ತೊಡದೇವು
ತೊಡದೇವು ಅಕ್ಕಿಯಿಂದ ತಯಾರಿಸುವ ವಿಶಿಷ್ಟವಾದ ಸಿಹಿ ತಿಂಡಿ. ಇದು ಸಾಗರ, ಸಿರ್ಸಿ, ಸಿದ್ಧಾಪುರ, ಹೊನ್ನಾವರ, ಯಲ್ಲಾಪುರ , ಶಿವಮೊಗ್ಗಕಡೆ ಹೆಚ್ಚಾಗಿ ಪ್ರಚಲಿತದಲ್ಲಿದೆ.
ಮಾಡುವ ವಿಧಾನ
[ಬದಲಾಯಿಸಿ]ಕೆಂಪು ಅಕ್ಕಿಯನ್ನು ೩ ತಾಸು ನೆನಸಿಟ್ಟುಕೊಳ್ಳಬೇಕು. ನಂತರ ನೀರು ಬಸಿದು ಕಬ್ಬಿನ ಹಾಲಿನೊಂದಿಗೆ ನುಣ್ಣಗೆ ರುಬ್ಬ ಬೇಕು. ಕಬ್ಬಿನ ಹಾಲು ಇಲ್ಲವಾದಲ್ಲಿ ಬೆಲ್ಲ ಸೇರಿಸಬಹುದು. ರುಬ್ಬಿದ ಮಿಶ್ರಣವನ್ನು ಹೆಚ್ಚು ಹೊತ್ತು ಇಡಬಾರದು..ಹುಳಿ ಬರುವ ಮೊದಲು ಮಾಡಬೇಕು. ಅದಕ್ಕಾಗಿ ಮಣ್ಣಿನ ಗಡಿಗೆಗೆ ಹೊರಬದಿಗೆ ಎಣ್ಣೆ ಹಚ್ಚಿ ಹದ ಮಾಡಿ ಕೊಂಡು ಒಲೆಯ ಮೇಲೆ ಗಡಿಗೆಯನ್ನು ಉಲ್ಟಾ ಇಡಬೇಕು. ಬಾಳೆ ಎಲೆಯ ಚುಟ್ಟಿಯಲ್ಲಿ ಗಡಿಗೆಗೆ ಎಣ್ಣೆ ಸವರಿಕೊಳ್ಳಿ. ಒಂದು ಕೋಲಿಗೆ ಅಡ್ಡವಾಗಿ ತೆಳುವಾದ ಬಿಳಿ ಬಟ್ಟೆ ಕಟ್ಟಿ ಕೊಂಡು ದೋಸೆ ಹಿಟ್ಟಿನ ಮಿಶ್ರಣದಂತಿರುವ ಹಿಟ್ಟಿಗೆ ಬಟ್ಟೆಯನ್ನು ಅದ್ದಿ , ಗಡಿಗೆಯ ಮೇಲೆ ತೆಳುವಾಗಿ ಬಟ್ಟೆಯನ್ನು ನಾಲ್ಕು ಬದಿಗೆ + ಆಕಾರದಲ್ಲಿ ಎಳೆದು ಬಿಡಬೇಕು. ಬೆಂದ ನಂತರ ತುದಿಯಿಂದ ಬಿಡಿಸಿ ಗಡಿಗೆಯ ಮೇಲೆ ಒಂದೊಂದು ಬದಿಯ ಪದರವನ್ನು ಹರಡಿ. ಹಾಗೇ ನಾಲ್ಕು ಪದರವಾಗುತ್ತದೆ.. ಅದನ್ನು ಗರಿಯಾಗಿಸಿ ಮತ್ತೊಂದು ಮಡಿಕೆ ಮಾಡಿ ತೆಗೆದಿರಿಸಿದರೆ ತೊಡದೇವು ಸಿದ್ಧ. ಇದನ್ನು ಗಾಳಿಯಾಡದಂತೆ ಕಟ್ಟಿ ಇಟ್ಟರೆ ತುಂಬಾ ದಿನ ಕೆಡದೇ ಉಳಿಯುತ್ತದೆ. ಇದಕ್ಕೆ ತುಪ್ಪ, ಅಥವಾ ಹಾಲು ಹಾಕಿ ತಿಂದರೆ ರುಚಿ ಹೆಚ್ಚು...