ತ್ಯಾವರೆಕೊಪ್ಪ ವನ್ಯಧಾಮ

ವಿಕಿಪೀಡಿಯ ಇಂದ
Jump to navigation Jump to search

ತ್ಯಾವರೆಕೊಪ್ಪ ವನ್ಯಧಾಮವು ಶಿವಮೊಗ್ಗ ಜಿಲ್ಲೆಯಲ್ಲಿ ಇದೆ. ಇದು ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ದಾರಿಯಲ್ಲಿ ಶಿವಮೊಗ್ಗದಿಂದ ಸುಮಾರು ೧೦ ಕಿ.ಮೀ ದೂರದಲ್ಲಿದೆ. ಇಲ್ಲಿ ಅರಣ್ಯ ಇಲಾಖೆಯವರು ಹುಲಿ-ಸಿಂಹ ಧಾಮವನ್ನು ನಿರ್ಮಿಸಿದ್ದಾರೆ. ಅರಣ್ಯ ಇಲಾಖೆಯವರು ಇದರಲ್ಲಿ ೧೯೮೮ ನೇ ಇಸವಿಯಿಂದ ಹುಲಿ-ಸಿಂಹ ಸಫಾರಿಯನ್ನು ಅಯೋಜಿಸಿದ್ದಾರೆ. ಇದಕ್ಕಾಗಿ ಅರಣ್ಯ ಇಲಾಖೆಯವರು ವಿಶೇಷ ವಾಹನಗಳನ್ನು ಬಳಸುತ್ತಾರೆ. ಇಲ್ಲಿ ಹುಲಿ-ಸಿಂಹಗಳಸ್ಟೇ ಅಲ್ಲದೆ ಕರಡಿ, ಜಿಂಕೆ, ಸಾರಂಗ, ಸಾಂಬಾರ್, ಕಡವೆ ಮುಂತಾದ ಹಲವಾರು ವನ್ಯ ಜೀವಿಗಳನ್ನು ಕೂಡ ಹೊಂದಿದ್ದಾರೆ. ಒಟ್ಟಿನಲ್ಲಿ ಇದು ಒಂದು ಸುಂದರವಾದ ಪ್ರವಾಸಿ ತಾಣವಾಗಿದೆ.