ದ ಗಾಡ್‍ಫ಼ಾದರ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದ ಗಾಡ್‍ಫ಼ಾದರ್
"The Godfather" written on a black background in stylized white lettering, above it a hand holds puppet strings.
ಚಿತ್ರಮಂದಿರ ಬಿಡುಗಡೆಯ ಪೋಸ್ಟರ್
ನಿರ್ದೇಶನಫ಼್ರ್ಯಾನ್ಸಿಸ್ ಫ಼ೋರ್ಡ್ ಕೋಪಲಾ
ನಿರ್ಮಾಪಕಆಲ್ಬರ್ಟ್ ಎಸ್. ರಡಿ
ಚಿತ್ರಕಥೆ
  • ಮಾರಿಯೊ ಪೂಜ಼ೊ
  • ಫ಼್ರ್ಯಾನ್ಸಿಸ್ ಫ಼ೋರ್ಡ್ ಕೋಪಲಾ
ಆಧಾರಮಾರಿಯೊ ಪೂಜ಼ೊರ ದ ಗಾಡ್‍ಫ಼ಾದರ್ ಕಾದಂಬರಿ ಮೇಲೆ ಆಧಾರಿತ
ಪಾತ್ರವರ್ಗ
  • ಮಾರ್ಲನ್ ಬ್ರ್ಯಾಂಡೊ
  • ಆಲ್ ಪಚೀನೊ
  • ಜೇಮ್ಸ್ ಕಾನ್
  • ರಿಚರ್ಡ್ ಕಾಸ್ಟೆಯಾನೊ
  • ರಾಬರ್ಟ್ ಡುವಾಲ್
  • ಸ್ಟರ್ಲಿಂಗ್ ಹೇಡನ್
  • ಜಾನ್ ಮಾರ್ಲಿ
  • ರಿಚರ್ಡ್ ಕೋಂಟೆ
  • ಡಯಾನ್ ಕೀಟನ್
ಸಂಗೀತನೀನೊ ರೋಟಾ
ಛಾಯಾಗ್ರಹಣಗಾರ್ಡನ್ ವಿಲಿಸ್
ಸಂಕಲನ
  • ವಿಲಿಯಂ ರೆನಾಲ್ಡ್ಸ್
  • ಪೀಟರ್ ಜ಼ಿನರ್
ವಿತರಕರುಪ್ಯಾರಮೌಂಟ್ ಪಿಕ್ಚರ್ಸ್
ಬಿಡುಗಡೆಯಾಗಿದ್ದು೧೫-೦೩-೧೯೭೨ - ನ್ಯೂ ಯಾರ್ಕ್, ೨೪-೦೩-೧೯೭೨ ಅಮೇರಿಕ
ಅವಧಿ177 ನಿಮಿಷಗಳು[೧]
ದೇಶಅಮೇರಿಕ ಸಂಯುಕ್ತ ಸಂಸ್ಥಾನ
ಭಾಷೆಇಂಗ್ಲಿಷ್
ಬಂಡವಾಳ$5–6.5 ಮಿಲಿಯನ್
ಬಾಕ್ಸ್ ಆಫೀಸ್$245–286 ಮಿಲಿಯನ್[೨] (೨೦೧೯ ಡಾಲರ್ ಬೆಲೆಯಲ್ಲಿ $713.3 ಮಿಲಿಯನ್‍ಗೆ ಸಮಾನ)

ದ ಗಾಡ್‍ಫ಼ಾದರ್ ಫ್ರಾಂಸಿಸ್ ಫೋರ್ಡ್ ಕೊಪ್ಪಲಾ ನಿರ್ದೇಶಿಸಿದ, ಆಲ್ಬರ್ಟ್ ಎಸ್. ರಡಿ ನಿರ್ಮಿಸಿದ ೧೯೭೨ರ ಒಂದು ಅಮೇರಿಕನ್ ಅಪರಾಧಕೇಂದ್ರಿತ ಚಲನಚಿತ್ರ. ಈ ಚಿತ್ರವು ಮ್ಯಾರಿಯೊ ಪೂಜ಼ೊರ ಅತಿ ಹೆಚ್ಚು ಮಾರಾಟವಾದ ಇದೇ ಹೆಸರಿನ ಕಾದಂಬರಿಯ ಮೇಲೆ ಆಧಾರಿತವಾಗಿದೆ. ಚಲನಚಿತ್ರದಲ್ಲಿ ಮರ್ಲಾನ್ ಬ್ರಾಂಡೊ ಮತ್ತು ಆಲ್ ಪಸಿನೊ ಒಂದು ಕಾಲ್ಪನಿಕ ನ್ಯೂ ಯಾರ್ಕ್ ಅಪರಾಧಿಕ ಕುಟುಂಬದ ಮುಖ್ಯಸ್ಥರಾಗಿ ಅಭಿನಯಿಸಿದ್ದಾರೆ. ೧೯೪೫ರಿಂದ ೧೯೫೫ರ ವರೆಗೆ ವ್ಯಾಪಿಸುವ ಕಥೆಯು ಯಜಮಾನನಾದ ವಿಟೊ ಕೊರ್ಲಿಯೋನಿಯ (ಬ್ರ್ಯಾಂಡೊ) ಕೈಕೆಳಗೆ ಕುಟುಂಬವನ್ನು ನಿರೂಪಿಸುತ್ತದೆ, ಮತ್ತು ಮನಸ್ಸಿಲ್ಲದ ಕುಟುಂಬದ ಹೊರಗಿನವನಿಂದ ನಿರ್ದಯ ಮಾಫ಼ಿಯಾದ ಮೇಲಧಿಕಾರಿಯಾಗಿ ಮೈಕಲ್ ಕೊರ್ಲಿಯೋನಿಯ (ಪಚೀನೊ) ಪರಿವರ್ತನೆಯ ಮೇಲೆ ಕೇಂದ್ರೀಕರಿಸುತ್ತದೆ.

ಪ್ಯಾರಮೌಂಟ್ ಪಿಕ್ಚರ್ಸ್ ಕಾದಂಬರಿ ಜನಪ್ರಿಯವಾಗುವ ಮೊದಲು, ಅದರ ಹಕ್ಕುಗಳನ್ನು $80,000 ಬೆಲೆಗೆ ಪಡೆಯಿತು.[೩][೪] ಒಬ್ಬ ನಿರ್ದೇಶಕನನ್ನು ಹುಡುಕುವುದು ನಿರ್ಮಾಣಶಾಲೆಯ ಕಾರ್ಯನಿರ್ವಾಹಕರಿಗೆ ಕಷ್ಟವಾಯಿತು; ಚಿತ್ರವನ್ನು ನಿರ್ದೇಶನ ಮಾಡಲು ಕೋಪಲಾ ಸಹಿಹಾಕುವ ಮೊದಲು ಅವರ ಮೊದಲ ಕೆಲವು ಅಭ್ಯರ್ಥಿಗಳು ಆ ಸ್ಥಾನವನ್ನು ತಿರಸ್ಕರಿಸಿದರು. ಚಿತ್ರೀಕರಣವು ಮುಖ್ಯವಾಗಿ ನ್ಯೂ ಯಾರ್ಕ್ ಸುತ್ತಲಿನ ಸ್ಥಳದಲ್ಲಿ ಮತ್ತು ಸಿಸಿಲಿಯಲ್ಲಿ ನಡೆಯಿತು ಮತ್ತು ಅವಧಿಗೂ ಮುನ್ನ ಮುಗಿಯಿತು. ಚಲನಚಿತ್ರದ ಸಂಗೀತವನ್ನು ಮುಖ್ಯವಾಗಿ ನೀನೊ ರೋಟಾ ಸಂಯೋಜಿಸಿದರು, ಹೆಚ್ಚುವರಿ ತುಣುಕುಗಳನ್ನು ಕಾರ್ಮೈನ್ ಕೋಪಲಾ ಸಂಯೋಜಿಸಿದರು.

ಇದು ೧೯೭೨ರ ಅತ್ಯಂತ ಹೆಚ್ಚು ಹಣಗಳಿಸಿದ ಚಲನಚಿತ್ರವಾಗಿತ್ತು,[೫] ಮತ್ತು ಬಾಕ್ಸ್ ಆಫ಼ೀಸ್‍ನಲ್ಲಿ ಸುಮಾರು $245–286 ಮಿಲಿಯನ್ ಗಳಿಕೆಯೊಂದಿಗೆ ಸ್ವಲ್ಪ ಸಮಯದವರೆಗೆ ಸಾರ್ವಕಾಲಿಕವಾಗಿ ಅತ್ಯಂತ ಹೆಚ್ಚು ಹಣಗಳಿಸಿದ ಚಲನಚಿತ್ರವಾಗಿತ್ತು.[೪] ಚಲನಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ವಿಶ್ವವ್ಯಾಪಿ ಮೆಚ್ಚುಗೆ ಪಡೆಯಿತು. ಅದರ ಪಾತ್ರವರ್ಗದ ಅಭಿನಯಗಳನ್ನು ಪ್ರಶಂಸಿಸಲಾಯಿತು, ವಿಶೇಷವಾಗಿ ಬ್ರ್ಯಾಂಡೊ ಹಾಗೂ ಪಚೀನೊರ ಅಭಿನಯ, ನಿರ್ದೇಶನ, ಚಿತ್ರಕಥೆ, ಛಾಯಾಗ್ರಹಣ, ಸಂಕಲನ, ಸಂಗೀತ ಮತ್ತು ಮಾಫ಼ಿಯಾದ ಚಿತ್ರಣವನ್ನು. ಈ ಚಲನಚಿತ್ರವು ೧೯೬೦ರ ದಶಕದಲ್ಲಿ ಅವನತಿಯಾಗುತ್ತಿದ್ದ ಬ್ರ್ಯಾಂಡೊರ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಿತು. ಇದರ ನಂತರ ಅವರು ಲಾಸ್ಟ್ ಟ್ಯಾಂಗ್ ಇನ್ ಪ್ಯಾರಿಸ್, ಸೂಪರ್‌ಮ್ಯಾನ್, ಮತ್ತು ಅಪಾಕಲಿಪ್ಸ್ ನೌನಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ಈ ಚಿತ್ರವು ಕೋಪಲಾ, ಪಚೀನೊ ಮತ್ತು ಪಾತ್ರವರ್ಗದ ಉಳಿದವರ ಯಶಸ್ವಿ ವೃತ್ತಿಜೀವನಗಳನ್ನು ಪ್ರಾರಂಭಿಸಿತು. ೪೫ನೇ ಅಕ್ಯಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ, ಇದು ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ (ಬ್ರ್ಯಾಂಡೊ), ಮತ್ತು ಅತ್ಯುತ್ತಮ ರೂಪಾಂತರಿತ ಚಿತ್ರಕಥೆಗಾಗಿ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಇದರ ಇತರ ಏಳು ಆಸ್ಕರ್ ನಾಮನಿರ್ದೇಶನಗಳಲ್ಲಿ ಪಚೀನೊ, ಜೇಮ್ಸ್ ಕಾನ್, ರಾಬರ್ಟ್ ಡುವಾಲ್ (ಅತ್ಯುತ್ತಮ ಪೋಷಕ ನಟ) ಮತ್ತು ಕೋಪಲಾ (ಅತ್ಯುತ್ತಮ ನಿರ್ದೇಶಕ) ಸೇರಿದ್ದವು.

ಅದರ ಬಿಡುಗಡೆಯಾದಾಗಿನಿಂದ, ದ ಗಾಡ್‍ಫ಼ಾದರ್ ಸಾರ್ವಕಾಲಿಕವಾಗಿ ತಯಾರಿಸಲಾದ ಅತ್ಯಂತ ಪ್ರಭಾವಿ ಚಲನಚಿತ್ರಗಳಲ್ಲಿ ಒಂದು ಎಂದು ವ್ಯಾಪಕವಾಗಿ ಪರಿಗಣಿತವಾಗಿದೆ, ವಿಶೇಷವಾಗಿ ಕಳ್ಳಕೂಟಿಗ ಶೈಲಿಯಲ್ಲಿ.[೬] ೧೯೯೦ ರಲ್ಲಿ ಕಾಂಗ್ರೆಸ್‍ನ ಗ್ರಂಥಾಲಯದ ಅಮೇರಿಕದ ರಾಷ್ಟ್ರೀಯ ಚಲನಚಿತ್ರ ಸಂಗ್ರಹದಲ್ಲಿ ಸಂರಕ್ಷಿಸಿಡಲು ಇದನ್ನು ಆಯ್ಕೆಮಾಡಲಾಯಿತು. ಅಮೇರಿಕದ ಚಲನಚಿತ್ರ ಸಂಸ್ಥೆಯ ಅಮೇರಿಕದ ಚಲನಚಿತ್ರಗಳ ಪಟ್ಟಿಯಲ್ಲಿ ಇದು (ಸಿಟಿಜ಼ನ್ ಕೇನ್‍ನ ಹಿಂದೆ) ಎರಡನೇ ಅತ್ಯಂತ ಶ್ರೇಷ್ಠ ಚಲನಚಿತ್ರವೆಂದು ಸ್ಥಾನ ಪಡೆದಿದೆ. ಇದಾದ ನಂತರ ಇದರ ಉತ್ತರಭಾಗಗಳಾದ ದ ಗಾಡ್‍ಫ಼ಾದರ್ ಪಾರ್ಟ್ ಟೂ (೧೯೭೪) ಮತ್ತು ದ ಗಾಡ್‍ಫ಼ಾದರ್ ಪಾರ್ಟ್ ಥ್ರೀ (೧೯೯೦) ತೆರೆಕಂಡವು.

ಕಥಾವಸ್ತು[ಬದಲಾಯಿಸಿ]

೧೯೪೫ರಲ್ಲಿ, ತನ್ನ ಮಗಳು ಕಾನಿ ಮತ್ತು ಕಾರ್ಲೊ ರಿಟ್ಸಿಯ ಮದುವೆಯಲ್ಲಿ, ಡಾನ್ ವಿಟೊ ಕೊರ್ಲಿಯೋನಿ ಒಂದು ನ್ಯೂ ಯಾರ್ಕ್ ಅಪರಾಧಿಕ ಕುಟುಂಬದ ಮುಖ್ಯಸ್ಥನಾಗಿ ತನ್ನ ಪಾತ್ರದಲ್ಲಿ ವಿನಂತಿಗಳನ್ನು ಕೇಳುತ್ತಿರುತ್ತಾನೆ. ಸತ್ಕಾರಕೂಟದಲ್ಲಿ ಎರಡನೇ ಮಹಾಯುದ್ಧದ ಅವಧಿಯಲ್ಲಿ ಮರೀನ್ ಆಗಿದ್ದ ಅವನ ಅತಿ ಕಿರಿಯ ಮಗನಾದ ಮೈಕಲ್ ತನ್ನ ಗೆಳತಿಯಾದ ಕೇ ಆ್ಯಡಮ್ಸ್‌ಳನ್ನು ತನ್ನ ಕುಟುಂಬಕ್ಕೆ ಪರಿಚಯ ಮಾಡಿಕೊಡುತ್ತಾನೆ. ಪ್ರಸಿದ್ಧ ಗಾಯಕ ಮತ್ತು ವಿಟೊನ ಧರ್ಮಪುತ್ರನಾದ ಜಾನಿ ಫ಼ಾಂಟೇನ್ ಒಂದು ಚಲನಚಿತ್ರ ಪಾತ್ರವನ್ನು ಪಡೆದುಕೊಳ್ಳೌ ವಿಟೊನ ಸಹಾಯವನ್ನು ಕೋರುತ್ತಾನೆ; ಜಾನಿಗೆ ಪಾತ್ರ ನೀಡುವಂತೆ ನಿರ್ಮಾಣಶಾಲೆಯ ಮುಖ್ಯಸ್ಥ ಜ್ಯಾಕ್ ವಾಲ್ಟ್‌ಜ಼್‍ನ ಮನವೊಲಿಸಲು ವಿಟೊ ತನ್ನ ಸಲಹೆಗಾರ ಟಾಮ್ ಹೇಗನ್‍ನ್ನು ಲಾಸ್ ಏಂಜಲೀಸ್‍ಗೆ ಕಳಿಸುತ್ತಾನೆ. ಹಾಸಿಗೆಯಲ್ಲಿ ಎದ್ದು ತನ್ನ ಅಮೂಲ್ಯವಾದ ಕುದುರೆಯ ಕತ್ತರಿಸಿದ ತಲೆಯನ್ನು ಕಾಣುವವರೆಗೆ ವಾಲ್ಟ್‌ಜ಼್ ನಿರಾಕರಿಸುತ್ತಾನೆ.

ಕ್ರಿಸ್ಮಸ್‍ಗೆ ಸ್ವಲ್ಪ ಮೊದಲು, ಟಟಾಗ್ಲಿಯಾ ಅಪರಾಧ ಕುಟುಂಬದಿಂದ ಬೆಂಬಲಿತನಾದ ಮಾದಕ ದ್ರವ್ಯಗಳ ವ್ಯಾಪಾರಿ ವರ್ಜಿಲ್ "ದ ಟರ್ಕ್" ಸೊಲಾಟ್ಸೊ, ತನ್ನ ಮಾದಕ ದ್ರವ್ಯ ವ್ಯಾಪಾರದಲ್ಲಿ ಹೂಡಿಕೆಮಾಡುವಂತೆ ಮತ್ತು ಅವನ ರಾಜಕೀಯ ಸಂಪರ್ಕಗಳ ಮೂಲಕ ರಕ್ಷಣೆ ನೀಡುವಂತೆ ವಿಟೊನನ್ನು ಕೇಳಿಕೊಳ್ಳುತ್ತಾನೆ. ರಾಜಕೀಯ ಆಂತರ್ಯದವರನ್ನು ದೂರಮಾಡುವ ಅಪಾಯವಿದ್ದ ಅಪಾಯಕಾರಿ ಹೊಸ ವ್ಯಾಪಾರದಲ್ಲಿ ತೊಡಗಿಕೊಳ್ಳುವ ಬಗ್ಗೆ ಜಾಗರೂಕನಾಗಿ ವಿಟೊ ನಿರಾಕರಿಸುತ್ತಾನೆ. ಸಂಶಯ ಹೊಂದಿ, ಅವರ ಮೇಲೆ ಗೂಢಚರ್ಯೆ ಮಾಡಲು ವಿಟೊ ತನ್ನ ಹತ್ಯಾಕಾರಿಯಾದ ಲೂಕಾ ಬ್ರಾಸಿಯನ್ನು ಕಳಿಸುತ್ತಾನೆ. ಬ್ರೂನೊ ಟಟಾಗ್ಲಿಯಾ ಮತ್ತು ಸೊಲಾಟ್ಸೊರೊಂದಿಗಿನ ತನ್ನ ಮೊದಲ ಭೇಟಿಯಲ್ಲಿ ಬ್ರಾಸಿ ಉಸಿರುಗಟ್ಟಿಸಿಕೊಂಡು ಸಾಯುತ್ತಾನೆ. ನಂತರ ಸೊಲಾಟ್ಸೊ ರಸ್ತೆಯಲ್ಲಿ ವಿಟೊನಿಗೆ ಗುಂಡು ಹೊಡಿಸುತ್ತಾನೆ ಮತ್ತು ಹೇಗನ್‍ನ್ನು ಅಪಹರಿಸುತ್ತಾನೆ. ಕೊರ್ಲಿಯೊನಿಯ ಮೊದಲ ಮಗ ಸನಿ ಯಾಜಮಾನ್ಯದಲ್ಲಿದ್ದಾಗ, ಸೊಲಾಟ್ಸೊ‍ನ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ಸನಿಯ ಮನವೊಲಿಸುವಂತೆ ಹೇಗನ್‍ನ ಮೇಲೆ ಸೊಲಾಟ್ಸೊ ಒತ್ತಡ ಹಾಕಿ ಹೇಗನ್‍ನ್ನು ಬಿಡುಗಡೆ ಮಾಡುತ್ತಾನೆ. ಕುಟುಂಬವು ಬ್ರಾಸಿಯ ಗುಂಡುನಿರೋಧಕ ನಡುವಂಗಿಯಲ್ಲಿ ಸುತ್ತಿದ ಮೀನನ್ನು ಸ್ವೀಕರಿಸುತ್ತದೆ. ಲೂಕಾ "ಮೀನುಗಳೊಂದಿಗೆ ಮಲಗಿದ್ದಾನೆ" ಎಂಬುದು ಅದರ ಅರ್ಥವಾಗಿರುತ್ತದೆ. ವಿಟೊ ಬದುಕುಳಿಯುತ್ತಾನೆ, ಮತ್ತು ಆಸ್ಪತ್ರೆಯಲ್ಲಿ ಮೈಕಲ್ ತನ್ನ ತಂದೆಯೆ ಮೇಲಿನ ಮತ್ತೊಂದು ಕೊಲೆ ಪ್ರಯತ್ನವನ್ನು ತಡೆಯುತ್ತಾನೆ. ಸೊಲಾಟ್ಸೊನ ಅನಧಿಕೃತ ಅಂಗರಕ್ಷಕನಾದ ಎನ್‍ವೈಪಿಡಿ ಕ್ಯಾಪ್ಟನ್ ಮಾರ್ಕ್ ಮೆಕ್ಲಸ್ಕಿ ಮೈಕಲ್‍ನ ದವಡೆಯನ್ನು ಮುರಿಯುತ್ತಾನೆ. ಸನಿ ಬ್ರೂನೊ ಟಟಾಗ್ಲಿಯಾಗೆ ಹೊಡೆದು ಪ್ರತೀಕಾರ ಮಾಡುತ್ತಾನೆ. ಮೈಕಲ್ ಸೊಲಾಟ್ಸೊ ಮತ್ತು ಮೆಕ್ಲಸ್ಕಿಯರನ್ನು ಸಾಯಿಸಲು ಒಳಸಂಚು ಮಾಡುತ್ತಾನೆ; ವಿವಾದವನ್ನು ಬಗೆಹರಿಸುವ ಆಸೆಯ ನಟನೆ ಮಾಡಿ, ಮೈಕಲ್ ಅವರನ್ನು ಒಂದು ಬ್ರಾಂಕ್ಸ್ ರೆಸ್ಟೊರೆಂಟ್‍ನಲ್ಲಿ ಭೇಟಿಮಾಡಿ, ಇರಿಸಿದ್ದ ಕೈಬಂದೂಕನ್ನು ಪಡೆದು, ಇಬ್ಬರನ್ನೂ ಸಾಯಿಸುತ್ತಾನೆ.

ಅಧಿಕಾರಿಗಳಿಂದ ನಿರ್ಬಂಧಗಳ ಹೊರತಾಗಿಯೂ, ಐದು ಕುಟುಂಬಗಳು ಮುಕ್ತ ಸಮರದಲ್ಲಿ ತೊಡಗುತ್ತಾರೆ, ಮತ್ತು ವಿಟೊ ತನ್ನ ಪುತ್ರರ ಸುರಕ್ಷತೆ ಬಗ್ಗೆ ಭಯಗೊಳ್ಳುತ್ತಾನೆ. ಮೈಕಲ್ ಸಿಸಿಲಿಯಲ್ಲಿ ಮರೆಯಾಗುತ್ತಾನೆ ಮತ್ತು ಫ಼್ರೆಡೊನಿಗೆ ಲಾಸ್ ವೇಗ‍ಸ್‍ನಲ್ಲಿ ಮೋ ಗ್ರೀನ್ ಆಶ್ರಯ ನೀಡುತ್ತಾನೆ. ಕಾನಿಗೆ ಬಯ್ದಿದ್ದಕ್ಕಾಗಿ ಸನಿ ರಸ್ತೆಯಲ್ಲಿ ಕಾರ್ಲೊ ಮೇಲೆ ಹಲ್ಲೆ ಮಾಡುತ್ತಾನೆ, ಮತ್ತು ಅದು ಮತ್ತೊಮ್ಮೆ ಆದರೆ ಅವನನ್ನು ಕೊಲ್ಲುತ್ತೇನೆ ಎಂದು ಬೆದರಿಸುತ್ತಾನೆ. ಅದು ಮತ್ತೆ ಆದಾಗ, ಸನಿ ಅವರ ಮನೆಗೆ ವೇಗವಾಗಿ ಹೊರಡುತ್ತಾನೆ, ಆದರೆ ಹೆದ್ದಾರಿಯ ಒಂದು ಸುಂಕದ ಮನೆಯಲ್ಲಿ ಹೊಂಚುದಾಳಿಗೆ ಒಳಗಾಗಿ ಅನೇಕ ಗುಂಡುಗಳು ಬಡಿದು ಸಾಯುತ್ತಾನೆ. ಸಿಸಿಲಿಯಲ್ಲಿರುವಾಗ, ಮೈಕಲ್ ಅಪೋಲೋನಿಯಾ ವಿಟೆಲಿಯನ್ನು ಭೇಟಿಯಾಗಿ ವಿವಾಹವಾಗುತ್ತಾನೆ, ಆದರೆ ತನಗಾಗಿ ಉದ್ದೇಶಿತವಾಗಿದ್ದ ಒಂದು ಕಾರು ಬಾಂಬು ಅವಳ ಜೀವ ತೆಗೆದುಕೊಳ್ಳುತ್ತದೆ.

ಸನಿಯ ಸಾವಿನಿಂದ ಆಘಾತಗೊಂಡು ಮತ್ತು ಟಟಾಗ್ಲಿಯಾ ಕುಟುಂಬವು ಆಗ ಪ್ರಬಲವಾಗಿದ್ದ ಡಾನ್ ಎಮೀಲಿಯೊ ಬಾರ್ಜ಼ೀನಿಯ ಹತೋಟಿಯಲ್ಲಿರುವುದನ್ನು ಅರಿತುಕೊಂಡು, ವಿಟೊ ಹಗೆತನವನ್ನು ಅಂತ್ಯಗೊಳಿಸಲು ಪ್ರಯತ್ನಿಸುತ್ತಾನೆ. ಅವರ ಹೆರೋಯಿನ್ ವ್ಯಾಪಾರಕ್ಕೆ ತನ್ನ ವಿರೋಧವನ್ನು ಹಿಂಪಡೆಯುತ್ತೇನೆ ಮತ್ತು ಸನಿಯ ಕೊಲೆಯ ಮುಯ್ಯಿ ತೀರಿಸಿಕೊಳ್ಳುವುದಿಲ್ಲ ಎಂದು ಅವನು ಐದು ಕುಟುಂಬಗಳಿಗೆ ಭರವಸೆ ನೀಡುತ್ತಾನೆ. ಅವನ ಸುರಕ್ಷತೆಯ ಖಾತರಿಯಾದ ಮೇಲೆ, ಮೈಕಲ್ ಕುಟುಂಬ ವ್ಯವಹಾರವನ್ನು ಪ್ರವೇಶಿಸಲು ಮತ್ತು ಕೇಯನ್ನು ಮದುವೆಯಾಗಲು ಮನೆಗೆ ಮರಳುತ್ತಾನೆ, ವ್ಯವಹಾರವು ಐದು ವರ್ಷಗಳೊಳಗೆ ನ್ಯಾಯಸಮ್ಮತವಾಗುತ್ತದೆಂದು ಮಾತು ಕೊಡುತ್ತಾನೆ. ೧೯೫೦ರ ದಶಕದ ಮೊದಲಿನ ವರ್ಷಗಳಲ್ಲಿ ಕೇ ಇಬ್ಬರು ಮಕ್ಕಳಿಗೆ ಜನ್ಮ ನೀಡುತ್ತಾಳೆ. ತನ್ನ ತಂದೆಯು ಅವನ ಜೀವನದ ಅಂತ್ಯದ ಹತ್ತಿರವಿರಲು ಮತ್ತು ಫ಼್ರೆಡೊ ಬಹಳ ದುರ್ಬಲವಿರಲು, ಮೈಕಲ್ ಕುಟುಂಬದ ಹತೋಟಿಯನ್ನು ತೆಗೆದುಕೊಳ್ಳುತ್ತಾನೆ. ಹೇಗನ್ ಲಾಸ್ ವೇಗಸ್‍ಗೆ ಹೋಗಬೇಕೆಂದು ಮತ್ತು ಹೇಗನ್ ಯುದ್ಧಕಾಲದ ಕನ್ಸಿಲಿಯರಿ ಅಲ್ಲದ್ದರಿಂದ ವಿಟೊ ಬಳಿಯ ತನ್ನ ಪಾತ್ರವನ್ನು ತ್ಯಜಿಸಬೇಕೆಂದು ಅವನು ಒತ್ತಿಹೇಳುತ್ತಾನೆ; ಪ್ರತಿಸ್ಪರ್ಧಿ ಕುಟುಂಬಗಳೊಂದಿಗೆ ಮುಂದೆ ಬರಲಿರುವ ಸಂಘರ್ಷಗಳಲ್ಲಿ ಏನಾಗುತ್ತದೆಂಬುದರಲ್ಲಿ ಟಾಮ್ ಯಾವುದೇ ಪಾತ್ರ ಹೊಂದಿರಬಾರದೆಂದು ವಿಟೊ ಒಪ್ಪುತ್ತಾನೆ. ಕುಟುಂಬದ ಕಸೀನೊಗಳಲ್ಲಿನ ಗ್ರೀನ್‍ನ ಪಾಲನ್ನು ಖರೀದಿಸಲು ಮೈಕಲ್ ಲಾಸ್ ವೇಗಾಸ್‍ಗೆ ಪ್ರಯಾಣ ಮಾಡಿದಾಗ, ಫ಼್ರೆಡೊ ತನ್ನ ಕುಟುಂಬಕ್ಕಿಂತ ಗ್ರೀನ್‍ಗೆ ಹೆಚ್ಚು ನಿಷ್ಠನಾಗಿದ್ದಾನೆಂದು ನೋಡಿ ನಿರಾಶನಾಗುತ್ತಾನೆ.

೧೯೫೫ರಲ್ಲಿ, ವಿಟೊಗೆ ಹೃದಯಾಘಾತವಾಗುತ್ತದೆ. ಶವಸಂಸ್ಕಾರದಲ್ಲಿ, ಕೊರ್ಲಿಯೋನಿಯ ಒಬ್ಬ ಕಪೊರೆಜೈಮ್‍ನಾದ ಸಾಲ್ವಟೋರೆ ಟೆಸಿಯೊ, ವಿಟೊ ಮುನ್ನೆಚ್ಚರಿಸಿದ್ದ ದ್ರೋಹವನ್ನು ಸೂಚಿಸಲು ಡಾನ್ ಬಾರ್ಜ಼ೀನಿಯನ್ನು ಭೇಟಿಯಾಗುವಂತೆ ಕೇಳಿಕೊಳ್ಳುತ್ತಾನೆ. ಭೇಟಿಯನ್ನು ಕಾನಿಯ ಶಿಶುವಿನ ಕ್ರೈಸ್ತಸ್ನಾನದ ದಿನವೇ ಏರ್ಪಡಿಸಲಾಗಿರುತ್ತದೆ. ಪೂಜಾವೇದಿಕೆಯ ಮುಂದೆ ಮೈಕಲ್ ಮಗುವಿನ ಧರ್ಮಪಿತನಾಗಿ ನಿಂತುಕೊಂಡಾಗಿನ ಸಮಯದಲ್ಲಿ, ಕೊರ್ಲಿಯೋನಿ ಹಂತಕರು ಇತರ ನ್ಯೂ ಯಾರ್ಕ್ ಡಾನ್‍ಗಳು ಮತ್ತು ಮೋ ಗ್ರೀನ್‍ನ್ನು ಕೊಲ್ಲುತ್ತಾರೆ. ಅವನ ವಿಶ್ವಾಸಘಾತಕತೆಗಾಗಿ ಟೆಸಿಯೊನನ್ನು ಸಾಯಿಸಲಾಗುತ್ತದೆ ಮತ್ತು ಮೈಕಲ್ ಬಾರ್ಜ಼ೀನಿಗಾಗಿ ಸನಿಯ ಕೊಲೆಯನ್ನು ಸಿದ್ಧಗೊಳಿಸಿಕೊಟ್ಟಿದ್ದಕ್ಕಾಗಿ ಕಾರ್ಲೊನ ಸಹಾಪರಾಧಿತ್ವದ ತಪ್ಪೊಪ್ಪಿಗೆಯನ್ನು ಹೊರತೆಗೆಯುತ್ತಾನೆ. ಒಬ್ಬ ಕೊರ್ಲಿಯೋನಿ ಕಪೊನಾದ ಪೀಟರ್ ಕ್ಲೆಮೆಂಜ಼ಾ ಕಾರ್ಲೊನನ್ನು ತಂತಿಯಿಂದ ಉಸಿರುಗಟ್ಟಿಸಿ ಸಾಯಿಸುತ್ತಾನೆ. ಕಾನಿ ಕೊಲೆಗೆ ಮೈಕಲ್‍ನನ್ನು ಆಪಾದಿಸಿ, ಮೈಕಲ್ ಎಲ್ಲ ಕೊಲೆಗಳಿಗೆ ಆದೇಶಿಸಿದನು ಎಂದು ಕೇಗೆ ಹೇಳುತ್ತಾಳೆ. ಮೈಕಲ್ ಅಂತಿಮವಾಗಿ ಅದನ್ನು ನಿರಾಕರಿಸಿದಾಗ ಕೇ ಸಮಾಧಾನಗೊಳ್ಳುತ್ತಾಳೆ, ಆದರೆ ಕಪೊಗಳು ಆಗಮಿಸಿದಾಗ, ಅವರು ತನ್ನ ಗಂಡನನ್ನು ಡಾನ್ ಕೊರ್ಲಿಯೋನಿ ಎಂದು ಸಂಬೋಧಿಸುತ್ತಾರೆ ಮತ್ತು ಅವರು ಹೊಸದಾಗಿ ಪ್ರತಿಷ್ಠಾಪಿಸಿದ ಡಾನ್ ಆಗಿ ಮೈಕಲ್‍ಗೆ ಗೌರವ ಸಲ್ಲಿಸುವುದನ್ನು ಮತ್ತು ಬಾಗಿಲು ಮುಚ್ಚುವುದನ್ನು ನೋಡುತ್ತಾಳೆ.

ನಿರ್ಮಾಣ[ಬದಲಾಯಿಸಿ]

ಬೆಳವಣಿಗೆ[ಬದಲಾಯಿಸಿ]

ಪ್ಯಾರಮೌಂಟ್ ಪಿಕ್ಚರ್ಸ್ ಪೂಜ಼ೊರ ಕಾದಂಬರಿಯ ಬಗ್ಗೆ ಮೊಟ್ಟಮೊದಲು ೧೯೬೭ರಲ್ಲಿ ಕಂಡುಕೊಂಡಿತು. ಆಗ ಆ ಸಂಸ್ಥೆಯ ಒಬ್ಬ ಸಾಹಿತ್ಯಿಕ ಸಂಗ್ರಹಗಾರನು ಸಂಸ್ಥೆಯ ನಿರ್ಮಾಣದ ಉಪಾಧ್ಯಕ್ಷ ಬಾರ್ಟ್‌ರನ್ನು ಸಂಪರ್ಕಿಸಿ ಪೂಜ಼ೊರ ಇನ್ನೂ ಮುಗಿಯದ ಅರವತ್ತು ಪುಟಗಳ ಹಸ್ತಪ್ರತಿ ಬಗ್ಗೆ ಹೇಳಿದನು.[೭] ಆ ಕೃತಿಯು ಒಂದು ಮಾಫ಼ಿಯಾ ಕಥೆಗಿಂತ ಬಹಳಷ್ಟು ಹೆಚ್ಚಿನದು ಎಂದು ನಂಬಿ ಆ ಕೃತಿಗಾಗಿ ಪೂಜ಼ೊರವರಿಗೆ $12,500 ನೀಡುವ ಪ್ರಸ್ತಾಪ ಮಾಡಿದರು, ಮತ್ತು ಅದರ ಮುಗಿದ ಕೃತಿಯನ್ನು ಚಿತ್ರವಾಗಿ ತಯಾರಿಸಿದರೆ $80,000 ಕೊಡುವ ಆಯ್ಕೆ ನೀಡಿದರು.[೭][೮] ಹಣಕ್ಕಾಗಿ ಉತ್ಕಟರಾಗಿದ್ದ ಪೂಜ಼ೊ ಕರಾರನ್ನು ಒಪ್ಪಿಕೊಂಡರು.

ನಿರ್ದೇಶನ[ಬದಲಾಯಿಸಿ]

ಚಲನಚಿತ್ರವನ್ನು ಆದಷ್ಟು ಸಾಂಪ್ರದಾಯಿಕವಾಗಿ ತಯಾರಿಸಲು ಇಟಲಿ ಮೂಲದ ಅಮೇರಿಕನ್ ಪ್ರಜೆಯು ಚಲನಚಿತ್ರವನ್ನು ನಿರ್ದೇಶಿಸಬೇಕೆಂದು ಇವಾನ್ಸ್ ಬಯಸಿದ್ದರು.[೯][೧೦] ಇಟಲಿ ಮೂಲದ ಪಾತ್ರವರ್ಗ ಅಥವಾ ಸೃಜನಾತ್ಮಕ ಸಿಬ್ಬಂದಿಯ ಬಹುತೇಕ ಸಂಪೂರ್ಣ ಕೊರತೆಯು ಪ್ಯಾರಮೌಂಟ್‍ನ ಹಿಂದಿನ ಮಾಫ಼ಿಯಾ ಆಧಾರಿತ ಚಿತ್ರವು ಬಾಕ್ಸ್ ಆಫ಼ೀಸ್‍ನಲ್ಲಿ ವಿಫಲವಾಗಲು ಕಾರಣವಾಗಿತ್ತು ಎಂದು ಇವಾನ್ಸ್ ನಂಬಿದ್ದರು.[೧೧][೭] ಅನೇಕ ನಿರ್ದೇಶಕರಿಗೆ ಚಿತ್ರವನ್ನು ನಿರ್ದೇಶಿಸುವ ಪ್ರಸ್ತಾಪ ನೀಡಿದರೂ ಎಲ್ಲರೂ ನಿರಾಕರಿಸಿದರು.[೧೨][೧೩] ಇಟಲಿ ಮೂಲದವರಾಗಿದ್ದರಿಂದ ಮತ್ತು ಕಡಿಮೆ ಸಂಭಾವನೆಗೆ ಕೆಲಸ ಮಾಡಬಹುದಾದ್ದರಿಂದ ಫ಼್ರಾನ್ಸಿಸ್ ಫ಼ೋರ್ಡ್ ಕೋಪಲಾರ ಹೆಸರನ್ನು ಸಲಹೆ ಮಾಡಲಾಯಿತು.[೧೪] ಆರಂಭದಲ್ಲಿ ಕೋಪಲಾ ಕೆಲಸವನ್ನು ನಿರಾಕರಿಸಿದರು, ಏಕೆಂದರೆ ಅವರಿಗೆ ಪೂಜ಼ೊರ ಕಾದಂಬರಿ ಕಳಪೆ ಮತ್ತು ಉದ್ರೇಕಕರವೆಂದು ಅನಿಸಿತು. ಆ ಕಾಲದಲ್ಲಿ ಇತರ ನಿರ್ಮಾಣಶಾಲೆಗಳಿಗೆ ಅಪಾರ ಸಾಲ ತೀರಿಸಬೇಕಾಗಿದ್ದರಿಂದ ಮತ್ತು ತಮ್ಮ ಕಳಪೆ ಹಣಕಾಸು ಸ್ಥಾನಮಾನದ ಕಾರಣ, ಮತ್ತು ಗೆಳೆಯರು ಹಾಗೂ ಕುಟುಂಬದ ಸಲಹೆ ಕೇಳಿ, ಕೋಪಲಾ ತಮ್ಮ ನಿರ್ಧಾರವನ್ನು ಬದಲಿಸಿ ಕೆಲಸವನ್ನು ವಹಿಸಿಕೊಂಡರು.[೧೫]

ಬರವಣಿಗೆ[ಬದಲಾಯಿಸಿ]

ಕೋಪಲಾರನ್ನು ನಿರ್ದೇಶಕರೆಂದು ಗೊತ್ತುಮಾಡಿದ ನಂತರ, ಪೂಜ಼ೊ ಮತ್ತು ಕೋಪಲಾ ಇಬ್ಬರೂ ಚಿತ್ರಕಥೆಯ ಮೇಲೆ ಕೆಲಸಮಾಡಿದರು, ಆದರೆ ಪ್ರತ್ಯೇಕವಾಗಿ.[೧೪] ಇಬ್ಬರೂ ತಮ್ಮತಮ್ಮ ಚಿತ್ರಕಥೆಗಳನ್ನು ಬರೆಯುವಾಗ ಸಂಪರ್ಕದಲ್ಲಿದ್ದರು ಮತ್ತು ಅಂತಿಮ ಆವೃತ್ತಿಯಿಂದ ಯಾವುದನ್ನು ಇಟ್ಟುಕೊಳ್ಳಬೇಕು ಹಾಗೂ ಬಿಡಬೇಕು ಎಂಬುದರ ಬಗ್ಗೆ ತೀರ್ಮಾನಗಳನ್ನು ಮಾಡಿದರು.[೧೪]

ಪಾತ್ರ ನಿರ್ಧಾರಣ[ಬದಲಾಯಿಸಿ]

ಮಾರ್ಲನ್ ಬ್ರ್ಯಾಂಡೊ ಡಾನ್ ವಿಟೊ ಕಾರ್ಲಿಯಾನಿಯ ಪಾತ್ರದಲ್ಲಿ ನಟಿಸಬೇಕೆಂದು ಪೂಜ಼ೊ ಆಸಕ್ತಿ ತೋರಿಸಿದರು. ಆದರೆ ಬ್ರ್ಯಾಂಡೊರ ಇತ್ತೀಚಿನ ಚಿತ್ರಗಳ ಕಳಪೆ ಪ್ರದರ್ಶನ ಮತ್ತು ಅವರ ಮುಂಗೋಪದ ಕಾರಣ ಪ್ಯಾರಮೌಂಟ್‍ನ ಕಾರ್ಯನಿರ್ವಾಹಕರು ಇದಕ್ಕೆ ವಿರುದ್ಧವಾಗಿದ್ದರು.[೧೬]

ಕೋಪಲಾ ಬ್ರ್ಯಾಂಡೊರ ಪರದೆ ಪರೀಕ್ಷೆಯನ್ನು ಮಾಡಿದರು. ಅಲಂಕಾರಕ್ಕಾಗಿ, ಬ್ರ್ಯಾಂಡೊ ತಮ್ಮ ಗಲ್ಲದಲ್ಲಿ ಹತ್ತಿಯ ಚೆಂಡುಗಳನ್ನು ಅಂಟಿಸಿಕೊಂಡರು, ಕೂದಲನ್ನು ಕಪ್ಪಾಗಿಸಲು ಅದಕ್ಕೆ ಶೂ ಪಾಲಿಶ್ ಹಚ್ಚಿಕೊಂಡರು ಮತ್ತು ತಮ್ಮ ಕತ್ತುಪಟ್ಟಿಯನ್ನು ಸುರುಳಿ ಸುತ್ತಿದರು. ಕೋಪಲಾ ಇತರ ದರ್ಶನ ಪರೀಕ್ಷಾ ಸುರುಳಿಗಳ ವೀಡಿಯೋಗಳೊಂದಿಗೆ ಬ್ರ್ಯಾಂಡಿರ ದರ್ಶನ ಪರೀಕ್ಷಾ ಸುರುಳಿಯನ್ನು ಇಟ್ಟು ಕೊಟ್ಟರು. ಪ್ಯಾರಾಮೌಂಟ್‍ನ ಕಾರ್ಯನಿರ್ವಾಹಕರು ಬ್ರ್ಯಾಂಡೊರ ಪ್ರಯತ್ನಗಳನ್ನು ಮೆಚ್ಚಿ ಬ್ರ್ಯಾಂಡೊರನ್ನು ಪಾತ್ರವರ್ಗಕ್ಕೆ ಸೇರಿಸಿಕೊಂಡರು.

ನಿರ್ಮಾಣದ ಆರಂಭದಿಂದ, ಟಾಮ್ ಹೇಗ‍ನ್‍ನ ಪಾತ್ರವನ್ನು ರಾಬರ್ಟ್ ಡುವಾಲ್ ನಿರ್ವಹಿಸಬೇಕೆಂದು ಕೋಪಲಾ ಬಯಸಿದ್ದರು.[೧೭][೧೮][೭] ಹಲವಾರು ಇತರ ನಟರ ಚಿತ್ರಾಭಿನಯ ಪರೀಕ್ಷೆಯ ನಂತರ, ಅಂತಿಮವಾಗಿ ಕೋಪಲಾರ ಆಸೆ ನೆರವೇರಿ ಡುವಾಲ್‍ರಿಗೆ ಟಾಮ್ ಹೇಗನ್‍ನ ಪಾತ್ರ ನೀಡಲಾಯಿತು.[೧೮][೭] ಆರಂಭದಲ್ಲಿ ಜಾನಿ ಫ಼ಾಂಟೇನ್‍ನ ಪಾತ್ರ ಮಾಡಲು ಆಲ್ ಮಾರ್ಟೀನೊರನು ನಿರ್ಧರಿಸಲಾಗಿತ್ತು. ಆದರೆ, ಕೋಪಲಾ ನಿರ್ದೇಶಕರಾದ ಮೇಲೆ ಮಾರ್ಟೀನೊರನ್ನು ಆ ಪಾತ್ರದಿಂದ ತೆಗೆದು ಆ ಪಾತ್ರವನ್ನು ಇಟ್ಯಾಲಿಯನ್ ಗಾಯಕ ವಿಕ್ ಡಮೋನೆಗೆ ನೀಡಲಾಯಿತು. ಆದರೆ ಅಂತಿಮವಾಗಿ ಡಮೋನೆ ಆ ಪಾತ್ರದಿಂದ ಹಿಂದೆಸರಿದರು.[೭] ಇಷ್ಟೆಲ್ಲ ಆದರೂ, ಕೊನೆಗೆ ಜಾನಿ ಫ಼ಾಂಟೇನ್‍ನ ಪಾತ್ರ ಮಾರ್ಟೀನೊಗೆ ಸೇರಿತು.[೭]

ಮೊದಲು ರಾಬರ್ಟ್ ಡಿ ನಿರೋಗೆ ಪಾಲಿ ಗ್ಯಾಟ್ಟೊರ ಪಾತ್ರವನ್ನು ನೀಡಲಾಗಿತ್ತು.[೭][೧೯] ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದ ಆಲ್ ಪಚೀನೊ ಅದನ್ನು ತ್ಯಜಿಸಿ ಈ ಚಿತ್ರಕ್ಕೆ ಸಹಿಹಾಕಿದ ಮೇಲೆ ಆ ಸ್ಥಳವನ್ನು ಡೆ ನೀರೊ ಒಪ್ಪಿಕೊಂಡರು.[೭][೨೦] ಡೆ ನೀರೊ ಬಿಟ್ಟ ಮೇಲೆ, ಗ್ಯಾಟ್ಟೊನ ಪಾತ್ರವನ್ನು ಜಾನಿ ಮಾರ್ಟೀನೊಗೆ ನೀಡಲಾಯಿತು.[೯] ವಿಚಿತ್ರವಾಗಿರುವ ಹೆಸರು ಪಡೆದಿದ್ದಕ್ಕಾಗಿ ಕೋಪಲಾ ಕೇ ಆ್ಯಡಮ್ಸ್‌ಳ ಪಾತ್ರಕ್ಕೆ ಡಯಾನ್ ಕೀಟನ್‍ರನ್ನು ನಿಗದಿಮಾಡಿದರು. ಜಾನ್ ಕಜ಼ಾಲೆಗೆ ಫ಼್ರೆಡೊ ಕೊರ್ಲಿಯೋನಿಯ ಪಾತ್ರವನ್ನು ನೀಡಲಾಯಿತು. ಅವರು ರಿಟ್ಸಿ ಮತ್ತು ಕಾನಿಯ ನಡುವಿನ ಜಗಳದ ಅಭಿನಯ ಮಾಡಿ ತೋರಿಸಿದ ನಂತರ ಜಾನಿ ರುಸ್ಸೊಗೆ ಕಾರ್ಲೊ ರಿಟ್ಸಿಯ ಪಾತ್ರವನ್ನು ನೀಡಲಾಯಿತು.[೨೧]

ಮಾರ್ಚ್ ೨೯ರಂದು ಚಿತ್ರೀಕರಣದ ಆರಂಭ ಹತ್ತಿರವಾಗಿದ್ದರೂ, ಮೈಕಲ್ ಕೊರ್ಲಿಯೋನಿಯ ಪಾತ್ರ ನಿರ್ಧಾರಣವಾಗಿರಲಿಲ್ಲ.[೧೮] ಆ ಪಾತ್ರಕ್ಕಾಗಿ ಪಚೀನೊ ಕೋಪಲಾರ ಅತ್ಯಂತ ಅಚ್ಚುಮೆಚ್ಚಿನವರಾಗಿದ್ದರು, ಏಕೆಂದರೆ ಸಿಸಿಲಿಯ ಗ್ರಾಮೀಣ ಪ್ರದೇಶಗಳಲ್ಲಿ ಅಲೆದಾಡುವವರಂತೆ ಅವರನ್ನು ಚಿತ್ರಿಸಬಹುದಾಗಿತ್ತು, ಮತ್ತು ಕೋಪಲಾರಿಗೆ ಇಟ್ಯಾಲಿಯನ್-ಅಮೇರಿಕನ್ನರಂತೆ ಕಾಣುವ ಒಬ್ಬ ಅಪರಿಚಿತ ನಟ ಬೇಕಾಗಿತ್ತು.[೭] ಆದರೆ ಮೈಕಲ್‍ನ ಪಾತ್ರ ಮಾಡಲು ಪಚೀನೊ ತುಂಬ ಗಿಡ್ಡರೆಂದು ಪ್ಯಾರಮೌಂಟ್ ಕಾರ್ಯನಿರ್ವಾಹಕರಿಗೆ ಅನಿಸಿತು.[೧೭][೯] ಅನೇಕ ಇತರ ನಟರು ಕೂಡ ಮೈಕಲ್‍ನ ಪಾತ್ರಕ್ಕೆ ಶ್ರವಣಪರೀಕ್ಷೆಗೆ ಒಳಗಾದರು. ಆರಂಭದಲ್ಲಿ ಮೈಕಲ್‍ನ ಪಾತ್ರವನ್ನು ಕಾನ್‍ಗೆ, ಮತ್ತು ಸನಿ ಕೊರ್ಲಿಯೋನಿಯ ಪಾತ್ರವನ್ನು ಕಾರ್ಮಿನೆ ಕರೀಡಿಗೆ ನೀಡಲಾಯಿತು. ಆದರೆ ಕೋಪಲಾ ಒತ್ತಾಯ ಮಾಡಿದ ಮೇಲೆ, ಕಾರ್ಯನಿರ್ವಾಹಕರು ಪಚೀನೊ ಮೈಕಲ್‍ನ ಪಾತ್ರ ಮಾಡಲು ಮತ್ತು ಕಾನ್ ಸನಿಯ ಪಾತ್ರಮಾಡಲು ಒಪ್ಪಿದರು.[೨೧] ಚಿತ್ರೀಕರಣ ಆರಂಭವಾಗುವ ಮೂರು ವಾರ ಮೊದಲು ಪಚೀನೊ ಕರಾರಿಗೆ ಸಹಿಹಾಕಿದರು.[೨೨]

ಚಲನಚಿತ್ರದಲ್ಲಿನ ಹಲವು ಪಾತ್ರಗಳನ್ನು ಕೋಪಲಾ ತಮ್ಮ ಕುಟುಂಬದ ಸದಸ್ಯರಿಗೆ ನೀಡಿದರು.[೯] ತಮ್ಮ ಸೋದರಿಯಾದ ಟಾಲಿಯಾ ಶಾಯರ್‌ಗೆ ನೀಡಿದರು.[೧೮][೧೦] ಅವರ ಮಗಳು ಸೋಫ಼ಿಯಾ ಕಾನಿ ಹಾಗೂ ಕಾರ್ಲೊನ ನವಜಾತ ಮಗನಾದ ಮೈಕಲ್ ಫ಼್ರ್ಯಾನ್ಸಿಸ್ ರಿಟ್ಸಿ ಪಾತ್ರವನ್ನು ನಿರ್ವಹಿಸಿದರು.[೨೩] ಒಂದು ದೃಶ್ಯದಲ್ಲಿ, ಅವರ ತಂದೆ ಕಾರ್ಮಿನ್ ಕೋಪಲಾ ಪಿಯಾನೊ ನುಡಿಸುತ್ತಿರುವ ಅತಿರಿಕ್ತರಾಗಿ ಕಾಣಸಿಕೊಂಡರು.[೨೧] ಕೋಪಲಾರ ಪತ್ನಿ, ತಾಯಿ ಮತ್ತು ಇಬ್ಬರು ಪುತ್ರರು ಎಲ್ಲರೂ ಚಿತ್ರದಲ್ಲಿ ಅತಿರಿಕ್ತರಾಗಿ ಕಾಣಿಸಿಕೊಂಡರು. ಲೂಕಾ ಬ್ರಾಸಿಯಂತಹ ಹಲವು ಚಿಕ್ಕ ಪಾತ್ರಗಳನ್ನು ಚಿತ್ರೀಕರಣ ಆರಂಭವಾದ ಮೇಲೆ ನಿರ್ಧರಿಸಲಾಯಿತು.[೧೮]

ಚಿತ್ರೀಕರಣ[ಬದಲಾಯಿಸಿ]

ಚಿತ್ರೀಕರಣ ಶುರುವಾಗುವ ಮುನ್ನ, ಪಾತ್ರವರ್ಗಕ್ಕೆ ಪೂರ್ವಾಭ್ಯಾಸಕ್ಕಾಗಿ ಎರಡು ವಾರಗಳನ್ನು ನೀಡಲಾಯಿತು. ಇದರಲ್ಲಿ ಪ್ರತಿ ನಟ ಮತ್ತು ನಟಿ ಅವಧಿಯುದ್ದಕ್ಕೂ ತಮ್ಮ ಪಾತ್ರವನ್ನು ನಿರ್ವಹಿಸಬೇಕಾಗಿದ್ದ ಒಂದು ರಾತ್ರಿ ಊಟ ಸೇರಿತ್ತು.[೧೮] ಚಿತ್ರೀಕರಣವು ಮಾರ್ಚ್ ೨೩, ೧೯೭೧ ರಂದು ಆರಂಭವಾಯಿತು. ಪ್ರಧಾನ ಚಿತ್ರೀಕರಣವು ನ್ಯೂ ಯಾರ್ಕ್‌ನ ಜುಲೈ ೨,೧೯೭೧ ರವರೆಗೆ ಮುಂದುವರಿಯಿತು.[೮][೧೮] ಸಿಸಿಲಿಯಲ್ಲಿ ಚಿತ್ರೀಕರಿಸಲು ಹೋಗುವ ಮುನ್ನ ಕೋಪಲಾ ಮೂರು ವಾರಗಳ ಬಿಡುವನ್ನು ಕೇಳಿದರು.[೮]

ಮೊದಲು ಛಾಯಾಗ್ರಾಹಕರಾದ ಗಾರ್ಡನ್ ವಿಲಿಸ್ ಚಿತ್ರೀಕರಣ ಅವಕಾಶವನ್ನು ನಿರಾಕರಿಸಿದರೂ, ಆಮೇಲೆ ಪ್ರಸ್ತಾಪಾವನ್ನು ಒಪ್ಪಿಕೊಂಡರು. ಅವರು ಮತ್ತು ಕೋಪಲಾ ಯಾವುದೇ ಆಧುನಿಕ ಚಿತ್ರೀಕರಣ ಸಾಧನಗಳು, ಹೆಲಿಕಾಪ್ಟರ್‌ಗಳು, ಅಥವಾ ಜ಼ೂಮ್ ಲೆನ್ಸ್‌ಗಳನ್ನು ಬಳಸದಿರಲು ಒಪ್ಪಿದರು.[೧೮] ಅದು ವರ್ಣಚಿತ್ರದಂತೆ ನೋಡಲ್ಪಡುವಂತೆ ತೋರುವಂತೆ ಮಾಡಲು ವಿಲಿಸ್ ಮತ್ತು ಕೋಪಲಾ ನಿಶ್ಚಲ ಚಿತ್ರ ಶೈಲಿಯನ್ನು ಬಳಸಲು ಆಯ್ದುಕೊಂಡರು.[೧೮] ಮಾನಸಿಕ ಬೆಳವಣಿಗೆಗಳನ್ನು ಪ್ರದರ್ಶಿಸಲು ಅವರು ಚಲನಚಿತ್ರದಾದ್ಯಂತ ನೆರಳುಗಳು ಮತ್ತು ಕಡಿಮೆ ಬೆಳಕಿನ ಪ್ರಮಾಣಗಳನ್ನು ಬಳಸಿದರು.[೧೮] ಚಲನಚಿತ್ರದಾದ್ಯಂತ ತಿಳಿ ಮತ್ತು ಗಾಢ ದೃಶ್ಯಗಳು ಪರಸ್ಪರ ಕಾರ್ಯನಡೆಸುವುದಕ್ಕೆ ವಿಲಿಸ್ ಮತ್ತು ಕೋಪಲಾ ಒಪ್ಪಿದರು.[೭]

ಬಿಡುಗಡೆ[ಬದಲಾಯಿಸಿ]

ಚಲನಚಿತ್ರವು ನ್ಯೂ ಯಾರ್ಕ್‌ನಲ್ಲಿ ಮಾರ್ಚ್ ೧೫, ೧೯೭೨ ರಂದು ಬಿಡುಗಡೆಯಾಯಿತು.[೨೪][೯] ಟೊರಂಟೊದಲ್ಲಿ ಮಾರ್ಚ್ ೧೭ರಂದು ಮತ್ತು ಲಾಸ್ ಎಂಜಲೀಸ್‍ನಲ್ಲಿ ಮಾರ್ಚ್ ೨೨ರಂದು ಬಿಡುಗಡೆಯಾಯಿತು.[೨೫] ಅಮೇರಿಕದ ಉಳಿದ ಭಾಗಗಳಲ್ಲಿ ಚಿತ್ರವನ್ನು ಮಾರ್ಚ್ ೨೪, ೧೯೭೨ರಂದು ಬಿಡುಗಡೆ ಮಾಡಲಾಯಿತು.[೨೪]

ಬಾಕ್ಸ್ ಆಫ಼ಿಸ್[ಬದಲಾಯಿಸಿ]

ದ ಗಾಡ್‍ಫ಼ಾದರ್ ಬ್ಲಾಕ್‍ಬಸ್ಟರ್ ಚಿತ್ರವಾಯಿತು, ಮತ್ತು ಅನೇಕ ಬಾಕ್ಸ್ ಆಫ಼ಿಸ್ ದಾಖಲೆಗಳನ್ನು ಮುರಿದು ೧೯೭೨ ಅತ್ಯಂತ ಹೆಚ್ಚು ಹಣ ಗಳಿಸಿದ ಚಲನಚಿತ್ರವಾಯಿತು. ತನ್ನ ಸ್ಥಳೀಯ ಯಶಸ್ಸನ್ನು ಚಲನಚಿತ್ರವು ವಿದೇಶದಲ್ಲಿಯೂ ಪುನರಾವರ್ತಿಸಿತು, ವಿಶ್ವಾದ್ಯಂತ ಸಿನಿಮಾಮಂದಿರ ಬಾಡಿಗೆಯಾಗಿ ಒಟ್ಟು ಅಭೂತಪೂರ್ವ $142 ಮಿಲಿಯನ್ ಗಳಿಸಿ ಅತಿ ಹೆಚ್ಚು ಒಟ್ಟು ಗಳಿಕೆಯ ಚಿತ್ರವೆನಿಸಿಕೊಂಡಿತು.[೨೬] ವಿಶ್ವಾದ್ಯಂತದ ಬಾಕ್ಸ್ ಆಫ಼ಿಸ್ ಸಂದಾಯದಲ್ಲಿ ಈ ಚಲನಚಿತ್ರವು $245 ಮಿಲಿಯನ್ ಮತ್ತು $286 ನಡುವೆ ಗಳಿಸಿದೆ, ಮತ್ತು ಉತ್ತರ ಅಮೇರಿಕಾದಲ್ಲಿ ಟಿಕೆಟ್ ಬೆಲೆಯ ಹಣದುಬ್ಬರದಲ್ಲಿ ಸರಿಹೊಂದಿಸಿದರೆ, ೨೫ ಅತಿ ಹೆಚ್ಚು ಹಣ ಗಳಿಸಿದ ಚಲನಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಗಳಿಸುತ್ತದೆ.[೨೭]

ಸಾಂಸ್ಕೃತಿಕ ಪ್ರಭಾವ[ಬದಲಾಯಿಸಿ]

ದ ಗಾಡ್‍ಫ಼ಾದರ್‍ಗಿಂತ ಮುಂಚೆ ಕಳ್ಳಕೂಟಿಗರ ಬಗ್ಗೆ ಅನೇಕ ಚಿತ್ರಗಳು ಬಂದಿದ್ದರೂ, ಕೋಪಲಾರಿಂದ ಇಟಲಿಯ ಸಂಸ್ಕೃತಿ ಮತ್ತು ಪಡಿಯಚ್ಚುಗಳ ಭಾರೀ ಅಳವಡಿಕೆ, ಮತ್ತು ಗಣನೀಯ ಮಾನಸಿಕ ಆಳ ಹಾಗೂ ಸಂಕೀರ್ಣತೆಯ ಪಾತ್ರಗಳಾಗಿ ದರೋಡೆಕೋರರ ಚಿತ್ರಣವು ಅಭೂತಪೂರ್ವವಾಗಿತ್ತು.[೨೮] ಕೋಪಲಾ ಇದನ್ನು ದ ಗಾಡ್‍ಫ಼ಾದರ್ ಪಾರ್ಟ್ ಟೂದೊಂದಿಗೆ ಮತ್ತಷ್ಟು ಮುಂದಕ್ಕೆ ಒಯ್ದರು ಮತ್ತು ವಿಮರ್ಶಾತ್ಮಕವಾಗಿ, ಕಲಾತ್ಮಕವಾಗಿ ಹಾಗೂ ಆರ್ಥಿಕವಾಗಿ ಈ ಎರಡೂ ಚಿತ್ರಗಳ ಯಶಸ್ಸು ದರೋಡಕಾರರಾಗಿ ಇಟಲಿ ಮೂಲದ ಅಮೇರಿಕನ್ನರ ಅಸಂಖ್ಯಾತ ಇತರ ಚಿತ್ರಣಗಳಿಗೆ ದಾರಿ ತೋರಿಸಿತು, ಉದಾ. ಮಾರ್ಟಿನ್ ಸ್ಕೋರ್ಸೆಸಿಯ ಗುಡ್‍ಫ಼ೆಲಾಸ್.

ದ ಗಾಡ್‍ಫ಼ಾದರ್ ಚಲನಚಿತ್ರ ತ್ರಯ ಮತ್ತು ಅದರ ಬೆನ್ನ ಹಿಂದೆ ಬಂದ ದುಷ್ಕರ್ಮಿ ವಿಷಯದ ಅನುಕರಣಕಾರಿ ಚಿತ್ರಗಳು ಇಟ್ಯಾಲಿಯನ್ ಅಮೇರಿಕನ್ ಸಂಸ್ಕೃತಿಯ ಬಹಳ ಉತ್ಪ್ರೇಕ್ಷಿತ ಪರಿಕಲ್ಪನೆ ಮೂಡುವುದಕ್ಕೆ ಕಾರಣವಾಗಿವೆ. ಮೊದಲ ಚಲನಚಿತ್ರವು ಅತ್ಯಂತ ಹೆಚ್ಚಿನ ಪ್ರಭಾವವನ್ನು ಹೊಂದಿತ್ತು ಮತ್ತು ಇದರಲ್ಲಿ ೨೦ನೇ ಶತಮಾನದ ಮುಂಚಿನ ದಶಕಗಳಲ್ಲಿ ವಲಸೆಬಂದ ಇಟ್ಯಾಲಿಯನ್ನರ ಚಿತ್ರಣಕ್ಕೆ ಬಹುಶಃ ಅವರ ಅನುಭವದ ತನ್ನ ಸ್ವಂತದ ತಿಳುವಳಿಕೆಯನ್ನು ಪ್ರಸ್ತುತಪಡಿಸಿದ ಇಟ್ಯಾಲಿಯನ್ ಅಮೇರಿಕನ್ ನಿರ್ದೇಶಕರು ಕಾರಣವೆಂದು ಹೇಳಬಹುದು. ಈ ಚಲನಚಿತ್ರಗಳು ಅವುಗಳ ಕ್ರಿಯೆಯ ಮೂಲಕ ಅಮೇರಿಕದ ಸಮಾಜದೊಳಗೆ ಕಾಲ್ಪನಿಕ ಇಟ್ಯಾಲಿಯನ್ ಅಮೇರಿಕನ್ ಅಪರಾಧಿಗಳ ಸಮನ್ವಯವನ್ನು ವಿವರಿಸುತ್ತವೆ. ಕೆಲವು ವಿಮರ್ಶಕರು ಕೊರ್ಲಿಯೋನಿ ಕಥೆಯನ್ನು ಒಳವಲಸೆಯ ಸಾರ್ವತ್ರಿಕತ್ವದ ಕಥೆಯೊಳಗೆ ಮರುರೂಪಿಸಿದ್ದಾರಾದರೂ, ಇದು ಪ್ರೇಕ್ಷಕನು ಸಂಘಟಿತ ಅಪರಾಧವನ್ನು ಇಟ್ಯಾಲಿಯನ್ ಅಮೇರಿಕನ್ ಸಂಸ್ಕೃತಿಯೊಂದಿಗೆ ಗುರುತಿಸಲು ದಾರಿತೋರುತ್ತದೆ ಎಂದು ಇತರ ವಿಮರ್ಶಕರು ಪ್ರತಿಪಾದಿಸಿದ್ದಾರೆ. ತೀವ್ರ ರಾಷ್ಟ್ರೀಯ ಸಿನಿಕತೆ ಮತ್ತು ಆತ್ಮವಿಮರ್ಶೆಯ ಅವಧಿಯಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ವಲಸಿಗರ ರಾಷ್ಟ್ರದಲ್ಲಿ ಅಂತರ್ಗತವಾಗಿರುವ ಉಭಯ ಗುರುತುಗಳ ಬಗ್ಗೆ ಸಹಾನುಭೂತಿಯನ್ನು ಗಳಿಸಿತು.[೨೯] ಚಲನಚಿತ್ರದ ಪರಿಣಾಮವಾಗಿ ದ ಗಾಡ್‍ಫ಼ಾದರ್ ವಲಸೆಬಂದ ಇಟ್ಯಾಲಿಯನ್ನರ ನಕಾರಾತ್ಮಕ ಚಿತ್ರಣವನ್ನು ಹಾಲಿವುಡ್‍ನಲ್ಲಿ ಹೆಚ್ಚಿಸಿತು ಮತ್ತು ಸಂಘಟಿತ ಅಪರಾಧಕ್ಕೆ ನೇಮಕಮಾಡಿಕೊಳ್ಳುವ ಸಾಧನವಾಗಿತ್ತು.[೩೦]

ಡಾನ್ ವಿಟೊ ಕೊರ್ಲಿಯೋನಿಯ ಮರೆಯಲಾಗದ ವಾಕ್ಯ "ನಾನು ಅವನು ನಿರಾಕರಿಸಲಾಗದಂಥ ಪ್ರಸ್ತಾಪವನ್ನು ಮಾಡುವೆನು"—ಎರಡನೇ ಅತ್ಯಂತ ಸ್ಮರಣೀಯ ಸಾಲು ಎಂದು ಅನುಮೋದಿತವಾಯಿತು—[೩೧] ಮತ್ತು ಸಾಲನ್ನು ನೈಜ ಕಳ್ಳಕೂಟಿಗರು ಅಳವಡಿಸಿಕೊಂಡರು.

ನಿಜ-ಜೀವನದ ಕಳ್ಳಕೂಟಿಗರು ಚಲನಚಿತ್ರಕ್ಕೆ ಉತ್ಸಾಹದಿಂದ ಪ್ರತಿಕ್ರಿಯಿಸಿದರು, ಮತ್ತು ಅನೇಕರಿಗೆ ಅದು ಅವರು ಹೇಗೆ ಕಾರ್ಯನಿರ್ವಹಿಸಬೇಕೆಂಬುದರ ಚಿತ್ರಣವಾಗಿತ್ತು ಎಂದು ಅನಿಸಿತು.[೩೨]

ಉಲ್ಲೇಖಗಳು[ಬದಲಾಯಿಸಿ]

  1. "THE GODFATHER (18)". British Board of Film Classification. May 31, 1996. Archived from the original on April 28, 2016. Retrieved April 15, 2016.
  2. ಉಲ್ಲೇಖ ದೋಷ: Invalid <ref> tag; no text was provided for refs named BoxOffice
  3. Allan, John H. (April 17, 1972). "'Godfather' gives boost to G&W profit picture". Milwaukee Journal. (New York Times). p. 16, part 2. Archived from the original on November 21, 2018. Retrieved July 19, 2018.
  4. ೪.೦ ೪.೧ Allan, John H. (April 16, 1972). "Profits of 'The Godfather'". The New York Times (in ಇಂಗ್ಲಿಷ್). Archived from the original on September 10, 2018. Retrieved September 10, 2018.
  5. "The Godfather, Box Office Information". Box Office Mojo. Archived from the original on January 28, 2012. Retrieved January 21, 2012.
  6. Gambino, Megan (January 31, 2012). "What is The Godfather Effect?". Smithsonian (in ಇಂಗ್ಲಿಷ್). Archived from the original on September 10, 2018. Retrieved September 10, 2018.
  7. ೭.೦೦ ೭.೦೧ ೭.೦೨ ೭.೦೩ ೭.೦೪ ೭.೦೫ ೭.೦೬ ೭.೦೭ ೭.೦೮ ೭.೦೯ ೭.೧೦ Jones 2007.
  8. ೮.೦ ೮.೧ ೮.೨ Lebo 2005.
  9. ೯.೦ ೯.೧ ೯.೨ ೯.೩ ೯.೪ Mark Seal (March 2009). "The Godfather Wars". Vanity Fair. Archived from the original on July 14, 2014. Retrieved July 15, 2014.
  10. ೧೦.೦ ೧೦.೧ Welsh, Phillips & Hill 2010.
  11. ""The Godfather" Turns 40". CBS News. March 15, 2012. Archived from the original on July 17, 2014. Retrieved July 15, 2014.
  12. Horne, Philip (September 22, 2009). "The Godfather: 'Nobody enjoyed one day of it'". The Daily Telegraph. Archived from the original on September 24, 2009. Retrieved July 15, 2014.
  13. ""The Godfather" Turns 40". CBS News. March 15, 2012. Archived from the original on July 17, 2014. Retrieved July 15, 2014.
  14. ೧೪.೦ ೧೪.೧ ೧೪.೨ Phillips 2004.
  15. Hearn, Marcus (2005). The Cinema of George Lucas. New York City: Harry N. Abrams Inc. p. 46. ISBN 978-0-8109-4968-3.
  16. Santopietro 2012.
  17. ೧೭.೦ ೧೭.೧ Italie, Hillel (December 24, 1990). "'Godfather' films have their own saga". p. A7. Retrieved July 15, 2014.
  18. ೧೮.೦೦ ೧೮.೦೧ ೧೮.೦೨ ೧೮.೦೩ ೧೮.೦೪ ೧೮.೦೫ ೧೮.೦೬ ೧೮.೦೭ ೧೮.೦೮ ೧೮.೦೯ Lebo 1997.
  19. Williams 2012.
  20. ""The Godfather" Turns 40". CBS News. March 15, 2012. Archived from the original on July 16, 2014. Retrieved July 15, 2014.
  21. ೨೧.೦ ೨೧.೧ ೨೧.೨ Cowie 1997.
  22. ""The Godfather" Turns 40". CBS News. March 15, 2012. Archived from the original on July 16, 2014. Retrieved July 15, 2014.
  23. "Sofia Coppola Mimics Hollywood Life in 'Somewhere'". NPR. December 20, 2010. Archived from the original on June 26, 2013. Retrieved July 15, 2014.
  24. ೨೪.೦ ೨೪.೧ Block & Wilson 2010.
  25. "The Godfather (1972) – Notes". Turner Classic Movies. Archived from the original on October 29, 2013. Retrieved July 16, 2014.
  26. Jacobs, Diane (1980). Hollywood Renaissance. Dell Publishing. p. 115. ISBN 978-0-440-53382-5. The Godfather catapulted Coppola to overnight celebrity, earning three Academy Awards and a then record-breaking $142 million in worldwide sales
  27. "All Time Box Office Adjusted for Ticket Price Inflation". Box Office Mojo. Archived from the original on May 4, 2009. Retrieved November 20, 2012.
  28. "An Offer Hollywood Can't Refuse". CBS News. March 4, 2005. Archived from the original on December 20, 2007.
  29. "The Godfather: A Cultural Phenomenon". University of Pennsylvania. 2005. Archived from the original on October 7, 2008.
  30. Gambino, Megan (January 31, 2012). "What is The Godfather Effect?". Smithsonian. Archived from the original on April 23, 2013. Retrieved May 18, 2013.
  31. "AFI's 100 Years... 100 Movie Quotes". American Film Institute. Archived from the original on July 2, 2014. Retrieved July 15, 2014.
  32. Sifakis, Carl (1987). The Mafia Encyclopedia. New York City: Facts on File. ISBN 978-0-8160-1856-7.

ಗ್ರಂಥಸೂಚಿ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]