ವಿಷಯಕ್ಕೆ ಹೋಗು

ಟ್ಯಾಸ್ಮೆನಿಯಾ

Coordinates: 42°S 147°E / 42°S 147°E / -42; 147
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Gross state product 
 - Product ($m)$$೨೨,೫೬೪[]
ಬಾಹ್ಯಾಕಾಶದಿಂದ ಟ್ಯಾಸ್ಮೆನಿಯಾದ ಚಿತ್ರಣ

ಟ್ಯಾಸ್ಮೆನಿಯಾ ಆಸ್ಟ್ರೇಲಿಯಾ ದೇಶದ ಒಂದು ದ್ವೀಪ ಹಾಗೂ ರಾಜ್ಯವಾಗಿದೆ.‌ ಇದು ಆಸ್ಟ್ರೇಲಿಯಾ ಮುಖ್ಯಭೂಮಿಯಿಂದ 240 kilometres (150 mi) ದಕ್ಷಿಣದಲ್ಲಿದೆ. ಬಾಸ್‌ ಸ್ಟ್ರೇಟ್‌ ಆಸ್ಟ್ರೇಲಿಯಾ ಮತ್ತು ಟ್ಯಾಸ್ಮೆನಿಯಾವನ್ನು ಪ್ರತ್ಯೇಕಿಸುವ ಜಲಭಾಗ. ವಿಶ್ವದಲ್ಲಿ 26ನೆಯ ಅತಿದೊಡ್ಡ ದ್ವೀಪ ಎನ್ನಲಾದ ಟ್ಯಾಸ್ಮೆನಿಯಾದ ದ್ವೀಪ ಹಾಗೂ ಸುತ್ತಮುತ್ತಲಿನ ದ್ವೀಪಗಳನ್ನು ಈ ರಾಜ್ಯವು ಒಳಗೊಳ್ಳುತ್ತದೆ.

ರಾಜ್ಯದ ಜನಸಂಖ್ಯೆ 500,000ದಷ್ಟಿದೆ as of ಡಿಸೆಂಬರ್ 2008[[ವರ್ಗ:Articles containing potentially dated statements from Expression error: Unexpected < operator.]]. ಇದರಲ್ಲಿ ಅರ್ಧದಷ್ಟು ಬೃಹತ್‌ ಹೋಬಾರ್ಟ್‌ ನೆರೆಹೊರೆಯಲ್ಲಿ ವಾಸಿಸುವರು.  ಟ್ಯಾಸ್ಮೆನಿಯಾದ ವಿಸ್ತೀರ್ಣ 68,401 square kilometres (26,410 sq mi) ಇದರಲ್ಲಿ ಮುಖ್ಯ ದ್ವೀಪವು 62,409 square kilometres (24,096 sq mi) ಆವರಿಸುತ್ತದೆ.[]

ಟ್ಯಾಸ್ಮೆನಿಯಾವನ್ನು ನೈಸರ್ಗಿಕ ರಾಜ್ಯ , 'ಸ್ಫೂರ್ತಿ ನೀಡುವ ದ್ವೀಪ',[] ಹಾಗೂ, ವಿಶಾಲ, ಹಚ್ಚಹಸಿರಾಗಿರುವ ನೈಸರ್ಗಿಕ ಪರಿಸರ ಹೊಂದಿರುವ ಈ ದ್ವೀಪಕ್ಕೆ ವಿಶ್ವದಿಂದಲೇ ಭಿನ್ನವಾದರೂ ವಿಶ್ವದಿಂದ ದೂರವಲ್ಲ ಎನ್ನಲಾಗಿದೆ. ಟ್ಯಾಸ್ಮೆನಿಯಾದ 37%ರಷ್ಟು ಭಾಗದಲ್ಲಿ ರಕ್ಷಿತಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಹಾಗೂ ವಿಶ್ವ ಪರಂಪರೆ ತಾಣಗಳಿವೆ.[] ದ್ವೀಪವು ಅತಿ ಉತ್ತರ ತುದಿಯಿಂದ ಅತಿ ದಕ್ಷಿಣ ತುದಿಯ ತನಕ 364 kilometres (226 mi) ಉದ್ದವಿದೆ, ಹಾಗೂ ಪಶ್ಚಿಮ ತುದಿಯಿಂದ ಪೂರ್ವ ತುದಿಯ ತನಕ 306 kilometres (190 mi) ಉದ್ದದಲ್ಲಿ ಹರಡಿದೆ.

ಹೋಬಾರ್ಟ್‌ ರಾಜ್ಯದ ರಾಜಧಾನಿ ಹಾಗೂ ಅತಿದೊಡ್ಡ ನಗರವಾಗಿದೆ. ಇದು ಹೋಬಾರ್ಟ್‌ ನಗರ, ಗ್ಲೆನೊರ್ಕಿ ನಗರ ಮತ್ತು ಕ್ಲಾರೆನ್ಸ್‌ ನಗರಗಳ ಸ್ಥಳೀಯ ಸರ್ಕಾರದ ಆಡಳಿತ ಪ್ರದೇಶಗಳನ್ನು ಆವರಿಸಿದೆ. ಕಿಂಗ್ಬೊರೊ ಸ್ಥಳೀಯ ಆಡಳಿತ ವ್ಯಾಪ್ತಿಯಲ್ಲಿರುವ ಕಿಂಗ್ಸ್ಟನ್‌ ಉಪನಗರವನ್ನು ಸಾಮಾನ್ಯವಾಗಿ ಗ್ರೇಟರ್‌ (ಬೃಹತ್‌) ಹೋಬಾರ್ಟ್‌ ಪ್ರದೇಶದಲ್ಲಿ ಸೇರಿಸಲಾಗಿದೆ. ಇತರೆ ಪ್ರಮುಖ ಜನಸಾಂದ್ರತೆಯುಳ್ಳ ಪ್ರದೇಶಗಳಲ್ಲಿ ಉತ್ತರದಲ್ಲಿರುವ ಲಾನ್ಸೆಸ್ಟನ್‌ ಹಾಗೂ ವಾಯವ್ಯದಲ್ಲಿರುವ ಡೆವನ್ಪೋರ್ಟ್‌ ಮತ್ತು ಬರ್ನಿ ನಗರಗಳು ಸೇರಿವೆ.

ಉಪ-ಅಂಟಾರ್ಕ್ಟಿಕ್‌ ಮೆಕ್ವಾರಿ ದ್ವೀಪವೂ ಸಹ, ಹುವಾನ್‌ ಕಣಿವೆ ಪರಿಷತ್‌ ಸ್ಥಳೀಯ ಸರ್ಕಾರ ಕ್ಷೇತ್ರದ ಅಂಗವಾಗಿ, ರಾಜ್ಯದ ಆಡಳಿತ ವ್ಯಾಪ್ತಿಯಲ್ಲಿದೆ.

ವ್ಯುತ್ಪತ್ತಿ

[ಬದಲಾಯಿಸಿ]

ಡಚ್‌ ಮೂಲದ ಪರಿಶೋಧಕ ಎಬೆಲ್‌ ಟ್ಯಾಸ್ಮನ್ ಮೊದಲ ಬಾರಿಗೆ ಈ ದ್ವೀಪವನ್ನು 1642ರ ನವೆಂಬರ್‌ 24ರಂದು ಪರಿಶೋಧಿಸಿ, ಮೊದಲ ಯುರೋಪಿಯನ್‌ ಎನಿಸಿಕೊಂಡ. ಆದ್ದರಿಂದ ಈ ದ್ವೀಪಕ್ಕೆ ಈತನ ಹೆಸರು ನಾಮಕರಣ ಮಾಡಲಾಗಿದೆ. ಎಬೆಲ್‌ ಟ್ಯಾಸ್ಮನ್‌ ಈ ದ್ವೀಪಕ್ಕೆ ಆತನ ಪ್ರಾಯೋಜಕ, ಡಚ್‌ ಈಸ್ಟ್‌ ಇಂಡೀಸ್‌ ರಾಜ್ಯಪಾಲ ಆಂಟನಿ ವಾನ್‌ ಡೀಮನ್‌ನ ಹೆಸರನ್ನಿಟ್ಟ. ಇದರಿಂದಾಗಿ ಈ ದ್ವೀಪವು ಆಂಟನಿ ವಾನ್ ಡೀಮನ್ಸ್‌ ಲ್ಯಾಂಡ್‌ ಎನ್ನಲಾಯಿತು. ಆನಂತರ ಬ್ರಿಟಿಷ್‌ ಆಡಳಿತವು ಈ ದ್ವೀಪದ ಹೆಸರನ್ನು ವಾನ್ ಡೀಮನ್ಸ್‌ ಲ್ಯಾಂಡ್‌ ಎಂದು ಸಂಕ್ಷಿಪ್ತಗೊಳಿಸಿತು. 1856ರ ಜನವರಿ 1ರಂದು ಈ ದ್ವೀಪದ ಹೆಸರನ್ನು ಅಧಿಕೃತವಾಗಿ ಇದರ ಪರಿಶೋಧಕರ ಹೆಸರಿಗೆ ಬದಲಾಯಿಸಲಾಯಿತು.[] ಈ ರಾಜ್ಯಕ್ಕೆ ಆಡುಭಾಷೆಯಲ್ಲಿ ಟ್ಯಾಸೀ ಎನ್ನಲಾಗಿದೆ. ಉದಾಹರಣೆಗೆ, ಬಾಸ್‌ ಸ್ಟ್ರೇಟ್‌ ಹಡಗು ಹಾಗೂ ಸ್ಪಿರಿಟ್‌ ಆಫ್‌ ಟ್ಯಾಸ್ಮೆನಿಯಾಗಾಗಿ ಜಾಹೀರಾತುಗಳಲ್ಲಿ ಟ್ಯಾಸ್ಮೆನಿಯಾ ರಾಜ್ಯವನ್ನು ಟ್ಯಾಸೀ ಎಂದು ಉಲ್ಲೇಖಿಸಲಾಗಿದೆ.[]

ಇತಿಹಾಸ

[ಬದಲಾಯಿಸಿ]

ಭೌತಿಕ ಇತಿಹಾಸ

[ಬದಲಾಯಿಸಿ]
ಟ್ಯಾಸ್ಮನ್‌ ಪರ್ಯಾಯದ್ವೀಪದಲ್ಲಿ ಶಬಲದಂತಹ ಬಂಡೆಯ ಅಪರೂಪ ಸ್ವರೂಪ.

ಕಡೆಯ ಹಿಮಶಿಲೆಯ ಯುಗದ ವರೆಗೆ, ಅಂದರೆ 10,000 ವರ್ಷಗಳ ಹಿಂದಿನ ತನಕ, ಈ ದ್ವೀಪವು ಆಸ್ಟ್ರೇಲಿಯಾದ ಮುಖ್ಯ ಭೂಮಿಗೆ ಸೇರಿಕೊಂಡಿತ್ತು ಎಂದು ನಂಬಲಾಗಿದೆ.

ದ್ವೀಪದ ಬಹಳಷ್ಟು ಭಾಗದಲ್ಲಿ ಇತರೆ ಬಂಡೆಗಳ ರೀತಿಯಲ್ಲಿ , ಜುರಾಸಿಕ್‌ ಡೊಲೆರೈಟ್‌ ಅಗ್ನಿಶಿಲೆಯ ಮಿಶ್ರಣ (ಉಕ್ಕಿಬರುವ ಶಿಲಾಪಾಕ) ಹೊಂದಿದೆ. ಕೆಲವೊಮ್ಮೆ ಇವುಗಳ ದೊಡ್ಡ ಸ್ತಂಭಾಕಾರದ ಜೋಡನೆಯ ರಚನೆಗಳೂ ಆಗುತ್ತವೆ. ಟ್ಯಾಸ್ಮೆನಿಯಾ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಡೊಲೆರೈಟ್‌ ಅಂಶ ಹೊಂದಿದೆ. ಈ ರೀತಿಯ ಬಂಡೆಯದು ಬಹಳಷ್ಟು ವಿಭಿನ್ನವಾದ ಪರ್ವತಗಳು ಮತ್ತು ಕಡಿಕಲ್ಲು ಬಂಡೆಗಳಿವೆ. ಟ್ಯಾಸ್ಮೆನಿಯಾ ದ್ವೀಪದ ಮಧ್ಯದ ಪ್ರಸ್ಥಭೂಮಿ ಮತ್ತು ಅಗ್ನೇಯ ಭಾಗಗಳಲ್ಲಿ ಬಹಳಷ್ಟು ಡೊಲೆರೈಟ್‌ ಅಂಶಗಳಿವೆ. ಹೋಬಾರ್ಟ್‌ನ ಸಿಂಹಾವಲೋಕನ ಮಾಡುವಂತಿರುವ ಮೌಂಟ್‌ ವೆಲ್ಲಿಂಗ್ಟನ್‌ ಇದರಲ್ಲಿ ಅತ್ಯುತ್ತಮ ಉದಾಹರಣೆ. ಇದರಲ್ಲಿ ಆರ್ಗನ್‌ ಪೈಪ್‌ಗಳೆನ್ನಲಾದ ಎದ್ದುಕಾಣುವಂತ ಸ್ತಂಭಗಳಿವೆ. ನೈಋತ್ಯ ಭಾಗದಲ್ಲಿ, ಬಹಳ ಪ್ರಾಚೀನ ಕಾಲದ ಸಮುದ್ರ ಸಂಚಯಗಳಿಂದ ಪ್ರಿಕೇಂಬ್ರಿಯನ್‌ ಯುಗದ ಕ್ವಾರ್ಟ್‌ಜೈಟ್‌ ಶಿಲೆಗಳು ರಚನೆಯಾಗುತ್ತವೆ. ಇವುಗಳಿಂದಾಗಿ ಫೆಡರೇಷನ್‌ ಪೀಕ್‌ ಅಥವಾ ಫ್ರೆಂಚ್ಮನ್ಸ್‌ ಕ್ಯಾಪ್‌ನಂತಹ ಬಹಳ ಮೊನಚಾದ ಏಣುಗಳು ಮತ್ತು ಶ್ರೇಣಿಗಳ ರಚನೆಯಾಗುತ್ತವೆ. ಫ್ರೆಯ್ಸಿನೆಟ್‌ ಹಾಗೂ ಈಶಾನ್ಯ ಮತ್ತು ಪೂರ್ವ ಪ್ರದೇಶಗಳಲ್ಲಿ ಖಂಡೀಯ ಬೆಣಚುಕಲ್ಲು(ಗ್ರ್ಯಾನೈಟ್‌)ಗಳನ್ನೂ ನೋಡಬಹುದು. ಇವು ಆಸ್ಟ್ರೇಲಿಯಾ ಮುಖ್ಯ ಭೂಮಿಯ ಕಡಲತೀರದಲ್ಲಿ ಕಂಡುಬರುವ ಬೆಣಚುಕಲ್ಲುಗಳಂತಿವೆ. ವಾಯವ್ಯ ಮತ್ತು ಪಶ್ಚಿಮ ಪ್ರದೇಶಗಳಲ್ಲಿ, ರೋಸ್ಬೆರಿಯ ಸನಿಹ ಮೌಂಟ್‌ ರೋಡ್‌ನಲ್ಲಿ ಅಥವಾ ಕ್ವೀನ್ಸ್‌ಟೌನ್‌ ಸನಿಹ ಮೌಂಟ್‌ ಲಯಲ್‌ನಲ್ಲಿ ಖನಿಜ-ಭರಿತ ಜ್ವಾಲಾಮುಖಿ ಶಿಲೆಗಳಿವೆ. ದಕ್ಷಿಣ ಮತ್ತು ವಾಯವ್ಯದಲ್ಲಿ ಅದ್ಭುತವಾದ ಸುಣ್ಣಗಲ್ಲು ಇರುವ ಗುಹೆಗಳನ್ನು ಕಾಣಬಹುದು.

ಎತ್ತರದ ಪರ್ವತಗಳಲ್ಲಿ ಕ್ವಾರ್ಟ್‌ಜೈಟ್‌ ಮತ್ತು ಡೊಲೆರೈಟ್‌ ಪ್ರದೇಶಗಳು ಹಿಮಶಿಲಾರಚನೆಗೆ ಸಾಕ್ಷ್ಯವಾಗಿವೆ. ಆಸ್ಟ್ರೇಲಿಯಾದ ಹಿಮಶಿಲೆಯುಳ್ಳ ಭೂಚಿತ್ರಣವು ಮಧ್ಯ ಪ್ರಸ್ಥಭೂಮಿ ಮತ್ತು ನೈಋತ್ಯದಲ್ಲಿವೆ. ಉದಾಹರಣೆಗೆ, ಕ್ರೇಡ್ಲ್‌ ಮೌಂಟನ್‌ ಎಂಬ ಇನ್ನೊಂದು ಡೊಲೆರೈಟ್‌ ಶಿಖರವು ಒಂದು ನುನಟಾಕ್‌ ಆಗಿತ್ತು. ಇವೆರಡೂ ವಿವಿಧ ಶಿಲಾ ವಿಧಾನಗಳ ಒಟ್ಟುಗೂಡುವಿಕೆಯಿಂದಾಗಿ ಅದ್ಭುತ ರಮಣೀಯ ದೃಶ್ಯವೊದಗಿಸುತ್ತವೆ. ವಿಶ್ವದ ಇತರೆಡೆ ವಲಯಗಳಿಗಿಂತಲೂ ಇದು ಬಹಳಷ್ಟು ಭಿನ್ನವಾಗಿದೆ.

ಸ್ಥಳೀಯ ಜನರು (ಮೂಲನಿವಾಸಿಗಳು)

[ಬದಲಾಯಿಸಿ]
ಸುಮಾರು 1860ರ ದಶಕದ ಕಾಲಾವಧಿಯಲ್ಲಿ ಬದುಕುಳಿದಿದ್ದ ಕೊನೆಯ ನಾಲ್ಕು ಪರಿಪೂರ್ಣ ಟ್ಯಾಸ್ಮೆನಿಯನ್‌ ಬುಡಕಟ್ಟು ಜನಾಂಗದ ಕೊನೆಯ ನಾಲ್ಕು ಸದಸ್ಯರ ಚಿತ್ರ.ಕೊನೆಯಲ್ಲಿ ಬದುಕುಳಿದಿದ್ದ ಟ್ರುಗನಿನಿ, ಅತ್ಯಂತ ಬಲಗಡೆಗೆ ಕುಳಿತಿದ್ದಾರೆ.

ಟ್ಯಾಸ್ಮೆನಿಯನ್‌ ಸ್ಥಳೀಯ ಬುಡಕಟ್ಟು ಜನಾಂಗದವರು ಟ್ಯಾಸ್ಮೆನಿಯಾದ ಮೊದಲ ನಿವಾಸಿಗಳಾಗಿದ್ದರು.

ಅನಂತರ ದ್ವೀಪವಾದ ಈ ವಲಯದಲ್ಲಿ, ಕನಿಷ್ಠ ಪಕ್ಷ 35,000 ವರ್ಷಗಳ ಹಿಂದಿನಿಂದಲೂ ಈ ಜನಾಂಗದವರು ಇಲ್ಲಿ ವಾಸಿಸುತ್ತಿದ್ದುದಕ್ಕೆ ಸಾಕ್ಷ್ಯಗಳಿವೆ.[]  ಸುಮಾರು 10,000 ವರ್ಷಗಳ ಹಿಂದೆ ಏರುತ್ತಿದ್ದ ಸಮುದ್ರ ಮಟ್ಟಗಳು ಟ್ಯಾಸ್ಮೆನಿಯಾವನ್ನು ಆಸ್ಟ್ರೇಲಿಯಾ ಮುಖ್ಯ ಭೂಮಿಯಿಂದ ಬೇರ್ಪಡಿಸಿತು.

ಯುರೋಪಿಯನ್‌ ಪರಿಶೋಧಕರು ಇಲ್ಲಿ ಬಂದಾಗ, ಟ್ಯಾಸ್ಮೆನಿಯಾದ ಬುಡಕಟ್ಟು ಜನರಲ್ಲಿ ಒಂಬತ್ತು ಪ್ರಮುಖ ಜನಾಂಗೀಯ ಗುಂಪುಗಳಿದ್ದವು. 1803ರಲ್ಲಿ ಬ್ರಿಟಿಷರು ವಸಾಹತು ಸ್ಥಾಪಿಸಿದಾಗ, ಬುಡಕಟ್ಟು ಜನರ ಸಂಖ್ಯೆ 5,000ದಿಂದ 10,000ದ ನಡುವೆ ಎಂದು ಅಂದಾಜಿಸಲಾಗಿತ್ತು. ಯಾವುದೇ ಪ್ರತಿರೋಧ ಶಕ್ತಿಯಿಲ್ಲದ ಸಾಂಕ್ರಾಮಿಕ ರೋಗಗಳು, ಯುದ್ಧಗಳು ಮತ್ತು ಕಿರುಕುಳಗಳ ಕಾರಣದಿಂದಾಗಿ, 1833ರಲ್ಲಿ ಬುಡಕಟ್ಟು ಜನರ ಸಂಖ್ಯೆ ಕೇವಲ 300ರಷ್ಟಕ್ಕೆ ಇಳಿದಿತ್ತು.

ಜಾರ್ಜ್‌ ಆಗಸ್ಟಸ್‌ ರಾಬಿನ್ಸನ್‌ ಬಹುಶಃ ಎಲ್ಲಾ ಬುಡಕಟ್ಟು ಜನರನ್ನು ಫ್ಲಿಂಡರ್ಸ್‌ ಐಲೆಂಡ್‌ಗೆ ಸ್ಥಳಾಂತರಿಸಿದರು.

ಟ್ರುಗನಿನಿ ಎಂಬ ಮಹಿಳೆ (1812-76) ಟ್ಯಾಸ್ಮೆನಿಯಾದ ಪರಿಪೂರ್ಣ ಬುಡಕಟ್ಟು ಜನಾಂಗದ ವ್ಯಕ್ತಿಯೆಂದು ವ್ಯಾಪಕವಾಗಿ ನಂಬಲಾಗಿದೆ. ವೈಬಲೆನಾದಲ್ಲಿ ಜನಿಸಿ, 1905ರಲ್ಲಿ ನಿಧನಳಾದ ಇನ್ನೊರ್ವ ಮಹಿಳೆ ಫ್ಯಾನಿ ಕಾಕ್ರೇನ್ ಸ್ಮಿತ್‌ ಬುಡಕಟ್ಟು ಜನಾಂಗದ ಕೊನೆಯ ಸದಸ್ಯೆ ಎಂಬುದಕ್ಕೆ ಬಲವಾದ ಸಾಕ್ಷ್ಯವಿದೆ.[]

ಯುರೋಪಿಯನ್ನರ ಆಗಮನ

[ಬದಲಾಯಿಸಿ]
19ನೆಯ ಶತಮಾನದ ಅಪರಾರ್ಧದಲ್ಲಿ ಟ್ಯಾಸ್ಮೆನಿಯಾ

1642ರ ನವೆಂಬರ್‌ 24ರಂದು ಡಚ್‌ ಪರಿಶೋಧಕ ಎಬೆಲ್ ಟ್ಯಾಸ್ಮನ್‌ ಈ ದ್ವೀಪವನ್ನು ಪರಿಶೋಧಿಸಿ, ಮೊದಲ ಯುರೋಪಿಯನ್‌ ಎನಿಸಿಕೊಂಡ. ಎಬೆಲ್‌ ಟ್ಯಾಸ್ಮನ್‌ ಇಂದಿನ ಬ್ಲ್ಯಾಕ್ಮನ್ಸ್‌ ಬೇ ಎಂಬ ಸ್ಥಳದಲ್ಲಿ ಈ ದ್ವೀಪ ತಲುಪಿದ. 1773ರಲ್ಲಿ, ಟ್ಯಾಸ್ಮೆನಿಯಾದ ಇಂದಿನ ಅಡ್ವೆಂಚರ್‌ ಬೇ ಎಂಬ ಸ್ಥಳಕ್ಕೆ ತಲುಪಿದ ಟೊಬಿಯಸ್‌ ಫರ್ನೊಕ್ಸ್‌ ಮೊದಲ ಇಂಗ್ಲಿಷ್‌ ವ್ಯಕ್ತಿಯೆನಿಸಿದ. ಮಾರ್ಕ್‌-ಜೊಸೆಫ್‌ ಮ್ಯಾರಿಯಾನ್‌ ಡು ಫ್ರೆಸ್‌ ನಾಯಕತ್ವದ ಫ್ರೆಂಚ್‌ ಪರಿಶೋಧಕ ಪಂಗಡವು 1772ರಲ್ಲಿ ಬ್ಲ್ಯಾಕ್ಮನ್ಸ್‌ ಬೇಯಲ್ಲಿ ನೆಲ ತಲುಪಿತು. ಕ್ಯಾಪ್ಟನ್‌ ಜೇಮ್ಸ್‌ ಕುಕ್‌ 1777ರಲ್ಲಿ ಅಡ್ವೆಂಚರ್‌ ಬೇಯ ಪ್ರದೇಶ ತಲುಪಿದ. ಈತನೊಂದಿಗೆ ಯುವ ಪರಿಶೋಧಕ ವಿಲಿಯಮ್‌ ಬ್ಲೈ ಕೂಡ ಇದ್ದ. ವಿಲಿಯಮ್‌ ಬ್ಲೈ 1788ರಲ್ಲಿ ಎಚ್‌ಎಂಎಸ್‌ ಬೌಂಟಿ ಹಡಗಿನಲ್ಲಿ ಹಾಗೂ 1792ರಲ್ಲಿ ಎಚ್‌ಎಂಎಸ್‌ ಪ್ರಾವಿಡೆನ್ಸ್‌ನಲ್ಲಿ ಪುನಃ ಬಂದು, ಆತನೊಂದಿಗೆ ಯುವ ಪರಿಶೋಧಕ ಮ್ಯಾಥ್ಯೂ ಫ್ಲಿಂಡರ್ಸ್‌ನನ್ನು ಕರೆತಂದ. ಹಲವು ಇತರೆ ಯುರೋಪಿಯನ್ನರು ಭೂಚಿತ್ರಣದಲ್ಲಿ ಬದಲಾವಣೆ ಮಾಡಿದ ಪರಿಣಾಮವಾಗಿ, ಟ್ಯಾಸ್ಮೆನಿಯಾದ ಸ್ಥಳಾಕೃತಿಯಲ್ಲಿ ವಿವಿಧ ಹೆಸರುಗಳುಳ್ಳ ಸುಂದರ ವೈವಿಧ್ಯತೆಗಳು ಕಾಣಸಿಕ್ಕವು.

ಟ್ಯಾಸ್ಮೆನಿಯಾ ದ್ವೀಪ ಎಂಬುದನ್ನು ಮೊದಲ ಬಾರಿಗೆ ಮ್ಯಾಧ್ಯೂ ಫ್ಲಿಂಡರ್ಸ್‌ ಮತ್ತು ಜಾರ್ಜ್‌ ಬಾಸ್‌ 1798-99ರಲ್ಲಿ ಮೊದಲ ಬಾರಿಗೆ ಸಾಬೀತುಪಡಿಸಿದರು.[]

1803ರಲ್ಲಿ ಬ್ರಿಟಿಷರು ಟ್ಯಾಸ್ಮೆನಿಯಾದಲ್ಲಿ ಮೊಟ್ಟಮೊದಲ ವಸಾಹತು ಸ್ಥಾಪಿಸಿದರು. ಫ್ರೆಂಚ್‌ ಪಡೆಯು ಈ ದ್ವೀಪವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವುದನ್ನು ತಡೆಗಟ್ಟಲೆಂದು, ಲೆಫ್ಟಿನೆಂಟ್‌ ಜಾನ್‌ ಬೊವೆನ್‌ ಮುಂದಾಳುತ್ವದ ಸಣ್ಣ ಪಡೆಯು ಡೆರ್ವೆಂಟ್‌ ನದಿಮುಖದ ಪೂರ್ವ ದಡದಲ್ಲಿ ರಿಸ್ಡನ್‌ ಕೋವ್‌ ಎಂಬ ಸ್ಥಳದಲ್ಲಿ ನೆಲೆಸಿತು. ದ್ವೀಪದ ದಕ್ಷಿಣದಲ್ಲಿರುವ ಡೆರ್ವೆಂಟ್‌ನ ಪಶ್ಚಿಮ ಭಾಗದಲ್ಲಿ ಸಲ್ಲಿವನ್ಸ್‌‌ ಕೋವ್‌ನಲ್ಲಿ ಪರಿಶುದ್ದ ನೀರು ಹರಿಯುತ್ತಿದ್ದು, 1804ರಲ್ಲಿ ಕ್ಯಾಪ್ಟನ್‌ ಡೇವಿಡ್‌ ಕೊಲಿನ್ಸ್ 5 kilometres (3.1 mi)‌ ಪರ್ಯಾಯ ವಸಾಹತು ಸ್ಥಾಪಿಸಿದರು. ಆ ಕಾಲದ ಬ್ರಿಟಿಷ್‌ ವಸಾಹತಿನ ಕಾರ್ಯದರ್ಶಿ ಲಾರ್ಡ್‌ ಹೋಬಾರ್ಟ್‌ರ ಹೆಸರಿನಲ್ಲಿ, ಈ ವಸಾಹತಿಗೆ ಹೋಬಾರ್ಟ್‌ ಟೌನ್‌ ಅಥವಾ ಹೋಬಾರ್ಟನ್‌ ಎನ್ನಲಾಯಿತು. ಆನಂತರ ಇದನ್ನು ಹೋಬಾರ್ಟ್‌ ಎಂದು ಹ್ರಸ್ವಗೊಳಿಸಲಾಯಿತು. ರಿಸ್ಡನ್‌ ವಸಾಹತನ್ನು ಆನಂತರ ತ್ಯಜಿಸಲಾಯಿತು.

ವಸಾಹತುದಾರರಲ್ಲಿ ಬಹಳಷ್ಟು ಜನರು ಕೈದಿಗಳು ಹಾಗೂ ಅವರ ಸೇನಾ ಕಾವಲುಗಾರರಾಗಿದ್ದರು. ಕೃಷಿ ಮತ್ತು ಇತರೆ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸುವುದು ಇವರ ಹೊಣೆಗಾರಿಕೆಯಾಗಿತ್ತು. ವಾನ್‌ ಡೀಮನ್ಸ್‌ ದ್ವೀಪದಲ್ಲಿ ಹಲವು ಇತರೆ ಕೈದಿಗಳ ವಸಾಹತುಗಳನ್ನು ಸ್ಥಾಪಿಸಲಾಯಿತು. ಇವುಗಳಲ್ಲಿ, ಅಗ್ನೇಯದಲ್ಲಿ ಪೋರ್ಟ್‌ ಆರ್ಥರ್‌ನಲ್ಲಿ ಹಾಗೂ ಪಶ್ಚಿಮ ಕಡಲತೀರದಲ್ಲಿ ಮೆಕ್ವಾರೀ ಹಾರ್ಬರ್‌ನಲ್ಲಿ ಬಹಳಷ್ಟು ಕಠಿಣ ಶಿಕ್ಷೆಯ ಕಾರಾವಾಸಗಳು ಸೇರಿದಂತೆ ಆನುಷಂಗಿಕ ಕಾರಾವಾಸಗಳು ಸ್ಥಾಪಿತವಾದವು. 1803ರಿಂದ 1853ರವರೆಗೆ, ಐವತ್ತು ವರ್ಷಗಳ ಕಾಲಾವಧಿಯಲ್ಲಿ ಸುಮಾರು 75,000 ಕೈದಿಗಳನ್ನು ಟ್ಯಾಸ್ಮೆನಿಯಾಗೆ ರವಾನೆ ಮಾಡಲಾಯಿತು.[೧೦]

ವಾನ್‌ ಡೀಮೆನ್ಸ್‌ ಲ್ಯಾಂಡ್‌ನ್ನು ನ್ಯೂ ಸೌತ್‌ ವೇಲ್ಸ್‌ನಿಂದ ಪ್ರತ್ಯೇಕ ವಸಾಹತು ಎಂದು ಘೋಷಿಸಲಾಯಿತು. 1825ರ ಡಿಸೆಂಬರ್‌ 3ರಂದು ತನ್ನದೇ ಆದ ನ್ಯಾಯಾಂಗ ಮತ್ತು ಶಾಸನಾಂಗ ವಿಧಾನ ಪರಿಷತ್‌ ರಚನೆಯಾದವು.

ಟ್ಯಾಸ್ಮೆನಿಯಾದ ವಸಾಹತು

[ಬದಲಾಯಿಸಿ]

ಟ್ಯಾಸ್ಮೆನಿಯಾದ ವಸಾಹತು (ಕಾಲೊನಿ ಆಫ್ ಟ್ಯಾಸ್ಮೆನಿಯಾ), ಅಥವಾ ಇನ್ನೂ ಸರಳವಾಗಿ, 'ಟ್ಯಾಸ್ಮೆನಿಯಾ' ಎಂಬುದು 1856ರಿಂದ 1901ರ ತನಕ ಟ್ಯಾಸ್ಮೆನಿಯಾ ದ್ವೀಪದಲ್ಲಿದ್ದ ಬ್ರಿಟಿಷ್‌ ವಸಾಹತು ಆಗಿತ್ತು. 1901ರಲ್ಲಿ ಐದು ಇತರೆ ಆಸ್ಟ್ರೇಲಿಯನ್‌ ವಸಾಹತುಗಳೊಂದಿಗೆ ಒಕ್ಕೂಟ ರಚಿಸಿ, ಆಸ್ಟ್ರೇಲಿಯಾದ ಕಾಮನ್ವೆಲ್ತ್‌ (ಕಾಮನ್ವೆಲ್ತ್‌ ಆಫ್‌ ಆಸ್ಟ್ರೇಲಿಯಾ) ಆಯಿತು. 1850ರಲ್ಲಿ ವೆಸ್ಟ್‌ಮಿಂಸ್ಟರ್‌ ಸಂಸತ್‌ನಲ್ಲಿ ಆಸ್ಟ್ರೇಲಿಯನ್‌ ವಸಾಹತುಗಳ ಸರ್ಕಾರ ಕಾಯಿದೆಯನ್ನು ಅನುಮೋದಿಸಿ, ಆರೂ ಆಸ್ಟ್ರೇಲಿಯನ್‌ ವಸಾಹತುಗಳಿಗೆ ಶಾಸನ ಅಧಿಕಾರ ನೀಡುವುದರೊಂದಿಗೆ ವಸಾಹತು ಸ್ಥಾಪನೆಯಾದವು. ವಾನ್‌ ಡೀಮನ್ಸ್‌ ಲ್ಯಾಂಡ್‌ನ ಶಾಸನ ಪರಿಷತ್‌ನಲ್ಲಿ‌ ಹೊಸ ಸಂವಿಧಾನದ ಕರಡು ಸಿದ್ಧಪಡಿಸಲಾಯಿತು. ಇದನ್ನು 1854ರಲ್ಲಿ ಅನುಮೋದಿಸಲಾಗಿ, 1855ರಲ್ಲಿ ಮಹಾರಾಣಿ ವಿಕ್ಟೊರಿಯಾರಿಂದ ರಾಜಮನೆತನದ ಸಮ್ಮತಿ ದೊರೆಯಿತು. ಆದೇ ವರ್ಷದ ಅಪರಾರ್ಧದಲ್ಲಿ, ವಸಾಹತಿನ ಹೆಸರನ್ನು 'ವಾನ್‌ ಡೀಮೆನ್ಸ್‌ ಲ್ಯಾಂಡ್' ಇಂದ 'ಟ್ಯಾಸ್ಮೆನಿಯಾ'‌ ಎಂದು ಬದಲಿಸುವ ಪ್ರಸ್ತಾಪವನ್ನು ರಾಜಮನೆತನದ ಆಪ್ತ ಸಮಾಲೋಚಕರ ಸಭೆ (ಪ್ರಿವಿ ಕೌನ್ಸಿಲ್‌) ಅನುಮೋದಿಸಿತು. 1856ರಲ್ಲಿ, ಹೊಸದಾಗಿ ಚುನಾಯಿತವಾದ ದ್ವಿಸಭೆಯ ಸಂಸತ್‌ ಮೊದಲ ಬಾರಿಗೆ ಸದನ ಸೇರಿ, ಟ್ಯಾಸ್ಮೆನಿಯಾವನ್ನು ಬ್ರಿಟಿಷ್‌ ಸಾಮ್ರಾಜ್ಯದ ಸ್ವಯಮಾಧಿಕಾರದ ವಸಾಹತು ಎಂದು ಸ್ಥಾಪಿಸಿತು.

ಮೊದಲಿಗೆ ಈ ವಸಾಹತಿನ ಆರ್ಥಿಕ ಸ್ಥಿತಿ ಏರುಪೇರಾದ ಕಾರಣ, ಜನಜೀವನ ಅಸ್ತವ್ಯಸ್ತಗೊಳ್ಳುತ್ತಿತ್ತು. ಆನಂತರ ಆರ್ಥಿಕತೆಯು ಸ್ಥಿರಗೊಂಡು, ನಿರಂತರ ಸುಧಾರಣೆ ಕಂಡಿತು. ಈ ದೇಶದ ಗಡಿಯಾಚೆಯಿಂದ ಯಾವುದೇ ಅಕ್ರಮಣದ ಭೀತಿಯಿಲ್ಲದ ಹಾಗೂ ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಸದೃಢ ವಹಿವಾಟು ಸಂಪರ್ಕ ಹೊಂದಿದ್ದ ಕಾರಣ, ಹತ್ತೊಂಬತ್ತನೆಯ ಶತಮಾನದ ಅಪರಾರ್ಧದಲ್ಲಿ ಟ್ಯಾಸ್ಮೆನಿಯಾ ಉತ್ತಮ ಆರ್ಥಿಕ ಯುಗವನ್ನು ಕಂಡಿತು. ಹಡಗು ನಿರ್ಮಾಣದ ಕೈಗಾರಿಕಾ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ಕೇಂದ್ರವಾಯಿತು. ಟ್ಯಾಸ್ಮೆನಿಯಾ ತನ್ನದೇ ಆದ ಸ್ಥಳೀಯ ರಕ್ಷಣಾ ಪಡೆಯನ್ನು ಸ್ಥಾಪಿಸಿತು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೆಯ ಬೂಯರ್‌ ಯುದ್ಧದಲ್ಲಿ ಈ ಪಡೆಯು ಗಮನಾರ್ಹ ಪಾತ್ರ ವಹಿಸಿತು. ಮೊದಲ ಎರಡು ವಿಕ್ಟೊರಿಯಾ ಕ್ರಾಸ್‌ ಗೌರವ ಪಡೆದ ಆಸ್ಟ್ರೇಲಿಯನ್ನರಲ್ಲಿ ಟ್ಯಾಸ್ಮೆನಿಯಾದವರೇ ಆಗಿದ್ದರು. ಎಲ್ಲಾ ಆಸ್ಟ್ರೇಲಿಯನ್‌ ವಸಾಹತುಗಳ ಪೈಕಿ ಬಹಳಷ್ಟು ವಸಾಹತುಗಳೊಂದಿಗೆ ಸಂಯುಕ್ತತೆಯ ಪರವಾಗಿ ಟ್ಯಾಸ್ಮೆನಿಯಾದವರು ಮತ ಚಲಾಯಿಸಿದರು. 1901ರ ಜನವರಿ 1ರಂದು, ಟ್ಯಾಸ್ಮೆನಿಯಾದ ವಸಾಹತು (ಕಾಲೊನಿ ಆಫ್‌ ಟ್ಯಾಸ್ಮೆನಿಯಾ) ಎಂಬುದು ಆಸ್ಟ್ರೇಲಿಯಾದ ರಾಜ್ಯ ಟ್ಯಾಸ್ಮೆನಿಯಾ ಎಂದಾಯಿತು. (ಆಸ್ಟ್ರೇಲಿಯನ್‌ ಸ್ಟೇಟ್‌ ಆಫ್‌ ಟ್ಯಾಸ್ಮೆನಿಯಾ).

ಇತ್ತೀಚಿನ ಇತಿಹಾಸ

[ಬದಲಾಯಿಸಿ]

1967ರಲ್ಲಿ ಸಂಭವಿಸಿದ ಟ್ಯಾಸ್ಮೆನಿಯನ್‌ ಅಗ್ನಿದುರಂತದಿಂದ ರಾಜ್ಯಕ್ಕೆ ಬಹಳಷ್ಟು ಹಾನಿಯಾಗಿತ್ತು. ಇದರಲ್ಲಿ ಬಹಳಷ್ಟು ಜೀವ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯಾಗಿತ್ತು. 1970ರ ದಶಕದ ಕಾಲಾವಧಿಯಲ್ಲಿ, ಪರಿಸರ ಮಹತ್ವ ಹೊಂದಿದ್ದ ಪೆಡ್ಡರ್ ಕೆರೆಗೆ ಅಣೆಕಟ್ಟು ಕಟ್ಟಲು ರಾಜ್ಯ ಸರ್ಕಾರವು ಯೋಜನೆ ಘೋಷಿಸಿತು. ಅಣೆಕಟ್ಟಿನಿಂದಾಗಿ ಪ್ರವಾಹವುಂಟಾಯಿತು. 1975ರಲ್ಲಿ, ಭಾರಿ ಅದಿರು ಹೊತ್ತ ಹಡಗು ಎಂವಿ ಲೇಕ್‌ ಇಲಾವರಾ ಢಿಕ್ಕಿ ಹೊಡೆದ ಕಾರಣ, ಟ್ಯಾಸ್ಮನ್‌ ಸೇತುವೆಯು ಕುಸಿದುಬಿದ್ದಿತು. ಇದರಿಂದಾಗಿ ಹೋಬಾರ್ಟ್‌ನಲ್ಲಿರುವ ಡರ್ವೆಂಟ್‌ ನದಿಯನ್ನು ದಾಟುವುದು ಅಸಾಧ್ಯವಾಯಿತು. 1980ರ ದಶಕದ ಕಾಲಾವಧಿಯಲ್ಲಿ, ಫ್ರ್ಯಾಂಕ್ಲಿನ್‌ ಅಣೆಕಟ್ಟು ನಿರ್ಮಾಣದ ವಿರುದ್ಧದ ಭಾರಿ ಆಂದೋಲನವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗಮನ ಸೆಳೆಯಿತು. ಇದು ಹಸಿರು ಚಳವಳಿಯ ಆರಂಭಕ್ಕೆ ಕಾರಣವಾಯಿತು. 1996ರ ಏಪ್ರಿಲ್‌ 28ರಂದು, ಇಂದು ಪೋರ್ಟ್‌ ಆರ್ಥರ್‌ ಹತ್ಯಾಕಾಂಡ ಎಂದು ಅಪಖ್ಯಾತವಾದ ಘಟನೆಯಲ್ಲಿ ಮಾರ್ಟಿನ್‌ ಬ್ರಯಂಟ್‌ ಎಂಬೊಬ್ಬ ಬಂದೂಕುಧಾರಿಯು, ಪ್ರವಾಸಿಗರು ಮತ್ತು ನಿವಾಸಿಗಳು ಸೇರಿದಂತೆ 25 ಜನರನ್ನು ಗುಂಡು ಹಾರಿಸಿ ಕೊಂದು, ಇತರೆ 21 ಜನರನ್ನು ಗಾಯಗೊಳಿಸಿದನು. ಇದರಿಂದಾಗಿ, ಬಂದೂಕು ಮುಂತಾದ ಶಸ್ತ್ರಗಳ ಬಳಕೆಯ ನಿಯಮಾವಳಿಗಳನ್ನು ಕೂಡಲೇ ಪುನಃ ಪರಿಶೀಲಿಸಲಾಯಿತು. ರಾಷ್ಟ್ರಾದ್ಯಂತ ಬಂದೂಕು ಮಾಲಿಕತ್ವ ನಿಯಮಾವಳಿ-ಕಾನೂನುಗಳನ್ನು ರಚಿಸಲಾಯಿತು. ಟ್ಯಾಸ್ಮೆನಿಯಾದ ನಿಯಮಾವಳಿಗಳು ಆಸ್ಟ್ರೇಲಿಯಾದಲ್ಲೇ ಅತಿ ಕಟು ನಿಯಮಗಳಾಗಿವೆ. 2006ರ ಏಪ್ರಿಲ್‌ ತಿಂಗಳಲ್ಲಿ, ಸಣ್ಣ ಪ್ರಮಾಣದ ಭೂಕಂಪದಿಂದಾಗಿ ಬೀಕನ್ಸ್‌ಫೀಲ್ಡ್‌ ಗಣಿ ಕುಸಿದುಬಿದ್ದಿತು. ಒಬ್ಬ ವ್ಯಕ್ತಿ ಮೃತರಾಗಿ ಇನ್ನೂ ಇಬ್ಬರು ನೆಲದಡಿಯಲ್ಲಿ ಹದಿನಾಲ್ಕು ದಿನಗಳ ಕಾಲ ಸ್ಥಳದಲ್ಲೇ ಸಿಲುಕಿಕೊಂಡಿದ್ದರು. ಟ್ಯಾಮರ್‌ ಕಣಿವೆಯಲ್ಲಿ ಬೆಲ್‌ ಬೇ ಪಲ್ಮ್‌ ಮಿಲ್‌ ನಿರ್ಮಾಣ ಪ್ರಸ್ತಾಪದ ಬಗ್ಗೆ, ಟ್ಯಾಸ್ಮೆನಿಯನ್‌ ಸಮುದಾಯಲ್ಲಿ ಕೆಲಕಾಲ ಭಿನ್ನಾಭಿಪ್ರಾಯವಿತ್ತು. ಉದ್ಯೋಗಗಳು ಸೃಷ್ಟಿಯಾಗುವುದು ಎಂದು ಇದರ ಸಮರ್ಥಕರು ವಾದಿಸಿದರೆ, ಮಾಲಿನ್ಯದಿಂದಾಗಿ ಬಾಸ್‌ ಸ್ಟ್ರೇಟ್‌ ಮೀನುಗಾರಿಕೆ ಉದ್ದಿಮೆ ಮತ್ತು ಸ್ಥಳೀಯ ಪ್ರವಾಸೋದ್ಯಮದ ಮೇಲೆ ಕೆಟ್ಟ ಪರಿಣಾಮ ಬೀರುವುದೆಂದು ಇದರ ವಿರೋಧಿಗಳು ವಾದಿಸಿದರು.

Port Arthur.

ಟ್ಯಾಸ್ಮೆನಿಯಾದ ಭೂಗೋಳ

[ಬದಲಾಯಿಸಿ]
ಟಾಸ್ಮೆನಿಯಾದ ಕೇಂದ್ರೀಯ ಎತ್ತರದ ಭೂಮಿ ಪ್ರದೇಶದಲ್ಲಿರುವ ಡವ್‌ ಕೆರೆ ಮತ್ತು ಕ್ರೇಡ್ಲ್‌ ಪರ್ವತ.

ಟ್ಯಾಸ್ಮೆನಿಯಾದ 68,401 square kilometres (26,410 sq mi) ಭೂಪ್ರದೇಶವು 42°S 147°E / 42°S 147°E / -42; 147 ಲ್ಲಿ ಸ್ಥಿತವಾಗಿದೆ. ಈ ಭೂಮಿಯನ್ನು ಸುತ್ತುವ, ಅಪಖ್ಯಾತ ಎನ್ನಲಾದ 'ರೋರಿಂಗ್ ಫಾರ್ಟೀಸ್‌' ಬಿರುಗಾಳಿಯ ಪಥದಲ್ಲಿಯೇ ಇದೆ. ಹಿಂದೂ ಸಾಗರ ಮತ್ತು ಶಾಂತ ಸಾಗರಗಳು ಈ ದ್ವೀಪವನ್ನು ಸುತ್ತುವರೆದಿವೆ. ಈ ದ್ವೀಪವನ್ನು ಬಾಸ್‌ ಸ್ಟ್ರೇಟ್‌ ಆಸ್ಟ್ರೇಲಿಯಾ ಮುಖ್ಯಭೂಮಿಯಿಂದ ಬೇರ್ಪಡಿಸುತ್ತದೆ.

ಇತ್ತೀಚಿನ ಭೂವೈಜ್ಞಾನಿಕ ಕಾಲಾವಧಿಗಳಲ್ಲಿ ಈ ದ್ವೀಪದ ಜ್ವಾಲಾಮುಖಿಗಳು ನಿಷ್ಕ್ರಿಯವಾಗಿರುವುದರಿಂದ, ಟ್ಯಾಸ್ಮೆನಿಯಾದಲ್ಲಿ ಹಲವು ದುಂಡಗಿನ, ನುಣುಪಾದ ಪರ್ವತ ಶ್ರೇಣಿಗಳಿವೆ. ಇದರಿಂದಾಗಿ ಇದು ಆಸ್ಟ್ರೇಲಿಯಾದಲ್ಲೇ ಹೆಚ್ಚು ಪರ್ವತಗಳುಳ್ಳ ಪ್ರದೇಶದ ರಾಜ್ಯವಾಗಿದೆ. ಮಧ್ಯದ ಎತ್ತರದಭೂಮಿ (ಸೆಂಟ್ರಲ್‌ ಹೈಲೆಂಡ್ಸ್‌) ಪ್ರದೇಶವು ಅತಿ ಪರ್ವತಮಯ ಪ್ರದೇಶವಾಗಿದೆ. ಇದು ರಾಜ್ಯದ ಮಧ್ಯವಲಯದ ಪಶ್ಚಿಮ ಭಾಗದ ಬಹಳಷ್ಟು ಭಾಗದಲ್ಲಿ ವ್ಯಾಪಿಸಿದೆ. ಕೇಂದ್ರವಲಯದ ಪೂರ್ವಭಾಗದಲ್ಲಿರುವ ನಡುನಾಡು (ಮಿಡ್ಲೆಂಡ್ಸ್)‌ ಬಹಳಷ್ಟು ಮಧ್ಯಭಾಗದ ಭೂಪ್ರದೇಶ ಸಮತಟ್ಟಾಗಿದೆ. ಇದನ್ನು ಕೃಷಿಗಾಗಿ ಬಹಳಷ್ಟು ಬಳಸಲಾಗುತ್ತಿದೆ. ಆದರೂ, ಕೃಷಿ ಚಟುವಟಿಕೆಗಳು ರಾಜ್ಯಾದ್ಯಂತ ಹರಡಿವೆ. 1,617 ಮೀಟರ್ ಎತ್ತರದ ಮೌಂಟ್‌ ಒಸಾ ಟ್ಯಾಸ್ಮೆನಿಯಾದ ಅತ್ಯೆತ್ತರದ ಪರ್ವತ. ವಿಶ್ವವಿಖ್ಯಾತ ಕ್ರೇಡ್ಲ್‌ ಪರ್ವತ ಹಾಗೂ ಲೇಕ್ ಸೇಂಟ್‌ ಕ್ಲೇರ್‌ ರಾಷ್ಟ್ರೀಯ ಉದ್ಯಾನದ ಮಧ್ಯಭಾಗದಲ್ಲಿ ಈ ಪರ್ವತವಿದೆ.[೧೧][೧೨] ಇಂದಿಗೂ ಸಹ, ಟ್ಯಾಸ್ಮೆನಿಯಾದ ಬಹಳಷ್ಟು ಭಾಗಗಳಲ್ಲಿ ದಟ್ಟ ಅರಣ್ಯವಿದೆ. ದಕ್ಷಿಣ ಗೋಲಾರ್ಧದಲ್ಲಿಯೇ ಕೊನೆಯದು ಎನ್ನಲಾದ ಸಮಶೀತೋಷ್ಣ ಮಳೆಕಾಡುಗಳಲ್ಲಿ ಕೆಲವು ನೈಋತ್ಯ ರಾಷ್ಟ್ರೀಯ ಉದ್ಯಾನ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿವೆ.

ಪೂರ್ವ ಕಡಲತೀರದಲ್ಲಿ ವೈನ್‌ಗ್ಲ್ಯಾಸ್‌ ಬೇ.

ದ್ವೀಪದ ಅತಿ ವಾಯವ್ಯದಲ್ಲಿರುವ ಟಾರ್ಕೀನ್‌ ಆಸ್ಟ್ರೇಲಿಯಾದಲ್ಲೇ ಅತಿವಿಶಾಲ ಸಮಶೀತೋಷ್ಣ ಮಳೆಕಾಡು ಪ್ರದೇಶವಾಗಿದೆ. ಇದು ಸುಮಾರು 3,800 square kilometres (1,500 sq mi) ಅಷ್ಟು ವ್ಯಾಪಿಸಿದೆ.[೧೩] ಬಹಳ ಕಡಿದಾದ ಭೂನಕ್ಷೆ ಹೊಂದಿರುವ ಟ್ಯಾಸ್ಮೆನಿಯಾದಲ್ಲಿ ಹಲವು ನದಿಗಳು ಹರಿಯುತ್ತವೆ. ಇಡೀ ರಾಜ್ಯದ ಜಲವಿದ್ಯುತ್‌ ಯೋಜನೆಗಳ ಮೂಲಕ ವಿದ್ಯುತ್‌ ಒದಗಿಸಲೆಂದು, ರಾಜ್ಯದ ಬಹುತೇಕ ಎಲ್ಲಾ ನದಿಗಳಿಗೂ ಒಂದಲ್ಲ ಒಂದೆಡೆ ಅಣೆಕಟ್ಟು ಇದ್ದೇ ಇದೆ. ಬಹಳಷ್ಟು ನದಿಗಳು ಮಧ್ಯದ ಎತ್ತರದ ಭೂಮಿಗಳಿಂದ ಉಗಮವಾಗಿ, ಕಡಲತೀರದತ್ತ ಹರಿಯುತ್ತವೆ. ಟ್ಯಾಸ್ಮೆನಿಯಾದ ನದೀಮುಖಗಳು (ಆದರೂ ಹಲವು ನಿದರ್ಶನಗಳಲ್ಲಿ ಇವುಗಳನ್ನು ನದಿಗಳೆಂದೇ ಉಲ್ಲೇಖಿಸಲಾಗಿದೆ) ಪ್ರಮುಖ ಜನನಿಬಿಡ ಕೇಂದ್ರಗಳಲ್ಲಿವೆ.

ಡರ್ವೆಂಟ್‌ ನದಿಯು ದಕ್ಷಿಣಕ್ಕೆ ಹರಿದು, ಹೋಬಾರ್ಟ್‌ನಲ್ಲಿ ಕಡಲತೀರ ಸೇರುತ್ತದೆ. ಟ್ಯಾಮರ್‌ ನದಿಯು ಲಾನ್ಸೆಸ್ಟನ್‌ನಿಂದ ಉತ್ತರಕ್ಕೆ ಹರಿಯುತ್ತದೆ. ಮರ್ಸೀ ನದಿಯೂ ಸಹ ಉತ್ತರಕ್ಕೆ ಹರಿದು, ವಾಯವ್ಯ ದಿಕ್ಕಿನಲ್ಲಿರುವ ಡೆವೊನ್ಪೋರ್ಟ್‌ನಲ್ಲಿ ಕಡಲ ತೀರ ಸೇರುತ್ತದೆ. ಫ್ರ್ಯಾಂಕ್ಲಿನ್‌ ಮತ್ತು ಗೊರ್ಡಾನ್‌ ನದಿಗಳು ಪಶ್ಚಿಮಕ್ಕೆ ಹರಿದು, ಸ್ಟ್ರಾಹಾನ್‌ನಲ್ಲಿ ಪಶ್ಚಿಮ ಕಡಲತೀರ ಸೇರುತ್ತವೆ. ದಕ್ಷಿಣ ಎಸ್ಕ್‌ ನದಿಯು ಟ್ಯಾಸ್ಮೆನಿಯಾದಲ್ಲೆ ಅತಿ ಉದ್ದವಾದ ನದಿ. ಇದು ಫಿಂಗಲ್‌ನಲ್ಲಿರುವ ಪರ್ವತಗಳಲ್ಲಿ ಉಗಮಿಸಿ, ಅವೊಕಾ, ಇವಾನ್ಡೇಲ್‌, ಲಾಂಗ್ಫರ್ಡ್‌, ಹ್ಯಾಡ್ಸ್ಪೆನ್‌ ಹಾಗೂ ಅಂತಿಮವಾಗಿ ಲಾನ್ಸೆಸ್ಟನ್‌ ಮೂಲಕ ಹರಿಯುತ್ತದೆ. ಲಾನ್ಸೆಸ್ಟನ್‌ನ ಟ್ರೆವಾಲಿನ್‌ ಅಣೆಕಟ್ಟೆನಲ್ಲಿ ನದಿಗೆ ಪೂರಕವಾಗಿ ಇನ್ನೊಂದು ಅಣೆಕಟ್ಟು ನಿರ್ಮಿಸಲಾಗಿದೆ. ನಗರದ ಜಲವಿದ್ಯುತ್‌ ಯೋಜನೆಗಾಗಿ ಈ ವ್ಯವಸ್ಥೆಯನ್ನು ಬಳಸಲಾಗಿದೆ. ಟ್ರೆವಲಿನ್‌ ಕೆರೆಯಲ್ಲಿ ನೀರಿನ ಬಹಳಷ್ಟು ಪಾಲು ಅಣೆಕಟ್ಟು ಹಾಕಿದೆಯಾದರೂ, ಸ್ವಲ್ಪ ನೀರು ಕ್ಯಾಟರಾಕ್ಟ್‌ ಕಮರಿಯಲ್ಲಿ ಹರಿದು, ಟ್ಯಾಮರ್‌ ನದಿಗೆ ಉಪನದಿಯಾಗುತ್ತದೆ. ವಿದ್ಯುತ್‌ ಕೇಂದ್ರದಿಂದ ಹೊರಹರಿವು ಸಹ ಲಾನ್ಸೆಸ್ಟನ್‌ನಿಂದ ಪ್ರವಾಹದ ದಿಕ್ಕಿನಲ್ಲಿ ಟ್ಯಾಮರ್‌ ನದಿಯೊಂದಿಗೆ ಸೇರುತ್ತದೆ.[೧೪]

ಹವಾಗುಣ

[ಬದಲಾಯಿಸಿ]

ಟ್ಯಾಸ್ಮೆನಿಯಾದಲ್ಲಿ ತಂಪಾದ ಸಮಶೀತೋಷ್ಣ ಹವಾಗುಣ ಹೊಂದಿದ್ದು, ನಾಲ್ಕು ವಿವಿಧ ಋತುಗಳಿವೆ. ಬೇಸಿಗೆಯ ಋತುವು ಡಿಸೆಂಬರ್‌ನಿಂದ ಫೆಬ್ರುವರಿ ತನಕ ಇರುತ್ತದೆ. ಈ ಋತುವಿನಲ್ಲಿ ಗರಿಷ್ಠ ಸರಾಸರಿಯು 21 °C (70 °F) ಅಷ್ಟಿದ್ದು, ಲಾನ್ಸೆಸ್ಟನ್‌ ಸುತ್ತಮುತ್ತಲ ಅಂತರ್ದೇಶೀಯ ವಲಯಗಳಲ್ಲಿ ಉಷ್ಣಾಂಶವು 24 °C (75 °F) ತಲುಪುತ್ತದೆ. ಒಳನಾಡಿನ ಇತರೆ ಭಾಗಗಳಲ್ಲಿ ಇನ್ನಷ್ಟು ತಂಪಾದ ಹವಾಗುಣವಿದೆ. ಮಧ್ಯ ಪ್ರಸ್ಥಭೂಮಿಯಲ್ಲಿರುವ ಲಿಯಾವೆನಿ ಆಸ್ಟ್ರೇಲಿಯಾದ ಅತಿ ಹೆಚ್ಚು ಶೀತ ಪ್ರದೇಶವಾಗಿದೆ. ಫೆಬ್ರವರಿ ತಿಂಗಳಲ್ಲಿ ಇಲ್ಲಿಯ ಉಷ್ಣಾಂಶವು 4 °C (39 °F) ಇಂದ 17 °C (63 °F) ಮಟ್ಟದಲ್ಲಿರುತ್ತದೆ. ಶರತ್ಕಾಲವು ಮಾರ್ಚ್‌ ತಿಂಗಳಿಂದ ಮೇ ತಿಂಗಳ ವರೆಗಿದ್ದು, ಹವಾಮಾನದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಬೇಸಿಗೆಯ ಹವಾಮಾನ ಗುಣಗಳು ಚಳಿಗಾಲದ ಹವಾಗುಣವನ್ನು ಅನುಸರಿಸುತ್ತದೆ.[೧೫]

ರಸೆಲ್‌ ಜಲಪಾತ

ಚಳಿಗಾಲವು ಜೂನ್‌ ತಿಂಗಳಿಂದ ಆಗಸ್ಟ್ ತಿಂಗಳವರೆಗಿರುತ್ತದೆ. ರಾಜ್ಯದ ಪಾಲಿಗೆ ಈ ಮೂರು ತಿಂಗಳುಗಳು ಬಹಳಷ್ಟು ಆರ್ದ್ರಮಯ ಹಾಗೂ ಅತಿ ತಂಪಿನ ತಿಂಗಳುಗಳಾಗಿರುತ್ತವೆ. ಎತ್ತರದ ಪ್ರದೇಶಗಳಲ್ಲಿ ಬಹಳಷ್ಟು ಹಿಮಪಾತವಾಗುತ್ತದೆ. ದಕ್ಷಿಣ ಸಾಗರದಿಂದ ಒಳಬರುವ ಶೀತಗಾಳಿಯಿಂದಾಗಿ, ಚಳಿಗಾಲದಲ್ಲಿ ಕಡಲ ತೀರದ ಪ್ರದೇಶಗಳಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶವು 12 °C (54 °F) ಹಾಗೂ ಮಧ್ಯದ ಪ್ರಸ್ಥಭೂಮಿಯಲ್ಲಿ 3 °C (37 °F) ಇರುತ್ತದೆ.[೧೬] ವಸಂತ ಋತುವು ಸಂಕ್ರಮಣದ ಋತುವಾಗಿರುತ್ತದೆ. ಈ ಸಮಯದಲ್ಲಿ ಚಳಿಗಾಲದ ಹವಾಮಾನವು ಬೇಸಿಗೆಯ ಹವಾಮಾನದ ಗುಣಗಳನ್ನು ಅನುಸರಿಸಲಾರಂಭಿಸುತ್ತದೆ. ಆದರೂ, ಅಕ್ಟೋಬರ್‌ ತಿಂಗಳ ತನಕ ಮಂಜು ಬೀಳುವುದು ಸಾಮಾನ್ಯ. ವಸಂತ ಋತುವು ವರ್ಷದಲೇ ಜೋರು ಗಾಳಿ ಬೀಸುವ ಋತುವಾಗಿರುತ್ತದೆ. ಅಪರಾಹ್ನದ ಸಮುದ್ರ ಗಾಳಿಯು ಕಡಲತೀರದ ಮೇಲೆ ಪ್ರಭಾವ ಬೀರಲಾರಂಭಿಸುತ್ತದೆ.

ಉತ್ತರ ಗೋಲಾರ್ಧದಲ್ಲಿ ಅದೇ ಅಕ್ಷಾಂಶದಲ್ಲಿರುವ ದೊಡ್ಡ ಖಂಡಗಳಲ್ಲಿನ ಮಳೆಗಾಲಕ್ಕೆ ಸಾಮ್ಯತೆಯಿರುವಂತೆ, ಟ್ಯಾಸ್ಮೆನಿಯಾದಲ್ಲಿ ಮಳೆಗಾಲವು ಸಂಕೀರ್ಣ ಪ್ರವೃತ್ತಿ ಅನುಸರಿಸುತ್ತದೆ. ಪಶ್ಚಿಮ ಪ್ರದೇಶದಲ್ಲಿ ಮಳೆಯು ಕಡಲ ತೀರದಲ್ಲಿನ ಸ್ಟ್ರಹನ್‌ನಲ್ಲಿ 1,458 millimetres (57.4 in)ಇಂದ ಹಿಡಿದು, ಪ್ರಸ್ಥಭೂಮಿಯಲ್ಲಿರುವ ಕ್ರೇಡ್ಲ್‌ ಕಣಿವೆಯಲ್ಲಿ 2,690 millimetres (106 in) ವರೆಗೆ ಹೆಚ್ಚುತ್ತದೆ.[೧೭]

ಚಳಿಗಾಲದಲ್ಲಿ ಗರಿಷ್ಠ ಮಳೆಯಾಗುವುದು: ಜುಲೈ ಮತ್ತು ಅಗಸ್ಟ್‌ ತಿಂಗಳಲ್ಲಿ ಸಂಭವಿಸುವ ಸರಾಸರಿ ಮಳೆಯ 30-40%ರಷ್ಟು ಮಳೆಯು ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಸಂಭವಿಸುವುದು. ಆದರೂ, ಅತಿ ಶುಷ್ಕ ತಿಂಗಳುಗಳಲ್ಲಿಯೂ ಸಹ ಪ್ರತಿ ಎರಡನೆಯ ದಿನದಂದು ಮಳೆಯಾಗುವುದು. ಪ್ರತಿವರ್ಷದಲ್ಲಿ ಮಳೆಯಾಗುವ ದಿನಗಳು ಆಸ್ಟ್ರೇಲಿಯಾದ ಮುಖ್ಯಭೂಮಿಯಲ್ಲಿ ಯಾವುದೇ ಭಾಗದಕ್ಕಿಂತಲೂ ಹೆಚ್ಚು. ಇನ್ನಷ್ಟು ಪೂರ್ವದಲ್ಲಿರುವ ಲೇಕ್‌ ಕಂಟ್ರಿಯಲ್ಲಿ, ವಾರ್ಷಿಕ ಮಳೆಯು 900 millimetres (35 in) ಕ್ಕೆ ಕಡಿಮೆಯಾಗುತ್ತದೆ. ಮಧ್ಯದ ಪ್ರಸ್ಥಭೂಮಿಯಲ್ಲಿ ರಾಸ್‌ನಲ್ಲಿ ವಾರ್ಷಿಕ ಮಳೆಯು 450 millimetres (18 in)ರಷ್ಟು ಕಡಿಮೆಯಾಗಿ, ಸಾಮಾನ್ಯವಾಗಿ 600 millimetres (24 in)ಗಿಂತಲೂ ಕಡಿಮೆಯಿರುತ್ತದೆ. ಟ್ಯಾಸ್ಮೆನಿಯಾದ ಪೂರ್ವ ಭಾಗದಲ್ಲಿ ಪಶ್ಚಿಮ ಭಾಗಕ್ಕಿಂತಲೂ ಇನ್ನಷ್ಟು ಸಮವಾಗಿ ಚದುರಿದಂತೆ ಮಳೆಯಾಗುತ್ತದೆ. ಹಲವು ತಿಂಗಳುಗಳಲ್ಲಿ ಒಂದೇ ತೆರನಾದ ಸರಾಸರಿ ಮಳೆಯಾಗುತ್ತದೆ.

ಹೆಚ್ಚು ಜನನಿಬಿಡ ಉತ್ತರ ಭಾಗವು ಪಶ್ಚಿಮ ಭಾಗಕ್ಕಿಂತಲೂ ಶುಷ್ಕವಾಗಿದೆ. ವಾರ್ಷಿಕ ಮಳೆಯ ಲಾನ್ಸೆಸ್ಟನ್‌ನಲ್ಲಿ 666 millimetres (26.2 in) ಇಂದ ಹಿಡಿದು, ವಾಯವ್ಯದಲ್ಲಿರುವ ಬರ್ನೀಯಲ್ಲಿ 955 millimetres (37.6 in) ಹಾಗೂ ಇನ್ನಷ್ಟು ಪೂರ್ವದಲ್ಲಿರುವ ಸ್ಕಾಟ್ಸ್‌ಡೇಲ್‌ನಲ್ಲಿನ 993 millimetres (39.1 in) ವರೆಗಿನ ಶ್ರೇಣಿಯಲ್ಲಿದೆ.[೧೮][೧೯] ಚಳಿಗಾಲದಲ್ಲೇ ಬಹಳಷ್ಟು ಮಳೆಯಾಗುತ್ತದೆ. ಲಾನ್ಸೆಸ್ಟನ್‌ನಲ್ಲಿ ಬೇಸಿಗೆಯಲ್ಲಿ ತಿಂಗಳ ಮಳೆಯ ಸರಾಸರಿಯು 31 millimetres (1.2 in) ಅಷ್ಟು ಕಡಿಮೆಯಾಗಬಲ್ಲದು. ಮಧ್ಯದ ಪ್ರಸ್ಥಭೂಮಿಗಿಂತಲೂ ಪೂರ್ವ ಕಡಲತೀರವು ಹೆಚ್ಚು ಆರ್ದ್ರತೆ ಹೊಂದಿದೆ. ವಾರ್ಷಿಕ ಸರಾಸರಿ ಮಳೆಯು ಸೇಂಟ್‌ ಹೆಲೆನ್ಸ್‌ನಲ್ಲಿನ 775 millimetres (30.5 in) ಇಂದ ಹಿಡಿದು, ಸ್ವಾನ್ಸೀಯಲ್ಲಿ 640 millimetres (25 in)ರ ವರೆಗಿನ ಮಟ್ಟದಲ್ಲಿದೆ.[೨೦][೨೧]

ಇಲ್ಲಿ ಇಡೀ ವರ್ಷ ಮಳೆಯು ಸಮನಾಗಿ ಹಂಚಿಕೆಯಾಗಿದೆ, ಆದರೆ ಕೆಲವೊಮ್ಮೆ ಏರುಪೇರಾಗುವ ಸಾಧ್ಯತೆಯುಂಟು, ಏಕೆಂದರೆ ಬೆಚ್ಚನೆಯ ಟ್ಯಾಸ್ಮನ್‌ ಸಮುದ್ರದಿಂದ ಆಗಾಗ ಭಾರಿ ಮಳೆ ಸಂಭವಿಸುವುದು. ಸತತ ಮೂರು ದಿನಗಳ 125 millimetres (4.9 in) ಮಳೆಯು ಉತ್ತರ ಕಡಲತೀರದಲ್ಲಿ ಐವತ್ತು ವರ್ಷಗಳಲ್ಲೊಮ್ಮೆ ಮಾತ್ರ ಸಂಭವಿಸುವುದು. ಸ್ವಾನ್ಸೀ ಮತ್ತು ಬಿಚೆನೊ ನಗರಗಳಲ್ಲಿ ಪ್ರತಿ ನಾಲ್ಕು ಅಥವಾ ಐದು ವರ್ಷಗಳಲ್ಲಿ ಸರಾಸರಿ ಒಮ್ಮೆ ಮಳೆಯಾಗುವುದು. 1954ರ ಜೂನ್ 7-8ರಂದು, ಆ ಪ್ರದೇಶದಲ್ಲಿ 230 millimetres (9.1 in)ರಷ್ಟು ಭಾರಿಯಾಗಿ ಹಲವು ಬಾರಿ ಮಳೆಯಾಗಿತ್ತು. ಬಹಳಷ್ಟು ಬಿಸಿಲಿರುವ ಹವಾಗುಣವುಳ್ಳ ಪೂರ್ವ ಕಡಲತೀರವನ್ನು ಕೆಲವೊಮ್ಮೆ ಸೂರ್ಯತೀರ ಎನ್ನಲಾಗಿದೆ.[೨೨]

2007ರಲ್ಲಿ ರಾಜ್ಯ ಸರ್ಕಾರವು, ಫ್ಲಿಂಡರ್ಸ್‌ ಐಲೆಂಡ್‌ ಒಂದಿಗೆ ಟ್ಯಾಸ್ಮೆನಿಯಾ ಒಳನಾಡಿನ ಹಲವು ವಿಭಾಗಗಳನ್ನು ಬರಪೀಡಿತ ಎಂದು ಘೋಷಿಸಿತು.[೨೩]

2009ರಲ್ಲಿ ಸಂಭವಿಸಿದ ಅಗ್ನೇಯ ಆಸ್ಟ್ರೇಲಿಯಾ ಶಾಖದ ಅಲೆಯಲ್ಲಿ, ಟ್ಯಾಸ್ಮೆನಿಯಾದ ಸ್ಕೆಮಾಂಡರ್‌ನಲ್ಲಿ 2009ರ ಜನವರಿ 30ರಂದು ಅತ್ಯುನ್ನತ ಗರಿಷ್ಠ ಉಷ್ಣಾಂಶ 42.2 °C (108.0 °F) ದಾಖಲಾಯಿತು. 1983ರ ಜೂನ್‌ 30ರಂದು, ಬಟ್ಲರ್ಸ್‌ ಗಾರ್ಜ್‌, ಷ್ಯಾನೊನ್‌ ಮತ್ತು ಟರಾಲೀ ನಗರಗಳಲ್ಲಿ ಟ್ಯಾಸ್ಮೆನಿಯಾದ ಅತಿ ಕನಿಷ್ಠ ಉಷ್ಣಾಂಶ −13.0 °C (8.6 °F) ದಾಖಲಾಯಿತು.[೨೪]

ನಗರ ಕಲ್ಪಿತ ಕನಿಷ್ಠ ಉಷ್ಣಾಂಶ oC ಕಲ್ಪಿತ ಗರಿಷ್ಠ ಉಷ್ಣಾಂಶ oC ತಿಳಿ ವಾತಾವರಣದ ದಿನಗಳು ಮಳೆ (ಮಿಮೀ)
ಹೋಬಾರ್ಟ್‌ 8.3 16.9 41 616[೨೫]
ಲಾನ್ಸೆಸ್ಟನ್‌ 7.2 18.4 50 666[೨೬]
ಡೆವೊನ್ಪೋರ್ಟ್‌ 8.1 16.8 61 778[೨೭]
ಸ್ಟ್ರಹನ್‌ 7.9 16.5 41 1,458[೨೮]

ವಿವಿಧ ಮಣ್ಣು

[ಬದಲಾಯಿಸಿ]
ಫ್ರೇಯ್ಸಿನೆಟ್‌ ಪರ್ಯಾಯ ದ್ವೀಪದಲ್ಲಿ ಗ್ರೇಟ್‌ ಆಯ್ಸ್ಟರ್ ಬೇ
ಟ್ಯಾಸ್ಮೆನಿಯಾದ ಹೆಲ್ಯರ್‌ ಕಮರಿ

ಕ್ವಾಟರ್ನರಿ ಹಿಮೀಕರಣವಿದ್ದರೂ ಸಹ, ಟ್ಯಾಸ್ಮೆನಿಯಾದ ಮಣ್ಣು ಆಸ್ಟ್ರೇಲಿಯಾ ಮುಖ್ಯಭೂಮಿಯ ಮಣ್ಣಿನಷ್ಟು ಫಲವತ್ತಾಗಿಲ್ಲ, ಏಕೆಂದರೆ, ಮಣ್ಣಿನ ಬಹಳಷ್ಟು ಪಾಲು ಹರಿದುಹೋಗುತ್ತದೆ. ಅತಿ ಶುಷ್ಕ ಹವಾಗುಣ ಹೊಂದಿರುವ ಪ್ರದೇಶಗಳಲ್ಲಿ ಅತಿ ಕಡಿಮೆ ಹರಿದುಹೋಗುತ್ತಿದ್ದರಿಂದ ಹಿಮೀಕರಣ ಅಥವಾ ಅದರಿಂದ ಉಂಟಾಗುವ ಮೆಕ್ಕಲಿನಿಂದ ಪ್ರಭಾವಿತವಾಗಿರಲಿಲ್ಲ. ಬಾಸ್‌ ಸ್ಟ್ರೇಟ್‌ ದ್ವೀಪಗಳು, ಪೂರ್ವ ಕಡಲ ತೀರ ಮತ್ತು ಪಶ್ಚಿಮ ಟ್ಯಾಸ್ಮೆನಿಯಾ ಪ್ರದೇಶಗಳಲ್ಲಿ ಮಣ್ಣು ಬಹಳಷ್ಟು ಫಲವತ್ತಾಗಿಲ್ಲದ ಸ್ಪೊಡೊಸಾಲ್ಸ್‌ ಅಥವಾ ಸಾಮೆಂಟ್ಸ್‌ (ಕಬ್ಬಿಣಾಅಂಶ ರಹಿತ-ಸಹಿತ ಮಣ್ಣು ಮಾದರಿ)ಆಗಿರುತ್ತವೆ. ಇನ್ನು ಪಶ್ಚಿಮ ಟ್ಯಾಸ್ಮೆನಿಯಾದಲ್ಲಿ ಇನ್ನಷ್ಟು ಕಡಿಮೆ ಫಲವತ್ತಾದ 'ಲ್ಯಾಟೆರಿಟಿಕ್‌ ಪೊಡ್ಝೊಲಿಕ್‌ ಮಣ್ಣು' ಉಂಟು. ಈ ಪ್ರದೇಶಗಳಲ್ಲಿ ಬಹಳಷ್ಟು ಕೃಷಿಗಾಗಿ ಬಳಸಲಾಗದು. ಆದರೆ ಬಹಳಷ್ಟು ಉಪಯುಕ್ತವಾದ ವನ್ಯಪ್ರದೇಶಗಳಿವೆ. ಇದು ರಾಜ್ಯದ ಪ್ರಮುಖ ಉದ್ದಿಮೆಗಳಲ್ಲೊಂದು.

ಉತ್ತರ ಕಡಲತೀರದಲ್ಲಿ, ಫಲ ತೋಟಗಾರಿಕೆಗಾಗಿ ಫಲವತ್ತಾದ ಮೆಕ್ಕಲು ಮಣ್ಣಿನ ಜೊತೆಗೆ, ಕಡು ಕೆಂಪು ಬಣ್ಣದ, ಸುಲಭವಾಗಿ ಬಳಸಬಹುದಾದ 'ಕ್ರಾಸ್ನೊಝೆಮ್ಸ್'‌ ಎಂಬ ಕೆಮ್ಮಣ್ಣು ಉಂಟು. ಈ ಮಣ್ಣು ಬಹಳಷ್ಟು ಆಮ್ಲಾಂಶ ಹೊಂದಿದ್ದು, ಫಾಸ್ಫೇಟ್‌ನ್ನು ಪ್ರಭಾವಶಾಲಿಯಾಗಿ ಹಿಡಿದಿಟ್ಟಿರುತ್ತದೆ. ಆದರೆ ಅದು ಬಹಳಷ್ಟು ಉಪಯುಕ್ತ ಭೌತಿಕ ಗುಣಗಳನ್ನು ಹೊಂದಿರುವ ಕಾರಣ, ಹೈನುಗಾರಿಕೆ, ಗೋಮಾಂಸಕ್ಕಾಗಿ ಪಶು ಸಾಕಣೆ ಹಾಗೂ ಮೇವಿಗಾಗಿ ಈ ಪ್ರದೇಶವನ್ನು ಬಳಸಲಾಗುತ್ತದೆ.

ಮಧ್ಯದ ಪ್ರಸ್ಥಭೂಮಿ ಹಾಗೂ ಡರ್ವೆಂಟ್‌ನ ತಗ್ಗು ಪ್ರದೇಶದ ಮಣ್ಣು ರಾಜ್ಯದ ಇತರೆ ಭಾಗಕ್ಕಿಂತಲೂ ಭಿನ್ನವಾಗಿವೆ. ಶುಷ್ಕ ಹವಾಗುಣ ಮತ್ತು ಕ್ಷಾರೀಯ (ಡೊಲೆರೈಟ್‌) ಮೂಲ ವಸ್ತು ಹೊಂದಿರುವ ಕಾರಣ, ಈ ಮಣ್ಣು ಹರಿದು ಹೋಗುವುದಿಲ್ಲ. ಇವು ಇನ್ನಷ್ಟು ಆಳವಾದ ಕೆಳಭಾಗದಮಣ್ಣಿನಲ್ಲಿ ಸುಣ್ಣದ ಅಂಶವುಂಟು. ಅದು ಪ್ರೈರೀ (ಹುಲ್ಲುಗಾವಲು) ಮಣ್ಣು, ಅಥವಾ ಕಂದು ಭೂಮಿ ಎಂದು ವಿಂಗಡಿಸಲಾಗಿದೆ. ಇವು ರಷ್ಯಾ ಮತ್ತು ಉತ್ತರ ಅಮೆರಿಕಾದ ಚರ್ನೊಝೆಮ್‌ ಮಣ್ಣನ್ನು ಹೋಲುತ್ತವೆ. ಆದರೂ ಅವು ಕೆಳಮಟ್ಟದಲ್ಲಿ ರಂಜಕ ಪ್ರಮಾಣ ಕಡಿಮೆಯಿದ್ದು, ಮೇಲ್ಮಟ್ಟದಲ್ಲಿ ಆಮ್ಲ ಪ್ರಮಾಣ ಹೆಚ್ಚಾಗಿರುತ್ತದೆ. ಆದರೆ ಇವುಗಳ ಹೆಚ್ಚಿನ ಪೌಷ್ಟಿಕಾಂಶದಿಂದಾಗಿ, ಉಪಯುಕ್ತಕರ ಹಸಿಹುಲ್ಲಿಗೆ ಸೂಕ್ತವಾಗಿದ್ದು, ಈ ವಲಯಗಳಲ್ಲಿ ಕುರಿಗಳು ಹೇರಳವಾಗಿ ಮೇಯಲು ಅವಕಾಶವುಂಟು. ಅತಿ ಶುಷ್ಕ ಪ್ರದೇಶಗಳಲ್ಲಿ ಧವಸಧಾನ್ಯಗಳನ್ನು ಸಹ ಬೆಳೆಸಲಾಗುವುದು. ಅಗ್ನೇಯ ಟ್ಯಾಸ್ಮೆನಿಯಾದ ಮೆಕ್ಕಲು ಮಣ್ಣು ಪ್ರದೇಶಗಳಲ್ಲಿ ಫಲವತ್ತಾದ ಮೆಕ್ಕಲು ಮಣ್ಣಿನಲ್ಲಿ ಸೇಬು ಹಣ್ಣು ಬೆಳೆಯಲು ಅನುಕೂಲಕರವಾಗಿದೆ.

ಪರಿಸರ ವಿಜ್ಞಾನ

[ಬದಲಾಯಿಸಿ]

ಸಸ್ಯಸಂಪತ್ತು

[ಬದಲಾಯಿಸಿ]
ಮೌಂಟ್‌ ಆನ್‌ ಹತ್ತಿರ ಹೈ ಷೆಲ್ಫ್‌ ಕ್ಯಾಂಪ್‌ನಲ್ಲಿರುವ ಆಲ್ಪೀನ್‌ ಹೀತ್‌ಲೆಂಡ್‌. ಟ್ಯಾಸ್ಮೆನಿಯನ್‌ ಆಲ್ಪೀನ್‌ ಸಸ್ಯವರ್ಗದಲ್ಲಿ 60%ರಷ್ಟು ಈ ರಾಜ್ಯಜ್ಜೆ ವಿಶಿಷ್ಟವಾಗಿದೆ.[೨೯]

ಟ್ಯಾಸ್ಮೆನಿಯಾದ ಸಸ್ಯವರ್ಗದಲ್ಲಿ ಬಹಳಷ್ಟು ವೈವಿಧ್ಯವಿದೆ. ಶುಷ್ಕ ಮಧ್ಯಪ್ರಸ್ಥಭೂಮಿಯಲ್ಲಿರುವ ಬಹಳಷ್ಟು ಮೇವು ಬೆಳೆಯುವ ಹುಲ್ಲುಗಾವಲು ಪ್ರದೇಶದಿಂದ ಹಿಡಿದು, ರಾಜ್ಯದ ಇತರೆ ಭಾಗಗಳಲ್ಲಿ ಎತ್ತರಕ್ಕೆ ಬೆಳೆಯುವ, ನಿತ್ಯಹರಿದ್ವರ್ಣ ನೀಲಗಿರಿ (ಯುಕಲಿಪ್ಟಸ್‌) ಕಾಡು, ಉನ್ನತ ಪರ್ವತ ಪ್ರದೇಶದ ಕುರುಚಲು ಭೂಮಿ ಹಾಗೂ ತಂಪಾದ ಸಮಶೀತೋಷ್ಣ ಮಳೆಕಾಡುಗಳು ಮತ್ತು ಕೆಲ ಪ್ರಮಾಣದ ಬಂಜರು ಪ್ರದೇಶಗಳಿವೆ. ಟ್ಯಾಸ್ಮೆನಿಯಾದಲ್ಲಿ ಬಹಳ ಅಪೂರ್ವವಾದ ಸಸ್ಯವರ್ಗಗಳಿವೆ. ಕೆಲವು ಸಸ್ಯಗಳು ಪೂರ್ವವರ್ತಿಗಳ ಮೂಲಕ ದಕ್ಷಿಣ ಅಮೆರಿಕಾ ಹಾಗೂ ನ್ಯೂಜೀಲೆಂಡ್‌ ದೇಶದ ಸಸ್ಯಜಾತಿಗಳಿಗೆ ಸಂಬಂಧಿತವಾಗಿವೆ. ಸುಮಾರು 50 ದಶಲಕ್ಷ ವರ್ಷಗಳ ಹಿಂದೆ, ಈ ಪೂರ್ವವರ್ತಿ ಸಸ್ಯಗಳು ಗೊಂಡ್ವಾನಾ ಎಂಬ ಬೃಹತ್ ಖಂಡದಲ್ಲಿ ಬೆಳೆಯುತ್ತಿದ್ದವು.

ಟ್ಯಾಸ್ಮೆನಿಯಾದಲ್ಲಿ ವಿಶ್ವದಲ್ಲೇ ಅತ್ಯೆತ್ತರದ ಮತ್ತು ಅತಿ ಹಳೆಯ ಮರಗಳಿವೆ. ಕೆಲವು ಹುವೊನ್‌ ಪೀತದಾರು ಮರಗಳು ಸುಮಾರು 2,000 ವರ್ಷ ಹಳೆಯದಾಗಿವೆ ಎಂಬುದು ಅದ್ಭುತ ಸಂಗತಿ. ಮೌಂಟ್‌ ರೀಡ್‌ನಲ್ಲಿರುವ ಗಂಡು ಹುವೊನ್‌ ಪೀತದಾರು ಮರಗಳು ಸಸ್ಯಕಾಶಿಯ ಮರುಹುಟ್ಟು ವಿನ ಮೂಲಕ ಬೆಳೆದಿದ್ದು, ಸುಮಾರು 10,000 ವರ್ಷ ಹಳೆಯವು ಎಂದು ಅಂದಾಜು ಮಾಡಲಾಗಿದೆ.[೩೦] ಸ್ಟಿಕ್ಸ್‌ ಕಣಿವೆಯಲ್ಲಿ ಬೆಳೆಯುವ ಯುಕಲಿಪ್ಟಸ್‌ ರೆಗ್ನನ್ಸ್‌ ಮರಗಳು 90 metres (300 ft)ಕ್ಕಿಂತಲೂ ಎತ್ತರವಿದ್ದು, ಆಸ್ಟ್ರೇಲಿಯಾದಲ್ಲಿನ ಅತ್ಯೆತ್ತರದ ಮರಗಳು ಎಂದು ಪರಿಗಣಿಸಲಾಗಿವೆ. ಈ ಮರಗಳು ಇನ್ನೂ ಬೆಳೆಯುತ್ತಿರುವ ಕಾರಣ, ದೇಶದಲ್ಲಿ ಇದೀಗ ಅತ್ಯೆತ್ತರ ಮರದ ದಾಖಲೆಯನ್ನು ಮೀರಿ ಬೆಳೆಯಬಹುದೆಂಬ ಆಶಯವಿದೆ. ಆಸ್ಟ್ರೇಲಿಯಾ ದೇಶದ ವಿಕ್ಟೊರಿಯಾ ರಾಜ್ಯದ ಥೊರ್ಪ್‌ಡೇಲ್‌ನಲ್ಲಿ ಬೆಳೆಯುತ್ತಿದ್ದ ಮೌಂಟನ್‌ ಆಷ್‌ ಮರವು 112 metres (367 ft)ಕ್ಕಿಂತಲೂ ಎತ್ತರವಿತ್ತು. ಈ ಮರವನ್ನು 1884ರಲ್ಲಿ ಕಡಿದು ಬೀಳಿಸಲಾಯಿತು.[೩೧] ಇದೇ ವಲಯಕ್ಕೆ ಸೀಮಿತವಾಗಿರುವ ಹಾಗೂ ಸೀಮಿತ ವಲಯದಲ್ಲಿ ಹಂಚಿಹೋದ ಸಸ್ಯ ಪ್ರಭೇದಗಳು ಟ್ಯಾಸ್ಮೆನಿಯಾದಲ್ಲಿವೆ. ಆರ್ಚರಿಯಾ ಪ್ರಭೇದವು ಇದಕ್ಕೆ ಉದಾಹರಣೆ.

ಪ್ರಾಣಿ ಸಂಕುಲ

[ಬದಲಾಯಿಸಿ]

ಥೈಲಸೀನ್‌/ಟ್ಯಾಸ್ಮೆನಿಯನ್‌ ಹುಲಿ (ಟ್ಯಾಸ್ಮೆನಿಯನ್‌ ಟೈಗರ್‌)

[ಬದಲಾಯಿಸಿ]
ಪ್ರಾಣಿಸಂಗ್ರಹಾಲಯದಲ್ಲಿ ಇಂದು ಅಳಿಸಿಹೋಗಿರುವ, ಬಂಧಿತ ಟ್ಯಾಸ್ಮೆನಿಯನ್‌ ಟೈಗರ್‌ಗಳು.

ಟ್ಯಾಸ್ಮೆನಿಯಾದಲ್ಲಿ ಥೈಲಸೀನ್‌ ಎಂಬ ಹೊಟ್ಟೆಚೀಲದ ಪ್ರಾಣಿಯಿತ್ತು. ಇದು ಕಾಡು ನಾಯಿಯನ್ನು ಹೋಲುತ್ತಿತ್ತು. ಅದರ ಬೆನ್ನಿನ ಮೇಲೆ ವಿಶೇಷ ಲಕ್ಷಣದ ಪಟ್ಟೆಗಳಿದ್ದ ಕಾರಣ, ಇದನ್ನು ಟ್ಯಾಸ್ಮೆನಿಯನ್‌ ಹುಲಿ (ಟ್ಯಾಸ್ಮೆನಿಯನ್‌ ಟೈಗರ್‌) ಎಂದು ಆಡುಮಾತಿನಲ್ಲಿ ಉಲ್ಲೇಖಿಸಲಾಗುತ್ತಿತ್ತು. ಪ್ರಾಗೈತಿಹಾಸಿಕ ಕಾಲದಲ್ಲಿ ಡಿಂಗೊ ಎಂಬ ಪ್ರಾಣಿಯೊಂದಿಗೆ ಪೈಪೋಟಿಯಾಗಿ, ಅಂತಿಮವಾಗಿ ಈ ಪ್ರಾಣಿ ಬಹಳಷ್ಟು ಮುಂಚೆಯೇ ಆಸ್ಟ್ರೇಲಿಯಾದ ಮುಖ್ಯ ಭೂಮಿಯಿಂದ ನಶಿಸಿಹೋಯಿತು. ರೈತರಿಂದ ನಿರಂತರ ಬೇಟೆಯಿಂದಾಗಿ, ಸರ್ಕಾರದ ಪ್ರೋತ್ಸಾಹಧನ ಪಡೆದ ಬೇಟೆಗಾರರು, ಹಾಗೂ ಅಂತಿಮವಾಗಿ, ವಿದೇಶದ ವಸ್ತುಪ್ರದರ್ಶನಾಲಯಕ್ಕಾಗಿ ಸಂಗ್ರಹಕಾರರ ಕಾಟಗಳಿಂದಾಗಿ ಟ್ಯಾಸ್ಮೆನಿಯಾ ಹುಲಿಯು ಬಹುಶಃ ಈ ದ್ವೀಪದಿಂದಲೂ ಅಳಿದುಹೋದಂತಿದೆ.

ಆಧುನಿಕ ಕಾಲದಲ್ಲಿ ಥೈಲಸೀನ್‌ ಅತಿದೊಡ್ಡ ಮಾಂಸಾಹಾರಿ ಹೊಟ್ಟೆಚೀಲದ ಪ್ರಾಣಿಯಾಗಿತ್ತು. ಹೊಟ್ಟೆಚೀಲ ಪ್ರಾಣಿಗಳ ಜಾತಿಯಲ್ಲಿ ಗಂಡು ಮತ್ತು ಹೆಣ್ಣುಗಳೆರಡೂ ಹೊಟ್ಟೆಚೀಲ ಹೊಂದಿರುವುದು ಥೈಲಸೀನ್‌ ಏಕೈಕ ಪ್ರಾಣಿ; ಇದಲ್ಲದೆ ನೀರಿನ ಅಪಾಸಮ್‌ ಸಹ ಹೊಟ್ಟೆಯ ಚೀಲ ಹೊಂದಿರುತ್ತದೆ. ಗಂಡು ಥೈಲಸೀನ್‌ ಹೊಟ್ಟೆಚೀಲ ಹೊಂದಿದ್ದು, ಈ ಪ್ರಾಣಿಯು ಕುರುಚಲು, ಒರಟು ಪೊದೆಗಳ ಮಧ್ಯೆ ನುಗ್ಗಿ ಓಡುವಾಗ ಚೀಲವು ರಕ್ಷಾಕವಚದಂತಾಗಿ, ಅದರ ಬಾಹ್ಯ ಜನನಾಂಗಗಳನ್ನು ರಕ್ಷಿಸುತ್ತದೆ. ಸೆರೆಯಲ್ಲಿದ್ದ ಕೊನೆಯ ಪ್ರಾಣಿಯು, ಪ್ರಾಣಿಸಂಗ್ರಹಾಲಯದಲ್ಲಿ 1936ರಲ್ಲಿ ಸತ್ತುಹೋಯಿತು. ನಂತರ, ಹಲವು ಬಾರಿ ಈ ಪ್ರಾಣಿ ಅಲ್ಲಲ್ಲಿ ಕಂಡದ್ದನ್ನು ಹಲವು ಭಾರಿ ದಾಖಲಿಸಲಾಗಿದೆ, ಆದರೆ ಯಾವುದನ್ನೂ ಖಚಿತಪಡಿಸಲಾಗಿಲ್ಲ. ಪೂರ್ತಿ ವಿಕಾಸ ಹೊಂದಿದ ಥೈಲಸೀನ್‌ ಸುಮಾರು 100 to 130 cm (39 to 51 in) ಉದ್ದವಿದ್ದು, 50 to 65 cm (20 to 26 in) ಉದ್ದದ ಬಾಲವಿತ್ತು.[೩೨] ಅತಿ ದೊಡ್ಡ ಟ್ಯಾಸ್ಮೆನಿಯನ್‌ ಹುಲಿಯು ಮೂಗಿನ ತುದಿಯಿಂದ ಬಾಲದ ವರೆಗೂ 290 cm (9.5 ft) ಉದ್ದವಿತ್ತು. ಬೆಳೆದ ಪ್ರಾಣಿಗಳು ಭುಜ ಮಟ್ಟದಲ್ಲಿ 60 cm (24 in) ಎತ್ತರವಿದ್ದು 20 to 30 kg (40 to 70 lb) ತೂಕವಿದ್ದವು.[೩೨] ಥೈಲಸೀನ್‌ನಲ್ಲಿ ಸ್ವಲ್ಪ ಮಟ್ಟಗಿನ ಲೈಂಗಿಕ ದ್ವಿರೂಪತೆಯಿತ್ತು. ಗಂಡು ಥೈಲಸೀನ್‌ನ ಸರಾಸರಿ ಗಾತ್ರವು‌ ಹೆಣ್ಣಿನದಕ್ಕಿಂತಲೂ ದೊಡ್ಡದಾಗಿತ್ತು.[೩೩]

ಟ್ಯಾಸ್ಮೆನಿಯನ್‌ ಡೆವಿಲ್‌

[ಬದಲಾಯಿಸಿ]
ಟ್ಯಾಸ್ಮೆನಿಯನ್‌ ಡೆವಿಲ್‌

ಟ್ಯಾಸ್ಮೆನಿಯನ್‌ ಡೆವಿಲ್‌ ವಿಶಿಷ್ಟವಾಗಿ ಟ್ಯಾಸ್ಮೆನಿಯಾ ದ್ವೀಪದಲ್ಲಿ ಕಾಣಸಿಗುವ, ಹೊಟ್ಟೆಚೀಲವುಳ್ಳ ಮಾಂಸಾಹಾರಿ ಪ್ರಾಣಿ. ಇದು ಸಣ್ಣ ಗಾತ್ರದ ನಾಯಿಯಷ್ಟಿದ್ದರೂ ದೃಢ ಹಾಗೂ ಸ್ನಾಯುಗಳುಳ್ಳ ಮೈಕಟ್ಟು ಹೊಂದಿದೆ. ಇದರ ಕರಿಯ ತುಪ್ಪುಳಿನಲ್ಲಿ ಬಿಳಿಯ ಮಚ್ಚೆಗಳಿವೆ. ಇದು ಕೀರಲು ಧ್ವನಿಯಲ್ಲಿ ಗುರುಗುಟ್ಟುವ, ಕೋಪಿಷ್ಠ ಸ್ವಭಾವದ ಹಾಗೂ ಕೊಳೆತ ಮಾಂಸ ತಿನ್ನುವ ಪ್ರಾಣಿ. ಯುರೋಪಿಯನ್ನರು ಇಲ್ಲಿ ವಸಾಹತು ಸ್ಥಾಪಿಸಿಕೊಂಡ ಕಾಲವನ್ನೂ ಈ ಟ್ಯಾಸ್ಮೆನಿಯನ್‌ ಡೆವಿಲ್‌ ಇತ್ತೀಚಿನ ವರೆಗೂ ಇಡೀ ದ್ವೀಪದಾದ್ಯಂತ ಸರ್ವೇಸಾಮಾನ್ಯವೆನಿಸಿತ್ತು. ಇತರೆ ವನ್ಯಜೀವಿಗಳಂತೆಯೇ, ವೇಗವಾಗಿ ಚಲಿಸುವ ವಾಹನಗಳಿಂದ ಟ್ಯಾಸ್ಮೆನಿಯನ್‌ ಡೆವಿಲ್‌ಗಳಿಗೆ ಅಪಾಯ ಸಂಭವಿಸಿದ್ದುಂಟು. ರಸ್ತೆ ಅಪಘಾತದಲ್ಲಿ ಸತ್ತ ವಾಲಬಿಗಳಂತಹ ಪ್ರಾಣಿಗಳನ್ನು ತಿನ್ನುತ್ತಿದ್ದಾಗ ವಾಹನ ಢಿಕ್ಕಿ ಹೊಡೆದು ಸತ್ತುಹೋಗುವುದುಂಟು. ಟ್ಯಾಸ್ಮೆನಿಯನ್‌ ಡೆವಿಲ್‌ಗಳು ಮೂಳೆಗಳೂ ಸೇರಿಸಿ ಎಲ್ಲವನ್ನೂ ತಿನ್ನುತ್ತವೆ.

2005ರಲ್ಲಿ. ಟ್ಯಾಸ್ಮೆನಿಯಾದ ಕೆಲವು ಭಾಗಗಳಲ್ಲಿ ಟ್ಯಾಸ್ಮೆನಿಯಾ ಡೆವಿಲ್‌ ಸಂಖ್ಯೆಯು ಸುಮಾರು 80%ರಷ್ಟು ಕಡಿಮೆಯಾಗಿತ್ತು. ಡೆವಿಲ್‌ ಮುಖದ ದುರ್ಮಾಂಸ ರೋಗ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಈ ದ್ವೀಪದುದ್ದಕ್ಕೂ ಹಂತ-ಹಂತವಾಗಿ ಹರಡುತ್ತಿದೆ. ಈ ದುರ್ಮಾಂಸ ರೋಗವು ಅವುಗಳ ಬಾಯಿಯತ್ತ ಹರಡಿದಾಗ ಬಹಳಷ್ಟು ಡೆವಿಲ್‌ ಪ್ರಾಣಿಗಳು ಆಹಾರವಿಲ್ಲದೇ ಹೋದವು. ಸತ್ತ ಪ್ರಾಣಿಗಳ ಮಾಂಸಕ್ಕಾಗಿ ಡೆವಿಲ್‌ಗಳು ಕಾದಾಡುವ ಮೂಲಕ ದುರ್ಮಾಂಸ ರೋಗವು ಹರಡುವುದುಂಟು ಎಂದು ನಂಬಲಾಗಿದೆ. ಕಾದಾಡುವ ಡೆವಿಲ್‌ಗಳು ಪರಸ್ಪರ ಮುಖಗಳನ್ನು ಕಚ್ಚುತ್ತವೆ. ಈ ದುರ್ಮಾಂಸ ರೋಗಕ್ಕೆ ಯಾವುದೇ ಮದ್ದು ಕಂಡುಹಿಡಿದಿಲ್ಲ. ಈ ರೋಗಕ್ಕೆ ಕಾರಣವೇನೆಂಬುದನ್ನು ನಿರ್ಣಯಿಸಲು ತೀವ್ರ ಸಂಶೋಧನೆ ನಡೆಯುತ್ತಿದೆ. ರೋಗ-ಮುಕ್ತ, ತಳೀಯ ವೈವಿಧ್ಯದ ಟ್ಯಾಸ್ಮೆನಿಯನ್‌ ಡೆವಿಲ್‌ ಆವರಣವನ್ನು ಟ್ಯಾಸ್ಮೆನಿಯಾದ ಆಚೆ ಸ್ಥಾಪಿಸಿ, ಟ್ಯಾಸ್ಮೆನಿಯನ್‌ ಸರ್ಕಾರವು ಈ ತಳಿಯ ಪ್ರಾಣಿಗಳನ್ನು ಬೆಳೆಸುವ ಯೋಜನೆ ಹಮ್ಮಿಕೊಂಡಿದೆ. ಇದು ಇದುವರೆಗೂ ಯಶಸ್ವಿಯಾಗಿದೆ.

ಪಕ್ಷಿಗಳು

[ಬದಲಾಯಿಸಿ]
ಟ್ಯಾಸ್ಮೆನಿಯನ್‌ ಸ್ಥಳೀಯ ಕೋಳಿ

ಆಸ್ಟ್ರೇಲಿಯಾದ ಮುಖ್ಯ ಭೂಮಿ ಮತ್ತು ಸುತ್ತಮುತ್ತಲ ಸಾಗರಗಳಲ್ಲಿರುವ ಹಲವು ಹಕ್ಕಿಗಳು ಟ್ಯಾಸ್ಮೆನಿಯಾದಲ್ಲೂ ಕಾಣಸಿಗುತ್ತವೆ. ಟ್ಯಾಸ್ಮೆನಿಯಾದಲ್ಲಿ 12 ಸ್ಥಳೀಯ ಹಕ್ಕಿ ಜಾತಿಗಳಿವೆ:

  • 4 ಜೇನುಭಕ್ಷಕಗಳು (ಮೆಲಿಫ್ಯಾಜಿಡೆ (Meliphagidae)) - ಹಳದಿಯ ತಡಿಕೆಹಕ್ಕಿ (ವಿಶ್ವದಲ್ಲೇ ಅತಿ ದೊಡ್ಡ ಜೇನುಭಕ್ಷಕ ಹಕ್ಕಿ) ಹಾಗೂ ಹಳದಿ ಕುತ್ತಿಗೆಯ, ಕಪ್ಪುತಲೆಯ ಹಾಗೂ ದೃಢ ಕೊಕ್ಕಿನ ಜೇನುಭಕ್ಷಕಗಳು


  • 3 ಆಸ್ಟ್ರೆಲೊ-ಪಪುವನ್‌ ವಾರ್ಬ್ಲರ್‌ಗಳು‌ (ಅಕ್ಯಾಂತಿಜಿಡೆ (Acanthizidae) ಕುಟುಂಬ) - ಟ್ಯಾಸ್ಮೆನಿಯನ್‌ ಥಾರ್ನ್‌ಬಿಲ್‌, ಸ್ಕ್ರಬ್‌ಟಿಟ್‌ ಹಾಗೂ ಟ್ಯಾಸ್ಮೆನಿಯನ್‌ ಸ್ಕ್ರಬ್‌ರೆನ್‌
  • 1 ಪರ್ಡಲೊಟ್‌ (ಪರ್ಡಲೊಟಿಡೆ (Pardalotidae) ಕುಟುಂಬ) - ಅಳಿವಿನ ಅಪಾಯದಲ್ಲಿರುವ ನಲವತ್ತು-ಚುಕ್ಕೆಗಳುಳ್ಳ ಪರ್ಡಲೊಟ್‌


  • 1 ಓಲ್ಡ್‌-ವರ್ಲ್ಡ್‌ ಫ್ಲೈಕ್ಯಾಚರ್‌ (ನೊಣ ಭಕ್ಷಕ ಹಕ್ಕಿ) (ಮಸ್ಕಿಕ್ಯಾಪಿಡೆ (Muscicapidae) ಕುಟುಂಬ) - ಮಬ್ಬು ಬಣ್ಣದ ಕೆಂಪೆದೆಯ ಹಕ್ಕಿ
  • 1 ಕೊರ್ವಿಡ್‌ (ಅರ್ಟಮಿಡೇ (Artamidae) ಕುಟುಂಬ) - ಬ್ಲ್ಯಾಕ್‌ ಕರವಾಂಗ್‌
  • 1 ಗಿಣಿ (ಸಿಟೆಸಿಡೆ (Psittacidae) ಕುಟುಂಬ) - ಗ್ರೀನ್‌ ರೊಸೆಲಾ
  • 1 ರೇಲ್‌ (ರೆಲಿಡೇ (Rallidae) ಕುಟುಂಬ) - ಟ್ಯಾಸ್ಮೆನಿಯನ್‌ ಸ್ಥಳೀಯ ಕೋಳಿ, ಆಸ್ಟ್ರೇಲಿಯಾದ ಏಕೈಕ ರೆಕ್ಕೆಯಿಲ್ಲದ ನೆಲ ಹಕ್ಕಿ (ಹಾರಲಾಗದ ಪಕ್ಷಿಗಳಾದ (ಎಮು ಮತ್ತು ದಕ್ಷಿಣ ಕ್ಯಾಸೊವರಿ ಹೊರತುಪಡಿಸಿ).


ಸ್ಥಳೀಯ ಟ್ಯಾಸ್ಮೆನಿಯನ್‌ ಎಮು 19ನೆಯ ಶತಮಾನದ ಮಧ್ಯದಲ್ಲಿ ಅಳಿದುಹೋಯಿತು. ಟ್ಯಾಸ್ಮೆನಿಯನ್‌ ಬೆಣೆ-ಬಾಲದ ಹದ್ದು ಸಹ ಅಳಿವಿನ ಅಪಾಯ ಎದುರಿಸುತ್ತಿರುವ ಉಪಜಾತಿ.

ಕಪ್ಪೆಗಳು

[ಬದಲಾಯಿಸಿ]
ಟ್ಯಾಸ್ಮೆನಿಯಾದಲ್ಲಿ ಕಂದುಬಣ್ಣದ ಮರಗಪ್ಪೆ.

ಕಪ್ಪೆಯ ಹನ್ನೊಂದು ಜಾತಿಗಳು ಟ್ಯಾಸ್ಮೆನಿಯಾದಲ್ಲಿವೆ. ಇವುಗಳಲ್ಲಿ ಮೂರು ಕೇವಲ ಟ್ಯಾಸ್ಮೆನಿಯಾದಲ್ಲಿ ಮಾತ್ರ ಕಾಣಸಿಗುತ್ತವೆ - ಟ್ಯಾಸ್ಮೆನಿಯನ್‌ ಮರಗಪ್ಪೆ (ಲಿಟೊರಿಯಾ ಬರೊಸೆ (Litoria burrowsae) , ಟ್ಯಾಸ್ಮೆನಿಯನ್‌ ಸಣ್ಣ ಕಪ್ಪೆ (ಕ್ರಿನಿಯಾ ಟ್ಯಾಸ್ಮೆನಿಯೆನ್ಸಿಸ್‌ (Crinia tasmaniensis) ) ಹಾಗೂ ಇತ್ತೀಚೆಗೆ ಪತ್ತೆಯಾದ ಮಾಸ್‌ ಸಣ್ಣ ಕಪ್ಪೆ (ಬ್ರಯೊಬ್ಯಾಟ್ರೆಕಸ್‌ ನಿಂಬಸ್‌ (Bryobatrachus nimbus) ). ಟ್ಯಾಸ್ಮೆನಿಯಾದಲ್ಲಿರುವ 11 ಜಾತಿಗಳಲ್ಲಿ ಎಲ್ಲವೂ ಸಹ ಆಸ್ಟ್ರೇಲಿಯಾ ಮೂಲದ್ದಾಗಿವೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರಸವಿಸುವ, ಅಳಿವಿನ ಅಪಾಯಕ್ಕೆ ಸಿಲುಕಬಹುದಾದ, ಗುರುಗುಟ್ಟುವ ಹುಲ್ಲು ಕಪ್ಪೆ (ಲಿಟೊರಿಯಾ ರಾನಿಫಾರ್ಮಿಸ್‌ (Litoria raniformis) ) ಟ್ಯಾಸ್ಮೇನಿಯಾ ಮೂಲದ್ದಾಗಿದೆ. ಇದರ ವಾಸಶ್ರೇಣಿಯು ಕಡಿಮೆಯಾಗುತ್ತಲಿದೆ.

ಯುರೋಪಿಯನ್‌ ಕೆಂಪುನರಿ

[ಬದಲಾಯಿಸಿ]

ಯುರೋಪಿಯನ್‌ ಕೆಂಪು ನರಿಯನ್ನು ಅಳಿಸಿಹಾಕಲೆಂದು, ಟ್ಯಾಸ್ಮೆನಿಯಾ ಸರ್ಕಾರವು 2001ರ ಜೂನ್ 20ರಂದು ನರಿ ನಿರ್ಮೂಲನಾ ವಿಭಾಗ ಎಂಬ ಕಾರ್ಯಪಡೆಯನ್ನು ಸಂಘಟಿಸಿತು. ಈ ನರಿಯನ್ನು ಅಳಿಸಿಹಾಕುವ ಅಭಿಯಾನಕ್ಕಾಗಿ ಅಧಿಕಾರಿಗಳು ಸುಮಾರು 50 ದಶಲಕ್ಷ ಆಸ್ಟ್ರೇಲಿಯನ್‌ ಡಾಲರ್‌ ವೆಚ್ಚ ಮಾಡುವ ಯೋಜನೆ ಹೊತ್ತಿದ್ದರು. ಆವತ್ತಿನಿಂದ ಕೆಲ ಪ್ರಮಾಣದಲ್ಲಿ ಇದನ್ನು ಕಡಿಮೆ ಮಾಡಲಾಗಿದೆ. ಟ್ಯಾಸ್ಮೆನಿಯಾದಲ್ಲಿ ಯಾವುದೇ ನರಿಯನ್ನು ಹಿಡಿದಿಲ್ಲ, ವಿಷ ನೀಡಿಲ್ಲ ಅಥವಾ ಖಚಿತ ಪಡಿಸಲು ಛಾಯಾಚಿತ್ರಣ ಮಾಡಿಲ್ಲ. ಆದರೂ ನಾಲ್ಕು ನರಿಗಳ ಮೃತ ದೇಹಗಳ ಪತ್ತೆಯಾಗಿವೆ. ಇವುಗಳಲ್ಲಿ, ಒಂದನ್ನು ಗುಂಡಿಕ್ಕಿ ಕೊಲ್ಲಲಾಯಿತು, ಇನ್ನು ಮೂರು ರಸ್ತೆ ಅಪಘಾತದಲ್ಲಿ ಸತ್ತವು ಎನ್ನಲಾಗಿದೆ. ನರಿಗಳು ಬಹಳ ಕಡಿಮೆ ಸಂಖ್ಯೆಯಲ್ಲಿರುವುದು, ಕಡಿಮೆ ಸಾಂದ್ರತೆ ಮತ್ತು ವಿಷಪ್ರಾಶನದ ಮೂಲಕ ನರಿಗಳನ್ನು ಕೊಲ್ಲುವ ಅಭಿಯಾನದಿಂದಾಗಿ ನರಿಗಳಿವೆ ಎಂಬ ಮಾತನ್ನು ಸುಳ್ಳು ಎನ್ನುವವರು ಬಹಳಷ್ಟಿದ್ದಾರೆ. ಟ್ಯಾಸ್ಮೆನಿಯಾದಲ್ಲಿ ನರಿಗಳ ಸಂಖ್ಯೆ ಹೇರಳವಾಗಿದ್ದಲ್ಲಿ, ಸ್ಥಳೀಯ ಪ್ರಾಣಿಗಳು, ಪಶುಸಂಪತ್ತು, ನೆಲದ ಮೇಲೆ ಗೂಡು ಕಟ್ಟುವ ಹಕ್ಕಿಗಳು ಮತ್ತು ಸ್ಥಳೀಯ ದಂಶಕ ಪ್ರಾಣಿಗಳನ್ನು ಕೊಂದು ತಿನ್ನಬಹುದು. ಆಸ್ಟ್ರೇಲಿಯಾದ ಮುಖ್ಯ ಭೂಮಿಯಲ್ಲಿ ನರಿಗಳ ಸಂಖ್ಯೆಯು 30 ದಶಲಕ್ಷಕ್ಕಿಂತಲೂ ಕಡಿಮೆಯಿದೆ. ಹಿಂದೆ ಈ ನರಿಗಳನ್ನು ಯುರೋಪಿಯನ್‌ ವಸಾಹತುದಾರರು ಪರಿಚಯಿಸಿದ್ದರು.[೩೪]

ಬಿಳಿಯರು ವಸಾಹತು ಸ್ಥಾಪಿಸಿದಾಗಿಂದಲೂ ಸುಮಾರು 28 ಸ್ಥಳೀಯ ಸಸ್ತನಿ ಜಾತಿಗಳು ಅಥವಾ ಉಪಜಾತಿಗಳು ಆಸ್ಟ್ರೇಲಿಯನ್‌ ಮುಖ್ಯ ಭೂಮಿಯಿಂದ ಅಳಿದುಹೋಗಿವೆ. ಇಡೀ ವಿಶ್ವದಲ್ಲೇ ಖಂಡೀಯ ಅಳಿಯುವಿಕೆಯ ಅಪಾರ ಪ್ರಮಾಣ ಎನ್ನಲಾಗಿದೆ. ಇದಕ್ಕೆ ಕೆಂಪು ನರಿಗಳೇ ಕಾರಣ ಎನ್ನಲಾಗಿದೆ. ಆಸ್ಟ್ರೇಲಿಯಾದ ಮುಖ್ಯ ಭೂಮಿಯಲ್ಲಿ ಬಹುಶಃ ಅಳಿದುಹೋಗಿರುವ, ಆದರೆ ಟ್ಯಾಸ್ಮೆನಿಯಾದಲ್ಲಿ ಇನ್ನೂ ಸಾಮಾನ್ಯವಾಗಿರುವ ಪ್ರಾಣಿಗಳಲ್ಲಿ ಪಟ್ಟೆಯುಳ್ಳ ಪೂರ್ವ ಮೂಷಕ, ಪೂರ್ವ ಕ್ವೊಲ್‌ ಹಾಗೂ ಟ್ಯಾಸ್ಮೆನಿಯನ್‌ ಪಡಮೆಲನ್‌ (ಥೈಲೊಗೆಲ್‌ ಬಿಲರ್ಡಿಯರಿ (Thylogale billardierii)) ಸೇರಿವೆ. ಮೇಲ್ಮನೆಯ ಸದಸ್ಯ ಹಾಗೂ ವಿಂಡರ್ಮರ್‌ ವಿಧಾನ ಪರಿಷತ್‌ ಸದಸ್ಯ ಐವಾನ್‌ ಡೀನ್‌ ಎಂಎಲ್‌ಸಿ ಈ ನರಿ ಯೋಜನೆಯನ್ನು ಕಟುವಾಗಿ ಟೀಕಿಸಿದ್ದಾರೆ. ಟ್ಯಾಸ್ಮೆನಿಯನ್‌ ಡಿ.ಪಿ.ಐ.ಪಿ.ಡಬ್ಲ್ಯೂ.ಇ.ಯ ನರಿ ನಿರ್ಮೂಲನಾ ವಿಭಾಗಕ್ಕಾಗಿ ಕಂದಾಯದಾರರ ಹಣ ಬೆಂಬಲ ದೊರಕಲೆಂದು ಕೊಂದ ನರಿಗಳ ಸಾಕ್ಷ್ಯ ಬಳಸುವ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದರು. ಟ್ಯಾಸ್ಮೆನಿಯಾದೊಳಗೆ ನರಿಗಳ ಆಮದು ಮತ್ತು ಸ್ಥಳೀಯ ಕಾಡುಗಳಲ್ಲಿ ನರಿಗಳ ಪರಿಚಯದ ವಿಚಾರದಲ್ಲಿ ಟ್ಯಾಸ್ಮೆನಿಯನ್ ಪೊಲೀಸ್‌ ಮುಖ್ಯಸ್ಥ ಡೀನ್‌ ನೇತೃತ್ವದಲ್ಲಿ ಪೊಲೀಸ್‌ ತನಿಖೆ ನಡೆಸಲಾಯಿತು. ‌ ಈ ತನಿಖೆಯಲ್ಲಿ ಯಾವುದೇ ಕಾನೂನು-ಬಾಹಿರ ಆಮುದು ಪತ್ತೆಯಾಗಲಿಲ್ಲ. ಆನಂತರ, 2007ರ ಏಪ್ರಿಲ್‌ 17ರಂದು ಟ್ಯಾಸ್ಮೆನಿಯನ್‌ ಸಂಸತ್‌ನಲ್ಲಿ ಅವರು ಟ್ಯಾಸ್ಮೆನಿಯನ್‌ ನರಿಗಳ ವಿಚಾರವನ್ನು ಪ್ರಸ್ತಾಪಿಸಿದರು.[೩೫] ನಾಲ್ಕು ನರಿಗಲ ಮೃತದೇಹಗಳ ಜೊತೆಗೆ, ಸ್ವತಂತ್ರವಾಗಿ ಪರೀಕ್ಷಿಸಲಾದ 40ಕ್ಕೂ ಹೆಚ್ಚು ನರಿ-ಡಿಎನ್‌ಎ ಸ್ಕ್ಯಾಟ್‌ಗಳು ಟ್ಯಾಸ್ಮೆನಿಯಾದಾದ್ಯಂತ ಪತ್ತೆಯಾದವು. ಸರ್ಕಾರದ ಪರಿಶೀಲನೆಯ ನಂತರ, ಟ್ಯಾಸ್ಮೆನಿಯಾದಲ್ಲಿ ನರಿಗಳಿರುವುದು ಖಚಿತವಾಗಿದೆ.[೩೬] ಕಾಮನ್ವೆಲ್ತ್‌ನಿಂದ ಧನಸಹಾಯ ಪಡೆಯಲು ಇವೆಲ್ಲ ಸೃಷ್ಟಿಸಲಾದ ಸಾಕ್ಷ್ಯ ಎಂಬ ಆರೋಪಗಳ ತನಿಖೆ ನಡೆಯಬೇಕು ಎಂದು ಡಾ. ಡೇವಿಡ್‌ ಒಬೆಂಡಾರ್ಫ್‌ ಸೇರಿದಂತೆ ಪ್ರಮುಖ ಟ್ಯಾಸ್ಮೆನಿಯನ್ನರು [who?] ಆಗ್ರಹಪಡಿಸಿದ್ದಾರೆ.[೩೭]

ಸರ್ಕಾರ

[ಬದಲಾಯಿಸಿ]

ಟ್ಯಾಸ್ಮೆನಿಯಾ ಸರ್ಕಾರದ ರಚನೆಯನ್ನು ಅದರ ಸಂವಿಧಾನದಲ್ಲಿ ನಿರ್ಣಯಿಸಲಾಗಿದೆ. ಇದನ್ನು ಮೊದಲ ಬಾರಿಗೆ 1856ರಲ್ಲಿ ರಚಿಸಲಾಗಿದ್ದರೂ, ಹಲವು ಬಾರಿ ತಿದ್ದುಪಡಿ ಮಾಡಲಾಗಿದೆ. 1901ರಿಂದ, ಟ್ಯಾಸ್ಮೆನಿಯಾ ಆಸ್ಟ್ರೇಲಿಯಾ ಕಾಮನ್ವೆಲ್ತ್‌ನ ರಾಜ್ಯವಾಗಿದೆ. ಆಸ್ಟ್ರೇಲಿಯನ್‌ ಸಂವಿಧಾನವು ಕಾಮನ್ವೆಲ್ತ್‌ನೊಂದಿಗೆ ಇದರ ಸಂಬಂಧವನ್ನು ನಿರ್ವಹಿಸಿ, ನಿಯಂತ್ರಿಸಿ, ಸರ್ಕಾರದ ಯಾವ ಮಟ್ಟವು ಯಾವ ಮಟ್ಟದ ಅಧಿಕಾರವನ್ನು ಪಡೆಯಬಲ್ಲವು ಎಂಬುದನ್ನು ನಿರ್ಣಯಿಸುತ್ತದೆ.

ರಾಜಕೀಯ

[ಬದಲಾಯಿಸಿ]

ಟ್ಯಾಸ್ಮೆನಿಯಾ ಆಸ್ಟ್ರೇಲಿಯನ್ ಸಂಯುಕ್ತತೆಯಲ್ಲಿ ಒಂದು ರಾಜ್ಯ. ಆಸ್ಟ್ರೇಲಿಯಾ ಸಂವಿಧಾನವು ಆಸ್ಟ್ರೇಲಿಯಾ ಒಕ್ಕೂಟ ಸರ್ಕಾರ ಮತ್ತು ಸಂಸತ್‌ನೊಂದಿಗಿನ ಸಂಬಂಧದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇತರೆ ರಾಜ್ಯಗಳಂತೆ, ಸೆನೇಟ್‌ನಲ್ಲಿ ಟ್ಯಾಸ್ಮೆನಿಯಾದಿಂದಲೂ ಸಹ 12 ಮಂದಿ ಸೆನೇಟ್‌ ಸದಸ್ಯರು ಪ್ರತಿನಿಧಿಸುವರು. ಇದು ಇತರೆ ರಾಜ್ಯಗಳೊಂದಿಗೆ ಸಮಾನ ಪ್ರತಿನಿಧಿತ್ವ ದೊರಕಿಸುತ್ತದೆ. ಸಂವಿಧಾನದಲ್ಲಿ ಸೂಚಿಸಿದಂತೆ, ಹೌಸ್‌ ಆಫ್‌ ರೆಪ್ರೆಸೆಂಟೆಟಿವ್ಸ್‌ನಲ್ಲಿ, ಟ್ಯಾಸ್ಮೆನಿಯಾಗೆ ಕನಿಷ್ಠ ಪಕ್ಷ ಐದು ಜನ ಪ್ರತಿನಿಧಿಗಳು ಆರಿಸಿ ಬರಬಹುದು. ಪ್ರತಿ ರಾಜ್ಯಕ್ಕೂ ಹೌಸ್‌ ಆಫ್‌ ರೆಪ್ರೆಸೆಂಟೆಟಿವ್ಸ್‌ ಸ್ಥಾನಗಳನ್ನು ಜನಸಂಖ್ಯೆಯನ್ನಾಧರಿಸಿ ನಿರ್ಣಯಿಸಲಾಗುತ್ತದೆ. ಈ ಆಧಾರವನ್ನು ಮಾತ್ರ ಪರಿಗಣಿಸಿದಲ್ಲಿ ಟ್ಯಾಸ್ಮೆನಿಯಾ ಐದು ಸ್ಥಾನಗಳಿಗೆ ಅರ್ಹತೆ ಪಡಯುತ್ತಿರಲಿಲ್ಲ. ಟ್ಯಾಸ್ಮೆನಿಯಾದ ಹೌಸ್‌ ಆಫ್‌ ಅಸೆಂಬ್ಲಿ ಮತ್ತು ಸ್ಥಳೀಯ ಸರ್ಕಾರ ಚುನಾವಣೆಗಳಲ್ಲಿ ಹೇರ್‌-ಕ್ಲಾರ್ಕ್‌ ಎಂಬ ಒಂದಕ್ಕಿಂತಲೂ ಹೆಚ್ಚು ಸ್ಥಾನಗಳ ಸಮಾನಾಂತರದ ಪ್ರತಿನಿಧಿತ್ವ ವ್ಯವಸ್ಥೆ ಹೊಂದಿದೆ.

ಟ್ಯಾಸ್ಮೆನಿಯಾ ಸಂಸತ್ತಿನ ರಚನೆ
ರಾಜಕೀಯ
ಪಕ್ಷ
ಹೌಸ್‌ ಆಫ್‌
ಅಸೆಂಬ್ಲಿ (ಸಭೆ)
ಶಾಸನಾಧಿಕಾರದ
ಪರಿಷತ್‌
ಎಎಲ್‌‌ಪಿ 10 3
ಲಿಬರಲ್‌‌‌ 10 1
ಗ್ರೀನ್ಸ್‌ 5 0
ಇಂಡಿಪೆಂಡೆಂಟ್ 0 11
ಮೂಲ: ಟ್ಯಾಸ್ಮೆನಿಯನ್‌ ಮತದಾನ ಆಯೋಗ

2002ರ ಇಸವಿಯ ರಾಜ್ಯ ಚುನಾವಣೆಯಲ್ಲಿ, ಲೇಬರ್‌ ಪಾರ್ಟಿ 25 ಸ್ಥಾನಗಳ ಪೈಕಿ 14ರಲ್ಲಿ ಜಯಗಳಿಸಿತು. ಲಿಬರಲ್‌ ಪಾರ್ಟಿಯ ಮತ ಶೇಕಡಾವಾರು ಬಹಳಷ್ಟು ಕಡಿಮೆಯಾಯಿತು, ಸಂಸತ್‌ನಲ್ಲಿ ಈ ಪಕ್ಷದ ಪ್ರಾತಿನಿಧಿತ್ವ ಕೇವಲ ಏಳು ಸ್ಥಾನಗಳಿಗೆ ಇಳಿದಿತ್ತು. ಗ್ರೀನ್ಸ್‌ ಪಕ್ಷವು ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿತು, ಮತಗಳಲ್ಲಿ ಸುಮಾರು 18%ಕ್ಕಿಂತಲೂ ಹೆಚ್ಚು ಪಾಲು ಈ ಪಕ್ಷಕ್ಕೆ ಲಭಿಸಿತು. ವಿಶ್ವದಾದ್ಯಂತ, ಸಂಸತ್‌ನಲ್ಲಿ ಹಸಿರು-ಸಮರ್ಥಕ ಪಕ್ಷಗಳಲ್ಲಿ ಈ ಪಕ್ಷದ್ದೇ ಅತಿ ಹೆಚ್ಚು ಶೇಕಡಾವಾರು.

ಹೋಬಾರ್ಟ್‌ನಲ್ಲಿರುವ ಸಂಸತ್‌ ಭವನ.

2004ರ ಫೆಬ್ರವರಿ 23ರಂದು, ಶ್ವಾಸ ಕೋಶದ ಅರ್ಬುದ ರೋಗ ಪೀಡಿತ ಟ್ಯಾಸ್ಮೆನಿಯಾ ಪ್ರಧಾನಿ ಜಿಮ್‌ ಬ್ಯಾಕನ್‌ ತಮ್ಮ ನಿವೃತ್ತಿ ಘೋಷಿಸಿದರು. ತಮ್ಮ ಕೊನೆಯ ದಿನಗಳಲ್ಲಿ ಅವರು ಧೂಮಪಾನ ವಿರೋಧಿ ಆಂದೋಲನಗಳನ್ನು ಆರಂಭಿಸಿದರು. ಇದರಂತೆ, ಪಬ್‌ಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರ ಮೇಲೆ ನಿಷೇಧ ಹೇರಲಾಯಿತು. ನಾಲ್ಕು ತಿಂಗಳ ನಂತರ ಅವರು ನಿಧನರಾದರು. ಪಾಲ್‌ ಲೆನನ್‌ ಬ್ಯಾಕನ್‌ರ ಉತ್ತರಾಧಿಕಾರಿಯಾದರು. ಎರಡು ವರ್ಷಗಳ ಕಾಲ ರಾಜ್ಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ನಂತರ, 2006ರ ರಾಜ್ಯ ಚುನಾವಣೆಗಳಲ್ಲಿ ತಮ್ಮ ಸಾಮರ್ಥ್ಯದ ಮೇಲೆಯೇ ಜಯಗಳಿಸಿದರು. 2008ರಲ್ಲಿ ಲೆನನ್‌ ರಾಜೀನಾಮೆ ನೀಡಿದ ನಂತರ ಡೇವಿಡ್‌ ಬಾರ್ಟ್ಲೆಟ್‌ ಉತ್ತರಾಧಿಕಾರಿಯಾದರು.

ಟ್ಯಾಸ್ಮೆನಿಯಾದಲ್ಲಿ ಯಾವುದೇ ಹಾನಿಯಾಗಿರದ, ಪರಿಸರ ಮೌಲ್ಯವಿರುವ ಪ್ರದೇಶಗಳಿವೆ. ಆದ್ದರಿಂದ, ಸ್ಥಳೀಯ ಅರ್ಥಿಕ ಅಭಿವೃದ್ಧಿ ಪ್ರಸ್ತಾಪಗಳಿಗೆ ಕಟ್ಟುನಿಟ್ಟಾದ ಪರಿಸರ ಷರತ್ತುಗಳನ್ನು ವಿಧಿಸಲಾಗಿದೆ ಅಥವಾ ಈ ಅಭಿವೃದ್ಧಿ ಪ್ರಸ್ತಾಪಗಳು ಪ್ರಬಲ ವಿರೋಧ ಎದುರಿಸುತ್ತಿವೆ. ಇನ್ನೂ ವಿಶಿಷ್ಟವಾಗಿ, 20ನೆಯ ಶತಮಾನದ ಅಪರಾರ್ಧದಲ್ಲಿ ಜಲವಿದ್ಯುತ್‌ ಉತ್ಪಾದನೆಯ ಪ್ರಸ್ತಾಪಗಳು ವಿವಾದಗ್ರಸ್ತವಾದವು. 1970ರ ದಶಕದ ಕಾಲಾವಧಿಯಲ್ಲಿ, ಪೆಡ್ಡರ್‌ ಕೆರೆಯ ಅಣೆಕಟ್ಟು ನಿರ್ಮಾಣಕ್ಕೆ ವಿರೋಧದಿಂದಾಗಿ, ಯುನೈಟೆಡ್‌ ಟ್ಯಾಸ್ಮೆನಿಯಾ ಗ್ರೂಪ್‌ ಎಂಬ ವಿಶ್ವದಲ್ಲೇ ಮೊಟ್ಟಮೊದಲ ಹಸಿರು-ಸಮರ್ಥಕ ಪಕ್ಷದ ಸಂಘಟನೆಯಾಯಿತು.[೩೮]

ಫ್ರ್ಯಾಂಕ್ಲಿನ್‌ ನದಿ ಅಣೆಕಟ್ಟು ವಿಚಾರವಾಗಿ, 1980ರ ದಶಕದ ಪೂರ್ವಾರ್ಧದಲ್ಲಿ ರಾಜ್ಯಾದ್ಯಂತ ಗಹನ ಚರ್ಚೆ ನಡೆಯಿತು. ಟ್ಯಾಸ್ಮೆನಿಯಾದ ಆಚೆ ಹಲವು ಆಸ್ಟ್ರೇಲಿಯನ್ನರು ಅಣೆಕಟ್ಟು ವಿರೋಧಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದರ ಫಲವಾಗಿ, 1983ರಲ್ಲಿ ಬಾಬ್‌ ಹಾಕ್‌ ಮುಂದಾಳುತ್ವದ ಲೇಬರ್‌ ಸರ್ಕಾರ ಅಧಿಕಾರಕ್ಕೆ ಬಂದು, ಅಣೆಕಟ್ಟಿನ ನಿರ್ಮಾಣವನ್ನು ರದ್ದುಗೊಳಿಸಿತು. 1980ರ ದಶಕದಿಂದಲೂ, ಹಳೆಯ ಬೆಳವಣಿಗೆಗಳ ದಾಖಲೆಯತ್ತ ಪರಿಸರದ ಗಮನವು ಕೇಂದ್ರೀಕೃತವಾಗಿತ್ತು. ಇದು ಬಹಳಷ್ಟು ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಹಳೆಯ ಕಾಡುಗಳಲ್ಲಿ ಮರಗಳನ್ನು ಕಡಿಯದೆ, ಅವುಗಳನ್ನು ಕಟ್ಟುನಿಟ್ಟಾಗಿ ಸಂರಕ್ಷಿಸಬೇಕೆಂದು ಟ್ಯಾಸ್ಮೆನಿಯಾ ಟುಗೆದರ್‌ ಸಂಘಟನೆಯು 2003ರ ಜನವರಿಯಲ್ಲಿ ಶಿಫಾರಸು ಮಾಡಿತು.

ಜನಸಂಖ್ಯಾ ವಿವರಣೆ

[ಬದಲಾಯಿಸಿ]

ಟ್ಯಾಸ್ಮೆನಿಯಾದ ನಿವಾಸಿಗಳಲ್ಲಿ ಬಹಳಷ್ಟು ಜನರು ಬ್ರಿಟಿಷ್‌ ಮೂಲದವರಾಗಿದ್ದಾರೆ.[೩೯] 2008ರಲ್ಲಿ, ಆಸ್ಟ್ರೇಲಿಯಾದಲ್ಲಿನ ಮಹಿಳೆಯರಲ್ಲಿ ಸಂಪೂರ್ಣ ಗರ್ಭಧಾರಣೆ ಕ್ಷಮತೆ ಹೊಂದಿದ ಏಕೈಕ ರಾಜ್ಯ ಟ್ಯಾಸ್ಮೆನಿಯಾ. ಟ್ಯಾಸ್ಮೆನಿಯನ್‌ ಮಹಿಳೆಯರಲ್ಲಿ ಪ್ರತಿಯೊಬ್ಬರಿಗೂ ಸರಾಸರಿ 2.24ರಷ್ಟು ಮಕ್ಕಳಿದ್ದರು.[೪೦]

1975ರ ನಂತರ ಇದು ದಾಖಲಾದ ಅತಿ ಹೆಚ್ಚು ಸಂಪೂರ್ಣ ಗರ್ಭಧಾರಣೆಯ ಕ್ಷಮತೆ ಪ್ರಮಾಣ (ಟಿಎಫ್‌ಆರ್)‌ ಆಗಿದೆ.[೪೧][೪೨]

ಆರ್ಥಿಕ ಸ್ಥಿತಿ

[ಬದಲಾಯಿಸಿ]
ನೈಸರ್ಗಿಕ ಸಂಪನ್ಮೂಲಗಳನ್ನು ತೋರಿಸುತ್ತಿರುವ ಪಶ್ಚಿಮ ಟ್ಯಾಸ್ಮೆನಿಯಾದ 1865ರ ಇಸವಿಯ ನಕ್ಷೆ

ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ವಸಾಹತುದಾರರಿಗೆ ಟ್ಯಾಸ್ಮೆನಿಯಾದ ಏರುಪೇರಾದ ಆರ್ಥಿಕ ಸ್ಥಿತಿಯ ಮೊದಲ ಅನುಭವವಾಯಿತು.[ಸೂಕ್ತ ಉಲ್ಲೇಖನ ಬೇಕು] ಹಲವು ವರ್ಷಗಳ ಕಾಲ ಇದಕ್ಕೆ ವಿವಿಧ ಕಾರಣಗಳನ್ನು ವಿವರಿಸಲಾಗಿದೆ. ಇನ್ನೂ ಇತ್ತೀಚೆಗೆ, ಒಕ್ಕೂಟದ ಮೂಲಭೂತ ಸೌಕರ್ಯ ಹೆದ್ದಾರಿಯ ಕೊರತೆ, ಚಿನ್ನಕ್ಕಾಗಿ ಕುಸಿದ ಬೇಡಿಕೆ, ಮುಕ್ತ ವಲಸೆಯ ಯತ್ನಗಳ ಕೊರತೆ, ಜನಸಂಖ್ಯೆಯ ಕೊರತೆ, ಉಣ್ಣೆ ಮತ್ತು ಖನಿಜ-ಆಧಾರಿತ ಆರ್ಥಿಕತೆಗಳಲ್ಲಿ ಕುಸಿತ, ಆರಂಭಿಕ ವಸಾಹತು ಯತ್ನಗಳಲ್ಲಿ ವೈಫಲ್ಯ, ಅಥವಾ ವಿದೇಶಿ ಬಂಡವಾಳದ ಕೊರತೆ ಈ ಆರ್ಥಿಕ ಸಮಸ್ಯೆಗೆ ಕಾರಣ ಎಂದು ವಿವರಿಸಲಾಗಿದೆ. ಟ್ಯಾಸ್ಮೆನಿಯಾದ ಇತಿಹಾಸದುದ್ದಕ್ಕೂ, ಟ್ಯಾಸ್ಮೆನಿಯಾದ ಯುವಕರು ತಮ್ಮ ಉದ್ಯೋಗ ಹಾಗೂ ಜೀವನದ ಹಾದಿ ಕಂಡುಕೊಳ್ಳಲೆಂದು ಆಸ್ಟ್ರೇಲಿಯಾದ ಮುಖ್ಯ ಭೂಮಿಗೆ ವಲಸೆ ಹೋಗುತ್ತಿರುವುದುಂಟು.

ಸಾಂಪ್ರದಾಯಿಕವಾಗಿ, ತಾಮ್ರ, ಸತು, ತವರ ಮತ್ತು ಕಬ್ಬಿಣ ಸೇರಿದಂತೆ ಇತರೆ ಲೋಹಗಳ ಗಣಿಗಾರಿಕೆ; ಕೃಷಿ, ಅರಣ್ಯ ಬೆಳೆಸುವಿಕೆ ಮತ್ತು ಪ್ರವಾಸೋದ್ಯಮವು ಟ್ಯಾಸ್ಮೆನಿಯಾದ ಪ್ರಮುಖ ಉದ್ದಿಮೆಗಳಾಗಿವೆ. ಗಮನಾರ್ಹವಾಗಿ, 1940ರ ಹಾಗೂ 1950ರ ದಶಕದ ಕಾಲಾವಧಿಗಳಲ್ಲಿ, ಹೈಡ್ರೊ ಟ್ಯಾಸ್ಮೆನಿಯಾ ಜಲವಿದ್ಯುತ್‌ ಕ್ಷೇತ್ರದ ವಿಕಸನ ಯೋಜನೆ ಕೈಗೊಂಡಿದ್ದುಂಟು. ಕಳೆದ ಶತಮಾನದುದ್ದಕ್ಕೂ ಇವೆಲ್ಲವೂ ವಿವಿಧ ಮಟ್ಟಗಳಲ್ಲಿ ಯಶಸ್ವಿಯಾದವು. ಆ ಕಾಲದಲ್ಲಿ ಅತಿ ಹೆಚ್ಚು ಪ್ರಚಲಿತ ಉದ್ದಿಮೆಗೆ ಅನುಗುಣವಾಗಿ, ಜನರ ಒಳ-ವಲಸೆ ಅಥವಾ ಹೊರ-ವಲಸೆಯಾಗುತ್ತಿತ್ತು.

1990ರ ದಶಕದ ಕಾಲಾವಧಿಯಲ್ಲಿ ಉತ್ಪಾದನೆ-ತಯಾರಿಕೆಯಲ್ಲಿ ಇಳಿಕೆ ಸಂಭವಿಸಿತು. ಇದರ ಪರಿಣಾಮವಾಗಿ ಟ್ಯಾಸ್ಮೆನಿಯಾ ಮೂಲದ ಅನುಭವಿ ಉದ್ಯೋಗಿಗಳು ಆಸ್ಟ್ರೇಲಿಯಾ ಮುಖ್ಯ ಪ್ರದೇಶದೆಡೆಗೆ ವಲಸೆ ಹೋದರು. ಇಂದಿಗೂ ಸಹ, ಬಹಳಷ್ಟು ಜನರು ಪ್ರಮುಖ ನಗರಕೇಂದ್ರಗಳಾದ ಮೆಲ್ಬೊರ್ನ್‌ ಮತ್ತು ಸಿಡ್ನಿ ಮಹಾನಗರಗಳಿಗೆ ವಲಸೆ ಹೋಗುವರು.

ಆಹಾರ ರಫ್ತು ಕ್ಷೇತ್ರಗಳು ರಾಜ್ಯದಲ್ಲಿ ಹೇರಳವಾಗಿವೆ. ಇವುಗಳಲ್ಲಿ ಕಡಲ ಆಹಾರವೂ (ಉದಾಹರಣೆಗೆ, ಅಟ್ಲಾಂಟಿಕ್‌ ಸ್ಯಾಲ್ಮನ್‌, ಕಡಲ್ಗಿವಿ ಹಾಗೂ ಚಿಕ್ಕ ಮುಳ್ಳುನಳ್ಳಿ) ಸೇರಿದೆ ಆದರೆ ಇಷ್ಟಕ್ಕೇ ಸೀಮಿತವಾಗಿಲ್ಲ.

2001ರಿಂದಲೂ, ಟ್ಯಾಸ್ಮೆನಿಯಾದಲ್ಲಿ ಉಜ್ವಲ ಬೆಳವಣಿಗೆಯ ಅವಕಾಶಗಳಿವೆ. ಇಡೀ ಆಸ್ಟ್ರೇಲಿಯಾದಲ್ಲಿ ಅನುಕೂಲಕರ ಸ್ಥಿತಿ, ಕಡಿಮೆಯಾದ ವಿಮಾನಯಾನ ದರಗಳು ಹಾಗೂ ಹೊಸದಾದ ಎರಡು ಸ್ಪಿರಿಟ್‌ ಆಫ್‌ ಟ್ಯಾಸ್ಮೆನಿಯಾ ಹಡಗುಗಳು - ಇವೆಲ್ಲವೂ ಸಹ ಪ್ರವಾಸೋದ್ಯಮ ಕ್ಷೇತ್ರದ ಏಳ್ಗೆಗಾಗಿ ಭಾರೀ ಕಾರಣಗಳಾದವು.


ಇಂದು, ಟ್ಯಾಸ್ಮೆನಿಯನ್‌ ಉದ್ಯೋಗಿಗಳು ಗಮನಾರ್ಹ ಸಂಖ್ಯೆಯಲ್ಲಿ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತರೆ ಉದ್ದಿಮೆದಾರರ ಪೈಕಿ, ಹಲವು ಹೋಟೆಲ್‌ಗಳು ಹಾಗೂ ಟ್ಯಾಸ್ಮೆನಿಯಾದ ಎರಡು ಕ್ಯಾಸಿನೊಗಳ ಸ್ವಾಮ್ಯ ಗಳಿಸಿರುವ ಫೆಡರಲ್‌ ಗ್ರೂಪ್‌ ಹಾಗೂ ರಾಜ್ಯದ ಅತಿದೊಡ್ಡ ಅರಣ್ಯ ವಿಕಸನ ಪ್ರಾಧಿಕಾರ ಗನ್ಸ್‌ ಲಿಮಿಟೆಡ್‌ ಸೇರಿವೆ. 1990ರ ದಶಕದ ಕಾಲಾವಧಿಯಲ್ಲಿ, ಬ್ರಾಡ್ಬ್ಯಾಂಡ್‌ ಫೈಬರ್‌-ಆಪ್ಟಿಕ್‌ ಸಂಪರ್ಕಗಳನ್ನು ಅಗ್ಗ ದರಗಳಲ್ಲಿ ಪಡೆದ ಹಲವು ರಾಷ್ಟ್ರೀಯ ಉದ್ದಿಮೆಗಳು, ತಮ್ಮ ಸೇವಾ ಕೇಂದ್ರಗಳನ್ನು ಟ್ಯಾಸ್ಮೆನಿಯಾದಲ್ಲಿ ಸ್ಥಾಪಿಸಿದವು. [ಸೂಕ್ತ ಉಲ್ಲೇಖನ ಬೇಕು]

2000ದ ಇಸವಿಯ ಪೂರ್ವಾರ್ಧದಲ್ಲಿ ರಾಜ್ಯದ ಗೃಹನಿರ್ಮಾಣ ಮಾರುಕಟ್ಟೆಯನ್ನು ಅಗತ್ಯಕ್ಕಿಂತಲೂ ಕಡಿಮೆ ದರದಲ್ಲಿ ನಿಗದಿಪಡಿಸಲಾಗಿತ್ತು ಎಂದು ಭಾಸವಾಗಿದೆ. ನಂತರ, ರಾಷ್ಟ್ರೀಯ ಗೃಹನಿರ್ಮಾಣ ಮಾರುಕಟ್ಟೆಯಲ್ಲಿ ಉಂಟಾದ ಭಾರೀ ಏರಿಕೆಯಿಂದಾಗಿ ಟ್ಯಾಸ್ಮೆನಿಯಾ ಗೃಹನಿರ್ಮಾಣ ದರಗಳನ್ನು ಬಹಳಷ್ಟು ಏರಿಸಿತು. ಅಂತರರಾಜ್ಯ [೪೩] ಹಾಗೂ ವಿದೇಶಿ ವಲಸೆಯ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಇದಕ್ಕೆ ಭಾಗಶಃ ಕಾರಣ ಎನ್ನಲಾಗಿದೆ. ಬಾಡಿಗೆ ಮನೆಗಳ ಕೊರತೆಯಿಂದಾಗಿ ಟ್ಯಾಸ್ಮೆನಿಯಾದ ಕಡಿಮೆ-ವೇತನದ ಉದ್ಯೋಗಿಗಳಿಗೆ ಸಮಸ್ಯೆಯುಂಟಾಗಿದೆ.

ಸಮುದಾಯ ಜೀವನದಲ್ಲಿ ಸಣ್ಣ ಪ್ರಮಾಣದ ಉದ್ದಿಮೆಗಳದು ದೊಡ್ಡ ಪಾಲಿದೆ. ಟ್ಯಾಸ್ಮೆನಿಯಾದಲ್ಲಿ ಉದ್ದಿಮೆ ಪರಿಸರದಲ್ಲಿ ಸ್ಪರ್ಧಿಸಿ ಉಳಿದುಕೊಳ್ಳುವುದು ಬಹಳ ಕಷ್ಟ ಎಂದು ಹಲವರು ನಂಬಿದ್ದಾರೆ. ಆದರೂ, ಇಂಟರ್ನ್ಯಾಷನಲ್‌ ಕ್ಯಾಟಮರನ್ಸ್‌, ಮುರಿಲಾ ಎಸ್ಟೇಟ್‌ ಮತ್ತು ಟ್ಯಾಸಲ್‌ನಂತಹ ಉದ್ದಿಮೆಗಳು ಈ ದ್ವೀಪದ ಉದ್ದಿಮೆ ಪರಿಸರದಲ್ಲಿ ಯಶಸ್ವಿಯಾಗಿವೆ.

ಸಾರಿಗೆ

[ಬದಲಾಯಿಸಿ]
ಹೋಬಾರ್ಟ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಒಂದು ನೋಟ.

ಕ್ವಾಂಟಾಸ್‌ ಮತ್ತು ಅದರ ಅಂಗ ಸಂಸ್ಥೆ ಜೆಟ್‌ಸ್ಟಾರ್‌, ಹಾಗೂ ವರ್ಜಿನ್‌ ಬ್ಲೂ ಟ್ಯಾಸ್ಮೆನಿಯಾದ ಪ್ರಮುಖ ವಿಮಾನಯಾನ ಸೇವಾ ಉದ್ದಿಮೆಗಳಾಗಿವೆ. ಇವು ದ್ವೀಪದಿಂದ ಮೆಲ್ಬೊರ್ನ್‌, ಸಿಡ್ನಿ, ಬ್ರಿಸ್ಬೇನ್‌ ಮತ್ತು ಆಡಿಲೇಡ್‌ ಮಹಾನಗರಗಳಿಗೆ ನೇರ ವಿಮಾನಯಾನ ಸೇವೆ ಒದಗಿಸುತ್ತಿವೆ. ಕಡಿಮೆ-ದರಗಳಲ್ಲಿ ವಿಮಾನಯಾನ ಸೇವೆ ಒದಗಿಸುವ ಟೈಗರ್‌ ಏರ್ವೇಸ್‌ 2007ರ ನವೆಂಬರ್‌ ತಿಂಗಳಿನಿಂದ ಲಾನ್ಸೆಸ್ಟನ್‌ ಮತ್ತು ಮೆಲ್ಬೊರ್ನ್‌‌ ನಗರಗಳ ನಡುವೆ ವಿಮಾನಯಾನ ಸೇವೆ ಪ್ರಾರಂಭಿಸಿ, 2008ರ ಜನವರಿ ತಿಂಗಳಲ್ಲಿ ಹೋಬಾರ್ಟ್‌ ಹಾಗೂ ಮೆಲ್ಬೊರ್ನ್ ನಡುವೆ ವಿಮಾನಯಾನ ಸೇವೆ ಒದಗಿಸಲಾರಂಭಿಸಿತು. ಪ್ರಮುಖ ವಿಮಾನ ನಿಲ್ದಾಣಗಳ ಪೈಕಿ ಹೋಬಾರ್ಟ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಲಾನ್ಸೆಸ್ಟನ್‌ ವಿಮಾನ ನಿಲ್ದಾಣಗಳು ಸೇರಿವೆ. 1990ರ ದಶಕದಿಂದಲೂ, ಹೋಬಾರ್ಟ್‌ನಲ್ಲಿ ನಿಯತ್ತಾದ ಅಂತರರಾಷ್ಟ್ರೀಯ ವಿಮಾನಯಾನ ಸೇವೆಯಿರಲಿಲ್ಲ. ಆಸ್ಟ್ರೇಲಿಯಾ ಮುಖ್ಯ ಭೂಮಿಯಲ್ಲಿರುವ ಮೆಲ್ಬೊರ್ನ್‌ ನಗರದೊಂದಿಗೆ, ರೀಜನಲ್‌ ಎಕ್ಸ್‌ಪ್ರೆಸ್‌ ವಿಮಾನಯಾನದ ಮೂಲಕ ಬರ್ನೀ (ವೈನ್ಯಾರ್ಡ್‌) ಹಾಗೂ ಕ್ವಾಂಟಾಸ್‌ಲಿಂಕ್‌ ವಿಮಾನಯಾನದ ಮೂಲಕ ಡೆವೊನ್ಪೋರ್ಟ್‌ ನಗರಗಳು ಸಂಪರ್ಕಗೊಂಡಿವೆ.

ಟ್ಯಾಸ್ಮೆನಿಯನ್‌ ಸರ್ಕಾರ ಸ್ವಾಮ್ಯದ ಟಿಟಿ-ಲೈನ್‌ (ಟ್ಯಾಸ್ಮೆನಿಯಾ) ಬಾಸ್‌ ಸ್ಟ್ರೇಟ್‌ ಮೂಲಕ ಪ್ರಯಾಣಿಕ ಹಡಗುಗಳನ್ನು ನಡೆಸಿ, ದೇಶೀಯ ಸಮುದ್ರಯಾನ ಸೇವೆ ಒದಗಿಸುತ್ತದೆ. 1986ರಿಂದ, ಎಬೆಲ್‌ ಟ್ಯಾಸ್ಮೆನ್‌ ಹಡಗು ಡೆವೊನ್ಪೊರ್ಟ್‌ ಮತ್ತು ಮೆಲ್ಬೊರ್ನ್‌ ನಗರಗಳ ನಡುವೆ ವಾರಕ್ಕೆ ಆರು ಬಾರಿ ರಾತ್ರಿಯ ವೇಳೆ ಸಂಚರಿಸಿದ್ದುಂಟು. 1993ರಲ್ಲಿ, ಎಬೆಲ್‌ ಟ್ಯಾಸ್ಮೆನ್‌ ಸ್ಥಾನದಲ್ಲಿ ಬಂದ ಸ್ಪಿರಿಟ್‌ ಆಫ್‌ ಟ್ಯಾಸ್ಮೆನಿಯಾ ಹಡಗು ಇದೇ ಮಾರ್ಗ ಹಾಗೂ ವೇಳಾಪಟ್ಟಿಯನ್ನು ಅನುಸರಿಸಿತು. ಇತ್ತೀಚಿನ ಬದಲಾವಣೆಯೆಂದರೆ, 2002ರಲ್ಲಿ ಈ ಹಡಗಿನ ಸ್ಥಾನದಲ್ಲಿ, ಸ್ಪಿರಿಟ್‌ ಆಫ್‌ ಟ್ಯಾಸ್ಮೆನಿಯಾ I ಮತ್ತು ಸ್ಪಿರಿಟ್‌ ಆಫ್‌ ಟ್ಯಾಸ್ಮೆನಿಯಾ II ಎಂಬ ಎರಡು ಅತಿವೇಗದ ಹಡಗುಗಳನ್ನು ನಡೆಸಲಾಯಿತು. ಇದರಿಂದಾಗಿ ಪ್ರತಿವಾರಕ್ಕೆ ಹದಿನಾಲ್ಕು ಬಾರಿ ರಾತ್ರಿ ಸಂಚಾರ, ಜೊತೆಗೆ ಹೆಚ್ಚಿನ ಬೇಡಿಕೆಯಿದ್ದಾಗ ಹಗಲಿನ ಹೊತ್ತೂ ಸಹ ಹೆಚ್ಚುವರಿ ಸಂಚಾರ ವ್ಯವಸ್ಥೆ ಕಲ್ಪಿಸಲಾಯಿತು. 2004ರ ಜನವರಿ ತಿಂಗಳಲ್ಲಿ, ಇವೆರಡು ಹಡಗುಗಳಿಗಿಂತಲೂ ಸ್ವಲ್ಪ ಚಿಕ್ಕದಾಗಿರುವ ಸ್ಪಿರಿಟ್‌ ಆಫ್‌ ಟ್ಯಾಸ್ಮೆನಿಯಾ III ಎಂಬ ಮೂರನೆಯ ಹಡಗನ್ನು ಪರಿಚಯಿಸಿ, ಡೆವೊನ್ಪೊರ್ಟ್‌ ಮತ್ತು ಸಿಡ್ನಿ ನಗರಗಳ ನಡುವೆ ಸಾರಿಗೆ ಸೇವೆ ಒದಗಿಸಲಾರಂಭಿಸಿತು. ಇದರಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಬಹಳ ಕಡಿಮೆ, ಇದರಿಂದಾಗಿ ಆದಾಯ ಸಾಲದು ಎಂದು ಟ್ಯಾಸ್ಮೆನಿಯನ್‌ ಸರ್ಕಾರ 2006ರಲ್ಲಿ ಈ ಸೇವೆಯನ್ನು ರದ್ದುಗೊಳಿಸಿತು. ಟ್ಯಾಸ್ಮೆನಿಯಾದ ಬ್ರಿಡ್ಪೊರ್ಟ್‌ನಿಂದ ಬಾಸ್‌ ಸ್ಟ್ರೇಟ್‌ನಲ್ಲಿರುವ ಫ್ಲಿಂಡರ್ಸ್‌ ಐಲೆಂಡ್‌ ದ್ವೀಪ ಹಾಗೂ ಆಸ್ಟ್ರೇಲಿಯಾ ಮುಖ್ಯ ಭೂಮಿಯ ವಿಕ್ಟೊರಿಯಾ ರಾಜ್ಯದ ಪೋರ್ಟ್‌ ವೆಲ್ಷ್‌ಪೂಲ್‌ ನಡುವೆ ಹಡಗು ಸಾರಿಗೆ ಸೇವೆಯಿದೆ.[೪೪] ಟೊಲ್‌ ಷಿಪಿಂಗ್‌ ಸ್ವಾಮ್ಯದಲ್ಲಿರುವ ಎರಡು ಭಾರೀ ಸರಕಿನ ಹಡಗುಗಳು ಪ್ರತಿದಿನ ಬರ್ನೀ ಮತ್ತು ಮೆಲ್ಬೊರ್ನ್‌ ನಗರಗಳ ನಡುವೆ ಸಮುದ್ರಯಾನ ನಡೆಸುತ್ತವೆ. ಹಲವು ವಿಹಾರಯಾನ ಹಡಗುಗಳು ಹೋಬಾರ್ಟ್‌ ಬಂದರಿಗೆ ಆಗಮಿಸಿ ನಿಲ್ಲುತ್ತವೆ.

ದಿ ಸ್ಪಿರಿಟ್‌ ಆಫ್‌ ಟ್ಯಾಸ್ಮೆನಿಯಾ ಎಂಬುದು ಈ ದ್ವೀಪವನ್ನು ಆಸ್ಟ್ರೇಲಿಯಾದ ಮುಖ್ಯ ನೆಲೆಯೊಂದಿಗೆ ಸಂಪರ್ಕಿಸುತ್ತದೆ.

ಸೀಕ್ಯಾಟ್‌ ಎಂದು ಜ್ಞಾತವಾದ ಅತಿವೇಗದ ಅಲ್ಯುಮಿನಿಯಮ್‌ ಹಡಗುಗಳ ತಯಾರಕ ಉದ್ದಿಮೆ ಇಂಟರ್ನ್ಯಾಷನಲ್ ಕ್ಯಾಟಮರನ್ಸ್‌ ಸಹ ಟ್ಯಾಸ್ಮೆನಿಯಾದಲ್ಲಿದೆ. ಈ ಸೀಕ್ಯಾಟ್‌‌ ಹಡಗುಗಳನ್ನು ಮೊದಲ ಬಾರಿಗೆ ಪರಿಚಯಿಸಿದಾಗ ವೇಗದ ದಾಖಲೆಗಳನ್ನು ಆಗಿಂದಾಗ್ಗೆ ಮೀರಿಸಿದ್ದುಂಟು. ರಾಜ್ಯ ಸರ್ಕಾರವು ಬಾಸ್‌ ಸ್ಟ್ರೇಟ್‌ನಲ್ಲಿ ಈ ಹಡಗುಗಳನ್ನು ಚಲಾಯಿಸಲು ಯತ್ನಿಸಿತು. ಆದರೆ ಅಂತಿಮವಾಗಿ, ಬಾಸ್‌ ಸ್ಟ್ರೇಟ್‌ನಲ್ಲಿ ಕೆಲವೊಮ್ಮೆ ಉಂಟಾಗುವ ಬಹಳ ಪ್ರತಿಕೂಲಕರ ಹವಾಮಾನ ಸ್ಥಿತಿಗಳಲ್ಲಿ ಈ ಹಡಗುಗಳು ಅಪಾಯಕ್ಕೀಡಾಗಬಹುದಾದ ಕಾರಣ, ಈ ಯೋಜನೆಯನ್ನು ಕೈಬಿಡಬೇಕಾಯಿತು.

ಟ್ಯಾಸ್ಮೆನಿಯಾ, ಅದರಲ್ಲೂ ವಿಶಿಷ್ಟವಾಗಿ ಹೋಬಾರ್ಟ್‌, ಆಸ್ಟ್ರೇಲಿಯಾ ಮತ್ತು ಅಂಟಾರ್ಕ್ಟಿಕಾ ನಡುವಿನ ಸಮುದ್ರ ಸಂಪರ್ಕ ಕೇಂದ್ರವಾಗಿದೆ. ಆಸ್ಟ್ರೇಲಿಯನ್‌ ಅಂಟಾರ್ಕ್ಟಿಕ್‌ ವಿಭಾಗವು, ಹೋಬಾರ್ಟ್‌ನ ಹೊರವಲಯ ಬಡಾವಣೆಯಾದ ಕಿಂಗ್ಸ್ಟನ್‌ನಲ್ಲಿದೆ.

ಹೋಬಾರ್ಟ್‌ l'Astrolabe  ಫ್ರೆಂಚ್‌ ಹಡಗಿಗೂ ಸಹ ಮೂಲ ಬಂದರು ಆಗಿದೆ. ಅಂಟಾರ್ಕ್ಟಿಕಾದಲ್ಲಿ ಹಾಗೂ ಅದರ ಬಳಿಯಿರುವ ಫ್ರೆಂಚ್‌ ಸ್ವಾಮ್ಯದ ದಕ್ಷಿಣ ಪ್ರಾಂತ್ಯಗಳಿಗೆ ನಿಯತ್ತಾಗಿ ಸರಕು ಸಾಗಿಸುತ್ತದೆ. 

ಬ್ರೆಜಿಲ್‌ ದೇಶದ ರಿಯೊ ಡಿಜನೆರೊ ನಂತರ, ಹೋಬಾರ್ಟ್‌ ವಿಶ್ವದ ಎರಡನೆಯ ಅತಿ ಆಳವಾದ ನೈಸರ್ಗಿಕ ಬಂದರು ಆಗಿದೆ.

ರಾಜ್ಯದೊಳಗೆ, ರಸ್ತೆ ಮಾರ್ಗವೇ ಪ್ರಾಥಮಿಕ ಸಾರಿಗೆಯಾಗಿದೆ. 1980ರ ದಶಕದ ಕಾಲಾವಧಿಯಲ್ಲಿ, ರಾಜ್ಯದ ಹೆದ್ದಾರಿಗಳ ಪೈಕಿ ಬಹಳಷ್ಟನ್ನು ದುರಸ್ತಿ ಹಾಗೂ ಆಧುನೀಕರಣ ಮಾಡಲಾಗಿದೆ. ಇವುಗಳಲ್ಲಿ ಹೋಬಾರ್ಟ್‌ ಸದರ್ನ್‌ ಔಟ್ಲೆಟ್‌, ಲಾನ್ಸೆಸ್ಟನ್‌ ಸದರ್ನ್‌ ಔಟ್ಲೆಟ್‌, ಬಾಸ್‌ ಹೈವೇ ಪುನರ್ನಿರ್ಮಾಣ ಹಾಗೂ ಹುವಾನ್‌ ಹೈವೇ ಸೇರಿವೆ. ಮೆಟ್ರೊ ಟ್ಯಾಸ್ಮೆನಿಯಾ ಬಸ್‌ ಸೇವೆಯು ಸಾರ್ವಜನಿಕ ಸಾರಿಗೆ ಒದಗಿಸುತ್ತದೆ.

ಟ್ಯಾಸ್ಮೆನಿಯಾದ ರೈಲು ಸಾರಿಗೆಯಲ್ಲಿ, ಎಲ್ಲಾ ನಾಲ್ಕೂ ಜನನಿಬಿಡ ನಗರಗಳಿಗೆ ಹಾಗೂ ಗಣಿಗಾರಿಕೆ ಹಾಗೂ ಪಶ್ಚಿಮ ಕಡಲತೀರ ಮತ್ತು ವಾಯವ್ಯದಲ್ಲಿರುವ ಅರಣ್ಯ ವಿಕಸನಾ ಕೇಂದ್ರಗಳ ನಡುವೆ, 52 ಅಂಗುಲಗಳಿಗಿಂತ ಅಗಲ ಕಿರಿದಾದ ರೈಲು ದಾರಿ (ನ್ಯಾರೊ ಗೇಜ್‌) ರೈಲು ಸಾರಿಗೆ ಸೇವೆ ಒದಗಿಸುತ್ತದೆ. ಪೆಸಿಫಿಕ್‌ ನ್ಯಾಷನಲ್‌ ಸಂಸ್ಥೆಯ ಅಂಗಸಂಸ್ಥೆಯಾದ ಟ್ಯಾಸ್‌ರೇಲ್‌ ಈ ಸೇವೆಗಳನ್ನು ಒದಗಿಸುತ್ತದೆ. 1977ರಲ್ಲಿ ರಾಜ್ಯದಲ್ಲಿ ನಿಯಮಿತ ಪ್ರಯಾಣಿಕ ರೈಲು ಸೇವೆಗಳು ರದ್ದಾದವು. ಇಂದು ಕೇವಲ ಸರಕು ಸಾಗಾಣಿಕೆಯ ರೈಲುಗಳು ಮಾತ್ರ ಸಂಚರಿಸುತ್ತಿವೆ. ಕೆಲವು ವಿಶಿಷ್ಟ ಪ್ರದೇಶಗಳಲ್ಲಿ ಪ್ರವಾಸೀ ರೈಲುಗಳಿವೆ. ಉದಾಹರಣೆಗೆ, ವೆಸ್ಟ್‌ ಕೋಸ್ಟ್‌ ವೈಲ್ಡರ್ನೆಸ್‌ ರೇಲ್ವೆ. 2005ರಲ್ಲಿ, ರೈಲು ಸೇವೆಗಳಲ್ಲಿ ಬಹಳಷ್ಟು ಸಮಸ್ಯೆಯಿದ್ದು, ಗಾರೆ ಸಾಗಾಣಿಕೆ ಹೊರತುಪಡಿಸಿ ಬೇರೆ ಯಾವುದೇ ಸೇವೆಗೆ ಲಭ್ಯವಾಗದು ಎಂಬ ತಳಮಳಗಳು ವ್ಯಕ್ತವಾದವು.

ಸಂಸ್ಕೃತಿ

[ಬದಲಾಯಿಸಿ]

ಪಾಕಪದ್ಧತಿ

[ಬದಲಾಯಿಸಿ]

ವಸಾಹತು ಕಾಲದಲ್ಲಿ, ಟ್ಯಾಸ್ಮೆನಿಯಾದ ಹಲವೆಡೆ ಸಾಮಾನ್ಯ ಇಂಗ್ಲಿಷ್‌ ಪಾಕಪದ್ಧತಿ ತಯಾರಿಸಲಾಗುತ್ತಿತ್ತು. ವಲಸಿಗರ ಆಗಮನ ಮತ್ತು ಸಂಸ್ಕೃತಿಯ ನಮೂನೆಗಳಲ್ಲಿ ಬದಲಾವಣೆಗಳಿಂದಾಗಿ, ಟ್ಯಾಸ್ಮೆನಿಯಾದಲ್ಲಿ ಇಂದು ವಿವಿಧ ಪಾಕಪದ್ಧತಿಗಳನ್ನು ಅನುಸರಿಸುವ ಭೋಜನಾಕೇಂದ್ರಗಳಿವೆ. ಟ್ಯಾಸ್ಮೆನಿಯಾದಾದ್ಯಂತ ದ್ರಾಕ್ಷಿತೋಟಗಳಿವೆ. ಬೋಗ್ಸ್‌ ಮತ್ತು ಕ್ಯಾಸ್ಕೇಡ್‌ನಂತಹ ಟ್ಯಾಸ್ಮೆನಿಯಾ ಮೂಲದ ಬಿಯರ್‌ ಬ್ರ್ಯಾಂಡ್‌ಗಳು ಆಸ್ಟ್ರೇಲಿಯಾ ಮುಖ್ಯ ಭೂಮಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿವೆ. ಟ್ಯಾಸ್ಮೆನಿಯಾದ ವಾಯವ್ಯ ಕಡಲತೀರದಾಚೆಗಿರುವ ಕಿಂಗ್ ಐಲೆಂಡ್‌, ಬೂಟಿಕ್‌ ಗಿಣ್ಣು ಮತ್ತು ಹಾಲಿನ ಉತ್ಪನ್ನಗಳಿಗೆ ಖ್ಯಾತವಾಗಿದೆ. ಟ್ಯಾಸ್ಮೆನಿಯನ್ನರು ಸಾಕಣೆಯಾದ ಹಾಗೂ ವನ್ಯ ಸ್ಯಾಲ್ಮೊನ್‌, ಆರೆಂಜ್‌ ರೊಫಿ ಹಾಗೂ ಚಿಕ್ಕಮುಳ್ಳುನಳ್ಳಿಯಂತಹ ಕಡಲ ಆಹಾರ ಸೇವಿಸುವರು.

ಕಾರ್ಯಕ್ರಮಗಳು

[ಬದಲಾಯಿಸಿ]

ಪ್ರವಾಸೋದ್ಯಮ ಕ್ಷೇತ್ರವನ್ನು ಬೆಳೆಸಲು, ರಾಜ್ಯ ಸರ್ಕಾರವು ದ್ವೀಪದುದ್ದಗಲಕ್ಕೂ ಹಲವು ವಿವಿಧ ವಾರ್ಷಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತದೆ ಅಥವಾ ಬೆಂಬಲಿಸುತ್ತದೆ. ಇವುಗಳಲ್ಲಿ ಪ್ರಸಿದ್ಧವಾದದ್ದು ಸಿಡ್ನಿಯಿಂದ ಹೋಬಾರ್ಟ್‌ ವರೆಗಿನ ಓಡುದೋಣಿ ಸ್ಪರ್ಧೆ. ಇದು ಉಡುಗೊರೆ ಕಳಿಸುವ ದಿನಾಚರಣೆ (ಬಾಕ್ಸಿಂಗ್‌ ಡೇ)ಯಂದು ಸಿಡ್ನಿಯಲ್ಲಿ ಅರಂಭವಾಗಿ, ಸುಮಾರು ಮೂರು-ನಾಲ್ಕು ದಿನಗಳ ನಂತರ ಹೋಬಾರ್ಟ್‌ನ ಕಾಂಸ್ಟಿಟ್ಯೂಷನ್‌ ಡಾಕ್‌ ತಲುಪುತ್ತದೆ. ಆ ಸಮಯ 'ಟೇಸ್ಟ್‌ ಆಫ್‌ ಟ್ಯಾಸ್ಮೆನಿಯಾ' ಎಂಬ ಟ್ಯಾಸ್ಮೆನಿಯಾದ ವಾರ್ಷಿಕ ಆಹಾರ ಮತ್ತು ವೈನ್‌ ಉತ್ಸವ ನಡೆಯುತ್ತಿರುತ್ತದೆ.


ಇತರೆ ಕಾರ್ಯಕ್ರಮಗಳಲ್ಲಿ ಟಾರ್ಗಾ ಟ್ಯಾಸ್ಮೆನಿಯಾ ಎಂಬ ರಸ್ತೆ ಓಟ ಸಹ ಒಂದು. ವಿಶ್ವವಿಖ್ಯಾತ ರ್‌ಯಾಲಿ ಚಾಲಕರು ಇಲ್ಲಿ ಬಂದು ಸ್ಪರ್ಧಿಸುವರು. ಈ ಸ್ಪರ್ಧೆಯು ರಾಜ್ಯಾದ್ಯಂತ ಐದು ದಿನಗಳ ಕಾಲ ನಡೆಯುವುದು. ಗ್ರಾಮಾಂತರ ಅಥವಾ ಪ್ರಾದೇಶಿಕ ಕಾರ್ಯಕ್ರಮಗಳಲ್ಲಿ, ಪ್ರತಿ ವರ್ಷ ಮೇ ತಿಂಗಳ ಆರಂಭದಲ್ಲಿ, ಲಾನ್ಸೆಸ್ಟನ್‌ ನಗರದ ಪಶ್ಚಿಮದಲ್ಲಿರುವ ಕ್ಯಾರಿಕ್‌ನಲ್ಲಿ ನಡೆಯುವ ಅಗ್ಫೆಸ್ಟ್‌ ಎಂಬ ಮೂರು-ದಿನಗಳ ಕೃಷಿ ಉತ್ಸವ; ಹಾಗೂ, ಪ್ರತಿ ವರ್ಷ ಅಕ್ಟೊಬರ್‌ ತಿಂಗಳಲ್ಲಿ ರಾಯಲ್‌ ಹೋಬಾರ್ಟ್‌ ಷೋ ಮತ್ತು ರಾಯಲ್‌ ಲಾನ್ಸೆಸ್ಟನ್‌ ಷೋ ನಡೆಯುತ್ತವೆ. ಸಂಗೀತ ಉತ್ಸವಗಳು ಸಹ ಅದ್ದೂರಿಯಾಗಿ ನಡೆಯುತ್ತವೆ. ಕ್ರೈಸ್ತವರ್ಷಾರಂಭದ ಹಿಂದಿನ ಸಂಜೆ, ಮ್ಯಾರಿಯಾನ್‌ ಬೇಯಲ್ಲಿ ಫಾಲ್ಸ್ ಫೆಸ್ಟಿವಲ್‌ ಮುಂಚೆ ವಿಕ್ಟೊರಿಯಾದಲ್ಲಿ ಮಾತ್ರ ನಡೆಯುತ್ತಿತ್ತು, ಈಗ ಇದು ಟ್ಯಾಸ್ಮೆನಿಯಾದಲ್ಲೂ ಆಯೋಜಿತವಾಗುತ್ತದೆ. ಬಹುಮಟ್ಟದ ಪೆಡಸುಗಟ್ಟುವಿಕೆ ರೋಗ ಪೀಡಿತರಿಗೆ ಧನಸಹಾಯಾರ್ಥವಾಗಿ, ಪ್ರತಿ ವರ್ಷ ಈಸ್ಟರ್‌ ದಿನದಂದು ಲಾನ್ಸೆಸ್ಟನ್‌ನಲ್ಲಿ ಎಂಎಸ್‌ ಫೆಸ್ಟ್‌ ಹಾಗೂ ಹೋಬಾರ್ಟ್‌ನಲ್ಲಿ ಸದರ್ನ್‌ ರೂಟ್ಸ್‌ ಫೆಸ್ಟಿವಲ್‌ ನಡೆಯುತ್ತವೆ. ಟೆನ್‌ ಡೇಸ್‌ ಆನ್‌ ದಿ ಐಲೆಂಡ್‌ ಎಂಬ ಕಲಾ ಉತ್ಸವವು ಈ ರಾಜ್ಯದಲ್ಲಿ ಹೊಸದಾಗಿ ಆರಂಭವಾದ ಉತ್ಸವವಾಗಿದೆ.

ಸಾಹಿತ್ಯ

[ಬದಲಾಯಿಸಿ]

ಟ್ಯಾಸ್ಮೆನಿಯಾದಲ್ಲಿ ತುಲನಾತ್ಮಕವಾಗಿ ಸಣ್ಣ ಪ್ರಮಾಣದ, ಆದರೆ ವಿಕಸನಗೊಳ್ಳುತ್ತಿರುವ ಸಾಹಿತ್ಯ ಸಂಸ್ಕೃತಿಯಿದೆ. ಮಾರ್ಕಸ್‌ ಕ್ಲಾರ್ಕ್‌ರ ಫಾರ್‌‌ ದಿ ಟರ್ಮ್‌ ಆಫ್‌ ಹಿಸ ನ್ಯಾಚುರಲ್‌ ಲೈಫ್‌ , ದಿ ಸೌಂಡ್‌ ಆಫ್‌ ಒನ್‌ ಹ್ಯಾಂಡ್‌ ಕ್ಲ್ಯಾಪಿಂಗ್‌ , ರಿಚರ್ಡ್‌ ಫ್ಲ್ಯಾನಗನ್ರ ಗೌಲ್ಡ್ಸ್‌ ಬುಕ್ ಆಫ್‌ ಫಿಷ್‌ ಕ್ರಿಸ್ಟೊಫರ್‌ ಕೊಚ್ರ ದಿ ಇಯರ್‌ ಆಫ್‌ ಲಿವಿಂಗ್‌ ಡೇಂಜರಸ್ಲಿ ಪ್ರಸಿದ್ಧ ಶೀರ್ಷಿಕೆಗಳಲ್ಲಿ ಕೆಲವು.

'ಟ್ಯಾಸ್ಮೆನಿಯನ್‌ ಶೈಲಿ'ಯ [clarification needed] ಕಲ್ಪನಾಕಥೆಗಳ ಪೈಕಿ, ಮ್ಯಾರಿಯಾನ್‌ ಮತ್ತು ಸ್ಟೀವ್‌ ಇಷ್ಯಾಮ್‌ ರಚಿಸಿದ ಟೈಗರ್‌ ಟೇಲ್ ‌ನಂತಹ ಮಕ್ಕಳ ಗ್ರಂಥಗಳು ಸೇರಿವೆ.

ಸಂಗೀತ ಮತ್ತು ಪ್ರದರ್ಶನಾ ಕಲೆಗಳು

[ಬದಲಾಯಿಸಿ]

ಟ್ಯಾಸ್ಮೆನಿಯಾದ ಸಂಗೀತ ಕ್ಷೇತ್ರವು ವೈವಿಧ್ಯಮಯವಾಗಿದೆ. ಫೆಡರೇಷನ್‌ ವಾದ್ಯಗೋಷ್ಠಿ ಭವನದಲ್ಲಿ ನಡೆಯುವ ಟ್ಯಾಸ್ಮೆನಿಯನ್‌ ಸಿಂಫನಿ ಆರ್ಕೆಸ್ಟ್ರಾದಿಂದ ಹಿಡಿದು, ಗಮನಾರ್ಹ ಸಂಖ್ಯೆಯಲ್ಲಿರುವ ಸಣ್ಣ ಪ್ರಮಾಣದ ವಾದ್ಯತಂಡಗಳು, ವಾದ್ಯಗೋಷ್ಠಿಗಳು, ಪಂಚಮೇಳಗಳು, ಸ್ಯಾಕ್ಸೊಫೋನ್‌ ಮಹಾಮೇಳಗಳು ಹಾಗೂ, ರಾಜ್ಯಾದ್ಯಂತ ವಿವಿಧ ಸ್ಥಳಗಳಲ್ಲಿ ಸಂಗೀತ ಪ್ರದರ್ಶನ ನೀಡುವ ಏಕ-ಕಲಾವಿದರ ವರೆಗೂ ಸಂಗೀತ ಕ್ಷೇತ್ರದ ಶ್ರೇಣಿಯಿದೆ. ಕಾಂಸ್ಟ್ಯಾಂಟಿನ್‌ ಕೊಕಿಯಸ್‌, ಮಾರಿಯಾ ಗ್ರೆನ್ಫೆಲ್‌ ಹಾಗೂ, ಟ್ಯಾಸ್ಮೆನಿಯಾ ಸಂಗೀತ ಸಂಯೋಜಕರ ಪ್ರತಿನಿಧಿ ಕೂಟ ಟ್ಯಾಸ್ಮೆನಿಯನ್‌ ಕಂಪೊಸರ್ಸ್‌ ಕಲೆಕ್ಟಿವ್[೪೫]‌ನ ಪ್ರಧಾನ ಸಂಚಾಲಕ ಡಾನ್‌ ಕೇ ಸೇರಿದಂತೆ, ವಿವಿಧ ಶೈಲಿಗಳ ಸಂಗೀತ ಸಂಯೋಜಕರರು ಟ್ಯಾಸ್ಮೆನಿಯಾದಲ್ಲಿದ್ದಾರೆ. ಟ್ಯಾಸ್ಮೆನಿಯಾ is also home to one of ಆಸ್ಟ್ರೇಲಿಯಾ's leading new music institutions, IHOS Music Theatre and Opera and gospel choirs, the Southern Gospel Choir.

ಆಸ್ಟ್ರೇಲಿಯಾದ ಹೊಸ ಪ್ರಸಿದ್ಧ ಸಂಗೀತ ಸಂಸ್ಥೆಗಳಾದ ಐಹೆಚ್‌ಒಎಸ್‌ ಮ್ಯೂಸಿಕ್‌ ಥಿಯೆಟರ್‌ ಅಂಡ್‌ ಅಪೆರಾ ಹಾಗೂ ಸದರ್ನ್‌ ಗೊಸ್ಪೆಲ್‌ ಕ್ವೈರ್‌ ಎಂಬ ಶುಭನುಡಿ ಗಾಯಕಗೋಷ್ಠಿಗಳಿಗೆ ಟ್ಯಾಸ್ಮೆನಿಯಾ ಸ್ವಸ್ಥಳವಾಗಿದೆ. ಡೆತ್‌ ಮೆಟಲ್‌ ಸಂಗೀತ ಶೈಲಿಯ ವಾದ್ಯತಂಡ ಸೈಕ್ರಾಪ್ಟಿಕ್‌ ಟ್ಯಾಸ್ಮೆನಿಯಾ ಮೂಲದ್ದಾಗಿದ್ದು, ಆಸ್ಟ್ರೇಲಿಯಾದ ಪ್ರಮುಖ ಮೆಟಲ್‌ ಸಂಗೀತ ಶೈಲಿಯ ವಾದ್ಯತಂಡಗಳಲ್ಲಿ ಒಂದು.[೪೬] ಪ್ರತಿಷ್ಠಿತ ನ್ವಾರ್‌-ರಾಕ್-ಸಂಗೀತ ವಾದ್ಯತಂಡ ದಿ ಪ್ಯಾರಡೈಸ್ ಮೊಟೆಲ್‌[೪೭] ಹಾಗೂ 1980ರ ದಶಕದ ಪವರ್‌-ಪಾಪ್ ಮಿಶ್ರಣದ ದಿ ಇನೊಸೆಂಟ್ಸ್‌[೪೮] ಸಹ ಟ್ಯಾಸ್ಮೆನಿಯಾ ಮೂಲದ್ದಾಗಿವೆ. ಶಾಸ್ತ್ರೀಯ ಸಂಗೀತ ಋತು, ಹಾಗೂ, ರಾಜ್ಯಾದ್ಯಂತ ಸಂಗೀತ ಪ್ರದರ್ಶನ ಪ್ರವಾಸ ನೀಡುವ ಸ್ಥಳೀಯ ಹಾಗೂ ಅಂತರರಾಜ್ಯ ತಂಡಗಳಿವೆ. ಇದಲ್ಲದೆ, ಬೇಸಿಗೆಯ ಋತುವಿನಲ್ಲಿ ನಡೆಯುವ ಫಾಲ್ಸ್‌ ಫೆಸ್ಟಿವಲ್‌ ಹಾಗೂ ಕ್ರಿಸ್ಮಸ್‌ ಹಬ್ಬಕ್ಕೆ ಕೆಲವು ವಾರಗಲ ಮುಂಚೆ ನಡೆಯುವ ಕೆರೊಲ್ಸ್‌ ಬೈ ಕ್ಯಾಂಡ್ಲ್‌ಲೈಟ್‌- ಇವೆರಡೂ ಸಹ, ವರ್ಷವಾರು ಸಂಗೀತ ಚಟುವಟಿಕೆಗಳಲ್ಲಿ ಪ್ರಮುಖ ಪ್ರದರ್ಶನಗಳಾಗಿವೆ.

ದಿ ಮೋಲ್ ‌ನ ಮೊದಲ ಋತುವಿನ ಚಿತ್ರೀಕರಣವನ್ನು ಮುಖ್ಯವಾಗಿ ಟ್ಯಾಸ್ಮೆನಿಯಾದಲ್ಲಿ ನಡೆಸಲಾಯಿತು. ಖ್ಯಾತ ಪೋರ್ಟ್‌ ಆರ್ಥರ್‌ ಕಾರಾವಾಸದಲ್ಲಿ ಅಂತಿಮ ಸುತ್ತು ನಡೆಯಿತು.

ಟ್ಯಾಸ್ಮೆನಿಯನ್‌ ಚಲನಚಿತ್ರರಂಗ

[ಬದಲಾಯಿಸಿ]

ದಿ ಟೇಲ್‌ ಆಫ್‌ ರೂಬಿ ರೋಸ್‌ , ದಿ ಲಾಸ್ಟ್ ಕನ್ಫೆಷನ್‌ ಆಫ್‌ ಅಲೆಕ್ಸಾಂಡರ್‌ ಪಿಯರ್ಸ್ ಹಾಗೂ ಇತ್ತೀಚೆಗಿನ ಚಲನಚಿತ್ರ ವಾನ್‌ ಡೀಮೆನ್ಸ್‌ ಲ್ಯಾಂಡ್‌ ಸೇರಿದಂತೆ ಬಹಳಷ್ಟು ಚಲನಚಿತ್ರಗಳ ಚಿತ್ರೀಕರಣ ಹಾಗೂ ಕಥಾಹಂದರವನ್ನು ಟ್ಯಾಸ್ಮೆನಿಯಾದಲ್ಲಿ ಹೆಣೆಯಲಾಯಿತು. ಈ ಮೂರಲ್ಲಿಯೂ, ಟ್ಯಾಸ್ಮೆನಿಯನ್‌ ಭೂಚಿತ್ರಣವು ಪ್ರಮುಖ ಸ್ಥಾನದಲ್ಲಿದೆ. ಟ್ಯಾಸ್ಮೆನಿಯಾದ ಕೈದಿ ಇತಿಹಾಸದ ಬಗೆಗಿನ ಒಂದು ಕಂತಿನಲ್ಲಿ ದಿ ಲಾಸ್ಟ್‌ ಕನ್ಫೆಷನ್‌ ಆಫ್‌ ಅಲೆಕ್ಸಾಂಡರ್‌ ಪಿಯರ್ಸ್‌ ಮತ್ತು ವಾನ್‌ ಡೀಮೆನ್ಸ್‌ ಲ್ಯಾಂಡ್‌ ಕಥೆಗಳನ್ನು ಹೆಣೆಯಯಾಗಿದೆ.

ದೃಶ್ಯ ಕಲೆಗಳು

[ಬದಲಾಯಿಸಿ]

ದ್ವಿವರ್ಷೀಯ ಉತ್ಸವವಾದ ಟ್ಯಾಸ್ಮೆನಿಯನ್‌ ಲಿವಿಂಗ್‌ ಆರ್ಟಿಸ್ಟ್ಸ್‌ ವೀಕ್‌ , ಟ್ಯಾಸ್ಮೆನಿಯಾದ ದೃಶ್ಯಕಲಾವಿದರಿಗಾಗಿ ನಡೆಯುವ ಹತ್ತು-ದಿನಗಳ ಕಾಲದ ರಾಜ್ಯಾದ್ಯಂತ ಉತ್ಸವ. 2007ರಲ್ಲಿ ನಡೆದ ನಾಲ್ಕನೆಯ ಉತ್ಸವದಲ್ಲಿ 1000ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡರು. ಇಬ್ಬರು ಟ್ಯಾಸ್ಮೆನಿಯನ್ನರು ಪ್ರತಿಷ್ಠಿತ ಆರ್ಚಿಬಾಲ್ಡ್‌ ಪ್ರಶಸ್ತಿ ವಿಜೇತರಾಗಿದ್ದಾರೆ. ಪ್ರೊಫೆಸರ್‌ ಜೇಮ್ಸ್‌ ಮೆಕಾಲೆಯಂಡ್‌‌ ಪಾತ್ರ ನಿರ್ವಹಿಸಿದ ಜ್ಯಾಕ್‌ ಕ್ಯಾರಿಂಗ್ಟನ್‌ ಸ್ಮಿತ್‌ರಿಗೆ 1963ರಲ್ಲಿ ಹಾಗೂ ರಿಚರ್ಡ್‌ ಫ್ಲ್ಯಾನಗನ್‌ ಪಾತ್ರ ನಿರ್ವಹಿಸಿದ ಜಿಯೊಫ್ರಿ ಡಯರ್‌ಗೆ 2003ರಲ್ಲಿ ಈ ಪ್ರಶಸ್ತಿ ಲಭಿಸಿತು. ಛಾಯಾಚಿತ್ರಣ ಕಲಾವಿದರಾದ ಒಲೆಗಾಸ್‌ ಟ್ರುಕನಾಸ್‌ ಮತ್ತು ಪೀಟರ್‌ ಡೊಂಬ್ರೊವ್‌ಸ್ಕಿಸ್‌ರ ಕೃತಿಗಳು ಬಹಳಷ್ಟು ಪ್ರಸಿದ್ಧಿ ಪಡೆದು ಪೆಡ್ಡರ್‌ ಕೆರೆ ಮತ್ತು ಫ್ರ್ಯಾಂಕ್ಲಿನ್‌ ಅಣೆಕಟ್ಟಿನ ಸಂರಕ್ಷಣಾ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವು.

ಇಂಗ್ಲಿಷ್‌-ಸಂಜಾತ ಜಾನ್ ಗ್ಲೊವರ್‌ (1767-1849) ಟ್ಯಾಸ್ಮೆನಿಯನ್‌ ಭೂಚಿತ್ರಣಗಳ ಚಿತ್ರಕಲೆಗಳಿಗೆ ಪ್ರಸಿದ್ಧರಾಗಿದ್ದರು.

ಮಾಧ್ಯಮಗಳು

[ಬದಲಾಯಿಸಿ]

ಕಿರುತೆರೆ

[ಬದಲಾಯಿಸಿ]

ಟ್ಯಾಸ್ಮೆನಿಯಾದಲ್ಲಿ ಐದು ದೂರದರ್ಶನ ಪ್ರಸಾರ ಕೇಂದ್ರಗಳಿವೆ:

  • ಎಬಿಸಿ ಟ್ಯಾಸ್ಮೆನಿಯಾ. ಪ್ರತಿ ಸಂಜೆ 7 ಗಂಟೆಗೆ ಪ್ರಸಾರವಾಗುವ ಸ್ಥಳೀಯ ವಾರ್ತೆಗಳ ನಿರ್ಮಾಣ (ಡಿಜಿಟಲ್‌ ಮತ್ತು ಅನಾಲಾಗ್‌) (ಕರೆಸಂಕೇತ: ABT)
  • ಎಸ್‌ಬಿಎಸ್‌ ಒನ್‌ (ಡಿಜಿಟಲ್‌ ಮತ್ತು ಅನಾಲಾಗ್‌) (ಕರೆಸಂಕೇತ: SBS)


  • ಸದರ್ನ್‌ ಕ್ರಾಸ್‌ ಟೆಲಿವಿಷನ್‌ ಟ್ಯಾಸ್ಮೆನಿಯಾ (ಡಿಜಿಟಲ್‌ ಮತ್ತು ಅನಾಲಾಗ್‌). ಸೆವೆನ್‌ ನೆಟ್ವರ್ಕ್‌ ಅಂಗಸಂಸ್ಥೆ. (ಕರೆಸಂಕೇತ: TNT).
  • ವಿನ್‌ ಟೆಲಿವಿಷನ್‌ ಟ್ಯಾಸ್ಮೆನಿಯಾ. (ಡಿಜಿಟಲ್‌ ಮತ್ತು ಅನಾಲಾಗ್‌). ನೈನ್ ನೆಟ್ವರ್ಕ್‌ನ ಅಂಗಸಂಸ್ಥೆ (ಕರೆಸಂಕೇತ: TVT)
  • ಟ್ಯಾಸ್ಮೆನಿಯಾ ಡಿಜಿಟಲ್‌ ಟೆಲಿವಿಷನ್‌. ಮೆಲ್ಬೊರ್ನ್‌ನಲ್ಲಿರುವ ಎಟಿವಿ-10 ವಾಹಿನಿಯಿಂದ 'ಟೆನ್‌ ನ್ಯೂಸ್‌ ಅಟ್‌ ಫೈವ್' ಕಾರ್ಯಕ್ರಮವನ್ನು ಸ್ವೀಕರಿಸುತ್ತದೆ ‌(ಡಿಜಿಟಲ್‌ ಪ್ರಸಾರ ಮಾತ್ರ).
ಟೆನ್‌ ನೆಟ್ವರ್ಕ್‌ನ ಅಂಗಸಂಸ್ಥೆ (ಕರೆಸಂಕೇತ: ಟಿಡಿಟಿ)

ಇದಲ್ಲದೆ ಪ್ರಸಾರಕೇಂದ್ರಗಳು ಹಲವು ಡಿಜಿಟಲ್‌ ವಾಹಿನಿಗಳನ್ನು ಪ್ರಸರಿಸುತ್ತವೆ:

  • ಎಬಿಸಿ2 (ಎಬಿಟಿ ವಾಹಿನಿಯು ಮರುಪ್ರಸಾರ ಮಾಡುವುದು)


  • ಎಬಿಸಿ3 (ಎಬಿಟಿ ವಾಹಿನಿಯು ಮರುಪ್ರಸಾರ ಮಾಡುವುದು)
  • ಎಬಿಸಿ ನ್ಯೂಸ್‌ 24 (ಎಬಿಟಿ ವಾಹಿನಿಯು ಮರುಪ್ರಸಾರ ಮಾಡುವುದು)
  • ಎಸ್ಬಿಎಸ್‌ ಟೂ (ಎಸ್‌ಬಿಎಸ್‌ ವಾಹಿನಿಯು ಮರುಪ್ರಸಾರ ಮಾಡುವುದು)
  • ಎಸ್‌ಬಿಎಸ್‌ ಹೆಚ್‌ಡಿ (ಎಸ್‌ಬಿಎಸ್‌ ವಾಹಿನಿಯು ಮರುಪ್ರಸಾರ ಮಾಡುವುದು)
  • ಒನ್‌ ಹೆಚ್‌ಡಿ (ಟಿಡಿಟಿ ವಾಹಿನಿಯು ಮರುಪ್ರಸಾರ ಮಾಡುವುದು)
  • ಗೋ! (ಟಿವಿಟಿ ವಾಹಿನಿಯು ಮರುಪ್ರಸಾರ ಮಾಡುವುದು)
  • ವಿನ್‌ ಹೆಚ್‌ಡಿ (ಟಿವಿಟಿ ವಾಹಿನಿಯು ಮರುಪ್ರಸಾರ ಮಾಡುವುದು)
  • ಸದರ್ನ್ ಕ್ರಾಸ್‌ ಹೆಚ್‌ಡಿ (ಟಿಎನ್‌ಟಿ ವಾಹಿನಿಯು ಮರುಪ್ರಸಾರ ಮಾಡುವುದು)
  • 7ಟೂ (ಟಿಎನ್‌ಟಿ ವಾಹಿನಿಯು ಮರುಪ್ರಸಾರ ಮಾಡುವುದು)

ಕ್ರೀಡೆ

[ಬದಲಾಯಿಸಿ]
ಬೆಲ್ಲೆರೀವ್‌ ಒವಲ್‌ ಕ್ರಿಕೆಟ್ ಮೈದಾನದಲ್ಲಿ ಜನಸಂದಣಿ‌

ಟ್ಯಾಸ್ಮೆನಿಯಾದಲ್ಲಿ ಕ್ರೀಡೆಯು ಕೇವಲ ಪ್ರಮುಖ ಹವ್ಯಾಸವಷ್ಟೇ ಅಲ್ಲ. ಟ್ಯಾಸ್ಮೆನಿಯಾ ಮೂಲದ ಹಲವು ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ್ದಾರೆ. ಈ ರಾಜ್ಯದಲ್ಲಿ ಹಲವು ಪ್ರಮುಖ ಕ್ರೀಡಾಕೂಟಗಳು ಆಯೋಜಿತವಾಗಿವೆ. ಟ್ಯಾಸ್ಮೆನಿಯನ್‌ ಟೈಗರ್ಸ್‌ ಕ್ರಿಕೆಟ್‌ ತಂಡವು ಟ್ಯಾಸ್ಮೆನಿಯಾ ರಾಜ್ಯವನ್ನು ಪ್ರತಿನಿಧಿಸುವಲ್ಲಿ ಸಫಲವಾಗಿದೆ (ಉದಾಹರಣೆಗೆ 2007ರ ಷೆಫೀಲ್ಡ್‌ ಷೀಲ್ಡ್‌ ಪಂದ್ಯಾವಳಿ). ಹೋಬಾರ್ಟ್‌ನಲ್ಲಿರುವ ಬೆಲೆರೀವ್‌ ಒವಲ್‌ ಕ್ರಿಕೆಟ್ ಕ್ರೀಡಾಂಗಣವು ಈ ತಂಡದ ಸ್ವಸ್ಥಳ. ಈ ಮೈದಾನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳೂ ನಡೆಯುತ್ತವೆ. ಟ್ಯಾಸ್ಮೆನಿಯನ್‌ ಕ್ರಿಕೆಟ್‌ ಆಟಗಾರರ ಪೈಕಿ ಡೇವಿಡ್ ಬೂನ್‌, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ರಿಕಿ ಪಾಂಟಿಂಗ್‌ ಹಾಗೂ ಇತ್ತೀಚೆಗೆ ಕ್ರಿಕೆಟ್‌ ಟೆಸ್ಟ್‌ ತಂಡದ ಕಾಯಂ ಸದಸ್ಯ ವೇಗದ ಬೌಲರ್‌ ಬೆನ್‌ ಹಿಲ್ಫೆನ್ಹಾಸ್‌ ಪ್ರಸಿದ್ಧರು. ಆಸ್ಟ್ರೇಲಿಯನ್‌ ರೂಲ್ಸ್‌ ಫುಟ್ಬಾಲ್‌ ಸಹ ಇಲ್ಲಿ ಜನಪ್ರಿಯ ಆಟ. ಆಸ್ಟ್ರೇಲಿಯನ್‌ ಫುಟ್ಬಾಲ್‌ ಲೀಗ್ (ಎಎಫ್‌ಎಲ್‌)‌ನಲ್ಲಿ ಟ್ಯಾಸ್ಮೆನಿಯನ್‌ ತಂಡ ಭಾಗವಹಿಸುವ ಪ್ರಸ್ತಾಪ ಆಗಾಗ್ಗೆ ಕೇಳಿಬರುವುದುಂಟು. ಲಾನ್ಸೆಸ್ಟನ್‌ನ ಯಾರ್ಕ್‌ ಪಾರ್ಕ್ನಲ್ಲಿರುವ ಅರೊರಾ‌ ಕ್ರೀಡಾಂಗಣದಲ್ಲಿ, ಹಾಥಾರ್ನ್‌ ಫುಟ್ಬಾಲ್‌ ಕ್ಲಬ್‌ ಸೇರಿದಂತೆ, ಹಲವು ಎಎಫ್‌ಎಲ್‌ ಪಂದ್ಯಗಳು ನಡೆದಿವೆ. ಅಪಖ್ಯಾತಿ ಪಡೆದ, ಸೇಂಟ್‌ ಕಿಲ್ಡಾ ಮತ್ತು ಫ್ರೀಮ್ಯಾಂಟ್ಲ್‌ ತಂಡಗಳ ನಡುವಿನ ಪಂದ್ಯವನ್ನು ವಿವಾದಾಸ್ಪದವಾಗಿ ಡ್ರಾ ಎಂದು ಘೋಷಿಸಲಾಯಿತು. ಅಂಪೈರ್‌ಗಳು ಪಂದ್ಯದ ಅಂತ್ಯ ಎಂದು ಘೋಷಿಸುವ ಶಿಳ್ಳೆಯನ್ನು ಗಮನಿಸಲು ವಿಫಲವಾದದ್ದೆ ಇದಕ್ಕೆ ಕಾರಣ.

ರಾಜ್ಯಾದ್ಯಂತ ಅಸೊಷಿಯೇಷನ್‌ ಫುಟ್ಬಾಲ್‌ (ಸಾಕರ್‌) ಆಡಲಾಗುತ್ತದೆ. ಪ್ರಸ್ತುತ ಸದರ್ನ್‌ ಪ್ರೀಮಿಯರ್‌ ಲೀಗ್‌ ಮತ್ತು ನಾರ್ದರ್ನ್‌ ಪ್ರೀಮಿಯರ್‌ ಲೀಗ್‌ನ ಮಾದರಿಯಂತೆ ಟ್ಯಾಸ್ಮೆನಿಯನ್‌ ಹ್ಯುಂಡೈ ಎ-ಲೀಗ್‌ ಕ್ಲಬ್‌ ಲೀಗ್‌ ಪಂದ್ಯಾವಳಿಯನ್ನು ಆಯೋಜಿಸುವ ಪ್ರಸ್ತಾಪವು ಚರ್ಚೆಯಲ್ಲಿದೆ. ಆಸ್ಟ್ರೇಲಿಯನ್‌ ಒಪನ್‌ ಟೆನಿಸ್‌ ಪಂದ್ಯಾವಳಿಯ ಪೂರ್ವಸಿದ್ಧತೆ ಎಂಬಂತೆ, ಮೂರಿಲ್ಲಾ ಇಂಟರ್ನ್ಯಾಷನಲ್‌ ಟೆನಿಸ್‌ ಪಂದ್ಯಾವಳಿಯು ಟ್ಯಾಸ್ಮೆನಿಯಾದ ರಾಜಧಾನಿ ಹೋಬಾರ್ಟ್‌ನ ಹೋಬಾರ್ಟ್‌ ಇಂಟರ್ನ್ಯಾಷನಲ್‌ ಟೆನಿಸ್‌ ಸೆಂಟರ್‌ನಲ್ಲಿ ನಡೆಯುತ್ತದೆ. ಸಿಡ್ನಿ-ಹೋಬಾರ್ಟ್‌ ಓಡುದೋಣಿ ಓಟ ಸ್ಪರ್ಧೆಯು 1945ರಿಂದಲೂ ಪ್ರತಿ ವರ್ಷ ಬಾಕ್ಸಿಂಗ್ ಡೇ ಮತ್ತು ಹೊಸವರ್ಷದ ದಿನದ ತನಕ ಆಯೋಜಿತವಾಗಿದ್ದು, ಹೋಬಾರ್ಟ್‌ನಲ್ಲಿ ಅಂತ್ಯಗೊಳ್ಳುತ್ತದೆ.

ಆಡಲಾದ ಹಾಗೂ ಪ್ರೋತ್ಸಾಹಿಸಲಾದ ಕೆಲವು ಇತರೆ ಕ್ರೀಡಗಳು ಜನಪ್ರಯತೆ ಗಳಿಸುತ್ತಿದ್ದರೆ, ಇನ್ನು ಕೆಲವು ಅವಸಾನ ಕಾಣುತ್ತಿವೆ. ಉದಾಹರಣೆಗೆ, 1996ರಲ್ಲಿ ಹೋಬಾರ್ಟ್‌ ಡೆವಿಲ್ಸ್‌ ಕ್ರೀಡಾಸಂಘವು ಮುಚ್ಚಿಹೋದಾಗಿನಿಂದಲೂ, ಬ್ಯಾಸ್ಕೆಟ್ಬಾಲ್‌ ಕ್ರೀಡೆಯ ನ್ಯಾಷನಲ್‌ ಬ್ಯಾಸ್ಕೆಟ್ಬಾಲ್‌ ಲೀಗ್‌ ಪಂದ್ಯಾವಳಿಯಲ್ಲಿ ಟ್ಯಾಸ್ಮೆನಿಯಾದ ತಂಡವೇ ಇಲ್ಲ.

ಟ್ಯಾಸ್ಮೆನಿಯಾದಲ್ಲಿನ ಸ್ಥಳಗಳು

[ಬದಲಾಯಿಸಿ]
ಇವನ್ನೂ ನೋಡಿ: ಆಸ್ಟ್ರೇಲಿಯಾದ ದ್ವೀಪಗಳು, ಕೆರೆಗಳು, ಸೇತುವೆಗಳು, ಹೆದ್ದಾರಿಗಳು, ನದಿಗಳು, ಪರ್ವತಗಳು ಹಾಗೂ ವಲಯಗಳು.
ಟ್ಯಾಸ್ಮೆನಿಯಾದ ಅಗ್ನೇಯ ಕಡಲ ತೀರದಾಚೆಯಿರುವ ಬ್ರುನಿ ದ್ವೀಪದ ಬಳಿ ಸಣ್ಣ ದ್ವೀಪ
ಲಾಂಸೆಸ್ಟನ್‌ನಲ್ಲಿರುವ ಕ್ಯಾಟರಾಕ್ಟ್‌ ಗಾರ್ಜ್‌
ಹಿನ್ನೆಲೆಯಲ್ಲಿ ಕ್ರೇಡ್ಲ್ ಮೌಂಟನ್‌ ಹೊಂದಿರುವ ಡವ್‌ ಲೇಕ್‌ನ ಒಂದು ದೃಶ್ಯ
ಫ್ರೆಂಚ್ಮನ್ಸ್‌ ಕ್ಯಾಪ್‌ ಪರ್ವತದ ದೃಶ್ಯ
style="vertical-align:top; width:200px; font-size:90%;" ದ್ವೀಪಗಳು: ಕೆರೆಗಳು:
  • ಬೌಂಡರಿ ಐಲೆಟ್‌
  • ಬ್ರೂನಿ ಐಲೆಂಡ್‌
  • ಕೇಪ್ ಬ್ಯಾರೆನ್‌ ಐಲೆಂಡ್‌
  • ಫ್ಲಿಂಡರ್ಸ್ ಐಲೆಂಡ್‌
  • ಹೊಗನ್ ಐಲೆಂಡ್‌
  • ಕೆಂಟ್‌ ಗ್ರೂಪ್‌
  • ಕಿಂಗ್‌ ಐಲೆಂಡ್‌
  • ಮಾಟ್ಸುಯ್ಕರ್‌ ಐಲೆಂಡ್ಸ್‌
  • ಮೆಕ್ವಾರಿ ಐಲೆಂಡ್‌
  • ಮ್ಯಾರಿಯಾ ಐಲೆಂಡ್‌
  • ರೌಂಡ್‌ ಐಲೆಂಡ್‌
  • ಷೌಟೆನ್‌ ಐಲೆಂಡ್‌
  • ಸ್ಮೂತ್‌ ಐಲೆಂಡ್‌ (ಟ್ಯಾಸ್ಮೆನಿಯಾ)
style="vertical-align:top; width:200px; font-size:90%;" ಗಮನಾರ್ಹ ಸೇತುವೆಗಳು: ಕಡಲತೀರಗಳು:
  • ಬೊವೆನ್‌ ಬ್ರಿಡ್ಜ್‌
  • ಬ್ಯಾಟ್ಮನ್‌ ಬ್ರಿಡ್ಜ್‌
  • ಬ್ರಿಡ್ಜ್‌ವಾಟರ್‌ ಬ್ರಿಡ್ಜ್‌
  • ರಾಸ್‌ ಬ್ರಿಡ್ಜ್‌
  • ರಿಚ್ಮಂಡ್‌ ಬ್ರಿಡ್ಜ್‌
  • ಸೊರೆಲ್‌ ಕಾಸ್ವೇ
  • ಟ್ಯಾಸ್ಮೆನ್‌ ಬ್ರಿಡ್ಜ್‌
style="vertical-align:top; width:200px; font-size:90%;" ಪ್ರಮುಖ ಹೆದ್ದಾರಿಗಳು:
  • ಆರ್ಥರ್‌ ಹೈವೇ
  • ಬಾಸ್‌ ಹೈವೇ
  • ಬ್ರೂಕರ್‌ ಹೈವೇ
  • ಈಸ್ಟ್‌ ಟಮರ್‌ ಹೈವೇ
  • ಎಸ್ಕ್ ಹೈವೇ
  • ಹುವೊನ್‌ ಹೈವೇ
  • ಲೇಕ್‌ ಹೈವೇ
  • ಲಯೆಲ್‌ ಹೈವೇ
  • ಮಿಡ್ಲೆಂಡ್‌ ಹೈವೇ
  • ಮರ್ಚಿಸನ್‌ ಹೈವೇ
  • ಟ್ಯಾಸ್ಮೆನ್ ಹೈವೇ
  • ವೆಸ್ಟ್‌ ಟಮರ್‌ ಹೈವೇ
  • ಝೀಹನ್‌ ಹೈವೇ
style="vertical-align:top; width:200px; font-size:90%;" ನದಿಗಳು
  • ಆರ್ಥರ್‌ ನದಿ
  • ಡರ್ವೆಂಟ್ ನದಿ
  • ಫ್ರ್ಯಾಂಕ್ಲಿನ್‌ ನದಿ
  • ಗೊರ್ಡಾನ್ ನದಿ
  • ಹೆಂಟಿ ನದಿ
  • ಹುವೊನ್‌ ನದಿ
  • ಕಿಂಗ್‌ ನದಿ
  • ಲೆವೆನ್‌ ನದಿ
  • ಮೀಂಡರ್‌ ನದಿ
  • ಮರ್ಸೀ ನದಿ
  • ನಾರ್ತ್‌ ಎಸ್ಕ್‌ ನದಿ
  • ಪೈಮನ್‌ ನದಿ
  • ಪಿಕ್ಟನ್‌ ನದಿ
  • ಕ್ವೀನ್‌ ನದಿ
  • ಸ್ಯಾವೇಜ್‌ ನದಿ
  • ಸೌತ್‌ ಎಸ್ಕ್‌ ನದಿ
  • ಸ್ಟಿಕ್ಸ್‌ ನದಿ
  • ಟಮರ್‌ ನದಿ
style="vertical-align:top; width:200px; font-size:90%;" ಪರ್ವತಗಳು: ವಲಯಗಳು:
  • ಬೆನ್‌ ಲೊಮಂಡ್‌
  • ಕ್ರೇಡ್ಲ್‌ ಪರ್ವತ
  • ಫೆಡರೇಷನ್‌ ಪೀಕ್‌
  • ಮೌಂಟ್ ಫೀಲ್ಡ್‌
  • ಫ್ರೆಂಚ್ಮನ್ಸ್‌ ಕ್ಯಾಪ್‌
  • ಗ್ರೇಟ್‌ ವೆಸ್ಟರ್ನ್‌ ಟಯರ್ಸ್‌
  • ಮೌಂಟ್ ಒಸಾ
  • ಮೌಂಟ್‌ ವೆಲಿಂಗ್ಟನ್‌
  • ವೆಸ್ಟ್‌ ಕೋಸ್ಟ್‌ ರೇಂಜ್‌

ಪ್ರಸಿದ್ಧ ಟ್ಯಾಸ್ಮೆನಿಯನ್ನರು

[ಬದಲಾಯಿಸಿ]

ಟ್ಯಾಸ್ಮೆನಿಯಾದ ಗಣ್ಯರಲ್ಲಿ ಇವರೆಲ್ಲರೂ ಸೇರಿದ್ದಾರೆ:

  • ಡೆನ್ಮಾರ್ಕ್‌ನ ಕ್ರೌನ್‌ ಪ್ರಿನ್ಸೆಸ್‌ ಮೇರಿ (ಮೇರಿ ಡೊನಾಲ್ಡ್ಸನ್‌)
  • ಜೊಸೆಫ್‌ ಲಯನ್ಸ್‌, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ
  • ಜೊಸೆಫ್‌ ಲಯನ್ಸ್‌ರ ಪತ್ನಿ ಎನಿಡ್‌ ಲಯನ್ಸ್‌ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌ನ ಪ್ರಥಮ ಸದಸ್ಯೆ
  • ಎಲಿಜಬೆತ್‌ ಬ್ಲ್ಯಾಕ್ಬರ್ನ್‌, ನೊಬೆಲ್‌ ಪ್ರಶಸ್ತಿ ಗಳಿಸಿದ ಮೊದಲ ಆಸ್ಟ್ರೇಲಿಯನ್‌ ಮಹಿಳೆ
  • ಗ್ರಂಥಕರ್ತ ರಿಚರ್ಡ್‌ ಫ್ಲ್ಯಾನಗನ್‌
  • ಗ್ರಂಥಕರ್ತ ಕ್ರಿಸ್ಟೊಫರ್‌ ಕೊಚ್‌
  • ನಟ ಎರೊಲ್‌ ಫ್ಲಿನ್‌
  • ನಟ ಸೈಮನ್‌ ಬೇಕರ್‌, ದಿ ಮೆಂಟಲಿಸ್ಟ್‌ ಚಲನಚಿತ್ರದಲ್ಲಿ ನಟಿಸಿದಾತ
  • ನಟಿ ರಾಚೆಲ್‌ ಟೇಯ್ಲರ್‌
  • ನೃತ್ಯ ಕಲಾವಿದ ಮತ್ತು ನೃತ್ಯ ಸಂಯೋಜಕ ಗ್ರ್ಯೇಮ್‌ ಮರ್ಫಿ
  • ಸಂಯೋಜಕ ಪೀಟರ್‌ ಸ್ಕಲ್ಥಾರ್ಪ್‌
  • ಬ್ರಿಸ್ಬೆನ್‌ನ ಆಂಗ್ಲಿಕನ್‌ ಪ್ರಧಾನ ಬಿಷಪ್‌ ಹಾಗೂ ಆಸ್ಟ್ರೇಲಿಯಾದ ಪ್ರಧಾನ (ಪ್ರೈಮೇಟ್‌) ಬಿಷಪ್‌ ಫಿಲಿಪ್‌ ಅಸ್ಪಿನಾಲ್‌


  • ಮರಕಡಿಯುವವ ವಿಶ್ವ ಚಾಂಪಿಯನ್‌ ಡೇವಿಡ್‌ ಫೊಸ್ಟರ್‌
  • ಕ್ರಿಕೆಟ್‌ ಆಟಗಾರ ರಿಕಿ ಪಾಂಟಿಂಗ್‌
  • ಆಸ್ಟ್ರೇಲಿಯನ್‌ ಕ್ರಿಕೆಟ್‌ ಆಟಗಾರ ಡೇವಿಡ್‌ ಬೂನ್‌
  • ಟ್ರುಗನಿನಿ, ಜೀವಂತ ಕಟ್ಟಕಡೆಯ ಬುಡಕಟ್ಟು ಟ್ಯಾಸ್ಮೆನಿಯನ್‌ ಮೂಲನಿವಾಸಿ
  • ವಿ8 ಸೂಪರ್ಕಾರ್‌ ಚಾಲಕ ಜಾನ್‌ ಬೋವ್‌ (1995ರಲ್ಲಿ ಚಾಂಪಿಯನ್‌)


  • ವಿ8 ಸೂಪರ್ಕಾರ್‌ ಚಾಲಕ ಮಾರ್ಕೊಸ್‌ ಆಂಬ್ರೊಸ್‌ (2003-2004 ಚಾಂಪಿಯನ್‌)
  • ಎಫ್‌. ಮಥಾಯಸ್‌ ಅಲೆಕ್ಸಾಂಡರ್‌ (1869–1955) - ಅಲೆಕ್ಸಾಂಡರ್‌ ಟೆಕ್ನಿಕ್‌ನ ಜನಕ
  • ಮಿಷೆಲ್‌ ಜಿ. ಕ್ರಾಸ್ಕ್‌, ಪಿ.ಹೆಚ್‌.ಡಿ - ವೈದ್ಯಕೀಯ ಸಂಶೋಧಕ, ಗ್ರಂಥಕರ್ತ, ಚಿಕಿತ್ಸಕ ಹಾಗೂ ಪ್ರಾಧ್ಯಾಪಕ


  • ಲೆಗ್ಯಾಸಿಯ ಸಂಸ್ಥಾಪಕ ಜಾನ್‌ ಗೆಲಿಬ್ರ್ಯಾಂಡ್‌
  • ಸೈಕ್ಲಿಂಗ್‌ ಪಟು ಲೂಕ್‌ ಆಕರ್ಬಿ
  • ಸೈಕ್ಲಿಂಗ್‌ ಪಟು ರಿಚಿ ಪೊರ್ಟ್‌
  • ಡ್ರಮ್‌ ವಾದಕ ಡೇವ್ ಹೇಲಿ ಟೆಕ್ನಿಕಲ್‌ ಡೆತ್‌ ಮೆಟಲ್‌ ಸಂಗೀತ ಶೈಲಿಯ ವಾದ್ಯ ತಂಡ ಸೈಕ್ರಾಪ್ಟಿಕ್‌ ಹಾಗೂ ಬ್ಲ್ಯಾಕ್‌ ಮೆಟಲ್‌ ಸಂಗೀತ ಶೈಲಿಯ ವಾದ್ಯ ತಂಡ ರುಯಿನ್ಸ್‌ (ಮೆಟಲ್‌ ಬ್ಯಾಂಡ್‌) ಸದಸ್ಯ
  • ಬಾಬ್‌ ಕ್ಲಿಫರ್ಡ್‌ - ಇಂಕ್ಯಾಟ್‌ ಸಂಸ್ಥಾಪಕ ಮತ್ತು ಮಾಲೀಕ
  • ರುಯಿನ್ಸ್‌ (ಮೆಟಲ್‌ ಬ್ಯಾಂಡ್‌) ಸದಸ್ಯ ಹಾಗೂ ಸೀ ಸ್ಕೌಟ್ಸ್‌ (ವಾದ್ಯತಂಡ) ಮಾಜಿ ಸದಸ್ಯ ಅಲೆಕ್ಸ್‌ ಪೋಲ್‌

ಇವನ್ನೂ ಗಮನಿಸಿ

[ಬದಲಾಯಿಸಿ]
  • ಟ್ಯಾಸ್ಮೆನಿಯಾದಲ್ಲಿ ದೇಶೀಯ ಪಾಲುದಾರಿಕೆ
  • ಅವ್ರಾಮ್‌ನ ಗ್ರ್ಯಾಂಡ್‌ ಡಚಿ
  • ಟ್ಯಾಸ್ಮೆನಿಯಾದಲ್ಲಿನ ಶಾಲೆಗಳ ಪಟ್ಟಿ
  • ಟ್ಯಾಸ್ಮೆನಿಯಾದ ರಕ್ಷಿತ ಪ್ರದೇಶಗಳು
  • ಟ್ಯಾಸ್ಮೆನಿಯಾ ವಿಶ್ವವಿದ್ಯಾನಿಲಯ

ಉಲ್ಲೇಖಗಳು

[ಬದಲಾಯಿಸಿ]
  1. 5220.0 - Australian National Accounts: State Accounts, 2008-09 (Reissue), Australian Bureau of Statistics, 22 December 2009.
  2. 'ಫ್ಯಾಕ್ಟ್ಸ್‌ ಎಬೌಟ್‌ ಟ್ಯಾಸ್ಮೆನಿಯಾ' Archived 11 September 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಬ್ರ್ಯಾಂಡ್‌ Tasmania.com . 2009 ಜೂನ್ 15ರಂದು ಮರು ಸಂಪಾದಿಸಲಾಯಿತು.
  3. "Tasmania - Island of Inspiration". Archived from the original on 25 ಜನವರಿ 2008. Retrieved 31 ಡಿಸೆಂಬರ್ 2007.
  4. "Complete National Parks and Reserves Listings". Parks and Wildlife Service. 10 ನವೆಂಬರ್ 2006. Archived from the original on 10 ಡಿಸೆಂಬರ್ 2006. Retrieved 30 ನವೆಂಬರ್ 2006.
  5. 'ಸೆಲೆಕ್ಟ್‌ ಕ್ರಾನಾಲಜಿ ಆಫ್‌ ರಿನೇಮಿಂಗ್‌' ಪಾರ್ಲಿಯಮೆಂಟ್‌ ಆಫ್‌ ಟ್ಯಾಸ್ಮೆನಿಯಾ http://www.parliament.tas.gov.au/php/BecomingTasmania/BTAppend2.htm Archived 22 April 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. 2009ರ ಜೂನ್‌ 15ರಂದು ಮರುಸಂಪಾದಿಸಲಾಯಿತು.
  6. 'ಟ್ಯಾಸೀ ಜರ್ನೀಸ್‌' ಸ್ಪಿರಿಟ್‌ ಆಫ್‌ ಟ್ಯಾಸ್ಮೆನಿಯಾ Archived 13 September 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. 2009ರ ಜೂನ್‌ 24ರಂದು ಮರುಸಂಪಾದಿಸಲಾಯಿತು.
  7. "Tasmanian Aboriginal People and History". Aboriginal Art Online. Archived from the original on 9 ಏಪ್ರಿಲ್ 2011. Retrieved 29 ಮಾರ್ಚ್ 2010.
  8. ಸ್ಮಿತ್‌, ಫ್ಯಾನಿ ಕಾಚ್ರೇನ್‌ (1834 - 1905) ಆಸ್ಟ್ರೇಲಿಯನ್‌ ಡಿಕ್ಷನರಿ ಆಫ್‌ ಬಯೊಗ್ರಫಿ ಆನ್ಲೈನ್‌
  9. ದಿ ಅರ್ಲಿ ಹಿಸ್ಟರಿ ಆಫ್‌ ಟ್ಯಾಸ್ಮೆನಿಯಾ, ಆರ್‌.ಡಬ್ಲ್ಯೂ.ಜಿಬ್ಲಿನ್‌ 1928
  10. "ಕನ್ವಿಕ್ಟ್ಸ್‌ ಅಂಡ್‌ ದಿ ಬ್ರಿಟಿಷ್‌ ಕಾಲೊನಿಸ್‌ ಇನ್‌ ಆಸ್ಟ್ರೇಲಿಯಾ Archived 12 October 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.". Culture.gov.au.
  11. ಉಲ್ಲೇಖ ದೋಷ: Invalid <ref> tag; no text was provided for refs named height
  12. 'ಮೌಂಟ್‌ ಆಸ್ಸಾ, ಟ್ಯಾಸ್ಮೆನಿಯಾ' ದಿ ಇಂಟರಾಕ್ಟಿವ್‌ ಟೂರ್‌ ಆಫ್‌ ಟ್ಯಾಸ್ಮೆನಿಯಾ http://tourtasmania.com/content.php?id=ossa 2009ರ ಜೂನ್‌ 15ರಂದು ಮರುಸಂಪಾದಿಸಲಾಯಿತು.
  13. 'ಎಬೌಟ್‌ ದಿ ಟಾರ್ಕಿನ್‌' ಟಾರ್ಕಿನ್‌: ಆಸ್ಟ್ರೇಲಿಯಾಸ್‌ ಲಾರ್ಜೆಸ್ಟ್‌ ಟೆಂಪೆರೇಟ್‌ ರೇನ್‌ ಫಾರೆಸ್ಟ್‌ Archived 26 April 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. 2009ರ ಜೂನ್‌ 15ರಂದು ಮರುಸಂಪಾದಿಸಲಾಯಿತು.
  14. 'ಸ್ಟ್ಯಾಟಿಸ್ಟಿಕ್ಸ್‌ - ಟ್ಯಾಸ್ಮೆನಿಯಾ, 2006', ಆಸ್ಟ್ರೇಲಿಯನ್‌ ಬ್ಯೂರೊ ಆಫ್‌ ಸ್ಟ್ಯಾಟಿಸ್ಟಿಕ್ಸ್‌ . 2009ರ ಜೂನ್‌ 25ರಂದು ಮರುಸಂಪಾದಿಸಲಾಯಿತು.
  15. "Climate of Launceston". Australian BOM. Archived from the original on 22 ಫೆಬ್ರವರಿ 2009. Retrieved 1 ಜನವರಿ 2009.
  16. "Tasmania Climate". World 66. Archived from the original on 30 ಏಪ್ರಿಲ್ 2009. Retrieved 1 ಜನವರಿ 2009.
  17. "Cradle Valley Climate". Australian Government Bureau of Meteorology. Retrieved 1 ಜನವರಿ 2009.
  18. "Burnie Climate". Australian Government Bureau of Meteorology. Retrieved 1 ಜನವರಿ 2009.
  19. "Scottsdale Climate". Australian Government Bureau of Meteorology. Retrieved 1 ಜನವರಿ 2009.
  20. "St Helens Climate". Australian Government Bureau of Meteorology. Retrieved 1 ಜನವರಿ 2009.
  21. "Swansea Climate". Australian Government Bureau of Meteorology. Retrieved 1 ಜನವರಿ 2009.
  22. "Climate of Tasmania". T Change. Archived from the original on 21 ಸೆಪ್ಟೆಂಬರ್ 2010. Retrieved 1 ಜನವರಿ 2009.
  23. "Midlands Drought area" (PDF). Tasmanian Government. Archived from the original (PDF) on 1 ಜನವರಿ 2016. Retrieved 1 ಜನವರಿ 2009.
  24. "Rainfall and Temperature Records: National" (PDF). Bureau of Meteorology. Retrieved 14 ನವೆಂಬರ್ 2009.
  25. "Hobart Climate Statistics". Australian Government Bureau of Meteorology. Retrieved 1 ಜನವರಿ 2009.
  26. "Launceston Climate Statistics". Australian Government Bureau of Meteorology. Retrieved 1 ಜನವರಿ 2009.
  27. "Devonport Climate Statistics". Australian Government Bureau of Meteorology. Retrieved 1 ಜನವರಿ 2009.
  28. "Strahan Climate Statistics". Australian Government Bureau of Meteorology. Retrieved 1 ಜನವರಿ 2009.
  29. [84]
  30. "Native Conifers of Western Tasmania". Department of Primary Industries and Water. 20 ಸೆಪ್ಟೆಂಬರ್ 2007. Retrieved 11 ಜನವರಿ 2008.
  31. "Australia's Biggest, Tallest and Oldest Trees". International Society of Arboriculture Australia Chapter. 2004. Archived from the original on 11 ಡಿಸೆಂಬರ್ 2007. Retrieved 11 ಜನವರಿ 2008.
  32. ೩೨.೦ ೩೨.೧ Sally Bryant and Jean Jackson Threatened Species Unit, Parks and Wildlife Service, Tasmania (1999). Tasmania's Threatened Fauna Handbook (PDF). Bryant and Jackson. pp. 190–193. ISBN 0-7246-6223-5.{{cite book}}: CS1 maint: multiple names: authors list (link)
  33. Menna Jones (1997-12). "Character displacement in Australian dasyurid carnivores: size relationships and prey size patterns". Ecology. Ecological Society of America. Retrieved 27 November 2006. {{cite journal}}: Check date values in: |date= (help)
  34. ಮರ್ಸರ್‌, ಫಿಲ್‌ (24 ಸೆಪ್ಟೆಂಬರ್‌ 2007) 'ಫಾಕ್ಸ್‌ ಇನ್ವೇಷನ್‌ ಫಿಯರ್‌ ಗ್ರಿಪ್ಸ್‌ ಟ್ಯಾಸ್ಮೆನಿಯಾ', ಬಿಬಿಸಿ ನ್ಯೂಸ್‌
  35. ಟ್ಯಾಸ್ಮೆನಿಯನ್‌ ಪಾರ್ಲಿಯಮೆಂಟ್‌ ಲೆಜಿಸ್ಲೆಟಿವ್‌ ಕೌನ್ಸಿಲ್‌ ಪಾರ್ಟ್‌ 1 - ಪುಟಗಳು 1-61 ಹ್ಯಾನ್ಸಾರ್ಟ್‌ 17 ಏಪ್ರಿಲ್‌ 2007
  36. "Foxes officially confirmed in Tasmania". Australian Broadcasting Corporation. 24 ಡಿಸೆಂಬರ್ 2009. Retrieved 2 ಏಪ್ರಿಲ್ 2010.
  37. "The Federal Police should be asked to investigate". Tasmanian Times. Retrieved 2 ಏಪ್ರಿಲ್ 2010.
  38. Davies, Lynn (2006). "Lake Pedder". Centre for Tasmanian Historical Studies. Retrieved 6 ಮಾರ್ಚ್ 2010.
  39. "ಟ್ಯಾಸ್ಮೆನಿಯಾ (ಐಲೆಂಡ್‌ ಅಂಡ್‌ ಸ್ಟೇಟ್‌, ಆಸ್ಟ್ರೇಲಿಯಾ)". ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಆನ್‌ಲೈನ್. '
  40. "Australia had baby boom in 2007: ABS". The Age. Australia. Retrieved 2 ಏಪ್ರಿಲ್ 2010.
  41. "3301.0 - Births, Australia, 2008". ABS. 19 ಜನವರಿ 2010. Retrieved 2 ಏಪ್ರಿಲ್ 2010.
  42. Vaughan, Joanna (11 ನವೆಂಬರ್ 2009). "Highest birth rate in 38 years". The Australian. Retrieved 2 ಏಪ್ರಿಲ್ 2010.
  43. ಎಬಿಸಿ ಟೆಲೆವಿಷನ್‌ ನ್ಯೂಸ್‌ (ಟ್ಯಾಸ್ಮೆನಿಯಾ), ಸಂಜೆ 7 ಗಂಟೆಗೆ. ಶುಕ್ರವಾರ, 27/1/06
  44. 'ಮೆಯಿನ್‌' Archived 8 January 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಸದರ್ನ್‌ ಷಿಪಿಂಗ್‌ ಕಂಪೆನಿ, 2009ರ ಜೂನ್‌ 15ರಂದು ಮರುಸಂಪಾದಿಸಲಾಯಿತು.
  45. 'ಡಾನ್‌ ಕೇ' Archived 1 January 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಟ್ಯಾಸ್ಮೆನಿಯನ್‌ ಕಾಂಪೊಸರ್ಸ್‌ ಕಲೆಕ್ಟಿವ್‌, 2009ರ ಜೂನ್‌ 15ರಂದು ಮರುಸಂಪಾದಿಸಲಾಯಿತು.
  46. "PSYCROPTIC: Rise Above". www.themetalforge.com. Archived from the original on 17 ಮಾರ್ಚ್ 2011. Retrieved 6 ಮಾರ್ಚ್ 2010.
  47. 'ದಿ ಪ್ಯಾರಡೈಸ್‌ ಮೊಟೆಲ್‌' last.fm http://www.last.fm/music/The+Paradise+Motel 2009ರ ಜೂನ್‌ 15ರಂದು ಮರುಸಂಪಾದಿಸಲಾಯಿತು.
  48. "Beathoven and The Innocents - Official Web site". The Innocents. Archived from the original on 20 ಮೇ 2014. Retrieved 2 ಏಪ್ರಿಲ್ 2010.

ಮುಂದಿನ ಓದಿಗಾಗಿ

[ಬದಲಾಯಿಸಿ]
  • ಅಲೆಕ್ಸಾಂಡರ್, ಅಲಿಸನ್‌ (ಸಂಪಾದಕರು) (2005) ದಿ ಕಂಪ್ಯಾನಿಯನ್ ಟು ಟ್ಯಾಸ್ಮೆನಿಯನ್‌ ಹಿಸ್ಟರಿ ಸೆಂಟರ್‌ ಫಾರ್‌ ಟ್ಯಾಸ್ಮೆನಿಯನ್‌ ಹಿಸ್ಟರಿಕಲ್‌ ಸ್ಟಡೀಸ್‌, ಟ್ಯಾಸ್ಮೆನಿಯಾ, ಹೋಬಾರ್ಟ್‌. ISBN 1-932714-12-X
  • ರಾಬ್ಸನ್‌, ಎಲ್.ಎಲ್‌. (1983) ಎ ಹಿಸ್ಟರಿ ಆಫ್‌ ಟ್ಯಾಸ್ಮೆನಿಯಾ. ವಾಲ್ಯೂಮ್ I. ವಾನ್‌ ಡೀಮೆನ್ಸ್‌ ಲ್ಯಾಂಡ್‌ ಫ್ರಮ್‌ ದಿ ಅರ್ಲಿಯೆಸ್ಟ್‌ ಟೈಮ್ಸ್‌ ಟು 1855 ಮೆಲ್ಬೊರ್ನ್‌, ಆಕ್ಸ್‌ಫರ್ಡ್‌ ಯುನಿವರ್ಸಿಟಿ ಪ್ರೆಸ್‌.
ISBN 0-9771991-1-8.
  • ರಾಬ್ಸನ್‌, ಎಲ್‌.ಎಲ್‌. (1991) ಎ ಹಿಸ್ಟರಿ ಆಫ್‌ ಟ್ಯಾಸ್ಮೆನಿಯಾ. ವಾಲ್ಯೂಮ್‌ II. ಕಾಲೊನಿ ಅಂಡ್‌ ಸ್ಟೇಟ್‌ ಫ್ರಮ್‌ 1856 ಟು ದಿ 1980ಸ್‌ Melbourne, Oxford University Press.
ISBN 0-9771991-1-8.

ಬಾಹ್ಯ ಕೊಂಡಿಗಳು

[ಬದಲಾಯಿಸಿ]