ವಿಷಯಕ್ಕೆ ಹೋಗು

ದಿ ಡ ವಿಂಚಿ ಕೋಡ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Da Vinci Code
ಚಿತ್ರ:The da vinci code.jpg
Teaser poster
ನಿರ್ದೇಶನRon Howard
ನಿರ್ಮಾಪಕBrian Grazer
Ron Howard
John Calley
ಲೇಖಕAkiva Goldsman
Dan Brown (Novel)
ಪಾತ್ರವರ್ಗTom Hanks
Audrey Tautou
Ian McKellen
Alfred Molina
Jürgen Prochnow
Paul Bettany
Jean Reno
ಸಂಗೀತHans Zimmer
ಛಾಯಾಗ್ರಹಣSalvatore Totino
ಸಂಕಲನDaniel P. Hanley
Mike Hill
ಸ್ಟುಡಿಯೋImagine Entertainment
ವಿತರಕರುColumbia Pictures
ಬಿಡುಗಡೆಯಾಗಿದ್ದುಮೇ 19, 2006 (2006-05-19)
ಅವಧಿ149 minutes
ದೇಶUnited States
ಭಾಷೆEnglish
French
Spanish
Latin
ಬಂಡವಾಳ$125 million
ಬಾಕ್ಸ್ ಆಫೀಸ್$758,239,851[೧]

ದಿ ಡ ವಿಂಚಿ ಕೋಡ್ 2006ರಲ್ಲಿನ ರಹಸ್ಯ ,ರೋಮಾಂಚಕಾರಿಯಾದ ಅಮೆರಿಕಾಚಲನಚಿತ್ರ.ಇದನ್ನುರೊನ್ ಹೌವರ್ಡ್ ನಿರ್ದೇಶಿಸಿದ್ದಾರೆ. ಇದರ ಚಿತ್ರ ಕಥೆಯನ್ನು ಅಕಿವಾ ಗೊಲ್ಡ್ಸಮನ್ ಬರೆದಿದ್ದು,ಡಾನ್ ಬ್ರೌನ್ ಅವರ ವಿಶ್ವ ವಿಖ್ಯಾತ ಕಾದಂಬರಿ,2003ರಲ್ಲಿ ಅತ್ಯುತ್ತಮ ಮಾರಾಟ ಕಂಡ ದಿ ಡ ವಿಂಚಿ ಕೋಡ್ ನ್ನು ಆಧರಿಸಿದೆ. ಇದು ಹೌವರ್ಡ್ ಅವರ ನಿರ್ಮಾಣದಲ್ಲಿ ಅವರೊಂದಿಗೆ ಜೊನ್ ಕ್ಯಾಲ್ಲಿ ಮತ್ತು ಬ್ರೇನ್ ಗ್ರೇಜರ್ ಕೈಗೂಡಿಸಿದ್ದಾರೆ.ಕೊಲಂಬಿಯಾ ಪಿಕ್ಚರ್ಸ್ ಅವರು ಬಿಡುಗಡೆ ಮಾಡಿದ್ದಾರೆ.ಯುನೈಟೆಡ್ ಸ್ಟೇಟ್ಸ್ ನಲ್ಲಿ ಮೇ 19,2006ರಲ್ಲಿ ಬಿಡುಗಡೆಯಾಯಿತು.

ದಿ ಡ ವಿಂಚಿ ಕೋಡ್ ನಲ್ಲಿ ಟಾಮ್ ಹ್ಯಾಂಕ್ಸ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಜ್ಞಾಶಾಸ್ತ್ರಜ್ಞ ರಾಗಿ ರೊಬರ್ಟ್ ಲ್ಯಾಂಗ್ ಡೊನ್ ,ಔಡ್ರಿ ಟೌಟೊ ಅವರು ಸುಂದರ ಲಿಪಿಗಾರನಾಗಿ ಸೊಫಿ ನ್ಬೆವ್ಯುಫ್ರಾನ್ಸನ ,ಪೊಲಿಸ್ ಕೇಂದ್ರದ ಉಸ್ತುವಾರಿಯಾಗಿ of ಸರ್ ಇವಾನ್ ಮೆಕೆಲ್ಲಿನ್ as ಬ್ರಿಟಿಶ್ ಕ್ರಿಸ್ತನ ರಕ್ತದ ಬಟ್ಟಲು ಇತಿಹಾಸಕಾರ ಸರ್ ಲೇಘ್ ಟೀಬಿಂಗ್ , ಅಲ್ಫ್ರೆಡ್ ಮೊಲಿನಾ ಒಬ್ಬ ಬಿಶಪ್ ನಾಗಿ ಮ್ಯಾನುವಲ್ ಅರಿಂಗ್ ರೊಸಾ , ಜೀನ್ ರೆನೊ ಒಬ್ಬ ಹಡಗಿನ ಕಪ್ತಾನನಾಗಿ ಬೆಜು ಫೆಚೆ ಯು ಒಬ್ಬ ಡೈರೆಕ್ಷನ್ ಸೆಂಟ್ರೇಲ್ ಡೆ ಲಾ ಪೊಲಿಸ್ ಜುಡಿಸಿಯರಿ , ಮತ್ತು ಪೌಲ್ ಬೆಟ್ಟನಿ ಯು ಒಬ್ಬ ಒಪಸ್ ಡ್ಯಿ ಸನ್ಯಾಸಿ ಸಿಲಾಸ್ .ಹೀಗೆ ಪಾತ್ರ ವರ್ಗ ಬೆಳೆಯುತ್ತದೆ.

ದಿ ಡ ವಿಂಚಿ ಡ ಕೋಡ್ 2006ರ ಕ್ಯಾನ್ನಿಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮೇ 17ರಲ್ಲಿ ಮೊದಲ ಪ್ರದರ್ಶನ [೨] ಕಂಡಿತು. ದಿ ಡ ವಿಂಚಿ ಕೋಡ್ ಮೇ 18,2006ರಲ್ಲಿ ಹಲವಾರು ದೇಶಗಳಲ್ಲಿ ಬಿಡುಗಡೆಯಾಯಿತಲ್ಲದೇ ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೊಲಂಬಿಯಾ ಪಿಕ್ಚರ್ ನವರ ಮೂಲಕ ಬಿಡುಗಡೆಯಾಯಿತು.

ವಿವಾದಾತ್ಮಕ ಮತ್ತು ನಿಖರವಲ್ಲದ ಐತಿಹಾಸಿಕ ವ್ಯಾಖ್ಯಾನಗಳಿಂದಾಗಿ ಮತ್ತು ಕ್ಯಾಥೊಲಿಕ್ ವಿರೋಧಿ ಅಂಶಗಳನ್ನು ಒಳಗೊಂಡಿದೆ ಎನ್ನುವ ಪಕಾರು ಎದ್ದಿತು.ಈ ಸಿನೆಮಾ ವಿವಾದಂತೆ ಡಾನ್ ಬ್ರೌನ್ ಕಾದಂಬರಿ ಕೂಡಾ ರೊಮನ್ ಕ್ಯಾಥೊಲಿಕ್ ಚರ್ಚ್ ನವರು ಕಟುವಾಗಿ ಟೀಕಿಸಿತು.[೩] ಕೆಲವು ಚರ್ಚ್ ಸದಸ್ಯರು ಜನಸಾಮಾನ್ಯರು ಈ ಚಲನಚಿತ್ರವನ್ನು ಬಹಿಷ್ಕರಿಸಬೇಕೆಂದು ಮನವಿ [೩] ಮಾಡಿದರು. ಅದರ ಪ್ರಾರಂಭಿಕ ಪ್ರದರ್ಶನಗಳು ಪ್ರತಿಭಟಿಸಲ್ಪಟ್ಟವು,ಮೊದಲ ಟೀಕಾಕಾರರು ಇದನ್ನು ಋಣಾತ್ಮಕವಾಗಿಯೇ ಪರಿಗಣಿಸಿದರು. ವಾದ-ವಿವಾದಗಳ ಪ್ರಕಾರ ಈ ಪ್ರತಿಕ್ರಿಯೆಗಳು ಸಣ್ಣ ಪ್ರಮಾಣದ ಋಣಾತ್ಮಕವನ್ನಲ್ಲದೇ ಬಾಕ್ಸ್ ಆಫಿಸ್ ನಲ್ಲಿಯೂ ಪರಿಣಾಮವಾಗಿತು.ದಿ ಡ ವಿಂಚಿ ಕೋಡ್ ಅತಿ ಹೆಚ್ಚು ಗಳಿಕೆ ಅಂದರೆ $230 ದಶಲಕ್ಷ ಡಾಲರ್ ನ್ನು ಪ್ರಾರಂಭದ ವಾರದಲ್ಲಿ ಆಗಿದ್ದಿದೆ.ಇಡೀ ಚಲನಚಿತ್ರ ಇತಿಹಾಸದಲ್ಲೇ ವಾರಾಂತ್ಯದಲ್ಲಿ ತೆರೆ ಕಂಡ ಮೂರನೆಯ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ. ಸದ್ಯ ಇದು ಏಳನೆಯ ಅತಿ ದೊಡ್ಡ ಆರಂಭಿಕ ಗಳಿಕೆಯ ಚಲನಚಿತ್ರವಾಗಿದೆ. ವಿಶ್ವಾದ್ಯಂತ ಅತಿ ಒಟ್ಟಾರೆ ಆದಾಯ ಗಳಿಕೆಯ ಎರಡನೆಯ ಅತಿ ದೊಡ್ಡ 2006ರಲ್ಲಿನ ಚಿತ್ರವೆನಿಸಿದೆ.ನವೆಂಬರ್ 2,2006ರಲ್ಲಿ$$758,239,851 ಆದಾಯಕ್ಕೆ ಮಾದರಿಯಾಗಿದೆ. ಅದೇ ಸಮಯದಲ್ಲಿ ನಿರ್ದೇಶಕ ರೊನ್ ಹೌವರ್ಡ್ ಮತ್ತು ನಟ ಟಾಮ್ ಹ್ಯಾಂಕ್ಸ್ ಅವರು ಈ ಹಿಂದೆ ಎರಡು ಚಿತ್ರಗಳಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ,1984ರಲ್ಲಿ ಸ್ಪ್ಲಾಶ್ ಮತ್ತು 1995ರಲ್ಲಿ ಅಪೊಲೊ 13 . ದಿ ಡ ವಿಂಚಿ ಕೋಡ್ ನ ಆರಂಭಿಕ ನಿರ್ಮಾಣ ಪ್ರಸಂಗದಲ್ಲಿ ಅದರ ಯಶಸ್ವಿಗಾಗಿ ಅವರ ಕೊಡುಗೆ,ಎಂಜೆಲ್ಸ್ &ಡೆಮೊನ್ಸ್ ಗಾಗಿ ಮುಂದಾಲೋಚನೆಗಳು ತೀವ್ರ ಪ್ರಮಾಣದ್ದಾಗಿದ್ದವು.ಇನ್ನುಡಾನ್ ಬ್ರೌನ್ ನ ಮೂರನೆಯ ಪುಸ್ತಕವನ್ನು ಆಧರಿಸಿ ಇನ್ನೊಂದು ಚಲನಚಿತ್ರ ತಯಾರಿಕೆಗೆ ಅವರು ಮುಂದಾಗಿದ್ದಾರೆ.ಆತನ ರಾಬರ್ಟ್ ಲ್ಯಾಂಗ್ ಡೊನ್ ,ಟ್ರೈಲೊಜಿ (ಮೂರು ಚಕ್ರ ಸರಣಿ),ಮತ್ತುದಿ ಲಾಸ್ಟ್ ಸಿಂಬಾಲ್ . ದಿ ಡ ವಿಂಚಿ ಕೋಡ್ ಚಿತ್ರವು ಅವರಿಬ್ಬರ ಅತ್ಯಂತ ಯಶಸ್ವಿ ಕೊಡುಗೆಯಾಗಿದ್ದು ಆದರೆ ಹಣದುಬ್ಬರಕ್ಕೆ ಹೊಂದಾಣಿಕೆಯಾಗದಂತಹದ್ದು ಎಂದು [೪] ಪರಿಗಣಿಸಲಾಗುತ್ತದೆ.

ಚಿತ್ರದ ಸಂಗೀತದ ಧ್ವನಿ ಪಥವನ್ನು ಹ್ಯಾನ್ಸ್ ಜಿಮ್ಮರ್ ಸಂಯೋಜಿಸಿದ್ದಾರೆ. ಇದನ್ನು ಬೆಸ್ಟ್ ಒರಿಜಿನಲ್ ಸ್ಕೊರ್ ಗಾಗಿ 2007ರ ಗೊಲ್ಡನ್ ಗ್ಲೋಬ್ ಅವಾರ್ಡ್ ಗಾಗಿ ನಾಮನಿರ್ದೇಶನ ಮಾಡಲಾಯಿತು.

ಕಥಾವಸ್ತು[ಬದಲಾಯಿಸಿ]

ಜಾಕ್ವೆಸ್ ಸೌನಿಯರ್ ಎಂಬ ಮನುಷ್ಯ ಒಂದು ರಹಸ್ಯ ಪಾತ್ರದ ಬೆನ್ನಟ್ಟುತ್ತಾನೆ,ಇದು ಸಿಲಿಯಾಸ್ ಪಾತ್ರ ಇದರ ಉಗಮ ಪ್ಯಾರಿಸ್ ನಲ್ಲಿನ ಲೌವ್ರೆಯಲ್ಲಿನ ಗ್ರ್ಯಾಂಡ್ ಗ್ಯಾಲರಿಯಲ್ಲಾಗುತ್ತದೆ. ಸಿಲಿಯಾಸ್ ಪ್ರೈಯೊರಿಯ(ಮಠ ಮಾನ್ಯದ) ಜಾಗವನ್ನು ಅಂದರೆ ಕ್ಲೆಫ್ ಡೆ ವೊಟೆ "ಪ್ರಮುಖ ಗುರುತು-ಕಲ್ಲು"ನ್ನು ಬೇಡಿಕೆಯೊಡ್ಡುತ್ತಾನೆ. ಕೊನೆಯಲ್ಲಿ ಸೌನೆಯರೆ ಹೆದರಿಕೆಯಿಂದಾಗಿ ಈ ಪ್ರಮುಖ ಕಲ್ಲನ್ನು ಚರ್ಚ್ ಆಫ್ ಸೇಂಟ್ ಸಲ್ಪೈಸ್ ,ಅಂದರೆ "ಕಮಲದಡಿಯಲ್ಲಿ"ಇಡಲಾಗಿದ್ದನ್ನು ಒಪ್ಪಿಕೊಳ್ಳುತ್ತಾನೆ. ಸಿಲಾಸ್ ಆತನನ್ನು ಅಭಿನಂದಿಸುತ್ತಾನೆ,ಅಲ್ಲದೇ ಆತನ ಹೊಟ್ಟೆಗೆ ಗುಂಡಿಟ್ಟು ಸಾಯಿಸುತ್ತಾನೆ.

ಅದೇ ಸಂದರ್ಭದಲ್ಲಿ ಸಂಜ್ಞಾಶಾಸ್ತ್ರಜ್ಞ ರೊಬರ್ಟ್ ಲ್ಯಾಂಗ್ ಡೊನ್ ಮತ್ತು ಟೊಮ್ ಹ್ಯಾಂಕ್ಸ್ ಅವರುAUPನ ಅಥಿತಿ ಸಂಜ್ಞಾಶಾಸ್ತ್ರ ಮತ್ತು ಪವಿತ್ರ ಸ್ತ್ರೀ ಕುರಿತ ಉಪನ್ಯಾಸಕರಾಗಿ ಪ್ಯಾರಿಸ್ಸಿಗೆ ಬಂದಿರುತ್ತಾರೆ.ಅವರನ್ನು ಈ ಹತ್ಯೆ ಅಪರಾಧ ನಡೆದ ಸ್ಥಳಕ್ಕೆ ಫೆಂಚ್ ಪೊಲಿಸರು ಲೌವ್ರೆಗೆ ಹೋಗುವಂತೆ ಸೂಚಿಸುತ್ತಾರೆ. ಸಾಯುತ್ತಿದ್ದ ಸೌನೆಯರ್ ತನ್ನ ದೇಹ,ತಿಳಿ ಕಪ್ಪು ಬಣ್ಣ ಮತ್ತು ರಕ್ತ ಉಪಯೋಗಿಸಿದ ಗೋಜುಗೋಜಲಾದ ಆಕಾರವನ್ನು ಸೃಷ್ಟಿಸಿರುವುದನ್ನು ಆತ ಪತ್ತೆಹಚ್ಚುತ್ತಾನೆ. ಕಪ್ತಾನ ಬೆಜು ಫೆಚೆ ಜೀನ್ ರೆನೊ ಆತನನ್ನು ಈ ಗಾಢವಾದ ವಿಚಾರದ ಬಗ್ಗೆ ಅರ್ಥ ಹೇಳುವಂತೆ ಕೇಳುತ್ತಾನೆ.

ಸಿಲಾಸ್ ಹೇಳುವಂತೆ ಒಬ್ಬ ಅಸ್ಪಷ್ಟ ಈ ಮನುಷ್ಯ "ದಿ ಟೀಚರ್ " ,ಅಲ್ಲದೇ ಪ್ರಮುಖ ಕಲ್ಲನ್ನು ಕಾಯುವ ನಾಲ್ವಾನ್ನೂ ಆತ ಕೊಂದಿರುತ್ತಾನೆ ಎಂದು ಆತ ಗುಟ್ಟು ಹೊರಗೆಡುವುತ್ತಾನೆ,ಇವರೆಲ್ಲರೂ ಒಂದೇ ಸ್ಥಳದಲ್ಲಿದ್ದರು ಎಂದು ವಿಶ್ಲೇಷಿಸುತ್ತಾನೆ. ಆತ ಲೋಹದ ರೋಮದ ದಿರಸನ್ನು ತನ್ನ ತೊಡೆಯ ಮೇಲೆ ಧರಿಸಿರುತ್ತಾನೆ.ನಂತರ ತನ್ನ ಕೊಲೆಯ ಪಶ್ಚಾತ್ತಾಪಕ್ಕಾಗಿ ತಾನೇ ಚಾವಟಿ ಏಟಿನಿಂದ ಬೀಸಿಕೊಳ್ಳುತ್ತಾನೆ ಬಿಶಪ್ ಮ್ಯಾನ್ಯುವಲ್ ಅರಿಂಗಾರೊಸಾ ಅವರಿಂದ ಅಭಿನಂದಿಸಲ್ಪಟ್ಟು ಸಿಲಾಸ್ ಸೇಂಟ್ -ಸಲ್ಪೈಸ್ ಗೆ ಪಯಣಿಸುತ್ತಾನೆ.ನಂತರ ಆತ ಹಿರಿಯ ಕ್ರೈಸ್ತ ಸನ್ಯಾಸಿಯಲ್ಲಿ ಉಳಿದುಕೊಳ್ಳುತ್ತಾನೆ;ಏಕಾಂಗಿ,ಆತ ಚರ್ಚ್ ನ ಕೆಳಭಾಗದಲ್ಲಿ ಅಗೆದು JOB 38:11 ಎಂಬ ಕಲ್ಲನ್ನು ಹೊರತೆಗೆಯುತ್ತಾನೆ. "ಆತ ಹಿರಿಯ ಸನ್ಯಾಸಿನಿಯ ಅಭಿಮುಖವಾಗಿ ನಿಲ್ಲುತ್ತಾನೆ,ಈ ಉವಾಚ ಆಗ ಬರುತ್ತದೆ:"ಹೀದರ್ ಟು ಶಾಲ್ಟ್ ದೌ ಕಮ್ ಬಟ್ ನೊ ಫರ್ದರ್ "(ಇಲ್ಲಿವರೆಗೆ ಮಾತ್ರ ದೇವರ ಪರವಾನಿಗೆ ಇದೆ ಮುಂದೆ ಇಲ್ಲ) ತಾನು ಮೋಸಹೋದನೆಂಬುದನ್ನು ಅರಿತ ಸಿಲಾಸ್ ಕೋಪದಿಂದ ಸನ್ಯಾಸಿನಿಯನ್ನು ಕೊಲ್ಲುತ್ತಾನೆ.

ಸೊಫಿ ನೆವೆಯು ಔಡ್ರೆಯ್ ಟೌಟೊ,ಒಬ್ಬ ಗೂಢಲಿಪಿಶಾಸ್ತ್ರಜ್ಞ ಫ್ರೆಂಚ್ ಪೊಲಿಸ್ ರೊಂದಿಗೆ ಪ್ರವೇಶಿಸಿದ ಲೌವ್ರೆಗೆ, ಆಗ ಸಣ್ಣ ಮಾಹಿತಿಯನ್ನು ಲ್ಯಾಂಗ್ ಡೊನ್ ಬಿಟ್ಟುಹೋದದ್ದು ಗೊತ್ತಾಗುತ್ತದೆ.ಅಲ್ಲದೇ ಆ ದಾರಿಯು ಪುರುಷರಿರುವ ಕೊಠಡಿಗೆ ಆತನನ್ನು ಕೊಂಡೊಯ್ಯುತ್ತದೆ. ಅಲ್ಲಿ ಸೊಫಿ ಆತನನ್ನು ಭೇಟಿಯಾಗಿ ತನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ,ಯಾರೊ ಅಪರಿಚಿತರು ತನ್ನ ಜಾಕೆಟ್ ನಲ್ಲಿ ಸ್ಲಿಪ್ ವೊಂದನ್ನು ಬಿಟ್ಟಿದ್ದನ್ನು ವಿವರಿಸುತ್ತಾನೆ.ಹೀಗಾಗಿ ಆತನನ್ನು ಕೊಲೆಯಲ್ಲಿ ಪ್ರಾಥಮಿಕ ಸಂಶಯಿತ ವ್ಯಕ್ತಿಎಂದು ಹೇಳಲಾಗುತ್ತದೆ.("ಪಿ.ಎಸ್ ರಾಬರ್ಟ್ ಲ್ಯಾಂಗ್ ಡೊನ್ ಅಲ್ಲಿ ಸಿಗುತ್ತಾನೆ") ಸೊಫಿ ನಂಬಿಗೆಯಂತೆ ಸೌನೆಯೆರೆಯು ತನ್ನ ಮೊಮ್ಮಗಳು ಸಣ್ಣ ರಹಸ್ಯವೊಂದನ್ನು ನೀಡಲು ಸಿದ್ದಳಾಗಿದ್ದಳು.ಹೀಗೆ ಲ್ಯಾಂಗ್ ಡೊನ್ ನನ್ನು ಇಲ್ಲಿಗೆ ತಂದು ಇದರ ರಹಸ್ಯವನ್ನು ಭೇದಿಸಲು ಆತನ ಸಹಾಯಕ್ಕಾಗಿ ಯತ್ನಿಸಲಾಗುತಿತ್ತು.

ಭೇಧಿಸುವ ಸಲಕರಣೆಯನ್ನು ತೆಗೆದು ಈ ಜೋಡಿಯು,ಲೌವ್ರೆಯನ್ನು ಭೇಧಿಸಲು ಆರಂಭಿಸಿತು.ಸೌನೆರೆ ಹಿಂದೆ ಬಿಟ್ಟು ಹೋದ ರೇಖಾಚಿತ್ರದ ಅನಾಗ್ರಮ್ ಸಂದೇಶವನ್ನು ಹುಡುಕಲು ಆರಂಭಿಸಲಾಯಿತು. ಇವುಗಳಲ್ಲಿ ಬಹುತೇಕವುಗಳು ಲಿಯಿನಾರ್ಡೊ ಡ ವಿಂಚಿಯ ಕಲೆಗೆ ಸಂಬಂಧಪಟ್ಟಿದ್ದವು,ನಂತರ ಈ ಜೋಡಿಗೆ ಮಡೊನ್ನಾ ಆಫ್ ರಾಕ್ಸ್ ಹಿಂದುಗಡೆ ಫ್ಲೆಯರ್ -ಡೆ-ಲಿಸ್ ಯೊಂದಿಗೆ ಕೀಲಿಕೈ ದೊರೆಯುತ್ತದೆ.

ಫ್ರೆಂಚ್ ಪೊಲಿಸ್ ರಿಂದ ಬೆನ್ನಟ್ಟಿ ಮತ್ತು ಯುನೈಟೆಡ್ ಸ್ಟೇಟ್ಸ್ ಎಂಬೆಸ್ಸಿಯಿಂದ ಈ ಜೋಡಿ ಬೊಯಿಸ್ ಡೆ ಬೌಲೊಗ್ನೆ ಗೆ ಪರಾರಿಯಾಗುತ್ತದೆ,ಅಲ್ಲಿ ಲ್ಯಾಂಗ್ ಡೊನ್ ಆ ಕೀಲಿಕೈಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಾನೆ. ಅದರಲ್ಲಿ ಒಂದು ಬದಿಯಲ್ಲಿ ಕೆಲವು ಕೆತ್ತನೆ ಬರಹ-ವಿಳಾಸವನ್ನು ಆತ ಗಮನಿಸುತ್ತಾನೆ. ಆ ವಿಳಾಸವು ಅವರನ್ನು ಡಿಪಾಸಿಟರಿ ಬ್ಯಾಂಕ್ ಆಫ್ ಜುರಿಚ್ ಅಲ್ಲಿ ಆ ಕೀಲಿಯನ್ನು ಸುರಕ್ಷೆಯ ಠೇವಣಿ ಬಾಕ್ಸ್ ಗಾಗಿ ಬಳಸಲಾಗುತ್ತದೆ.

ಈ ಬ್ಯಾಂಕಿನಲ್ಲಿ ಅವರು ಸೌನೆರೆಯೆ ಠೇವಣಿ ಬಾಕ್ಸ್ (ಪೆಟ್ಟಿಗೆ)ದೊರೆಯುತ್ತದೆ,ಅದನ್ನು ಹತ್ತು ಅಂಕಿಗಳ ಫಿಬೊನಾಕಿ ನಂಬರ್ (1123581321)ನ್ನು ಅನುಕ್ರಮವಾಗಿ ಬಳಸಿ ತೆಗೆಯಲಾಗುತ್ತದೆ. ಆ ಪೆಟ್ಟಿಗೆಯ ಒಳಭಾಗದಲ್ಲಿ ಒಂದುರೊಸ್ ವುಡ್ ನಿಂದ ಮಾಡಿದ ಪೆಟ್ಟಿಗೆಯನ್ನು ನೋಡುತ್ತಾರೆ,ಇದರಲ್ಲಿ ಕ್ರಿಪ್ಟೆಕ್ಸ್ :ಒಂದು ಸಿಲಿಂಡರ್ ಆಕೃತಿಯ ಒಳಭಾಗದಲ್ಲಿ ಸ್ವರಾಕ್ಷರಗಳ ಡಯಲ್ ಮಾಡುವುದರ ಜೊತೆಗೆ 5-ಅಕ್ಷರಗಳ ಕೋಡ್ ವರ್ಡ್ ಬಳಕೆಯಲ್ಲಿನ ತೆಳು ಕಾಗದ ದಲ್ಲಿನ ಸಂದೇಶದ ಮೂಲಕ್ಕೆ ಹೋಗುತ್ತದೆ. ಬಲಪ್ರಯೋಗದಿಂದ ಅದರಲ್ಲಿನ ಕ್ರಿಪ್ಟೆಕ್ಸ್ ಒಡೆಯಬಹುದಲ್ಲದೇ ಅಲ್ಲಿರುವ ದ್ರಾಕ್ಷಾರಸದ ಸಣ್ಣ ಬಾಟಲಿಯು ಒಡೆದು ಅದು ಚರ್ಮದ ಕಾಗದದ ಮೇಲೆ ಚೆಲ್ಲಿದರೆ ಅದರಲ್ಲಿನ ಸಂದೇಶವು ಹಾಳಾಗಬಹುದೆಂಬ ಹೆದರಿಕೆ ಇತ್ತು.

ದುರದೃಷ್ಟವಶಾತ,ಅಲ್ಲಿನ ರಕ್ಷಣಾ ಸಿಬ್ಬಂದಿಯು ಪೊಲಿಸ್ ರನ್ನು ಕರೆದಿದ್ದರಿಂದ ಅವರು ಅಲ್ಲಿಂದ ಜಾಗಾ ಖಾಲಿ ಮಾಡಬೇಕಾಯಿತು. ಬ್ಯಾಂಕ್ ಮ್ಯಾನೇಜರ್ ಅಂಡ್ರೆ ವೆರ್ನೆಟ್ ಅವರೆಲ್ಲರನ್ನು ಪ್ರಯಾಣಿಕರಾಂತೆ ಸಶಸ್ತ್ರ ವಾಹನದಲ್ಲಿ ಕೂಡಿಸಿಕೊಂಡು ಪೊಲಿಸ್ ನ ನಿಯಮಿತ ತಪಾಸಣೆಯಿಂದ ಪಾರು ಮಾಡುತ್ತಾನೆ. ಈ ವಾಹನದ ಹಿಂದುಗಡೆ ಲ್ಯಾಂಗ್ಡೊನ್ ಮತ್ತು ನೆವೆಯು ಅವರದು ಕ್ರಿಪ್ಟೆಕ್ಸ್ ಬಗ್ಗೆ ಸುದೀರ್ಘ ಚರ್ಚೆ ಸಾಗಿತ್ತು,ನೆವೆಯು ಹೇಳುವ ಪ್ರಕಾರ ಅವಳ ತಾತಾ ಕ್ರಿಪ್ಟೆಕ್ಸ್ ಗಳನೊಳಗೊಂಡ ಆಟಗಳನ್ನು ತನ್ನೊಂದಿಗೆ ಆದಿದ್ದನ್ನು ನೆನಪಿಸಿಕೊಳ್ಳುತ್ತಾಳೆ. ಲ್ಯಾಂಗ್ಡೊನ್ ಪ್ರಕಾರ ಕ್ರಿಪ್ಟೆಕ್ಸ್ ನಲ್ಲಿ ಮೌಲ್ಯಯುತ ಮಾಹಿತಿ ಇರಬಹುದು ಅಥವಾ ತಾವು ಹುಡಕಳು ಪ್ರಯತ್ನಿಸುವುದಕ್ಕೆ ಮತ್ತೊಂದು ಸುಳಿವು ದೊರೆಯಬಹುದು ಎಂದು ಅಂದಾಜಿಸಿದ್ದನು. ಅದೇ ಸಂದರ್ಭದಲ್ಲಿ ಆಕಸ್ಮಾತಾಗಿ ನಿಂತ ವಾಹನದಲ್ಲಿ ವರ್ನೆಟ್ ಗನ್ನೊಂದನ್ನು ಹಿಡಿದು ಆ ಕ್ರಿಪ್ಟೆಕ್ಸ್ ನ್ನು ನೀಡುವಂತೆ ಹೆದರಿಸುತ್ತಾನೆ. ಲ್ಯಾಂಗ್ಡೊನ್ ವೆರ್ನೆಟ್ ನನ್ನು ತನ್ನ ತಂತ್ರದ ಮೂಲಕ ಗನ್ನನ್ನು ಕೆಳಕ್ಕೆ ಬೀಳಿಸುತ್ತಾನೆ,ಆಗ ಆತ ಮತ್ತು ಸೊಫಿಯೆ ಅವರು ತಮ್ಮ ಕೈಯಲ್ಲಿ ಕ್ರಿಪ್ಟೆಕ್ಸ್ ಬಾಕ್ಸ್ ನ್ನು ಹಿಡಿದು ಪರಾರಿಯಾದರು.

ಲ್ಯಾಂಗ್ಡೊನ್ ಸಲಹೆ ಪ್ರಕಾರ ಆತ ತಮ್ಮ ಸ್ನೇಹಿತರಾದ ಲೇಘ್ ಟೀಬಿಂಗ್ ಇವಾನ್ ಮೆಕ್ ಮ್ಯಾಕೆಲೆನ್ ಅವರನ್ನು ಕ್ರಿಪ್ಟೆಕ್ಸ್ ತೆರೆಯಲು ಸಹಾಯ ಪಡೆಯಬಹುದೆಂದರು. ಲೇಘ್ ಟೇಬಿಂಗ್ ಪವಿತ್ರ ಬಟ್ಟಲನ್ನು ಪಡೆಯಲು ಉತ್ಸುಕನಾಗಿದ್ದ,ಇದು ನೈಜ ಬಟ್ಟಲಲ್ಲ ಆದರೆ ಮೇರಿ ಮ್ಯಾಗ್ಡೇಲೆನೆ ಬದಲಾಗಿ ಇದಕ್ಕೆ ಪೂರಕವಾದದ್ದು ಎಂದು ಆತ ನಂಬಿದ್ದ.ಜಿಸಸ್ ನ ಅನುಯಾಯಿಗಳು ತಮ್ಮ ನೇತಾರ ಸತ್ತ ನಂತರ ಮಹಿಳೆಯನ್ನು ಅನುಸರಿಸಲು ಸಿದ್ದರಿರಲಿಲ್ಲ ಎಂಬುದನ್ನು ಆತ ಮನಗಂಡಿದ್ದ. ಆ ವೇಳೆಯಲ್ಲಿ ಮೇರಿಯು ಗರ್ಭಿಣಿಯಾಗಿದ್ದಳು;ಟೀಬಿಂಗ್ ಸೊಫೆಗೆ ಹೇಳುವಂತೆ ಜಿಸಸ್ ನ ಉತ್ತರಾಧಿಕಾರಿಗಳನ್ನು ರಕ್ಷಿಸಲು ರಹಸ್ಯ ಸಮಾಜವೊಂದು ರಚನೆಯಾಗಿದೆ. ಜಾಕ್ವೆಸ್ ಸೌನೆಯೆರೆ ಕೂಡಾ ಈ ಸಮಾಜದ ಒಂದು ಭಾಗವೆಂದು ನಂಬಲಾಗಿದೆ.ಇದೂ ಅಲ್ಲದೇ ಟೀಬಿಂಗ್ ,ಸೊಫೆಯಿ ಇದನ್ನು ಸೇರುವಂತೆ ಮಾಡಲು ತರಬೇತಿ ನೀಡುತ್ತಿದ್ದಾನೆಂದು ಆತ ಸಂಶಯಪಟ್ಟಿದ್ದ. ಇದೇ ವೇಳೆಗೆ ಸಿಲಾಸ್ ಟೀಬಿಒಂಗ್ ನ ಬಂಗಲೆಯನ್ನು ಒಡೆದು ಒಳಹೊಕ್ಕು ಕ್ರಿಪ್ಟೆಕ್ಸ್ ನ್ನು ಕದಿಯಲು ಯತ್ನಿಸುತ್ತಾನೆ. ಟೀಬಿಂಗ್ ತನ್ನ ಕೋಲಿನಿಂದ ಆತನನ್ನು ಅಟ್ಟಾಡಿಸಿ ಸಿಲಾಸ್ ನನ್ನು ಹೊರದಬ್ಬುತ್ತಾನೆ,ಮತ್ತೆ ಅವರು ಅಡುಗೆಯವ,ರೆಮಿ ಜೀನ್ ಮತ್ತು ಸಿಲಾಸ್ ನೊಂದಿಗೆ ಪರಾರಿಯಾಗುತ್ತಾರೆ. ಆ ಗುಂಪು ಟೀಬಿಂಗ್ ನ ವಿಮಾನದಲ್ಲಿ ಪರಾರಿಯಾಗುತ್ತದೆ,ಮುಂದಿನ ಸುಳಿವು ಲಂಡನ್ ನಲ್ಲಿರುವುದನ್ನು ಅದು ಗಮನಿಸಿರುತ್ತದೆ.

ರೆಮಿ ಜೀನ್ ನಿಜವಾಗಿಯೂ ದಿ ಟೀಚರ್ ನ ಅನುಯಾಯಿಯಾಗಿರುತ್ತಾನೆಂಬುದು ಗೊತ್ತಾಗುತ್ತದೆ,ಹೀಗಿರುವಾಗ ಆತನನ್ನು ರಹಸ್ಯ ಮನುಷ್ಯನೊಬ್ಬ ಆತನನ್ನು ಕೊಂದು ಸಿಲಾಸ್ ನನ್ನು ಮುಕ್ತಗೊಳಿಸುತ್ತಾನೆ. ಸಿಲಾಸ್ ನ ಮೇಲೆ ಪೊಲಿಸ್ ರು ದಾಳಿ ಮಾಡುತ್ತಾರೆ,ಇಲ್ಲಿ ನಡೆಯುವ ಗುಂಡಿನ ದಾಳಿಯಲ್ಲಿ ಆಕಸ್ಮಿಕವಾಗಿ ಬಿಶಪ್ ಮ್ಯಾನುವಲರಿಂಗೊರೊಸಾ ಅವರ ಮೇಲೆ ಗುಂಡು ಹಾರಿಸುತ್ತಾನೆ. ಆತನ ದುಖದಲ್ಲಿ ಸಿಲಾಸ್ ಪೊಲಿಸರ ನೆರವಿನ ಆತ್ಮಹತ್ಯಾ ಪ್ರಕರಣದಲ್ಲಿ ಸಾವನ್ನಪ್ಪುತ್ತಾನೆ,ಅರಿಂಗಾರೊಸಾನನ್ನು ಆಸ್ಪತ್ರೆಗೆ ಒಯ್ಯಲಾಗುತ್ತದೆ,ಮಿತ್ರದ್ರೋಹದ ಕಾರಣದಿಂದಾಗಿ ಫೆಚೆನಿಂದ ಆತ ಬಂಧನಕ್ಕೊಳಗಾಗುತ್ತಾನೆ.

ಈ ರಹಸ್ಯವನ್ನು ಭೇಧಿಸಲು ಅದಕ್ಕೆ ಪರಿಹಾರ ಹುಡುಕಲು ಹೋದಂತೆ ಲ್ಯಾಂಗ್ಡೊನ್ ಟೀಬಿಂಗ್ ನಿಂದ ಮಿತ್ರದ್ರೋಹಕ್ಕೆ ಒಳಗಾಗುತ್ತಾನಲ್ಲದೇ ಆತನೇ ದಿ ಟೀಚರ್ ಎಂಬುದು ಬಹಿರಂಗಗೊಳ್ಳುತ್ತದೆ. ಟೀಬಿಂಗ್ ,ಮೇರಿ ಮ್ಯಾಗ್ಡೇಲ್ ಳ ಅವಶೇಷಗಳನ್ನು ಹುಡುಕಲು ಬಂದಿದ್ದ,ಅದರಿಂದ ಪವಿತ್ರ ಸ್ತ್ರೀ ಬಗ್ಗೆ ಸರಿಯಾಗಿದ್ದಾನೆಯೇ ಎಂದು ಪುರಾವೆ ಹುಡುಕುತ್ತಿರುವುದಾಗ ಆತ ಹೇಳುತ್ತಾನೆ.ಲ್ಯಾಂಗ್ಡೊಡ್ ಈ ರಹಸ್ಯವನ್ನು ಭೇಧಿಸದಿದ್ದರೆ ತಾನು ಸೊಫೆಯನ್ನು ಗುಂಡು ಹಾಕಿ ಕೊಲ್ಲುವುದಾಗಿ ಹೆದರಿಸಿದ. ಕೂಡಲೇ ಲ್ಯಾಂಗ್ಡೊನ್ ಕ್ರಿಪ್ಟೆಕ್ಸ್ ನ್ನು ಗಾಳಿಯಲ್ಲಿ ಎಸೆಯುವ ಮೂಲಕ ತನ್ನ ಪ್ರತಿಕ್ರಿಯೆ ತೋರಿದ. ಟೀಬಿಂಗ್ ಅದನ್ನು ಹಿಡಿಯಲು ಪ್ರಯತ್ನಿಸಿದ ಆದರೆ ಅದು ನೆಲಕ್ಕೆ ಅಪ್ಪಳಿಸಿತು. ಅದರಲ್ಲಿನ ದ್ರಾಕ್ಷಾರಕ್ಷದ ಚಿಕ್ಕ ಬಾಟಲಿ ಒಡೆಯಿತು.ಅದೇ ವೇಳೆಗೆ ಅಲ್ಲಿನ ಕಾಗದ ಪತ್ರದ ಮೇಲೆ ಹರಡಿ,ಅದನ್ನು ಹಾಳು ಮಾಡಿತು.

ಟೀಬಿಂಗ್ ನ ಬಂಧನದ ನಂತರ ಲ್ಯಾಂಗ್ಡೊನ್ ಅದನ್ನು ಎಸೆಯುವಕ್ಕಿಂತ ಮುಂಚೆ ಅದರೊಳಗಿನ ಕೋಡ್ ('Apple') ರಹಸ್ಯವನ್ನು ಪಡೆದುಕೊಂಡಿದ್ದ ಎಂದು ಗೊತ್ತಾಯಿತು. ಈ ಸುಳಿವನ್ನು ಪಡೆದ ಅವರು ಈ ಹಿಂದೆ ಅಡಗಿಸಿಟ್ಟ ಮ್ಯಾಗ್ಡ್ ಲೆನ್ ಳ ಅವಶೇಷಗಳಿರುವ ಸ್ಕಾಟ್ ಲ್ಯಾಂಡ್ರೊಸ್ಲಿನ್ ಚಾಪೆಲ್ ಗೆ ಪಯಣ ಬೆಳೆಸಿದರು. ಅಲ್ಲಿ ಅವರು ಅವಳನ್ನು ರಕ್ಷಿಸಿದ ರಹಸ್ಯ ಸಂಘಟನೆಯ ಸದಸ್ಯರನ್ನು ಭೇಟಿ ಮಾಡಿದರು. ಇಲ್ಲಿ ಸೊಫೆಯೆನೇ ಮ್ಯಾಗ್ಡೆಲೆನೆಯ ನಿಜವಾದ ಉತ್ತಾರಾಧಿಕಾರಿ,ಆದ್ದರಿಂದ ಈತನೇ ಸದ್ಯದ ಜಿಸಸ್ ಕ್ರಿಸ್ತನ ಉತ್ತರಾಧಿಕಾರಿ. ಅವಳನ್ನು ಅವರು ಸುರಕ್ಷಿತವಾಗಿ ಇಡುವುದಾಗಿ ಪಣ ತೊಟ್ಟರು. ಲ್ಯಾಂಗ್ಡೊನ್ ಮತ್ತು ಸೊಫೆಯೆ ಕೆಲವೇ ಸಮಯದಲ್ಲಿ ಅಲ್ಲಿಂದ ಬೇರೆಯಾದರು.

ಲ್ಯಾಂಗ್ಡೊನ್ ಆಕಸ್ಮಿತವಾಗಿ ಮುಖ ಕ್ಷೌರ ಮಾಡಿಕೊಳ್ಳುವಾಗ ಗಾಯ ಮಾಡಿಕೊಂಡಾಗ ಅಲ್ಲಿನ ರಕ್ತ ರೊಸ್ ಲೈನ್ ನ ಗೋಚರತೆ ಆಗಿ ಉಳಿಯುತ್ತದೆ. ಆತ ರೊಸ್ ಲೈನ್ ನನ್ನು ಹಿಂಬಾಲಿಸಿ ಪವಿತ್ರ ಸ್ತ್ರೀಯ ಸ್ಥಳವನ್ನು ಗುರ್ತಿಸಿದ.ಅದನ್ನು ಲೌವ್ರೆನಲ್ಲಿ ಪಿರಾಮಿಡ್ ನ ಕೆಳಗೆ ಹೂಳಲಾಯಿತು. ಲ್ಯಾಂಗ್ಡೊನ ಮೇರಿ ಮ್ಯಾಗ್ಡೆಲೆನೆ ಶಿಖರದ ಮೇಲೆ ಮೊಳಕಾಲೂರಿ ಈ ಮೊದಲು ಟೆಂಪ್ಲರ್ ನೈಟ್ಸ್ ಮಾಡಿದಂತೆ ಮಾಡಿದ.

ಪಾತ್ರವರ್ಗ[ಬದಲಾಯಿಸಿ]

ಕೇಮೊಸ್[ಬದಲಾಯಿಸಿ]

 • ಲೇಖಕ ಡಾನ್ ಬ್ರೌನ್ ಮತ್ತು ಆತನ ಪತ್ನಿ ಅವರು ಪುಸ್ತಕಕ್ಕೆ ಸಹಿ ಹಾಕುತ್ತಿರುವುದು.(ಎದುರಲ್ಲಿರುವವರು)
 • ದಿ ಟೆಂಪ್ಲರ್ ರೆವೆಲೇಶನ್ ,ಲಿನ್ನ್ ಪಿಕ್ನೆಟ್ ಮತ್ತು ಕ್ಲೈವ್ ಪ್ರಿನ್ಸ್ ಪುಸ್ತಕಗಳ ಬರಹಗಾರರು ಬಸ್ ನಲ್ಲಿ ಪ್ರಯಾಣಿಕರಾಗಿ ಕಾಣಿಸಿದ್ದು.

ಧ್ವನಿಪಥ[ಬದಲಾಯಿಸಿ]

ಚಿತ್ರೀಕರಣ[ಬದಲಾಯಿಸಿ]

ಡಾನ್ ಬ್ರೌನ್ ಅವರಿಂದ ಚಲನಚಿತ್ರದ ಹಕ್ಕುಗಳನ್ನು $6,000,000.ಮೌಲ್ಯಕ್ಕೆ ಖರೀದಿ ಮಾಡಲಾಯಿತು. ಈ ಚಲನಚಿತ್ರದ ಆರಂಭವು 2005ರಲ್ಲಿ ಆಯಿತು.ಆದರೆ ಕೆಲವು ಅಡಚಣೆಗೆ ಅದರ ಚಿತ್ರೀಕಣವು ಜೂನ್ 30,2005ರ ವರೆಗೆ ವಿಳಂಬವಾಯಿತು.

ಸ್ಥಳ[ಬದಲಾಯಿಸಿ]

ಈ ಚಿತ್ರದ ಚಿತ್ರೀಕರಣಕ್ಕೆ ಲೌವ್ರೆಯಿಂದ ಪರವಾನಿಗೆ ದೊರೆಯಿತು.(ಆದರೂ ಚಿತ್ರತಂಡವು ಮೊನಾಲಿಸಾದ ಮೇಲೆ ತನ್ನ ಶೂಟಿಂಗ್ ಬೆಳಕನ್ನು ಚೆಲ್ಲಲು ಅನುಮತಿ ನೀಡಲಿಲ್ಲ ಬದಲಾಗಿ ಅದರ ಪ್ರತಿಕೃತಿಯನ್ನು ಬಳಸಲಾಯಿತು,ಅದೇ ಸಂದರ್ಭದಲ್ಲಿ ಮೊನಾಲಿಸಾಳ ಕೊಠಡಿಯನ್ನು ತಂಡದವರ ಸಾಮಗ್ರಿಗಳನ್ನು ಇಡುವ ಕೋಣೆಯಾಗಿತ್ತು)ಅದೇ ತೆರನಾಗಿ ವೆಸ್ಟ್ ಮಿನಿಸ್ಟರ್ ಅಬ್ಬೆಯನ್ನು ಬಳಸದಂತೆ ನಿರಾಕರಿಸಲಾಯಿತು.ಇದೇ ತೆರನಾಗಿ ಸೇಂಟ್ ಸಲ್ಪೈಸ್ ಬಳಕೆಗೂ ನಿರ್ಭಂಧಿಸಲಾಗಿತ್ತು. ವೆಸ್ಟ್ ಮಿನಿಸ್ಟರ್ ಅಬ್ಬೆ ದೃಶ್ಯಗಳನ್ನು ಲಿಂಕೊಲ್ನ್ ಮತ್ತು ವಿಂಚೆಸ್ಟರ್ ಕ್ಯಾಥೆಡ್ರಲ್ ನಲ್ಲಿ ಚಿತ್ರೀಕರಿಸಲಾಯಿತು.ಇವೆರಡೂ ಚರ್ಚ್ ಆಫ್ ಇಂಗ್ಲೆಂಡ್ ಗೆ ಸೇರಿದ್ದವು.

[೫] ಸೇಂಟ್ -ಸಲ್ಪೈಸ್ ಸ್ಥಳದಲ್ಲಿ ಚಿತ್ರೀಕರಣಕ್ಕೆ ಅವಕಾಶ ದೊರೆಯದಿದ್ದಾಗ ಎಲ್ಲಾ ಸನ್ನಿವೇಶವನ್ನುನಿರ್ಮಾಣ ಕಂಪನಿ ರೇನ್ ಮೇಕರ್ U.K.ಕಂಪನಿ ಮೂಲಕ ಮರುಸೃಷ್ಟಿಸಲಾಯಿತು.ಆದರೆ ಇದರ ನಿರ್ಮಾಣದಲ್ಲಿನ ಸಹಕಾರದ ಕೊರತೆಯ ಕಾರಣ ಇದು ತುಂಬಾ ಕಷ್ಟಕರವಾದ ಚಿತ್ರೀಕರಣವಾಯಿತು.ಇದನ್ನು ಪೂರ್ಣಗೊಳಿಸಲು ಸಾಕಷ್ಟು ಪ್ರಯಾಸ [೬] ಪಡಬೇಕಾಯಿತು.

ಲಿಂಕೊಲ್ನ್ ನಲ್ಲಿ ಚಿತ್ರೀಕರಿಸಲು ಸುಮಾರು£100,000 ಹಣ ನೀಡಲಾಯಿತು,ಅಂದರೆ ಆಗಷ್ಟ್ 15 ಮತ್ತು 19ರ 2005ರ ಮಧ್ಯದ ಅವಧಿಯಲ್ಲಿ ಇದರ ಚಿತ್ರೀಕರಣಕ್ಕೆ ಅವಕಾಶವಾಯಿತು.ಕ್ಯಾಥೆಡ್ರೆಲ್ ನ ಪ್ರತಿಯೊಂದೂ ಮೂಲೆ ಮೂಲೆಗಳನ್ನು ಚಿತ್ರೀಕರಿಸಲಾಯಿತು. ಕ್ಯಾಥೆಡ್ರೆಲ್ ನ ಗಂಟೆ "ಗ್ರೇಟ್ ಟಾಮ್ "ಸಮಯವನ್ನು ಸೂಚಿಸುತ್ತದೆ.ವಿಶ್ವಯುದ್ಧ IIದ ಕಾಲದಿಂದಲೂ ಮೌನವಾಗಿತ್ತು ನಂತರ ತನ್ನ ಸದ್ದು ಮಾಡಿದ್ದು ಇದೇ ಮೊದಲ ಬಾರಿಗೆ ಎನಿಸಿತ್ತು. ಈ ಚಿತ್ರೀಕರಣವು ಒಳಾಂಗಣದಲ್ಲಿ ರಹಸ್ಯವಾಗಿ ನಡೆದರೂ ಕೂಡಾ 61ವರ್ಷ ವಯಸ್ಸಿನ ರೊಮನ್ ಕ್ಯಾಥೊಲಿಕ್ ಸನ್ಯಾಸಿನಿ ಸಿಸ್ಟರ್ ಮೇರಿ ಮೈಕೆಲ್ ತನ್ನ ಅನುಯಾಯಿಗಳು ಮತ್ತು ಮಹಿಳಾ ಸಮಾಜದ ನೂರಾರು ಜನರೊಂದಿಗೆ ಬಂದು ಇದರ ಚಿತ್ರೀಕರಣದ ವಿರುದ್ಧ ಪ್ರತಿಭಟನೆ ನಡೆಸಿದರು.ಆಕೆ ಚರ್ಚ್ ನ್ನ ಹೊರಭಾಗದಲ್ಲಿ ಸುಮಾರು12ಗಂಟೆಗಳ ಕಾಲ ತನ್ನ ಮೊಳಕಾಲ ಮೇಲೆ ನಿಂತು ಪ್ರಾರ್ಥನೆ ಸಲ್ಲಿಸಿದಳು.ಇದು ಧರ್ಮ ವಿರೋಧಿಯಾಗಿದ್ದುಇದನ್ನು ಸಂಪ್ರದಾಯದ ವಿರೋಧಿಯೆಂದು ತಾವು ಪರಿಗಣಿಸುವುದರಾಗಿ ಅವರು [೭] ಹೇಳಿದರು

ಆದರೆ ವಿಂಚಿಸ್ಟರ್ ತನಗೆ ಬಂದ ಶುಲ್ಕದಲ್ಲಿ ಪ್ರದರ್ಶನಕ್ಕಾಗಿ,ಉಪನ್ಯಾಸ ಸರಣಿಗಳಿಗಾಗಿ ಮತ್ತು ಧರ್ಮ ಗ್ರಂಥಗಳ ಪ್ರಚಾರಕ್ಕಾಗಿ ಬಳಸಿ ತನ್ನ ಬಗ್ಗೆ ಬಂದ ಟೀಕೆಗಳಿಗೆ ಈ ರೀತಿ ಉತ್ತರ [೮] ನೀಡಿತು ಪೋಪ್ ಅವರ ಬೇಸಿಗೆ ನಿವಾಸ ,ಕ್ಯಾಸ್ಟೆಲ್ ಗ್ಯಾಂಡೊಲ್ಫೊ ಗಳನ್ನು ಇಂಗ್ಲೆಂಡನ ಲೆಸೆಸ್ಟರ್ ಸೈರ್ಬೆಲ್ವೊಯರ್ ಕ್ಯಾಸ್ಟಲ್ ನಲ್ಲಿ ಚಿತ್ರೀಕರಿಸಲಾಯಿತು.

ಇಂಗ್ಲೆಂಡ್ ನ ಪಶ್ಚಿಮ ಸುಸೆಕ್ಸ್ ನಲ್ಲಿರುವ ಶೊರೆಹಾಮ್ ವಿಮಾನನಿಲ್ದಾಣವನ್ನು ಸಹ ಚಿತ್ರೀಕರಣಕ್ಕಾಗಿ ಬಳಸಲಾಯಿತು.ರಾತ್ರಿ ದೃಶ್ಯಗಳಿಗಾಗಿ ಸುಂದರ-ಕಲಾ ಸೌಂದರ್ಯಕ್ಕಾಗಿ 'ಲೆ ಬೊರ್ಗೆಟ್ 'ವಿಮಾನ ನಿಲ್ದಾಣಕ್ಕಾಗಿ ಅದನ್ನು [೯] ಬಳಸಿಕೊಳ್ಳಲಾಯಿತು.

UK.ನ ಹಲವೆಡೆ ಚಿತ್ರೀಕರಣ [೧೦] ನಡೆಯಿತು. ಚಿತ್ರೀಕರಣದ ತಾಣಗಳೆಂದರೆ ಫೇರ್ ಫೀಲ್ಡ್ ಹಾಲ್ಸ್ (ಕ್ರೊಯೊಡೊನ್ ;ದಿ ಟೆಂಪಲ್ ಚರ್ಚ್ (ಲಂಡನ್ );ಬರ್ಘಲಿ ಹೌಸ್ (ಲಿಂಕ್ಲೊನ್ ಶೈರ್ ); ರೊಸ್ಲಿನ್ ಚಾಪಲ್ (ಸ್ಕಾಟ್ ಲ್ಯಾಂಡ್ ); ಅಲ್ಲದೇ also locations in ಫ್ರಾನ್ಸ್ ಮತ್ತು ಜರ್ಮನಿ ಗಳಲ್ಲಿಯೂ ಚಿತ್ರೀಕರಣದ ತಾಣಗಳಿವೆ.

ಒಳಾಂಗಣ ಚಿತ್ರೀಕರಣ[ಬದಲಾಯಿಸಿ]

ನಿರ್ಮಾಪಕರು ಹಲವಾರು ಒಳದೃಶ್ಯಗಳನ್ನು ಪೈನ್ ವುಡ್ ಸ್ಟುಡಿಯೊದಲ್ಲಿ ಚಿತ್ರೀಕರಿಸಿದ್ದಾರೆ,ಚಿತ್ರದ ಆರಂಭದೆಅ ದೃಶ್ಯವನ್ನು ಆಲ್ಬರ್ಟ್ ಆರ್ ಬ್ರೊಕೊಲಿಯ 007 ರಂಗಮಂಚದ ಮೇಲೆ ಪೈನ್ ವುಡ್ ಶೆಪರ್ಟೊನ್ ನಲ್ಲಿ ತೆಗೆಯಲಾಗಿದೆ.ಫ್ರಾನ್ಸ್ ನೈಜ ಕಲಾವೈಭವಕ್ಕೆ ಅತ್ಯುಮುಲ್ಯ ಚಿತ್ರಕಲೆಗೆ ಆದ್ಯತೆ [೧೧][೧೨] ನೀಡಲಾಗಿದೆ.

ಮೊದಲ ದೃಶ್ಯದಲ್ಲಿ ರಾಬರ್ಟ್ ಲ್ಯಾಂಗ್ಡೊನ್ ಪಾತ್ರವನ್ನು ಟಾಮ್ ಹ್ಯಾಂಕ್ಸ್ ನಿರ್ವಹಿಸಿದ್ದಾನೆ.ಇದನ್ನು ಫ್ರೆಂಚ್ ಪೊಲಿಸರು ಚಿತ್ರೀಕರಿಸಿದ್ದಲ್ಲದೇ ಎಲ್ಲಿ ಆ ವ್ಯಕ್ತಿಯ ಶವ ದೊರಕಿದೆಯೊ ಅಲ್ಲಿಗೆ ಅವರನ್ನು ಕರದೊಯ್ಯಲಾಗುತ್ತದೆ. ಡೇವಿಡ್ ವೈಟ್ ಅಲ್ಟರ್ಡ್ ಸ್ಟೇಟ್ಸ್ FX,ವಿಶೇಷ ಮೇಕ್ ಅಪ್ ವಿನ್ಯಾಸವು ಲಂಡನ್ ಮೂಲದ ಅಲಂಕಾರದ ವೈಭವವನ್ನು ಒಳಗೊಂಡಿತ್ತು.ಹೆಪ್ಪರ್ ಟೊನ್ ಸ್ಟುಡಿಯೊನಲ್ಲಿ ಇದರ ಸಂಪೂರ್ಣ ಕಲಾಶೃಂಗಾರ ರೂಪಗೊಂಡಿತ್ತು. (ಬೆಳಕಿನ ಪ್ರತಿಫಲನಗಳು ದೇಹದ ಸಂಪೂರ್ಣ ಅವಯವಗಳನ್ನು ಬಹಿರಂಗಪಡಿಸುವ ತಂತ್ರಜ್ಞಾನವನ್ನು ಬಳಸಲಾಗಿದೆ.ಇದಕ್ಕಾಗಿಯೇ NCIS )ನಂತಹ ಟೆಲಿವಿಜನ್ ಕಾರ್ಯಕ್ರಮಗಳನ್ನು [೧೩] ಆಶ್ರಯಿಸಲಾಗಿದೆ.

ಪೈನ್ ವುಡ್ ನ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನೀರ ಕೆಳಗಿನ ರಂಗಸಜ್ಜಿಕೆಯನ್ನು ನೀರೊಳಗಿನ ದೃಶ್ಯಗಳಿಗಾಗಿ [೧೪] ಬಳಸಲಾಗಿದೆ. ಈ ರಂಗಸಜ್ಜಿಕೆಯು 2005ರಲ್ಲಿ ನಾಲ್ಕು ವರ್ಷಗಳ ಯೋಜನೆ ಮತ್ತು ಅಭಿವೃದ್ಧಿಗಾಗಿ ಪ್ರಾರಂಭಗೊಂಡಿತು. ಈ ನೀರನ್ನು ಶುದ್ದೀಕರಿಸಲು ವಿಕಿರಣ ಪ್ರಕ್ರಿಯೆಯನ್ನು ಬಳಸಿ ಸ್ವಚ್ಚಗೊಳಿಸಲಾಗಿತ್ತು.ಇದನ್ನು30 °C (87 °F)ಈ ಉಷ್ಣತೆಗೆ ಸರಿಹೊಂದಿಸಲಾಗುತ್ತದೆ.ಸುತ್ತಮುತ್ತಲಿನ ವಾತಾವರಣಕ್ಕೆ ಅನುಗುಣವಾಗಿ ಇದನ್ನು ತಂಡದವರಿಗಾಗಿ ಸಿದ್ದಪಡಿಸಲಾಗಿತ್ತು. ಈ ಟ್ಯಾಂಕಿಗೆ ಹೆಚ್ಚು ಪ್ರಮಾಣದ ಕ್ಲೊರಿನ್ ನನ್ನು ಬಳಸಲು ಸಾಧ್ಯವಾಗಲಿಲ್ಲ.ಇದನ್ನು ಯಾವಾಗಲೂ ಒಣಗಳು ಬಿಟ್ಟು ಆಗಾಗ ನೀರು [೧೫] ಬಿಡಲಾಗುತಿತ್ತು.

ಅದೇ ತೆರನಾದ ಪೌಲ್ ಬೆಟ್ಟನಿಯ ನಗ್ನ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿಯಲಾಯಿತು.ಇಲ್ಲಿ ಆತ ಕಪ್ಪು ಲೊಯಿನ್ ಬಟ್ಟೆಯನ್ನು ತೊಟ್ಟಿದ್ದ. ಹಿಸ್ಟರಿ ಚಾನಲ್ ನ "ಒಪಸ್ ಡೆಯಿ ಅನ್ ವೇಲ್ಡ್ "ಸಾಕ್ಷ್ಯಚಿತ್ರದಲ್ಲಿ ಇದರ ಕ್ಲಿಪಿಂಗ್ಸ್ ಗಳನ್ನು 2006ರ ಬೇಸಿಗೆಯಲ್ಲಿ ತೋರಿಸಲಾಯಿತು.

ಬಿಡುಗಡೆಯ ಪ್ರತಿಕ್ರಿಯೆಗಳು[ಬದಲಾಯಿಸಿ]

ದಿ ವ್ಯಾಟಿಕನ್[ಬದಲಾಯಿಸಿ]

ಏಪ್ರಿಲ್ 28ರ 2006ರಲ್ಲಿ ಕಾಂಗ್ರೆಗೇಶನ್ ಫಾರ್ ದಿ ಡಾಕ್ಟ್ರಿನ್ ಆಫ ದಿ ಫೇಥ್ ಅಂದರೆ ಪೋಪ್ ನ್ಯಾಯಸ್ಥಾನ ಇದನ್ನು ವ್ಯಾಟಿಕನ್ಸುಳ್ಳುಗಳ ಸರಮಾಲೆ ಎಂದು ಹೇಳಿತು.ಮೊದಲು ಹೊಲಿ ಆಫೀಸ್ ಎಂದು ಕರೆಯಲಾಗುತಿತ್ತು.ಆರ್ಚ್ ಬಿಶಪ್ ಎಂಜಿಲೊ ಅಮಾಟೊ; ಈ ದಿ ಡ ವಿಂಚಿ ಕೋಡ್ ;ಸಿನೆಮಾವನ್ನು ಬಹಿಷ್ಕರಿಸುವಂತೆ ಕರೆ ನೀಡಿದರು.ಇದು ದ್ವೇಷಪೂರಿತ ,ಅಪರಾಧಗಳಿಂದ ತುಂಬಿದೆ,ಮತ್ತು ಐತಿಹಾಸಿಕ ಮತ್ತು ತತ್ವಗಳ ಬಗ್ಗೆ ತಪ್ಪುಗಳನ್ನು ತೆರೆದಿಟ್ಟಿದೆ ಎಂದು ಅವರು [೧೬] ಹೇಳಿದ್ದಾರೆ.

ಪ್ರಧಾನ ಧರ್ಮಗುರು ಫ್ರಾನ್ಸಿಸ್ ಅರಿಂಜೆ ಸಾಕ್ಷ್ಯಚಿತ್ರವೊಂದರಲ್ಲಿ "ದಿ ಡ ವಿಂಚಿ ಕೋಡ್:ಚಿತ್ರವು ಒಂದು ಮೋಸಗಾರಿಕೆ ವಂಚನೆಯ "ಚಿತ್ರ ವಾಗಿದ್ದು ಈ ಚಿತ್ರ ನಿರ್ಮಾಪಕರ ವಿರುದ್ದ ಅವರು ಕಿಡಿಕಾರಿದರು.ಇದರ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿದರು. "ಕ್ರಿಸ್ತನನ್ನು ಅವಹೇಳನಕಾರಿಯಾಗಿ ಕಾಣುವವರು ಮತ್ತು ಇದನ್ನು ದುರುಪಯೋಗಪಡಿಸಿಕೊಳ್ಳುವವರು ಈ ಧರ್ಮವನ್ನು ದುರುಪಯೋಗಪಡಿಸಿಕೊಳ್ಳುವುದಲ್ಲದೇ ಯಾರು ಎಲ್ಲರನ್ನು ಪ್ರೀತಿಸುತ್ತಾನೊ ಅವನಿಗೆ ಅಪಮಾನ ಮಾಡಿದಂತಾಗುತ್ತದೆ. ಇನ್ನು ಕೆಲವು ಧರ್ಮಗಳಿವೆ ಇಂತಹ ಧರ್ಮಸಂಸ್ಥಾಪಕನಿಗೆ ಆಗುವ ಅವಮಾನಗಳನ್ನು ಅವು ಕೇವಲ ಮಾತನಾಡಿ ಮುಗಿಸುವದಿಲ್ಲ. ಅವರು ನಿಮಗೆ ಅಗತ್ಯ ನೋವನ್ನು ತ್ಲುಪಿಸಿ ಅದನ್ನು ಶುದ್ದಗೊಳಿಸುತ್ತಾರೆ."ಎಂದು ಅರಿಂಜೆ ಹೇಳಿದರು. ಆತ ಈ ಮೊದಲು ವ್ಯಾಟಿಕನ್ ನಲ್ಲಿ ಕಾಂಗ್ರೆಗೇಶನ್ ಫಾರ್ ಡಿವೈನ್ ವರ್ಶಿಪ್ ಅಂಡ್ ಡಿಸಿಪ್ಲಿನ್ ಆಫ್ ದಿ ಸಾಕ್ರೆಮೆಂಟ್ಸ್ ನಲ್ಲಿ ಮೂಲೋಪಾಸಕರಾಗಿದರು.

ಒಪಸ್ ಡಿಯೆ[ಬದಲಾಯಿಸಿ]

ಅದು ಯಾವುದೇ ಪ್ರತಿಭಟನೆಗಳನ್ನು ನಡೆಸಲು ಇಚ್ಛಿಸುವುದಿಲ್ಲವೆಂದು ಅದು ಹೇಳಿತು,ಅದೇ ಒಪಸ್ ಡೆಯಿ (ಇದೊಂದು ಕ್ಯಾಥೊಲಿಕ್ ಸಂಘಟನೆ ಕಾದಂಬರಿ ಮತ್ತು ಚಿತ್ರದಲ್ಲಿ ಪ್ರಧಾನವಾಗಿ ಚಿತ್ರಿತಗೊಂಡಿದೆ)ನಂತರ ಸೊನಿ ಪಿಕ್ಚರ್ಸ್ ಒಂದು ಪತ್ರ ಪಡೆದು ಕೂಡಲೇ ಇದರಲ್ಲಿನ ಆಕ್ಷೇಪಣಾಹ್ರ ಅಂಶಗಳನ್ನು ತೆಗೆಯುವಂತೆ ಫೆಬ್ರವರಿ 14, 2006ರಲ್ಲಿ ಹೇಳಿತು.ಇದರಲ್ಲಿ ವ್ಯಕ್ತವಾಗುವ ಯಾವುದೇನ್ ರೀತಿಯ ಅಂಶಗಳು ಧಾರ್ಮಿಕ ಭಾವನೆಗಳಿಗೆ ನೋವು ತರಬಾರದೆಂದು ಮನವಿ ಮಾಡಿ ಈ ಸಾಕ್ಷ್ಯಚಿತ್ರದ ಬಿಡುಗಡೆಗೆ ಅನುಮತಿ ನೀಡಲಾಯಿತು ಬ್ರೌನ್ ನ ಪುಸ್ತಕ ಕೂಡಾ ಚರ್ಚ್ ಬಗ್ಗೆ "ಅವಮಾನಕರ" ಚಿತ್ರಣವನ್ನು ನೀಡುತ್ತದೆ.ಆಗ ಒಪಸ್ ಡೆಯಿ ಕೂಡಾ ಈ ಸಂದರ್ಭದಲ್ಲಿ ಅವಕಾಶವನ್ನು ಬಳಸಿ ಜನರಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಾರೆ.

"ಏಪ್ರಿಲ್ 16,2006ರಲ್ಲಿನ ಈಸ್ಟರ್ ದಿನ ಜಪಾನಿನ ಮಾಹಿತಿ ಕಚೇರಿಯಿಂದ ಒಪಸ್ ಡೆಯಿ ಒಂದು ಪತ್ರವನ್ನು ಪರಕಟಿಸುತ್ತಾರೆ.ಸೊನಿ ಪಿಕ್ಚರ್ಸ್ ಅವರು ಈ ಚಿತ್ರದಲ್ಲಿನ ವಿಷಯಗಳ ಸಂಗ್ರಹವು ಇದರೊಂದಿಗೆ ಒಂದು ಹಕ್ಕು ನಿರಾಕರಣೆಯ ಭಾಗವಾಗಿಯೂ ಚಿತ್ರವನ್ನು ಬಿಂಬಿಸಿ "ಜಿಸಸ್ ಕ್ರಿಸ್ತ್ ನ ಬಗ್ಗೆ ಒಂದು ಸಂಜ್ಞಾರೂಪಕವಾದ ಗೌರವವನ್ನು ಸೂಚಿಸುವಂತೆ ಹೇಳಲಾಯಿತು.ಇದರಿಂದ ಆತನ ನಂಬುವವರಲ್ಲಿ ಮತ್ತು ಪ್ರೇಕ್ಷಕರಲ್ಲಿಯಾವುದೇ ಚ್ಯುತಿ ಉಂಟಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಯಿತು. "ಈ ಸಂಘಟನೆಯು ಈ ಚಿತ್ರವು ಕೇವಲ ಕಾಲ್ಪನಿಕ" ಎಂಬುದನ್ನು ಬಿಂಬಿಸುವಂತೆ ಸ್ಟುಡಿಯೊವನ್ನು ಉತ್ತೇಜಿಸಿತು.ಇದರಲ್ಲಿ ಏನಾದರೂ ನಿಜ ಸಂಗತಿಗೆ ಹತ್ತಿರವೆನಿಸಿದರೆ ಅದು ಕೇವಲ ಕಾಕತಾಳೀಯ ಎಂದೂ ಅದು ಹೇಳಿತು.

ಡಿಯೆ ಪ್ರೆಸ್ಸ್ ಆಫಿಸ್ ರೊಮ್ ನ ಮಾನ್ಯುವಲ್ ಸಂಚೆಜ್ ಹರ್ಟ್ಯಾಡೊ ಅವರ ಹೇಳಿಕೆಯ ಪ್ರಕಾರ,ಸೊನಿ ಕಾರ್ಪೊರೇಶನ್ ನ "ನೀತಿ ಸಂಹಿತೆ"ಗೆ ವ್ಯತಿರಿಕ್ತವಾಗಿ ಕಂಪನಿಯು ಈ ತೆರನಾದ ಹಕ್ಕುತ್ಯಾಗದ ವಿಷಯವನ್ನು ಚಿತ್ರದೊಂದಿಗೆ ಘೋಷಿಸಲು ಸಾಧ್ಯವಾಗದು ಎಂದು [೧೭] ಹೇಳಿತು.

ಅಮೆರಿಕನ್ ಕ್ಯಾಥೊಲಿಕ್ ಬಿಷಪ್ ಗಳು[ಬದಲಾಯಿಸಿ]

U.S.ನ ಕ್ಯಾಥೊಲಿಕ್ ಬಿಶಪ್ ಗಳು ವೆಬ್ ಸೈಟೊಂದ ನ್ನು ಆರಂಭಿಸಿ ಕಾದಂಬರಿಯಲ್ಲಿ ಬರುವ ದೃಶ್ಯಗಳ ಬಗ್ಗೆ ತನ್ನ ನಿರಾಕರಣಾ ಆಂದೋಲನಕ್ಕೆ ಮುಂದಾಯಿತು. ಬಿಶಪ್ ಗಳಿಗೆ ದಿ ಡ ವಿಂಚಿ ಕೋಡ್ ನಲ್ಲಿನಿರುವ ಗಂಭೀರ ತಪ್ಪು ಹೇಳಿಕೆಗಳ ಬಗ್ಗೆ ತುಂಬಾ ಕಳವಳ ಇತ್ತು. ಈ ಚಿತ್ರವು ನೈತಿಕವಾಗಿಯೂ ಸಹ ಕಳಪೆ ಮಟ್ಟ ತೋರಿದ್ದನ್ನು [[ಯುನೈಟೆಡ್ ಸ್ಟೇಟ್ಸ್ ಕಾನ್ ಫೆರೆನ್ಸ್ ಆಫ್ ಕ್ಯಾಥೊಲಿಕ್ ಬಿಶಪ್ಸ್ ಆಫಿಸ್ ಫಾರ್ ಫಿಲ್ಮ್ ಅಂಡ್ ಬ್ರಾಡ್ ಕಾಸ್ಟಿಂಗ್]] ಪ್ರಚುರಪಡಿಸಿತ್ತು.ಜಿಸಸ್ ಮತ್ತು ಮೇರಿ ಮ್ಯಾಗ್ಡ್ ಲೆನೆ ಸಂಬಂಧ ಮತ್ತು ಒಪಸ್ ಡಿಯೆ ಗಳು "ಅತ್ಯಂತ ಹೇಯಕರ ಮತ್ತುತಪ್ಪು"ಎಂದು ಅದು ಪ್ರತಿಪಾದಿಸಿತು.

ಪೆರು[ಬದಲಾಯಿಸಿ]

ದಿ ಪೆರುವಿಯನ್ ಎಪಿಸ್ಕೊಪಲ್ ಕಾನ್ ಫೆರನ್ಸ್ (CEP)ಈ ಚಿತ್ರ ಮತ್ತು ಕಾದಂಬರಿಯು "ಕ್ಯಾಥೊಲಿಕ್ ಚರ್ಚ್ ಮೇಲಿನ ವ್ಯವಸ್ಥಿತ [೧೮] ದಾಳಿಯಾಗಿದೆ." ಇದಲ್ಲದೇ ಲಿಮಾಆರ್ಚ್ ಬಿಶಪ್ ಮತ್ತು ವಿವಾದಿತ ಗುರು ಹಾಗು ಒಪಸ್ ಡಿಯೆನ ಸದಸ್ಯ ಜೌನ್ ಲುಯಿಸ್ ಸಿಪ್ರಿಯನಿ ತಮ್ಮ ಸಮುದಾಯದ ಜನರು "ಈ ಚಿತ್ರವನ್ನು ಯಾರೂ ನೋಡಬಾರದೆಂದು ಅವರು ಆಗ್ರಹಪಡಿಸಿದರು". ಇದು ಕಾಲ್ಪನಿಕ ಲೋಕದ ಸಮಸ್ಯೆಯಲ್ಲ;ಒಂದು ವೇಳೆ ಸತ್ಯವನ್ನು ಗೌರವಿಸದಿದ್ದರೆ ಅದನ್ನು ನಾವು ಶ್ವೇತಕವಚದ ಭಯೋತ್ಪಾದನೆ ಎಂದು [೧೯] ಹೇಳುತ್ತೇವೆ."

ಕೇನ್ಸ್ ಚಲನಚಿತ್ರೋತ್ಸವ[ಬದಲಾಯಿಸಿ]

AP,ನ ಪ್ರಕಾರ ಚಿತ್ರದ ಪೂರಕ ಮೊದಲ ಪ್ರದರ್ಶನದಲ್ಲಿ ಕೇನಸ್ ನಲ್ಲಿ ವಿಮರ್ಶಕರು ಮ್ ಹ್ಯಾಂಕ್ಸ್ ಅವರ ಪ್ರಕಾರ "ಇದಕ್ಕಾಗಿ ಸುದೀರ್ಘ ನಗೆ ಹಿಂತೆಗೆತ ಹಾಗು ನಿರಾಕರಣೆಯ ಸಿಳ್ಳೆಗಳ ಅಗತ್ಯವಿದೆ". ಈ ಚಿತ್ರದ ಪ್ರದರ್ಶನದ ಕೊನೆಯ ಭಾಗದಲ್ಲಿ "ಕೆಲವು ಸಿಳ್ಳೆಗಳು ಮತ್ತು ಕಿರಿಚಿದ ದನಿ ಕಾಣಿಸಿದವು,ಒಂದೆರಡು ವಿರಳ ಶಹಬ್ಬಾಸ್ ಗಿರಿಯ ಚಪ್ಪಾಳೆಗಳನ್ನು ಬಿಟ್ಟರೆ ಏನೂ ಇರಲಿಲ್ಲ.ಕೆಲವೊಮ್ಮೆ ಕೇನ್ನಸ್ ನಲ್ಲಿ ಕಳಪೆ ಚಿತ್ರಗಳು ಮೆಚ್ಚುಗೆಯ ಚಪ್ಪಾಳೆಯನ್ನು [೨೦] ಪಡೆದುದುಂಟು".

NOAH[ಬದಲಾಯಿಸಿ]

ದಿ ನ್ಯಾಶನಲ್ ಆರ್ಗೈನೈಜೇಶನ್ ಫಾರ್ ಅಲ್ಬೆನಿಸಮ್ ಮತ್ತು ಹೈಪೊಪ್ಜೆಮೆಂಟೇಶನ್ (ಶ್ವೇತವರ್ಣದ ಅಸಹಜ ಬಣ್ಣದ)(NOAH)ವು ಸಿಲಾಸ್ ನ ಪಾತ್ರವು ಅಲ್ಬೆನಿಸಮ್ ನ ಜನರಲ್ಲಿ ಒಂದು ಕೆಟ್ಟ ಹೆಸರನ್ನು [೨೧] ತರುತ್ತದೆ. ಆದಾಗ್ಯೂ ಚಿತ್ರ ನಿರ್ಮಾಪಕರು ಈತನ ಬದಲಾವಣೆಗೆ ಸಿದ್ದರಾಗಲಿಲ್ಲ. ಇದನ್ನು ಕೂಡಾ ನೋಡಿ ಇವಿಲ್ ಅಲ್ಬಿನೊ .

ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾ[ಬದಲಾಯಿಸಿ]

ಆದರೆ ದಿ ಡ ವಿಂಚಿ ಕೋಡ್ ಚೀನಾದ ಸೆನ್ಸಾರ್ ನವರಿಂದ ಒಪ್ಪಿಗೆ ಪಡೆಯಿತು.ಆದರೆ ಚೀನಾದ ಮುಖ್ಯ ಪ್ರದೇಶಗಳಲ್ಲಿ ಅದರ ಪ್ರದರ್ಶನವನ್ನು ಸರ್ಕಾರದ ಆದೇಶಕ್ಕನುಗುಣವಾಗಿ ಅಚಾನಕ್ಕಾಗಿ ಸ್ಥಗಿತಗೊಳಿಸಲಾಯಿತು."ಚೀನಾದಲ್ಲಿ ಅತ್ಯುತ್ತಮ ಸುಮಾರಿಗೆ $13ದಶಲಕ್ಷ ಡಾಲರ್ ಗಳಷ್ಟು ಹಣ ಗಳಿಕೆ ಮಾಡಿತು". ಯಾವುದೇ ವಿವರಣೆ ನೀಡಲಾಗಲಿಲ್ಲ. ಕೊನೆಯ ಪ್ರದರ್ಶನವನ್ನು ಜೂನ್ 9, 2006ರಲ್ಲಿ ಮಾಡಲಾಯಿತು.

ಫರೊಸ್ ದ್ವೀಪಗಳು[ಬದಲಾಯಿಸಿ]

ಫರೊಸ್ ದ್ವೀಪಗಳಲ್ಲಿ ಅತ್ಯಂತ ದೊಡ್ಡ ಸಿನೆಮಾ ಇದಾಗಿತ್ತು.ಹಾವ್ನರ್ ಬಯೊ ಈ ಸಿನೆಮಾವನ್ನು ಬಹಿಷ್ಕರಿಸಲು ನಿರ್ಧರಿಸಿದರು.ಸಣ್ಣ ಸಿನೆಮಾಗಳನ್ನು ನಿರ್ಭಂಧಿಸಿ ಇದನ್ನು ಪ್ರದರ್ಶನ ಮಾಡಲು ಅವರು ಹೇಳಿದರು.ಧಾರ್ಮಿಕ ವಿರೋಧಿ ಅಭಿಪ್ರಾಯಗಳನ್ನು ಮೂಡಿಸಲು ಈ ಚಿತ್ರದ ಮೂಲವನ್ನು ಕಂಡು ಹಿಡಿಯಲು ಪ್ರಯತ್ನಿಸಲು ಹೇಳಲಾಯಿತು. ಹಾವ್ನರ್ ಬಿಯೊ ಖಾಸಗಿ ಒಡೆತನದಲ್ಲಿದೆ.ಅಲ್ಲದೇ ಆದರೆ ಖಾಸಗಿ ನಿರ್ಧಾರವು ಖಾಸಗಿಯವರನ್ನು ಅಭಿಪ್ರಾಯ ಕೇಳಿಸುತ್ತದೆ.

ಹೆರ್ಲಫ್ ಸೊರೆನ್ಸೆನ್ ಈ ಚಿತ್ರವನ್ನು ಪ್ರದರ್ಶಿಸಲು ಹಾವ್ನರ್ ಬಿಯೊ ಅವರ ಖಾಸಗಿ ಬಹಿಷ್ಕಾರದ ಮಧ್ಯೆಯೂ ಇದಕ್ಕೆ ಅವಕಾಶವ ನೀಡಲಾಯಿತು. ಫೇರೊ ದ್ವೀಪಗಳಲ್ಲಿನ ನಾರ್ಡಿಕ್ ಹೌಸ್ ನಲ್ಲಿ ಜೂನ್ 5,2006 ನಲ್ಲಿ ಚಿತ್ರ ಅರಂಭ [ಸೂಕ್ತ ಉಲ್ಲೇಖನ ಬೇಕು]ಕಂಡಿತು.

ಫಿಲಿಪೀನ್ಸ್‌[ಬದಲಾಯಿಸಿ]

ಫಿಲಿಪೈನ್ ಅಲೈನ್ಸ್ ಅಗೇನ್ಸಸ್ಟ್ ಪೊರ್ನೊಗ್ರಾಫಿ(PAAP)[[ಫಿಲಿಪೈನ್ ನ ಅಧ್ಯಕ್ಷ|ಫಿಲಿಪೈನ್ ನ ಅಧ್ಯಕ್ಷ]] ಗ್ಲೊರಿಮಾಕಾಪಾಗಲ್ ಅವರಿಗೆ ಮನವಿ ಸಲ್ಲಿಸಿ ದಿ ಡ ವಿಂಚಿ ಕೋಡ್ ಪ್ರದರ್ಶನವನ್ನು ತಡೆಯುವಂತೆ ಕೋರಲಾಯಿತು. ಅವರು ಈ ಚಿತ್ರವು "ಅತ್ಯಂತ ಅಶ್ಲೀಲ ಮತ್ತು ಧರ್ಮವಿರೋಧಿ ಚಿತ್ರವಾಗಿ ಇತಿಹಾಸದಲ್ಲೇ ದಾಖಲಾಗಿದೆ."ಅದೂ ಅಲ್ಲದೇ ದಿ ಕ್ಯಾಥೊಲಿಕ್ ಬಿಶಪ್ಸ್ ಕಾನ್ ಫ್ರನ್ಸ್ ಆಫ್ ದಿ ಫಿಲಿಪೈನ್ (CBCP)ಪೋಪ್ ಬೆಂಡಿಕ್ XVI,ಅವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದರು.ಇನ್ನುಳಿದ ಧರ್ಮದ ಸಮುದಾಯದ ಗುಂಪುಗಳೂ ಇದನ್ನು ಬಹಿಷ್ಕರಿಸಬೇಕೆಂದು [೨೨] ಹೇಳಿದರು.

[೨೩] ಫಿಲಿಪೈನ್ಸ್ ಅಧ್ಯಕ್ಷರ ಸಾಂಸ್ಕೃತಿಕ ಮತ್ತು ಕಲೆಯ ಸಲಹೆಗಾರ ಸೆಸಿಲ್ಲೆ ಗುಡೊಟೆ ಅಲ್ವೆರಜ್ ಮಲಕ್ಯಾನಂಗ್ ಈ ವಿವಾದದಲ್ಲಿ ಮಧ್ಯ ಮೂಗು ತೂರಿಸಿಲ್ಲ.ಇದರ ಮೂವಿ ಅಂಡ್ ಟೆಲೆವಿಸನ್ ಕ್ಲಾಸಿಫಿಕೇಶನ್ ಬೋರ್ಡ್ (MTRCB)ದರದಲ್ಲಿ ಅದು ತನ್ನ ಪ್ರಭಾವ [೨೩] ತೋರಿತು. ನಂತರ (MTRCB)ದಿ ಡ ವಿಂಚಿ ಕೋಡ್ ಗೆ R-18 ಗುಣಮಟ್ಟದ ಮಾನದಂಡವಾಗಿಸಿದೆ.(ಸುಮಾರು 18 ವಯೋಮಾನದ ಮೇಲಿನವರಿಗೆ ಪರವಾನಿಗೆ [೨೪] ನೀಡುವುದು)

ಥೈಲೆಂಡ್[ಬದಲಾಯಿಸಿ]

ಈ ದೇಶದ ಅತಿ ಹೆಚ್ಚು ಬುದ್ದರ ಅನುಯಾಯಿಗಳು ಇದ್ದರೂ ಕ್ರಿಶ್ಚನ್ ಗುಂಪುಗಳು ಈ ಚಿತ್ರದ ಬಹಿಷ್ಕಾರಕ್ಕೆ ಕರೆ ನೀಡಿದವು. ಆದರೆ ಮೇ 16,2006ರಲ್ಲಿ ದಿ ಥೈಯಿ ಸೆನ್ಸಾರ್ ಶಿಪ್ ಕಮೀಟಿಯು ಆದೇಶವೊಂದನ್ನು ಹೊರಡಿಸಿ ಈ ಚಿತ್ರದ ಕೊನೆಯ ಭಾಗದ 10 ನಿಮಿಷದ ರೀಲ್ ನ್ನು ಕತ್ತರಿಸುವಂತೆ ಆದೇಶಿಸಿತು. ಅದಲ್ಲದೇ ಕೆಲವು ಥೈಯಿ ಭಾಷೆಯ ಉಪ ಶೀರ್ಷಿಕೆಗಳನ್ನು ಬದಲಾಯಿಸಲಾಯಿತು.ಬೈಬಲ್ ವಿರೋಧಿ ಅಲೆ ಎಬ್ಬಿಸುವ ವಿಷಯವಸ್ತುವನ್ನು ನಿರಾಕರಿಸಲಾಯಿತು.ಚಿತ್ರದ ಆರಂಭ ಮತ್ತು ಕೊನೆಯ ಭಾಗದ ದೃಶ್ಯಗಳನ್ನು ಬಹು ಸೂಕ್ಷ್ಮವಾಗಿ ಗಮನಿಸಿ ಯಾವುದೇ ಧರ್ಮಕ್ಕೂ ನೋವಾಗದಂತೆ ಪ್ರದರ್ಶಿಸಲು ತಿಳಿಸಲಾಯಿತು.

ಅದರ ಮರುದಿನವೇ ಸೊನಿ ಪಿಕ್ಚರ್ಸ್ ಇಂತಹ ಕತ್ತರಿ ಪ್ರಯೋಗ ಚಿತ್ರಕೆ ಹಾನಿಯನ್ನುಂಟು ಮಾಡಿದರೆ ಅದನ್ನು ವಾಪಸು ಪಡೆಯುವುದಾಗಿ ಹೇಳಿತು. ಆದರೆ ಸೆನ್ಸಾರ್ ಶಿಪ್ ನ ಸಮಿತಿಯ 6-5ರ ಮತವು ಈ ಸಿನೆಮಾವನ್ನು ಕತ್ತರಿ ಪ್ರಯೋಗ ಮಾಡದೇ ತೋರಿಸಬೇಕೆಂದು ಹೇಳಿತಲ್ಲದೇ ಇದರಲ್ಲಿನ ಈ ಭಾಗಗಳು ಕಾಲ್ಪನಿಕ ತಳಹದಿಯ ಮೇಲೆ ಇವೆ ಎಂದು [೨೫][೨೬] ಹೇಳಿತು. ಕೊನೆಯ ಕ್ಷಣದ ಇಂತಹ ನಿರ್ಧಾರವು ಕೆಲವಡೆ ಪ್ರದರ್ಶನಕ್ಕೆ ಅಡತಡೆಯನ್ನುಂಟು ಮಾಡಿತು.ಬ್ಯಾಂಕಾಕ್ ನಿಂದ ಪರಿಷ್ಕೃತ ರೀಲುಗಳು ತರಿಸಬೇಕಾಗಿದ್ದರಿಂದ ಅದು ವಿಳಂಬಕ್ಕೆ ದಾರಿಯಾಯಿತು.

ಸಿಂಗಾಪುರ[ಬದಲಾಯಿಸಿ]

ದಿ ನ್ಯಾಶನಲ್ ಕೌನ್ಸಿಲ್ ಆಫ್ ಚರ್ಚಸ್ ಆಫ್ ಸಿಂಗಾಪುರ್ (NCCS)ಮಾಹಿತಿ ಮತ್ತು ಸಂವಹನ ಹಾಗು ಸಂಸ್ಕೃತಿ ಸಚಿವರಿಗೆ ಮನವಿ ಮಾಡಿ "ಇದಕ್ಕಾಗಿ ಪ್ರಬಲ ವಿರೋಧ ವ್ಯಕ್ತಪಡಿಸಿ ಇದನ್ನು ಈ ಸಿನಾಮವನ್ನು ರದ್ದುಪಡಿಸುವಂತೆ ಆಗ್ರಹಿಸಿತು. ಆದರೆ ಮಿಡಿಯಾ ಡೆವಲಪ್ಮೆಂಟ್ ಆಥಾರಿಟಿಯು ಚಿತ್ರದ ಸೆನ್ಸಾರ್ ವಿಲ್ಲದೇ NC-16ದರದ ಮೇಲೆ ಅದನ್ನು ಬಿಡುಗಡೆಗೆ ಅನುಮತಿ ನೀಡಿತಲ್ಲದೇ 16ವರ್ಷದ ಕೆಳಗಿನ ಮಕ್ಕಳು ನೋಡದಂತೆ ನಿರ್ಭಂಧ [೨೭] ವಿಧಿಸಿತು.

ಸಮೋವಾ[ಬದಲಾಯಿಸಿ]

ಸಮೊವಾದಲ್ಲಿ ಚಿತ್ರದ ಮೊದಲ ಪ್ರದರ್ಶನ ವೀಕ್ಷಿಸಿದ ಕ್ರಿಸ್ತಿಯನ್ ನಾಯಕರು ಕೂಡಲೇ ಇದರ ದೂರೊಂದನ್ನು ದಾಖಲಿಸಿ ಇದರ ಪ್ರದರ್ಶನಕ್ಕೆ [೨೮] ತಡೆಯೊಡ್ಡಿದರು.

ಭಾರತ[ಬದಲಾಯಿಸಿ]

ಹಲವು ರಾಜ್ಯಗಳಲ್ಲಿ ಈ ಚಿತ್ರವನ್ನು ಸಂಪೂರ್ಣ ರದ್ದುಗೊಳಿಸುವಂತೆ ಕ್ರಿಸ್ತ್ ಧರ್ಮೀಯ ಅಲ್ಪಸಂಖ್ಯಾತರು ಎಲ್ಲೆಡೆ ಕೂಗು ಹಾಕಿದರು. ಈ ಚಿತ್ರ ಪ್ರದರ್ಶನಕ್ಕೆ ಅನುಮತಿಸಿದ ಸಚಿವರ ಹಾಗು ಕ್ಯಾಥೊಲಿಕ್ ಕ್ರಿಸ್ತ್ ಧರ್ಮದ ನಾಯಕರ ಬಗ್ಗೆ ಒಂದು ರೀತಿಯ ಅಸಮಾಧಾನದ ಹೊಗೆ ಹುಟ್ಟಿಕೊಂಡಿತು.

ಕೊನೆಯಲ್ಲಿ ಚಿತ್ರ ಪ್ರದರ್ಶನಕ್ಕೆ ಅನುಮತಿಸಿದ್ದು ಅದಕ್ಕೆA (ವಯಸ್ಕರಿಗಾಗಿ ಎಂಬುದಾಗಿ)ಪರವಾನಿಗೆ ನೀಡಲಾಯಿತು.ಸೆಂಟ್ರಲ್ ಬೋರ್ಡ್ ಫಾರ್ ಫಿಲ್ಮ್ ಸರ್ಟಿಫಿಕೇಶನ್ ಮೂಲಕ ಇದಕ್ಕೆ 15 ಸೆಕೆಂಡ್ ಗಳ ಹೇಳಿಕೆಯನ್ನು ಅಂಟಿಸಿ ಇದು ಕಾಲ್ಪನಿಕ ಕಥೆ ಎಂದು ಘೋಷಿಸಲಾಯಿತು.. ಹೇಗೆಯಾದರೂ ಚಿತ್ರ ಬಿಡುಗಡೆಯು ಒಂದು ವಾರ ವಿಳಂಬವಾಯಿತು,ಆಗ ಮಾರುಕಟ್ಟೆಯಲ್ಲಿ ಒಳ್ಳೆಯ ಭರಾಟೆ ಇದ್ದುದರಿಂದ ಅದರ ನಕಲಿ ಸಿಡಿಗಳು ಮಾರಾಟವಾದವು.

ಡ ವಿಂಚಿ ಕೋಡ್ ಪ್ರದರ್ಶನವನ್ನು ಪಂಜಾಬ್ ,ಗೋವಾ,ನಾಗಾಲ್ಯಾಂಡ್ ,ಮೇಘಾಲಯ,ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ [೨೯][೩೦] ನಿಷೇಧಿಸಲಾಯಿತು. ನಂತರ ಆಂಧ್ರ ಸರ್ಕಾರ ಹಾಕಿದ ನಿಷೇಧವನ್ನು ಆಂಧ್ರಪ್ರದೇಶ ಹೈಕೊರ್ಟ್ ತಳ್ಳಿ [೩೧] ಹಾಕಿತು. ಭಾರತೀಯ ಸೆನ್ಸಾರ್ ಬೋರ್ಡ್ ಜೂನ್ 2ರ ಶುಕ್ರವಾರದಂದು ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿತು. ಸುಪ್ರೀಂ ಕೋರ್ಟ್ ಕೂಡಾ ಚಿತ್ರದ ಮೇಲೆ ನಿಷೇಧ ಹೇರುವ ಕುರಿತ ಮನವಿ ಅರ್ಜಿಯನ್ನು ತಿರಸ್ಕರಿಸಿತು.ಜೀಸಸ್ ಮದುವೆಯಾದ ಕಥೆಯು ಕೇವಲ ಕಾಲ್ಪನಿಕ ಮತ್ತು ಅದು ಅಪರಾಧವಲ್ಲ ಎಂದು ಅದು ವಿವರಣೆ [೩೨] ನೀಡಿತು.

ಸೊಲೊಮಾನ್ ದ್ವೀಪಗಳು[ಬದಲಾಯಿಸಿ]

ಸೊಲೊಮಾನ್ ದ್ವೀಪಗಳ ಪ್ರಧಾನ ಮಂತ್ರಿ ಮಾನಾಸೆಹ್ ಸೊಗವೇರ್ ; ಈ ಚಿತ್ರವು ಕ್ರಿಸ್ತರ ಧಾರ್ಮಿಕ ಭಾವನೆಗಳಿಗೆ ಅದರಲ್ಲೂ ಸೊಲೊಮಾನರಿಗೆ ಅಪಾಯಕಾರಿಯಾಗಿದೆ ಎಂದು ಅದರ ಪ್ರದರ್ಶನವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಹೇಳಿದರು.

"ನಾವು ನಮ್ಮ ದೇಶದಲ್ಲಿ ಕ್ರಿಸ್ಚಿಯನ್ ಧರ್ಮಾಚರಣೆ ಮಾಡುತ್ತೇವೆ,ಜೀಸಸ್ ಕ್ರಿಸ್ತನ ಬಗ್ಗೆ ಈ ಚಿತ್ರ ಕೆಲವು ಭಾವನೆಗಳನ್ನು ಕೆರಳಿಸುತ್ತದೆ.ಜೀಸಸ್ ಓರ್ವ ಉತ್ತಮ ಮನುಷ್ಯನಲ್ಲದೇ ಆತನೆಯೇ ದೇವರು,ಸೊಲೊಮಾನ್ ನಲ್ಲಿ ಕ್ರಿಶ್ಚಿಯನ್ ರನ್ನು ಕೀಳಾಗಿ ಕಾಣುವುದನ್ನು ನೋಡಲು [೩೩] ಸಾಧ್ಯವಿಲ್ಲ ."

ಶ್ರೀಲಂಕಾ[ಬದಲಾಯಿಸಿ]

ಶ್ರೀಲಂಕಾ ಕೂಡಾ ಈ ಚಿತ್ರದ ಪ್ರದರ್ಶನವನ್ನು [೩೪] ರದ್ದುಪಡಿಸಿತು.

ಪಾತ್ರ/ಚಿತ್ರತಂಡ ಪ್ರತಿಕ್ರಿಯೆ[ಬದಲಾಯಿಸಿ]

Evening Standard ಟೊಮ್ ಹ್ಯಾಂಕ್ ಅವರ ಹೇಳಿಕೆಯಂತೆ ಇದರಲ್ಲಿನ ಪಾತ್ರಧಾರಿಗಳು ತಿಳಿಯಬೇಕಾದ್ದೇನೆಂದರೆ ಇದನ್ನು ಸಮಾಜದ ಕೆಲವರ್ಗ ವಿರೋಧಿಸುತ್ತದೆ,ಅಲ್ಲದೇ ಚಿತ್ರವನ್ನು ತೋರಿಸದಿರುವಂತೆ ಒತ್ತಾಯಿಸುತ್ತದೆ. "[೩೫] ಈ ಕಥೆಯು ಎಲ್ಲಾ ತೆರನಾದ ಅಪಾರ್ಥಗಳನ್ನು ಒಳಗೊಂಡಿದ್ದು ಒಬ್ಬ ಭಂಗಿ ಕೆಲಸದವನ ತರಹದ ಸಂವೇದನಾ [೩೫] ರಹಿತವಾಗಿದೆ." ಆತ ಹೇಳಿರುವಂತೆ "ಯಾವುದೇ ಚಿತ್ರವನ್ನು ಅದರ ಮುನ್ನುಡಿ ನೋಡಿನಿರ್ಧರಿಸುವಂತಿಲ್ಲ,ಅದರಲ್ಲೂ ವಿಶೇಷವಾಗಿ ಅತಿ ಹೆಚ್ಚಿನ ವೆಚ್ಚ್ಕದ ಚಿತ್ರಗ್ಳನ್ನೂ ಕೂಡಾ ಒಂದು ಹಂತದಲ್ಲಿ ಎಚ್ಚರಿಕೆಯಿಂದ [೩೫] ನೋಡಬೇಕಾಗಿದೆ." ಕೇನ್ನ್ಸ್ ಚಿತ್ರೋತ್ಸವದಲ್ಲಿ ಆತ ಹೇಳಿರುವಂತೆ ತಾನು ಮತ್ತು ತನ್ನ ಪತ್ನಿ ಈ ಚಿತ್ರ ವೀಕ್ಷಿಸಿದಾಗ ತಮ್ಮ ನಂಬಿಗೆ ಮತ್ತು ಸಿನೆಮಾದ ನಡುವೆ ಯಾವುದೇ ವ್ಯತಿರಿಕ್ತತೆ ಕಂಡು ಬರಲಿಲ್ಲ."ನನ್ನ ಸಂಪ್ರದಾಯ ಮತ್ತು ನನ್ನ ಪತ್ನಿಯದನ್ನು ಯಾರೂ ಬೇರೆ ಮಾಡಲಾಗದು,ಅದರ ಬದಲಾಗಿ ನಮ್ಮ ಪಾಪಗಳು ಕರಗಿ ಹೋದವು,ಆದರೆ ನಮ್ಮ ಮೆದುಳು [೩೬] ನಮ್ಮ್ಕೊಂದಿಗಿದೆ."

ಕೇನ್ಸ್ ನಲ್ಲಿ ಸರ್ ಇವಾನ್ ಮೆಕೆಲ್ಲೆನ್ ಹೇಳಿದಂತೆ "ನಾನು ಈ ಪುಸ್ತಕವನ್ನು ಓದುತ್ತಿದ್ದಾಗ ನಾನಿದನ್ನು ಸಂಪೂರ್ಣವಾಗಿ ನಂಬಿದೆ. ಪ್ರತಿಭಾವಂತ ಡಾನ್ ಬ್ರೌನ್ ನನ್ನ ಮನಸ್ಸನ್ನು ವಿಶ್ವಾಸ ಹುಟ್ಟುವ ಹಾಗೆ ತಿರುಚಿದ್ದಾನೆ. ಯಾವಾಗ ನಾನು ಇದನ್ನು ಇನ್ನೊಂದು ರೀತಿಯಲ್ಲಿನೋಡಿದೆನೋ 'ಆಗ ಅನಿಸಿದ್ದು ಅತಿ ದೊಡ್ಡ ಅಸತ್ಯಗಳ ಮೂಟೆಯೇ [೩೬] ತುಂಬಿದೆ." ಮೇ17,2006ರಲ್ಲಿನ ಸಂದರ್ಶನದಲ್ಲಿ ದಿ ಟುಡೆ ಶೊ ದಿ ಡ ವಿಂಚಿ ಕೋಡ್' ನೊಂದಿಗೆ ಮಾತನಾಡುತ್ತಾ ಪಾತ್ರಧಾರಿ ಮತ್ತು ನಿರ್ದೇಶಕ ಮ್ಯಾಟ್ ಲಾವುರ್ ಮಾತನಾಡಿ ಈ ಚಿತ್ರದ ವಿರೋಧ ಮಾಡುವ ಗುಂಪಿಗೆ ಒಂದು ಸವಾಲೊಡ್ಡಿದರು.ಆದರೆ ಇದು ಕಾಲ್ಪನಿಕ ಚಿತ್ರ ಎಂಬುದನ್ನು ಕೆಲ ಗುಂಪುಗಳು ಆಪಾದಿಸುತಿರುವುದು ಯಾವ ನಿಟ್ಟಿನಲ್ಲಿ ಎಂದು ಅವರು ಪ್ರಶ್ನಿಸಿದ್ದಾರೆ. (ಕೆಲವು ಉನ್ನತ ಮಟ್ಟದ ವ್ಯಾಟಿಕನ್ ಕ್ಯಾಬಿನೆಟ್ ಸದಸ್ಯರು ಈ ಚಿತ್ರವನ್ನು ನಿಷೇಧಿಸುವಂತೆ ಕರೆ [೩೭] ನೀಡಿದರು).[೩೮] ಮೆಕೆಲ್ಲೆನ್ ಪ್ರತಿಕ್ರಿಯಿಸಿದಂತೆ "ನಾನು ಆವಾಗಾವಾಗ ಯೋಚಿಸುವುದೇನೆಂದರೆ ಹಕ್ಕು ನಿರಾಕರಣೆ ವಿಷಯದಲ್ಲಿ ಬೈಬಲ್ ಮೊದಲೊಗೆ 'ಇದು ಕಾಲ್ಪನಿಕ ಎಂದು ಹೇಳಬೇಕಿತ್ತಾಇನೋ ಎನಿಸುತ್ತದೆ. ಅಂದರೆ ನೀರಿನ ಮೇಲೆ ನಡೆದಂತೆ? ಇದು ನಂಬಿಗೆಯ ಕ್ರಿಯೆಗೆ ಒಳಗಾಗುತ್ತದೆ. "ನನಗೆ ಈ ಚಿತ್ರದ ಬಗ್ಗೆ ನಂಬಿಕೆ ಇದೆ-ಅಂದರೆ ಸತ್ಯವಲ್ಲ ಎಂಬುದಲ್ಲ,ಅಥವಾ ಇದು ಸಂಗತಿಯನ್ನು ಒಳಗೊಂಡಿದೆಯೆಂದಲ್ಲ ಆದರೆ ಇದೊಂದು ಅತ್ಯಂತ ಉಲ್ಲಾಸದಾಯಕ ಉತ್ತಮ ಕಥೆಯಾಗಿದೆ. "ಆತ ಮುಂದುವರೆದು ಪ್ರೇಕ್ಷಕರು ಸಾಕಷ್ಟು ಜಾಣರಿದ್ದಾರೆ ಅಲ್ಲದೇ ಪ್ರತಿಭಾವಂತರಿದ್ದಾರೆ,ಈ ಚಿತ್ರದಲ್ಲಿನ ಯಾಅ ಅಂಶಗಳನ್ನು ಕಲ್ಪನೆ ಎನ್ನಬೇಕು ಯಾವುದನ್ನು ಸತ್ಯಸಂಗತಿ ಎನ್ನಬೇಕೆಂಬುದರ ಸಂಪೂರ್ಣ ಅರಿವು ಅವರಿಗಿದೆ"

ಮಾರುಕಟ್ಟೆ ಪ್ರಚಾರ[ಬದಲಾಯಿಸಿ]

ಚಿತ್ರ:The da vinci code final.jpg
ಚಲನಚಿತ್ರದ ಪರ್ಯಾಯ ಭಿತ್ತಿಚಿತ್ರ

ಚಿತ್ರದ ವಿವರಗಳನ್ನುಳ್ಳ ಹೆಣೆದ ಟ್ರೇಲರ್ ಬೇಸಿಗೆಯ 20056ರಲ್ಲಿ ಬಿಡುಗಡೆಯಾಯಿತು.ಚಿತ್ರ ಸಂಪೂರ್ಣವಾಗಿ ವಿಶ್ವಾದ್ಯಂತ ಬಿಡುಗಡೆಗೆ ಮುಂಚೆ ಇದನ್ನು ಪ್ರಚುರಪಡಿಸಲಾಯಿತು. ಚಿತ್ರದ ಏಕೈಕ ದೃಶ್ಯವೊಂದರ ಚಿತ್ರೀಕರಣದ ಮುಂಚೆಯೇ ಈ ಜಾಹಿರಾತನ್ನು ಬಿಡುಗಡೆ ಮಾಡಲಾಯಿತು. ಇದರ ಕೆಲವು ರಂಧ್ರದ ತರಹ ಇರುವ ಕೆಲವು ರಹಸ್ಯ ಸಂಕೇತಗಳನ್ನು ನೋಡಿದಾಗ ನಂತರ ಇದು ಡ ವಿಂಚಿಯ ಮೊನಾಲಿಸಾಳ್ ಪ್ರಸಿದ್ದ ಪೇಂಟಿಂಗ್ ಎಂದು ತಿಳಿದು ಬಂತು. (ನಿಜವಾಗಿ ಹೇಳಬೇಕೆಂದರೆ ಈ ಪೇಂಟಿಂಗ್ ಅತ್ಯಲ್ಪ ಪಾತ್ರ ವಹಿಸುತ್ತದೆ,ಚಿತ್ರದಲ್ಲಿ ಇದನ್ನು ಕೆಲವೇ ಸೆಕೆಂಡ್ ಗಳ ವರೆಗೆ ಮಾತ್ರ ತೋರಿಸಲಾಗಿದೆ).

ಡಾನ್ ಬ್ರೌನ್ ವಿರುದ್ಧ ರಿಚರ್ಡ್ ಲೇಘ್ ಮತ್ತುಮೈಕೆಲ್ ಬೆಜೆಂಟ್ ಅವರು ಮೊಕದ್ದಮೆ ಹೂಡಿದರು,ಹೋಲಿ ಬ್ಲಡ್ ಹೋಲಿ ಗ್ರೇಲ್ ನ ಗ್ರಂಥಕಾರರು ಚಿತ್ರದ ಪ್ರಚಾರಕ್ಕೆ ಮತ್ತಷ್ಟು ಪ್ರೊತ್ಸಾಹ ಕೊಟ್ಟಂತಾಯಿತು.

ಒಂದು ವ್ಯತಿರಿಕ್ತ ಎನ್ನುವ ಹಾಗೆ ದಿ ಅಮೇಜಿಂಗ್ ರೇಸ್ 9 ಕೂಡಾ ಕಾಣಿಸಿತು.ಇದರಲ್ಲಿ ಒಂದು ತಂಡ ಚಿತ್ರದ ಪ್ರಧಾನ ಸ್ಥಳ ಕ್ಯಾಲಿಫೊರ್ನಿಯಾದ ಹಾಲಿವುಡ್ ಗೆ ಪ್ರವಾಸದ ಅವಕಾಶ ಪಡೆಯಿತು. ಈ ಸ್ಪರ್ಧೆಯಲ್ಲಿ ಮೊದಲು ಇಲ್ಲಿಗೆ ಬರುವ ತಂಡವು ಪಿಟ್ ಸ್ಟಾಪ್ ಗೆ ಬಂದು ಚರ್ಮದ ಎರಡು ಕಾಗದಗಳನ್ನು ತೋರಿಸಬೇಕು.ಅವರು ಲಿಯೊನಾರ್ಡ್ ಡ ವಿಂಚಿಯ ವಿಟ್ರುವಿಯನ್ ಮನುಷ್ಯ ಮತ್ತು ಒಂದು ಸಾಂಕೇತಿಕ ಸಂದೇಶ ಹೊಂದಿರಬೇಕು ಪ್ರಥಮವಾಗಿ ಬರುವವರಿಗೆ ಬಹುಮಾನ.

ಪತ್ರಿಕಾ ಪ್ರದರ್ಶನಗಳು[ಬದಲಾಯಿಸಿ]

ಈ ಅತಿ ಪ್ರಚಾರದ ಭರಾಟೆಯಲ್ಲಿ ಸೊನಿ ಮತ್ತು ಇಮ್ಯಾಜಿನ್ ಎಂಟರ್ ಟೇನ್ ಮೆಂಟ್ ಗಳು ಈ ಯೋಜನೆಯನ್ನು ಹಿಂದೆಗೆಯುವಂತೆ ನಿರ್ಧರಿಸಿದವು,ಇದು ಒಂದು ರೀತಿಯ ಮಾರುಕಟ್ಟೆಯ ಸಂಶೋಧನೆಗೆ ಎಡೆ ಮಾಡಿತು.ಕೆಲವೊಮ್ಮೆ ಚಿತ್ರದ ಪ್ರಚಾರದ ದೃಷ್ಟಿಯಿಂದ ವಿವಾದ ಬೆಳೆದರೂ ಅದು ಮುಂದೆ ಒಳ್ಳೆಯದನ್ನು ಮಾಡುವ ಬಗ್ಗೆ ಅವುಗಳಿಗೆ ವಿಶ್ವಾಸ ಇತ್ತು. ಸ್ಟುಡಿಯೊ ಪ್ರತಿನಿಧಿಗಳು ಮಾಡಿದ ಉಪಾಯವೆಂದರೆ ಚಿತ್ರದ ರಹಸ್ಯ ಕಾಪಾಡಲು ಇದರ ಬೇಧ ಒಡೆಯದಿರುವಂತೆ ನೋಡಿಕೊಂದು ಚಿತ್ರದ ಒಳಗುಟ್ಟನ್ನು ಪ್ರೇಕ್ಷಕರಿಗಾಗಿ ಬಹಿರಂಗಪಡಿಸುವುದು ಸರಿಯಾದ ಕ್ರಮವಲ್ಲ ಎಂದು ಅವರು ಯೋಚಿಸಿದರು.ಈ ಪುಸ್ತಕದ ಓದುಗರು ಕ್ರಮಬದ್ದವಾಗಿ ಅದರ ರಹಸ್ಯವನ್ನು ತಿಳಿಯಲು [ಸೂಕ್ತ ಉಲ್ಲೇಖನ ಬೇಕು]ನೋಡುತ್ತಾರೆ. ಇನ್ನೂ ಥೆಯಟರ್ ಮಾಲಿಕರು ಸಹ 2 1/2 ಗಂಟೆಯ ಚಿತ್ರವನ್ನು ಚಿತ್ರೋತ್ಸವದ ಐದು ದಿನಗಳ ಮುಂಚೆ ವೀಕ್ಷಿಸಿದರು.ಅದರ ಪ್ರದರ್ಶನಾ ಗುಣಗಳನ್ನು ಸಹ ಅದು ಪೂರ್ತಿಗೊಳಿಸಿರಲಿಲ್ಲ ಎಂದೂ ಅವರು [೩೯] ಹೇಳುತ್ತಾರೆ.

ಪ್ರೊತ್ಸಾಹಕರ ಪದಬಂಧಗಳು[ಬದಲಾಯಿಸಿ]

ಪ್ರೇಕ್ಷಕರನು ದಿಗಿಲುಗೊಳಿಸುವ ಹಲವಾರು ಪ್ರಶ್ನಾವಳಿ ಮತ್ತು ಬುದ್ದಿ ಚಾತುರ್ಯದ ಲೆಕ್ಕಗಳನ್ನು ಟ್ರೇಲರ್ ಮತ್ತು ಜಾಹಿರಾತುಗಳಲ್ಲಿ ತೋರಿಸಲಾಯಿತು. ಮಧ್ಯ ಏಪ್ರಿಲ್ ನಲ್ಲಿ ದಿ ಡ ವಿಂಚಿ ಕೋಡ್ ಬಗ್ಗೆ ಎಂಟರ್ ಟೇನ್ ಮೆಂಟ್ ಟುನೈಟ್ ಮತ್ತು ದಿ ಇನ್ ಸೈಡರ್ ನಲ್ಲಿ ಪ್ರಕಟವಾದ ಸಂದರ್ಶನಗಳು ಅದರ ನಿರ್ಮಾಣ ಹಾಗು ಚಿತ್ರಕಥೆ ಮೇಲೆ ಬೆಳಕು ಚೆಲ್ಲಿದವು.ಹಲವಾರು ಪತ್ರಗಳು ಸಂದರ್ಶನಾ ವಿಷಯದಲ್ಲಿ ಸೇರ್ಪಡೆಯಾದವು.

ಫೆಬ್ರವರಿಯಲ್ಲಿ ಸೊನಿ ಕಾರ್ಪೊರೇಶನ್ ಗ್ರೇಸ್ ಹಿಲ್ಸ್ ಮಿಡಿಯಾ ಜೊತೆ ಸೇರಿ ದಿ ಡ ವಿಂಚಿ ಡೈಲಾಗ್ Archived 2010-03-30 ವೇಬ್ಯಾಕ್ ಮೆಷಿನ್ ನಲ್ಲಿ.(ಅಂದರೆ ದಿ ಡ ವಿಂಚಿ ಚಾಲೇಂಜ್ (ಸವಾಲು))ಕೈಗೆತ್ತಿಕೊಂಡು ಒಂದು ಸಮಗ್ರ ವೆಬ್ ಸೈಟ್ ನ್ನು ಪ್ರಾರಂಭಿಸಿ ಚಿತ್ರಕ್ಕಿರುವ ಕ್ರಿಶ್ಚಿಯನ್ ವಿರೋಧವನ್ನು ಹೊಡೆದು ಹಾಕಲು ಪ್ರಯತ್ನಿಸಿತು. ಈ ಸೈಟ್ ನಲ್ಲಿ ಕೆಲವು ಸಮ್ಮಿಶ್ರ ಟೀಕೆಗಳನ್ನು ಸೇರಿಸಿ ಚಿತ್ರದ ಪ್ರೊತ್ಸಾಹಕರ ಅಂಶಗಳನ್ನೂ ಇದರಲ್ಲಿ ಅಳವಡಿಸಲಾಗಿತ್ತು.

ಚಲನಚಿತ್ರಕ್ಕೆ ಪ್ರತಿಕ್ರಿಯೆ[ಬದಲಾಯಿಸಿ]

ಈ ಚಿತ್ರದಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು.ಮುಖ್ಯವಾಗಿ ಲ್ಯಾಂಗ್ಡೊನ್ ನ ಅಭಿಪ್ರಾಯಗಳನ್ನು ಕಾದಂಬರಿಯಲ್ಲಿರುವುದಕ್ಕಿಂತ ಸ್ವಲ್ಪಮಟ್ಟಿಗೆ ಮೃದುಗೊಳಿಸಲು ಯತ್ನಿಸಲಾಗಿದೆ.

ಪ್ರತಿಭಟನೆಗಳು[ಬದಲಾಯಿಸಿ]

ಚಿತ್ರದ ಆರಂಭಿಕ ವಾರದಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಹಲವೆಡೆ ಪ್ರತಿಭಟನೆಗಳು ಕಂಡು ಬಂದವು;ಇದು ಧರ್ಮ ವಿರೋಧಿ ಚಿತ್ರ ಎಂಬ ವಿರೋಧಗಳು ವ್ಯಾಪಕವಾಗಿದ್ದವು.ಇದರಿಂದಾಗಿ ಕ್ಯಾಥೊಲಿಕ್ ಚರ್ಚ್ ಮತ್ತು ಜಿಸಸ್ ಕ್ರಿಸ್ತ್ ಎರಡೂ ವಿಷಯಗಳಿಗೆ ನಾಚಿಕೆ ತರಿಸುವ ವಿಷಯವಾಗಿದೆ ಎಂದು ಜನರು ದೂರಿದರು. ಚಿತ್ರ ಆರಂಭದ ದಿನದಲ್ಲೇ ಅಥೆನ್ಸ್ ,ಗ್ರೀಸ್ ನಲ್ಲಿ ಸುಮಾರು 200 ಪ್ರತಿಭಟನಾಕಾರರು ತೀವ್ರವಾಗಿ ಪ್ರತಿಭಟಿಸಿದರು. ಮನಿಲಾದಲ್ಲಿ ಎಲ್ಲಾ ಥೆಯೆಟರ್ ಗಳಲ್ಲಿ ಇದನ್ನು ರದ್ದುಪಡಿಸಲಾಯಿತು.MTRCB ಇದನ್ನು R18 ಚಿತ್ರವೆಂದು ಫಿಲಿಪೈನ್ಸ್ ನಲ್ಲಿ [೪೦] ಘೋಷಿಸಲಾಯಿತು. ಪಿಟ್ಸ್ ಬರ್ಗ ನಲ್ಲಿ ಸಹ ಇದರ ಪ್ರದರ್ಶನದ ತೀವ್ರವಾದ ವಿರೋಧ [೪೧] ವ್ಯಕ್ತವಾಯಿತು. ಚಿತ್ರೀಕರಣದ ಪ್ರದೇಶದಲ್ಲಿ ಸಹ ವಿರೋಧ ಕಂಡುಬಂತು.ಕೇನ್ಸ್ ಪ್ರಿಮಿಯರ್ ಎದುರು ಕೂಡಾ ಒಬ್ಬ ಭಿಕ್ಷು ಮತ್ತು ಕ್ರೈಸ್ತ್ರ ಸನ್ಯಾಸಿಯೊಬ್ಬಳು ಸೇರಿಕೊಂಡು ಮೌನ ಮೆರವಣೆಗೆ ಪ್ರತಿಭಟನೆ [೩೬] ನಡೆಸಿದರು. ಭಾರತದ ಚೆನ್ನೈ ನಲ್ಲಿ ಎರಡು ತಿಂಗಳುಗಳ ಕಾಲ ಚಿತ್ರ ಪ್ರದರ್ಶನ ತಡೆ ಹಿಡಿದು ಕ್ರಿಸ್ತ್ಚಿಯನ್ ಮತ್ತು ಮುಸ್ಲಿಮ್ ಸಮೂಹಗಳನ್ನು [೪೨] ಸಮಾಧಾನಪಡಿಸಲಾಯಿತು.

ವಿಮರ್ಶಾತ್ಮಕ ಪ್ರತಿಕ್ರಿಯೆ[ಬದಲಾಯಿಸಿ]

ದಿ ಡ ವಿಂಚಿ ಕೋಡ್ ವಿಮರ್ಶಕರಿಂದಲೂ ಮೆಚ್ಚುಗೆ ಪಡೆಯಿತು. ಚಿತ್ರವು "ರಾಟನ್ "25%"ನಷ್ಟು ಧನಾತ್ಮಕ ಪ್ರತಿಕ್ರಿಯೆ ಬಂದರೂ ವೆಬ್ ಸೈಟ್ ರಾಟನ್ ಟೊಮೊಟೊಸ್ "ಸುಮಾರು 218 ವಿಮರ್ಶೆಗಳನ್ನು ಬಳಸಿ 4.8/10 ತೇಟಿಂಗ್ ನ್ನು ನೀಡಲಾಯಿತು.[೪೩] ರಾಟನ್ ಟೊಮೊಟೊಸ್ ವಿಮರ್ಶೆಗಳ ಪ್ರಕಾರ "ಬ್ರೌನ್ ಕಾದಂಬರಿಯಲ್ಲಿಗಿಂತ ಸಿನೆಮಾದಲ್ಲಿ ಅಷ್ಟಾಗಿ ದಿ ಡ ವಿಂಚಿ ಕೋಡ್ ಪರಿಣಾಮಕಾರಿಯಾಗಿಲ್ಲವೆಂದೇ [೪೩] ಹೇಳಲಾಗಿದೆ. ಕೇನ್ಸ್ ಚಲನಚಿತ್ರೋತ್ಸವದಲ್ಲಿ ಚೊಚ್ಚಿಲ ಪ್ರದರ್ಶನದಲ್ಲೇ ಚಿತ್ರ ಅತ್ಯಲ್ಪ ಪ್ರೊತ್ಸಾಹ [೪೪] ಪಡೆಯಿತು.

ವಿಮರ್ಶಕ ಮೈಕೆಲ್ ಮೆಡ್ ವೆಡ್ ಅವರ ಪ್ರಕಾರ ಇದಕ್ಕೆ ನಾಲ್ಕು ಸ್ಟಾರಗಳ ಪೈಕಿ ಒಂದನ್ನು ನೀಡಿದ್ದಾರೆ.(ನಾಲ್ಕರಲ್ಲಿ ಒಂದು) "ಇಲ್ಲಿನ ಸುಮಾರು ನಟರ ಅಭಿನಯ ವ್ಯರ್ಥ್ಯವಾಗಿದೆ."ಇಲ್ಲಿನ ದೃಶ್ಯಗಳ ಸಂಯೋಜನೆ ಮತ್ತು ಹಠಾತ್ ತಿರುವುಗಳು ಮೂಲಭೂತವಾಗಿಲ್ಲ ಮತ್ತು ಕಥಾನಕಕ್ಕೆ ಪೂರಕವಾಗಿರದೇ ಸಣ್ಣತನ ಪ್ರದರ್ಶಿಸಿವೆ.ಅತ್ಯಂತ ಎಳಸಲು ಪಾತ್ರಗಳನ್ನು [೪೫] ಸೃಷ್ಟಿಸಲಾಗಿದೆ." ದಿ ನ್ಯುಯಾರ್ಕರ್ ನ ಆಂಥೊನಿ ಲೇನ್ ಕ್ಯಾಥೊಲಿಕ್ ರ ಭಾವನೆಗಳನ್ನು ಪರಿಗಣಿಸಿ "ಇದರಲ್ಲಿ ಸ್ವಯಂ ಗೋಚರವೆಂದರೆ ಧರ್ಮದ ಮಟ್ಟದ ಇಳಿಕೆಯಾಗಲೀ ಇಲ್ಲವೇ ಯಾವುದೇ ನಂಬಿಗಸ್ಥನೊಬ್ಬ ತನ್ನ ಧರ್ಮದ ಗಡಿ-ಅಂಚನ್ನು ದಾಟಲಾಗದು [೪೬] ಎಂದಿದ್ದಾರೆ."

ಲಿಯೊನಾರ್ಡ್ ಮಾಲ್ಟಿನ್ ತನ್ನ ಮೂವಿ ಗೈಡ್ ನಲ್ಲಿ "ಈ ಚಿತ್ರವು ನಂಬಿಕಸ್ಥರನ್ನು ತಲೆ ತಗ್ಗಿಸುವಂತೆ [೪೭] ಮಾಡಿದೆ."

ನಿರ್ದೇಶಕ ರೊನ್ ಹೊವರ್ಡ್ ಅವರಿಗೆ ಈ ಎಲ್ಲಾ ಋಣಾತ್ಮಕ ವಿಮರ್ಶೆಗಳು "ತೀರ ಖಿನ್ನತೆ,ಬೇಸರ"[೪೮] ತಂದಿವೆ.

ಹಲವಾರು ಟೀಕಾಕಾರರು ಈ ಚಲನಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ರಾಬರ್ಟ್ ಎಬರ್ಟ್ ಅವರು ನಾಲ್ಕು ಸ್ಟಾರ್ ಗಳಿ ಮೂರನ್ನು ನೀಡಿ ಒಂದು ರೀತಿಯ ಪ್ರಶಂಸೆಯನ್ನು ನೀಡಿ "ಚಿತ್ರವು ತಲ್ಲೀನತೆ,ಜಿಜ್ಞಾಸೆ ಮತ್ತು ನಿರಂತರ ಉಳಿಯುವುದನ್ನು [೪೯] ವಿವರಿಸುತ್ತದೆ" ದಿ ಚಾರ್ಲೊಟ್ಟೆ ಆಬ್ಸರ್ವರ್ ನ ಲಾರೆನ್ಸ್ ಟೊಪ್ ಮ್ಯಾನ್ ಈ ಚಿತ್ರದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ನಾಲ್ಕರ ಸ್ಟಾರ್ ಗಳಲ್ಲಿ ಮೂರುವರೆ ನೀಡಿ "ಇನ್ನುಳಿದ ಹಾಲ್ಯುಡ್ ನ ಬ್ಲಾಕ್ ಬಸ್ಟರ್ ತರಹ ಇದೂ ಕೂಡಾ ಪ್ರೇಕ್ಷಕರ ಜಾಣತನದ ಪರೀಕ್ಷೆಗೆ ಮುಂದಾಗಿದೆ."[೫೦] ಎಂದಿದ್ದಾರೆ.

ಆದಾಗ್ಯೂ ಹಲವಾರು ವಿಮರ್ಶಕರು ಋಣಾತ್ಮಕ ಅಭಿಪ್ರಾಯ ನೀಡಿ ಎರಡೂ ಕಡೆಯ ವಿಮರ್ಶಕರಿಗೆ ಸಬಲ ಅಭಿನಯ ನೀಡಿದ ಇವಾನ್ ಮೆಕ್ ಲೆನ್ ಪೌಲ್ ಬೆಟ್ಟನಿ ಪಾತ್ರವನ್ನು [೫೧] ಮೆಚ್ಚಿಕೊಂಡಿದ್ದಾರೆ.

ಈ ಚಿತ್ರವು ರಜ್ಜಿ ನಾಮನಿರ್ದೇಶನಕ್ಕೆ ಪಾತ್ರವಾಗಿದ್ದು ಕಳಪೆ ನಿರೆದೇಶಕ ಪ್ರಶಸ್ತಿಗೆ ಒಳಗಾಯಿತು.(ರೊನ್ ಹೊವರ್ಡ್ ) "ವರ್ಸ್ಟ್ ಮೂವೀಸ್ ಆಫ್ 2006" ಎಂಬ ಎಬರ್ಟ್ &ರೊಪೆರ್ (ಜನವರಿ13.2007)ಅತಿಥಿ ವಿಮರ್ಶಕ ಮೈಕೆಲ್ ಫಿಲಿಪ್ಸ್ (ರೊಗರ್ಟ್ ಎಬರ್ಟ್ ಅವರ ಜಾಗದಲ್ಲಿರುವುದು)ಇದನ್ನು#2ರ ಮಟ್ಟಕ್ಕೆ ಅಂಕ ನೀಡಿದರು.

ಚಿತ್ರದ ನಕಲಿ ಅಥವಾ ಮೋಸದ ಅಂಶ ದಿ ನಾರ್ಮನ್ ರಾಕ್ ವೆಲ್ ಕೋಡ್ ಅಂದೇ ಬಿಡುಗಡೆಯಾಯಿತು.

ಬಾಕ್ಸ್ ಆಫಿಸ್ ಪ್ರತಿಕ್ರಿಯೆ[ಬದಲಾಯಿಸಿ]

ಆರಂಭಿಕ ವಾರಾಂತ್ಯ[ಬದಲಾಯಿಸಿ]

ಇಷ್ಟೊಂದು ಪ್ರತಿಭಟನೆ ಪ್ರಾರಂಭದಲ್ಲಿನ ಪೂರ್ವ-ಪೀಠಿಕೆಯ ಗಳಿಕೆಯಲ್ಲಿ ಹೆಚ್ಕು ಹೆಸರು ಮಾಡಲಿಲ್ಲ.ಆದರೂ ಬಾಕ್ಸ್ ಆಫಿಸ್ ನಲ್ಲಿ$29ದಶಲಕ್ಷ ಡಾಲರ್ ಗಳಿಸಿತು.ಪ್ರತಿನಿತ್ಯ ಸರಾಸರಿ $[೫೨] 7764ನಷ್ಟಿತ್ತು. ಆರಂಭಿಕದಲ್ಲಿ ಅಮೆರಿಕಾದಲ್ಲಿ ಪ್ರೇಕ್ಷಕರು $77ದಶಲಕ್ಷ ಮತ್ತು ವಿಶ್ವಾದ್ಯಾಂತ $224ದಶಲಕ್ಷ ಸಂಗ್ರಹವಾಯಿತು. ಟೊಮ್ ಹ್ಯಾಂಕ್ಸ್ ಮತ್ತು ರೊನ್ ಹೊವರ್ಡ್ ಅವರಿಗೆ ದಿ ಡ ವಿಂಚಿ ಕೋಡ್ ಅತ್ಯುತ್ತಮ ಪ್ರಾದೇಶಿಕ [೫೩] ಸಂಗ್ರಹಗಾರನಾಗಿತ್ತು.

ಆ ವರ್ಷದ ಅತಿ ಹೆಚ್ಚು ವಾರಾಂತ್ಯದಲ್ಲಿ(ನಂತರ Pirates of the Caribbean: Dead Man's Chest ಮತ್ತು X-Men: The Last Stand , ಅತಿ ಹೆಚ್ಚು ಗಳಿಕೆ ಮಾಡಿದ 3ನೆಯ ದೊಡ್ಡ ಚಿತ್ರವೆನಿಸಿದೆ.ಅಲ್ಲದೇ ವಿಶ್ವದಲ್ಲೇ ಎರಡನೆಯ ದೊಡ್ಡಚಿತ್ರವಾಗಿದೆ.2005ರಲ್ಲಿ ಹಿಂದಿನ ದಾಖಲೆ Star Wars Episode III: Revenge of the Sith [೫೪] ಮಾಡಿದೆ. ಇದು UK,ನಲ್ಲಿ ಹೆಚ್ಚಾಗಿ 'ಕ್ರಿಟಿಕ್ -ಪ್ರೂಫ್ ಫಿಲ್ಮ್ 'ಬಿಡುಗಡೆ ಮಾಡಬೇಕಾಗುತ್ತದೆ,ಎಂದು [೫೫] ಹೇಳಿದರು.

ಶ್ರೇಣಿಕರಣ ಮತ್ತು ಒಟ್ಟು ಸ್ಥಿತಿ[ಬದಲಾಯಿಸಿ]

 • USA ನಲ್ಲಿ ಬಾಕ್ಸ್ ಆಫಿಸ್ ನಲ್ಲಿ ನಂಬರ್ಫ್ 1 ಚಿತ್ರವೆಂದು ಮೊದಲ ವಾರದಲ್ಲಿ $111 ದಶಲಕ್ಷ ಗಳಿಕೆ [೫೬] ಕಂಡಿತು. ಸುಮಾರು 2006ರಲ್ಲಿ USAದಲ್ಲಿ ಐದನೆಯ ಅತಿದೊಡ್ಡ ಗಳಿಕೆಯಾದರೆ ವಿಶ್ವಾದ್ಯಂತ $758 ಆರಂಭಿಕದ ಗಳಿಕೆ [೧] ಕಂಡಿತು.
 • USA.ನಲ್ಲಿ ಜೂನ್ 20,2006 ರಲ್ಲಿ ಕೇವಲ $200ದಶಲಕ್ಷ ಗಳಿಕೆ ಮಾಡಿದ 2ನೆಯ ಚಿತ್ರವಾಗಿದೆ.$200 ದಶಲಕ್ಷ ಗಳಿಕೆ [೫೭] ಮಾಡಿದೆ.

ಮುಂದಿನ ಘಟ್ಟ[ಬದಲಾಯಿಸಿ]

ಚಿತ್ರಕಥಾ ಲೇಖಕ ಅಕಿವಾ ಗೊಲ್ಡ್ ಮ್ಯಾನ್ ಎಂಜಿಲ್ಸ್ &ಡೆಮಾನ್ಸ್ (ಡಾನ್ ಬ್ರೌನ್ ಅವರ ಕಾದಂಬರಿದಿ ಡ ವಿಂಚಿ ಕೋಡ್ ಗಿಂತ ಮೊದಲಿನದು) ರೊನ್ ಹೊವರ್ಡ್ ಅವರು ನಿರ್ದೇಶನ [೫೮] ಮಾಡಿದ್ದು. ಅನುಕ್ರಮವಾಗಿ ಈ ಚಿತ್ರವು ದಿ ಡ ವಿಂಚಿ ಕೋಡ್ ಗಿಂತ ಮೊದಲ ಸ್ಥಾನ ಪಡೆಯುತ್ತದೆ. ಚಿತ್ರ ನಿರ್ಮಾಪಕರು ಈ ದೃಶ್ಯದಲ್ಲಿ ಮತ್ತೆ ಮರು ಜೀವ ನೀಡಲಾಯಿತು. ಟೊಮ್ ಹ್ಯಾಂಕ್ಸ್ ತನ್ನ ಲ್ಯಾಂಗ್ಡೊನ್ ಪಾತ್ರವನ್ನು ಮೇ 2009ರಲ್ಲಿ ಬಿಡುಗಡೆಯಾದ ಚಿತ್ರದಲ್ಲಿದ್ದ.(ಉತ್ತಮ ಪಾತ್ರ)

DVD[ಬದಲಾಯಿಸಿ]

ಚಿತ್ರದ DVD ಯನ್ನು ನವೆಂಬರ್ 14,2006ರಂದು ಮೂರು ಸಂಪುಟಗಳಲ್ಲಿ [೫೯] ಬಿಡುಗಡೆಯಾಯಿತು.

 1. ಒಂದು ಥ್ರೀ-ಡಿಸ್ಕ್ ನ್ನು ವೈಡ್ ಸ್ಕ್ರೀನ್ ಮತ್ತು ಒಂದುಫುಲ್ ಸ್ಕ್ರೀನ್ ನನ್ನು ಹಿಸ್ಟರಿ ಚಾನಲ್ ಡಾಕ್ಯುಮೆಂಟರಿ ನಲ್ಲಿ ತೋರಿಸಲಾಯಿತು.
 2. ಎರಡು-ಡಿಸ್ಕ್ ಗಳನ್ನು ವೈಡ್ ಸ್ಕ್ರೀನ್ ಮತ್ತು ಫುಲ್ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಯಿತು.
 3. ಒಂದು "ವಿಶೇಷ ಸಂಪುಟದ ಗಿಫ್ಟ್ ಸೆಟ್ "ಎರಡು ಡಿಸ್ಕ್ DVDಗಳನ್ನು ಒಳಗೊಂಡಿತ್ತು,ಕಾರ್ಯೋನ್ಮುಖ ಕ್ರಿಪ್ಟೆಕ್ಸ್ ಮತ್ತು ರಾಬರ್ಟ್ ಲ್ಯಾಂಗ್ಡೊನ್ ಜರ್ನಲ್ [೫೯][೬೦][೬೧] ಮೂರ್ತರೂಪ,

ಎಲ್ಲಾ DVD ಗಳು ನಿರ್ದೇಶಕ ರೊನ್ ಹೊವರ್ಡ್ ಅವರ ಪರಿಚಯದೊಂದಿಗೆ ಹತ್ತು ಗುಣಲಕ್ಷಣಗಳು ಮತ್ತಿತರ ಅಧಿಕ ಗುಣಲಕ್ಷಣಗಳನ್ನು ವಿವರಿಸಲಾಗಿತ್ತು.

ಆಸ್ಟ್ರೇಲಿಯಾದಲ್ಲಿ,ನ್ಯುಜಿಲ್ಯಾಂಡ್ ಸ್ಪೇನ್ ಮತ್ತು ಲ್ಯಾಟಿನ್ ಅಮೆರಿಕಾ (DVD ಕೋಡ್ ಪ್ರಾದೇಶಿಕ ಕೋಡ್ 4 )ಇನ್ನೆರಡು ಡಿಸ್ಕ್ ಗಳು ಸಹ ಚಿತ್ರದ ಹೆಚ್ಚಿನ ವಿಷಯವನ್ನು ಒಳಗೊಂಡಿದ್ದವು.ಸುಮಾರು ಇಪ್ಪತ್ತೈದು ನಿಮಿಷದ ಬರಹದ ಅಧಿಕ ವಿಷಯ ಸಂಗ್ರಹವಿದೆ.ಇದು ಸುಮಾರು ಮೂರು ಗಂಟೆಗಳ ವರೆಗೆ ನಡೆಯುವ ಸಾಮರ್ಥ್ಯ ಹೊಂದಿದೆ.

ಹಾಂಗ್ ಕಾಂಗ್ ಮತ್ತು ಕೊರಿಯಾ(ರೀಜನ್ 3)ಇನ್ನುಳಿದ ಕತ್ತರಿ ಪ್ರಯೋಗ ಕೂಡಾ ಬಿಡುಗಡೆ ಕಂಡಿತು.DVD ಯ ಎರಡು ಡಿಸ್ಕ್ ಸೆಟ್ ಗಳ ಪೂರ್ಣಪಾಥವಿದೆ. ಎರಡು ಗಿಫ್ಟ್ಸ್ ಸೆಟ್ ಗಳು ಬಿಡುಗಡೆ ಕಂಡಿತು.ಇದರಲ್ಲಿನ ಜರ್ನಲ್ ಕೂಡಾ ವಿಷಯದ ಸಂಗ್ರಹಕ್ಕೆ ಅನುವು ಮಾಡಿಕೊಟ್ಟಿತು. ಫ್ರೆಂಚ್ ಮತ್ತು ಸ್ಪ್ಯಾನಿಶ್ ರೀಜನ್ 2ಡಿಸ್ಕ್ ಕೂಡಾ ಒಂದು ವಿಶೇಷ ಗಿಫ್ಟ್ ಪಡೆಯಿತು.

ಏಪ್ರಿಲ್ 28,2009,ರಲ್ಲಿ 2ಡಿಸ್ಕ್ ಬ್ಲು ರೇ ಸಂಪುಟವನ್ನು ವಿಸ್ತೃತ ರೂಪದಲ್ಲಿ ಉತ್ತರ ಅಮೆರಿಕಾದಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ರೆಗ್ಯುಲರ್ DVD ಬಿಡುಗಡೆಯಾಗಲಿಲ್ಲ.ಅಥವಾ ರೀಜನ್ 2 ಯುನೈಟೈಡ್ ಕಿಂಗ್ ಡಮ್ ನಲ್ಲಿ ಬಿಡುಗಡೆಯಾಗಲಿಲ್ಲ.ಆದರೆ ಕತ್ತರಿ ಪ್ರಯೋಗದ ಒಂದು ಸಂಪುಟ ಮಾತ್ರಜರ್ಮನಿಯಲ್ಲಿ ಬಿಡುಗಡೆ ಕಂಡಿತು.

ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Portalpar

ಆಕರಗಳು[ಬದಲಾಯಿಸಿ]

 1. ೧.೦ ೧.೧ "The Da Vinci Code (2006)". Box Office Mojo. Retrieved 2006-12-16.
 2. "Festival de Cannes: The Da Vinci Code". festival-cannes.com. Retrieved 2009-12-17.
 3. ೩.೦ ೩.೧ BBC News: Cardinal urges Da Vinci action
 4. Boxofficemojo.com: The Da Vinci Code
 5. Michael Haag & Veronica Haag, with James McConnachie, The Rough Guide to The Da Vinci Code: An Unauthorised Guide to the Book and Movie (Rough Guides Ltd; 2006)
 6. http://www.aip.org/isns/reports/2006/009.html Archived 2009-02-13 ವೇಬ್ಯಾಕ್ ಮೆಷಿನ್ ನಲ್ಲಿ. Saint-Sulpice Chapel - The Da Vinci Code's Best Kept Secret
 7. TimesOnline: Nun protests over cathedral filming of Da Vinci Code
 8. Guardian Unlimited: Location fee funds Da Vinci Code rebuttal
 9. "Secret Da Vinci Code airport set revealed", The Argus, 2006-01-09. Retrieved on 2009-05-19.
 10. "The Da Vinci Code UK Filming locations". Archived from the original on 2011-10-07. Retrieved 2010-06-07.
 11. "Gordon Brown Opens Underwater Stage at Pinewood Studios, 19 May 2005". Archived from the original on 20 ಸೆಪ್ಟೆಂಬರ್ 2006. Retrieved 7 ಜೂನ್ 2010.
 12. WHAS11news: Fire chars British set of new Bond movie, Katie Fretland, 30 July 2006
 13. "American Cinematographer: Secret History". Archived from the original on 2007-02-15. Retrieved 2010-06-07.
 14. "Gordon Brown Opens Underwater Stage at Pinewood Studios," 19-May-2005, webpage: PinewoodShepperton-Stage Archived 2006-09-20 ವೇಬ್ಯಾಕ್ ಮೆಷಿನ್ ನಲ್ಲಿ.
 15. "Pinewood Studios - Underwater Stage Pinewood Studios - Water Filming". Archived from the original on 2007-09-16. Retrieved 2010-06-07.
 16. "Reaffirm the Resurrection, Pope urges faithful". Catholic World News. May 1, 2006.
 17. Sánchez Hurtado, Manuel (May 17, 2006). "The Other Code". ROM: Opus Dei Press Office.
 18. RPP Noticias - “Código da Vinci” presenta grandes falsedades, afirman obispos del Perú
 19. "Cardenal Cipriani pide a fieles abstenerse de ver "El Código Da Vinci"". Archived from the original on 2006-06-21. Retrieved 2010-06-07.
 20. MSNBC ‘Da Vinci Code’ misses mark for Cannes critics
 21. http://www.realitytvworld.com/news/albino-group-protest-tom-hanks-the-da-vinci-code-film-1007723.php Albino group to protest Thom Hanks' "The Da Vinci Code."
 22. "Anti-pornography group asked GMA to Ban 'The Da Vinci Code'". Philippines: newsflash.org. April 19, 2006. Archived from the original on ಏಪ್ರಿಲ್ 21, 2006. Retrieved ಜೂನ್ 7, 2010.
 23. ೨೩.೦ ೨೩.೧ "Palace sidesteps 'Da Vinci' storm". The Manila Times. Philippines. April 19, 2006. Archived from the original on ಮೇ 15, 2006. Retrieved ಜೂನ್ 7, 2010.
 24. "'Da Vinci Code' for adults only, says film review body". Philippines: inq7.net. May 17, 2006. Archived from the original on ಅಕ್ಟೋಬರ್ 1, 2012. Retrieved ಜೂನ್ 7, 2010.
 25. ""The Da Vinci Code" can be shown uncut". Archived from the original on 2016-03-03. Retrieved 2010-06-07.
 26. "IHT ThaiDay - Manager Online". Archived from the original on 2011-05-16. Retrieved 2010-06-07.
 27. "ಆರ್ಕೈವ್ ನಕಲು". Archived from the original on 2006-05-22. Retrieved 2010-06-07.
 28. http://www.nzherald.co.nz/search/story.cfm?storyid=00077629-C13F-1471-9B8883027AF1010E[ಶಾಶ್ವತವಾಗಿ ಮಡಿದ ಕೊಂಡಿ]
 29. Sony Pictures statement on `Da Vinci Code` - Sify.com
 30. "The Hindu : Front Page : `The Da Vinci Code' banned in State". Archived from the original on 2009-05-10. Retrieved 2010-06-07.
 31. "The Hindu : Front Page : High Court quashes A.P. ban on film ". Archived from the original on 2009-05-10. Retrieved 2010-06-07.
 32. "India's Supreme Court rejects pleas to ban "Da Vinci Code""
 33. "SOLOMON ISLANDS TO BAN ‘THE DA VINCI CODE’" Archived 2009-05-10 ವೇಬ್ಯಾಕ್ ಮೆಷಿನ್ ನಲ್ಲಿ., Solomon Islands Broadcasting Corporation, May 26, 2006
 34. "ಆರ್ಕೈವ್ ನಕಲು". Archived from the original on 2008-05-05. Retrieved 2010-06-07.
 35. ೩೫.೦ ೩೫.೧ ೩೫.೨ Tom Teodorczuk and Mike Goodridge (5 November 2006). "Hanks blasts Da Vinci critics". Evening Standard. Archived from the original on 5 ಫೆಬ್ರವರಿ 2010. Retrieved 7 March 2010.
 36. ೩೬.೦ ೩೬.೧ ೩೬.೨ Charlotte Higgins (18 May 2006). "Fans out in force for Da Vinci premiere - but even kinder reviews are scathing". The Guardian. Retrieved 7 March 2010.
 37. Philip Pullella, "Boycott Da Vinci Code film", Reuters 28 April 2006. Accessed 20 May 2006.
 38. Larry Carroll: Ian McKellen Sticks Up For Evil In 'Da Vinci Code,' 'X-Men' [೧], MTV News May 15, 2006
 39. 'Da Vinci Code': The Mystery of the Missing Screenings - New York Times
 40. "Hundreds of Greek Orthodox march to protest Da Vinci Code movie". Athens: Deutsche Presse-Agentur. May 16, 2006. Archived from the original on ಸೆಪ್ಟೆಂಬರ್ 6, 2006. Retrieved ಜೂನ್ 7, 2010.
 41. "Locals Protest 'Da Vinci Code' Movie". KDKA News. Pittsburgh. May 19, 2006. Archived from the original on ಡಿಸೆಂಬರ್ 1, 2007. Retrieved ಜೂನ್ 7, 2010.
 42. "The Hindu News Update Service". Archived from the original on 2007-10-12. Retrieved 2010-06-07.
 43. ೪೩.೦ ೪೩.೧ The Da Vinci Code - Movie Reviews, Trailers, Pictures - Rotten Tomatoes
 44. ‘Da Vinci Code’ misses mark for Cannes critics - Da Vinci Code - MSNBC.com
 45. "Michael Medved: Movie Minute". Archived from the original on 2006-06-09. Retrieved 2010-06-07.
 46. Anthony Lane, HEAVEN CAN WAIT: The Da Vinci Code, The New Yorker, 29 May 2006
 47. Maltin, Leonard. Leonard Maltin's 2008 Movie Guide. New American Library. p. 319.
 48. "ಆರ್ಕೈವ್ ನಕಲು". Archived from the original on 2006-11-09. Retrieved 2010-06-07.
 49. ":: rogerebert.com :: Reviews :: The Da Vinci Code (xhtml)". Archived from the original on 2013-03-01. Retrieved 2021-09-27.
 50. Movie: The Da Vinci Code
 51. The Da Vinci Code Movie Review - MoviesOnline.ca
 52. "'Da Vinci Code' opens with estimated $29 million". Los Angeles: CNN. May 20, 2006. Archived from the original on ಮೇ 28, 2006. Retrieved ಜೂನ್ 7, 2010.
 53. CNN "'Da Vinci Code' a hot ticket" Archived 2006-06-02 ವೇಬ್ಯಾಕ್ ಮೆಷಿನ್ ನಲ್ಲಿ.
 54. [೨][ಮಡಿದ ಕೊಂಡಿ]
 55. Mark Lawson: Critics on The Da Vinci Code | |Guardian Unlimited Arts
 56. "The Da Vinci Code (2006)". Box Office Mojo. Retrieved 2006-12-16.
 57. The Da Vinci Code (2006)
 58. ComingSoon.net: Akiva Goldsman Back for Angels & Demons Archived 2012-10-06 ವೇಬ್ಯಾಕ್ ಮೆಷಿನ್ ನಲ್ಲಿ.
 59. ೫೯.೦ ೫೯.೧ amazon.com Widescreen Edition listing
 60. amazon.com Fullscreen Edition listing
 61. amazon.com Special Edition Giftset listing

ಉಲ್ಲೇಖ ದೋಷ: <ref> tag with name "Symbol" defined in <references> is not used in prior text.

ಉಲ್ಲೇಖ ದೋಷ: <ref> tag with name "ChinaCNN" defined in <references> is not used in prior text.

ಮ‌ೂಲಗಳು[ಬದಲಾಯಿಸಿ]

ಈ ಕೆಳಗಿನವು ಉಲ್ಲೇಖದ ಮೂಲಗಳು,ಮೂಲಾಕ್ಷರಗಳ ಮೂಲದ ಪುನರ್ ಮನನ:

 • ಲ್ಯಾರಿ ಕ್ಯಾರೊಲ್ : "ಇವಾನ್ ಮ್ಯಾಕ್ ಲ್ಲಿನ್ ಸ್ಟಿಕ್ಸ್ ಅಪ್ ಫಾರ್ ಎವಿಲ್ ಇನ್ ಡ ವಿಂಚಿ ಕೋಡ್ , X-Men " [6], MTV ನಿವ್ಸ್ , ಮೇ 15, 2006.
 • ಕ್ಯಾಥೊಲಿಕ್ ವರ್ಲ್ಡ್ ನಿವ್ಸ್ , "ರಿಅಫರ್ಮ್ ದಿ ರಿಸ್ರೆಕ್ಷನ್ , ಪೊಪ್ ಅರ್ಜಿಸ್ ಫೇಥ್ ಫುಲ್," ಕ್ಯಾಥೊಲಿಕ್ ವರ್ಲ್ಡ್ ನಿವ್ಸ್ , May 1, 2006.
 • CNN, "'ಡ ವಿಂಚಿ ಕೋಡ್' ಎ ಹಾಟ್ ಟಿಕೆಟ್," CNN, ಮೇ 21, 2006 (webpage expired).
 • CNN, "'ಡ ವಿಂಚಿ ಕೋಡ್' opens with ಅಂದಾಜು $29 ದಶಲಕ್ಷದೊಂದಿಗೆ ಆರಂಭ," CNN, ಮೇ 20, 2006 (webpage expired).
 • DPA, ಡೆಟ್ಸೆಕೆ ಪ್ರೆಸ್ಸೆ-ಎಂಜಂಟರ್, ಮೇ 16, 2006.DPA," ನೂರಾರು ಗ್ರೀಕ್ ಸಂಪ್ರದಾಯವಾದಿಗಳು ಡ ವಿಂಚಿ ಕೋಡ್ ಚಿತ್ರವನ್ನು ಪ್ರತಿಭಟಿಸಿದ್ದು"
 • ಫ್ರೆಟ್ ಲ್ಯಾಂಡ್, ಕಾಟೆ, "ಫೈರ್ ಚಾರ್ಸ್ ಬ್ರಿಟಿಶ್ ಸೆಟ್ ಆಫ್ ನಿವ್ ಬಾಂಡ್ ಮೂವಿ" 30 ಜುಲೈ 2006, webpage: WHAS11-DVC Archived 2006-08-08 ವೇಬ್ಯಾಕ್ ಮೆಷಿನ್ ನಲ್ಲಿ.: ಲೌವ್ರೆ ಇಂಟಿರಿಯರ್ ಸೆಟ್ ಫಿಲ್ಮಡ್ ಎಟ್ ಪೈನ್ವುಡ್.
 • ಸಾಂಚೆಜ್ ಹರ್ಟಾಡೊ, ಮ್ಯಾನ್ಯುವಲ್, ದಿ ಅದರ್ ಕೋಡ್ , Opus Dei Press Office, May 17, 2006.
 • KDKA ನ್ಯುಸ್ , "ಸ್ಥಳೀಯರ ಪ್ರತಿಭಟನೆ'ಡ ವಿಂಚಿ ಕೋಡ್ ' ಮೂವಿ ," KDKA ನ್ಯುಸ್ , ಮೇ 19, 2006.
 • ಲಿಯೊನಾರ್ಡ್ ಡ ವಿಂಚಿ , ಮೊನಾ ಲಿಸಾ (ಲಾ ಗಿಯೊಕೊಂಡಾ ) ಪೇಂಟಿಂಗ್ , 1503–1507, in ಲೌವ್ರೆ ವಸ್ತು ಸಂಗ್ರಾಹಾಲಯಗಳು .
 • ಪೈನ್ ವುಡ್ ಶೆಪ್ಪರ್ ಟೊನ್ ಸ್ಟುಡಿಯೊಸ್, "ಗೊರ್ಡಾನ್ ಬ್ರೌನ್ ಒಪನ್ಸ್ ಅಂಡರ್ ವಾಟರ್ ಸ್ಟೇಜ್ ಪೈನ್ ವುಡ್ ಸ್ಟುಡಿಯೊಸ್,"ನಲ್ಲಿ 19 May 2006, webpage: ಪೈನ್ ವುಡ್ ಶೆಪ್-ಸ್ಟೇಜ್ Archived 2006-09-20 ವೇಬ್ಯಾಕ್ ಮೆಷಿನ್ ನಲ್ಲಿ..
 • ಫಿಲಿಪ್ ಪುಲ್ಲೆಲಾ , "ಬಾಯ್ ಕಾಟ್ ಡ ವಿಂಚಿ ಕೋಡ್ ಚಿತ್ರ," ರೈಟರ್ಸ್, 28 ಏಪ್ರಿಲ್ 2006, ವೆಬ್: ScotsmanVatDVC, Accessed 22 August 2006.
 • US ಸಾಪ್ತಾಹಿಕ, "ಇವಾನ್ ಮ್ಯಕ್ ಲ್ಲೆನ್ Unable to Suspend Disbelief While Reading the Bible," US ಸಾಪ್ತಾಹಿಕ , 17 ಮೇ 2006: (has Video clip).

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Robert Langdon's Novels ಟೆಂಪ್ಲೇಟು:Ron Howard Films

ಟೆಂಪ್ಲೇಟು:Dan Brown Books etc