ಟಿ.ಎನ್.ಸೀತಾರಾಂ
ಗೋಚರ
(ಟಿ ಎನ್ ಸೀತಾರಾಂ ಇಂದ ಪುನರ್ನಿರ್ದೇಶಿತ)
ಟಿ ಎನ್ ಸೀತಾರಾಂ [೧] ಎಂದು ಪ್ರಸಿದ್ಧರಾಗಿರುವ ಬಹುಮುಖ ವ್ಯಕ್ತಿತ್ವದ ಕಲಾವಿದನ ಮನೆಯ ಹೆಸರು ತಳಗವಾರ ನಾರಾಯಣರಾವ್ ಸೀತಾರಾಂ ಎಂದು. (ಡಿಸೆಂಬರ್, ೦೬, ೧೯೪೮) ಇವರ ಹುಟ್ಟೂರು ದೊಡ್ಡಬಳ್ಳಾಪುರ ತಾಲ್ಲೂಕಿನ ತಳಗವಾರ. ಸಮಾಜವಾದಿ ಸಿದ್ದಾಂತದಲ್ಲಿ ನಂಬಿಕೆ ಇರಿಸಿದ್ದರು. ಇವರು ಕನ್ನಡದ ಜನಪ್ರಿಯ ನಿರ್ದೇಶಕರಲ್ಲೊಬ್ಬರು. ಇವರ ನಿರ್ದೇಶನದ ಕಿರುತೆರೆ ಧರವಹಿಗಳಾದ ಮಾಯಾಮೃಗ, ಮನ್ವಂತರ, ಮುಕ್ತ ಕನ್ನಡಿಗರಲ್ಲಿ ಬಹಳ ಜನಪ್ರಿಯವಾಗಿದೆ. ಇವರು ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಕಲಾವಿದರು.
ಇವರ ನಿರ್ದೇಶನದ ಮೊದಲ ಕನ್ನಡ ಚಲನಚಿತ್ರ: ಮತದಾನ
ಟಿ.ಎನ್. ಸೀತಾರಾಂ ಅವರು ಲಂಕೇಶ್ ಪತ್ರಿಕೆ ವಾರಪತ್ರಿಕೆಯಲ್ಲಿ ಬರಹಗಾರರಾಗಿದ್ದರು. ನಮ್ಮೊಳಗೊಬ್ಬ ನಾಜೂಕಯ್ಯ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.
ಕಾಫಿ ತೋಟ (ನಿರ್ದೇಶನ)
ಚಲನಚಿತ್ರಗಳು
[ಬದಲಾಯಿಸಿ]- ಕ್ರೌರ್ಯ (ಕಥೆ, ಚಿತ್ರಕಥೆ)
- ಧರಣಿಮಂಡಲ ಮಧ್ಯದೊಳಗೆ (ಅಭಿನಯ)
- ಮತದಾನ (೨೦೦೧) (ನಿರ್ದೇಶನ)
- ಮೀರಾ ಮಾಧವ ರಾಘವ (೨೦೦೭) (ನಿರ್ದೇಶನ)
- ಪಲ್ಲವಿ (ನಾಯಕ ನಟನಾಗಿ)
ಕಿರುತೆರೆ ಧಾರಾವಾಹಿಗಳು
[ಬದಲಾಯಿಸಿ]- ಸಂಕಲನ
- ಮಾಯಾಮೃಗ
- ಮನ್ವಂತರ
- ಮುಕ್ತ
- ಮಳೆಬಿಲ್ಲು
- ಕಾಲೇಜು ರಂಗ
- ಮುಖಾಮುಖಿ
- ನಾವೆಲ್ಲರು ಒಂದೇ
- ಪತ್ತೇದಾರಿ ಪ್ರಭಾಕರ್
- ದಶಾವತಾರ
- ಜ್ವಾಲಮುಖಿ
- ಮುಕ್ತ ಮುಕ್ತ
- ಮಹಾಪರ್ವ
- ಮಗಳು ಜಾನಕಿ [೨]
ನಾಟಕಗಳು
[ಬದಲಾಯಿಸಿ]ಪ್ರಶಸ್ತಿಗಳು
[ಬದಲಾಯಿಸಿ]- ೪೮ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಇವರ ನಿರ್ದೇಶನದ ಮತದಾನ ಚಿತ್ರಕ್ಕೆ 'ಅತ್ಯುತ್ತಮ ಪ್ರಾದೇಶಿಕ ಚಿತ್ರ' ರಾಷ್ಟ್ರಪ್ರಶಸ್ತಿ ದೊರೆತಿದೆ.
- ೨೦೦೫ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಆರ್ಯಭಟ ಪ್ರಶಸ್ತಿಗಳಲ್ಲಿ ಮುಕ್ತ ಧಾರಾವಾಹಿಯ ನಿರ್ದೇಶನಕ್ಕಾಗಿ 'ಶ್ರೇಷ್ಠ ನಿರ್ದೇಶಕ' ಪ್ರಶಸ್ತಿ.
ಉಲ್ಲೇಖಗಳು
[ಬದಲಾಯಿಸಿ]- ↑ kannada.filmibeat.com/'ಜೀವನ ಚರಿತ್ರೆ
- ↑ the hindu.com, Movies, The Lawyer saga continues-Shilpa Sebastian, July, 09, 2018
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಟಿ.ಎನ್.ಸೀತಾರಾಂ ಅವರೊಡನೆ ಸಂಪದ ತಂಡದ ಸಂವಾದ (ಪೋಡ್ಕಾಸ್ಟ್) Archived 2006-09-25 ವೇಬ್ಯಾಕ್ ಮೆಷಿನ್ ನಲ್ಲಿ.