ವಿಷಯಕ್ಕೆ ಹೋಗು

ತಾರಾ (ಹಿಂದೂ ದೇವತೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾರಾ
Taraka
ಬೃಹಸ್ಪತಿಯ ಜೊತೆಗೆ ತಾರಾ
ಸಂಲಗ್ನತೆದೇವಿ
ಸಂಗಾತಿಬೃಹಸ್ಪತಿ
ಮಕ್ಕಳುಕಚ, ಬುಧ

 

ಹಿಂದೂ ದೇವತೆಯಾದ ತಾರಾ ಹಿಂದೂ ದೇವರಾದ ಬೃಹಸ್ಪತಿಯ ಪತ್ನಿ. ಕೆಲವು ಪುರಾಣಗಳ ಪ್ರಕಾರ, ತಾರಾ ಚಂದ್ರನ ಮೂಲಕ ಬುಧ ಎಂಬ ಮಗುವನ್ನು ಮತ್ತು ಬೃಹಸ್ಪತಿಯ ಮೂಲಕ ಕಚ ಎಂಬ ಮಗನನ್ನು ಪಡೆದಳು.

ಕೆಲವು ಪುರಾಣಗಳಲ್ಲಿ ತಾರಾಳ ಪತಿಯು ತನ್ನ ಹೆಚ್ಚಿನ ಸಮಯವನ್ನು ದೇವತೆಗಳ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಕಳೆಯುತ್ತಿದ್ದನೆಂದು, ಆಕೆ ತನ್ನ ಪತಿಯಿಂದ ನಿರ್ಲಕ್ಷಿಸಲ್ಪಟ್ಟಿದ್ದಾಳೆಂದು ಭಾವಿಸುತ್ತಾಳೆ, ಎಂದು ಉಲ್ಲೇಖಿಸಲಾಗಿದೆ. ಒಂದು ದಿನ ಚಂದ್ರನು ಬೃಹಸ್ಪತಿಯನ್ನು ಭೇಟಿ ಮಾಡಿದನು. ಅಲ್ಲಿ ಅವನು ತಾರಾಳನ್ನು ನೋಡಿ ಅವಳ ಸೌಂದರ್ಯಕ್ಕೆ ಮಾರುಹೋದನು. ತಾರಾ ಕೂಡ ಚಂದ್ರನನ್ನು ನೋಡಿ ಅವನತ್ತ ಆಕರ್ಷಿತಳಾದಳು. ಸ್ವಲ್ಪ ಸಮಯದ ನಂತರ, ತಾರಾ ಚಂದ್ರನೊಂದಿಗೆ ಓಡಿಹೋದಳು. []

ಬೃಹಸ್ಪತಿ ಕೋಪಗೊಂಡು ಚಂದ್ರನನ್ನು ತನ್ನ ಹೆಂಡತಿಯನ್ನು ಹಿಂದಿರುಗಿಸುವಂತೆ ಒತ್ತಾಯಿಸಿದನು. ಚಂದ್ರನು ಬೃಹಸ್ಪತಿಗೆ ತಾರಾ ತನ್ನಿಂದ ಸಂತೋಷ ಮತ್ತು ತೃಪ್ತಿ ಹೊಂದಿದ್ದಾಳೆ ಎಂದು ಹೇಳಿ, ಒಬ್ಬ ಮುದುಕ ಯುವತಿಯ ಗಂಡನಾಗುವುದು ಹೇಗೆ ಎಂದು ಕೇಳಿದನು. ಇದರಿಂದ ಕೋಪಗೊಂಡ ಬೃಹಸ್ಪತಿಯು ಚಂದ್ರನನ್ನು ಯುದ್ಧಕ್ಕೆ ಎಚ್ಚರಿಸಿದನು. ಇಂದ್ರ ಮತ್ತು ಇತರ ದೇವತೆಗಳು ಯುದ್ಧ ಮಾಡಲು ಒಟ್ಟುಗೂಡಿದರು. ಚಂದ್ರನು ತಾರಾಳನ್ನು ಹಿಂದಿರುಗಿಸಲು ಸಿದ್ಧನಿರಲಿಲ್ಲ. ಅವನು ಅಸುರರು ಮತ್ತು ಅವರ ಬೋಧಕನಾದ ಶುಕ್ರನಿಂದ ಸಹಾಯವನ್ನು ಪಡೆದನು. ದೇವತೆಗಳಿಗೆ ಶಿವ ಮತ್ತು ಅವನ ಸಹಚರರು ಸಹಾಯ ಮಾಡಿದರು. ದೇವತೆಗಳು ಮತ್ತು ಅಸುರರು ಯುದ್ಧವನ್ನು ಮಾಡಲು ಸಿದ್ಧರಿದ್ದರು, ಆದರೆ ಸೃಷ್ಟಿಕರ್ತನಾದ ಬ್ರಹ್ಮನು ಅವರನ್ನು ತಡೆದು ತಾರಾಳನ್ನು ಹಿಂದಿರುಗಿಸಲು ಚಂದ್ರನನ್ನು ಒಪ್ಪಿಸಿದನು. ( ಕೆಲವು ಆವೃತ್ತಿಗಳಲ್ಲಿ, ಶಿವನು ಯುದ್ಧವನ್ನು ನಿಲ್ಲಿಸಿದನು ಎಂದು ಉಲ್ಲೇಖಿಸಲಾಗಿದೆ.). []

ಸ್ವಲ್ಪ ಸಮಯದ ನಂತರ ಬೃಹಸ್ಪತಿಗೆ ತಾರಾ ಗರ್ಭಿಣಿ ಎಂದು ತಿಳಿದು ಮಗುವಿನ ತಂದೆ ಯಾರು ಎಂದು ಪ್ರಶ್ನಿಸಿದನು. ಆದರೆ ತಾರಾ ಮೌನವಾಗಿದ್ದಳು. ಮಗು ಹುಟ್ಟಿದ ನಂತರ, ಚಂದ್ರ ಮತ್ತು ಬೃಹಸ್ಪತಿ ಇಬ್ಬರೂ ಅವನ ತಂದೆ ಎಂದು ಹೇಳಿಕೊಂಡರು. ಕೊನೆಗೆ ತಾರಾ ಆ ಹುಡುಗ ಚಂದ್ರನ ಮಗ ಎಂದು ಬಹಿರಂಗಪಡಿಸಿದಳು. [] ಹುಡುಗನಿಗೆ ಬುಧ ಎಂದು ಹೆಸರಿಡಲಾಯಿತು. []

ಉಲ್ಲೇಖಗಳು

[ಬದಲಾಯಿಸಿ]
  1. Patel, Utkarsh (2020-06-05). "Tara and Chandradev: If a Dissatisfied Partner Has An Affair, Who Is To Be Blamed?". Bonobology.com (in ಅಮೆರಿಕನ್ ಇಂಗ್ಲಿಷ್). Retrieved 2020-08-14.
  2. Mittal, J. P. (2006). History Of Ancient India (a New Version) : From 7300 Bb To 4250 Bc (in ಇಂಗ್ಲಿಷ್). Atlantic Publishers & Dist. ISBN 978-81-269-0615-4.
  3. "Budha". 17 February 2016.
  4. Agarwal, Himanshu (2016-07-26). Mahabharata Retold: Part - 1 (in ಇಂಗ್ಲಿಷ್). Notion Press. ISBN 978-93-86073-87-7.
  • ಡೌಸನ್ ಅವರ ಹಿಂದೂ ಪುರಾಣದ ಶಾಸ್ತ್ರೀಯ ನಿಘಂಟು

ಬಾಹ್ಯ ಕೊಂಡಿಗಳು

[ಬದಲಾಯಿಸಿ]