ತೇಜಸ್ವಿ ಸೂರ್ಯ

ವಿಕಿಪೀಡಿಯ ಇಂದ
Jump to navigation Jump to search

ತೇಜಸ್ವಿ ಸೂರ್ಯ (ಎಲ್. ಸೂರ್ಯನಾರಾಯಣ ತೇಜಸ್ವಿ) ಭಾರತೀಯ ರಾಜಕಾರಣಿ. ಅವರು ನವೆಂಬರ್ ೧೬, ೧೯೯೦ ರಂದು ಜನಿಸಿದರು.ಅವರು ಬೆಂಗಳೂರು ದಕ್ಷಿಣ (ಲೋಕಸಭಾ ಕ್ಷೇತ್ರ) ದಿಂದ ೧೭ನೇ ಲೋಕಸಭೆಯಲ್ಲಿ ಸಂಸತ್ ಪ್ರವೇಶಿಸಿದರು.

ವೈಯಕ್ತಿಕ ಜೀವನ[ಬದಲಾಯಿಸಿ]

ತೇಜಸ್ವಿ ಸೂರ್ಯರವರು ನವೆಂಬರ್ ೧೬, ೧೯೯೦ರಂದು ರಮ ಮತ್ತು ಡಾl ಎಲ್.ಎ. ಸೂರ್ಯನಾರಾಯಣರಿಗೆ ಜನಿಸಿದರು. ಅವರು ೯ ವರ್ಷ ವಯಸ್ಸಿನ ವಿದ್ಯಾರ್ಥಿಯಾಗಿದ್ದಾಗ, ತಾವು ಬಿಡಿಸಿದ ೧೭ ವರ್ಣಚಿತ್ರಗಳನ್ನು ಮಾರಾಟ ಮಾಡಿ ₹೧೨೨೦ ಸಂಗ್ರಹಿಸಿದರು ಮತ್ತು ಅದನ್ನು ಅವರ ಶಾಲೆಯ ಪ್ರಾಂಶುಪಾಲರ ಮೂಲಕ "ಸೇನಾ ಕಾರ್ಗಿಲ್ ಪರಿಹಾರ ನಿಧಿ" ಗೆ ದಾನ ಮಾಡಿದರು.[೧] ಅವರು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ನಿಂದ ಶೈಕ್ಷಣಿಕ ಕಾನೂನು ಪದವಿ ಮತ್ತು ಎಲ್ ಎಲ್ ಬಿ ಪದವಿಯನ್ನು ಪಡೆದರು.[೨]

ರಾಜಕೀಯ ವೃತ್ತಿಜೀವನ[ಬದಲಾಯಿಸಿ]

ಆರಂಭಿಕ ವರ್ಷಗಳಲ್ಲಿ[ಬದಲಾಯಿಸಿ]

ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ(ಎಬಿವಿಪಿ) ಸಕ್ರಿಯ ಕಾರ್ಯಕರ್ತರಾಗಿದ್ದರು ಮತ್ತು ಭಾರತೀಯ ಜನತಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಅವರು "ಕರ್ನಾಟಕ ಬಿಜೆಪಿ ಡಿಜಿಟಲ್ ಕಮ್ಯುನಿಕೇಷನ್ಸ್" ತಂಡವನ್ನು ೨೦೧೮ ರ ಕರ್ನಾಟಕ ಶಾಸನಸಭಾ ಚುನಾವಣೆಯಲ್ಲಿ ಮುನ್ನಡೆಸಿ ರಾಷ್ಟ್ರೀಯ ಮನ್ನಣೆ ಪಡೆದರು.

2019ರ ಲೋಕಸಭಾ ಚುನಾವಣೆ[ಬದಲಾಯಿಸಿ]

ಈ ಚುನಾವಣೆಯಲ್ಲಿ ತೇಜಸ್ವಿ ಸೂರ್ಯರವರು ಕಾಂಗ್ರೆಸ್ ನ ಬಿ. ಕೆ. ಹರಿಪ್ರಸಾದ್ ಅವರನ್ನು ೩,೩೧,೧೯೨ ಮತಗಳಿಂದ ಸೋಲಿಸುವ ಮೂಲಕ ಬೆಂಗಳೂರು ದಕ್ಷಿಣದ(ಲೋಕಸಭಾ ಕ್ಷೇತ್ರ) ಸಂಸದರಾಗಿ ಆಯ್ಕೆಯಾಗಿದ್ದಾರೆ.[೩]

ಉಲ್ಲೇಖ[ಬದಲಾಯಿಸಿ]

  1. https://m.dailyhunt.in/news/india/english/laughingcolours+english-epaper-laughcole/elections+2019+tejasvi+surya+raised+funds+for+kargil+victims+at+the+age+of+8+now+he+s+bjp+s+youngest+mp-newsid-117562871
  2. https://www.famouspeoplebio.com/amp/tejasvi-surya/
  3. https://www.thenewsminute.com/article/bjp-s-tejasvi-surya-defeats-congress-veteran-bk-hariprasad-bengaluru-south-102290