ನಿತ್ಯಾತ್ಮಶುಕ ಕವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿತ್ಯಾತ್ಮ ಶುಕ ಕವಿ ಕನ್ನಡದಲ್ಲಿ ಭಾಗವತ ಪುರಾಣವನ್ನು ಷಟ್ಪದಿ ಪದ್ಯಗಳಲ್ಲಿ "ಕರ್ಣಾಟಕ ಭಾಗವತ" ಎಂಬ ಹೆಸರಿನಲ್ಲಿ ರಚಿಸಿರುವುದು ಕಂಡುಬರುತ್ತದೆ. ರಾಮಾಯಣ, ಮಹಾಭಾರತಕಾವ್ಯ ಗಳಂತೆ ಭಾಗವತ ಸಂಸ್ಕೃತ ಭಾಷೆಯಲ್ಲಿದೆ. ವ್ಯಾಸಕವಿಯ ಪುತ್ರರಾದ ಶುಕಮಹರ್ಷಿಗಳು ಪರೀಕ್ಷಿತರಾಜನ ಅವಸಾನ ಕಾಲದಲ್ಲಿ ಈ ಮೇರುಕೃತಿಯನ್ನು ಆತನಿಗೆ ಬೋಧಿಸಿದರು. ಕರ್ಣಾಟಕ ಭಾಗವತ, ಪ್ರಮುಖವಾಗಿ, ಸಂಪೂರ್ಣವಾದ, ಕನ್ನಡ ಭಾಗವತ ; ಬಹುಶಃ, ಕುಮಾರವ್ಯಾಸನ ಸಮಕಾಲೀನರಾದ ಕವಿಗಳು ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಭಾಗವತ ಗ್ರಂಥ ಕನ್ನಡಿಗರಿಗೆ ಸಿಕ್ಕ ವರದಾನವಾಗಿದೆ.