ವಿಷಯಕ್ಕೆ ಹೋಗು

ನನ್ನವನು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನನ್ನವನು
ಚಿತ್ರ:Nannavanu.jpeg
Directed byಶ್ರೀನಿವಾಸ್ ರಾಜು
Written byಶ್ರೀನಿವಾಸ್ ರಾಜು
Produced byತುಳಸಿ ಗೋಪಾಲ್
Starringಪ್ರಜ್ವಲ್ ದೇವರಾಜ್ , ಐಂದ್ರಿತಾ ರೇ , ಅವಿನಾಶ್, ಜಯಂತಿ
Cinematographyಕೆ. ದತ್ತು
Edited byಸುರೇಶ್ ಅರಸ್
Music byಇಳಯರಾಜಾ
Production
company
ಮಾರ್ಕ್‍ವೆಲ್ ಎಂಟರ್ಟೇನ್ಮೆಂಟ್
Release date
2010 ರ ಮೇ 28
Running time
145 ನಿಮಿಷಗಳು
Countryಭಾರತ
Languageಕನ್ನಡ


ನನ್ನವನು ಶ್ರೀನಿವಾಸ್ ರಾಜು ಬರೆದು ನಿರ್ದೇಶಿಸಿದ ಮತ್ತು ತುಳಸಿ ಗೋಪಾಲ್ ನಿರ್ಮಿಸಿದ 2010 ರ ಕನ್ನಡ ಭಾಷೆಯ ರೋಮ್ಯಾಂಟಿಕ್ ನಾಟಕ ಚಲನಚಿತ್ರವಾಗಿದೆ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜೊತೆಗೆ ಐಂದ್ರಿತಾ ರೇ ಮತ್ತು ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಪುನರ್ಜನ್ಮದ ಸೇಡಿನ ಕಥೆಯನ್ನು ಹಿನ್ನೆಲೆಯಾಗಿ ಹೊಂದಿದೆ. ಇಳಯರಾಜ ಸಂಗೀತ ಸಂಯೋಜಿಸಿದ್ದು, ವಿ.ನಾಗೇಂದ್ರ ಪ್ರಸಾದ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವು 28 ಮೇ 2010 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಯಿತು ಮತ್ತು ಅದರ ಕಥಾಹಂದರ, ಸಂಗೀತಕ್ಕಾಗಿ ಹೆಚ್ಚಿನ ನಿರೀಕ್ಷೆಗಳನ್ನು ಮತ್ತು ಕೆಲವು ವಿವಾದಗಳನ್ನು ಹುಟ್ಟುಹಾಕಿತು. ಆದಾಗ್ಯೂ ಬಿಡುಗಡೆಯಾದ ನಂತರ, ಚಿತ್ರವು ಸಾಮಾನ್ಯವಾಗಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. []

ಕಥಾವಸ್ತು

[ಬದಲಾಯಿಸಿ]

ಸಂಜನಾಗೆ (ಐಂದ್ರಿತಾ) ತನ್ನ ಹಿಂದಿನ ಜನ್ಮದಲ್ಲಿ ಕೊಲೆಯಾಗಿದ್ದಾಗಿ ಇದ್ದಕ್ಕಿದ್ದಂತೆ ಗೊತ್ತಾಗ್ತ್ತದೆ. ಅವಳು ಧೈರ್ಯವನ್ನು ಒಟ್ಟುಗೂಡಿಸಿ ವಕೀಲರ ಮೂಲಕ ತನ್ನ ಕೊಲೆಗೆ ನ್ಯಾಯವನ್ನು ಕೇಳುತ್ತಾಳೆ. ಅವಳು ತನ್ನ ಹಿಂದಿನ ಜನ್ಮದಲ್ಲಿ ತನ್ನ ಪ್ರೇಮಿಯನ್ನು ಹೋಲುವ ಹೋರಾಟಗಾರ ವಕೀಲ ಭಾರದ್ವಾಜ್ (ಪ್ರಜ್ವಲ್) ಅನ್ನು ಕಂಡುಕೊಳ್ಳುತ್ತಾಳೆ. ಅವಳು ತನ್ನ ಪ್ರಕರಣವನ್ನು ಹೋರಾಡಲು ಅವನನ್ನು ನೇಮಿಸಿಕೊಳ್ಳುತ್ತಾಳೆ ಮತ್ತು ಅವನು ಕೇಸ್ ಸೋತರೂ ಸಹ ಅವನಿಗೆ ದೊಡ್ಡ ಮೊತ್ತವನ್ನು ನೀಡುತ್ತಾಳೆ. ಆಕೆಯ ಸಾವಿಗೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಶಾಸಕ (ಅವಿನಾಶ್) ವಿರುದ್ಧ ಹೋರಾಡಲು ಅವರು ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಾರೆ. ಅವಳ ಪ್ರಕರಣಕ್ಕೆ ಏನಾಗುತ್ತದೆ ಮತ್ತು ಯಾರು ಗೆಲ್ಲುತ್ತಾರೆ ಎಂಬುದು ಉಳಿದ ಕಥೆ.

ಪಾತ್ರವರ್ಗ

[ಬದಲಾಯಿಸಿ]

ಧ್ವನಿಮುದ್ರಿಕೆ

[ಬದಲಾಯಿಸಿ]

ಎಲ್ಲಾ ಹಾಡುಗಳನ್ನು ಇಳಯರಾಜ ನಿರ್ದೇಶಕರೊಂದಿಗೆ ಸಂಯೋಜಿಸಿದ್ದಾರೆ. Audio 9 ಎಂಬ ಹೊಸ ಆಡಿಯೋ ಕಂಪನಿಯನ್ನು ರಾಜಕಾರಣಿ ಸಹಾಯ್ ರಾಜ್ ಅನಾವರಣಗೊಳಿಸಿದರು ಮತ್ತು ಈ ಲೇಬಲ್ ಅಡಿಯಲ್ಲಿ ನಿರ್ಮಿಸಲಾದ ಮೊದಲ ಚಿತ್ರ ನನ್ನವನು ಆಗಿದೆ . ವಿಶೇಷ ಆಹ್ವಾನಿತರಾಗಿ ನಟ ದೇವರಾಜ್ ಅವರು ಅಧಿಕೃತ ಧ್ವನಿಮುದ್ರಿಕೆಯನ್ನು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮವು 8 ಮೇ 2010 ರಂದು ಬೆಂಗಳೂರಿನಲ್ಲಿ ನಡೆಯಿತು. []


ಎಲ್ಲ ಹಾಡುಗಳು ವಿ. ನಾಗೇಂದ್ರ ಪ್ರಸಾದ್ ಅವರಿಂದ ರಚಿತ; ಎಲ್ಲ ಸಂಗೀತ ಇಳಯರಾಜಾ ಅವರಿಂದ ರಚಿತ

ಹಾಡುಗಳ ಪಟ್ಟಿ
ಸಂ.ಹಾಡುಹಾಡುಗಾರರುಸಮಯ
1."ದೆನ್ನ ದೆನ್ನನ್ನ್ನ"ವಿಜಯ್ ಯೇಸುದಾಸ್ 
2."ಹೇ ಮಾಮು"ಕಾರ್ತಿಕ್ , ವಿಜಯ್ ಯೇಸುದಾಸ್, ಟಿಪ್ಪು 
3."Muthuthara Muthamma"ಇಳಯರಾಜಾ, Bela Shende 
4."ಮೊದಲನೇ ಬಾರಿ"ಎಸ್.ಪಿ.ಬಾಲಸುಬ್ರಹ್ಮಣ್ಯಂ, ಬೇಲಾ ಶೇಂಡೆ 
5."ಓಂ ಶಿವೋಹಂ"ಎಸ್.ಪಿ.ಬಾಲಸುಬ್ರಹ್ಮಣ್ಯಂ, ಬೇಲಾ ಶೇಂಡೆ 
6."ಏನಿದು ಏನಿದು"ಶ್ರೀರಾಮ್, ಬೇಲಾ ಶೇಂಡೆ 
7."ದೇವಾದಿ ದೇವಾ (bit)"ಎಸ್.ಪಿ.ಬಾಲಸುಬ್ರಹ್ಮಣ್ಯಂ 


ಉಲ್ಲೇಖಗಳು

[ಬದಲಾಯಿಸಿ]
  1. "Avoid Nannavanu". Rediff. 31 May 2010.
  2. "'NANNAVANU' AUDIO FROM NEW 'AUDIO 9'". Cinecircle.in. 9 May 2009. Archived from the original on 5 ಮಾರ್ಚ್ 2016. Retrieved 6 ಏಪ್ರಿಲ್ 2022.

ಹೆಚ್ಚಿನ ಓದು

[ಬದಲಾಯಿಸಿ]