ತಾರಾದೇವಿ ಸಿದ್ಧಾರ್ಥ
Taradevi Siddatha | |
---|---|
ಜನನ | 1953 |
ಡಿ.ಕೆ.ತಾರದೇವಿ ಸಿದ್ಧಾರ್ಥ (ಜನನ 1953) ಭಾರತದ ಕರ್ನಾಟಕದ ರಾಜಕಾರಣಿ. ಅವರು ರಾಜ್ಯಸಭೆ ಮತ್ತು ಕರ್ನಾಟಕ ವಿಧಾನಸಭೆಯ ಹಾಗೂ 8 ಮತ್ತು 10 ನೇ ಲೋಕಸಭೆಯ ಸದಸ್ಯರಾಗಿದ್ದರು.
ಆರಂಭಿಕ ಜೀವನ
[ಬದಲಾಯಿಸಿ]ಮೂಡಿಗೆರೆಯ ಕೃಷ್ಣಪ್ಪ ಗೌಡರ ಪುತ್ರಿ, ತಾರದೇವಿ 26 ಡಿಸೆಂಬರ್ 1953 ರಂದು ಜನಿಸಿದರು. ಅವರು ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ.[೧]
ವೃತ್ತಿ
[ಬದಲಾಯಿಸಿ]1978 ರಲ್ಲಿ ತಾರದೇವಿಯನ್ನು ಮೂಡಿಗರೆ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಮತ್ತು ಪಟ್ಟಣದ ಪುರಸಭೆಯ ಮುಖ್ಯಸ್ಥರಾದರು.[೧] ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಚುನಾವಣೆಗೆ ಸ್ಪರ್ಧಿಸಿದಾಗ, ಅವರು ತಾರಾದೇವಿ ಮನೆಯಲ್ಲಿ ಉಳಿದರು.[೨] ನಂತರ,ತಾರಾದೇವಿ ಅವರು 1984 ರವರೆಗೆ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು, 1984 ರ ಭಾರತೀಯ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಅವರನ್ನು ಚಿಕ್ಕಮಗಳೂರಿನಲ್ಲಿ ಕಣಕ್ಕಿಳಿಸಿತು. 8 ನೇ ಲೋಕಸಭೆಯಲ್ಲಿ ಮೊದಲ ಅವಧಿ ಮುಗಿದ ನಂತರ 1990 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು. ಮುಂದಿನ ವರ್ಷ, ತಾರಾದೇವಿ 1991 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಪಿ.ವಿ.ನರಸಿಂಹ ರಾವ್ ಅವರ ಹೊಸದಾಗಿ ರೂಪುಗೊಂಡ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದರು.[೩]
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಜಂಟಿ ಕಾರ್ಯದರ್ಶಿ ಸೇರಿದಂತೆ ತಾರದೇವಿ ಐಎನ್‌ಸಿ ಆಡಳಿತದೊಳಗೆ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.[೧] ಅಲ್ಪಾವಧಿಗೆ ಅವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದರು.[೩][೪]
ವೈಯಕ್ತಿಕ ಜೀವನ
[ಬದಲಾಯಿಸಿ]ತಾರದೇವಿ ಕರ್ನಾಟಕದ ಐಎನ್‌ಸಿಯ ಪ್ರಮುಖ ಸದಸ್ಯ ಸಿದ್ಧಾರ್ಥ ರೆಡ್ಡಿ ಅವರನ್ನು ವಿವಾಹವಾದರು.[೧][೩]
ಉಲ್ಲೇಖಗಳು
[ಬದಲಾಯಿಸಿ]
- ↑ ೧.೦ ೧.೧ ೧.೨ ೧.೩ "Members Bioprofile: Siddhartha, Smt. D.K. Thara Devi". Lok Sabha. Retrieved 25 November 2017.
- ↑ Vohra, Pankaj (1 March 2014). "Rahul may fight from two seats". The Sunday Guardian. Archived from the original on 1 ಡಿಸೆಂಬರ್ 2017. Retrieved 25 November 2017.
- ↑ ೩.೦ ೩.೧ ೩.೨ Ramaseshan, Radhika (12 November 2002). "Sangh blood too thick for Cong converts". The Telegraph. Archived from the original on 1 ಡಿಸೆಂಬರ್ 2017. Retrieved 25 November 2017.
- ↑ "Taradevi to quit BJP". Deccan Herald. 24 March 2004. Retrieved 25 November 2017.[ಶಾಶ್ವತವಾಗಿ ಮಡಿದ ಕೊಂಡಿ]