ದೊಡ್ಡತೋಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದೊಡ್ಡತೋಟ (Doddathota)
—  ಸ್ಥಳ  —
ದೊಡ್ಡತೋಟ (Doddathota) is located in Karnataka
ದೊಡ್ಡತೋಟ (Doddathota)
ದೊಡ್ಡತೋಟ (Doddathota)
ಕರ್ನಾಟಕದ ನಕ್ಷೆಯಲ್ಲಿ ದೊಡ್ಡತೋಟ
ರೇಖಾಂಶ: 12°35′49″N 75°26′38″E / 12.59694°N 75.44389°E / 12.59694; 75.44389Coordinates: 12°35′49″N 75°26′38″E / 12.59694°N 75.44389°E / 12.59694; 75.44389
ದೇಶ ಭಾರತ
ರಾಜ್ಯ ಕರ್ನಾಟಕ
ಪ್ರದೇಶ ತುಳುನಾಡು
ಜಿಲ್ಲೆ ದಕ್ಷಿಣ ಕನ್ನಡ
ಸರ್ಕಾರ
 - ಶಾಸಕರು ಎಸ್ ಅಂಗಾರ


ಇದು ಸುಳ್ಯದಿಂದ ಸುಮಾರು ೧೨ ಕಿ ಮೀಗಳಷ್ಟು ದೂರದಲ್ಲಿದೆ.ಜಾಲ್ಸೂರು-ಸುಬ್ರಹ್ಮಣ್ಯ ರಾಜ್ಯ ರಸ್ತೆಯ ಮೂಲಕ ಇಲ್ಲಿಗೆ ತಲುಪಬಹುದು. ಇಲ್ಲಿ ವಿಜಯಾ ಬ್ಯಾಂಕ್, ಉಪ ಅಂಚೆ ಕಛೇರಿ, ದೂರವಾಣಿ ವಿನಿಮಯ ಕೇಂದ್ರಗಳಿವೆ. ಇದನ್ನು ಮರ್ಕಂಜದ ಹೆಬ್ಬಾಗಿಲು ಎಂದೂ ಕರೆಯಲಾಗುತ್ತದೆ. ಇಲ್ಲಿಂದ ಮರ್ಕಂಜಕ್ಕೆ ಸರ್ವಋತು ರಸ್ತೆ ವ್ಯವಸ್ಥೆಯಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ಇದು ಸುತ್ತ ಮುತ್ತಲಿನ ಗ್ರಾಮಗಳ ಹೆಬ್ಬಾಗಿಲಾಗಿದೆ. ಇದರ ಮೂಲಕ ಕುಕ್ಕುಜಡ್ಕ- ಕಲ್ಮಡ್ಕ- ಪಾಜಪಳ್ಳ ವನ್ನು ಸೇರಿಸುತ್ತದೆ. ಇಲ್ಲಿ ಸರಕಾರೀ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಿದ್ದು ಸುಮಾರು ೨೫೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಡಾ| ಪಿ ವಿ ಎಸ್ ರಾವ್ ಹಾಗೂ ಡಾ| ಜೆ ಪಿ ಪಾರೆಯವರ ಕ್ಲಿನಿಕ್ ಗಳಿದ್ದು ಜನರಿಗೆ ಸೇವೆ ನೀಡುತ್ತಿವೆ.ಒಂದು ಅಂಗನವಾಡಿ ಕೇಂದ್ರ ಹಾಗೂ ಒಂದು ಭಜನಾ ಮಂದಿರವೂ ಈ ಊರಿನಲ್ಲಿದೆ. ಇದು ಅಮರಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದೆ. ಶ್ರೀಯುತ ಕಲ್ಚಾರು ವೆಂಕಟ್ರಮಣಯ್ಯ ಅವರನ್ನು ದೊಡ್ಡತೋಟದ ನಿರ್ಮಾತೃ ಎಂದು ಕರೆಯಬಹುದು. ಈಗ ದೊಡ್ಡತೋಟದ ಜನರು ಅನುಭವಿಸುವ ಸುಖದ ಹಿಂದೆ ಅವರ ಪರಿಶ್ರಮವಿದೆ. ಇಲ್ಲಿ ಚೊಕ್ಕಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖೆಯಿದೆ. ಉದ್ಭವ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃಧ್ಧಿ ಪ್ರತಿಷ್ಠಾನದ ಕಛೇರಿಯಿದೆ.ಇಲ್ಲಿನ ಜನರು ಕೃಷಿಕರು.ಇವರು ಮುಖ್ಯವಾಗಿ ಅಡಿಕೆ, ತೆಂಗು, ಬಾಳೆ, ರಬ್ಬರ್, ಕೊಕ್ಕೋ, ಕರಿಮೆಣಸುಗಳನ್ನು ಬೆಳೆಯುತ್ತಾರೆ. ಇಲ್ಲಿ ಮುಂದುವರಿಕಾ ಶಿಕ್ಷಣ ಕೇಂದ್ರವು ಇದ್ದು ನವ ಸಾಕ್ಷರರಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಸ್ವಸಹಾಯ ಗುಂಪುಗಳಿದ್ದು ಜನ ಸಾಮಾನ್ಯರ ಏಳಿಗೆಯತ್ತ ಸಹಕರಿಸುತ್ತಿದೆ.

"https://kn.wikipedia.org/w/index.php?title=ದೊಡ್ಡತೋಟ&oldid=703299" ಇಂದ ಪಡೆಯಲ್ಪಟ್ಟಿದೆ