ಡೋಲಾ ಬ್ಯಾನರ್ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೋಲಾ ಬ್ಯಾನರ್ಜಿ

ಬಿಲ್ಲು ಗಾರಿಕೆಯಲ್ಲಿ ಸ್ಪರ್ಧಿಸುವ ಭಾರತೀಯ ಕ್ರೀಡಾಪಟು. ಇವರ ಜನನ ೨ ಜೂನ್ ೧೯೮೦ ಬಾರಾನಗರ್, ಉತ್ತರ ಪರಗಣ ಜಿಲ್ಲೆ, ಪಶ್ಚಿಮ ಬಂಗಾಳ. ಬಿಲ್ಲುಗಾರಿಕೆಯ ಮಹಿಳಾ ಕ್ರೀಡಾಪಟು.

ಆರಂಭಿಕ ಜೀವನ[ಬದಲಾಯಿಸಿ]

ಮಹಿಳಾ ಬಿಲ್ಲು ಗಾರಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದರು.[೧] ಅಶೋಕ್ ಬ್ಯಾನರ್ಜಿ ಮತ್ತು ಕಲ್ಪನಾ ಬ್ಯಾನರ್ಜಿ ಅವರ ಪುತ್ರಿ. ಅವರು ಕೋಲ್ಕತ್ತಾ ಬಳಿಯ ಬಾರಾ ನಗರದಲ್ಲಿ ಜನಿಸಿದರು. ಬಾರಾನಗರದ ರಾಜ್ ಕುಮಾರಿ ಸ್ಮಾರಕ ಬಾಲಕಿಯರ ಪ್ರೌಢ ಶಾಲೆಯಲ್ಲಿ ಓದಿದರು. ಎಂಟನೇ ವಯಸ್ಸಿನಲ್ಲಿ ಅವರು ಬಾರಾನಗರ್ ಆರ್ಚರಿ ಕ್ಲಬ್ ಗೆ ಸೇರಿದರು. ೧೯೯೬ರಲ್ಲಿ ಸ್ಯಾನ್ ಡಿಯಾಗೋದಲ್ಲಿ ನಡೆದ ಯೂತ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಅವರ ಮೊದಲ ಅಂತರಾಷ್ಟ್ರೀಯ ಪ್ರಧರ್ಶನವಾಯಿತು. ಡೋಲಾ ಬ್ಯಾನರ್ಜಿ ೧೯೯೦ ರಲ್ಲಿ ಬಾರಾನಗರ್ ಆರ್ಚರಿ ಕ್ಲಬ್ ನಲ್ಲಿ ಬಿಲ್ಲುಗಾರಿಕೆ ಪ್ರಾರಂಭಿಸಿದರು. ಆಗ ಅವರಿಗೆ ಕೇವಲ ೯ ವರ್ಷ ವಯಸ್ಸಾಗಿತ್ತು. ಅವರು ೧೯೯೬ ರಲ್ಲಿ ಸ್ಯಾಂಡಿಗೊದ ಯೂತ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ೧೬ನೇ ವಯಸ್ಸಿನಲ್ಲಿ ಪ್ರತಿನಿಧಿಸಿ ಈ ಮುಖೇನ ಭಾರತೀಯ ಮಹಿಳಾ ಬಿಲ್ಲುಗಾರಿಕೆ ತಂಡದ ನಿಯಮಿತ ಸದ್ಯರಾಗಿದ್ದರು. ಡೋಲಾ ಬ್ಯಾನರ್ಜಿ ೨೦೦೪ರ ಬೇಸಿಗೆ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.[೨] ಹೊರಹಾಕುವಿಕೆ ಮೊದಲ ಸುತ್ತಿನಲ್ಲಿ ೬೪೨. ಒಂದು ೭೨ ಬಾಣದ ಅಂಕಗಳೊಂದಿಗೆ ಅವರು ೧೩ ನೇ ಮಹಿಳೆಯರ ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಇರಿಸಲಾಯಿತು.


೧೮ ಬಾಣಗಳ ಪಂದ್ಯದಲ್ಲಿ ಡೊಲಾ ೧೪೧-೧೩೧ ರಲ್ಲಿ ಸೋತರು. ಮಹಿಳೆಯರ ವೈಯಕ್ತಿಕ ಬಿಲ್ಲುಗಾರಿಕೆಯಲ್ಲಿ ಒಟ್ಟಾರೆ ೫೨ನೇ ಸ್ಥಾನದಲ್ಲಿರುವ ಭಾರತೀಯ ಮಹಿಳಾ ಬಿಲ್ಲುಗಾರಿಕೆಯಲ್ಲಿ ಒಟ್ಟಾರೆ ೫೩ನೇ ಸ್ಥಾನ ಪಡೆದರು. ಡೋಲಾ ೮ನೇ ಸ್ಥಾನದಲ್ಲಿರುವ ಭಾರತೀಯ ಮಹಿಳಾ ಬಿಲ್ಲುಗಾರಿಕೆಯಲ್ಲಿ ತನ್ನ ೨೦ ನೇ ವರ್ಷಗಳಲ್ಲಿ ಅವರು ೨ ಒಲಂಪಿಕ್ ಕ್ರೀಢಾ ಕೂಟ, ೩ ಯೂರೋಪಿಯನ್ ಗ್ರಾಂಡ್ ಪ್ರಿಕ್ಸ್ , ೧೦ ಏಷ್ಯನ್ ಗ್ರಾಂಡ್ ಪಿಕ್ಸ್, ೨ ಎಸ್ಎಎಪ್ ಸೇರಿದಂತೆ ೫೦ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಅವರು ೮ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಅವರು ೮ ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಆಗಸ್ಟ್ ೨೦೦೭ ರಲ್ಲಿ ಡೋವರ್ ನಲ್ಲಿ ನಡೆದ ಮೆಟೆಕ್ಸನ ವಿಶ್ವಕಪ್ ಬಿಲ್ಲುಗಾರಿಕೆಯ ನಾಲ್ಕನೇ ಹಂತದ ವೈಯಕ್ತಿಕ ಮರುಕಳಿಸುವ ಪ್ರಶ್ತಿಯನ್ನು ಗೆದ್ದಾಗ ಡೋಲಾ ಬ್ಯಾನರ್ಜಿ ತಮ್ಮ ವೃತಿಜೀವನದ ಎರಡನೇ ಅಂತರರಾಷ್ಟ್ರೀಯ ಚಿನ್ನದ ಪದಕವನ್ನು ಗೆದ್ದರು. ನಾಲ್ಕನೇ ಹಂತವನ್ನು ಗೆದ್ದ ನಂತರ ಅವರು ವಿಶ್ವಕಪ್ ಫೈನಲ್ ಗೆ ಅರ್ಹತೆಯನ್ನು ಪಡೆದರು. ಈ ಪಂದ್ಯವು ನವೆಂಬರ್ ೨೦೦೭ ರಲ್ಲಿ ದುಬೈನಲ್ಲಿ ಜರುಗಿತು.

ಸಾಧನೆಗಳು[ಬದಲಾಯಿಸಿ]

  • ೨೦೦೫ ರ ಅರ್ಜುನ ಪ್ರಶಸ್ತಿ [೩]
  • ೨೦೦೪ ಅಥೆನ್ಸ್ ಒಲಂಪಿಕ್ ನಲ್ಲಿ ನಡೆಸಿದ ವೈಯಕ್ತಿಕ ಸ್ಪರ್ದೆಯಲ್ಲಿ ಒಲಂಪಿಕ್ ಗೆ ಅರ್ಹತೆಯನ್ನು ಪಡೆದ ಮೊದಲ ಮಹಿಳೆ
  • ೨೦೦೭ರ ವಿಶ್ವ ಕಪ್ ನಲ್ಲಿ ವೈಕ್ತಿಕ ಚಿನ್ನ ಮತ್ತು ಅದೇ ವರ್ಷದಲ್ಲಿ ವಿಶ್ವಕಪ್ ಫೈನಲ್ ಗೆದ್ದಿದ್ದಾರೆ
  • ೨೦೧೦ ರ ಕಾಮನ್ವೆಲ್ತ್ ಕ್ರಿಢಾಕೂಟದಲ್ಲಿ ಚಿನ್ನ ಗೆದ್ದರು
  • ೨೦೧೦ ರಲ್ಲಿ ನಡೆಸಿದ ಏಷ್ಯನ್ ಕ್ರಢಾಕೂಟದಲ್ಲಿ ತಂಡದ ಕಂಚು ಪೆಡೆದಿದ್ದಾರೆ.

೨೦೧೦ ದೆಹಲಿ ಕಾಮನ್ ವೆಲ್ತ್ ಗೇಮ್ಸ್[ಬದಲಾಯಿಸಿ]

೨೦೧೦ ದೆಹಲಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಅವರು ಮಹಿಳೆಯರ ತಂಡ ರಿಕರ್ವ್ ಚಿನ್ನದ ಪದಕ ದೀಪಿಕಾ ಕುಮಾರಿ ಮತ್ತು ಎಲ್ ಬೊಂಬಯಾಲದೇವಿ ರಿಕರ್ವ್ ಇಂಡಿವಿಜುವಲ್ ಈವೆಂಟ್ ನಲ್ಲಿ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಡೋಲಾ ಬ್ಯಾನರ್ಜಿ ಕಾರ್ಪೋರೇಟರ್ ವೃತ್ತಿಪರ ಮೇಧದೀಪ್ ಬ್ಯಾನರ್ಜಿಯನ್ನು ವಿವಾಹವಾದರು.[೪] ಮತ್ತು ಡಯಾನ್ ಎಂಬ ಮಗನ ತಾಯಿ. ಆಕೆಯ ಕಿರಿಯ ಸಹೋದರ ಬ್ಯಾನರ್ಜಿ ಕೂಡ ಬಿಲ್ಲುಗಾರ. ಅವಳು ಗಾಯಕರಾದ ಶಾನ್ ಮತ್ತು ಸಾಗರಿಕಾ ಅವರ ಸೋದರಸಂಬಂಧಿ.

ವರ್ಷ ಸ್ಪರ್ಧೆಯ ಹೆಸರು ಸ್ಥಳ ಘಟನೆಯ ಹೆಸರು ಸ್ಥಳ
೨೦೧೦ ೧೬ನೇ ಏಷ್ಯನ್ ಕ್ರೀಡಾಕೂಟ ಗ್ವಾಂಗ್ಜು, ಚೀನಾ ತಂಡ ಕಂಚು
೨೦೧೦ ೧೯ ನೇ ಕಾಮನ್ ವೆಲ್ತ್ ಕ್ರೀಡಾಕೂಟ ನವದೆಹಲಿ ಇಂದ್ ಕಂಚು
೨೦೧೦ ೩ನೇ ವಿಶ್ವಕಪ್ ಆಗ್ಡೇನ್ ಯುಎಸ್ಎ ತಂಡ ಬೆಳ್ಳಿ
೨೦೦೯ ೩ನೇ ವಿಶ್ವಕಪ್ ಅಂಟಾಲಿಯಾ, ಟರ್ಕಿ ತಂಡ ಕಂಚು
೨೦೦೯ ೧ ನೇ ವಿಶ್ವಕಪ್ ಡೋಮಿನಿಕನ್ ರಿಪಬ್ಲಿಕ್ ತಂಡ ಕಂಚು

ಉಲ್ಲೇಖಗಳು[ಬದಲಾಯಿಸಿ]

  1. https://www.bing.com/images/search?q=dola+banerjee&qpvt=dola+banarji&FORM=IGRE
  2. "ಆರ್ಕೈವ್ ನಕಲು". Archived from the original on 2020-01-25. Retrieved 2020-01-26.
  3. https://archive.is/20130125151741/http://www.hindustantimes.com/StoryPage/StoryPage.aspx?id=a594e4b1-ac5d-4dd0-b6ce-9ccb8f6dc775&ParentID=cbe5c184-c8e8-498d-84a5-2504aa318f27&&Headline=Dola+creates+history,+sits+on+top+of+the+world
  4. https://www.mapsofindia.com/who-is-who/sports/dola-banerjee.html