಯಲ್ಲಿ ತಯಾರಿಸಬಹುದು ಮತ್ತು ಗಾಳಿತೂರದ ಧಾರಕಗಳಲ್ಲಿ ವಾರಗಟ್ಟಲೆ ಸಂಗ್ರಹಿಸಿಡಬಹುದು.[]

ಈ ಉಪಾಹಾರವು ಮಧ್ಯಪ್ರದೇಶದಲ್ಲಿ, ವಿಶೇಷವಾಗಿ ಇಂದೋರ್, ಉಜ್ಜೈನ್ ಮತ್ತು ರತ್ಲಾಮ್ ನಗರಗಳಲ್ಲಿ ಜನಪ್ರಿಯವಾಗಿದೆ. ಅನೇಕ ಲಘು ಆಹಾರಗಳು ಸೇವ್‍ನ್ನು ಮುಖ್ಯ ಪದಾರ್ಥವಾಗಿ ಹೊಂದಿರುತ್ತವೆ. ಮಧ್ಯ ಪ್ರದೇಶದಲ್ಲಿ, ಸೇವ್‍ನ್ನು ಬಹುತೇಕ ಪ್ರತಿಯೊಂದು ಚಾಟ್ ತಿಂಡಿಯಲ್ಲಿ ಸಹ ಪದಾರ್ಥವಾಗಿ ಬಳಸಲಾಗುತ್ತದೆ. ವಿಶೇಷವಾದ ರತ್ಲಾಮಿ ಸೇವ್ ಕಡಲೆ ಹಿಟ್ಟು ಮತ್ತು ಲವಂಗದಿಂದ ತಯಾರಾಗಿರುತ್ತದೆ. ಸೇವ್‍ನ ಅನೇಕ ವೈವಿಧ್ಯಗಳನ್ನು ವಾಣಿಜ್ಯಿಕವಾಗಿ ಮಾರಾಟಮಾಡಲಾಗುತ್ತದೆ, ಉದಾಹರಣೆಗೆ ಲವಂಗ ಸೇವ್, ಟೊಮೇಟೊ ಸೇವ್, ಪಾಲಕ್ ಸೇವ್, ಸಾದಾ ಸೇವ್, ಮತ್ತು ಭುಜಿಯಾ.

ಯುನೈಟಡ್ ಕಿಂಗ್ಡಮ್‍ನಲ್ಲಿ, ಬೀಜಗಳು, ಬೇಳೆಗಳು ಮತ್ತು ಕಾಳುಗಳು ಮಿಶ್ರಣಮಾಡಿದ ಸೇವ್‍ನ ಜನಪ್ರಿಯ ವೈವಿಧ್ಯಗಳನ್ನು ಸಾಮಾನ್ಯವಾಗಿ ಬಾಂಬೆ ಮಿಕ್ಸ್ ಎಂದು ಮಾರಾಟಮಾಡಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Raina, Usha (2001). Basic Food Preparation (Third Edition). Orient Blackswan. p. 290. ISBN 8125023003.
  2. "Crispy Sev Recipe for a Crackling Diwali".
  3. Gress, Priti Chitnis (2008). Flavorful India: Treasured Recipes from a Gujarati Family. Hippocrene Books. p. 35. ISBN 0-7818-1207-0.
  4. Brennan, Jennifer (1984). The cuisines of Asia: nine great oriental cuisines by technique. St. Martin's/Marek. p. 26. ISBN 0-312-66116-9.
  5. King, Niloufer Ichaporia (2007). My Bombay kitchen: traditional and modern Parsi home cooking. University of California Press. p. 311. ISBN 0-520-24960-7.
  6. Aruna Thaker, Arlene Barton (2012). Multicultural Handbook of Food, Nutrition and Dietetics. John Wiley & Sons. p. 17. ISBN 1-4051-7358-0.
  7. Jump up to: ೭.೦ ೭.೧ Doshi, Malvi (2002). Cooking Along the Ganges: The Vegetarian Heritage of India. iUniverse. p. 174. ISBN 0-595-24422-X.


"https://kn.wikipedia.org/w/index.php?title=ಸೇವ್&oldid=818756" ಇಂದ ಪಡೆಯಲ್ಪಟ್ಟಿದೆ