ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು

ವಿಕಿಪೀಡಿಯ ಇಂದ
Jump to navigation Jump to search
ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು
Tinnalaagada biskattu nungalaarada tablettu.jpg
ಲೇಖಕರುಟಿ ಜಿ ಶ್ರೀನಿಧಿ
ದೇಶಭಾರತ
ಭಾಷೆಕನ್ನಡ
ವಿಷಯಮಾಹಿತಿ ತಂತ್ರಜ್ಞಾನ ಕ್ಷೇತ್ರದ ಆಗುಹೋಗುಗಳು
ಪ್ರಕಾರಸಂಗ್ರಹ
ಪ್ರಕಾಶಕರುಆಕೃತಿ ಪುಸ್ತಕ ಮತ್ತು ಇಜ್ಞಾನ
ಪ್ರಕಟವಾದ ದಿನಾಂಕ
ನವೆಂಬರ್ ೬, ೨೦೧೧
ಪುಟಗಳು120
ಐಎಸ್‍ಬಿಎನ್9788191036565

ಯುವಬರಹಗಾರ, ಅಂಕಣಕಾರ ಟಿ ಜಿ ಶ್ರೀನಿಧಿಯವರ ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು ಪುಸ್ತಕ ಕನ್ನಡದ ತಂತ್ರಜ್ಞಾನ ಸಾಹಿತ್ಯಕ್ಕೊಂದು ವಿಶಿಷ್ಟ ಸೇರ್ಪಡೆ. ಈ ಪುಸ್ತಕಕ್ಕಾಗಿ ಟಿ. ಜಿ. ಶ್ರೀನಿಧಿಯವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಪ್ರಶಸ್ತಿ (೨೦೧೧) ದೊರೆತಿದೆ.

ಪುಸ್ತಕದಲ್ಲಿ ಏನಿದೆ?[ಬದಲಾಯಿಸಿ]

ಈ ಪುಸ್ತಕ ಕಂಪ್ಯೂಟರ್, ಇಂಟರ್ನೆಟ್ ಮುಂತಾದ ತಂತ್ರಜ್ಞಾನ ಸಂಬಂಧಿತ ಬರಹಗಳ ಸಂಗ್ರಹ. ಇದರಲ್ಲಿ ಕಂಪ್ಯೂಟರ್ ಮತ್ತು ಅಂತರಜಾಲದ ವಿಷಯಗಳ ಬಗ್ಗೆ, ಇತ್ತೀಚಿನ ದಿನಗಳಲ್ಲಿ ಬಂದಿರುವ, ಬರುತ್ತಿರುವ ಹೊಸ ತಂತ್ರಜ್ಞಾನಗಳ ಬಗ್ಗೆ ಬರಹಗಳಿವೆ. ಜನರಿಗೆ, ವಿದ್ಯಾರ್ಥಿಗಳಿಗೆ ಈ ವಿಷಯಗಳನ್ನು ತಿಳಿದುಕೊಳ್ಳಲು ಸುಲಭವಾಗುವಂತೆ ಕಾರ್ಟೂನ್ ಚಿತ್ರಗಳನ್ನು ಬಳಸಲಾಗಿದೆ. ಬಿಟ್ ಬೈಟ್ ಲೆಕ್ಕದಿಂದ ಹಿಡಿದು ಕ್ಲೌಡ್ ಕಂಪ್ಯೂಟಿಂಗ್ ವರೆಗೂ ಕುತೂಹಲಕಾರಿ ವಿಷಯಗಳಿವೆ. ದಿನನಿತ್ಯದ ಎಲ್ಲ ಸೇವೆಗಳನ್ನೂ, ವ್ಯವಹಾರಗಳನ್ನೂ ಅಂತರಜಾಲದ ಮೂಲಕ ನಿರ್ವಹಿಸುವ ಸೌಲಭ್ಯ ಬರುತ್ತಿರುವ ಈ ದಿನಗಳಲ್ಲಿ ಈ ಪುಸ್ತಕ ಎಲ್ಲರಿಗೂ ಅಂತರಜಾಲಾಡಲು, ಕಂಪ್ಯೂಟರ್, ಗ್ಯಾಡ್ಜೆಟ್ ಗಳನ್ನು ಧೈರ್ಯವಾಗಿ, ಸುರಕ್ಷಿತವಾಗಿ ಬಳಸಲು ಪ್ರೇರೇಪಿಸಿಸುವಂತಿದೆ.

ಪುಸ್ತಕ ವಿಮರ್ಶೆ[ಬದಲಾಯಿಸಿ]

"ಇಂಟರ್‌ನೆಟ್ ಬಳಕೆ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದೆ. ನಗರದ ಚೌಕಟ್ಟನ್ನು ದಾಟಿ ತಾಲ್ಲೂಕು ಕೇಂದ್ರಗಳಲ್ಲೂ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಆದರೆ, ಅದರ ಒಳಸುಳಿಗಳು ಹಾಗೂ ಅದು ನಿರಂತರವಾಗಿ ಒಡ್ಡುವ ಸವಾಲುಗಳ ಅರಿವು ಅನೇಕರಿಗೆ ಇರುವುದಿಲ್ಲ. ಟಿ.ಜಿ. ಶ್ರೀನಿಧಿ ಬರೆದಿರುವ ಪುಸ್ತಕ ಈ ಹಿನ್ನೆಲೆಯಲ್ಲಿ ತುಂಬಾ ಮುಖ್ಯವಾದದ್ದು. ಇಂಟರ್‌ನೆಟ್ ಉಪಯೋಗಿಸುವ ಕನ್ನಡಿಗರೆಲ್ಲಾ ಓದಲೇಬೇಕಾದ ಪುಸ್ತಕ ಎಂಬ ಗುಣವನ್ನು ಅವರು ಇಡೀ ಪುಸ್ತಕಕ್ಕೆ ತುಂಬಿದ್ದಾರೆ.

ಇಂಟರ್‌ನೆಟ್‌ಗೆ ಸಂಬಂಧಿಸಿದ ಬಹುತೇಕ ವಿಷಯಗಳ ಕುರಿತ ಅರಿವನ್ನು ಚಕ್ಕಳ ಮಕ್ಕಳ ಹಾಕಿ ಹೇಳುವ ರೀತಿಯಲ್ಲಿ ಶ್ರೀನಿಧಿ ಬರೆದಿದ್ದಾರೆ. ಬರವಣಿಗೆ ಸರಳವಾಗಿದ್ದೂ ಲವಲವಿಕೆ ಮುಕ್ಕಾಗಿಲ್ಲ. ಪಾಂಡಿತ್ಯ ಪ್ರದರ್ಶನವಿಲ್ಲದೆ, ಭಾಷೆಯ ಭಾರವನ್ನು ಹೇರದೆ ಸರಳವಾಗಿ ಸಂಕೀರ್ಣ ವಿಷಯಗಳನ್ನು ಶ್ರೀನಿಧಿ ದಾಟಿಸಿದ್ದಾರೆ."

- ಜನವರಿ ೧೫, ೨೦೧೨ರ ಪ್ರಜಾವಾಣಿಯಲ್ಲಿ ಪ್ರಕಟವಾದ ವಿಮರ್ಶೆಯಿಂದ

ಪ್ರಕಾಶಕರು[ಬದಲಾಯಿಸಿ]

ಇಜ್ಞಾನ ಡಾಟ್‌ಕಾಂ ಮತ್ತು ಆಕೃತಿ ಪುಸ್ತಕದ ಜಂಟಿ ಸಹಯೋಗದೊಂದಿಗೆ ಈ ಪುಸ್ತಕ ಪ್ರಕಟವಾಗಿದೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]