ವಿಷಯಕ್ಕೆ ಹೋಗು

ಟಿ ಜಿ ಶ್ರೀನಿಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಿ.ಜಿ.ಶ್ರೀನಿಧಿ
ಜನನ
ಶ್ರೀನಿಧಿ
ರಾಷ್ಟ್ರೀಯತೆಭಾರತೀಯ
ಶಿಕ್ಷಣ ಸಂಸ್ಥೆಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಬಿ.ಇ. ಪದವಿ; ಬಿಟ್ಸ್ ಪಿಲಾನಿಯಿಂದ ಎಂ.ಎಸ್.ಸ್ನಾತಕೋತ್ತರ ಪದವಿ
ವೃತ್ತಿಸಾಫ್ಟ್ವೇರ್ ತಂತ್ರಜ್ಞ
ಗಮನಾರ್ಹ ಕೆಲಸಗಳುಕಂಪ್ಯೂಟರ್ ತಂತ್ರಾಂಶ ತಜ್ಞ, ಮಾಹಿತಿ ತಂತ್ರಜ್ಞಾನ ಬರವಣಿಗೆ
ಜಾಲತಾಣwww.srinidhi.net.in

ಟಿ.ಜಿ.ಶ್ರೀನಿಧಿ ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತು ಬರೆಯುತ್ತಿರುವ ಲೇಖಕರು ಮತ್ತು ಪತ್ರಿಕಾ ಅಂಕಣಕಾರರು. ವಿಜ್ಞಾನ - ತಂತ್ರಜ್ಞಾನ ಸಂವಹನಕ್ಕೆ ಮೀಸಲಾದ 'ಇಜ್ಞಾನ ಡಾಟ್ ಕಾಮ್' ಎಂಬ ಜಾಲತಾಣವನ್ನು ನಡೆಸುತ್ತಿದ್ದಾರೆ.

ಶಿಕ್ಷಣ ಮತ್ತು ವೃತ್ತಿಜೀವನ

[ಬದಲಾಯಿಸಿ]

ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಬಿ.ಇ. ಪದವೀಧರರಾದ ಶ್ರೀನಿಧಿ ಬಿಟ್ಸ್ ಪಿಲಾನಿಯಿಂದ 'ಸಾಫ್ಟ್‌ವೇರ್ ಸಿಸ್ಟಂಸ್' ವಿಷಯದಲ್ಲಿ ಎಂ.ಎಸ್. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುವ ಶ್ರೀನಿಧಿ ಪ್ರಸ್ತುತ ಬೆಂಗಳೂರಿನ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಬರೆವಣಿಗೆ, ಪ್ರವೃತ್ತಿಗಳು

[ಬದಲಾಯಿಸಿ]
  • ವಿಜ್ಞಾನ-ತಂತ್ರಜ್ಞಾನ ವಿಷಯಗಳ ಲೇಖನಗಳು, ಅಂಕಣಬರಹಗಳು ಕರ್ನಾಟಕದ ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಅವರು ಈವರೆಗೆ (ಇಸವಿ:೨೦೧೮) ೧೦೦೦ಕ್ಕೂ ಹೆಚ್ಚಿನ ಲೇಖನ ಹಾಗೂ ೧೫ ಪುಸ್ತಕಗಳನ್ನು ಬರೆದಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನಕ್ಕೆ ಮೀಸಲಾದ ಕನ್ನಡ ಜಾಲತಾಣ 'ಇಜ್ಞಾನ ಡಾಟ್ ಕಾಮ್' ರೂಪಿಸಿ ೨೦೦೭ರಿಂದ ಅದನ್ನು ನಿರಂತರವಾಗಿ ನಿರ್ವಹಿಸುತ್ತಿದ್ದಾರೆ. ಅವರು ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಯೂ ಹೌದು.
  • ಕರ್ನಾಟಕ ಸರಕಾರದ 'ಕಣಜ' ಅಂತರಜಾಲ ಜ್ಞಾನಕೋಶದ Archived 2013-04-12 ವೇಬ್ಯಾಕ್ ಮೆಷಿನ್ ನಲ್ಲಿ. ಸಂಪಾದಕೀಯ ಸಮಾಲೋಚಕರಾಗಿ ಸೇವೆಸಲ್ಲಿಸುತ್ತಿರುವ ಶ್ರೀನಿಧಿ ಈ ಹಿಂದೆ ಹಂಪಿ ಕನ್ನಡ ವಿವಿಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಡಿಪ್ಲೊಮಾ ಅಧ್ಯಯನ ಮಂಡಳಿ ಸದಸ್ಯರಾಗಿಯೂ ಕೆಲಸಮಾಡಿದ್ದರು. ಇಂಡಿಯಾ ಇಂಟರ್‌ನ್ಯಾಶನಲ್ ಸೈನ್ಸ್ ಫೆಸ್ಟಿವಲ್ - ಲಖನೌ (೨೦೧೮), ಆಳ್ವಾಸ್ ನುಡಿಸಿರಿ - ಮೂಡುಬಿದರೆ (೨೦೧೬), ಫ್ಯುಯೆಲ್ ಜಿಐಎಲ್‌ಟಿ ಕಾನ್‌ಫರೆನ್ಸ್ - ನವದೆಹಲಿ (೨೦೧೬), ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ - ಗಂಗಾವತಿ (೨೦೧೧) ಸೇರಿದಂತೆ ಹಲವು ವೇದಿಕೆಗಳಲ್ಲಿ ವಿಚಾರ ಮಂಡನೆ ಮಾಡಿದ್ದಾರೆ ಮತ್ತು ಅನೇಕ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.
  • 'ವಿಜ್ಞಾನ - ತಂತ್ರಜ್ಞಾನ' (ಕನ್ನಡ ಸಾಹಿತ್ಯ ಪರಿಷತ್ತು), 'ವಿಜ್ಞಾನ ಗಂಗೆಯ ಬಿಂದುಸಾರ' (ಕನ್ನಡ ಮತ್ತು ಸಂಸ್ಕೃತಿ ಇಲಾಖೆ), 'ವಿಜ್ಞಾನ ಸಾಹಿತ್ಯ ೨೦೦೭', 'ವಿಜ್ಞಾನ ಸಾಹಿತ್ಯ ೨೦೧೨' (ಕರ್ನಾಟಕ ಸಾಹಿತ್ಯ ಅಕಾಡೆಮಿ), 'ಕನ್ನಡದಲ್ಲಿ ವಿಜ್ಞಾನ ಸಂವಹನೆ' (ಉದಯಭಾನು ಕಲಾಸಂಘ) ಮುಂತಾದ ಸಂಕಲನಗಳಲ್ಲಿ ಶ್ರೀನಿಧಿಯವರ ಲೇಖನ, ಪ್ರಬಂಧಗಳು ಪ್ರಕಟವಾಗಿವೆ. ಬೆಂಗಳೂರು ವಿವಿಯ ಬಿಸಿಎ ಪದವಿ ತರಗತಿಗಳ ಪಠ್ಯದಲ್ಲೂ (೨೦೧೪-೧೭) ಶ್ರೀನಿಧಿಯವರ ಲೇಖನಗಳನ್ನು ಸೇರಿಸಿಕೊಳ್ಳಲಾಗಿದೆ.

ಪುಸ್ತಕಗಳು

[ಬದಲಾಯಿಸಿ]

ಅಂಕಣಗಳು

[ಬದಲಾಯಿಸಿ]
  • ವೆಬ್ ವಿಹಾರ-ಸೂರ್ಯೋದಯ ದಿನಪತ್ರಿಕೆಯಲ್ಲಿ
  • ಬದುಕು ಮತ್ತು ವಿಜ್ಞಾನ-ಉಷಾಕಿರಣ 'ವಿದ್ಯಾರ್ಥಿ ಸಂಗಾತಿ'ಯಲ್ಲಿ
  • ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಾವಕಾಶಗಳ ಬಗ್ಗೆ - ವಿಜಯ ಕರ್ನಾಟಕ 'ಉದ್ಯೋಗ ವಿಜಯ'ದಲ್ಲಿ
  • ವಿಜ್ಞಾಪನೆ-ಉದಯವಾಣಿ ದಿನಪತ್ರಿಕೆಯಲ್ಲಿ
  • ಸ್ವ-ತಂತ್ರ-ಉದಯವಾಣಿ ದಿನಪತ್ರಿಕೆಯಲ್ಲಿ
  • ಡಿಜಿಟಲ್ ಡೈರಿ-ಉದಯವಾಣಿ ದಿನಪತ್ರಿಕೆಯಲ್ಲಿ
  • ಯಾವುದನ್ ಕೊಳ್ಳಲಿ?-ವಿಜಯವಾಣಿ ದಿನಪತ್ರಿಕೆಯಲ್ಲಿ
  • ಈ ಹೊತ್ತು E ಲೋಕ, ವಿಜಯವಾಣಿ ದಿನಪತ್ರಿಕೆಯಲ್ಲಿ
  • E-ಸಮಯ, ತುಷಾರ ಮಾಸಪತ್ರಿಕೆಯಲ್ಲಿ
  • e ಜ್ಞಾನ - ವಿಜಯವಾಣಿ ದಿನಪತ್ರಿಕೆಯಲ್ಲಿ ದೈನಂದಿನ ಅಂಕಣ
  • ಟೆಕ್ ಲೋಕ, ವಿಜಯವಾಣಿ ದಿನಪತ್ರಿಕೆಯಲ್ಲಿ ಸಾಪ್ತಾಹಿಕ ಅಂಕಣ

ಪ್ರಶಸ್ತಿ ಸನ್ಮಾನಗಳು

[ಬದಲಾಯಿಸಿ]
  • ೨೦೧೧ರಲ್ಲಿ ಪ್ರಕಟವಾದ ಕೃತಿ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು'ಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಪ್ರಶಸ್ತಿ.[]
  • ಇಂಡಿಯನ್ ಬ್ಲಾಗರ್ ಅವಾರ್ಡ್ಸ್ ೨೦೧೭ರಲ್ಲಿ ಇಜ್ಞಾನ ಡಾಟ್ ಕಾಮ್‌ಗೆ ಅತ್ಯುತ್ತಮ ಕನ್ನಡ ಬ್ಲಾಗ್ ಗೌರವ[]
  • ವಿಜಯ ಕರ್ನಾಟಕ ಪ್ರಕಟಿಸಿದ ೨೦೧೮ರ 'ಯುವ ಹವಾ - ಟಾಪ್ ೧೦ ಕನ್ನಡಿಗರು' ಪಟ್ಟಿಯಲ್ಲಿ ಸ್ಥಾನ[]

ಉಲ್ಲೇಖಗಳು

[ಬದಲಾಯಿಸಿ]
  1. 'ಅವಧಿ ಇ-ಪತ್ರಿಕೆ', ಟಿ.ಜಿ.ಶ್ರೀನಿಧಿಯವರ ಹೊಸಪುಸ್ತಕ
  2. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ 2011-12 ವಾರ್ಷಿಕ ವರದಿ, ಪುಟ ೯[ಶಾಶ್ವತವಾಗಿ ಮಡಿದ ಕೊಂಡಿ], kstacademy.org
  3. https://www.indiblogger.in/iba/2017/winners/regional-languages
  4. https://vijaykarnataka.indiatimes.com/edit-oped/columns/vk-top-ten-future-leaders-of-karnataka/articleshow/67326941.cms

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]