ನಮ್ಮ ಲಚ್ಚಿ (ಕನ್ನಡ ಧಾರಾವಾಹಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮ್ಮ ಲಚ್ಚಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದ್ದು, ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8:00ಕ್ಕೆ ಪ್ರಸಾರವಾಗುತ್ತಿತ್ತು[೧]. ಇದು 6 ಫೆಬ್ರವರಿ 2023 ರಿಂದ [೨] [೩] 6 ಏಪ್ರಿಲ್ 2024ರವೆಗೆ ಪ್ರಸಾರಗೊಂಡಿತು[೪] [೫]. ಈ ಕಾರ್ಯಕ್ರಮವು ಬಂಗಾಳಿ ಭಾಷೆಯ ಪೋಟಲ್ ಕುಮಾರ್ ಗಾನಾವಾಲ ಧಾರಾವಾಹಿಯ ಅಧಿಕೃತ ರೀಮೆಕ್ ಆಗಿದೆ. ಧಾರಾವಾಹಿಯಲ್ಲಿ ವಿಜಯ್ ಸೂರ್ಯ, ನೇಹಾ ಗೌಡ ಮತ್ತು ವಾಣಿಶ್ರೀ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.


ನಮ್ಮ ಲಚ್ಚಿ (ಕನ್ನಡ ಧಾರಾವಾಹಿ)
ಟೈಟಲ್ ಕಾರ್ಡ್
ಶೈಲಿದೈನಂದಿನ ಧಾರಾವಾಹಿ
ನಿರ್ದೇಶಕರುಸಂಪೃಥ್ವಿ
ದೇಶಭಾರತ
ಭಾಷೆ(ಗಳು)ಕನ್ನಡ
ಒಟ್ಟು ಸಂಚಿಕೆಗಳು364
ನಿರ್ಮಾಣ
ನಿರ್ಮಾಪಕ(ರು)ಜೆ.ಜಯಮ್ಮ
ಸಂಕಲನಕಾರರುನಿತ್ಯಾ ಎನ್.ದೊಡ್ಡೇರಿ
ನಿರ್ಮಾಣ ಸಂಸ್ಥೆ(ಗಳು)ಜೈ ಮಾತಾ ಕಂಬೈನ್ಸ್
ಪ್ರಸಾರಣೆ
ಮೂಲ ವಾಹಿನಿಸ್ಟಾರ್ ಸುವರ್ಣ
ಮೂಲ ಪ್ರಸಾರಣಾ ಸಮಯ6 ಫೆಬ್ರವರಿ 2023 – 6 ಏಪ್ರಿಲ್ 2024


ಕಥಾ ಹಂದರ[ಬದಲಾಯಿಸಿ]

ಉದಯೋನ್ಮುಖ ಗಾಯಕ ಸಂಗಮ್ ಸಂಪಿಗೆಪುರದಲ್ಲಿ ವಾಸಿಸುವ ಹಳ್ಳಿ ಹುಡುಗಿ ಗಿರಿಜಾ ಎಂಬವಳನ್ನು ಪ್ರೀತಿಸುತ್ತಾನೆ ಮತ್ತು ರಹಸ್ಯವಾಗಿ ಮದುವೆಯಾಗುತ್ತಾನೆ. ಆದರೆ ಗಿರಿಜಾ ಮತ್ತು ಅವನ ವೃತ್ತಿಜೀವನದ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಬರುತ್ತದೆ. ಆದರೆ ಗಿರಿಜಾ ಗರ್ಭಿಣಿ ಎಂದು ತಿಳಿಯದೆ ಅವಳನ್ನು ಬಿಟ್ಟು ವೃತ್ತಿಜೀವನವನ್ನು ಆಯ್ಕೆ ಮಾಡುತ್ತಾನೆ. ನಂತರ ಅವನು ಶ್ರೀಮಂತ ದೀಪಿಕಾಳನ್ನು ಮದುವೆಯಾಗುತ್ತಾನೆ. ದೀಪಿಕಾ ತನ್ನ ಮಗಳು ರಿಯಾಳನ್ನು ಮುದ್ದಿನಿಂದ ಬೆಳಸಿರುತ್ತಾಳೆ.

ಲಚ್ಚಿ ಹಳ್ಳಿಯಲ್ಲಿ ಹುಟ್ಟಿ ಬೆಳೆದವಳು ಮತ್ತು ಹಾಡುವುದೆಂದರೆ ಅವಳಿಗೆ ಪಂಚಪ್ರಾಣವಾಗಿದೆ. ಆದರೆ ಅವಳ ತಾಯಿ ಗಿರಿಜಾಗೆ ಇದು ಇಷ್ಟವಿಲ್ಲ. ಲಚ್ಚಿ ಹಳ್ಳಿಯಲ್ಲಿ ಅವಳ ತಾಯಿ, ಸೋದರ ಮಾವ ಮತ್ತು ಅತ್ತೆಯೊಂದಿಗೆ ವಾಸಮಾಡುತ್ತಿರುತ್ತಾಳೆ. ಲಚ್ಚಿಗೆ ತನ್ನ ತಂದೆ ಯಾರೆಂದು ತಿಳಿದಿಲ್ಲ. ಲಚ್ಚಿಗೆ ಹಾಡುವ ಕೌಶಲ್ಯವು ಅವಳ ತಂದೆಯಿಂದ ಆನುವಂಶಿಕವಾಗಿ ಬಂದಿದೆ. ಖ್ಯಾತ ಗಾಯಕ ಸಂಗಮ್ ತನ್ನ ತಂದೆ ಎಂದು ತಿಳಿದಿಲ್ಲ, ಅವರಂತೆ ಗಾಯಕಿಯಾಗಲು ಬಯಸುತ್ತಾಳೆ. ಶಾಂತಾ (ಗಿರಿಜಾಳ ಅತ್ತಿಗೆ) ಲಚ್ಚಿಯನ್ನು ದ್ವೇಷಿಸುತ್ತಾಳೆ, ಆದರೆ ಅವಳ ಪ್ರತಿಭೆಯನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳಲು ಬಯಸುತ್ತಾಳೆ.

ಕ್ಯಾನ್ಸರ್ ನಿಂದ ಬಳಲುತ್ತಿರುವ ಗಿರಿಜಾಳಿಗೆ ದೀಪಿಕಾಳ ಕಾರು ಡಿಕ್ಕಿ ಹೊಡೆದ ಕಾರಣದಿಂದ ಅಪಘಾತದಲ್ಲಿ ಸಾಯುತ್ತಾಳೆ. ಶಾಂತಾ ತನ್ನ ಲಾಭಕ್ಕಾಗಿ ಲಚ್ಚಿಯನ್ನು ಮಾರಾಟ ಮಾಡಲು ಯೋಜಿಸುತ್ತಾಳೆ. ಆದರೆ ಲಚ್ಚಿಯ ತಾಯಿಯ ಅಣ್ಣ ಅವಳನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಾನೆ.ಲಚ್ಚಿಯು ತನ್ನ ತಂದೆಯನ್ನು ಹುಡುಕಲು ಹಂಬಲಿಸುತ್ತಾಳೆ.

ಹುಡುಗನ ವೇಷದಲ್ಲಿ, ಲಚ್ಚಿ ಬೆಂಗಳೂರಿಗೆ ಪ್ರವೇಶಿಸಿ ಆಕಸ್ಮಿಕವಾಗಿ ಸಂಗಮ್ ಮನೆಗೆ ತಲುಪುತ್ತಾಳೆ. ರಿಯಾಳನ್ನು ಯಶಸ್ವಿ ಗಾಯಕಿಯನ್ನಾಗಿ ಮಾಡಲು ದೀಪಿಕಾ ಲಚ್ಚಿ ಧ್ವನಿಯನ್ನು ಬಳಸುತ್ತಾಳೆ. ಆದಾಗ್ಯೂ, ರಿಯಾಗೆ ಧ್ವನಿ ನೀಡುತ್ತಿರುವುದು ಲಚ್ಚಿ ಎಂಬುಂದನ್ನು ಸಂಗಮ್ ತಿಳಿದುಕೊಳ್ಳುತ್ತಾನೆ ಮತ್ತು ಅವಳಿಗೆ ತರಬೇತಿ ನೀಡಲು ನಿರ್ಧರಿಸುತ್ತಾನೆ. ಕಥೆ ಮುಂದುವರಿಯುತ್ತಾ; ಲಚ್ಚಿ ಹುಡುಗ ಅಲ್ಲ ಹುಡುಗಿ ಎಂಬ ವಿಚಾರ ಸಂಗಮ್ ಮತ್ತು ಮನೆಯವರಿಗೆ ತಿಳಿಯುತ್ತದೆ.

ಪಾತ್ರವರ್ಗ[ಬದಲಾಯಿಸಿ]

ಮುಖ್ಯಪಾತ್ರಗಳು[ಬದಲಾಯಿಸಿ]

  • ಸಾಂಘವಿ ಕಾಂತೇಶ್: ಲಚ್ಚಿ ಪಾತ್ರದಲ್ಲಿ. ಸಂಗಮ್ ಮತ್ತು ಗಿರಿಜಾ ಮಗಳಾಗಿ.
  • ವಿಜಯ್ ಸೂರ್ಯ : ಸಂಗಮ್ ಪಾತ್ರದಲ್ಲಿ. ಲಚ್ಚಿಯ ಹೆತ್ತತಂದೆಯಾಗಿ.
  • ಐಶ್ವರ್ಯ ಸಿಂಧೂಗಿ[೬] : ದೀಪಿಕಾ ಪಾತ್ರದಲ್ಲಿ. ಸಂಗಮ್ ಎರಡನೇ ಹೆಂಡತಿಯಾಗಿ. ರಿಯಾ ಹೆತ್ತತಾಯಿಯಾಗಿ.
    • ಸಾರಾ ಅಣ್ಣಯ್ಯ[೭]: ಪಾತ್ರ ಬದಲಾವಣೆಯಾಗುವ ಮೊದಲು

ಇತರೆ ಪಾತ್ರಗಳು[ಬದಲಾಯಿಸಿ]

  • ನೇಹಾ ಗೌಡ[೮]: ಗಿರಿಜಾ ಮತ್ತು ಜಾಜಿ ಪಾತ್ರದಲ್ಲಿ. ಗಿರಿಜಾ ಲಚ್ಚಿ ಹೆತ್ತತಾಯಿಯಾಗಿ ಮತ್ತು ಸಂಗಮ್ ಮೊದಲನೇಯ ಹೆಂಡತಿಯಾಗಿ.
  • ಶ್ರೀದಿಶಾ: ರಿಯಾ ಪಾತ್ರದಲ್ಲಿ. ದೀಪಿಕಾ ಮಗಳು ಮತ್ತು ಸಂಗಮ್ ಸಾಕು ಮಗಳು.
  • ವಾಣಿಶ್ರೀ[೯]: ಜೆಜೆ ಆಲಿಯಾಸ್ ಜ್ವಾಲಿ ಜಾನಕಿ ಪಾತ್ರದಲ್ಲಿ. ದೀಪಿಕಾ ಹೆತ್ತತಾಯಿಯಾಗಿ, ರಿಯಾ ಅಜ್ಜಿಯಾಗಿ. ಸಂಗಮ್ ಅತ್ತೆಯಾಗಿ.
  • ಸುಶ್ಮೀತಾ[೧೦]: ಶಾಂತವ್ವ ಪಾತ್ರದಲ್ಲಿ. ಲಚ್ಚಿ ಸೋದರ ಅತ್ತೆಯಾಗಿ
  • ವಿಕಾಸ್ ಕಾರ್‌ಗೋಡ್: ಸಾಗರ್ ಪಾತ್ರದಲ್ಲಿ. ಸಂಗಮ್ ಅಣ್ಣನಾಗಿ.
  • ಮಾನಸ ಭಟ್: ಮಾನಸ ಪಾತ್ರದಲ್ಲಿ, ಸಾಗರ್ ಹೆಂಡತಿಯಾಗಿ. ಸಂಗಮ್ ಅತ್ತಿಗೆಯಾಗಿ.
  • ದೀಪಾ ರವಿಶಂಕರ್: ಶಾರದ ಪಾತ್ರದಲ್ಲಿ. ಸಾಗರ್ ಮತ್ತು ಸಂಗಮ್ ಹೆತ್ತತಾಯಿಯಾಗಿ. ಮಾನಸ ಮತ್ತು ದೀಪಿಕಾ ಅತ್ತೆಯಾಗಿ.
  • ವಿನಯ್ ಗೌಡ: ಭದ್ರಿ ಪಾತ್ರದಲ್ಲಿ. ದೀಪಿಕಾ ಹಳೆಪ್ರೇಮಿಯಾಗಿ, ರಿಯಾ ಸ್ವಂತ ತಂದೆಯಾಗಿ. ಖ್ಯಾತ ರಾಪರ್.
  • ?: ಗೋಪಾಲನ ಪಾತ್ರದಲ್ಲಿ. ಲಚ್ಚಿ ಸೋದರ ಮಾವನಾಗಿ. ಶಾಂತಳಾ ಗಂಡನಾಗಿ. ಸುಗ್ಗಿ ತಂದೆಯಾಗಿ.
  • ?: ಸುಗ್ಗಿ ಪಾತ್ರದಲ್ಲಿ. ಗೋಪಾಲ ಹಾಗೂ ಶಾಂತಳ ಮಗಳಾಗಿ.

ರೂಪಾಂತರಗಳು[ಬದಲಾಯಿಸಿ]

ಭಾಷೆ ಶೀರ್ಷಿಕೆ ಮೂಲ ಬಿಡುಗಡೆ ವಾಹಿನಿ(ಗಳು) ಕೊನೆಯ ಪ್ರಸಾರ ಟಿಪ್ಪಣಿಗಳು
ಬಂಗಾಳಿ Potol Kumar Gaanwala
পটল কুমার গানওয়ালা
14 ಡಿಸೆಂಬರ್ 2015 ಸ್ಟಾರ್ ಜಾಸ್ಲಾ 10 ಸೆಪ್ಟಂಬರ್ 2017 ಮೂಲ
ತೆಲುಗು Koilamma
కోయిలమ్మ
5 ಸೆಪ್ಟಂಬರ್ 2016 ಸ್ಟಾರ್ ಮಾ 18 ಸೆಪ್ಟಂಬರ್ 2020 ರೀಮೆಕ್
ಮಲಯಾಳಂ Vanambadi
വാനമ്പാടി
30 ಜನವರಿ 2017 ಏಷ್ಯಾನೆಟ್
ತಮಿಳು Mouna Raagam
மௌன ராகம்
24 ಏಪ್ರಿಲ್ 2017 ಸ್ಟಾರ್ ವಿಜಯ 17 ಮಾರ್ಚ್ 2023
ಹಿಂದಿ Kullfi Kumarr Bajewala
कुल्फ़ी कुमार बाजेवाला
19 ಮಾರ್ಚ್ 2018 ಸ್ಟಾರ್ ಪ್ಲಸ್ 7 ಫೆಬ್ರವರಿ 2020
ಮರಾಠಿ Tuzech Mi Geet Gaat Aahe
तुझेच मी गीत गात आहे
2 ಮೇ 2022 ಸ್ಟಾರ್ ಪ್ರಾವಹ್ ಪ್ರಸಾರವಾಗುತ್ತಿದೆ
ಕನ್ನಡ Namma Lacchi
ನಮ್ಮ ಲಚ್ಚಿ
6 ಫೆಬ್ರವರಿ 2023 ಸ್ಟಾರ್ ಸುವರ್ಣ 6 ಏಪ್ರಿಲ್ 2024

ಉಲ್ಲೇಖಗಳು[ಬದಲಾಯಿಸಿ]

  1. "ಸ್ಟಾರ್ ಸುವರ್ಣದಲ್ಲಿ ಬರ್ತಿದ್ದಾಳೆ 'ನಮ್ಮ ಲಚ್ಚಿ', ಫೆಬ್ರವರಿ 6 ರಿಂದ ರಾತ್ರಿ 8ಕ್ಕೆ ಹೊಸ ಧಾರಾವಾಹಿ". News18 Kannada. Retrieved 29 ಜನವರಿ 2023.
  2. "New daily soap 'Namma Lacchi' to premiere today". The Times of India. Retrieved 6 ಫೆಬ್ರವರಿ 2023.
  3. "Daily soap 'Namma Lacchi' completes 100 episodes". The Times of India. Retrieved 2 ಜೂನ್ 2023.
  4. "ನಮ್ಮ ಲಚ್ಚಿ'ಯ ಗಿರಿಜಾ ಪಾತ್ರಕ್ಕೆ ನೇಹಾ ಗೌಡ ಭಾವುಕ ವಿದಾಯ; ನಟಿ ಹೇಳಿದ್ದೇನು?". ಫಿಲ್ಮಿಬೀಟ್ ಕನ್ನಡ. Retrieved 9 ಏಪ್ರಿಲ್ 2024.
  5. "ವಿಜಯ್ ಸೂರ್ಯ- ನೇಹಾ ಗೌಡ ನಟನೆಯ 'ನಮ್ಮ ಲಚ್ಚಿ' ಧಾರಾವಾಹಿ ಶೀಘ್ರದಲ್ಲೇ ದಿ ಎಂಡ್". ಫಿಲ್ಮಿಬೀಟ್ ಕನ್ನಡ. Retrieved 5 ಏಪ್ರಿಲ್ 2024.
  6. "Aishwarya Shindogi replaces Sara Annaiah in Namma Lacchi". The Times of India. Retrieved 9 ಮೇ 2023.
  7. "Sara Annaiah plays a pivotal role in new show Namma Lacchi". The Times of India. Retrieved 10 ಫೆಬ್ರವರಿ 2023.
  8. "' ನಮ್ಮ ಲಚ್ಚಿ' ಧಾರಾವಾಹಿ ; ಕಿರುತೆರೆಗೆ ನೇಹಾ ಗೌಡ, ವಿಜಯ್ ಸೂರ್ಯ ಕಂಬ್ಯಾಕ್". ವಿಜಯ ಕರ್ನಾಟಕ. Retrieved 31 ಜನವರಿ 2023.
  9. "Vanishri on playing JJ in Namma Lacchi: I purchase outfits weekly for my onscreen role and find great satisfaction in it". The Times of India. Retrieved 2 ನವೆಂಬರ್ 2023.
  10. "ನಮ್ಮ ಲಚ್ಚಿ'ಯ ಶಾಂತವ್ವ ಆಲಿಯಾಸ್ ಸುಶ್ಮಿತಾ ಕ್ರಶ್, ವಿಜಯ್ ಸೂರ್ಯ!". ಫಿಲ್ಮಿಬೀಟ್ ಕನ್ನಡ. Retrieved 1 ಆಗಸ್ಟ್ 2023.