ವಿಷಯಕ್ಕೆ ಹೋಗು

ಶುಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶುಕ ವ್ಯಾಸ ಋಷಿಯ ಮಗನಾಗಿದ್ದನು ಮತ್ತು ಭಾಗವತ ಪುರಾಣದ ಮುಖ್ಯ ನಿರೂಪಕನಾಗಿದ್ದನು. ಭಾಗವತ ಪುರಾಣದ ಬಹುತೇಕ ಭಾಗವು ಶುಕನು ಸಾಯುತ್ತಿರುವ ರಾಜ ಪರೀಕ್ಷಿತನಿಗೆ ಕಥೆಯನ್ನು ಪಠಿಸುವುದನ್ನು ಒಳಗೊಂಡಿದೆ. ಶುಕನನ್ನು ಮೋಕ್ಷದ ಅನ್ವೇಷಣೆಗಾಗಿ ಜಗತ್ತನ್ನು ತ್ಯಜಿಸಿದ ಒಬ್ಬ ಸಂನ್ಯಾಸಿಯಾಗಿ ಚಿತ್ರಿಸಲಾಗಿದೆ; ಬಹುತೇಕ ನಿರೂಪಣೆಗಳು ಅವನು ಇದನ್ನು ಸಾಧಿಸಿದನು ಎಂದು ಪ್ರತಿಪಾದಿಸುತ್ತವೆ.

ಶುಕಮುನಿಯು ಕೃಷ್ಣ ದ್ವೈಪಾಯನ ಅಂದರೆ ವೇದವ್ಯಾಸ ಮುನಿಗೆ ಶುಕೀ (ಹೆಣ್ಣು ಗಿಣಿ) ರೂಪದಲ್ಲಿದ್ದ ಘೃತಾಚಿ ಎಂಬ ಅಪ್ಸರೆಗೆ ಜನಿಸಿದರು. ಮಹಾಭಾರತದಲ್ಲಿ ಬರುವ ಒಟ್ಟಾರೆ ವಿವರಣೆ ಹೀಗಿದೆ : ಗಂಧರ್ವರಿಗೆ ಭಾರತ ಕಥೆಯನ್ನು ಹೇಳಿದ್ದು, ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳನ್ನು ಕುರಿತು ತಂದೆಯೊಂದಿಗೆ ಸಂವಾದ, ತಂದೆಯಿಂದ ಧರ್ಮರಹಸ್ಯಗಳ ತಿಳಿವಳಿಕೆ, ತಂದೆಯ ಅನುಮತಿ ಪಡೆದು ಬ್ರಹ್ಮವಿದ್ಯಾರಹಸ್ಯವನ್ನು ತಿಳಿಯಲು ಜನಕರಾಜನ ಬಳಿ ಹೋಗಿದ್ದು, ನಾರದರಿಂದ ಉಪದೇಶ ಪಡೆದು ವೈರಾಗ್ಯ ಹೊಂದಿದ್ದು... ಇತ್ಯಾದಿ.

ಶುಕಮುನಿ ಪಿತೃ ದೇವತೆಗಳ ಪುತ್ರಿಯಾದ ಪೀವರಿಯನ್ನು ಮದುವೆಯಾಗಿ ಕೃಶ್ಣ, ಗೌರಪ್ರಭ, ಭೂರಿ, ದೇವಶ್ರುತರೆಂಬ ನಾಲ್ವರು ಪುತ್ರರನ್ನೂ ಮತ್ತು ಕೀರ್ತಿ ಎಮ್ಬ ಮಗಳನ್ನೂ ಪಡೆದರು.

( ಆಕರ: ಪುರಾಣನಾಮ ಚೂಡಾಮಣಿ )

"https://kn.wikipedia.org/w/index.php?title=ಶುಕ&oldid=524789" ಇಂದ ಪಡೆಯಲ್ಪಟ್ಟಿದೆ