ದಿಲಿಪ್ ಕೆ. ಬಿಸ್ವಾಸ್
ದಿಲಿಪ್ ಕೆ. ಬಿಸ್ವಾಸ್ | |
---|---|
Born | |
Occupation | ಪರಿಸರವಾದಿ |
Known for | ಮಾಲಿನ್ಯ ನಿಯಂತ್ರಣ |
Awards | ಪದ್ಮಶ್ರೀ |
ದಿಲೀಪ್ ಕೆ. ಬಿಸ್ವಾಸ್ ಭಾರತೀಯ ಪರಿಸರವಾದಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ಮಾಜಿ ಅಧ್ಯಕ್ಷರು. [೧] ಅವರು ಸೈಲೆಂಟ್ ವ್ಯಾಲಿಯಲ್ಲಿ ಪರಿಸರ ಅಧ್ಯಯನಗಳನ್ನು ನಡೆಸಿದ ಸಮಿತಿಯ ಸದಸ್ಯರಾಗಿದ್ದರು ಮತ್ತು ಆ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿದರು. ಅಂತಿಮವಾಗಿ ಯೋಜನೆಯ ವಿರುದ್ಧ ಶಿಫಾರಸು ಮಾಡಿದರು. ಇದು ಸೈಲೆಂಟ್ ವ್ಯಾಲಿಯನ್ನು ರಾಷ್ಟ್ರೀಯ ಉದ್ಯಾನವನವಾಗಿ ಘೋಷಿಸಲು ಕಾರಣವಾಯಿತು. [೨] ಅವರು ಏಷ್ಯಾ ಮತ್ತು ಪೆಸಿಫಿಕ್‌ನಲ್ಲಿ ಸ್ವಚ್ಛ ಅಭಿವೃದ್ಧಿಯ ಪ್ರಕ್ರಿಯೆಯ ಅನುಷ್ಠಾನದ ಲೇಖಕರಾಗಿದ್ದಾರೆ. ಕ್ಯೋಟೋ ಪ್ರೋಟೋಕಾಲ್ ಸೂಚಿಸಿದ ಸ್ವಚ್ಛ ಅಭಿವೃದ್ಧಿಯ ಪ್ರಕ್ರಿಯೆಯ (ಸಿಡಿಎಂ) ಅನುಷ್ಠಾನಕ್ಕೆ ಮಾರ್ಗದರ್ಶಿಯಾಗಿ ವಿಶ್ವಸಂಸ್ಥೆ ಪ್ರಕಟಿಸಿದ ವರದಿ -ಸಮಸ್ಯೆಗಳು, ಸವಾಲುಗಳು ಮತ್ತು ಅವಕಾಶಗಳು - ಇದು ಅವರು ತಯಾರಿಸಿದ ವರದಿ.[೩] ಭಾರತದ ಉತ್ತರ ಪ್ರದೇಶದ ರಾಜಧಾನಿಯಾದ ಲಕ್ನೋದಲ್ಲಿ ಪರಿಸರ ನಿರ್ವಹಣಾ ಕಾನೂನುಗಳ ಕರಡು ರಚನೆಯ ಹಿಂದೆ ಅವರ ಕೊಡುಗೆ ಇದೆ.[೪] ಭಾರತ ಸರ್ಕಾರವು ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ೨೦೦೭ ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀಯನ್ನು ನೀಡಿ ಪುರಸ್ಕರಿಸಿತು. [೫]
ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Saligram Bhatt (2004). Kashmir Ecology and Environment: New Concerns and Strategies. APH Publishing. p. 305. ISBN 9788176486019.
- ↑ Prasad (2008). Environment, Development and Society in Contemporary India:An Introduction. Macmillan. p. 438. ISBN 9780230635302.
- ↑ Dilip K. Biswas (2003). Implementation of the Clean Development Mechanism in Asia and the Pacific: Issues, Challenges, and Opportunities. United Nations Publications. p. 36. ISBN 9789211203844.
- ↑ "A Report on State of Environment Lucknow" (PDF). Central Pollution Control Board. 2016. Retrieved 14 January 2016.
- ↑ "Padma Awards" (PDF). Ministry of Home Affairs, Government of India. 2016. Archived from the original (PDF) on 15 October 2015. Retrieved 3 January 2016.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Prof. Mwara (author), Dilip K Biswas (editor) (2005). A Guidebook for Local Catchment Management in Cities. UN-HABITAT. p. 107. ISBN 9789211317572.
{{cite book}}
:|last=
has generic name (help)