ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ದಾಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಾಳಗಳು[] ಹಲವು ಗುರುತಿರುವ ಪಾರ್ಶ್ವ ಮುಖಗಳಲ್ಲಿ ಯಾವುದರ ಮೇಲಾದರೂ ಇಳಿಯುವಂತೆ ವಿನ್ಯಾಸಗೊಳಿಸಲಾದ, ಹಲವುವೇಳೆ ಸರಿಸುಮಾರು ಲಂಬ ಅಕ್ಷದ ಪಟ್ಟಕದಂತಿರುವ ಡೈಸ್. ತುದಿಯ ಮೇಲೆ ಇಳಿಯುವಿಕೆ ಬಹಳ ಅಪರೂಪ ಏಕೆಂದರೆ ಇತರ ಮುಖಗಳಿಗೆ ಹೋಲಿಸಿದರೆ ಅವುಗಳ ಗಾತ್ರ ಸಣ್ಣದಾಗಿದೆ, ದಾಳದ ಎತ್ತರದಲ್ಲಿ ಅಂತರ್ಗತವಾಗಿರುವ ಅಸ್ಥಿರತೆಯಿರುವುದರಿಂದ, ಮತ್ತು ದಾಳವನ್ನು ಎಸೆಯುವುದರ ಬದಲು ಅಕ್ಷದ ಮೇಲೆ ಉರುಳಿಸುವುದರಿಂದ. ಅನೇಕ ದಾಳಗಳು ತುದಿಯ ಮೇಲೆ ಇಳಿಯುವುದನ್ನು ತಪ್ಪಿಸಲು, ತುದಿಗಳಿಗೆ ದುಂಡನೆಯ ಅಥವಾ ಶಿಖರಾಕಾರ ಕೊಟ್ಟು, ಹೆಚ್ಚಿನ ಪರಿಹಾರ ಒದಗಿಸುತ್ತವೆ, ಮತ್ತು ಇದರಿಂದ ಅಂತಹ ಆಗುಹ ಭೌತಿಕವಾಗಿ ಅಸಾಧ್ಯವಾಗುತ್ತದೆ (ಕನಿಷ್ಠಪಕ್ಷ ಚಪ್ಪಟೆ ಭದ್ರ ಮೇಲ್ಮೈ ಮೇಲೆ).

ದಾಳಗಳ ವಿನ್ಯಾಸ ಅನುಕೂಲಗಳು ಬೆಸ ಸಂಖ್ಯೆಯ ಮುಖಗಳಿರುವ ನ್ಯಾಯವಾದ ದಾಳವನ್ನು ತಯಾರಿಸುವುದು ತುಲನಾತ್ಮಕವಾಗಿ ಸುಲಭವಾಗಿರುವುದು, ಮತ್ತು ಉರುಳಿಸಲು ಸುಲಭವಾಗಿರುವುದನ್ನು ಒಳಗೊಂಡಿವೆ.

ಸಿಂಧೂ ಕಣಿವೆ ನಾಗರಿಕತೆ ಪ್ರದೇಶಗಳಲ್ಲಿ ಕ್ರಿ.ಪೂ. ಮೂರನೇ ಸಹಸ್ರಮಾನದಷ್ಟು ಮುಂಚಿನ ದಾಳಗಳು ಸಿಕ್ಕಿವೆ; ಇವು ಚುಕ್ಕೆ ಹಾಗೂ ಉಂಗುರ ಆಕೃತಿಗಳು, ರೇಖೀಯ ಸಾಧನಗಳು, ಮತ್ತು ಸಿಂಧೂ ಕಣಿವೆ ಚಿಹ್ನೆ ಸೇರಿದಂತೆ ವಿವಿಧ ಗುರುತು ಹೊಂದಿವೆ. ಚುಕ್ಕೆ ಮತ್ತು ಉಂಗುರ ಆಕೃತಿಗಳನ್ನು ಈ ದಿನಕ್ಕೂ ಭಾರತದಲ್ಲಿ ದಾಳದ ಮೇಲೆ ಬಳಸಲಾಗುತ್ತಿದೆ, ಮತ್ತು ಮಧ್ಯ ಐರೋಪ್ಯ ದಾಳಗಳಲ್ಲಿ ಪ್ರಬಲವಾಗಿವೆ. ಭಾರತದಲ್ಲಿ, ದಾಳಗಳನ್ನು ಪಗಡೆ ಆಟದಲ್ಲಿ ಬಳಸಲಾಗುತ್ತದೆ; ಮುಖಗಳಲ್ಲಿ ೧-೩-೪-೬ ಅಥವಾ ೧-೨-೫-೬ ಮೌಲ್ಯದ ಗುರುತು ಇರಬಹುದು, ಹೆಚ್ಚು ಹಳೆಯ ಭಾರತೀಯ ದಾಳಗಳಲ್ಲಿ ೧-೨-೩-೪ ಗುರುತುಗಳನ್ನು ಕಾಣಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Culin 1898, pp 820, 825; Murray 1951, p 134; Bell 1960, p 10; Parlett 1999, p 26; Heijdt 2002, p 20.


"https://kn.wikipedia.org/w/index.php?title=ದಾಳ&oldid=745824" ಇಂದ ಪಡೆಯಲ್ಪಟ್ಟಿದೆ