ವಿಷಯಕ್ಕೆ ಹೋಗು

ನಾಗಸಂಪಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಗಸಂಪಿಗೆ
ನಾಗಸಂಪಿಗೆ ಮರ.ಶ್ರೀಲಂಕಾ
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಪ್ರಜಾತಿ:
M. ferrea
Binomial name
ಮೆಸುವ ಫೆರಿಯ
Synonyms

Mesua coromandelina Wight
Mesua nagassarium (Burm.f.) Kosterm.
Mesua pedunculata Wight
Mesua roxburghii Wight
Mesua sclerophylla Thw.
Mesua speciosa Choisy

ನಾಗಸಂಪಿಗೆ(ನಾಗಕೇಸರಿ)ಯು 'ಸಿಲೋನ್ ಐರನ್ ವುಡ್'ಎಂದು ಪ್ರಸಿದ್ಧವಾಗಿದೆ.ಇದು ಮದ್ಯಮ ಪ್ರಮಾಣದಲ್ಲಿ ದೊಡ್ಡಗಾತ್ರಕ್ಕೆ ಬೆಳೆಯುವ ಮರ.ಪರಿಮಳದ ಹೂವಿನಿಂದ ಕೂಡಿ ಅತ್ಯಂತ ಗಟ್ಟಿಯಾದ ದಾರುವನ್ನು ಹೊಂದಿದೆ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಮೆಸುವ ಫೆರ್ರಿಯ(Mesua ferrea) ಎಂಬ ಸಸ್ಯಶಾಸ್ತ್ರೀಯ ಹೆಸರು ಹೊಂದಿದ್ದು,ಗುಟ್ಟಿಫೆರಸಿ (Guttiferae)ಕುಟುಂಬದಲ್ಲಿದೆ.

ಇತರ ಹೆಸರುಗಳು[ಬದಲಾಯಿಸಿ]

 1. ಕನ್ನಡ: ನಾಗಕೇಸರಿ
 2. ಇಂಗ್ಲೀಷ್: ಸಿಲೋನ್ ಐರನ್ ವುಡ್,ಇಂಡಿಯನ್ ರೋಸ್ ಚೆಸ್ಟನಟ್
 3. ಸಂಸ್ಕೃತ:ನಾಗಕೇಸರ,ನಾಗಪುಷ್ಪ
 4. ಮಲೆಯಾಳಂ:ವೈನಾವು
 5. ತುಳು:ಬೈನಾವು
 6. ತಮಿಳು:ತಡಿನಂಗು
 7. ಮಲಯಾಳಂ Archived 2016-02-23 ವೇಬ್ಯಾಕ್ ಮೆಷಿನ್ ನಲ್ಲಿ.: ನಾಗಚಂಪಕಮ್
 8. ಸಂಸ್ಕೃತ: ಕೇಶರಮ್, ನಾಗಪುಷ್ಪ
 9. ಹಿಂದಿ: ನಾಗಕೇಸರ
 10. ಹುಟ್ಟು: ತೋಟಗಳು
 11. ಪುಷ್ಪ: ಫಾಲ್ಗುಣ, ಚೈತ್ರ
 12. ಅಸ್ಸಾಮಿ: ನಹೋರ್ (নাহৰ), ನೋಕ್ಟೆ (ನಂಕೆ)
 13. ಮೇಘಾಲಯ (ಗರೊ): ಕಿಮ್ಡೆ
 14. ಬಂಗಾಳಿ: ನಾಗೇಸರ್ (ನಾಗರ್)
 15. ಹಿಂದಿ: ಗಜಪುಷ್ಪಂ; ನಾಗ್ ಚಂಪಾ (नाग चमपपा), ನಾಗಗೇಸರ್ (नाग केसर)
 16. ಫಿಲಿಪಿನೋ: ಕಲಿಯುಸ್
 17. ಜಾವಾನೀಸ್: ನಾಗಸಾರಿ
 18. ಮಲೇಷಿಯನ್: ಪೆನಾಗಾ
 19. ಮರಾಠಿ: ನಾಗಚಾಫಾ, ಥೋರ್ಲಾ ಚಾಫಾ
 20. ಮ್ಯಾನ್ಮಾರ್: ಕ್ಯಾಂಟ್ ಕವ್
 21. ಮಿಜೊ: ಹೆರ್ಶ್ (ಮಿಜೋರಾಮ್ನ ರಾಜ್ಯ ಮರ)
 22. ಓಡಿಯಾ: ನಾಗೇಶ್ವರ, ನಾಗೇಶರಾ
 23. ರೊಮಾನಾ: ಕೇಶರಾ
 24. ಸಿಂಹಳ: ನಾ (ના)
 25. ಥಾಯ್: ಬನ್ನಕ್ (ปุนนาค)
 26. ಟಿಬೆಟಿಯನ್: ನಾಗಾ ಕೇಸರ್ (ནཱ་ ག་ གེ་ རར་)
 27. ಉರ್ದು: ನರ್ಮಿಕ (नर्मिश्क)
 28. ವಿಯೆಟ್ನಾಂ: Vắp (ಥಿಯೋ ವೈ ಹಸ್ಕ್ ತುಯಿ ಥ್ನ್ಹ್ - ಹುಯುಡುಕ್)

ಸಸ್ಯದ ವರ್ಣನೆ[ಬದಲಾಯಿಸಿ]

ನಾಗಸಂಪಿಗೆ ಮರವು ಕರ್ನಾಟಕದ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಅರಣ್ಯಗಳಲ್ಲಿ ಕಂಡುಬರುತ್ತವೆ. ಈ ಮರವು 30 ಮೀ (98 ಅಡಿ) ಎತ್ತರವನ್ನು ಬೆಳೆಯಬಲ್ಲದು, 200-500 ಸೆ.ಮೀ. ಮಳೆ ಪ್ರದೇಶದಲ್ಲಿ ವ್ಯಾಪನೆ. ಈ ಮರವು ಸಾಮಾನ್ಯವಾಗಿ 50ರಿಂದ 60 ಅಡಿ ಎತ್ತರ ಬೆಳೆಯುತ್ತದೆ.ಹಣ್ಣು ಒಂದರಿಂದ ಎರಡು ಬೀಜಗಳೊಂದಿಗೆ ಗೋಳಾಕಾರದ ಕ್ಯಾಪ್ಸುಲ್ಗೆ ಅಂಡಾಕಾರವಾಗಿದೆ. ಮರದ ತೊಗಟೆಯು ತೆಳುವಾಗಿದ್ದು ಕೆಂಪು ಅಥವಾ ಕಂದು ಬಣ್ಣದಲ್ಲಿರುತ್ತದೆ. ಕಾಂಡದ ಮೇಲೆ ಉದ್ದವಾದ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತವೆ.ಈ ಮರವು ಬಿಳಿಯ ದಟ್ಟವಾದ, ಶಂಕುವಿನಾ ಕೃತಿಯ ಕಿರೀಟವನ್ನು ಹೊಂದಿರುವ ನಿಧಾನವಾಗಿ ಬೆಳೆಯುವ, ನಿತ್ಯಹರಿದ್ವರ್ಣ ಮರವಾಗಿದೆ.[೧] ಬಣ್ಣದ ಹೂಗಳು ಎಲೆಗಳ ಬುಡದಲ್ಲಿ ಅಥವಾ ಕಾಂಡದ ಕೊನೆಯಲ್ಲಿ ಇರುತ್ತವೆ. ಇಂಗ್ಲಿಷ್ ಹೆಸರು ಸೂಚಿಸಿದಂತೆ, ಈ ಮರವು ತುಂಬಾ ಭಾರವಾಗಿರುತ್ತದೆ.ಭಾರತಅಸ್ಸಾಂನ ಪೂರ್ವ ರಾಜ್ಯದಲ್ಲಿ, ಬ್ರಿಟನ್ನಿನ ಸೀಮೆಎಣ್ಣೆಯನ್ನು ಪರಿಚಯಿಸುವ ಮುಂಚೆ ಇದರ ಬೀಜಗಳನ್ನು ದಿನನಿತ್ಯದ ಉದ್ದೇಶಕ್ಕಾಗಿ (ಧಾರ್ಮಿಕ ಮತ್ತು ಆರೋಗ್ಯ ಮತ್ತು ಪಾಕಶಾಲೆಯ ಉದ್ದೇಶಗಳಿಗಾಗಿ ಸಾಸಿವೆ ಎಣ್ಣೆ) ಬೆಳಗುವ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು, ಇದು ಶ್ರೀಲಂಕಾದ ರಾಷ್ಟ್ರೀಯ ಮರವಾಗಿದೆ.[೨]

ಮೂಲ[ಬದಲಾಯಿಸಿ]

ಈ ಮರ ಸಾಮಾನ್ಯವಾಗಿ ಭಾರತ, ಶ್ರೀಲಂಕಾ, ದಕ್ಷಿಣ ನೇಪಾಳ, ಬರ್ಮಾ, ಥೈಲ್ಯಾಂಡ್, ಮಲೇಷಿಯಾ ಪ್ರದೇಶಗಳಲ್ಲಿ ಕಂಡುಬರುತ್ತದೆ.[೩]

ಕೃಷಿ ವಿವರಗಳು[ಬದಲಾಯಿಸಿ]

ಈ ಸಸ್ಯವು 15 ರಿಂದ 20 ವರ್ಷ ವಯಸ್ಸಿನಲ್ಲಿ ಫಲವತ್ತಾದ ಬೀಜಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ.[೪]

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಸುಂದರ ನಿತ್ಯ ಹರಿದ್ವರ್ಣದ ಮರ.ದಟ್ಟವಾದ ಶಂಕುವಿನಾಕಾರದ ಹಂದರ.ಹೊಳೆಯುವ ಹಸಿರೆಲೆಗಳು.ತಳಭಾಗ ಮಾಸಲು ಬೂದಿಬಣ್ಣದ್ದಾಗಿರುತ್ತದೆ.ತೊಗಟೆ ತೆಳು. ಕರ್ನಾಟಕಪಶ್ಚಿಮಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವುದು.ದಾರುವು ಕರಿಗೆಂಪು ಬಣ್ಣದಿಂದ ಕೂಡಿದ್ದು,ಅತಿ ಗಡಸಾಗಿದೆ.ತುಂಬಾ ಬಲಯುತ ಹಾಗೂ ಬಾಳಿಕೆ ಬರುವ ಮರ.ಸಸ್ಯದ ವಿವಿಧ ಭಾಗಗಳು ಔಷಧೀಯ ಗುಣಗಳನ್ನು ಹೊಂದಿದೆ.

ಉಪಯೋಗಗಳು[ಬದಲಾಯಿಸಿ]

ಇದು ಕಟ್ಟಡ ನಿರ್ಮಾಣ,ರೈಲ್ವೇ ಸ್ಲೀಪರ್,ಸೇತುವೆ ನಿರ್ಮಾಣಗಳಲ್ಲಿ ಬಳಕೆಯಲ್ಲಿದೆ.ಬೀಜದಿಂದ ಸಿಗುವ ಎಣ್ಣೆ ಚರ್ಮರೋಗಗಳಿಗೆ,ಎಲೆಯಿಂದ ಶೀತ ಪ್ರಕೋಪಕ್ಕೆ ಔಷಧ ತಯಾರಾಗುತ್ತದೆ.ಬೇರಿನಿಂದ ಹಾವಿನ ಕಡಿತಕ್ಕೆ ಪ್ರತಿವಿಷ ತಯಾರಿಸುತ್ತಾರೆ.

 • ಬೀಜದ ಎಣ್ಣೆಯು ಹುಣ್ಣುಗಳಿಗೂ, ವಾತದ ನೋವಿಗೂ ಉಪಯೋಗ.
 • ಎಲೆಗಳ ಕಷಾಯವು ಕಫವನ್ನು ಕತ್ತರಿಸುತ್ತದೆ. ಕೆಮ್ಮಿಗೆ ಒಳ್ಳೆಯದು.
 • ಬೇರನ್ನು ಅರೆದು ಹಚ್ಚಿದರೆ ಸರ್ಪವಿಷವು ಇಳಿಯುತ್ತದೆ.
 • ಅತಿಯಾದ ನೆಗಡಿಯಾದಾಗ ಎಲೆಗಳನ್ನು ಅರೆದು ಹಣೆಯ ಮೇಲೆ ಪಟ್ಟು ಹಾಕಿದರೆ ನೆಗಡಿ ಕಡಿಮೆಯಾಗುತ್ತದೆ.
 • ಹುಳು ಕಚ್ಚಿದ ಜಾಗದಲ್ಲಿ ಎಲೆ ಅಥವಾ ಹೂವು ಅರೆದು ಹಚ್ಚಿದರೆ ವಿಷವು ಇಳಿಮುಖವಾಗಿ ನೋವು ನಿವಾರಣೆಯಾಗುತ್ತದೆ.
 • ಹೂಗಳನ್ನು ಒಣಗಿಸಿ ಪುಡಿ ಮಾಡಿ ನೀರಿಗೆ ಹಾಕಿ ಕುದಿಸಿ ಕಷಾಯವನ್ನು ತಯಾರಿಸಿಕೊಂಡು ಸೇವಿಸಿದರೆ ಆಮಶಂಕೆ ಭೇದಿಯು ನಿಲ್ಲುತ್ತದೆ.
 • ಒಣಗಿದ ಹೂವುಗಳನ್ನು ರಕ್ತಸ್ರಾವಕ್ಕೆ ಬಳಸಲಾಗುತ್ತದೆ.
 • ರೈಲು ಸಂಪರ್ಕಗಳಿಗೆ ಬಳಸಲಾಗುವ ಭಾರೀ ಗಟ್ಟಿಮರದ ಮೂಲ.
 • ಮಹಿಳೆಯರಿಗೆ ಹೆರಿಗೆಯ ನಂತರ ಈ ಹೂವಿನ ಕಷಾಯವನ್ನು ಕುಡಿಸಲಾಗುತ್ತದೆ.
 • ಅತಿಯಾದ ಬಾಯಾರಿಕೆ, ಅತಿಯಾದ ಬೆವರು, ಕೆಮ್ಮು, ಮತ್ತು ಅಜೀರ್ಣಕ್ಕಾಗಿ ಬಳಸಲಾಗಿತ್ತದೆ.[೫]
 • ಮೊಳೆ ರೋಗದಿಂದ ನರಳುತ್ತಿರುವವರು ಹೂಗಳನ್ನು ಒಣಗಿಸಿ ಪುಡಿ ಮಾಡಿ ಸಕ್ಕರೆ ಅಥವಾ ಬೆಣ್ಣೆಯ ಜೊತೆ ಸೇವಿಸಿದರೆ ತೊಂದರೆ ನಿವಾರಣೆಯಾಗುತ್ತದೆ.[೬]

ಜೀವಿವರ್ಗೀಕರಣದ ಸ್ಥಿತಿ[ಬದಲಾಯಿಸಿ]

ಇದು 15 ಮೀಟರ್ ಎತ್ತರದ ಮರವಾಗಿದೆ, ಮೆಸುವಾ ಫೆರಿಯಾವು ಸಂಕೀರ್ಣ ಜಾತಿಯಾಗಿದ್ದು, ಇತ್ತೀಚೆಗೆ ಹಲವಾರು ಪ್ರಭೇದಗಳು ಮತ್ತು ಪ್ರಭೇದಗಳಾಗಿ ವಿಭಜಿಸಲಾಗಿದೆ. ಅದು ಹೊಳೆಗಳು ಮತ್ತು ಶ್ರೀಲಂಕಾದ ನೈರುತ್ಯದಲ್ಲಿರುವ ಜವುಗು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.[೭]

[೮]

ಆಧಾರ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

http://www.flowersofindia.net/catalog/slides/Nag%20Champa.html Archived 2008-06-16 ವೇಬ್ಯಾಕ್ ಮೆಷಿನ್ ನಲ್ಲಿ. http://www.himalayahealthcare.com/herbfinder/h_mesuaf.htm Archived 2010-01-13 ವೇಬ್ಯಾಕ್ ಮೆಷಿನ್ ನಲ್ಲಿ.

 1. "ಆರ್ಕೈವ್ ನಕಲು". Archived from the original on 2020-08-11. Retrieved 2018-04-15.
 2. "ಆರ್ಕೈವ್ ನಕಲು". Archived from the original on 2018-05-19. Retrieved 2018-04-15.
 3. http://www.planetayurveda.com/mesua-ferrea.htm
 4. "ಆರ್ಕೈವ್ ನಕಲು". Archived from the original on 2020-08-11. Retrieved 2018-04-15.
 5. http://www.flowersofindia.net/catalog/slides/Nag%20Kesar.html
 6. https://www.dabur.com/in/en-us/about/science-of-ayurveda/herbal-medicinal-plants Archived 2018-02-10 ವೇಬ್ಯಾಕ್ ಮೆಷಿನ್ ನಲ್ಲಿ.
 7. ವನಸಿರಿ ಅಜ್ಜಂಪುರ ಕೃಷ್ಣ ಸ್ವಾಮಿ ಕನಾ‌‌‌೯ಟಕ ಪಬ್ಲಿಕೇಷನ್ ಪ್ರೈವೇಟ್ ಲಿಮಿಟೆಡ್ ೨೦೧೪
 8. ಹಸಿರು ಹೊನ್ನು,ಬಿ ಜಿ ಎಲ್ ಸ್ಡಾಮಿ, ಗುಪ್ತ ಆಫ್ ಸೆಟ್ ಪ್ರಿಂಟರ್ಸ್,೨೦೧೫