ನೀರ್ ದೋಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾವಲಿಯ ಮೇಲೆ ಸಿದ್ಧವಾಗುತ್ತಿರುವ ನೀರುದೋಸೆ

ನೀರ್ ದೋಸೆ ಅಕ್ಕಿ ಹಿಟ್ಟಿನಿಂದ ತಯಾರಿಸಲಾದ ಒಂದು ಪ್ರಕಾರದ ದೋಸೆ. ಭಾರತೀಯ ತಿನಿಸಾದ ಇದು ಒಂದು ಹಗುರ ಪ್ರಕಾರದ ದೋಸೆ. ನೀರ್ ದೋಸೆ ನೈಋತ್ಯ ಕರಾವಳಿ ಭಾರತದಲ್ಲಿನ ತುಳುನಾಡು ಪ್ರದೇಶದ ಒಂದು ಭಕ್ಷ್ಯ, ಇದು ಉಡುಪಿ ಪಾಕಪದ್ಧತಿಯ ಭಾಗವಾಗಿದೆ. ಮಲೆನಾಡು ಪ್ರದೇಶದಲ್ಲಿ ಇದನ್ನು ಬರಿ ಅಕ್ಕಿ ದೋಸೆ ಎಂದು ಕರೆಯಲಾಗುತ್ತದೆ.

ಅಕ್ಕಿಯನ್ನು ೪ ರಿಂದ ೫ ಗಂಟೆ ನೀರಿನಲ್ಲಿ ನೆನೆಸಿಡಲಾಗುತ್ತದೆ. ಅದನ್ನು ನಂತರ ನೀರಿನೊಂದಿಗೆ ರುಬ್ಬಿ ನೀರಿನಂಥ ಹಿಟ್ಟು ತಯಾರಿಸಲಾಗುತ್ತದೆ. ಬಹುತೇಕ ಪ್ರಕಾರದ ದೋಸೆಗಳಿಗೆ ಹಿಟ್ಟು ಕೆಲವು ಗಂಟೆ ಅಥವಾ ಒಂದು ದಿನ ಹುದುಗುವುದು ಅಗತ್ಯವಿರುತ್ತದೆ. ಆದರೆ, ನೀರ್ ದೋಸೆ ತಯಾರಿಸುವಾಗ ಹುದುಗುವಿಕೆಯನ್ನು ಬಿಡಲಾಗುತ್ತದೆ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಲಾಗುತ್ತದೆ. ಹಿಟ್ಟು ಸುರಿಯುವ ಸಾಂದ್ರತೆ ಹೊಂದಲು ಹೆಚ್ಚು ನೀರನ್ನು ಸೇರಿಸಬಹುದು. ಎಣ್ಣೆಯನ್ನು ಲೇಪಿಸಿದ ಒಂದು ಬಿಸಿ ತವಾದ ಮೇಲೆ ಹಿಟ್ಟಿನ ತೆಳು ಪದರವನ್ನು ಸುರಿದು ಹಿಟ್ಟನ್ನು ಸೌಟಿನಿಂದ ಬುಡದಿಂದ ಹರಡಿ ಬೇಯಿಸಲಾಗುತ್ತದೆ. ಅದನ್ನು ತಿರುವಿ ಹಾಕಿ ಎರಡೂ ಬದಿ ಬೇಯಿಸಿ ತವಾದಿಂದ ತೆಗೆಯಲಾಗುತ್ತದೆ. ಅದನ್ನು ಬಿಸಿಯಾಗಿ ತಿನ್ನಲಾಗುತ್ತದೆ. ಅದರ ಆಕಾರವನ್ನು ಆಧರಿಸಿ, ಅದನ್ನು ಮಡಚಬಹುದು ಅಥವಾ ಹಾಗೆಯೇ ಬಡಿಸಬಹುದು.

ನೀರ್ ದೋಸೆಯನ್ನು ಚಟ್ನಿ, ಸಾಗು, ಸಾಂಬಾರ್, ಕಾಯಿ ತುರಿ ಬೆಲ್ಲದ ಮಿಶ್ರಣ, ಇತ್ಯಾದಿಗಳೊಂದಿಗೆ ತಿನ್ನಬಹುದು.