ಪಂಟ (ಚಲನಚಿತ್ರ)
ಪಂಟ ಚಿತ್ರವು ನಾ ಪಂಟ ಕಣೋ ಎಂದೂ ಪ್ರಚಾರಗೊಂಡಿದೆ, ಇದು 2017 ರ ಕನ್ನಡ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಎಸ್. ನಾರಾಯಣ್ ಅವರು ನಿರ್ದೇಶಿಸಿದ್ದಾರೆ ಮತ್ತು ಸಂಗೀತ ನೀಡಿದ್ದಾರೆ.[೧] ಇದರಲ್ಲಿ ಅನುಪ್ ರೇವಣ್ಣ ಮತ್ತು ಹೊಸಬರಾದ ರಿತೀಕ್ಷಾ ಮುಖ್ಯಭೂಮಿಕೆಯಲ್ಲಿದ್ದಾರೆ.[೨] ಅಮಿದ್ ಕಥೆ ಬರೆದಿದ್ದು, ಮ್ಯಾಥ್ಯೂ ರಾಜನ್ ಅವರ ಛಾಯಾಗ್ರಹಣವಿದೆ. ಈ ಚಿತ್ರವು ತಮಿಳಿನ ರಾಜತಂಧಿರಂ (2015) ಚಿತ್ರದ ರಿಮೇಕ್ ಆಗಿದೆ.[೩]
ಈ ಚಿತ್ರದ ತಯಾರಿಕೆಯು ಅಧಿಕೃತವಾಗಿ 9 ಜೂನ್ 2016 ರಂದು ಪ್ರಾರಂಭವಾಯಿತು, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಪ್ರಾರಂಭಿಸಿದರು.[೪] ಚಲನಚಿತ್ರವು 23 ಜೂನ್ 2017 ರಂದು ಬಿಡುಗಡೆಯಾಯಿತು.[೫]
ಪಾತ್ರವರ್ಗ
[ಬದಲಾಯಿಸಿ]- ಅರ್ಜುನ್ ಪಾತ್ರದಲ್ಲಿ ಅನುಪ್ ರೇವಣ್ಣ
- ರಿತೀಕ್ಷಾ
- ರವಿ ಕಾಳೆ
- ಕರಿ ಸುಬ್ಬು
- ಇರ್ಫಾನ್
- ಶಾಸಕ ಶ್ರೀನಿವಾಸ ಮೂರ್ತಿ
- ಗಡ್ಡಪ್ಪ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
- ಸೆಂಚುರಿ ಗೌಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
ಹಿನ್ನೆಲೆಸಂಗೀತ
[ಬದಲಾಯಿಸಿ]ಚಿತ್ರದ ಹಿನ್ನೆಲೆಸಂಗೀತವನ್ನು ಎಸ್. ನಾರಾಯಣ್ ಸಂಯೋಜಿಸಿದ್ದಾರೆ.[೬] ಒಂದು ಹಾಡಿಗೆ ನಟ ಸುದೀಪ್ ತಮ್ಮ ಧ್ವನಿಯನ್ನು ರೆಕಾರ್ಡ್ ಮಾಡಿದ್ದಾರೆ. ಆರಂಭದಲ್ಲಿ ಕೇವಲ ಎರಡು ಹಾಡುಗಳನ್ನು ಹೊಂದಲು ಯೋಜಿಸಲಾಗಿತ್ತು, ಕೊನೆಯ ಕ್ಷಣದಲ್ಲಿ ಐಟಂ ಹಾಡನ್ನು ಟ್ರ್ಯಾಕ್ ಲಿಸ್ಟ್‌ನಲ್ಲಿ ಸೇರಿಸಲಾಯಿತು ಮತ್ತು ಚಿತ್ರ ಬಿಡುಗಡೆಯನ್ನು ವಿಳಂಬಗೊಳಿಸಲಾಯಿತು.[೭]
| ಹಾಡುಗಳ ಪಟ್ಟಿ | ||||
|---|---|---|---|---|
| ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
| 1. | "ಇವಳೇ ನನ್ನ ಹುಡುಗಿ" | ಎಸ್.ನಾರಾಯಣ್ | ಸುದೀಪ್ | |
| 2. | "ತುಂತುರು" | ಎಸ್.ನಾರಾಯಣ್ | ಶಾನ್, ಶ್ರೇಯಾ ಘೋಷಾಲ್ | |
| 3. | "ಕುಲುಕು ಕುಲುಕು" | ಎಸ್.ನಾರಾಯಣ್ | ಮಾಲತಿ ಲಕ್ಷ್ಮಣ್ | |
ಉಲ್ಲೇಖಗಳು
[ಬದಲಾಯಿಸಿ]- ↑ "S Narayan's Next Movie To Be Launched Soon". Filmibeat. Retrieved 23 June 2017.
- ↑ "S Narayan To Direct Panta For Anup Revanna". Chitraloka. 4 June 2016. Archived from the original on 26 ಡಿಸೆಂಬರ್ 2021. Retrieved 26 ಡಿಸೆಂಬರ್ 2021.
- ↑ "Naa Panta Kano movie review".
- ↑ "Chief Minister Flags Off S Narayan's Panta". Chitraloka. Archived from the original on 2021-12-26. Retrieved 2021-12-26.
- ↑ "Panta on 23 June, it is Shaking time". Indiaglitz. Archived from the original on 2021-12-26. Retrieved 2021-12-26.
- ↑ "Naa Pantaa Kano (2017) Kannada Songs". Archived from the original on 2017-07-12. Retrieved 2021-12-26.
- ↑ "Panta delayed, Kuluku song addition for film". Indiaglitz. Archived from the original on 2021-12-26. Retrieved 2021-12-26.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಪಂಟ at IMDb
- ಮುನ್ನೋಟ Archived 2021-12-26 ವೇಬ್ಯಾಕ್ ಮೆಷಿನ್ ನಲ್ಲಿ.