ಪಗಡೆ

ವಿಕಿಪೀಡಿಯ ಇಂದ
Jump to navigation Jump to search
ಪಗಡೆಯ ಆಟ

ಪಗಡೆ ಒಂದು ಪ್ರಾಚೀನ ಆಟ. ಪಗಡೆಯನ್ನು ಪಗಡೆಯ ಹಾಸಿನ ಮೇಲೆ, ದಾಳ ಅಥವಾ ಕವಡೆಯ ಜೊತೆಗೆ ಆಡುತ್ತಾರೆ. ಪಗಡೆಯ ಹಾಸು ಬಟ್ಟೆಯ ಒಂದು "+" ರೂಪದಲ್ಲಿರುತ್ತದೆ. ಪಗಡೆಯಲ್ಲಿ ನಾಲ್ಕು ವಿಧದ ಕಾಯಿಗಳಿರುತ್ತವೆ, ಅವುಗಳು :-

  1. ಆನೆ (ಕೆಂಪು)
  2. ಕುದುರೆ (ಕಪ್ಪು)
  3. ಆಕಳು (ಹಸಿರು)
  4. ಕತ್ತೆ (ಹಳದಿ)

ಆಟ ಆಡುವ ವಿವಿಧ ರೀತಿಗಳು : ೧. ಐದರ ಆಟ ೨. ಎಂಟರ ಆಟ ೩. ಹತ್ತರ ಆಟ ೪. ಹನ್ನೆರಡರ ಆಟ ಪಗಡೆಯಾಟವನ್ನು ಭಾರತದ ಪ್ರತೀಕ ಎಂದು ಕರೆಯುತ್ತಾರೆ.ದೇವಾನು ದೇವತೆಗಳು ಮನರಂಜನೆಗಾಗಿ ಸ್ಪರ್ಧಾ ಮನೋಭಾವ ಪ್ರದರ್ಶಿಸಲು ಪಗಡೆ ಆಟವಾಡುತ್ತಿ­ದ್ದರೆಂಬ ಸಂಗತಿಯನ್ನು ನಮ್ಮ ಪುರಾಣಗಳು ಸಾರುತ್ತವೆ. ಮಹಾಭಾರತದಲ್ಲಿ ಕೌರವರು ಪಾಂಡವರನ್ನು ಪಗಡೆಯಲ್ಲಿ ಸೋಲಿಸಿ ಅವರ ಸರ್ವಸ್ವವನ್ನು ಕಿತ್ತು ಕೊಂಡರು. ಆದ್ದರಿಂದ ಪಗಡೆಯು ಮಹಾಭಾರತಕ್ಕಿಂತ ಪ್ರಾಚೀನವಾದದ್ದು ಎಂದು ಹೇಳಬಹುದು. ಇತ್ತೀಚೆಗೆ ಜನರು ಪಗಡೆಯಲ್ಲಿ ಆಸಕ್ತಿಯನ್ನು ಕಳೆದು ಕೊಂಡಿದ್ದಾರೆ, ಆದ್ದರಿಂದ ಈ ಪ್ರಾಚೀನ ಆಟವು ಜನರ ಜೀವನದಿಂದ ಮಾಯವಾಗುತ್ತಿದೆ.

ಆಟ ಆಡುವ ರೀತಿ[ಬದಲಾಯಿಸಿ]

ಮರ, ಮೂಳೆಯಿಂದ ಮಾಡಿದ ದಾಳಗಳನ್ನು ಆಟವಾಡಲು ಉಪಯೋಗಿಸುತ್ತಾರೆ. ಇದರಲ್ಲಿ ಎರಡು ರೀತಿಯ ದಾಳಗಳನ್ನು ಉಪಯೋಗಿಸುತ್ತಾರೆ. ಚೌಕಾಕೃತಿಯ ಆರು ಮುಖದ ದಾಳದಲ್ಲಿ ೪ ಮುಖಗಳಲ್ಲಿ ೧ ರಿಂದ ೬ ರವರೆಗಿನ ಸಂಖ್ಯೆಗಳನ್ನು ಯಾವುದೇ ವಿರುದ್ಧ ಮುಖದ ಅಂಕೆಗಳನ್ನು ಕೂಡಿದಾಗ ೭ ಬರುವಂತೆ ಕೆತ್ತಿರುತ್ತಾರೆ. ಆಯುತಾಕಾರದ ದಾಳಗಳು ೪ ಮುಖವುಳ್ಳದಾಗಿದ್ದು ೧,೬ ಸಂಖ್ಯೆಗಳು ಒಂದು ಜೋಡಿ ವಿರುದ್ಧ ಮುಖದಲ್ಲೂ, ೩,೪ ಸಂಖ್ಯೆಗಳು ಇನ್ನೊಂದು ಜೋಡಿ ಮುಖದಲ್ಲೂ ಕೆತ್ತಿರುತ್ತಾರೆ. ಪಗಡೆ ಆಟದಲ್ಲಿ ಹೀಗಿರುವ ದಾಳಗಳನ್ನು ಉರುಳಿಸಿದಾಗ ೧,೧ ಬಿದ್ದರೆ ದುಗ ಎಂದು, ೩,೩ ಬಿದ್ದರೆ ಇತ್ತಿಗೆ ಎಂದು, ೪,೪ ಮತ್ತು ೬,೬ ಬಿದ್ದರೆ ಕ್ರಮವಾಗಿ ಎಂಟು, ಹನ್ನೆರಡು ಎಂದು ಕರೆಯುತ್ತಾರೆ.[೧]

  1. http://vikrama.in/ಪಗಡೆ-ಆಟ/
"https://kn.wikipedia.org/w/index.php?title=ಪಗಡೆ&oldid=779701" ಇಂದ ಪಡೆಯಲ್ಪಟ್ಟಿದೆ