ವಿಷಯಕ್ಕೆ ಹೋಗು

ಪಾದ್ರೆ ಪಿಯೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿತ್ರೇಲ್ಚೀನಾದ ಸಂತ ಪಿಯೊ

ಪಿತ್ರೇಲ್ಚೀನಾದ ಸಂತ ಪಿಯೊ (೨೫ ಮೇ ೧೮೮೭–೨೩ ಸೆಪ್ಟೆಂಬರ್ ೧೯೬೮) ಇಟಲಿ ದೇಶದ ಕಪುಚಿನ್ ಧರ್ಮಗುರು ವಾಗಿದ್ದು ಕಥೋಲಿಕ ಧರ್ಮಸಭೆ ಯಲ್ಲಿ ಸಂತ ಪದವಿ ಹೊಂದಿದ್ದಾರೆ. ಹುಟ್ಟಿದಾಗ ಅವರ ಹೆಸರು ಫ್ರಾನ್ಚೆಸ್ಕೊ ಫೊರ್ಜೊನೆ ಆದರೂ, ಕಪುಚಿನ್ ಮಠ ಸೇರಿದಾಗ ಅವರನ್ನು ಪಿಯೊ ಎಂದು ಕರೆದರು; ಗುರುಪಟ್ಟ ಪಡೆದ ಮೇಲೆ ಅವರು ಪಾದ್ರೆ ಪಿಯೊ ಎಂದು ಜನಪ್ರಿಯರಾದರು. ಅವರು ಅಸಿಸಿಯ ಸಂತ ಫ್ರಾನ್ಸಿಸರಂತೆ ಯೇಸುಕ್ರಿಸ್ತರ ಪಂಚಗಾಯಗಳನ್ನು ತಮ್ಮ ದೇಹದಲ್ಲಿ ಧರಿಸಿದ್ದ ಕಾರಣಕ್ಕೆ ಜನಜನಿತರಾಗಿದ್ದರು. ಎರಡನೇ ಪೋಪ್ ಜಾನ್ ಪಾವ್ಲ್ ರು ಜೂನ್ ೧೬, ೨೦೦೨ರಲ್ಲಿ ಅವರನ್ನು ಸಂತ ಪದವಿಗೇರಿಸಿದರು.

ಪ್ರಾರಂಭಿಕ ಜೀವನ

[ಬದಲಾಯಿಸಿ]

ಫ್ರಾನ್ಚೆಸ್ಕೊ ಫೊರ್ಜೊನೆ ಅವರು ಗ್ರಾಝಿಯೋ ಮಾರಿಯೋ ಫೊರ್ಜೊನೆ (೧೮೬೦–೧೯೪೬) ಮತ್ತು ಮರಿಯಾ ಜ್ಯುಸೆಪ್ಪ ದೆ ನುಂಝಿಯೊ ಫೊರ್ಜೊನೆ (೧೮೫೯–೧೯೨೯) ಅವರ ಮಗನಾಗಿ ೨೫ ಮೇ ೧೮೮೭ ರಂದು ತೆಂಕಣ ಇತಾಲಿಯಾದ ಕಂಪಾನಿಯಾ ಪ್ರಾಂತ್ಯಕ್ಕೆ ಸೇರಿದ ಪಿತ್ರೇಲ್ಚೀನಾ ಎಂಬ ರೈತಪಟ್ಟಣದಲ್ಲಿ ಹುಟ್ಟಿದರು. ಅವನ ತಾಯ್ತಂದೆಯರು ಕೃಷಿಜೀವನ ನಡೆಸುತ್ತಿದ್ದರು.[] he ಸ್ಥಳೀಯ ದುರ್ಗದ ಗೋಡೆಯಲ್ಲಿ ಕಟ್ಟಲಾದ ಸಂತ ಅನ್ನ ಪ್ರಾರ್ಥನಾಮಂದಿರದಲ್ಲಿ ದೀಕ್ಷಾಸ್ನಾನ ಪಡೆದ.[] ಬಾಲಕ ಫ್ರಾನ್ಚೆಸ್ಕೊ ಅದೇ ಪ್ರಾರ್ಥನಾಮಂದಿರದಲ್ಲಿ ಪೀಠಸೇವಕನಾಗಿ ಸೇವೆ ಮಾಡಿದ. (ನಂತರದ ದಿನಗಳಲ್ಲಿ ಅಮೆರಿಕದ ಕನಿಕ್ಟಿಕಟ್ ಕ್ರೋಮ್ವೆಲ್ ಪಾದ್ರೆ ಪಿಯೊ ಪ್ರತಿಷ್ಠಾನವು ಈ ಪ್ರಾರ್ಥನಾಮಂದಿರವನ್ನು ನವೀಕರಿಸಿತು).[] ಫ್ರಾನ್ಚೆಸ್ಕೊನಿಗೆ, ಮಿಕೇಲೆ ಎಂಬ ಅಣ್ಣ ಮತ್ತು ಫೆಲಿಚಿಟಾ, ಪೆಲಿಗ್ರಿನಾ ಮತ್ತು ಗ್ರಾಸಿಯಾ ಎಂಬ ತಂಗಿಯರಿದ್ದರು. (ಅವರಲ್ಲಿ ಗ್ರಾಸಿಯಾ ಮುಂದೆ ಬ್ರಿಜಿಟೈನ್ ಸಂನ್ಯಾಸಿನಿಯಾದರು). ಅವನು ಐದನೇ ವಯಸ್ಸಿನಲ್ಲೇ ತನ್ನನ್ನು ದೇವಸೇವೆಗೆ ಮುಡಿಪಾಗಿಡುವ ಸಂಕಲ್ಪ ತೊಟ್ಟನೆಂದು ಹೇಳುತ್ತಾರೆ. ಅವನು ತ್ಯಾಗಮಯ ಜೀವನ ನಡೆಸಲುದ್ದೇಶಿಸಿ ಕಲ್ಲುಗಳ ಮೇಲೆ ಮಲಗುತ್ತಿದ್ದ ಹಾಗೂ ತಲೆಗಿಂಬಾಗಿ ಕಲ್ಲನ್ನೇ ಬಳಸುತ್ತಿದ್ದನೆಂದು ಅವನ ತಾಯಿ ಸ್ಮರಿಸಿಕೊಂಡಿದ್ದಾರೆ.[] ಅವನು ತನ್ನ ಹತ್ತನೇ ವಯಸ್ಸಿನವರೆಗೆ ಹೊಲದಲ್ಲಿ ಕೆಲಸ ಮಾಡುತ್ತಾ ಕುರಿ ಕಾಯುತ್ತಾ ಇದ್ದುದರಿಂದ ಅವನ ಪ್ರಾಥಮಿಕ ವಿದ್ಯಾಭ್ಯಾಸ ತಡವಾಯಿತು.[][]

ಪಿತ್ರೇಲ್ಚೀನಾ ಒಂದು ಧರ್ಮಭೀರುಗಳ ಪಟ್ಟಣವಾಗಿದ್ದುದರಿಂದ ವರ್ಷವಿಡೀ ಒಂದಿಲ್ಲೊಂದು ಸಂತರ ಹಬ್ಬಗಳು ಆಚರಣೆಯಾಗುತ್ತಿದ್ದವು. ಹಾಗಾಗಿ ಫೊರ್ಜೊನೆ ಕುಟುಂಬದಲ್ಲಿ ಸಾತ್ವಿಕ ಜೀವನ ನೆಲೆಗೊಂಡಿತ್ತು. ಅವರು ಪ್ರತಿದಿನವೂ ಬಲಿಪೂಜೆಯಲ್ಲಿ ಭಾಗವಹಿಸಿ, ಸಂಜೆ ತಪ್ಪದೇ ಜಪಸರ ಜಪಿಸುತ್ತಾ ಕಾರ್ಮೆಲ್ ಮಾತೆಯ ಸ್ಮರಣೆಯಲ್ಲಿ ವಾರದಲ್ಲಿ ಮೂರುದಿನ ಮಾಂಸಾಹಾರ ವರ್ಜಿಸುತ್ತಾ ಬಾಳುತ್ತಿದ್ದರು.[] ಫ್ರಾಂಚೆಸ್ಕೊನ ತಾಯ್ತಂದೆಯರು ಮತ್ತು ಅಜ್ಜಅಜ್ಜಿಯರು ನಿರಕ್ಷರಿಗಳಾಗಿದ್ದರೂ ಬೈಬಲ್ ಕತೆಗಳನ್ನು ಹೇಳುತ್ತಾ ಈ ಮಕ್ಕಳನ್ನು ಸಲಹುತ್ತಿದ್ದರು. ಅವನ ತಾಯಿಯು ಹೇಳುವ ಪ್ರಕಾರ ಫ್ರಾಂಚೆಸ್ಕೊನು ಯೇಸುಕ್ರಿಸ್ತ, ಮರಿಯಾಮಾತೆ ಮತ್ತು ಕಾವಲುದೂತರೊಂದಿಗೆ ಮಾತುಕತೆಯಾಡುತ್ತಿದ್ದನಂತೆ. ಹಾಗೂ ಎಲ್ಲರಿಗೂ ಅದು ಸಾಧ್ಯವೆಂದು ಮುಗ್ದವಾಗಿ ಭಾವಿಸಿದ್ದನಂತೆ.[] ಯುವಕನಾಗಿ ಪಿಯೊ ದೈವೀದರ್ಶನ ಪಡೆಯುತ್ತಿದ್ದನಂತೆ.[] ಹೀಗಿರುವಲ್ಲಿ ಅವರ ಊರಿಗೆ ಧರ್ಮಭಿಕ್ಷೆಗಾಗಿ ಬಂದಿದ್ದ ಒಬ್ಬ ಯುವ ಕಪುಚಿನ್ ಸಂನ್ಯಾಸಿಯನ್ನು ಕಂಡ ಫ್ರಾಂಚೆಸ್ಕೊ ಸಂನ್ಯಾಸ ಜೀವನದತ್ತ ಆಕರ್ಷಿತನಾದ. he ತನ್ನ ಬಯಕೆಯನ್ನು ತಾಯ್ತಂದೆಯರ ಮುಂದಿಟ್ಟಾಗ ಸಮ್ಮತಿಸಿದ ಅವರು ಪಿತ್ರೇಲ್ಚೀನಾಗೆ ಉತ್ತರದಲ್ಲಿ 13 miles (21 km) ದೂರದಲ್ಲಿದ್ದ ಮಾರ್ಕೊನೆ ಎಂಬ ಊರಿನ ಕಪುಚಿನ್ ಮಠಕ್ಕೆ ಸೇರಿಸಲು ಹೋದರು. ಅಲ್ಲಿನ ಸಂನ್ಯಾಸಿಗಳು ಈ ಕಾರ್ಯವನ್ನು ಹೊಗಳಿದರಾದರೂ ಮಠಕ್ಕೆ ಸೇರಲು ಇನ್ನಷ್ಟು ಶಿಕ್ಷಣದ ಅಗತ್ಯವಿದೆಯೆಂದು ಹೇಳಿ ವಾಪಾಸು ಕಳಿಸಿದರು.[]

ಈ ಕಾರಣದಿಂದ ಫ್ರಾನ್ಚೆಸ್ಕೊನ ತಂದೆಯು ಅಮೆರಿಕೆಗೆ ಕೆಲಸಕ್ಕಾಗಿ ತೆರಳಿ ಹಣ ಕಳಿಸಿದ್ದರಿಂದ ಫ್ರಾಂಚೆಸ್ಕೊನ ವಿದ್ಯಾಭ್ಯಾಸ ಸಾಧ್ಯವಾಯಿತು.[][] ೧೯೦೩ರ ಜನವರಿ ೬ರಂದು ಫ್ರಾಂಚೆಸ್ಕೊ ಕಪುಚಿನ್ ಸಂನ್ಯಾಸಾಶ್ರಮ ಸೇರಿಕೊಂಡು ತ್ಯಾಗ, ವಿಧೇಯತೆ ಮತ್ತು ಬ್ರಹ್ಮಚರ್ಯೆಗಳ ವ್ರತ ಸ್ವೀಕರಿಸಿದ.[]

ಗುರುದೀಕ್ಷೆ

[ಬದಲಾಯಿಸಿ]

ಆರು ವರ್ಷಗಳ ಗುರುಶಿಕ್ಷಣ ಪಡೆಯಲು ಮತ್ತು ಸಂನ್ಯಾಸ ಸಮುದಾಯದಲ್ಲಿ ಬೆರೆಯಲು ಫ್ರಾಂಚೆಸ್ಕೊ ಸಂತ ಫ್ರಾನ್ಸಿಸರ ಮಠಕ್ಕೆ ಎತ್ತಿನಗಾಡಿಯಲ್ಲಿ ಹೋದ.[] ಮೂರುವರ್ಷಗಳ ನಂತರ ಅಂದರೆ ೨೭ ಜನವರಿ ೧೯೦೭ರಲ್ಲಿ ಆತ ವಿಧಿಬದ್ದ ವ್ರತ ಸ್ವೀಕರಿಸಿದ. ೧೯೧೦ರಲ್ಲಿ ಬೆನೆವೆಂತೊ ಪ್ರಧಾನಾಲಯದಲ್ಲಿ ಆರ್ಚ್ ಬಿಷಪ್ ಪಾವೊಲೊ ಶಿನೊಸಿಯವರು ಪಿಯೊನಿಗೆ ಗುರುದೀಕ್ಷೆ ಪ್ರದಾನ ಮಾಡಿದರು. ನಾಲ್ಕುದಿನಗಳ ನಂತರ ದೇವಮಾತೆಯಾಲಯದಲ್ಲಿ ಆತ ತನ್ನ ಮೊದಲ ಬಲಿಪೂಜೆ ಅರ್ಪಿಸಿದ. ಅವನ ಆರೋಗ್ಯ ಸೂಕ್ಷ್ಮವಾಗಿದ್ದುದರಿಂದ ಕೆಲಕಾಲ ತಂದೆತಾಯಿಯರ ಜೊತೆ ಇರುವಂತೆ ಸಂನ್ಯಾಸ ಮಠದ ಮುಖ್ಯಸ್ಥರು ಅವನನ್ನು ಮನೆಗೆ ಕಳಿಸಿಕೊಟ್ಟರು.[]

೪ ಸೆಪ್ಟೆಂಬರ್ ೧೯೧೬ರಲ್ಲಿ ಮಠಕ್ಕೆ ಹಿಂದಿರುಗಿದ ಪಾದ್ರೆ ಪಿಯೊ ಕೃಷಿಜೀವನಕ್ಕೆ ತೊಡಗಿಕೊಂಡ. ಹೀಗೆ ಸನ್ ಜಿವಾನ್ನಿ ರೊತೊಂದೊ ಎಂಬ ಊರಿನ ಗರ್ಗ್ಯಾನೊ ಬೆಟ್ಟಗಳ ತಪ್ಪಲಿನಲ್ಲಿದ್ದ ವರಪ್ರಸಾದ ಮಾತೆಯ ಹೆಸರಿನ ಕಪುಚಿನ್ ಮಠದಲ್ಲಿ ಇತರ ಏಳು ಸಂನ್ಯಾಸಿಗಳೊಂದಿಗೆ ಪಿಯೊ ತಮ್ಮ ಕರ್ಮಜೀವನ ಪ್ರಾರಂಭಿಸಿದರು. ೧೮೨ ದಿನಗಳ ಸೇನೆಯ ಜೀವನವನ್ನು ಹೊರತುಪಡಿಸಿದರೆ ಅವರ ಉಳಿದೆಲ್ಲ ಜೀವನ ಅಲ್ಲೇ ಕಳೆಯಿತು.

ಕ್ರೈಸ್ತಧ್ಯಾನದ ಪ್ರತಿಪಾದಕ, ಪಾದ್ರೆ ಪಿಯೊ ಹೇಳುತ್ತಾರೆ: "ಪುಸ್ತಕಗಳ ಮೂಲಕ ದೇವರನ್ನು ಹುಡುಕಬಹುದು; ಆದರೆ ಧ್ಯಾನದ ಮೂಲಕ ಅವನನ್ನು ಪಡೆಯಬಹುದು".[] ರೋಮ್ ನಲ್ಲಿರುವ ಈ ಪ್ರತಿಮೆ ಅವರು ಜಪಸರ ಹಿಡಿದಿರುವುದನ್ನು ತೋರಿಸುತ್ತದೆ.

ಮೊದಲ ಮಹಾಯುದ್ಧ ಪ್ರಾರಂಭವಾದಾಗ ಈ ಮಠದ ನಾಲ್ವರನ್ನು ಸೇನೆಗೆ ಸೇರಿಸಿಕೊಳ್ಳಲಾಯಿತು.[೧೦] ಆ ಸಮಯದಲ್ಲಿ ಪಾದ್ರೆ ಪಿಯೊ ಅಲ್ಲಿನ ಗುರುಮಠದ ಶಿಕ್ಷಕನಾಗಿದ್ದರಲ್ಲದೆ ಆಧ್ಯಾತ್ಮಿಕ ಮಾರ್ಗದರ್ಶಿಯೂ ಆಗಿದ್ದರು.[೧೦] ಸೇನೆಯ ಸೇವೆಗೆ ಯಾರನ್ನಾದರೂ ಕರೆಸಿಕೊಂಡರೆ ಪಾದ್ರೆ ಪಿಯೊ ಮಠದ ಉಸ್ತುವಾರಿ ಹೊರಬೇಕಾಗಿತ್ತು.[೧೦] ಆದರೆ ಆಗಸ್ಟ್ ೧೯೧೭ ರಲ್ಲಿ ಪಾದ್ರೆ ಪಿಯೊರನ್ನು ಕೂಡಾ ಸೇನೆಗೆ ಸೇರಿಸಿಕೊಳ್ಳಲಾಯಿತು.[೧೦] ಆರೋಗ್ಯ ಸರಿಯಿಲ್ಲದಿದ್ದರೂ ಅವರನ್ನು ಇತಾಲಿಯಾದ ವೈದ್ಯಪಡೆಯಲ್ಲಿ ನಿಯುಕ್ತಿಮಾಡಿದರು.[೧೦] ಅಕ್ಟೋಬರಿನಲ್ಲಿ ಅವರು ಕಾಯಿಲೆ ಬಿದ್ದು ೧೯೧೮ರ ಮಾರ್ಚ್ ವರೆಗೂ ಆಸ್ಪತ್ರೆಯಲ್ಲಿದ್ದ. ಆಮೇಲೆ ಸನ್ ಜಿವಾನ್ನಿ ರೊತೊಂದೊಗೆ ಹಿಂದಿರುಗಿ ಪಿತ್ರೇಲ್ಚೀನಾದ ಸಮ್ಮನಸುಗಳ ಮಾತೆಯಾಲಯದಲ್ಲಿ ಕಾರ್ಯನಿರತರಾದರು.[೧೦] ಅದ್ಭುತಕಾರ್ಯಗಳ ಮನುಷ್ಯನಾದ ಅವರನ್ನು, ಮುಂದೆ ಅವರ ಮುಖ್ಯಸ್ಥರು ಸನ್ ಜಿವಾನ್ನಿ ರೊತೊಂದೊ ಮಠಕ್ಕೆ ವರ್ಗಾಯಿಸಿದರು.[೧೦]

ಅಲ್ಲಿ ಪಾದ್ರೆ ಪಿಯೊ ಆಧ್ಯಾತ್ಮಿಕ ಪೋಷಕನಾಗಿ ದುಡಿದರು. ಅವರು ಆಧ್ಯಾತ್ಮಿಕ ಬೆಳವಣಿಗೆಗೆ ಐದು ಸೂತ್ರಗಳನ್ನು ಅಳವಡಿಸಿಕೊಂಡಿದ್ದರು. ಅವಾವುವೆಂದರೆ ವಾರಾಂತ್ಯದ ಪಾಪನಿವೇದನೆ, ಪ್ರತಿದಿನದ ಸತ್ಪ್ರಸಾದ ಸ್ವೀಕಾರ, ಪವಿತ್ರಗ್ರಂಥ ವಾಚನ, ಧ್ಯಾನ ಮತ್ತು ಆತ್ಮಶೋಧನೆ.[೧೦]

ಅವರು ಪಾಪನಿವೇದನೆಯನ್ನು ವಾರಕ್ಕೊಮ್ಮೆ ಕೊಠಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಹೋಲಿಸುತ್ತಿದ್ದರು ಹಾಗೂ ದಿನಕ್ಕೆರಡು ಸಾರಿ (ಬೆಳಗ್ಗೆ ಮತ್ತು ಸಂಜೆ) ಧ್ಯಾನ ಮತ್ತು ಆತ್ಮಾವಲೋಕನವನ್ನು ಉತ್ತೇಜಿಸುತ್ತಿದ್ದರು. ಅವರು ಯಾವಾಗಲೂ ಹೇಳುತ್ತಿದ್ದ “ಜಪಿಸು, ನಿರೀಕ್ಷಿಸು ಮತ್ತು ನಿರುಮ್ಮಳವಾಗಿರು” ಎಂಬ ಹೇಳಿಕೆ ಇಂದು ಪ್ರಸಿದ್ಧವಾಗಿದೆ. ಕ್ರೈಸ್ತರು ಎಲ್ಲದರಲ್ಲೂ ದೇವರನ್ನು ಕಾಣಲು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ದೇವರ ಚಿತ್ತವೇ ನೆರವೇರಲು ಯತ್ನಿಸಬೇಕೆಂದು ಅವರು ಹೇಳುತ್ತಿದ್ದರು .[೧೦]

ದುರ್ಬಲ ಆರೋಗ್ಯ

[ಬದಲಾಯಿಸಿ]

ಪಿಯೊ ಅವರ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿದ್ದ ಫಾದರ್ ಅಗೊಸ್ತಿನೊ ಅವರ ದಿನಪುಸ್ತಕ ಹೇಳುವ ಪ್ರಕಾರ ಬಾಲಕ ಫ್ರಾನ್ಚೆಸ್ಕೊ ಫೊರ್ಜೊನೆ ಹಲವು ತೊಂದರೆಗಳಿಂದ ಬಳಲಿದ್ದ. ಅವರ ಆರನೇ ವಯಸ್ಸಿನಲ್ಲಿ ಘೋರ ಕಾಮಾಲೆ ಬಾಧಿಸಿತ್ತು, ಆಮೇಲೆ, ಹತ್ತನೇ ವಯಸ್ಸಿನಲ್ಲಿ ಟೈಫಾಯಿಡು, ಹದಿನೇಳರಲ್ಲಿ ತೀವ್ರ ತಲೆನೋವು ಮತ್ತು ಜಠರ ರೋಗಗಳು ಹೀಗೆ. ಹಲವು ಸಾರಿ ಆತ ವಾಂತಿ ಮಾಡಿಕೊಳ್ಳುತ್ತಿದ್ದುರಿಂದ ಹಾಲು ಮತ್ತು ಗಿಣ್ಣಷ್ಟೇ ಅವರ ಆಹಾರವಾಗಿತ್ತು. ರಾತ್ರಿಹೊತ್ತಿನಲ್ಲಿ ಅವರ ಕೋಣೆಯಿಂದ ಅಳುವ ಗರ್ಜಿಸುವ ಚಿತ್ರವಿಚಿತ್ರ ಧ್ವನಿಗಳು ಕೇಳಿಬರುತ್ತಿದ್ದವೆಂದು ಸಹಪಾಠಿಗಳು ಹೇಳಿದ್ದಿದೆ. ಜಪದ ವೇಳೆಯಲ್ಲಿ ಮಾತ್ರ ಆತ ಎಷ್ಟು ಮೌನಿಯಾಗಿರುತ್ತಿದ್ದನೆಂದರೆ he ಆ ಸ್ಥಳದಲ್ಲಿ ಇಲ್ಲವೇನೋ ಎಂದು ಭಾವಿಸುವಷ್ಟು. ಒಬ್ಬರಂತೂ ರಾತ್ರಿ ಬಾಗಿಲ ಕಿಂಡಿಯಲ್ಲಿ ನೋಡಿದಾಗ ಪಿಯೊ ಅವರು ನೆಲದಿಂದ ಮೇಲೆದ್ದು ಗಾಳಿಯಲ್ಲಿ ತೇಲುತ್ತಿದ್ದರಂತೆ.[೧೧]

ಜೂನ್ ೧೯೦೫ರಲ್ಲಿ ಪಾದ್ರೆ ಪಿಯೊ ತೀರಾ ನಿತ್ರಾಣರಾದುದರಿಂದ ಅವರ ವರಿಷ್ಠರು ಬೆಟ್ಟದ ಕಾನ್ವೆಂಟಿಗೆ ಕಳಿಸಲು ನಿರ್ಧರಿಸಿದರು. ಆದರೆ ಅಲ್ಲಿನ ಬದಲಾದ ವಾತಾವರಣ ಅವರ ಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿತು. ವೈದ್ಯರುಗಳು ಅವರನ್ನು ಹುಟ್ಟೂರಿಗೆ ಕಳಿಸಲು ಸಲಹೆ ನೀಡಿದರಾದೂ ಅಲ್ಲೂ ಸಹ ಅವರ ಆರೋಗ್ಯ ಸುಧಾರಿಸಲಿಲ್ಲ. ಅವರ ಜೀವನವಿಡೀ ಪಿಯೊ ಅವರು ಆಸ್ತಮಾದಿಂದ ಬಳಲಿದರು. ದೊಡ್ಡಗಾತ್ರದ ಮೂತ್ರಕಲ್ಲಿನ ಜೊತೆಗೆ ಹೊಟ್ಟೆನೋವು ಸಹ ಅವರನ್ನು ಬಾಧಿಸುತ್ತಿತ್ತು. ವಾಯುಬಾಧೆ ಅಲ್ಸರಾಗಿ ತೊಂದರೆ ಕೊಟ್ಟಿತು. ಕಣ್ಣು ಮೂಗು ಕಿವಿ ಗಂಟಲುಗಳೆಲ್ಲ ಉರಿಬೇನೆಯಿಂದ ನೊಂದವು.

ಅವರ ಅನಾರೋಗ್ಯದ ಹೊರತಾಗಿಯೂ ೧೯೧೫ರಲ್ಲಿ ಅವರನ್ನು ಕಡ್ಡಾಯವಾಗಿ ಸೇನೆಗೆ ಭರ್ತಿ ಮಾಡಿಕೊಳ್ಳಲಾಯಿತು. ಆದರೆ ಒಂದು ತಿಂಗಳಲ್ಲೇ ಅವರನ್ನು ಮನೆಗೆ ಕಳಿಸಲಾಯಿತು. ಆಮೇಲೆ ಅವರು ಸನ್ ಜಿವಾನ್ನಿ ರೊತೊಂದೊ ಎಂಬ ಬೆಟ್ಟಗುಡ್ಡ ಪ್ರದೇಶದ ಕಾನ್ವೆಂಟಿನಲ್ಲಿ ಆಶ್ರಯ ಪಡೆದರು. ಸುಡು ಬೇಸಿಗೆಯ ಕಾಲದಲ್ಲೂ ಆ ಸ್ಥಳವು ತಂಪಾಗಿರುತ್ತಿತ್ತು. ಆರು ತಿಂಗಳ ನಂತರ ಅಲ್ಲಿಂದ ಮತ್ತೆ ಸೇನೆಗೆ ಹಿಂದಿರುಗಿದರಾದರೂ ಅನಾರೋಗ್ಯದ ನಿಮಿತ್ತ ಮತ್ತೆ ಮನೆಗೆ ಬರಬೇಕಾಯಿತು. ಮತ್ತೆ ಸುಧಾರಿಸಿಕೊಂಡು ಸೇನೆಗೆ ಹೋಗೆ ನೇಪಲ್ಸ್ ಬಳಿಯ ಸಲೆಸ್ ಬ್ಯಾರಕುಗಳಿಗೆ ನಿಯುಕ್ತರಾದರು. ಅದಾದ ಕೆಲದಿನಗಳಲ್ಲೇ ಕ್ಷಯರೋಗಕ್ಕೆ ತುತ್ತಾದ್ದರಿಂದ ಅವರನ್ನು ಸೇನೆಯಿಂದ ತೆಗೆದುಹಾಕಿದರು. ೧೯೨೫ರಲ್ಲಿ ಅವರಿಗೆ ಹರ್ನಿಯಾ ರೋಗ ಬಾಧಿಸಿತು. ಅದರ ನಂತರ ಕುತ್ತಿಗೆಯ ಬಳಿ ದುರ್ಮಾಂಸ ಬೆಳೆದು ತೆಗೆದುಹಾಕಲಾಯಿತು. ಕಿವಿಯ ಮೇಲೊಂದು ಗಡ್ಡೆ ಬೆಳೆದು ಅದನ್ನು ತೆಗೆಯಲಾಯಿತು.[೧೨]

೧೯೫೬ರಲ್ಲಿ ಅವರು "exudative pleuritis" ಅನ್ನು ಎದುರಿಸಬೇಕಾಯ್ತು. ಅವರ ದೇಹದಿಂದ ಕೆಟ್ಟದ್ರವವನ್ನು ಹೊರತೆಗೆಯಲಾಯಿತು. ಇದರಿಂದಾಗಿ ನಾಲ್ಕು ತಿಂಗಳಕಾಲ ಅವರು ಹಾಸಿಗೆಯಲ್ಲೇ ಇರಬೇಕಾಯಿತು. ತಮ್ಮ ಇಳಿವಯಸ್ಸಿನಲ್ಲಿ ಪಿಯೊ ಅವರು ಕೀಲುನೋವಿನಿಂದ ಬಳಲಿದರು.

ಅಧ್ಯಾತ್ಮದ ನರಳಾಟ

[ಬದಲಾಯಿಸಿ]

ಪಾದ್ರೆ ಪಿಯೊ ಅವರು ದೈವಪ್ರೀತಿ ಮತ್ತು ನರಳಾಟಗಳು ಬೇರೆಬೇರೆಯಲ್ಲ ಮತ್ತು ದೇವರಿಗಾಗಿ ಬಾಧಿತರಾದರೆ ದೇವರನ್ನು ಸೇರುವುದು ಸುಲಭ ಎಂದು ಬಲವಾಗಿ ನಂಬಿದ್ದರು.[] ಹೀಗಿರುವಲ್ಲಿಒಮ್ಮೆ ಅವರಿಗೆ ತನ್ನಾತ್ಮವು ಒಂದು ಸಂಕೀರ್ಣ ಗೋಜಲುದಾರಿಯಲ್ಲಿ ಕಳೆದುಹೋದಂತೆಯೂ ನರಕದ ಅಗಾಧ ಪ್ರಪಾತದಡಿಯಲ್ಲಿ ಒಂಟಿಯಾದಂತೆಯೂ ಭಾಸವಾಯಿತಂತೆ. ಅದನ್ನು ಕೇಳಿದ ಅವನ ಸಂಗಡಿಗರು ಪಿಯೊನಿಗೆ ಯಾವುದೋ ದೆವ್ವ ಮೆಟ್ಟಿಕೊಂಡಿದೆಯೆಂದು ಅಭಿಪ್ರಾಯಪಟ್ಟರು.[] ಪಾದ್ರೆ ಪಿಯೊನ ನರಳಾಟಗಳನ್ನು ಹೆಚ್ಚಿಸಲು ಪಿಶಾಚಿಯು ಹೂಡಿದ ಹುನ್ನಾರವಿದೆಂದು ಸಹಾ ಆ ಸಂಗಡಿಗರು ಭಾವಿಸಿದರು. ಪಾದ್ರೆ ಪಿಯೊ ತನ್ನ ಸ್ನೇಹಿತರ ಈ ಅನಿಸಿಕೆಯನ್ನು ಅಲ್ಲಗಳೆಯದೆ ಹೀಗೆನ್ನುತ್ತಾರೆ:

ದೆವ್ವ ಕುಣಿಯುತ್ತಿತ್ತು, ಹರೆಯದ ಹೆಣ್ಣಮಕ್ಕಳ ವೇಷದಲ್ಲಿ ನಗ್ನವಾಗಿ ನರ್ತಿಸುತ್ತಿತ್ತು, ಒಮ್ಮೊಮ್ಮೆ ಕ್ರಿಸ್ತನ ವೇಷದಲ್ಲಿ, ಕೆಲವೊಮ್ಮೆ ಸಂನ್ಯಾಸಿಗಳ ಯುವ ಗೆಳೆಯನಂತೆ, ಮತ್ತೊಮ್ಮೆ ಸಂನ್ಯಾಸಿಗಳ ಮುಖ್ಯಸ್ಥನಂತೆ ಇನ್ನು ಒಮ್ಮೊಮ್ಮೆ ಮಾತೆಮೇರಿಯಂತೆ.[೧೩]

ಹೀಗೇ ಇಪ್ಪತ್ತೆರಡು ದಿನಗಳು ಕಳೆದವು, ದೆವ್ವಗಳು ತಮ್ಮೆಲ್ಲ ವಿಷವನ್ನು ನನ್ನ ಮೇಲೆ ಕಾರಿಕೊಳ್ಳುವಂತೆ ಯೇಸುಕ್ರಿಸ್ತನೇ ಅನುಮತಿ ನೀಡಿದ್ದನು. ನನ್ನ ತಂದೆಯೇ, ದೆವ್ವವು ನನ್ನ ದೇಹವನ್ನೆಲ್ಲ ಹೊಡೆದು ಬಡಿದು ಗಾಸಿಗೊಳಿಸಿದೆ. ಎಷ್ಟೋ ವೇಳೆ ನನ್ನನ್ನು ಹರಿದು ಮುಕ್ಕಲು ಯತ್ನಿಸಿ ಅಂಗಿಯನ್ನು ಕಿತ್ತುಹಾಕಿವೆ.[೧೪]

ದೆವ್ವಗಳನ್ನು ಓಡಿಸುವುದರಲ್ಲಿ ಪರಿಣಿತರಾಗಿದ್ದ ವ್ಯಾಟಿಕನ್ ನಗರದ ಫಾದರ್ ಗೇಬ್ರಿಯೆಲೆ ಅಮೋರ್ತ್ ಅವರು ಸಂದರ್ಶನವೊಂದರಲ್ಲಿ ಹೀಗೆಂದಿದ್ದಾರೆ. ’ಪಾದ್ರೆ ಪಿಯೊ ನಿಜವಾದ ಯೇಸುಕ್ರಿಸ್ತನನ್ನು ಮೇರಿಮಾತೆ ಹಾಗೂ ಇತರ ಸಂತರನ್ನು ಚೆನ್ನಾಗಿ ಗುರುತಿಸುತ್ತಿದ್ದರಲ್ಲದೆ ದೆವ್ವದ ಪರಕಾಯಪ್ರವೇಶವನ್ನು ಅತಿ ಚುರುಕಾಗಿ ಕಂಡುಹಿಡಿದುಬಿಡುತ್ತಿದ್ದರು. ದೆವ್ವ ಬಂದಾಗ ಅವರ ವರ್ತನೆಗಳನ್ನು ಗಮನಿಸಿ ಬಲು ಸೂಕ್ಷ್ಮವಾಗಿ ಅವರ ಮನಸ್ಸಿನ ವಿಶ್ಲೇಣೆಯನ್ನು ನಡೆಸಿ ಈ ಮಾತುಗಳನ್ನು ಹೇಳುತ್ತಿರುವೆ. ಪಾದ್ರೆ ಪಿಯೊ ತನ್ನ ಪತ್ರಗಳಲ್ಲಿ ಹೇಳಕೊಂಡ ಪ್ರಕಾರ ಈ ಮಾನಸಿಕ ಚಿತ್ರಹಿಂಸೆಯ ಸಮಯದಲ್ಲಿ ತುಂಬಾ ಸಂಯಮ ತೋರುತ್ತಿದ್ದರು ಏಕೆಂದರೆ ಯೇಸುಕ್ರಿಸ್ತನ ಮೇಲಿನ ಅವರ ನಂಬಿಕೆ ಬಲವಾಗಿತ್ತು ಮರಿಯಾಮಾತೆ, ಕಾವಲುದೂತ, ಸಂತ ಜೋಸೆಫ್ ಮತ್ತು ಸಂತ ಫ್ರಾನ್ಸಿಸರು ಸದಾ ಅವರ ಬೆಂಬಲಕ್ಕಿದ್ದರು.[೧೪]

ಘೋರತಿವಿತ ಮತ್ತು ಪಂಚಗಾಯಗಳ ಗುರುತು

[ಬದಲಾಯಿಸಿ]

ಪಾದ್ರೆ ಪಿಯೊ ಅವರ ಆಧಾರದಲ್ಲಿ ಅವರು ಗುರುಪಟ್ಟವನ್ನು ಪಡೆದ ಹೊಸದರಲ್ಲೇ ಯೇಸುಕ್ರಿಸ್ತರ ಪಂಚಗಾಯಗಳನ್ನು ಧರಿಸುವ ಇಂಗಿತ ಹೊಂದಿದ್ದರೆಂಬುದು ತಿಳಿಯುತ್ತದೆ.[೧೫] ೧೯೧೧ರ ಒಂದು ಪತ್ರದಲ್ಲಿ ಪಾದ್ರೆ ಪಿಯೊ ಅವರು ತಮ್ಮ ಮುಖ್ಯಸ್ಥರಾದ ಪಾದ್ರೆ ಬೆನೆದೆತ್ತೊ ಅವರಿಗೆ ಬರೆದ ಪತ್ರದಲ್ಲಿ ಹೀಗೆ ವಿವರಿಸಿದ್ದಾರೆ:

ಕಳೆದ ರಾತ್ರಿ ನಡೆದ ಘಟನೆಯನ್ನು ವಿವರಿಸಲೂ ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲದಾಗಿದೆ. ನನ್ನ ಅಂಗೈಯಲ್ಲಿ ಕಾಸಿನಗಲದ ಕೆಂಪನೆಯ ಗುರುತು ಕಾಣಿಸಿಕೊಂಡವು, ಅದರ ಮಧ್ಯದಿಂದ ತೀವ್ರತರ ನೋವು ಉಕ್ಕಿಬಂತು, ಹಸ್ತದ ನಡುವೆ ಉಂಟಾದ ಆ ನೋವು ಅತಿ ಭಯಂಕರ, ಅದರ ನೆನಪು ಇನ್ನೂ ಕಾಡುತ್ತಿದೆ, ಅಲ್ಲದೆ ಅಂಥದೇ ನೋವು ಪಾದಗಳಲ್ಲೂ ಹಿಂಸಿಸಿತು.[೧೫]

ಅವರ ಆಪ್ತಮಿತ್ರರಾದ ಪಾದ್ರೆ ಅಗೊಸ್ತಿನೊ ಅವರು ೧೯೧೫ರಲ್ಲಿ ಬರೆದ ಪತ್ರದಲ್ಲಿ ಈ ದರ್ಶನಗಳ ಪ್ರಾರಂಭ ಹೇಗಾಯ್ತು, ಪಂಚಗಾಯಗಳ ಅನುಭವ ಹೇಗಿತ್ತು, ಮುಳ್ಳಿನ ಕರೀಟ ಮತ್ತು ಚಿತ್ರಹಿಂಸೆಗಳ ಅನುಭವವಾಯಿತೇ ಎಂಬ ಪ್ರಶ್ನೆಗಳನ್ನು ಕೇಳಿದ್ದರು. ಅದಕ್ಕೆ ಉತ್ತರಿಸುತ್ತಾ ಪಾದ್ರೆ ಪಿಯೊ ಅವರು ತಾವು ಗುರು ಅಭ್ಯರ್ಥಿಯಾಗಿದ್ದಾಗಿನಿಂದಲೇ ಅಂದರೆ ೧೯೦೩-೦೪ ರಿಂದಲೇ ತಮಗೆ ದರ್ಶನಗಳಾಗುತ್ತಿದ್ದವೆಂದು ಹೇಳಿದ್ದಾರೆ. ಇನ್ನು ಪಂಚಗಾಯಗಳ ಕುರಿತಂತೆ ವಿವರವಾಗಿ ಬರೆದಿರುವ ಅವರು ಹೇಗಾದರೂ ಆ ಗುರುತನ್ನು ನಿವಾರಿಸುವಂತೆ ಪ್ರಭುಯೇಸುವನ್ನು ಪರಿಪರಿಯಾಗಿ ಬೇಡಿಕೊಂಡಿರುವ ಕುರಿತೂ ಅಲವತ್ತುಕೊಂಡಿದ್ದಾರೆ. ಅಂದರೆ ಅವರು ಆ ಗಾಯಗಳ ನೋವಿಗೆ ಹೆದರಿಲ್ಲ, ಅವರು ಹೆದರಿರುವುದು ಅದರ ಅಚ್ಚಳಿಯದ ಗುರುತಿನ ಬಗ್ಗೆ ಮಾತ್ರ. ಆಮೇಲೆ ಆ ಗುರುತುಗಳು ಮಾಯವಾದವಾದರೂ ೧೯೧೮ರ ಸೆಪ್ಟೆಂಬರಿನಲ್ಲಿ ಮತ್ತೆ ಕಾಣಿಸಿಕೊಂಡವು.[೧೫] ಕೆಲವೇ ಆಯ್ದ ದಿನಗಳಲ್ಲಿ ವಿಪರೀತ ನೋವಿರುತ್ತಿತ್ತು. ಹಾಗೂ ಈ ಸಾರಿ ಮುಳ್ಳಿನ ಕಿರೀಟದ ಸ್ಪಷ್ಟ ಅನುಭವಾಯಿತು.[೧೫] ಪದೇ ಪದೇ ಆಗುತ್ತಿದ್ದ ಇಂಥ ಅನುಭವಗಳಿಂದ ಅವರ ಆರೋಗ್ಯ ಕ್ಷೀಣಿಸುತ್ತಾ ಹೋಯಿತು. ಆ ಕಾರಣಕ್ಕೆ ಅವರಿಗೆ ಮನೆಗೆ ಹೋಗಿ ವಿಶ್ರಮಿಸಲು ಸೂಚಿಸಲಾಯಿತು. ಸಂನ್ಯಾಸ ಜೀವನವನ್ನು ಕಾಯ್ದುಕೊಳ್ಳಲು ಅವರು ಪ್ರತಿದಿನದ ಪೂಜಾರ್ಪಣೆಯ ಜೊತೆಗೆ ಶಾಲೆಯೊಂದರಲ್ಲಿ ಪಾಠ ಮಾಡಲೂ ತೊಡಗಿದರು. ಮೊದಲ ಮಹಾಯುದ್ಧ ಇನ್ನೂ ನಡೆಯುತ್ತಿತ್ತು. ಅದನ್ನು ’ಯೂರೋಪಿನ ಆತ್ಮಹತ್ಯೆ’ ಎಂದು ಕರೆದಿದ್ದ ಪೋಪ್ ೧೫ನೇ ಬೆನೆಡಿಕ್ಟ್ ಅವರು ಯುದ್ಧ ಕೊನೆಗೊಳ್ಳಲು ಪ್ರಾರ್ಥಿಸುವಂತೆ ಜುಲೈ ೧೯೧೮ರಲ್ಲಿ ಜಗತ್ತಿನ ಎಲ್ಲ ಕ್ರೈಸ್ತರಿಗೆ ಕರೆನೀಡಿದರು. ಅದೇ ಜುಲೈ ೨೭ರಂದು ಪಾದ್ರೆ ಪಿಯೊ ಅವರು ಈ ಉದ್ದೇಶಕ್ಕಾಗಿ ತಮ್ಮ ಬಲಿದಾನವನ್ನೇ ಘೋಷಿಸಿದರು. ದಿನಗಳು ಕಳೆದವು. ಆಗಸ್ಟ್ ೫ ಮತ್ತು ೭ರ ನಡುವೆ ಅವರಿಗೊಂದು ದರ್ಶನವಾಯಿತು. ಆ ಮಹಾದರ್ಶನದಲ್ಲಿ ಕ್ರಿಸ್ತಯೇಸು ಅವರಿಗೆ ಕಾಣಿಸಿಕೊಂಡು ಅವರ ಪಾರ್ಶ್ವವನ್ನು ತಿವಿದರು.[][೧೦] ದೊಡ್ಡದಾದ ಗಾಯವೊಂದು ಅವರನ್ನು ಘಾಸಿಗೊಳಿಸಿತು. ದೇವರನ್ನು ಅತಿಯಾಗಿ ಪ್ರೀತಿಸುತ್ತಾ ಅವರೊಂದಿಗೆ ಒಂದಾಗುವ ಈ ಸನ್ನಿವೇಶ ಹೀಗೇ ಇರುತ್ತದೆಂದು ಶಿಲುಬೆಯ ಸಂತ ಜಾನರೇ ಒಂದೆಡೆ ಹೇಳಿದ್ದಾರೆ. ರೋಮನ್ ಕ್ಯಾಥಲಿಕ್ ಧರ್ಮಮಂಡಲಿಯ ಮೊದಲದರ್ಜೆಯ ಅವಶೇಷ ಗೆ ವ್ಯಾಖ್ಯಾನದಲ್ಲಿ ಪಾದ್ರೆ ಪಿಯೊ ಅವರ ಅವಶೇಷಗಳಿಗೆ ಸಂಬಂಧಿಸಿದಂತೆ ರಕ್ತದಲ್ಲಿ ತೊಯ್ದ ದೊಡ್ಡದಾದ ಒಂದು ಅಂಗವಸ್ತ್ರವನ್ನು ಸಂರಕ್ಷಿಸಿ ಚಿಕಾಗೋದ ಜಾನ್ ಕ್ಯಾಂಟಿಯಸ್ ಚರ್ಚಿನಲ್ಲಿ ಗೌರವಾರ್ಪಣೆಗಾಗಿ ಪ್ರದರ್ಶಿಸಲಾಗಿದೆ.[೧೬]

ಈ ಘಟನೆಯು ಪಿಯೊ ಅವರಿಗೆ ಏಳು ದೀರ್ಘ ವಾರಗಳ ಕಾಲದ ಆಧ್ಯಾತ್ಮಿಕ ಶ್ರಮಕ್ಕೆ ನಾಂದಿಯಾಯಿತು. ಅವರ ಸಂಗಡಿಗರೊಬ್ಬರು ಹೇಳಿದ ಹಾಗೆ:

ಈ ಅವಧಿಯಲ್ಲಿ ಎಲ್ಲ ಬದಲಾದವು, ಅಲ್ಲಿ ಸ್ಮಶಾನಮೌನ ಆವರಿಸಿತು, ಅವರು ನಿರಂತರವಾಗಿ ಅಳುತ್ತಿದ್ದರು ದೇವರು ತಮ್ಮ ಕೈಬಿಟ್ಟಿದ್ದಾರೆ ಎನ್ನುತ್ತಾ ಸತತ ನಿಟ್ಟುಸಿರು ಬಿಡುತ್ತಿದ್ದರು.[]

ಪಾದ್ರೆ ಪಿಯೊ ಅವರು ಪಾದ್ರೆ ಬೆನೆದೆತ್ತೊ ಅವರಿಗೆ ೧೯೧೮ರ ಆಗಸ್ಟ್ ೨೧ರಂದು ಬರೆದ ಪತ್ರದಲ್ಲಿ ಹೀಗೆಂದಿದ್ದಾರೆ:

ಐದರ ಸಂಜೆ ನಾನು ಬಾಲಕನೊರ್ವನ ಪಾಪದರಿಕೆಯನ್ನು ಕೇಳುತ್ತಿರುವಾಗ ಇದ್ದಕ್ಕಿದ್ದ ಹಾಗೆ ನನ್ನ ಒಳಗಣ್ಣಿಗೆ ದೇವದೂತನೊಬ್ಬನ ದರ್ಶನವಾಗಿ ನಾನು ಭೀತನಾದೆ, ಅವನ ಕೈಯಲ್ಲೊಂದು ಬೆಂಕಿಯುಗುಳುವಂತೆ ಕೋರೈಸುತ್ತಿದ್ದ ಹರಿತವಾದ ಆಯುಧವಿತ್ತು. ನಾನು ನೋಡುತ್ತಿದ್ದಂತೆ ಆ ವ್ಯಕ್ತಿ ತನ್ನೆಲ್ಲ ಬಲದಿಂದ ಆ ಆಯುಧವನ್ನು ನನ್ನತ್ತ ಪ್ರಯೋಗಿಸಿದಾಗ ಅದು ನನ್ನ ದೇಹದಲ್ಲಿ ತೂರಿಕೊಂಡು ಹೋಯಿತು. ನಾನು ಕಷ್ಟದಿಂದ ಚೀರುತ್ತಾ ಸತ್ತೆನೆಂದು ಭಾವಿಸಿದೆ. ನಾನು ಆ ಬಾಲಕನಿಗೆ ನನ್ನಿಂದಾಗದು ನೀನಿನ್ನು ಹೊರಡು ಎಂದು ಹೇಳಿದೆ. ಈ ವೇದನೆ ಏಳನೇ ತಾರೀಖು ಬೆಳಗಿನವರೆಗೆ ಮುಂದುವರಿಯಿತು. ಈ ಅವಧಿಯಲ್ಲಿ ನಾನೆಷ್ಟು ನರಳಿದೆನೆಂದು ಹೇಳಲಾಗದು. ನನ್ನ ಒಳಾಂಗಗಳೆಲ್ಲ ಒಂದೂ ಬಿಡದೆ ಎಲ್ಲವೂ ಹರಿದು ಚಿಂದಿಯಾದವೆನ್ನಿಸುತ್ತೆ. ನಾನೀಗ ಗಾಯಾಳು. ನನ್ನಾತ್ಮದ ಆ ಗಾಯದ ಆಳವನ್ನು ನಾ ಬಲ್ಲೆ, ಅದರ ಯಾತನೆ ನಿರಂತರ.[೧೬]

೨೦ ಸೆಪ್ಟೆಂಬರ್ ೧೯೧೮ರ ವೇಳೆಗೆ ಪಾದ್ರೆ ಪಿಯೊ ಈ ವೇದನೆಯಿಂದ ವಿಮುಕ್ತರಾಗಿ ಅವರ ಮುಖ ಪ್ರಫುಲ್ಲವಾಯಿತು. "[] ಆ ದಿನ ಅವರು ವರಪ್ರಸಾದ ಮಾತೆಯಾಲಯದ ಗಾನವೃಂದವು ಕೂಡುವ ಸ್ಥಳದಲ್ಲಿ ಪ್ರಾರ್ಥನಾನಿರತರಾಗಿದ್ದರು. ಆಗ ಅದೇ ಆ ಪ್ರಕಾಶಲೋಕದ ವ್ಯಕ್ತಿ ಮತ್ತೊಮ್ಮೆ ಪ್ರತ್ಯಕ್ಷನಾಗಿ ಮಿಂಚಿನಂತ ತನ್ನ ಆಯುಧವನ್ನು ಜಳಪಿಸಿದ. ಒಂದು ಅಲೌಕಿಕ ಆನಂದದಲ್ಲಿ ಅವರು ಪರವಶರಾದರು.[೧೦] ಆ ಅನುಭೂತಿಯ ನಂತರ ಪಾದ್ರೆ ಪಿಯೊ ಅವರ ದೇಹದಲ್ಲಿ ಯೇಸುಸ್ವಾಮಿಯ ಪಂಚಗಾಯಗಳು ಮೂಡಿದ್ದವು. ಈ ಗಾಯಗಳು ಶಾಶ್ವತವಾಗಿ ಅವರ ಮುಂದಿನ ಐವತ್ತು ವರ್ಷಗಳ ಜೀವನವಿಡೀ ಜೀವಂತ ಸಾಕ್ಷಿಯಾಗಿ ಉಳಿದುಕೊಂಡವು.[][೧೦]

ತಮ್ಮ ಮುಖ್ಯಸ್ಥರೂ ಆಧ್ಯಾತ್ಮಿಕ ಸಲಹೆಗಾರರೂ ಆದ ಪಾದ್ರೆ ಬೆನೆದೆತ್ತೊ ಅವರಿಗೆ ಈ ಘಟನೆಯ ಕುರಿತು ವಿವರಿಸುತ್ತಾ ಅಕ್ಟೋಬರ್ ೨೨, ೧೯೧೮ರಲ್ಲಿ ಪತ್ರ ಬರೆಯುವ ಪಾದ್ರೆ ಪಿಯೊ ಅವರು ಹೀಗೆನ್ನುತ್ತಾರೆ:

ಕಳೆದ ತಿಂಗಳ ೨೦ರ ಬೆಳಗ್ಗೆ ನಾನು ಪೂಜೆಯರ್ಪಿಸಿದ ನಂತರ ಗಾನವೃಂದದ ಬಳಿಯಿದ್ದಾಗ ಹಿತವಾದ ನಿದ್ದೆಯಾವರಿಸಿದಂತೆ ತೂಕಡಿಸಿದೆ. ಅಗಸ್ಟ್ ಐದರ ಸಂಜೆ ಕಂಡಿದ್ದ ಆ ನಿಗೂಢ ಮನುಷ್ಯ ಇದ್ದಕ್ಕಿದ್ದಂತೆ ನನ್ನೆದುರು ನಿಂತಿದ್ದ. ಒಂದೇ ವ್ಯತ್ಯಾಸವೆಂದರೆ ಅವನ ಅಂಗೈಗಳು ಪಾದಗಳು ಮತ್ತು ಪಾರ್ಶ್ವಗಳಲ್ಲಿ ರಕ್ತ ತೊಟ್ಟಿಕ್ಕುತ್ತಿತ್ತು. ಓ ಅದೊಂದು ವರ್ಣಿಸಲಾಗದ ಭೀಭತ್ಸ ದೃಶ್ಯ. ನನ್ನ ಹೃದಯ ಜೋರಾಗಿ ಬಡಿದುಕೊಳ್ಳುತ್ತಾ ಎದೆಯಾಚೆ ಸಿಡಿಯುವಂಥ ಆ ವೇಳೆ ಕರ್ತರು ನನ್ನಲ್ಲಿ ಬಲ ತುಂಬದೇ ಹೋಗಿದ್ದರೆ ಬಹುಶಃ ನಾನು ಸತ್ತೇ ಹೋಗಿರುತ್ತಿದ್ದೆನೇನೋ? ಆ ಮಹಾದರ್ಶನ ಮುಗಿಯುತ್ತಿದ್ದಂತೆ ನನ್ನ ದೇಹದ ಭಾಗಗಳಲ್ಲೂ ರಕ್ತ ತೊಟ್ಟಿಕ್ಕತೊಡಗಿತು. ನಾನು ಅನುಭವಿಸಿದ ವೇದನೆಯನ್ನು ಊಹಿಸಿಕೊಳ್ಳಿ. ಗುರುವಾರ ಸಾಯಂಕಾಲದಿಂದ ಶನಿವಾರದವರೆಗೆ ನನ್ನ ಹೃದಯ ನಿರಂತರವಾಗಿ ರಕ್ತ ಸುರಿಸುತ್ತಾ ಇತ್ತು. ಓ ಫಾದರ್, ಈ ನೋವಿನಿಂದ ನಾನು ಸಾಯುತ್ತಿದ್ದೇನೆ, ನನ್ನಾತ್ಮವು ಕುಬ್ಜವಾಗುತ್ತಿದೆ. ನನ್ನ ಹೃದಯದ ಆರ್ತನಾದವನ್ನು ಕರ್ತರು ಕೇಳದೇ ಹೋದಲ್ಲಿ ನಾನು ಸಾಯುವುದು ಖಂಡಿತ. ಸಜ್ಜನನಾದ ಯೇಸು ನನಗೆ ಒಳಿತು ಮಾಡನೇ? ಅಪಮಾನವೆನಿಸುವ ಈ ಗಾಯಗಳಿಂದ ನನ್ನನ್ನು ಪಾರುಮಾಡನೇ? ಅವನು ಕರುಣೆ ತೋರುವವರೆಗೂ ನಾನು ಸ್ವರವೆತ್ತಿ ಕೂಗುತ್ತಲೇ ಇರುವೆ, ಎಲ್ಲ ನೋವು ನನಗಿರಲಿ, ಈ ಗಾಯಗಳು ಮಾತ್ರ ಬೇಡಪ್ಪಾ, ಮೂದಲಿಕೆಯನ್ನು ತಾಳಲಾರೆ.[೧೬]

ಪಾದ್ರೆ ಪಿಯೊ ಅವರು ಯಾರ ಅರಿವಿಗೂ ಬಾರದಂತೆ ನೋವನ್ನು ಅನುಭವಿಸಲು ಸಿದ್ಧರಿದ್ದರೂ ಅವರ ಪಂಚಗಾಯಗಳ ಸುದ್ದಿ ಎಲ್ಲೆಡೆ ಮಿಂಚಿನಂತೆ ಹರಡಿತು. ಹಲವು ವೈದ್ಯರು ಹಾಗೂ ಜನರು ತಂಡೋಪತಂಡವಾಗಿ ಬಂದು ಆ ಗಾಯಗಳನ್ನು ಪರೀಕ್ಷಿಸಿದರು. ಯುದ್ಧಗಳಿಂದ ಜರ್ಜರಿತರಾದವರು ಪಾದ್ರೆ ಪಿಯೊ ಅವರಲ್ಲಿ ಹೊಸ ಆಶಾಕಿರಣ ಕಂಡರು.[೧೦] ಅವರಿಗೆ ನಿಕಟವಾಗಿದ್ದವರು ಪಾದ್ರೆ ಪಿಯೊ ಅವರ ಗುಣಪಡಿಸುವ ಶಕ್ತಿ, ಪವಾಡಕೃತ್ಯ, ಪ್ರವಾದನೆ ಹಾಗೂ ಯೋಗಶಕ್ತಿಯನ್ನು ಬಲ್ಲವರಾಗಿದ್ದರು. ಪಾದ್ರೆ ಅಗೊಸ್ತಿನೊ ಅವರು ದಾಖಲಿಸಿರುವ ಪ್ರಕಾರ ಪಿಯೊ ಅವರೊಮ್ಮೆ ೨೦ ದಿನಗಳ ಕಠಿಣ ಉಪವಾಸವನ್ನು ಜಯಿಸಿದ್ದರು.[][೧೦]

ವಿವಾದಗಳು

[ಬದಲಾಯಿಸಿ]

ಪಾದ್ರೆ ಪಿಯೊ ಅವರೊಬ್ಬ ಮತಿವಿಕಲರಾಗಿದ್ದು ಜನರ ಮುಗ್ದತೆಯ ದುರ್ಬಳಕೆ ಮಾಡಿಕೊಂಡಿದ್ದರು ಎಂದು ಮಿಲಾನಿನ ಸುಹೃದಯ ಕ್ಯಾಥಲಿಕ್ ವಿವಿಯ ಸ್ಥಾಪಕರೂ ಸಂನ್ಯಾಸಿ, ವೈದ್ಯ ಮತ್ತು ಮನಃಶಾಸ್ತ್ರಜ್ಞರೂ ಆಗಿದ್ದ ಅಗೊಸ್ತಿನೊ ಜೆಮಿಲಿ ಅವರು ವಾದಿಸಿದ್ದಾರೆ. "[೧೭] ತಮ್ಮ ಮಠದ ಮೂಲಮಂತ್ರಗಳಾದ ತ್ಯಾಗ, ವಿಧೇಯತೆ ಮತ್ತು ಬ್ರಹ್ಮಚರ್ಯೆಗಳನ್ನಾತ ಗಾಳಿಗೆ ತೂರಿದ್ದನೆಂದು ಅವರು ಗಂಭೀರ ಆರೋಪ ಮಾಡುತ್ತಾರೆ.[೧೮] ತಮ್ಮ ಗಾಯಗಳು ತೆರೆದುಕೊಂಡೇ ಇರಲು ಅವರು ಕಾರ್ಬಾಲಿಕ್ ಆಮ್ಲವನ್ನು ಬಳಸುತ್ತಿದ್ದರೆಂದೂ ಅಗೊಸ್ತಿನೊ ಅವರು ಹೇಳುತ್ತಾರೆ.[೧೮]

ಇತಾಲಿಯಾದ ಗುರುಶ್ರೇಷ್ಠರಾಗಿದ್ದ ಕಾರ್ಲೊ ಮಚ್ಚರಿ (ಮುಂದೆ ಇವರು ಬಿಷಪರಾದರು) ಅವರು ೨೯ನೇ ಜುಲೈ ೧೯೬೦ರಲ್ಲಿ ಪೋಪ್ ೨೩ನೇ ಜಾನ್ ಅವರ ಆದೇಶದ ಮೇರೆಗೆ ತಪಾಸಣೆ ನಡೆಸಿ ೨೦೦ ಪುಟಗಳ ಒಂದು ವ್ಯತಿರಿಕ್ತ ತನಿಖಾ ವರದಿಯನ್ನು ನೀಡಿದರು. ಪಾದ್ರೆ ಪಿಯೊ ಅವರಿಗೆ ಸಂತ ಪದವಿ ನೀಡುವಾಗಿನ ವಿಳಂಬಕ್ಕೆ ಈ ವರದಿಯೇ ಕಾರಣವೆಂಬ ಗುಸುಗುಸು ಬಹುಕಾಲ ಚಾಲ್ತಿಯಲ್ಲಿತ್ತು. ಮಚ್ಚರಿ ಅವರು ನಂತರದ ದಿನಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಬದಲಾಯಿಸಿಕೊಂಡರೆಂದು ಕಪುಚಿನ್ ಮಠದ ಅಧಿಕೃತ ದಾಖಲೆಗಳು ಹೇಳುತ್ತವೆ.[೧೮]

ಸುಮಾರು ೧೯೪೦ರಲ್ಲಿ ಪಾದ್ರೆ ಪಿಯೊ ಅವರು ಸನ್ ಜಿವಾನ್ನಿ ರೊತೊಂದೊದಲ್ಲಿ ಜನಗಳಿಗಾಗಿ ಒಂದು ’ನೋವು ನಿವಾರಕ ನಿವಾಸ’ ಎಂಬ ಹೆಸರಿನ ಆಸ್ಪತ್ರೆ ತೆರೆಯಲು ಮನಸು ಮಾಡಿದರು. ಮುಂದರೆ ೧೯೫೬ರಲ್ಲಿ ಅದು ಕಾರ್ಯಗತವಾಯಿತು.[೧೦][೧೯] ಆಗ ಇತಾಲಿಯಾಕ್ಕೆ ನಿಯುಕ್ತರಾಗಿದ್ದ ಬ್ರಿಟಿಷ್ ಮಾನವತಾವಾದಿ ಹಾಗೂ ಪತ್ರಕರ್ತೆ ಬಾರ್ಬರಾ ವಾರ್ಡ್ ಎಂಬಾಕೆ ಈ ಆಸ್ಪತ್ರೆಯ ಸ್ಥಾಪನೆಯ ಕೆಲಸದಲ್ಲಿ ಬಹುವಾಗಿ ಸಹಾಯ ಮಾಡಿದರು. ಆಸ್ಪತ್ರೆ ಯೋಜನೆಯ ಉಸ್ತುವಾರಿಯನ್ನು ಸ್ವತಃ ಪಾದ್ರೆ ಪಿಯೊ ಅವರೇ ವಹಿಸಿಕೊಳ್ಳುತ್ತಾರೆನ್ನುವ ನಂಬಿಕೆಯಲ್ಲಿ ಆಕೆ ವಿಶ್ವಸಂಸ್ಥೆಯ ವಿಕೋಪ ಪರಿಹಾರ ಮತ್ತು ಪುನರ್ವಸತಿ (UNRRA) ಶಾಖೆಯಿಂದ ೩೨೫,೦೦೦ ಡಾಲರುಗಳ ನೆರವನ್ನು ಪಡೆದುಕೊಡುವಲ್ಲಿ ಯಶಸ್ವಿಯಾದರು. ಹೀಗೆ ಪೋಪ್ ೧೨ನೇ ಪಯಸ್ ಅವರು ೧೯೫೭ರಲ್ಲಿ ಪಾದ್ರೆ ಪಿಯೊ ಅವರನ್ನು ದೈನ್ಯತೆಯ ವ್ರತದಿಂದ ವಿಮುಕ್ತಗೊಳಿಸಿದರು.[೨೦][೨೧] ಪಾದ್ರೆ ಪಿಯೊ ಅವರ ವಿರೋಧಿಗಳು ಈ ಅಂಶವನ್ನು ತಮ್ಮ ವಾದಸರಣಿಯಲ್ಲಿ ಸೇರಿಸಿಕೊಂಡು ಪಿಯೊ ಅವರನ್ನು ಹಣ ದುರ್ಬಳಕೆಯ ನೆವದಲ್ಲಿ ನಿಂದಿಸಿದರು.[೨೦]

ಇಷ್ಟಲ್ಲದೆ ಪಾದ್ರೆ ಪಿಯೊ ಅವರು ಹಲವಾರು ತಪಾಸಣೆಗೆ ಒಳಗಾದರು.[೧೯][೨೦] ಗಲಭೆಗಳ ಕಾರಣದಿಂದ ಅವರ ವರ್ಗಾವಣೆಯನ್ನು ಎರಡು ಬಾರಿ ತಡೆಹಿಡಿಯಲಾಯಿತು.[೧೮] ೧೯೨೪ರಿಂದ ೧೯೩೧ರ ಅವಧಿಯಲ್ಲಿ ಪೋಪರು ಹಲವು ಸಾರಿ ಹೇಳಿಕೆ ನೀಡಿ ಪಾದ್ರೆ ಪಿಯೊ ಅವರಿಗೆ ಯಾವ ದೈವೀ ಶಕ್ತಿಯೂ ಇಲ್ಲವೆಂದು ಘೋಷಿಸಿದರು.[೧೦][೧೯] ಒಂದು ಹಂತದಲ್ಲಂತೂ ಅವರಿಗೆ ಪೂಜಾರ್ಪಣೆ ಮತ್ತು ಪಾಪದಾಲಿಕೆಯಂಥ ತಮ್ಮ ಕರ್ತವ್ಯಗಳನ್ನು ಸಾರ್ವಜನಿಕವಾಗಿ ನಿರ್ವಹಿಸಲು ನಿಷೇಧ ಹೇರಲಾಯಿತು.[೧೯]

ಆದರೆ ೧೯೩೩ರ ವೇಳೆಗೆ ವ್ಯತಿರಿಕ್ತ ಗಾಳಿ ಬೀಸತೊಡಗಿ ಪೋಪ್ ೧೧ನೇ ಪಯಸ್ ಅವರು ತಮ್ಮ ನಿಲುವನ್ನು ಬದಲಿಸಿಕೊಳ್ಳಬೇಕಾದಂತ ಸಂದರ್ಭ ಒದಗಿಬಂತು. “ನಾನು ಪಾದ್ರೆ ಪಿಯೊ ಅವರ ಬಗ್ಗೆ ಕೆಟ್ಟದಾಗಿ ನಡೆದುಕೊಂಡೆ ಎಂಬುದಕ್ಕಿಂತಲೂ ಅವರನ್ನು ನನಗೆ ಕೆಟ್ಟದಾಗಿ ಬಿಂಬಿಸಲಾಯಿತು.” ಎಂದು ಅವರು ಹೇಳಿಕೆಯಿತ್ತರು.[೧೦] ೧೯೩೪ರಲ್ಲಿ ಪಾದ್ರೆ ಪಿಯೊ ಅವರ ಮೇಲಿನ ನಿಷೇಧಗಳನ್ನು ಸಡಿಲಿಸಲಾಯಿತು. ಪೂರ್ವಾನುಮತಿ ಇಲ್ಲದೆ ಮುಕ್ತವಾಗಿ ಎಲ್ಲೆಡೆ ಪ್ರವಚನ ನೀಡಲೂ ಅವಕಾಶ ನೀಡಲಾಯಿತು.[೧೦] ೧೯೩೯ರಲ್ಲಿ ಅಧಿಕಾರ ವಹಿಸಿಕೊಂಡ ಪೋಪ್ ೧೨ನೇ ಪಯಸ್ ಅವರು ಪಾದ್ರೆ ಪಿಯೊ ಅವರನ್ನು ಕಾಣಬಯಸುವ ಅಭಿಮಾನಿಗಳನ್ನು ಇನ್ನಷ್ಟು ಉತ್ತೇಜಿಸಿದರು. ಆದರೆ ಪೋಪ್ ೨೩ನೇ ಜಾನ್ (೧೯೫೮-೧೯೬೩) ಅವರು ತಮ್ಮ ಹಿಂದಿನವರ ನಡವಳಿಕೆಗಳನ್ನು ಅನುಮೋದಿಸದೆ ಪಾದ್ರೆ ಪಿಯೊ ಅವರನ್ನು ವಂಚಕರೆಂದು ಜರಿದದ್ದು ದಾಖಲಾಗಿದೆ.[೨೨] ಅವರ ನಂತರ ಅಧಿಕಾರ ವಹಿಸಿಕೊಂಡ ಪೋಪ್ ಆರನೇ ಚಿನ್ನಪ್ಪರು (೬ನೇ ಪೌಲ್) ೧೯೬೦ರಲ್ಲಿ ಪಾದ್ರೆ ಪಿಯೊ ಅವರ ಮೇಲಿನ ಮಿಥ್ಯಾರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದರು.[೧೮][೨೦]

೧೯೬೦ರ ನಂತರ ಪಾದ್ರೆ ಪಿಯೊ ಅವರ ಆರೋಗ್ಯವು ಕ್ಷೀಣಿಸುತ್ತಾ ಹೋಯಿತು. ಆದರೂ ಅವರ ಧಾಮಿರ್ಕ ಕಾರ್ಯಗಳು ಸತತವಾಗಿ ನಡೆದಿದ್ದವು. ೧೯೬೮ರ ಸೆಪ್ಟೆಂಬರ್ ೨೧ರಂದು ಅಂದರೆ ಅವರ ಮೇಲೆ ಪಂಚಗಾಯಗಳು ಕಾಣಿಸಿಕೊಂಡ ೫೦ನೇ ವರ್ಧಂತಿಯಂದು ಅವರು ಅತೀವ ಸುಸ್ತಿನಿಂದ ಬಳಲಿದರು. ಅದರ ಮರುದಿನ ಅವರು ಆಡಂಬರ ಬಲಿಪೂಜೆ ಅರ್ಪಿಸಬೇಕಿತ್ತು. ಆದರೆ ಪೂಜೆಯನ್ನು ಪೂರ್ಣಗೊಳಿಸಲಾಗುವುದೋ ಇಲ್ಲವೋ ಎಂಬ ಆತಂಕದಿಂದ ಅವರು ಸಾಧಾರಣ ಪೂಜೆಯರ್ಪಿಸಲು ಅನುಮತಿ ಕೋರಿದರು. ಆದರೆ ಅಲ್ಲಿ ಸೇರಿದ್ದ ಅಸಂಖ್ಯಾತ ಯಾತ್ರಿಗಳ ಸಲುವಾಗಿ ಮಹಾಪೂಜೆಯನ್ನೇ ಅರ್ಪಿಸುವಂತೆ ಅವರ ಮೇಲಧಿಕಾರಿಗಳು ಸೂಚಿಸಿದರು. ಅವರ ಮಾತುಗಳಿಗೆ ವಿಧೇಯರಾಗಿ ಪಾದ್ರೆ ಪಿಯೊ ಅವರು ಮಹಾಪೂಜೆ ಸಲ್ಲಿಸತೊಡಗಿದರು. ಕೆಲ ಸಮಯದಲ್ಲೇ ಅವರು ಬಳಲಿಕೆಯಿಂದ ಸೋತುಹೋದರು. ಅವರ ಧ್ವನಿ ದುರ್ಬಲವಾಯಿತು. ಪೂಜೆ ಮುಗಿಸಿ ಪೀಠದಿಂದ ಹೊರನಡೆಯುತ್ತಿದ್ದಂತೆ ಅವರು ಕುಸಿಯತೊಡಗಿದರು. ಕೂಡಲೇ ಅವರ ಕಪುಚಿನ್ ಮಠದ ಇತರ ಸಂನ್ಯಾಸಿಗಳು ಅವರಿಗೆ ಆಸರೆ ಕೊಟ್ಟು ಕರೆದೊಯ್ದರು. ಅದೇ ಅವರ ಜೀವನದ ಕಟ್ಟಕಡೆಯ ಪೂಜಾರ್ಪಣೆಯಾಯಿತು.

ಮರುದಿನ ಅಂದರೆ ೨೩ನೇ ಸೆಪ್ಟೆಂಬರ್ ೧೯೬೮, ಪಾದ್ರೆ ಪಿಯೊ ಅವರು ಅಂತಿಮ ಪಾಪನಿವೇದನೆ ಮಾಡಿ ಫ್ರಾನ್ಸಿಸ್ಕನ್ ವಾಗ್ದಾನಗಳನ್ನು ಪುನರುಚ್ಚರಿಸಿದರು.[೧೦] ಪದ್ಧತಿಯಂತೆ ಅವರ ಕೈಯಲ್ಲಿ ಜಪಸರ ಇದ್ದಿತಾದರೂ ಗಟ್ಟಿಯಾಗಿ ಪ್ರಾರ್ಥಿಸುವ ತ್ರಾಣ ಅವರಿಗಿರಲಿಲ್ಲ.[೨೩] ಕೊನೆಯವರೆಗೂ ಅವರು “ಜೇಸು ಮರಿಯಾ” ಎಂದು ಜಪಿಸುತ್ತಿದ್ದರು. ಬೆಳಗಿನ ಜಾವ ೨:೩೦ರ ಸಮಯದಲ್ಲಿ ಅವರು ಕನವರಿಸುತ್ತಾ ತಮಗೆ ’ಇಬ್ಬರು ತಾಯಂದಿರು ಕಾಣುತ್ತಿದ್ದಾರೆ’ (ಬಹುಶಃ ಒಬ್ಬರು ಹೆತ್ತತಾಯಿ ಮತ್ತೊಬ್ಬರು ಮರಿಯಾಮಾತೆ) [೨೩] ಎನ್ನುತ್ತಾ ’ಮರೀಯಾ’ ಎಂದು ನಿಡಿದಾಗಿ ಉಸಿರು ಬಿಟ್ಟು ಪ್ರಾಣ ತ್ಯಜಿಸಿದರು.[]

ಸೆಪ್ಟೆಂಬರ್ ೨೬ರಂದು ಅವರ ದೇಹವನ್ನು ವರಪ್ರಸಾದ ಮಾತೆಯಾಲಯದ ನೆಲದಾಳದ ಕವಾಟದಲ್ಲಿ ಅಡಕ ಮಾಡಲಾಯಿತು. ಅಂತ್ಯಸಂಸ್ಕಾರದ ಪೂಜೆಯಲ್ಲಿ ಸುಮಾರು ಒಂದು ಲಕ್ಷ ಮಂದಿ ಭಾಗವಹಿಸಿದ್ದರು. ಮರಣಾನಂತರವೇ ನನ್ನ ನಿಜವಾದ ಕ್ರಿಯಾಯೋಜನೆ ಶುರುವಾಗುತ್ತದೆ ಎಂದು ಪಾದ್ರೆಪಿಯೊ ಹೇಳುತ್ತಿದ್ದ ಮಾತುಗಳನ್ನು ಮೆಲುಕು ಹಾಕುತ್ತಾ ಆ ಜನರು ಹೆಚ್ಚಿನ ನಿರೀಕ್ಷೆಯಲ್ಲಿದ್ದರು.[೨೩] ಪಾದ್ರೆ ಪಿಯೊ ಅವರು ಮರಣಾವಸ್ಥೆ ತಲಪುವವರೆಗೂ ಅವರ ಜೊತೆಯಲ್ಲಿಯೇ ಇದ್ದವರ ಪ್ರಕಾರ ಸಾವು ಸಮೀಪಿಸುತ್ತಿದ್ದಂತೆ ಪಂಚಗಾಯಗಳು ಒಂದೂ ಚೂರೂ ಕುರುಹಿಲ್ಲದಂತೆ ಮಾಯವಾಗಿದ್ದವು. ಪಾರ್ಶ್ವದ ಮೇಲಿನ ಗಾಯದ ಗುರುತು ಕೆಂಪು ಬಣ್ಣ ಬಳಿದಂತೆ ತೋರಿ ಕೊನೆಗೆ ಅದೂ ಮಾಯವಾಯಿತು.[೨೩]

ಪಿತ್ರೇಲ್ಚೀನಾದ ಸಂತ ಪಿಯೊ ಅವರನ್ನು ತಮ್ಮ ಪಾಲಕರನ್ನಾಗಿ ನೇಮಿಸುವಂತೆ ನಾಗರೀಕ ಸಂರಕ್ಷಣೆಯ ಸುಮಾರು ೧೬೦ ಕಾರ್ಯಕರ್ತರು ಇತಾಲಿಯಾದ ಬಿಷಪರ ಸಮಾವೇಶವನ್ನು ಕೇಳಿಕೊಂಡಾಗ ಬಿಷಪರು ಆ ಮನವಿಯನ್ನು ವ್ಯಾಟಿಕನ್ನಿಗೆ ರವಾನಿಸಿ ಒಪ್ಪಿಗೆ ಪಡೆದರು.[೨೪] ಅವರು ಉತ್ತಮ ಉಪಶಮಿಕರೆಂದು ಲಂಡನ್ನಿನ ಕಥೋಲಿಕ ಕೇಳ್ವಿಕಚೇರಿಯವರು ಪ್ರಚಾರ ನಡೆಸಿದರು. ಅಲ್ಲದೆ ಪಾದ್ರೆ ಪಿಯೊ ಹೇಳುತ್ತಿದ್ದ ’ಜಪಿಸಿ, ನಿರೀಕ್ಷಿಸಿ ಹಾಗೂ ನಿಶ್ಚಿಂತೆಯಿಂದಿರಿ’ ಎಂಬ ಮಾತುಗಳ ಮೇಲಿನ ಗೌರವದಿಂದ ವರ್ಷದ ಅತಿ ಖಿನ್ನಭಾವದ ದಿನವಾದ ಜನವರಿ ೨೨ಅನ್ನು ಬಲುಸಂತೋಷದ ದಿನವನ್ನಾಗಿ ಅವರು ಬದಲಿಸಿದರು.”[೨೫]

ಅತಿಮಾನುಷ ಸ್ವಭಾವ

[ಬದಲಾಯಿಸಿ]
ಚಿತ್ರ:Padre Pio during Mass.jpg
Padre Pio celebrating mass. ಪಾದ್ರೆ ಪಿಯೊ ಅವರು ಪೂಜೆ ಸಲ್ಲಿಸುತ್ತಿರುವುದು. ಮಹಾದರ್ಶನ ಹಾಗೂ ಯಾತನೆಯ ಕಾರಣ ಪೂಜೆ ಹಲವು ಗಂಟೆಗಳ ಕಾಲ ಸಾಗುತ್ತಿತ್ತು. ಬಟ್ಟೆಯಿಂದ ಗಾಯಗಳನ್ನು ಮರೆಮಾಚಿರುವುದನ್ನು ಗಮನಿಸಿ.

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಪಾದ್ರೆ ಪಿಯೊ ಅವರು ಆತ್ಮಗಳನ್ನು ಓದುತ್ತಿದ್ದರಂತೆ.[೨೬] ೧೯೪೭ರಲ್ಲಿ ಕರೋಲ್ ಜೋಸೆಫ್ ವೊಯ್ತಿಲಾ ಎಂಬ ಪೋಲೆಂಡಿನ ಯುವ ಪಾದ್ರಿ (ಮುಂದೆ ಇವರು ಎರಡನೇ ಜಾನ್ ಪಾವ್ಲ್ ಎಂಬ ಹೆಸರಿನಲ್ಲಿ ಪೋಪರಾದರು) ಯ ಬಳಿ ಇವರು ಪಾಪನಿವೇದನೆ ಮಾಡಿದ್ದರು. ತಾವು ಚರ್ಚಿನ ಅತಿಮುಖ್ಯ ಹುದ್ದೆಗೇರುವುದಾಗಿ ಆತ ಆ ಸಂದರ್ಭದಲ್ಲಿ ಹೇಳಿದ್ದರೆಂದು ಆ ಯುವಪಾದ್ರಿ ಕಾರ್ಡಿನಲ್ ಅಲ್ಫೋನ್ಸ್ ಸ್ಟಿಕ್ಲರ್ ಅವರ ಬಳಿ ಹೇಳಿಕೊಂಡಿದ್ದರಂತೆ. "[೨೭] ಕಾರ್ಡಿನಲ್ ಸ್ಟಿಕ್ಲರ್ ಹೇಳುವ ಪ್ರಕಾರ ಆ ಯುವಪಾದ್ರಿ ಮುಂದೊಮ್ಮೆ ಕಾರ್ಡಿನಲ್ ಪದವಿಗೇರಿದಾಗ ಪಾದ್ರೆ ಪಿಯೊ ಅವರ ಭವಿಷ್ಯವಾಣಿ ನಿಜವಾಯಿತೆಂದುಕೊಂಡರಂತೆ.[೨೮] ಆದರೆ ಜಾನ್ ಪಾವ್ಲರ ಕಾರ್ಯದರ್ಶಿ ಈ ಭವಿಷ್ಯವಾಣಿಯ ಕುರಿತು ಅಲ್ಲಗಳೆಯುತ್ತಾರೆ.[೨೯] ಆದರೆ ಜಾರ್ಜ್ ವೈಗಲ್ಲನ ”ವಿಟ್ನೆಸ್ ಟು ಹೋಪ್” ಎಂಬ ಆತ್ಮಕಥೆಯಲ್ಲಿ ಈ ಭೇಟಿಯ ವಿವರ ಇರುವುದಾದರೂ ಈ ಘಟನೆಯ ಪ್ರಸ್ತಾಪವಿಲ್ಲ.

ಬಿಷಪ್ ವೊಯ್ತಿಲಾ ಅವರು ೧೯೬೨ರಲ್ಲಿ ತಮ್ಮ ಮಿತ್ರ ಡಾ. ವಾಂಡಾ ಪೊಲ್ತಾವ್ಸ್ಕ ಅವರು ಕ್ಯಾನ್ಸರಿನಿಂದ ಗುಣ ಹೊಂದಲು ಪ್ರಾರ್ಥಿಸುವಂತೆ ಪಾದ್ರೆ ಪಿಯೊ ಅವರಲ್ಲಿ ವಿನಂತಿಸಿದ್ದರು. ಆನಂತರ ಅವರ ಕ್ಯಾನ್ಸರ್ ಗುಣವಾಗಿದ್ದು ಹೇಗೆಂದು ವೈದ್ಯರಿಗೆ ಬಿಡಿಸಲಾಗದ ಒಗಟಾಗಿತ್ತು.[೩೦]

ಪಾದ್ರೆ ಪಿಯೊ ಅವರ ಅತಿಮಾನುಷ ಶಕ್ತಿಗಳ ಕುರಿತಂತೆ ಹಬ್ಬಿದ್ದ ಕತೆಗಳನ್ನು ಪರಿಶೀಲಿಸಲು ಕ್ರೈಸ್ತ ಜಗದ್ಗುರುಪೀಠವು ಎರಡು ಸಾರಿ ಆದೇಶಿಸಿತ್ತು. ಎರಡನೇ ಪೋಪ್ ಜಾನ್ ಪಾವ್ಲ್ ಜಗದ್ಗುರುಗಳು ೨೦೦೨ರಲ್ಲಿ ಅವರನ್ನು ವಿಧ್ಯುಕ್ತವಾಗಿ ಪುನೀತ ಪದಕ್ಕೇರಿಸಿದರು.

೧೯೯೯ರಲ್ಲಿ ಲೋಕಾರ್ಪಣೆಯಾದ ಪಾದ್ರೆ ಪಿಯೊ; ದ ವಂಡರ್ ವರ್ಕರ್ (Padre Pio: The Wonder Worker) ಎಂಬ ಪುಸ್ತಕದ ಒಂದು ಭಾಗದಲ್ಲಿ ಮಲಾಕಿ ಜೆರಾಡ್ ಕ್ಯಾರಲ್ ಎಂಬ ಪಾದ್ರಿಯವರು ಜೆಮ್ಮಾ ದೆ ಜಾರ್ಜಿ ಎಂಬ ಸಿಸಿಲಿಯನ್ ಹುಡುಗಿಯ ಕತೆಯನ್ನು ಹೇಳುತ್ತಾ ಕುರುಡಿಯಾಗಿದ್ದ ಆಕೆ ಕಪುಚಿನ್ ಸಂನ್ಯಾಸಿಯ ಪವಾಡದಿಂದ ದೃಷ್ಟಿ ಪಡೆದ ಘಟನೆಯನ್ನು ವಿವರಿಸುತ್ತಾರೆ.[೩೧] ೧೯೪೭ರಲ್ಲಿ ಜೆಮ್ಮಾ ತನ್ನ ಅಜ್ಜಿಯೊಂದಿಗೆ ಸನ್ ಜಿವಾನ್ನಿ ರೊತೊಂದೊಗೆ ಬಂದಿಳಿದಾಗ ಆಕೆ ಕುರುಡಿಯಾಗಿದ್ದಳು.[೩೧] ಪ್ರಯಾಣದ ವೇಳೆಯಲ್ಲೇ ಆ ಪುಟ್ಟ ಹುಡುಗಿಯು ಸಮುದ್ರದಲ್ಲಿನ ಉಗಿಹಡಗನ್ನು ಗುರುತಿಸಿ ತನಗೆ ಎಲ್ಲ ಕಾಣುತ್ತಿದೆ ಎಂದಿದ್ದಳಂತೆ.[೩೧] ಜೆಮ್ಮಾಳ ಅಜ್ಜಿಯು ಅದನ್ನು ನಂಬಿರಲಿಲ್ಲ.[೩೧] ಆ ಪುಟ್ಟ ಹುಡುಗಿ ಪಾದ್ರೆ ಪಿಯೊ ಅವರಲ್ಲಿ ನಿವೇದನೆ ಮಾಡುವಾಗ ತನಗೆ ದೃಷ್ಟಿ ವರ ನೀಡುವಂತೆ ಕೇಳಲು ಮರೆತಳಂತೆ. ಆಮೇಲೆ ಆಕೆಯ ಪರವಾಗಿ ಆಕೆಯ ಅಜ್ಜಿ ಪಾದ್ರೆ ಪಿಯೊ ಅವರನ್ನು ವಿನಂತಿಸಿಕೊಳ್ಳುತ್ತಾಳೆ.[೩೧] ಕ್ಯಾರಲ್ ಹೇಳುವ ಪ್ರಕಾರ ಪಾದ್ರೆ ಪಿಯೊ ಅವರು ಅವರ ವಿನಂತಿಗೆ ಸಮ್ಮತಿಸಿ ದೃಷ್ಟಿ ಬಂದಾಗ ಕಣ್ಣೀರು ಹಾಕಬಾರದೆಂದು ತಾಕೀತು ಮಾಡುತ್ತಾರಂತೆ."[೩೧] ಆಮೇಲೆ ಆಕೆಗೆ ದೃಷ್ಟಿ ಬರುತ್ತದೆ, ದೃಷ್ಟಿ ಪರೀಕ್ಷಕರಿಗೆ ಇದೊಂದು ಒಗಟಾಗಿ ಪರಿಣಮಿಸುತ್ತದೆ.[೩೧] ಪಾದ್ರೆ ಪಿಯೊ ಅವರು ಸಂತ ಜಾನ್ ವಿಯಾನ್ನಿಯವರಂತೆ ಸೈತಾನನೊಂದಿಗೆ ಜಗಳಕಾದು ಮೈಕೈ ನೋಯಿಸಿಕೊಂಡರೆಂದೂ ಹೇಳುತ್ತಾರೆ. ಅಂತೆಯೇ ಅವರು ಕಾವಲು ದೂತರೊಡನೆ ಸಂಭಾಷಿಸುತ್ತಿದ್ದರೆಂದೂ, ಕೇಳುವ ಮುನ್ನವೇ ವರಗಳನ್ನು ದಯಪಾಲಿಸುತ್ತಿದ್ದರೆಂದೂ ಹೇಳಿಕೆಯಿದೆ.

ಅವರು ಮರಣವಪ್ಪುವ ದಿನ ಮರಿಯಾ ಎಸ್ಪೆರಾಂಝ ಎಂಬ ವೆನಿಜುವೆಲಾದ ದೇವಸೇವಕಿ ತನಗವರ ದರ್ಶನವಾಯಿತೆಂದೂ ನಾನಿನ್ನು ಹೋಗಿ ಬರುವೆ, ಮುಂದೆ ನಿನ್ನ ಸರದಿ ಎಂದು ಹೇಳಿದರೆಂದೂ ಹೇಳಿಕೆಯಿತ್ತಿದ್ದಾರೆ."[೩೨][೩೩][೩೪] ಅವರ ಗಂಡ ನೋಡುತ್ತಿದ್ದಂತೆ ಆಕೆಯ ಮುಖವು ಪಾದ್ರೆ ಪಿಯೊ ಅವರ ಮುಖದಂತೆ ಬದಲಾಯಿತಂತೆ.[೩೨][೩೩][೩೪] ಮರುದಿನ ಅವರಿಗೆ ಪಾದ್ರೆ ಪಿಯೊ ಅವರು ಸತ್ತ ಸುದ್ದಿ ತಿಳಿಯಿತು.[೩೨][೩೩][೩೪] ಪಾದ್ರೆ ದೊಮಿನಿಕೊ ದ ಸೇಸ್ ಎಂಬ ಯುವ ಕಪುಚಿನ್ ಸಂನ್ಯಾಸಿಯೊಬ್ಬರು ತಾವು ಸೆಪ್ಟೆಂಬರ್ ೨೨ ರಂದು ಪಾದ್ರೆ ಪಿಯೊ ಅವರು ಮನೊಪ್ಪೆಲೊ ಊರಿನ ಪವಿತ್ರಮುಖದ ಮುಂದೆ ಮೊಣಕಾಲೂರಿ ಪ್ರಾರ್ಥಿಸುತ್ತಿರುವುದನ್ನು ಕಂಡೆನೆಂದು ಹೇಳಿದ್ದಾರೆ. ಆದರೆ ವಾಸ್ತವವಾಗಿ ಪಾದ್ರೆ ಪಿಯೊ ಅವರು ತಮ್ಮ ಕೋಣೆಯಿಂದ ಹೊರಗೆ ಬಂದೇ ಇರಲಿಲ್ಲ.[೩೫]

ಪಂಚಗಾಯಗಳ ತೋರಿಕೆ

[ಬದಲಾಯಿಸಿ]
ಪಾದ್ರೆ ಪಿಯೊ ಅವರು ಪಂಚಗಾಯಗಳನ್ನು ತೋರುತ್ತಿರುವುದು

೧೯೧೮ರ ಸೆಪ್ಟೆಂಬರ್ ೨೦ರಂದು ಪಾದ್ರೆ ಪಿಯೊ ಅವರು ಮೊತ್ತಮೊದಲ ಬಾರಿಗೆ ಪಂಚಗಾಯ (ಯೇಸುಕ್ರಿಸ್ತನು ಶಿಲುಬೆಗೇರಿದಾಗ ಅವನ ದೇಹದ ಮೇಲಿದ್ದ ಗಾಯಗಳು) ಗಳನ್ನು ಸ್ವತಃ ತಮ್ಮ ದೇಹದಲ್ಲಿ ಅನುಭವಿಸಿದರು. ಅದು ಮುಂದಿನ ಐವತ್ತು ವರ್ಷಗಳವರೆಗೆ ಅಂದರೆ ಸಾಯುವವರೆಗೆ ಅವರನ್ನು ಬಾಧಿಸಿತು. ವಿಶೇಷವೆಂದರೆ ಆ ಗಾಯಗಳಿಂದ ಒಸರುತ್ತಿದ್ದ ರಕ್ತದ ವಾಸನೆ ಹೂಗಳ ಪರಿಮಳದಂತಿತ್ತು. ಹಲವು ಕ್ರೈಸ್ತಸಂತರ ವಿಷಯದಲ್ಲೂ ಇಂಥ ಪರಿಮಳದ ಪ್ರಸ್ತಾಪವಿದೆ.

ಅವರ ಪಂಚಗಾಯಗಳು ಸಾತ್ವಿಕತೆಯ ಸಂಕೇತ ಎಂದು ದಾಖಲಿಸಿದ ವೈದ್ಯರುಗಳು ಎಷ್ಟರ ಮಟ್ಟಿಗೆ ಚರ್ಚಿನಿಂದ ಹೊರತಾಗಿದ್ದರು ಎಂಬುದು ತಿಳಿದುಬಂದಿಲ್ಲ.[೧೯][೨೦] ಇವೆಲ್ಲ ಹೇಗಾಯಿತೆಂದು ವಿವರಿಸಲಾಗುತ್ತಿಲ್ಲವೆಂದು ಆ ವರದಿಗಳು ಹೇಳುತ್ತವೆ ಹಾಗೂ ಎಷ್ಟು ದಿನವಾದರೂ ಗಾಯಗಳಿಗೆ ಸೋಂಕು ತಗುಲಿಲ್ಲವೆಂದೂ ದಾಖಲಿಸಿವೆ.[೧೯][೨೦][೩೬] ಅವರ ಗಾಯಗಳು ಮಾದರೂ ಮತ್ತೆ ಕಾಣಿಸಿಕೊಳ್ಳುತ್ತಿದ್ದವು.[೩೭] ಬರ್ಲೆಟಾ ನಗರದಾಸ್ಪತ್ರೆಯ ಮುಖ್ಯ ವೈದ್ಯರಾದ ಲುಯಿಜಿ ರೊಮಾನೆಲಿ ಅವರು ಈ ಗಾಯಗಳನ್ನು ಸುಮಾರು ಒಂದು ವರ್ಷಕಾಲ ಪರಿಶೀಲಿಸಿದರು. ಖಾಸಗಿ ವೈದ್ಯರಾದ ಜಾರ್ಜಿಯೊ ಫೆಸ್ತ ಅವರು ಸಹಾ ೧೯೨೦ ರಿಂದ ೧೯೨೫ರವರಗೆ ಪರಿಶೀಲಿಸಿದ್ದಾರೆ. ಪೋಪ್ ೧೫ನೇ ಬೆನೆಡಿಕ್ಟ್ ಅವರ ವೈದ್ಯನಾದ ಪ್ರೊಫೆಸರ್ ಜಿಸೆಪ್ಪೆ ಬಸ್ತಿಯಾನೆಲಿ ಅವರು ಗಾಯಗಳಿರುವುದನ್ನು ಒಪ್ಪಿದರೂ ಅದರ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದರು. ರೋಮ್ ವಿಶ್ವವಿದ್ಯಾಲಯದ ರೋಗವಿಶ್ಲೇಷಕ ಡಾ. ಅಮಿಕೊ ಬಿಗ್ನಮಿ ಅವರು ಗಾಯಗಳನ್ನು ಗಮನಿಸಿದರಾದರೂ ಹೆಚ್ಚಿನ ವಿಶ್ಲೇಷಣೆ ಸಾಧ್ಯವಾಗಲಿಲ್ಲ.[೩೮] ಬಿಗ್ನಮಿ ಮತ್ತು ಜಿಸೆಪ್ಪೆ ಅವರಿಬ್ಬರೂ ಗಾಯಗಳ ಮೆದು ಅಂಚಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಬಹುಶಃ ಎಡೆಮ್ಮಾ ಕೊರತೆಯಿಂದ ಹಾಗಾಗಿರಬಹುದೆಂದಿದ್ದಾರೆ. ಡಾ. ಆಲ್ಬೆರ್ಟೊ ಕಸೆರ್ಟಾ ಅವರು ೧೯೫೪ರಲ್ಲಿ ಕೈಗಳ ಎಕ್ಸ್ ರೇ ತೆಗೆದು ಮೂಳೆಗಳು ಸಹಜ ಸ್ಥಿತಿಯಲ್ಲಿವೆಯೆಂದು ಹೇಳಿದ್ದಾರೆ.[೩೯]

ಪಾದ್ರೆ ಪಿಯೊ ಅವರಿಗೆ ಈ ಗಾಯಗಳು ಮುಜುಗರದ ಸಂಗತಿಯಾತ್ತು ಆದ್ದರಿಂದಲೇ ಅವರ ಬಹುಪಾಲು ಚಿತ್ರಗಳಲ್ಲಿ ಈ ಗಾಯಗಳನ್ನು ಬಟ್ಟೆಯಿಂದ ಮುಚ್ಚಿರುವುದನ್ನು ಕಾಣಬಹುದಾಗಿದೆ.[೨೦] ೧೯೬೮ರಲ್ಲಿ ಅವರು ನಿಧನ ಹೊಂದಿದಾಗ ಅವರ ದೇಹದ ಮೇಲೆ ಯಾವುದೇ ಗಾಯದ ಗುರುತು ಇರಲಿಲ್ಲ. ಅವರನ್ನು ಪರೀಕ್ಷಿಸಿದ ಎಲ್ಲ ವೈದ್ಯರ ಪ್ರಕಾರ ಅಲ್ಲಿ ರಕ್ತದ ಕುರುಹು ಸಹಾ ಇರಲಿಲ್ಲ.[೪೦]

ಇತಿಹಾಸಜ್ಞ ಸರ್ಜಿಯೊ ಲುಝಟ್ಟೊ ಮತ್ತು ಇತರರು (ಆಸ್ತಿಕರು ಮತ್ತು ನಾಸ್ತಿಕರು) ಪಾದ್ರೆ ಪಿಯೊ ಅವರ ಪಂಚಗಾಯಗಳನ್ನು ವಂಚನೆಯೆಂದು ಕರೆದಿದ್ದಾರೆ. ಲುಝಟ್ಟೊ ಅವರ ಪ್ರಕಾರ ಪಾದ್ರೆ ಪಿಯೊ ಅವರು ಕಾರ್ಬಾಲಿಕ್ ಆಮ್ಲ ಬಳಸಿ ಗಾಯಗಳನ್ನು ಸೃಷ್ಟಿಸಿದ್ದಾರೆ, ಏಕೆಂದರೆ ವ್ಯಾಟಿಕನ್ನಿನ ಪತ್ರಾಗಾರದಲ್ಲಿರುವ ದಾಖಲೆಗಳಲ್ಲಿ ಸನ್ ಜಿವಾನ್ನಿ ರೊತೊಂದೊ ಊರಿನ ಔಷಧದಂಗಡಿಯಲ್ಲಿ ಅವರು ಅದನ್ನು ಖರೀದಿಸಿದ ಬಗ್ಗೆ ರಸೀತಿ ಇದೆಯಂತೆ. ಔಷಧದಂಗಡಿಯ ಯಜಮಾನ್ತಿ ಮರಿಯಾ ದೆ ವಿಟೊ ಅವರ ಪ್ರಕಾರ ಪಾದ್ರೆ ಪಿಯೊ ಅವರು ಸೂಜಿಗಳನ್ನು ಶುದ್ಧಗೊಳಿಸಲು ಅದನ್ನು ಕೊಳ್ಳುತ್ತಿರುವುದಾಗಿಯೂ ಯಾರಿಗೂ ಆ ಕುರಿತು ಹೇಳಬಾರದೆಂದೂ ತಿಳಿಸಿದ್ದರಂತೆ. ಕಥೋಲಿಕ ಧರ್ಮಸಭೆ ಈ ಅಂಶಗಳನ್ನು ತನಿಖೆ ಮಾಡಿ ಆನಂತರ ಪುನೀತ ಪದವಿಯ ಘೋಷಣೆಯ ವೇಳೆಗೆ ಅವುಗಳನ್ನು ವಜಾಗೊಳಿಸಿದೆ.[೪೧]

ಒಬ್ಬ ಪ್ರತ್ಯಕ್ಷದರ್ಶಿ ಹೇಳಿದಂತೆ “ಆ ದಿನಗಳಲ್ಲಿ ಎಲ್ಲೆಡೆ ಸ್ಪಾನಿಷ್ ಫ್ಲೂ ಹಬ್ಬಿತ್ತು. ಹುಡುಗರಿಗೆ ಅದರ ವಿರುದ್ಧದ ಲಸಿಕೆ ಹಾಕಲಾಗುತ್ತಿತ್ತು. ವೈದ್ಯರ ಕೊರತೆಯಿಂದ ಪಾದ್ರಿಗಳಾದ ಪವೊಲಿನೊ ಮತ್ತು ಪಿಯೊ ಅವರು ಲಸಿಕೆಗಳನ್ನು ಚುಚ್ಚುತ್ತಿದ್ದರು, ಅದಕ್ಕಾಗಿ ಅವರಿಗೆ ಕಾರ್ಬಾಲಿಕ್ ಆಮ್ಲದ ದ್ರಾವಣ ಬೇಕಿತ್ತು” ಎಂಬ ಕಾರಣದಿಂದ ಚರ್ಚಿನ ಈ ನಡವಳಿಕೆಯನ್ನು ಸಮರ್ಥಿಸಲಾಗಿದೆ.”[೪೧][೪೨]

ಸಂತಪದವಿ

[ಬದಲಾಯಿಸಿ]

೧೯೮೨ರಲ್ಲಿ ಪೋಪರು ಪಾದ್ರೆ ಪಿಯೊ ಅವರಿಗೆ ಸಂತ ಪದವಿ ನೀಡುವ ಸಾಧ್ಯಾಸಾಧ್ಯತೆಯ ಬಗ್ಗೆ ಪರಿಶೀಲಿಸಲು ಆರ್ಚ್ಬಿಷಪ್ ಮೆನ್ಫ್ರಿದೋನಿಯಾ ಅವರನ್ನು ನಿಯುಕ್ತಗೊಳಿಸಿದರು. ವಿಚಾರಣೆಯು ಏಳುವರ್ಷಗಳ ಕಾಲ ನಡೆದು ೧೯೯೦ರಲ್ಲಿ ಪಾದ್ರೆ ಪಿಯೊ ಅವರನ್ನು ಪುನೀತಪದವಿಗೇರಿಸುವ ಮೊದಲ ಹಂತವಾಗಿ ದೇವಸೇವಕ ಎಂದು ಘೋಷಿಸಲಾಯಿತು.

೧೯೯೦ರ ಪ್ರಾರಂಭದಲ್ಲಿ ಸಂತರ ರಚನಾಮಂಡಲಿಯು ಪಾದ್ರೆ ಪಿಯೊ ಅವರು ಹೇಗೆ ಧೀರತನದಿಂದ ಜೀವಿಸಿದರೆಂಬುದರ ಬಗ್ಗೆ ವಿಮರ್ಶೆಗೆ ತೊಡಗಿತು. ಆಮೇಲೆ ೧೯೯೭ರಲ್ಲಿ ಪೋಪ್ ಎರಡನೇ ಜಾನ್ ಪಾವ್ಲ್ ಅವರು ಅವರನ್ನು ಪುನೀತರೆಂದು ಘೋಷಿಸಿದರು. ಅವರ ಜೀವನವು ಇತರರ ಮೇಲೆ ಬೀರಿದ ಪರಿಣಾಮಗಳ ಕುರಿತ ಚರ್ಚೆ ಮುಂದುವರಿದು ಕೊನ್ಸಿಗ್ಲಿಯಾ ದೆ ಮಾರ್ತಿನೊ ಎಂಬ ಇತಾಲಿಯಾ ಮಹಿಳೆಯು ಪಾದ್ರೆ ಪಿಯೊ ಅವರ ಮಧ್ಯಸ್ತಿಕೆಯಿಂದಲೇ ಗುಣಮುಖಳಾದದ್ದು ಖಚಿತವಾಯಿತು. ೧೯೯೯ರಲ್ಲಿ ಮಂಡಲಿಯ ಶಿಫಾರಸಿನ ಮೇರೆಗೆ ಪೋಪ್ ಎರಡನೇ ಜಾನ್ ಪಾವ್ಲ್ ಅವರು ಪಾದ್ರೆ ಪಿಯೊ ಅವರನ್ನು ಧನ್ಯರೆಂದು ಕರೆದರು.

ಪಾದ್ರೆ ಪಿಯೊ ಅವರ ಜೀವನಮೌಲ್ಯ ಮತ್ತು ಮರಣಾನಂತರವೂ ಮುಂದುವರಿದ ಸುಕೃತ್ಯಗಳನ್ನು ಪರಿಗಣಿಸಿದ್ದಲ್ಲದೆ ಮತ್ತೊಂದು ಪವಾಡಕೃತ್ಯವನ್ನು ಚರ್ಚೆಯ ನಂತರ ಗಣನೆಗೆ ತೆಗೆದುಕೊಂಡು ಪೋಪರು ಪಾದ್ರೆ ಪಿಯೊ ಅವರನ್ನು ೧೬ನೇ ಜೂನ್ ೨೦೦೨ರಂದು ಸಂತರೆಂದು ಘೋಷಿಸಿದರು.[೨೮] ಆ ಕ್ಯಾನನೈಸೇಷನ್ ಸಮಾರಂಭದಲ್ಲಿ ಸುಮಾರು ಮೂರು ಲಕ್ಷ ಮಂದಿ ಭಾಗವಹಿಸಿದ್ದರೆಂದು ಅಂದಾಜಿಸಲಾಗಿದೆ.[೨೮]

ದ್ವಿತೀಯ ವ್ಯಾಟಿಕನ್ ಸಮಾವೇಶದ ನಂತರವೂ ಜೀವಿಸಿದ್ದ ಗುರುಗಳ ಪೈಕಿ ಸಂತರಾಗಿದ್ದ ಇಬ್ಬರಲ್ಲಿ ಪಾದ್ರೆ ಪಿಯೊ ಅವರನ್ನು ಬಿಟ್ಟರೆ ಮತ್ತೊಬ್ಬರು ಸಮತ ಮರಿಯಾ ಎಸ್ಕ್ರಿವಾ. ಈ ಇಬ್ಬರಿಗೂ ಆ ಸಮಾವೇಶದ ಸುಧಾರಣೆಗಳ ಅನ್ವಯದಿಂದ ವಿನಾಯತಿ ನೀಡಿ ಹಳೆಯ ಪದ್ಧತಿಯಲ್ಲೇ ಅಂದರೆ ಸಾಂಪ್ರದಾಯಿಕ ಲತೀನ್ ಪೂಜಾರ್ಪಣೆ ಮಾಡಲು ಅವಕಾಶವಿತ್ತು.

೧ನೇ ಜುಲೈ ೨೦೦೪ರಂದು ಎರಡನೇ ಪೋಪ್ ಜಾನ್ ಪಾವ್ಲ್ ಅವರು ಸನ್ ಜಿವಾನ್ನಿ ರೊತೊಂದೊ ಊರಿನ ಪಾದ್ರೆ ಪಿಯೊ ಯಾತ್ರಾಸ್ಥಳದ ಚರ್ಚನ್ನು ಪಿತ್ರೇಲ್ಚಿನಾದ ಸಂತ ಪಾದ್ರೆ ಪಿಯೊ ಸ್ಮಾರಕ ಚರ್ಚ್ ಎಂದು ಮರುನಾಮಕರಣ ಮಾಡಿದರು.[೪೩] ಸಿಸಿಲಿಯ ಮೆಸ್ಸಿನಾದಲ್ಲಿನ ಪಾದ್ರೆ ಪಿಯೊ ಅವರ ಪ್ರತಿಮೆಯು ೨೦೦೨ರಲ್ಲಿ ರಕ್ತಕಣ್ಣೀರು ಸುರಿಸಿ ಅಸಂಖ್ಯಾತ ಜನರನ್ನು ಆಕರ್ಷಿಸಿತು.[೪೪] ಹೀಗೆ ಪಾದ್ರೆ ಪಿಯೊ ಅವರು ಪ್ರಪಂಚದ ಅತ್ಯಂತ ಜನಪ್ರಿಯ ಸಂತರಲ್ಲಿ ಒಬ್ಬರೆನಿಸಿದರು. ಇಂದು ಜಗತ್ತಿನಲ್ಲಿ ೩೦೦೦ಕ್ಕೂ ಹೆಚ್ಚು ಪಾದ್ರೆ ಪಿಯೊ ಪ್ರಾರ್ಥನಾ ತಂಡಗಳಿದ್ದು ಅವುಗಳ ಒಟ್ಟಾರೆ ಸದಸ್ಯರ ಸಂಖ್ಯೆ ಸುಮಾರು ಮೂರು ಮಿಲಿಯನ್ ಎಂದು ಲೆಕ್ಕಿಸಲಾಗಿದೆ. ಅವರ ಹೆಸರಿನ ಚರ್ಚುಗಳು ಅಮೆರಿಕದ ನ್ಯೂಜೆರ್ಸಿ ಹಾಗೂ ಆಸ್ಟ್ರೇಲಿಯಾಸಿಡ್ನಿಗಳಲ್ಲಿವೆ. ನ್ಯೂಜೆರ್ಸಿಯ ಬ್ಯೂನಾ ಎಂಬಲ್ಲಿನ ಚರ್ಚು ಅವರ ಪುಣ್ಯಕ್ಷೇತ್ರವೆನಿಸಿದೆ. ಫೆಮಿಗ್ಲಿನಾ ಕ್ರಿಸ್ಟಿಯಾನಾ ಎಂಬ ಪತ್ರಿಕೆಯು ೨೦೦೬ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಇತಾಲಿಯಾದ ಹೆಚ್ಚಿನ ಜನರು ಪಾದ್ರೆ ಪಿಯೊ ಅವರನ್ನು ಉಳಿದವರಿಗಿಂತ ಹೆಚ್ಚು ಪೂಜನೀಯವಾಗಿ ಕಾಣುತ್ತಾರೆಂದು ತಿಳಿದುಬಂದಿದೆ. ಕಥೋಲಿಕ ಧರ್ಮಸಭೆಯು ವಿಧಿಸುವ ದೇವರೊಬ್ಬರನ್ನೇ ಆರಾಧಿಸಬೇಕು ಎನ್ನುವ ನಿಯಮಕ್ಕೆ ಅನುಗುಣವಾಗಿ ಭಕ್ತರು ಈ ಸಂತರಲ್ಲಿ ತಮ್ಮ ಬೇಡಿಕೆಯನ್ನಷ್ಟೇ ಮಡಗುತ್ತಾರೆಂದು ತಿಳಿಯಬೇಕು.[೪೫]

ಇತಾಲಿಯಾದ ಪುಗ್ಲಿಯಾ ಪ್ರಾಂತ್ಯದ ಸನ್ ಜಿವಾನ್ನಿ ರೊತೊಂದೊ ಊರಿನ ಬಳಿಯಿರುವ ಒಂದು ಗುಡ್ಡದ ಮೇಲೆ ಪಾದ್ರೆ ಪಿಯೊ ಅವರ ಪ್ರತಿಮೆಯನ್ನು ಸ್ಥಾಪಿಸಲು ಸಿದ್ಧತೆಗಳು ನಡೆದಿವೆ. ಪ್ರಪಂಚದಾದ್ಯಂತ ಹರಡಿರುವ ಅವರ ಭಕ್ತರು ಈ ಪ್ರತಿಮೆ ನಿರ್ಮಾಣಕ್ಕೆ ಬೇಕಾಗಿರುವ ಹಲವು ಮಿಲಿಯನ್ ಪೌಂಡುಗಳನ್ನು ದೇಣಿಗೆಯಾಗಿ ಕೊಡುವರೆಂಬ ನಿರೀಕ್ಷೆಯಿದೆ. ಪ್ರತಿಮೆಗೆ ವಿಶೇಷ ಫೋಟೋವೊಲ್ಟಾಯಿಕ್ ಬಣ್ಣವನ್ನು ಲೇಪಿಸಿ ಸೂರ್ಯನ ಶಾಖ ಹೀರಿಕೊಂಡು ವಿದ್ಯುದುತ್ಪಾದನೆ ಮಾಡುವಂತೆ ನಿರ್ಮಿಸಲಾಗುವುದು. ಹೀಗೆ ಅದೊಂದು ಪರಿಸರ ಸ್ನೇಹೀ ಧಾರ್ಮಿಕ ಪ್ರತಿಮೆಯಾಗಲಿದೆ.[೪೬]

ಪಿತ್ರೇಲ್ಚಿನಾದ ಸಂತ ಪಾದ್ರೆ ಪಿಯೊ ಅವರ ದೇಹ

೩ನೇ ಮಾರ್ಚ್ ೨೦೦೮ರಲ್ಲಿ ಅಂದರೆ ಅವರ ಮರಣದ ೪೦ ವರ್ಷಗಳ ತರುವಾಯ ಅವರ ಅವಶೇಷಗಳನ್ನು ಪ್ರದರ್ಶನಕ್ಕಿಡಲು ಉದ್ದೇಶಿಸಿ ಅವರ ಸಮಾಧಿಯನ್ನು ಹೊರತೆಗೆಯಲಾಯಿತು. ಚರ್ಚಿನ ಹೇಳಿಕೆಯ ಪ್ರಕಾರ ಅವರ ದೇಹವು ಇನ್ನೂ ಸುಸ್ಥಿತಿಯಲ್ಲೇ ಇತ್ತು. ಪೋಪರ ಪ್ರತಿನಿಧಿಯಾಗಿ ಬಂದಿದ್ದ ಆರ್ಚ್ ಬಿಷಪ್ ದೊಮೆನಿಕೊ ದೆ ಅಂಬ್ರೋಸಿಯೊ ಅವರು “ತಲೆಬುರುಡೆಯ ಮೇಲ್ಭಾಗವು ಮೂಳೆಯಂತೆ ತೋರುತ್ತಿದ್ದರೂ ಕೆನ್ನೆ ಹಾಗೂ ದೇಹದ ಉಳಿದ ಭಾಗವು ಕೆಡದೆ ಚೆನ್ನಾಗಿಯೇ ಇತ್ತು” ಎಂದು ಹೇಳಿಕೆ ನೀಡಿದರು.[೪೭] ಪಂಚಗಾಯಗಳು ಕಾಣುತ್ತಿರಲಿಲ್ಲವೆಂಬುದನ್ನೂ ಅವರು ಖಚಿತಪಡಿಸಿದರು.[೪೮] ಅವರು ಮುಂದುವರಿದು ಆ ಗಾಯಗಳು ಆಗಷ್ಟೇ ಮಾಯ್ದಂತೆ ತೋರಿದವೆಂದು ಹೇಳಿದರು. ಸುಲಭವಾಗಿ ಗುರುತಿಸಲಿಕ್ಕಾಗಿ ಶವಪ್ರಸಾಧನದಿಂದ ಮುಖವನ್ನು ಪುನಃ ರಚಿಸಲು ಉದ್ದೇಶಿಸಲಾಯಿತಾದರೂ ಅದು ಹಾಳಾದ್ದರಿಂದ ನಿಜದಂತೆ ತೋರುವ ಸಿಲಿಕೋನ್ ಮುಖವಾಡವನ್ನು ಹಾಕಲಾಗಿದೆ.[೪೯]

ದೇಹವನ್ನು ಹರಳು, ಅಮೃತಶಿಲೆ ಮತ್ತು ಬೆಳ್ಳಿಯಲ್ಲಿ ತಯಾರಿಸಲಾದ ವಿಶೇಷ ಸಂಪುಟದಲ್ಲಿಟ್ಟು ಮಠದಲ್ಲಿನ ನೆಲಮಾಳಿಗೆಯಲ್ಲಿ ಪ್ರದರ್ಶನಕ್ಕಿಡುವ ಮೊದಲು ಏಪ್ರಿಲ್ ೨೪ರಂದು ಸನ್ ಜಿವಾನ್ನಿ ರೊತೊಂದೊ ಊರಿನ ವರದಾತೆ ಮರಿಯಳ ಪುಣ್ಯಕ್ಷೇತ್ರದಲ್ಲಿ ಸಂತರ ರಚನಾ ಮಂಡಲಿಯ ಮುಖ್ಯಸ್ಥರಾದ ಕಾರ್ಡಿನಲ್ ಜೊಸೆ ಸರೈವಾ ಮಾರ್ತಿನ್ ಅವರು ೧೫೦೦೦ ಭಕ್ತರ ಸಮ್ಮುಖದಲ್ಲಿ ಪೂಜಾರ್ಪಣೆ ಮಾಡಿದರು.[೫೦] ಆ ಮಂಜೂಷದಲ್ಲಿ ಪಾದ್ರೆ ಪಿಯೊ ಅವರು ಕಂದು ಬಣ್ಣದ ಕಪುಚಿನ್ ಉಡುಗೆ ತೊಟ್ಟು ರೇಷ್ಮೆಯ ಬಿಳಿ ಕೊರಳಪಟ್ಟಿ ಧರಿಸಿದ್ದಾರೆ. ಆ ಕೊರಳಪಟ್ಟಿಗೆ ಚಿನ್ನದ ದಾರದ ಕಸೂತಿ ಮಾಡಿ ಹರಳುಗಳನ್ನು ಹೆಣೆಯಲಾಗಿದೆ. ಅವರ ಕೈಗಳು ಮರದ ದೊಡ್ಡ ಶಿಲುಬೆಯನ್ನು ಹಿಡಿದಿವೆ. ಅವರ ದೇಹವನ್ನು ದರ್ಶಿಸಲು ಇತಾಲಿಯಾ ಒಂದರಿಂದಲೇ ಎಂಟುಲಕ್ಷ ಮಂದಿ ಕಾದಿರಿಸಿದ್ದು ಡಿಸೆಂಬರ್ ೨೦೦೮ರ ವೇಳೆಗೆ ೭೨೦೦ ಮಂದಿಗಷ್ಟೇ ದರ್ಶನ ಪ್ರಾಪ್ತಿಯಾಗಿದೆ.[೫೧][೫೨][೫೩]

ಇಂದು ಸನ್ ಜಿವಾನ್ನಿ ರೊತೊಂದೊ ಬಳಿಯ ಸಂತ ಪಿಯೊ ಚರ್ಚಿನಲ್ಲಿ ಅವರ ಅವಶೇಷವನ್ನು ಇಡಲಾಗಿದೆ. ೨೦೧೦ರ ಏಪ್ರಿಲ್ ನಲ್ಲಿ ಅವನ್ನು ಬಂಗಾರದ ವಿಶೇಷ ನೆಲದಾಳದ ಸಂಪುಟಕ್ಕೆ ಸ್ಥಳಾಂತರಿಸಲಾಗಿದೆ.[೫೪]

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ Gerhold, Ryan (2007-02-20). "The Second St. Francis". The Angelus: 12–18.
  2. ೨.೦ ೨.೧ ೨.೨ "Padre Pio the Man Part 1". Retrieved 2008-01-19.
  3. Peluso, Paul (2002-06-17). "Back to Pietrelcina". Padre Pio Foundation. Archived from the original on 2008-05-09. Retrieved 2008-01-20. {{cite journal}}: Check date values in: |year= / |date= mismatch (help)
  4. ೪.೦ ೪.೧ ೪.೨ Nolan, Geraldine. "Padre Pio A living Crucifix". Our Lady of Grace Capuchin Friary Editions. Archived from the original on 2008-02-22. Retrieved 2008-01-19. {{cite journal}}: Cite journal requires |journal= (help)
  5. ೫.೦ ೫.೧ ೫.೨ ೫.೩ ೫.೪ Pelletier, Joseph A (2007-02-20). "Padre Pio, MARY, and THE ROSARY". Garabandal. Archived from the original on 2008-01-11. Retrieved 2008-01-19.{{cite journal}}: CS1 maint: date and year (link)
  6. "A Short Biography of ಪಾದ್ರೆ ಪಿಯೊ". Archived from the original on 2007-10-12. Retrieved 2008-01-19.
  7. ೭.೦ ೭.೧ ೭.೨ ೭.೩ Ruffin, Bernard C. (1991). Padre Pio: The True Story. Our Sunday Visitor. p. 444. ISBN 9780879736736.
  8. ಉಲ್ಲೇಖ ದೋಷ: Invalid <ref> tag; no text was provided for refs named ewtn೧
  9. The Rosary: A Path Into Prayer by Liz Kelly 2004 ISBN 082942024X pages 79 ಮತ್ತು 86
  10. ೧೦.೦೦ ೧೦.೦೧ ೧೦.೦೨ ೧೦.೦೩ ೧೦.೦೪ ೧೦.೦೫ ೧೦.೦೬ ೧೦.೦೭ ೧೦.೦೮ ೧೦.೦೯ ೧೦.೧೦ ೧೦.೧೧ ೧೦.೧೨ ೧೦.೧೩ ೧೦.೧೪ ೧೦.೧೫ ೧೦.೧೬ ೧೦.೧೭ ೧೦.೧೮ "Padre Pio the Man Part 2". Archived from the original on 2008-01-04. Retrieved 2008-01-19.
  11. R. Allegri, I miracoli di Padre Pio p.21.
  12. R.Allegri, I miracoli di Padre Pio, p.141
  13. ಉಲ್ಲೇಖ ದೋಷ: Invalid <ref> tag; no text was provided for refs named dev
  14. ೧೪.೦ ೧೪.೧ "Padre Pio da Pietrelcina Epistolario I° (1910–1922)". Retrieved 2008-01-19.
  15. ೧೫.೦ ೧೫.೧ ೧೫.೨ ೧೫.೩ Mc Gregor, O.C.S.O, Augustine (1974 St. Padre Pio). The Spirituality of Padre Pio. San Geovanni Rotondo, FG, Italy: Our Lady of Grace Monastery. Archived from the original on 2020-03-15. Retrieved 2008-01-19. {{cite book}}: Check date values in: |year= (help); Unknown parameter |coauthors= ignored (|author= suggested) (help)CS1 maint: year (link)
  16. ೧೬.೦ ೧೬.೧ ೧೬.೨ "First class relic of St. Padre Pio of Pietrelcina at St. John Cantius Church". Archived from the original on 2008-05-13. Retrieved 2008-01-19.
  17. Vallely, Paul (2002-06-17). "Vatican makes a saint of the man it silenced". New Zealand herald. Retrieved 2008-01-20.
  18. ೧೮.೦ ೧೮.೧ ೧೮.೨ ೧೮.೩ ೧೮.೪ Allen, John L. (December 28, 2001). "For all who feel put upon by the Vatican: A new patron saint of Holy Rehabilitation". National Catholic Reporter. Retrieved 2008-01-19.
  19. ೧೯.೦ ೧೯.೧ ೧೯.೨ ೧೯.೩ ೧೯.೪ ೧೯.೫ "Religion: The Stigmatist". Time. Dec. 19, 1949. Archived from the original on 11 ಫೆಬ್ರವರಿ 2011. Retrieved 7 April 2011. {{cite news}}: Check date values in: |date= (help)
  20. ೨೦.೦ ೨೦.೧ ೨೦.೨ ೨೦.೩ ೨೦.೪ ೨೦.೫ ೨೦.೬ "Roman Catholics: A Padre's Patience". Time. Apr. 24, 1964. Archived from the original on 9 ಫೆಬ್ರವರಿ 2011. Retrieved 7 April 2011. {{cite news}}: Check date values in: |date= (help)
  21. Marie osb, Dom Antoine (2000-04-24). "Letter on Blessed Pader Pio: Stigmata – Sacraments of Penance and Eucharist – Suffering". Retrieved 2006-09-27.
  22. Fisher, Ian (25 April 2008). "San Giovanni Rotondo JOURNAL; Italian saint Stirs Up a Mix Of Faith and Commerce". The New York Times. p. 9. Retrieved 7 April 2011. {{cite news}}: Unknown parameter |coauthors= ignored (|author= suggested) (help)
  23. ೨೩.೦ ೨೩.೧ ೨೩.೨ ೨೩.೩ Schug, Rev. John (1987). A Padre Pio Profile. Huntington. ISBN 9780879738563.
  24. "Italy makes St. Padre Pio patron of civil defense volunteers". The Georgia Bulletin. 2004-03-30. Archived from the original on 2004-09-11. Retrieved 2010-08-20.
  25. "saint Pio of Pietrelcina". BBC Religions. 2009-07-31. Retrieved 2010-08-20.
  26. Carroll-Cruz, Joan (1997). Mysteries Marvels and Miracles In the Lives of the saints. Illinois: TAN Books. p. 581. ISBN 978-0895555410. {{cite book}}: Unknown parameter |month= ignored (help)
  27. Kwitny, Jonathan (1997). Man of the Century: The Life and Times of ಎರಡನೇ ಪೋಪ್ ಜಾನ್ ಪಾವ್ಲ್. New York: henry Holt and Company. p. 768. ISBN 978-0805026887. {{cite book}}: Unknown parameter |month= ignored (help)
  28. ೨೮.೦ ೨೮.೧ ೨೮.೨ Zahn, Paula (2002-06-17). "Padre Pio Granted sainthood". CNN. Retrieved 2008-01-19.
  29. Dziwisz, Stanisław (2008). A Life with Karol: My Forty-Year Friendship with the Man Who Became Pope. Doubleday. ISBN 978-0385523745.
  30. Rega, Frank M. (2005). Padre Pio and America. TAN Books. p. 308. ISBN 978-0895558206.
  31. ೩೧.೦ ೩೧.೧ ೩೧.೨ ೩೧.೩ ೩೧.೪ ೩೧.೫ ೩೧.೬ Kalvelage, Bro. Francis Mary (1999). Padre Pio: The Wonder Worker. Ignatius Press. p. 210. ISBN 978-0898707700.
  32. ೩೨.೦ ೩೨.೧ ೩೨.೨ Brooks, Stevern, Where are the Mantles, p. 49-51, Xulon Books
  33. ೩೩.೦ ೩೩.೧ ೩೩.೨ Brown, Michael The Incredible Story Of Maria Esperanza Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ. Spirit Daily
  34. ೩೪.೦ ೩೪.೧ ೩೪.೨ Davidson, Linda Kay and David Martin Gitlitz, Pilgrimage: from the Ganges to Graceland : an encyclopedia, Volume 1, p. 59, ABC-CLIO 2002
  35. The Face of God, Paul Badde, page 231.
  36. Michael Freze (1989). They Bore the Wounds of Christ: The Mystery of the Sacred Stigmata. OSV Publishing. pp. 283–285. ISBN 0879734221.
  37. Padre Pio
  38. Padre Pio
  39. Ruffin, Bernard. Padre Pio: The True Story; 1991 OSV Press ISBN 0879736739 pages 160–163
  40. "Padre Pio's Cell". Padre Pio Foundation. 2006-05-12. Archived from the original on 2006-05-09. Retrieved 2006-05-12.
  41. ೪೧.೦ ೪೧.೧ Moore, Malcolm (2007-10-24). "ಇತಾಲಿಯಾ's Padre Pio 'faked his stigmata with acid'". The Daily Telegraph. ರೋಮ್. Archived from the original on 2008-04-16. Retrieved 2008-01-19.
  42. Rega (2005), p. 55
  43. Hooper, John (2004-07-02). "Guardian Unlimited Arts". Monumental church dedicated to controversial saint Padre Pio. London. Retrieved 2006-05-12.
  44. "Italian statue weeps blood". BBC News. 2002-03-06. Retrieved 2006-05-12.
  45. ""Exhumed body of Italian saint draws thousands". Reuters. 24 April 2006". Archived from the original on 25 ನವೆಂಬರ್ 2011. Retrieved 31 ಆಗಸ್ಟ್ 2011.
  46. Squires, Nick (2009-08-05). "ಇತಾಲಿಯಾ to build solar-energy-producing statue of saint". The Daily Telegraph. London. Retrieved 2010-05-22.
  47. "ಇತಾಲಿಯಾ exhumes revered monk's body". BBC Online. Retrieved 16 March 2008.
  48. "St. Padre Pio's Body Exhumed". Zenit. Archived from the original on 2008-04-28. Retrieved 2008-03-06.
  49. Moore, Malcolm. "Padre Pio pilgrims flock to see saint's body" Archived 2008-04-29 ವೇಬ್ಯಾಕ್ ಮೆಷಿನ್ ನಲ್ಲಿ. Telegraph. 25 April 2008
  50. "www.catholicnewsagency, Faithful to be able to venerate exhumed remains of Padre Pio". Archived from the original on 2009-02-13. Retrieved 2011-08-31.
  51. iht.com, Faithful await display of Catholic mystic's body
  52. www.stripes.com, Thousands in Italy flock to see exhumed saint Padre Pio
  53. "heraldextra.com, Mystic monk is exhumed second time". Archived from the original on 2008-04-26. Retrieved 2011-08-31.
  54. "Article (in Italian) with photos of Padre Pio golden Cripta". Archived from the original on 2011-10-02. Retrieved 2011-08-31.


ಹೊರಗಿನ ಕೊಂಡಿಗಳು

[ಬದಲಾಯಿಸಿ]

ಅಧಿಕೃತ ಜಾಲತಾಣಗಳು

[ಬದಲಾಯಿಸಿ]

ಅನಧಿಕೃತ ಆತ್ಮಕತೆಗಳು

[ಬದಲಾಯಿಸಿ]

ಪಾದ್ರೆ ಪಿಯೊ ಸಂಸ್ಥೆಗಳು

[ಬದಲಾಯಿಸಿ]

ಸಂಮಿಶ್ರ ಕೊಂಡಿಗಳು

[ಬದಲಾಯಿಸಿ]