ಟಿವಿ (ದೂರದರ್ಶನ) ಜಾಹೀರಾತುಗಳು
The examples and perspective in this article may not represent a worldwide view of the subject. (March 2010) |
ದೂರದರ್ಶನ ಪ್ರಕಟಣೆ ಅಥವಾ ದೂರದರ್ಶನ ಜಾಹೀರಾತುಗಳು , ಅನೇಕ ವೇಳೆ ಕೇವಲ ಜಾಹೀರಾತು, ಪ್ರಸ್ತಾವ, ಆಡ್ ಅಥವಾ ಆಡ್-ಫಿಲ್ಮ್ (ಇಂಡಿಯಾ)-ಇದು ಒಂದು ಸಂಸ್ಥೆಯಿಂದ ವೀಕ್ಷಕರಿಗೆ ಒಂದು ಸಂದೇಶ ವನ್ನು ರವಾನಿಸುವ ಸಲುವಾಗಿ ನಿರ್ಮಿಸಲ್ಪಟ್ಟ ಮತ್ತು ಅದಕ್ಕಾಗಿ ಹಣ ನೀಡಲ್ಪಟ್ಟ ಒಂದು ದೂರದರ್ಶನ ಕಾರ್ಯಕ್ರಮವಾಗಿದೆ. ಜಾಹೀರಾತು ನಿರ್ಮಾಣದ ಗುರು ಹ್ಯಾಡ್ಲಿಯವರ ಪ್ರಕಾರ ಜಾಹೀರಾತು ಪ್ರದರ್ಶನಕ್ಕೆ ಯರೊಬ್ಬರೂ ಕೂಡ ಎಮ್‌ಪಿಟಿ ಯ ಅಧ್ಯಯನ ಮಾಡುವ ಅವಶ್ಯಕತೆಯಿಲ್ಲ. ಜಾಹೀರಾತು ಆದಾಯವು ಹೆಚ್ಚ ಖಾಸಗಿ ಮಾಲಿಕತ್ವದಲ್ಲಿರುವ ದೂರದರ್ಶನ ಸಂಪರ್ಕಜಾಲಗಳಿಗೆ ಬಂಡವಾಳ ಹೂಡಿಕೆಗೆ ಗಣನೀಯ ಪ್ರಮಾಣದ ಆದಾಯವನ್ನು ಒದಗಿಸುತ್ತದೆ. ಪ್ರಸ್ತುತದಲ್ಲಿ ದೂರದರ್ಶನ ಪ್ರಕಟಣೆಗಳ ವ್ಯಾಪಕ ಪ್ರಮಾಣವು ಸಂಕ್ಷಿಪ್ತ ಜಾಹೀರಾತುಗಳು ಒಳಗೊಂಡಿ ರುತ್ತದೆ, ಇದು ಕೆಲವು ಸೆಕೆಂಡ್‌ಗಳಿಂದ ಹಲವಾರು ನಿಮಿಷಗಳವರೆಗೂ ಇರುತ್ತದೆ (ಅದೇ ರೀತಿಯಾಗಿ ಕಾರ್ಯಕ್ರಮದ ದೀರ್ಘತೆಯು ಇನ್‌ಫಾರ್ಮೆಷಿಯಲ್ (ಸಣ್ಣ ಡಾಕ್ಯುಮೆಂಟರಿ) ಕೂಡ ಆಗಿರುತ್ತದೆ) ಈ ರೀತಿಯ ಜಾಹೀರಾತುಗಳು ದೂರದರ್ಶನದ ಸಂಶೋಧನೆಯ ನಂತರದಿಂದ ಹಲವಾರು ವಿಧದ ಸರಕುಗಳು, ಸೇವೆಗಳು ಮತ್ತು ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಬಳಸಿಕೊಳ್ಳಲ್ಪಟ್ಟವು. ವೀಕ್ಷಕರ ಮೇಲೆ ವಾಣಿಜ್ಯ ಜಾಹೀರಾತುಗಳ ಪರಿಣಾಮವು ಯಶಸ್ವಿಯಾಗಲ್ಪಟ್ಟಿದೆ ಮತ್ತು ವ್ಯಾಪಕವಾಗಿ ಪ್ರಚಲಿತದಲ್ಲಿದೆ. ಯುನೈಟೆಡ್ ಸ್ಟೇಟ್ಸ್ ಅನ್ನು ಒಳಗೊಂಡಂತೆ ಹಲವಾರು ದೇಶಗಳಲ್ಲಿ, ದೂರದರ್ಶನ ಪ್ರಚಾರ ಜಾಹೀರಾತುಗಳು ರಾಜಕೀಯ ಪ್ರಚಾರಕ್ಕೆ ಅನಿವಾರ್ಯ ಎಂಬುದಾಗಿ ಪರಿಗಣಿಸಲ್ಪಟ್ಟಿವೆ. ಇತರ ದೇಶಗಳಲ್ಲಿ, ಅಂದರೆ ಫ್ರಾನ್ಸ್‌ನಂತಹ ದೇಶಗಳಲ್ಲಿ, ದೂರದರ್ಶನಗಳಲ್ಲಿ ರಾಜಕೀಯ ಜಾಹೀರಾತು ಪ್ರಕಟಣೆಯು ವ್ಯಾಪಕ ನಿರ್ಬಂಧವನ್ನು ವಿಧಿಸಲ್ಪಟ್ಟಿದೆ,[೧] ಮತ್ತು ನಾರ್ವೇಯಂತಹ ದೇಶಗಳು ಈ ರಾಜಕೀಯ ಪ್ರಚಾರವನ್ನು ಸಂಪೂರ್ಣವಾಗಿ ನಿಷೇಧಿಸಿವೆ.
ಇತಿಹಾಸ
[ಬದಲಾಯಿಸಿ]- ಮೊದಲ ದೂರದರ್ಶನ ಜಾಹೀರಾತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜುಲೈ ೧, ೧೯೪೧ ರಂದು ಬಿತ್ತರಿಸಲ್ಪಟ್ಟಿತು. ವಾಚ್ ತಯಾರಕ ಬುಲೋವಾ ಬ್ರೂಕ್‌ಲಿನ್ ಡಾಜರ್ಸ್ ಮತ್ತು ಫಿಲಾಡೆಲ್ಫಿಯಾ ಫಿಲೀಸ್‌ಗಳ ನಡುವೆ ಒಂದು ಬೇಸ್‌ಬಾಲ್ ಆಟಕ್ಕೂ ಮುಂಚೆ ನ್ಯೂಯಾರ್ಕ್ ಸ್ಟೇಷನ್ ಡಬ್ಲುಎನ್‌ಬಿಟಿಯಲ್ಲಿ ಬದಲಾವಣೆಗಾಗಿ $9 ಗಳನ್ನು ನೀಡಿದ್ದರು. ೨೦-ಸೆಕೆಂಡ್‌ನ ಜಾಹೀರಾತು ಯುನೈಟೆಡ್ ಸ್ಟೇಟ್ಸ್‌ನ ನಕ್ಷೆಯ ಮೇಲೆ ಇರಿಸಲ್ಪಟ್ಟ ಒಂದು ಗಡಿಯಾರದ ಚಿತ್ರವನ್ನು ಪ್ರದರ್ಶಿಸಿತು. ಜೊತೆಗೆ ಇದು "ಅಮೇರಿಕಾ ರನ್ಸ್ ಆನ್ ಬುಲೋವಾ ಟೈಮ್" ಎಂಬ ಘೋಷಣೆಯನ್ನೂ ಒಳಗೊಂಡಿತ್ತು.[೨][೩]
- ಯುಕೆಯಲ್ಲಿ ಮೊದಲ ದೂರದರ್ಶನ ಪ್ರದರ್ಶನವು ಐಟಿವಿ ಯಲ್ಲಿ ೨೧ ಸೆಪ್ಟೆಂಬರ್ ೧೯೫೫ ರಂದು ಗಿಬ್ಸ್ ಎಸ್‌ಆರ್ ಟೂತ್‌ಪೇಸ್ಟ್‌ನ ಬಗ್ಗೆ ನೀಡಿದ ಜಾಹೀರಾತಾಗಿತ್ತು. ೧೯೯೦ರ ದಶಕದ ಪ್ರಾರಂಭದವರೆಗೆ, ದೂರದರ್ಶನದಲ್ಲಿ ಜಾಹೀ ನೀಡುವಿಕೆಯು ಹೆಚ್ಚಿನ ಹೂಡಿಕೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವ ದೊಡ್ಡ ಕಂಪನಿಗಳಿಂದ ಮಾತ್ರವೇ ಸಾಧ್ಯವಿತ್ತು, ಆದರೆ ಡೆಸ್ಕ್‌ಟಾಪ್ ವೀಡಿಯೋದ ಸಂಶೋಧನೆಯು ಹಲವಾರು ಸಣ್ಣ ಮತ್ತು ಸ್ಥಳೀಯ ವಾಣಿಜ್ಯ ಕಂಪನಿಗಳಿಗೆ ಸ್ಥಳೀಯ ಕೇಬಲ್ ಟಿವಿ ಸೇವೆಗಳಲ್ಲಿ ಪ್ರದರ್ಶಿಸುವುದಕ್ಕೆ ದೂರದರ್ಶನ ಜಾಹೀರಾತುಗಳನ್ನು ನಿರ್ಮಿಸುವ ಅವಕಾಶವನ್ನು ನೀಡಿತು.
ಗುಣಲಕ್ಷಣಗಳು
[ಬದಲಾಯಿಸಿ]- ಹಲವಾರು ದೂರದರ್ಶನ ಜಾಹೀರಾತುಗಳು ಆಕರ್ಷಣೀಯ ಪ್ರಾಸಾನುಪ್ರಾಸ ಪದ್ಯಗಳು (ಹಾಡುಗಳು ಅಥವಾ ಸ್ವರ ವಿನ್ಯಾಸಗಳು) ಅಥವಾ ಆಕರ್ಷಣೀಯ ವಾಕ್ಸರಣಿಗಳು (ಘೋಷಣೆಗಳು) ಒಳಗೊಂಡಿರುತ್ತವೆ. ಅವುಗಳು ನಿರಂತರವಾದ ವಿಚಾರಗಳನ್ನು ಬೆಳೆಯುವಂತೆ ಮಾಡುತ್ತವೆ, ಅದು ಜಾಹೀರಾತು ಪ್ರಸಾರಿಸಲ್ಪಟ್ಟ ದೀರ್ಘ ಅವಧಿಯವರೆಗೆ ದೂರದರ್ಶನ ವೀಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ. ಇವುಗಳಲ್ಲಿ ಕೆಲವು ಜಾಹೀರಾತು ಪ್ರಾಸಾನುಪ್ರಾಸ ಪದ್ಯಗಳು ಅಥವಾ ಆಕರ್ಷಣೀಯ-ವಾಕ್ಸರಣಿಗಳು ಅವರ ಸ್ವಂತ ಜೀವನದ ಅನುಭವಗಳಾಗಿರಬಹುದು. ಸ್ಪಾವ್ನಿಂಗ್ ಗ್ಯಾಗ್ಸ್ ಅಥವಾ ಸಿನೆಮಾಗಳಲ್ಲಿ, ದೂರದರ್ಶನ ಕಾರ್ಯಕ್ರಮಗಳಲ್ಲಿ, ನಿಯತಕಾಲಿಕಗಳಲ್ಲಿ, ಹಾಸ್ಯ ಪತ್ರಿಕೆಗಳಲ್ಲಿ, ಅಥವಾ ಸಾಹಿತ್ಯಗಳಲ್ಲಿ ಕಂಡು ಬರುವ "ಪುನರಾವರ್ತಿತ ಗೀತಭಾಗ"ಗಳಾಗಿರಬಹುದು.
- ಈ ದೀರ್ಘ-ಅವಧಿಯವರೆಗೆ ಉಳಿಯುವ ಜಾಹೀರಾತು ಅಂಶಗಳು ಯಾರಿಗೆ ಸಂಬಂಧಿಸಿ ಪ್ರದರ್ಶಿಸಲ್ಪಟ್ಟಿವೆಯೋ ಅಲ್ಲಿಯ ಭೂಗೋಳಿಕ ಇತಿಹಾಸದ ಪಾಪ್ ಸಂಸ್ಕೃತಿಯಲ್ಲಿ ಕಂಡುಬರುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಒಂದು ಉದಾಹರಣೆಯೆಂದರೆ ಪ್ರಚಲಿತದಲ್ಲಿರುವ ವಾಕ್ಸರಣಿ, "ವಿನ್ಸ್ಟನ್ ಟೇಸ್ಟ್ಸ್ ಗುಡ್ ಲೈಕ್ ಎ ಸಿಗರೇಟ್ ಶುಡ್", ಇದು ೧೯೫೦ ರಿಂದ ೧೯೭೦ ರವರೆಗಿನಿಂದ ವಿನ್ಸ್ಟನ್ ಸಿಗರೇಟ್‌ಗಳ ಹದಿನೆಂಟು ವರ್ಷದ ಜಾಹೀರಾತು ಪ್ರಚಾರದಿಂದ ತೆಗೆದುಕೊಳ್ಳಲ್ಪಟಿದೆ. ಈ ಆಕರ್ಷಣೀಯ ಸಂಭಾಷಣೆಗಳ ಬದಲಾವಣೆಗಳು ಮತ್ತು ಇದಕ್ಕೆ ಸಂಬಂಧಿಸಿದ ನೇರ ಉಲ್ಲೇಖಗಳು ಈ ಜಾಹೀರಾತು ಅಂತ್ಯವಾದ ನಂತರವೂ ಎರಡು ದಶಕಗಳ ದೀರ್ಘ ಅವಧಿಯವರೆಗೆ ಗೋಚರವಾಗಲ್ಪಟ್ಟಿತು. ಮತ್ತೊಂದೆಂದರೆ, "ವೇರ್ ಈಸ್ ದ ಬೀಫ್?", ಅತ್ಯಂತ ಜನಪ್ರಿಯವಾದ ಇದು ವಾಲ್ಟರ್ ಮಂಡೇಲಾರಿಂದ ೧೯೮೪ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಸಿಕೊಳ್ಳಲ್ಪಟ್ಟಿತು. ಇನ್ನೂ ಒಂದು ಜನಪ್ರಿಯ ಆಕರ್ಷಣೀಯ-ಪದಗುಚ್ಛ "ಐ ಹ್ಯಾವ್ ಫಾಲನ್ ಎಂಡ್ ಕಾಂಟ್ ಗೆಟ್ ಅಪ್", ಇದು ಇದರ ಮೊದಲ ಬಳೆಕೆಯ ಇಪ್ಪತ್ತು ವರ್ಷಗಳ ನಂತರ ಈಗಲೂ ಕೂಡ ಸಾಂದರ್ಭಿಕವಾಗಿ ಕಂಡುಬರುತ್ತದೆ.
- ಕೆಲವು ಜಾಹೀರಾತು ಏಜೆನ್ಸಿಗಳ ಅಧಿಕಾರಿಗಳು ಒಂದಕ್ಕಿಂತ ಹೆಚ್ಚು ಆಕರ್ಷಣೀಯವಾದ ಘೋಷಣೆಯನ್ನು ಕಂಡುಹಿಡಿದ್ದಾರೆ, ಉದಾಹರಣೆಗೆ ಮೇರಿ ವೆಲ್ಸ್ ಲಾರೆನ್ಸ್ ಇವರು ಅಂತಹ ಉತ್ತಮವಾದ ಘೋಷಣೆಗಳ ಕರ್ತೃವಾಗಿದ್ದಾರೆ, ಅವರು ಈಗಲೂ ಕೂಡ "ರೈಸ್ ಯುವರ್ ಹ್ಯಾಂಡ್ಸ್ ಇಫ್ ಯು ಆರ್ ಶ್ಯೂರ್", "ಐ ♥ ನ್ಯೂಯಾರ್ಕ್" ಎಂಡ್ "ಟ್ರಸ್ಟ್ ದ ಮಿಡಾಸ್ ಟಚ್" ಎಂಬ ಜನಪ್ರಿಯ ಈಗಲೂ-ಬಳಸಲ್ಪಡುವ ಘೋಷಣೆಗಳ ನಿರ್ಮಾತ್ರರಾಗಿದ್ದಾರೆ.
- ಜಾಹೀರಾತು ಏಜೆನ್ಸಿಗಳು ಅನೇಕ ವೇಳೆ ತಮ್ಮ ಕ್ರಿಯಾಶೀಲ ಜಾಹೀರಾತು ಪ್ರಚಾರಗಳಲ್ಲಿ ಹಾಸ್ಯಪ್ರೃತ್ತಿಯನ್ನು ಒಂದು ಸಾಧನವಾಗಿ ಬಳಸಿಕೊಳ್ಳುತ್ತಾರೆ. ವಾಸ್ತವವಾಗಿ, ಹಲವಾರು ಮಾನಸಿಕ ಅಧ್ಯಯನಗಳು ಹಾಸ್ಯ ಪ್ರವೃತ್ತಿಯ ಪರಿಣಾಮವನ್ನು ಮತ್ತು ಜಾಹೀರಾತು ನೀಡುವಿಕೆಯನ್ನು ಶಕ್ತಿಶಾಲಿಗೊಳಿಸುವುದಕ್ಕೆ ಹಾಸ್ಯಪ್ರವೃತಿಯ ಸಂಬಂಧವನ್ನು ವಿವರಿಸುವ ಪ್ರಯತ್ನವನ್ನು ನಡೆಸಿವೆ.
- ಅನೇಕ ವೇಳೆ ಜಾಹೀರಾತುಗಳಲ್ಲಿ ಎನಿಮೇಷನ್ ಕೂಡ ಬಳಸಿಕೊಳ್ಳಲ್ಪಡುತ್ತದೆ. ಚಿತ್ರಗಳು ಕೈಯಿಂದ ಬಿಡಿಸಲ್ಪಟ್ಟ ಸಾಂಪ್ರದಾಯಿಕ ಎನಿಮೇಷನ್‌ಗಳಿಂದ ಕಂಪ್ಯೂಟರ್ ಎನಿಮೇಷನ್‌ಗಳವರೆಗೆ ಬದಲಾಗುತ್ತಿರುತ್ತವೆ. ಎನಿಮೇಷನ್ ಮಾಡಲ್ಪಟ್ಟ ಚಿತ್ರಗಳನ್ನು ಬಳಸಿಕೊಂಡು ಒಂದು ಜಾಹೀರಾತು, ನಟರಿಂದ ಅಥವಾ ಕೇವಲ ಉತ್ಪನ್ನಗಳ ಪ್ರದರ್ಶನದಿಂದ ಸಾಧಿಸುವುದಕ್ಕೆ ಅಸಾಧ್ಯವಾದ ಒಂದು ನಿರ್ದಿಷ್ಟ ನಿವೇದನೆಯನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ. ಎನಿಮೇಷನ್ ಅದಕ್ಕೆ ಸಹಾಯವನ್ನು ಒದಗಿಸುವ ವಿನ್ಯಾಸದಲ್ಲಿನ ಬದಲಾವಣೆಯಿಂದ ಜಾಹೀರಾತುಗಳನ್ನು ತಿದ್ದುವ ಪ್ರಯತ್ನವನ್ನೂ ನಡೆಸುತ್ತದೆ. ಈ ಕಾರಣಕ್ಕಾಗಿ, ಒಂದು ಎನಿಮೇಷನ್ ಮಾಡಲ್ಪಟ್ಟ ಜಾಹೀರಾತು (ಅಥವಾ ಅಂತಹ ಜಾಹೀರಾತುಗಳ ಸರಣಿಗಳು) ತುಂಬಾ ದೀರ್ಘ-ಅವಧಿಯವರೆಗೆ ನಡೆಯುವಂತವಾಗಿರಬಹುದು.
- ಕೆಲವು ದೃಷ್ಟಾಂತಗಳಲ್ಲಿ ಇದು ಹಲವಾರು ದಸಕಗಳವರೆಗೂ ಚಾಲ್ತಿಯಲ್ಲಿರಬಹುದು. ಇದರ ಪ್ರಮುಖ ಉದಾಹರಣೆಗಳೆಂದರೆ ಕೆಲೊಗ್ಸ್ ಸೀರಿಯಲ್ಸ್ (ಧಾನ್ಯಗಳು)ಗಳಿಗೆ ಜಾಹೀರಾತು ಸರಣಿಗಳು, ಸ್ಟಾರಿಂಗ್ ಸ್ನ್ಯಾಪ್, ಕ್ರ್ಯಾಕಲ್ ಮತ್ತು ಪಾಪ್ ಮತ್ತು ಟೋನಿ ದ ಟೈಗರ್. ಎನಿಮೇಷನ್ ಕೆಲವು ವೇಳೆ ವಾಸ್ತವ ನಟರ ಜೊತೆಗೆ ಸಂಯೋಜಿಸಲ್ಪಡುತ್ತವೆ. ಎನಿಮೇಷನ್ ಮಾಡಲ್ಪಟ್ಟ ಜಾಹೀರಾತುಗಳು ದೀರ್ಘ ಅವಧಿಯ ಜನಪ್ರಿಯತೆಯನ್ನು ಗಳಿಸಬಹುದು. ಯುಕೆ ಯಲ್ಲಿ (ಐಟಿವಿ [೪] ಅಥವಾ ಚಾನೆಲ್ 4 [೫] ನಲ್ಲಿ) ಅತ್ಯಂತ ಜನಪ್ರಿಯವಾದ ದೂರದರ್ಶನ ಜಾಹೀರಾತುಗಳಿಗೆ ಯಾವುದೇ ಜನಪ್ರಿಯ ಮತ ನೀಡುವಿಕೆಯಲ್ಲಿ ಯಾದಿಯಲ್ಲಿನ ಉನ್ನತ ಸ್ಥಾನಗಳು ಎನಿಮೇಷನ್‌ಗಳನ್ನು ಒಳಗೊಂಡಿರುತ್ತವೆ, ಅಂದರೆ ಕ್ಲಾಸಿಕ್ ಸ್ಮ್ಯಾಷ್ ಮತ್ತು ಕ್ರಿಯೇಚರ್ ಕಂಫರ್ಟ್ಸ್‌ನಂತಹ ಜಾಹೀರಾತುಗಳು.
- ಇತರ ದೀರ್ಘ-ಅವಧಿಯ ಜಾಹೀರಾತು ಪ್ರಚಾರಗಳು ಆಶ್ಚರ್ಯಚಕಿತಗೊಳ್ಳುವ ಮೂಲಕ ಜನರನ್ನು ಆಕರ್ಷಿಸುತ್ತದೆ ಅಥವಾ ವೀಕ್ಷಕರನ್ನು ಮೋಸಗೊಳಿಸುವ ಮೂಲಕವೂ ಆಕರ್ಷಿಸಲ್ಪಡುತ್ತವೆ. ಉದಾಹರಣೆಗೆ ಎನರ್ಜೈಸರ್ ಬನ್ನಿ ಜಾಹೀರಾತು ಸರಣಿಗಳು. ಇದು ೧೯೮೦ ರ ದಶಕದ ಕೊನೆಯ ಅವಧಿಗಳಲ್ಲಿ ಒಂದು ಸರಳ ಸಾಮ್ಯತೆಯ ಜಾಹೀರಾತಿನಂತೆ ಪ್ರಾರಂಭವಾಗಲ್ಪಟ್ಟಿತು. ಅಲ್ಲಿ ಒಂದು ಕೋಣೆಯ ತುಂಬ ಬ್ಯಾಟರಿಯಿಂದ-ನಡೆಸಲ್ಪಡುವ ಬನ್ನಿಗಳು (ಮೊಲಗಳು) ತಮ್ಮ ಡ್ರಮ್‌ಗಳನ್ನು ಪೌಂಡಿಂಗ್ ಮಾಡುವಂತೆ ತೋರಿಸಲ್ಪಟ್ಟವು. ಒಂದನ್ನು ಹೊರತುಪಡಿಸಿ ಎಲ್ಲವೂ ಎನರ್ಜೈಸರ್ (ಶಕ್ತಿಯನ್ನು ನೀಡುವ) ಬ್ಯಾಟರಿಯ ಜೊತೆಗೆ ನಿಧಾನವಾಗಿ ಕೆಳಮಟ್ತಕ್ಕೆ ಇಳಿಯಲ್ಪಟ್ಟವು.
- ಅದರ ಒಂದು ವರ್ಷದ ನಂತರ, ಈ ಮೂಲಾವಸ್ಥೆಯ ಜಾಹೀರಾತಿನ ಒಂದು ಪರಿಷ್ಕೃತ ಆವೃತ್ತಿಯು ಎನರ್ಜೈಸರ್ ಬನ್ನಿಯು ಸ್ಟೇಜ್‌ನಿಂದ ತಪ್ಪಿಸಿಕೊಂಡು ಮುಂದಕ್ಕೆ ಹೋಗುತ್ತಿರುವಂತೆ ತೋರಿಸಲ್ಪಟ್ಟಿತು (ಘೋಷಣಾಕಾರನ ಪ್ರಕಾರ, ಅವನು "ಮುಂದಕ್ಕೆ ಹೋಗುತ್ತಲೇ, ಹೋಗುತ್ತಲೇ ಮತ್ತು ಹೋಗುತ್ತಲೇ ಇರುತ್ತಾನೆ..."). ಈ ವಿಧಾನವು ಮತ್ತೊಂದು ಜಾಹೀರಾತಿನಲ್ಲಿ ಕಂಡು ಬಂದಂತೆ ಅನುಸರಿಸಲ್ಪಟ್ಟಿತು: ನಂತರದ "ಜಾಹೀರಾತು" ವಾಸ್ತವವಾಗಿ ಇತರ ಉತ್ತಮವಾಗಿ ತಿಳಿಯಲ್ಪಟ್ಟ ಜಾಹೀರಾತುಗಳ ಒಂದು ವಿಡಂಬನ ಎಂಬುದು ಘೋಷಣಾಕಾರನು "ಈಗಲೂ ಸಾಗುತ್ತಿದೆ..." ಎಂಬುದನ್ನು ಘೋಷಿಸುವುದರ ಜೊತೆಗೆ ಎನರ್ಜೈಸರ್ ಬನ್ನಿ ಆಕಸ್ಮಿಕವಾಗಿ ಸನ್ನಿವೇಶವನ್ನು ಒಳತರುವ ಪ್ರಯತ್ನವನ್ನು ನಡೆಸುವವರೆಗೂ ವೀಕ್ಷಕರು ಈ ಸತ್ಯಕ್ಕೆ ಗಮನವನ್ನು ನೀಡಿರಲಿಲ್ಲ.
- ಈ ಜಾಹೀರಾತು ಪ್ರದರ್ಶನವು ಸರಿಸುಮಾರು ಹದಿನೈದು ವರ್ಷಗಳ ಕಾಲ ಪ್ರದರ್ಶಿಸಲ್ಪಟ್ಟಿತು. ಎನರ್ಜೈಸರ್ ಬನ್ನಿ ಸರಣಿಯು ಇತರ ಜಾಹೀರಾತುಗಳ ಒಂದು ಅನುಕರಣೆಯಾಗಿತ್ತು, ಒಂದು ಕೂರ್ಸ್ ಲೈಟ್ ಬಿಯರ್ ಜಾಹೀರಾತಿನ ಮೂಲಕ, ಚಲನೆಯ ಚಿತ್ರಗಳಲ್ಲಿ, ಮತ್ತು ಗೈಕೋ ಇನ್ಷುರೆನ್ಸ್‌ನ ಮೂಲಕ ಪ್ರಸ್ತುತದ ಜಾಹೀರಾತುಗಳ ಮೂಲಕವೂ ಅನುಕರಿಸಲ್ಪಡುತ್ತಿತ್ತು.
ವಿಶ್ವದಲ್ಲಿ ಟಿವಿ ಜಾಹೀರಾತುಗಳು
[ಬದಲಾಯಿಸಿ]ಅಮೇರಿಕಾ ಸಂಯುಕ್ತ ಸಂಸ್ಥಾನ
[ಬದಲಾಯಿಸಿ]ಫ್ರೀಕ್ವೆನ್ಸಿ
[ಬದಲಾಯಿಸಿ]- ದೂರದರ್ಶನ ಜಾಹೀರಾತುಗಳು ಕಾರ್ಯಕ್ರಮದ ನಡುವೆ ಪ್ರಸಾರವಾಗುತ್ತವೆ ಆದರೆ ಮಧ್ಯಂತರದಲ್ಲೂ ಕೂಡ ಅವು ಪ್ರಸಾರ ಕಾಣುತ್ತವೆ. ಈ ರೀತಿಯ ಜಾಹೀರಾತು ಪ್ರಸಾರವನ್ನು ವೀಕ್ಷಕರ ಗಮನ ಸೆಳೆಯಲು ಪ್ರಸಾರ ಮಾಡಲಾಗುತ್ತದೆ. ಅಲ್ಲದೆ ಪ್ರಸಾರವಾಗುತ್ತಿರುವ ಕಾರ್ಯಕ್ರಮದ ವಾಹಿನಿಯನ್ನು ಬದಲಾಯಿಸದೇ ಇರಲು ಸಹಕಾರಿಯಾಗುವಂತಹ ಆಕರ್ಷಕ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತದೆ. ಕಾರ್ಯಕ್ರಮದ ಮುಂದಿನ ತುಣುಕನ್ನು ವೀಕ್ಷಿಸಲು ಕಾತರರಾಗಿರುವ ವೀಕ್ಷಕರು ಜಾಹೀರಾತನ್ನು ಗಮನಿಸುತ್ತಾರೆ. ಅದೇನೆ ಇದ್ದರೂ ರಿಮೋಟ್ ಕಂಟ್ರೋಲ್ , ವೀಕ್ಷಕರಿಗೆ ಚಾನೆಲ್ ಬದಲಾಯಿಸುವುದನ್ನು ಸುಲಭವಾಗಿಸಿದೆ. ಅಥವಾ ಧ್ವನಿಯನ್ನು ಸಣ್ಣ ಮಾಡುವುದೋ ಮಾಡುವುದು ಅತ್ಯಂತ ಸುಲಭವಾದದ್ದಾಗಿದೆ.
- ಅಲ್ಲದೆ ಜನರು ಕಾರ್ಯಕ್ರಮದ ನಡುವೆ ಜಾಹೀರಾತು ಪ್ರಸಾರವಾದಾಗ ತಮ್ಮದೇ ಬೇರೆ ಬೇರೆ ಕೆಲಸಗಳನ್ನು ಮಾಡಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ. ಜೊತೆಗೆ, ದೂರದರ್ಶನ ರೆಕಾರ್ಡಿಂಗ್ ತಂತ್ರಜ್ಞಾನಗಳಾದ ಡಿವಿಆರ್ ಮತ್ತು TiVo ಕೂಡಾ ಕಾರ್ಯಕ್ರಮದ ನಡುವೆ ಬರುವ ಜಾಹೀರಾತುಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಮುಂದಿನ ಕಂತನ್ನು ನೋಡಲು ಸಹಾಯಕವಾಗಿವೆ.ಸಂಪೂರ್ಣ ಉಧ್ಯಮವು ವೀಕ್ಷಕರು ಜಾಹೀರಾತು ಪ್ರಸಾರವಾಗುವ ಸಮಯದಲ್ಲಿ ಚಾನೆಲ್ ಬದಲು ಮಾಡದೆ ಜಾಹೀರಾತನ್ನು ನೋಡುವಂತೆ ಮಾಡುವ ಗುಣಮಟ್ಟದ ಜಾಹೀರಾತನ್ನು ನೀಡುವ ಪ್ರಯತ್ನದಲ್ಲಿ ನಿರತವಾಗಿದೆ. ನೈಲ್ಸನ್ ರೇಟಿಂಗ್ ಸಿಸ್ಟಮ್ ಯಶಸ್ವಿ ದೂರದರ್ಶನ ಕಾರ್ಯಕ್ರಮಕ್ಕೆ ಬರುವ ರೇಟಿಂಗ್ಸ್ ಪ್ರಕಾರ ಜಾಹೀರಾತು ಪ್ರಸಾರಕ್ಕೆ ಹಣ ನಿಗದಿ ಮಾಡುವ ವಿಧಾನವನ್ನು ಅವಲಂಭಿಸಿವೆ.
- ಜಾಹೀರಾತುಗಳು ಕಾರ್ಯಕ್ರಮದ ಪ್ರಸಾರದ ಸಮಯವನ್ನು ಮೊಟಕುಗೊಳಿಸುತ್ತವೆ. ವಾಣಿಜ್ಯ ಪ್ರಕಟಣೆಗಳು ಕೂಡಾ ದೀರ್ಘವಾಗಿರುತ್ತವೆ. ೧೯೬೦ ರಲ್ಲಿ ಒಂದು ಘಂಟೆಯ ಅಮೆರಿಕನ್ ಪ್ರದರ್ಶನವು ಜಾಹೀರಾತುಗಳನ್ನು ಹೊರತುಪಡಿಸಿ ೫೧ ನಿಮಿಷಗಳ ಕಾಲ ಪ್ರದರ್ಶಿಸಲ್ಪಡುತ್ತಿದ್ದವು. ಈಗ ಈ ಪ್ರದರ್ಶನವು ಕೇವಲ ೪೨ ನಿಮಿಷಗಳಷ್ಟು ಮಾತ್ರ ಪ್ರದರ್ಶಿಸಲ್ಪಡುತ್ತಿವೆ. ಅರ್ಧಘಂಟೆಯ ಒಂದು ಕಾರ್ಯಕ್ರಮವು ಈಗ ೨೨ ನಿಮಿಷಗಳ ಪ್ರದರ್ಶನ ಮತ್ತು ಆರು ನಿಮಿಷಗಳ ರಾಷ್ಟ್ರೀಯ ಹಾಗೂ ಎರಡು ನಿಮಿಷಗಳ ಸ್ಥಳೀಯ ಜಾಹೀರಾತುಗಳ ಪ್ರಸಾರವನ್ನು ಒಳಗೊಂಡಿರುತ್ತವೆ.[೬]
- ಕೆಲವು ಚಾನೆಲ್‌ಗಳು ೧೮ ನಿಮಿಷಗಳ ಪ್ರದರ್ಶನ ಹಾಗೂ 12 ನಿಮಿಷಗಳ ಜಾಹೀರಾತುಗಳಾಗಿ ವಿಭಾಗಿಸಿ ಪ್ರಸಾರ ಮಾಡುತ್ತವೆ. ೧೦೧ ನಿಮಿಷಗಳ ಟೀವಿ ಸಿನಿಮಾವೊಂದರ ಪ್ರಸಾರವು, ಓಝ್‌ನ ವ್ಹಿಝಾರ್ಡ್ ಚಾನೆಲ್ ದೃಷ್ಟಾಂತದ ಪ್ರಕಾರ ೧೯೩೯ ರಲ್ಲಿ, ಜಾಹೀರಾತುಗಳ ಪ್ರಸಾರವನ್ನೂ ಸೇರಿಸಿ ಎರಡು ಘಂಟೆಗಳ ಅವಧಿ ತೆಗೆದುಕೊಳ್ಳುತ್ತಿತ್ತು. ಇದೀಗ ಅಷ್ಟೇ ಸಮಯದ ನಿನಿಮಾವನ್ನು ಪ್ರಸಾರ ಮಾಡಲು ಜಾಹೀರಾತುಗಳ ಪ್ರಸಾರವನ್ನೂ ಸೇರಿಸಿ ಎರಡು ಘಂಟೆ ಹದಿನೈದು ನಿಮಿಷಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
- ಇನ್ನೊಂದು ರೀತಿಯಲ್ಲಿ ಹೇಳುವದಾದರೆ, ೧೦ ಘಂಟೆಗಳ ಟೀವಿ ಪ್ರಸಾರವೊಂದರಲ್ಲಿ ಅಮೆರಿಕಾದ ವೀಕ್ಷಕರು ಸರಿ ಸುಮಾರು ಮೂರು ಘಂಟೆಗಳ ಕಾಲ ಜಾಹೀರಾತುಗಳನ್ನು ವೀಕ್ಷಿಸುತ್ತಾರೆ. ಅಂದರೆ ೧೯೬೦ ರಲ್ಲಿ ಜಾಹೀರಾತು ವೀಕ್ಷಿಸುತ್ತಿರುವುದಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಈಗ ಮರುಪ್ರಸಾರಗೊಳ್ಳುತ್ತಿವೆ. ಹಾಗಾಗಿ ೧೯೬೦ ರಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವೇ ಈಗ ಪ್ರಸಾರವಾದರೆ, ಕಾರ್ಯಕ್ರಮವನ್ನು ಒಂಬತ್ತು ನಿಮಿಷಗಳವರೆಗೆ ಕಡಿತಗೊಳಿಸಿ ಜಾಹೀರಾತುಗಳ ಪ್ರಸಾರಕ್ಕೆ ಹೊಂದಾಣಿಕೆಯಾಗುವಂತೆ ಮಾಡಲಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಕ್ರಮವು ಹೆಚ್ಚುತ್ತಿದ್ದು, ಪ್ರತಿ ವರ್ಷಕ್ಕೆ ಎರಡು ನಿಮಿಷಗಳ ಸರಾಸರಿಯಂತೆ ಜಾಹೀರಾತಿನ ಅವಧಿಯು ಹೆಚ್ಚುತ್ತಲಿದೆ.
- ೧೯೫೦ ಮತ್ತು ೧೯೬೦ ರ ದಶಕಗಳಲ್ಲಿ ಒಂದು ಜಾಹೀರಾತಿನ ಸರಾಸರಿ ಉದ್ದವು ಒಂದು ನಿಮಿಷವಾಗಿತ್ತು. ನಂತರ ವರ್ಷ ಕಳೆದಂತೆ ಈ ಅವಧಿಯು ೩೦ ಸೆಕೆಂಡ್‌ಗೆ ಮತ್ತು ಟೀವಿ ಕೇಂದ್ರ ಹಾಗೂ ಜಾಹೀರಾತಿನ ಅವಧಿಯನ್ನು ಖರೀದಿಸಿದ ಆಧಾರದ ಮೇಲೆ ೧೦ ಸೆಕೆಂಡ್‌ಗಳ ವರೆಗೂ ಕಡಿತಗೊಂಡಿತು. ಆದರೆ ಹೆಚ್ಚಿನ ಜಾಹೀರತುಗಳು ಈಗ ವಿರಾಮದ ಅವಧಿಯಲ್ಲಿ ಪ್ರಸಾರವಾಗುತ್ತವೆ. ೧೯೬೦ ರಲ್ಲಾದರೆ ಪ್ರತಿ ವಿರಾಮದಲ್ಲಿ ಕೇವಲ ಒಂದು ಅಥವಾ ಎರಡು ಜಾಹೀರಾತುಗಳು ಮಾತ್ರ ಪ್ರಸಾರ ಮಾಡಲ್ಪಡುತ್ತಿದ್ದವು. ಆದಾಗಿಯೂ ಇಂದು ಬಹುಪಾಲು ಜಾಹೀರಾತುಗಳು ಹದಿನೈದು ಸೆಕೆಂಡ್‌ಗಳಿಗಿಂತ ಹೆಚ್ಚು ಸಮಯದೊಂದಿಗೆ ಪ್ರಸಾರವಾಗುತ್ತವೆ. (ಆಗಾಗ "ಹುಕ್" ಎಂದು ಕರೆಯುತ್ತಾರೆ). ಟೀವಿ ಜಾಹಿರಾತುಗಳು ಐಎಸ್‌ಸಿಐ(ISCI) ಕೋಡ್ ಮುಖಾಂತರ ಗುರುತಿಸುತ್ತಾರೆ.
ಜನಪ್ರಿಯತೆ
[ಬದಲಾಯಿಸಿ]- ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಉತ್ಪನ್ನಗಳನ್ನು ಪರಿಚಯಗೊಳಿಸಲು ಟಿವಿ ಜಾಹಿರಾತುಗಳು ಪರಿಣಾಮಕಾರಿ ಒಂದು ವಿಧಾನವೆಂದು ಪರಿಗಣಿಸಲಾಗಿದೆ. ಜಾಹಿರಾತುಗಳ ದುಬಾರಿ ಬೆಲೆಯೇ ಇದಕ್ಕೆ ಸಾಕ್ಷಿಯಾಗಿದೆ. ಜನಪ್ರಿಯ ಕಾರ್ಯಕ್ರಮಗಳ ನಡುವೆ ಟೀವಿ ಚಾನಲ್‌ಗಳು ವಾಣಿಜ್ಯ ಜಾಹೀರಾತನ್ನು ಸೇರಿಸುತ್ತವೆ ಮತ್ತು ಇದಕ್ಕೆ ದುಬಾರಿ ಬೆಲೆಯನ್ನು ಲಾಗೂ ಮಾಡುತ್ತವೆ. ವಾರ್ಷಿಕ ಸುಪರ್ ಬೌಲ್ ಅಮೆರಿಕನ್ ಫುಟ್‌ಬಾಲ್ ಆಟವು,ಆಟಗಳಲ್ಲೇ ಅತ್ಯಂತ ಹೆಚ್ಚಿನ ವಾಣಿಜ್ಯ ಜಾಹೀರಾತಿಗೆ ಮತ್ತು ಬೆಲೆಗೆ ಹೆಸರುವಾಸಿಯಾಗಿದೆ. ಆಟ ನಡೆಯುತ್ತಿರುವಾಗ 90 ಮಿಲಿಯನ್ ವೀಕ್ಷಕರು ವೀಕ್ಷಿಸುತ್ತಿರುವ ಸಂದರ್ಭದಲ್ಲಿ, ಮೂವತ್ತು ಸೆಕೆಂಡ್‌ಗಳ ಒಂದು ಜಾಹಿರಾತಿನ ತುಣುಕಿಗೆ ಸರಾಸರಿ ೩ ಮಿಲಿಯನ್ ಅಮೆರಿಕನ್ ಡಾಲರ್‌ವರೆಗೆ ಬೆಲೆ ನಿಗಧಿಪಡಿಸುತ್ತಾರೆ. ೧೮-೪೯ ರವರೆಗಿನ ವಯಸ್ಸಿನ ಜನರ ಮೇಲೆ ನಡೆಸಿದ ಸಮೀಕ್ಷೆ ಪ್ರಕಾರ ಸಾಮಾನ್ಯವಾಗಿ ಹೆಚ್ಚು ವಯಸ್ಸಿನ ಜನರು ತಮ್ಮ ಕೊಳ್ಳುವ ಹವ್ಯಾಸವನ್ನು ಬದಲಾಯಿಸಿಕೊಳ್ಳಲು ಇಷ್ಟಪಡದಿರುವುದರಿಂದ ಜಾಹೀರಾತುಗಳಿಗೆ ಆಸಕ್ತಿ ತೋರಿಸುವದಿಲ್ಲ.[೭]
- ಜಾಹೀರಾತುಗಳ ಆದಾಯದ ಪ್ರಮಾಣಕ್ಕೆ, ಒಟ್ಟೂ ವೀಕ್ಷಕರ ಸಂಖ್ಯೆಗಿಂತ ಸಮೀಕ್ಷೆಗೆ ಆಯ್ದುಕೊಂಡ ಜನರಲ್ಲಿ ಒಟ್ಟೂ ಎಷ್ಟು ಜನ ವೀಕ್ಷರರಿದ್ದಾರೆ ಎಂಬುದು ಮಹತ್ವದ್ದಾಗಿದೆ. ಅಡ್ವಟೈಸಿಂಗ್ ಏಜ್ ಪ್ರಕಾರ, 2007-08 ನೇ ವರ್ಷದಲ್ಲಿ ಗ್ರೇ’ಸ್ ಅನಾಟಮಿ ಯು, ಪ್ರತಿ ಜಾಹೀರಾತಿಗೆ 419,000 ಡಾಲರ್ ನಿಗಧಿಪಡಿಸಲು ಸಹಾಯಕವಾಯಿತು. ಸಿಎಸ್‌ಐ(CSI) ಪ್ರಸಾರದ ಅವಧಿಯಲ್ಲಿ ಕೇವಲ 248,000 ಡಾಲರ್ ನಿಗಧಿಪಡಿಸಲಾಗಿತ್ತು. ಸಮೀಕ್ಷೆಯ ಪ್ರಕಾರ ಸಿಎಸ್‌ಐ(CSI) ಚಾನೆಲ್ ಸರಾಸರಿ ಐದು ಮಿಲಿಯನ್‌ಗಿಂತಲೂ ಹೆಚ್ಚಿನ ವೀಕ್ಷಕರನ್ನು ಹೊಂದಿದೆ.[೮]
- ತನ್ನ ವೀಕ್ಷಕ ಜನಸಂಖ್ಯಾ ಬಲದ ಕಾರಣದಿಂದ ಫ್ರೆಂಡ್ಸ್ ಚಾನೆಲ್ , ಮರ್ಡರ್, ಶಿ ರೋಟ್, ಮುಂತಾದ ವಿಷಯಗಳ ಜಾಹಿರಾತಿಗಳಿಗಿಂತ, ಇವೆರಡೂ ಸರಣಿಗಳೂ ಒಂದೇ ಸಂಖ್ಯೆಯ ವೀಕ್ಷಕ ಗುಂಪನ್ನು ಹೊಂದಿ ಏಕಕಾಲದಲ್ಲಿ ಪ್ರಸಾರವಾಗಿಯೂ ಕೂಡಾ ಮೂರು ಪಟ್ಟು ಹೆಚ್ಚು ದರ ನಿಗಧಿಪಡಿಸುತ್ತದೆ.[೭] ಬ್ರಾಡ್‌ಕಾಸ್ಟ್ ಸಂಪರ್ಕಗಳು, ಯುವ ವೀಕ್ಷಕರಿಂದ ಹೆಚ್ಚುತ್ತಿರುವ ಡಿವಿಆರ್(DVR)ಗಳ ಬಳಕೆಯನ್ನು ಅವಲಂಭಿಸಿದೆ. ಇದರ ಪರಿಣಾಮವಾಗಿ ನೇರ ಪ್ರಸಾರಗಳ ಕಾರ್ಯಕ್ರಮ ವೀಕ್ಷಕರನ್ನು ಬಲವರ್ಧನೆಗೊಳಿಸಿ ಜಾಹಿರಾತುಗಳ ದರವನ್ನು ಕಡಿಮೆಗೊಳಿಸಲು ಕಾರಣವಾಯಿತು.[೯]
- ಟಿವಿ ಜಾಹಿರಾತುದಾರರು ಒಟ್ಟೂ ಜನಸಂಖ್ಯೆಯ ಕೆಲವು ನಿರ್ಧಿಷ್ಟ ವೀಕ್ಷಕರಾದ ರೇಸ್ ವೀಕ್ಷಕರು,ಅವರ ಆದಾಯದ ಮಟ್ಟ ಮತ್ತು ಲಿಂಗ ಮುಂತಾದವುಗಳ ಮೇಲೆಯೂ ಗುರಿಯಾಗಿಸುತ್ತಾರೆ.[೭] ಇತ್ತೀಚಿನ ವರ್ಷಗಳಲ್ಲಿ ಯುವತಿಯರನ್ನು ಗುರಿಯಾಗಿಸಿ ರಚಿಸಿದ ಜಾಹಿರಾತು ಹೆಚ್ಚು ಲಾಭದಾಯಕವಾಗಿ ಕಂಡುಬಂದಿದೆ. ಕಾರಣವೆಂದರೆ,ಯುವಕರು ಯುವತಿಯರಿಗಿಂತ ಕಡಿಮೆ ಟಿವಿ ವೀಕ್ಷಣೆ ಮಾಡುತ್ತಾರೆ ಮತ್ತು ಮಹಿಳಾ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯವಾಗುತ್ತಿವೆ.[೧೦]
- ಯುನೈಟೆಡ್ ಕಿಂಗ್‌ಡಮ್ದೇಶದಲ್ಲಿ ದೂರದರ್ಶನದ ಜಾಹೀರಾತುಗಳು ತುಲನಾತ್ಮಕವಾಗಿ ನೋಡಿದರೆ ಅಮೆರಿಕಾ ದೇಶಕ್ಕಿಂತಲೂ ಅಗ್ಗವೆಂದು ಪರಿಗಣಿಸಬಹುದು. 2010 ರಲ್ಲಿ ಪ್ರಸಾರವಾದ "ಬ್ರಿಟೇನ್ಸ್ ಗೋಟ್ ಟ್ಯಾಲೆಂಟ್ಸ್" ಸರಣಿಯಲ್ಲಿ ಮೂವತ್ತು ಸೆಕೆಂಡ್‌ಗಳಿಗೆ 250,000 ಪೌಂಡ್ ದರ ನಿಗಧಿಯಾಗಿದ್ದು ಬ್ರಿಟಿಷ್ ನೆಲದಲ್ಲೇ ಜಾಹೀರಾತೊಂದಕ್ಕೆ ವಿಧಿಸಿದ ಬೆಲೆಯ ಇತ್ತೀಚಿನ ದಾಖಲೆಯಾಗಿದೆ.[೧೧]
- ಒಂದೇ ಒಂದು ಜಾಹೀರಾತು ತುಣುಕನ್ನು ಪದೇ ಪದೇ ವಾರಪೂರ್ತಿ,ತಿಂಗಳು ಪೂರ್ತಿ ಮತ್ತು ವರ್ಷಪೂರ್ತಿ ಪ್ರಸಾರ ಮಾಡುವ ಸಲುವಾಗಿ ಟೀವಿ ಜಾಹಿರಾತು ತಯಾರಕ ಸ್ಟುಡಿಯೋಗಳು ಮೂವತ್ತು ಸೆಕೆಂಡ್‌ಗಳ ಒಂದು ಜಾಹಿರಾತು ತುಣುಕು ರಚಿಸಲು ಆಗಾಗ ದೊಡ್ಡ ಪ್ರಮಾಣಹ ಹಣ ವ್ಯಯಿಸುವುದುಂಟು.(ಟೂಸ್ಟೀ ರೋಲ್ ಕಂಪನಿಯು ಮೂರು ದಶಕಗಳಿಂದ ಪ್ರಸಾರ ಮಾಡುತ್ತಿರುವ "ಹೌ ಮೆನಿ ಲಿಕ್ಸ್ ಡಸ್ ಇಟ್ ಟೇಕ್ಸ್ ಟು ಎಟ್ ಟು ದಿ ಟೂಟ್‌ಸೀ ಸೆಂಟರ್ ಆಫ್ ಎ ಟೂಟ್‌ಸೀ ಪಾಪ್" ಎಂದು ಕೇಳುವ ಪ್ರಸಿದ್ದ ಜಾಹಿರಾತು ಇದಕ್ಕೆ ಒಂದು ದೃಷ್ಟಾಂತವಾಗಿದೆ. ದೂರದರ್ಶನ ಜಾಹೀರಾತು ತಯಾರಕ ಕಂಪೆನಿಗಳು ಕೇವಲ ಮೂವತ್ತು ಸೆಕೆಂಡ್‌ಗಳ ಜಾಹೀರಾತಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತವೆ.
- ಅಧಿಕ ವೆಚ್ಚಗಳು ತಗುಲಲು ಉನ್ನತ ಗುಣಮಟ್ಟದ, ಉನ್ನತ ಉತ್ಪಾದಕ ಕಿಮ್ಮತ್ತನ್ನು ಹೊಂದಿದ, ಸ್ಪೆಷಲ್ ಎಫೆಕ್ಟ್, ಉತ್ತಮ ಸಂಗೀತ ಹೊಂದಿದ ಜಾಹೀರಾತನ್ನು ತಯಾರಿಸುವುದು ಕಾರಣವಾಗಿದೆ. ಜಾಹೀರಾತುಗಳಲ್ಲಿ ವಿಶೇಷ ಪರಿಣಾಮಕಾರಿ ತಂತ್ರಜ್ಞಾನ,ಪ್ರಸಿದ್ದ ವ್ಯಕ್ತಿಗಳ ಬಳಕೆ ಮತ್ತು ಉತ್ತಮ ಸಂಗೀತವನ್ನು ಬಳಕೆ ಮಾಡುವುದರಿಂದ ಸ್ವಾಭಾವಿಕವಾಗಿ ವೆಚ್ಚವು ಅಧಿಕವಾಗುತ್ತದೆ. ಹಲವು ಟಿವಿ ಜಾಹಿರಾತುಗಳು ಎಷ್ಟೊಂದು ಸಂಕೀರ್ಣವಾಗಿ ತಯಾರಿಸಲ್ಪಡುತ್ತವೆಂದರೆ, ಅವುಗಳು ಚಿಕ್ಕದರಲ್ಲಿಯೇ ಅತಿಚಿಕ್ಕ ಅಂದರೆ ಕೇವಲ ಮೂವತ್ತು ಸೆಕೆಂಡ್‌ಗಳ ತುಣುಕು ಗಳಾಗಿರುತ್ತವೆ. ವಾಸ್ತವದಲ್ಲಿ ಹಲವು ಸಿನಿಮಾ ನಿರ್ದೇಶಕರುಗಳು ಉತ್ತಮ ಸಾರ್ವಜನಿಕ ಪ್ರಚಾರ ಹಾಗೂ ಒಳ್ಳೆಯ ಸಂಪಾದನೆಯ ದೃಷ್ಟಿಯಿಂದ ಟೀವಿ ಜಾಹೀರಾತುಗಳನ್ನು ನಿರ್ದೇಶನ ಮಾಡುವುದಕ್ಕೆ ಆರಂಭಿಸಿದ್ದಾರೆ.
- ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ರಿಡ್ಲೇ ಸ್ಕೋಟ್ ಅವರ ಪ್ರಸಿದ್ದ ಸಿನಿಮಾ ದೃಶ್ಯವು, ೧೯೮೪ ರಲ್ಲಿ ಇವರ ನಿರ್ದೇಶನದಲ್ಲಿ ಆಪಲ್ ಮ್ಯಾಕಿಂಟೋಷ್ ಕಂಪ್ಯೂಟರ್ ಕಂಪನಿಗೆ ತಯಾರಿಸಿ ಪ್ರಸಾರವಾದ ಟಿವಿ ಜಾಹಿರಾತೇ ಆಗಿರುತ್ತದೆ. ಈ ಜಾಹಿರಾತನ್ನು ಕೇವಲ ಒಂದೇ ಒಂದು ಬಾರಿ ಪ್ರಸಾರ ಮಾಡಿದರೂ,ಇದು ಅತ್ಯಂತ ನಿಖರವಾದ ದೂರದರ್ಶನ ಪ್ರದರ್ಶನವಾದ್ದರಿಂದ ಅಷ್ಟು ಪ್ರಸಿದ್ದ ಮತ್ತು ಪರಿಚಿತವಾಯಿತು. ಹಲವು ಜಾಹಿರಾತುಗಳ ಪ್ರಸಿದ್ದಿಯ ಹೊರತಾಗಿಯೂ ಕೆಲವರು ತಮ್ಮದೇ ಕಾರಣಗಳಿಂದ ಅವುಗಳನ್ನು ಕಿರಿಕಿರಿಯೆಂದು ಪರಿಗಣಿಸಿದರು. ಇದಕ್ಕೆ ಮುಖ್ಯ ಕಾರಣವೆಂದರೆ, ಈ ಜಾಹಿರಾತುಗಳ ಧ್ವನಿಯು ನಿಯಮಿತ ಕಾರ್ಯಕ್ರಮಕ್ಕಿಂತ ಹೆಚ್ಚಿನ ಮಟ್ಟದಲ್ಲಿರುತ್ತದೆ.(ಇನ್ನು ಕೆಲವು ಸಂಧರ್ಭಗಳಲ್ಲಿ ಅತಿಹೆಚ್ಚಾಗಿಯೇ ಇರುತ್ತದೆ).
- ಸಂಯುಕ್ತ ಸಂಸ್ಥಾನದ ಕಾಂಗ್ರೆಸ್ 30, ಸೆಪ್ಟೆಂಬರ್ 2010ರಲ್ಲಿ ಕಾಮ್(CALM) ಎಂದು ಕರೆಯುವ ಕಾಯ್ದೆಯನ್ನು, ಜಾಹೀರಾತುಗಳ ಧ್ವನಿಯ ಮೇಲೆ ನಿಯಂತ್ರಣ ಹೇರುವ ಸಲುವಾಗಿ ಪಾಸು ಮಾಡಿತು. ಯುಕೆ ದೇಶದಲ್ಲಿ ಜಾಹೀರಾತು ಪ್ರಸಾರ ಮತ್ತು ನಿಯಂತ್ರಣ ಸಮಿತಿಯು ಇಂತಹುದೇ ಕಾನೂನನ್ನು ಹೊಂದಿರುತ್ತದೆ. ಹೆಚ್ಚುತ್ತಿರುವ ಜಾಹೀರಾತುಗಳ ಸಂಖ್ಯೆ ಮತ್ತು ಒಂದೇ ಜಾಹೀರಾತುಗಳನ್ನು ಪದೇ ಪದೇ ಪ್ರಸಾರ ಮಾಡುವುದು ಕಿರಿಕಿರಿಗೆ ಎರಡನೇ ಕಾರಣವಾಗಿದೆ. ಮೂರನೇ ಕಾರಣವೆಂದರೆ, ದೂರದರ್ಶನವು ಈಗಿನ ಕಾಲದಲ್ಲಿ ಜಾಹೀರಾತಿನ ಮುಖ್ಯ ಮಾಧ್ಯಮವಾಗಿದೆ. ಜಾಹೀರಾತುಗಳನ್ನು ಸೆಲ್ ದೂರವಾಣಿ ಕಂಪನಿ,ರಾಜಕೀಯ ಪಕ್ಷಗಳು,ಕ್ಷಿಪ್ರ ತಿನಿಸುಗಳ ರೆಸ್ಟೋರೆಂಟ್‌ಗಳು, ಸ್ಥಳೀಯ ವ್ಯಾಪಾರಿ ಸಂಸ್ಥೆಗಳು ಸೇರಿ ಪ್ರತಿಯೊಬ್ಬರೂ ರಚಿಸುವುದು ಟೀವಿ ದೃಶ್ಯಗಳ ಮಧ್ಯೆ ದೀರ್ಘವಾದ ಜಾಹೀರಾತಿನ ವಿರಾಮಕ್ಕೆ ಕಾರಣವಾಗಿದೆ. *ಅಂತಿಮವಾದ ಕಾರಣವೆಂದರೆ ಜಾಹೀರಾತುಗಳು ಆಗಾಗ ಮುಖ್ಯ ಕಾರ್ಯಕ್ರಮದ ಕೆಲವು ಭಾಗಗಳಾದ ಕ್ಲೈಮ್ಯಾಕ್ಸ್, ಮುಖ್ಯ ತಿರುವಿರುವ ಭಾಗ, ಮುಂತಾದವುಗಳನ್ನು ಕತ್ತರಿಸಿ ಹಾಕಲು ಕಾರಣವಾಗುವುದರಿಂದ ಅಂತಹ ಮನರಂಜನಾ ಕಾರ್ಯಕ್ರಮಗಳು ಆಭಾಸವುಂಟುಮಾಡಿ ಕಿರಿಕಿರಿಯುಂಟುಮಾಡುತ್ತವೆ. ಒಂದು ನಿರ್ಧಿಷ್ಟ ಕಾರಣವನ್ನು ಗುರುತಿಸುವುದಾದರೆ, ಜಾಹೀರಾತನ್ನು ಜನರು ಯಾವ ಕಾರಣಕ್ಕಾಗಿ ಕಿರಿಕಿರಿಯುಂಟುಮಾಡುವುದು ಎಂದು ನಿರ್ಧರಿಸುತ್ತಾರೆ ಎಂದರೆ ಮೊದಲನೆಯದಾಗಿ ಆ ಜಾಹೀರಾತು ಆ ಕ್ಷಣದಲ್ಲಿ ಗಮನಸೆಳೆಯದಿರಬಹುದು, ಅಥವಾ ಅದರ ಅಭಿವ್ಯಕ್ತಿಯ ವಿಧಾನವು ಸ್ಪಷ್ಟವಾಗಿಲ್ಲದಿರಬಹುದು. ಒಬ್ಬ ವೀಕ್ಷಕ ಸಾಕಷ್ಟು ಜಾಹೀರಾತುಗಳನ್ನು ನೋಡಿದ್ದು, ಹಲವಾರು ಜಾಹೀರಾತುಗಳಿಗೆ ಆತ ತಲೆಕೆಡಿಸಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ.
- ಅಲ್ಲದೆ ಜಾಹೀರಾತು ವೀಕ್ಷಣೆಯಲ್ಲಿ ಆತ ಯಾವುದೇ ಕರುಣೆಯಿಲ್ಲದೆ ತನಗೆ ಬೇಕಾದ್ದನ್ನು ಮಾತ್ರ ನೋಡುವ ಸ್ವಾತಂತ್ರ್ಯವನ್ನು ತೆಗೆದುಕೊಳ್ಳುತ್ತಾನೆ. ಇದಕ್ಕೆ ವಿರುದ್ಧವಾಗಿ, ಯಾವುದಾದರೂ ಜಾಹೀರಾತು ವೀಕ್ಷಕರ ಜೊತೆ ಸಂಬಂಧ ಬೆಳೆಸಿಕೊಂಡರೆ (ಬಹಳ ದಿನಗಳ ಹಿಂದೆ ಸಾಲ ಪಾವತಿಸುವಂತೆ ನೋಟಿಸ್ ಬಂದಿರುವವನೊಬ್ಬನಿಗೆ, ಸಾಮ ಮನ್ನಾ ಮಾಡಲಾಗಿದೆ ಎಂಬ ಜಾಹೀರಾತು ಬಂದರೆ ಅದನ್ನು ಆತ ಗಮನವಿಟ್ಟು ವೀಕ್ಷಿಸುತ್ತಾನೆ.) ಅಥವಾ ಸಾಮಾನ್ಯವಾದ ಸಂದೇಶದೊಂದಿಗೆ ಅದು ಮನರಂಜನಾತ್ಮಕವಾಗಿದ್ದರೂ ಕೂಡ (ಉದಾಹರಣೆಗೆ, ಅತ್ಯಂತ ಹಾಸ್ಯಬರಿತವಾದ , ವೆಂಡಿ ಅವರ "ವೇರ್ ಇಸ್ ದ ಬೀಫ್ ?" ) ಜನರನ್ನು ಸೆಳೆಯುತ್ತದೆ. ಈ ರೀತಿಯದ್ದಿದ್ದಲ್ಲಿ ವೀಕ್ಷಕರು ಜಾಹೀರಾತನ್ನು ಖುಷಿಯಿಂದ ನೋಡುತ್ತಾರೆ ಮತ್ತು ಮತ್ತೊಮ್ಮೆ ಕೂಡಾ ಅದನ್ನು ನೋಡುವುದಕ್ಕೆ ಇಷ್ಟ ಪಡುತ್ತಾರೆ.
ನಿರ್ಬಂಧಗಳು
[ಬದಲಾಯಿಸಿ]೨ ಜನವರಿ ೧೯೭೧ ರಿಂದ ಅನ್ವಯವಾಗುವಂತೆ ಸಿಗರೇಟ್‌ಗಳ ಪ್ರಚಾರವನ್ನು ಅಮೇರಿಕಾದ ದೂರದರ್ಶನದಲ್ಲಿ ನಿಷೇಧಿಸಲಾಯಿತು. ಮಧ್ಯಸಾರದ ಮೇಲಿನ ಪ್ರಚಾರಕ್ಕೆ ಅನುಮತಿ ನೀಡಲಾಯಿತಾದರೂ ದೂರದರ್ಶದಲ್ಲಿನ ಪ್ರಚಾರದಲ್ಲಿ ಮಧ್ಯಸಾರವನ್ನು ಸೇವಿಸುವುದನ್ನು ತೋರಿಸುವಂತಿ ರಲಿಲ್ಲ. ೧೯೯೦ ರ ದಶಕದ ನಂತರದ ದೂರದರ್ಶನದಲ್ಲಿ ನೀಡುವ ಪ್ರಚಾರಗಳು ತನ್ನ ದಿಕ್ಕನ್ನು ಬದಲಿಸಿಕೊಂಡು ಮನೆ ಉಪಯೋಗದ ಸಾಮಗ್ರಿಗಳನ್ನು ಮತ್ತು ಆಹಾರ ಸಾಮಗ್ರಿಗಳ ಬಗ್ಗೆ ಹೆಚ್ಚು ಒಲವನ್ನು ತೋರಿದವಾದರೂ ಹೊಸತನವನ್ನು ಪಡೆಯದ ಇವು ಹೆಚ್ಚುಕಾಲ ನಡೆಯದೇ ಇಪ್ಪತ್ತನೇ ಶತಮಾನದ ಮಧ್ಯಂತರದಿಂದ ಶತಮಾನದ ಅಂತ್ಯದವರೆಗೆ ಮಾತ್ರ ಬಳಕೆಯಲ್ಲಿದ್ದವು. ಮನಶ್ಯಾಸ್ತ್ರದ ಬಗೆಗಿನ ಮಾಹಿತಿಗಳನ್ನು ಸಂದೇಶಗಳ ಮೂಲಕ ಸುದ್ದಿರವಾನೆ ಮಾಡುವುದನ್ನೂ ಸಹ ನಿಷೇಧಿಸಲಾಯಿತು.
ಜಾಹೀರಾತುಗಳೂ ಕಾರ್ಯಕ್ರಮಗಳೇ ?
[ಬದಲಾಯಿಸಿ]- ೧೯೬೦ರಿಂದ ಮಾಧ್ಯಮ ನಿರ್ಣಾಯಕಗಳು ಕಾರ್ಯಕ್ರಮಗಳು ಮತ್ತು ಪ್ರಚಾರಗಳ ನಡುವೆ ವ್ಯತ್ಯಾಸವನ್ನಿಡುವಂತೆ ಮಾನದಂಡವನ್ನು ರೂಪಿಸಬೇಕೆಂದು ಆಗ್ರಹಪಡಿಸಿತು. ಪ್ರಚಾರಗಳಲ್ಲಿ ಮಸುಕು ಮಸುಕಾದ ಗೆರೆಯೊಂದನ್ನು ಪ್ರಾರಂದಲ್ಲಿ ತೋರಿಸಲಾಗುತ್ತಿತ್ತು ಮತ್ತು ಎಲ್ಲ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಒಂದೇ ಪ್ರಾಯೋಜಕತ್ವವನ್ನು ಒಂದೇ ಸಂಸ್ಥೆಗಳು ತೆಗೆದುಕೊಂಡಿದ್ದವು. (ಉದಾಹರಣೆಗೆ ಒಲ್ಡ್-ಟೈಮ್ ನೆಟ್‌ವರ್ಕ್ ರೆಡಿಯೋ). ೧೯೭೦, ೮೦ ಮತ್ತು ೯೦ರ ದಶಕದಲ್ಲಿ FCCಯು ಶನಿವಾರ ಬೆಳಿಗ್ಗೆ ರವಿವಾರ ಸಂಜೆ ಆರರಿಂದ ಏಳು ಗಂಟೆ ಯವರೆಗಿನ ಸಮಯದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ನಿರ್ಬಂಧನೆಗಳನ್ನು ವಿಧಿಸಿತು.
- ಅದೆಂದರೆ ಜನರಿಗೆ ಕಾರ್ಯಕ್ರಮಗಳು ಮತ್ತು ಪ್ರಚಾರದ ನಡುವಿನ ವ್ಯತ್ಯಾಸ ತಿಳಿಯಲು ("ನಾವು ವಿಷಯಕ್ಕೆ ಈ ಸಂದೇಶದ ನಂತರ ಬರುತ್ತೇವೆ...."," ......ಈಗ ನಾವು ಕಾರ್ಯಕ್ರಮಕ್ಕೆ ಬರುತ್ತಿದ್ದೇವೆ".ಅಥವಾ ಅಂತಹದೇ ಶಬ್ದಗಳನ್ನು ಬಳಸಬೇಕು). ಎಂದು ನಿರ್ದೇಶಿಸಿತು. ಆದರೆ ಈ ಕಾಯಿದೆಯು ಸುದ್ದಿಯ ಬಗೆಗಿನ ಸುದ್ದಿಯನ್ನು ಪ್ರಕಟಿಸುತ್ತಿದ್ದರೆ ಅನ್ವಸಿರುವುದಿಲ್ಲ( ೬೦ ನಿಮಿಷಗಳ ಕಾರ್ಯಕ್ರಮಗಳು ಇತ್ಯಾದಿ). ೧೯೭೦ ಮತ್ತು ೧೯೮೦ರ ದಶಕದಲ್ಲಿ ಮಕ್ಕಳ ಕಾರ್ಯಕ್ರಮಗಳಿಗೆ ಸ್ವಲ್ಪ ವಿನಾಯಿತಿಯನ್ನು ನೀಡಿದ್ದರು.
ಯುರೋಪ್
[ಬದಲಾಯಿಸಿ]- ಹಲವಾರು ಯುರೋಪಿಯನ್ ದೇಶಗಳಲ್ಲಿ ದೂರದರ್ಶನದ ಪ್ರಚಾರಗಳು ಬಹುಸಮಯವನ್ನು ತೆಗೆದುಕೊಳ್ಳುತ್ತವೆ ಆದರೆ ಇಂತಹ ವಿರಾಮದ ಸಂಖ್ಯೆಯು ಕಡಿಮೆಯಿರುತ್ತದೆ. ಉದಾಹರಣೆಗೆ ಮೂರು ನಿಮಿಷಕ್ಕೆ ಬದಲಾಗಿ ಎಂಟು ನಿಮಿಷಗಳು. ಅದು ಆರು ನಿಮಿಷಗಳ ಕಾಲವನ್ನು ಅರ್ಧಗಂಟೆಗೊಮ್ಮೆ ತೆಗೆದುಕೊಳ್ಳುವುದೂ ಇರುತ್ತದೆ. ಯುರೋಪಿನ ಒಕ್ಕೂಟಗಳ ಕಾಯಿದೆಯ ಪ್ರಕಾರ ಒಂದು ಗಂಟೆಗೆ ಗರಿಷ್ಠ ಹನ್ನೆರಡು ನಿಮಿಷಗಳನ್ನು ಮಾತ್ರ ಪ್ರಚಾರಕ್ಕಾಗಿ ಬಳಸಿಕೊಳ್ಳಬಹುದಾಗಿದೆ(೨೦%) ಮತ್ತು ೨೦ ರಿಂದ ೩೦ ನಿಮಿಷಗಳ ಅವಧಿಗೊಮ್ಮೆ ಪ್ರಕಟಿಸಬಹುದಾಗಿದೆ.[೧೨]
- ಆದರೆ ಇದು ಕಾರ್ಯಕ್ರಮಗಳ ಮೇಲೆ ನಿರ್ಧಾರಿತವಾಗಿದೆ. ಮತ್ತು ಇದು ಗರಿಷ್ಠ ಪ್ರಮಾಣದ ಕಾಲಾವಧಿಯಾಗಿದ್ದು ಯುರೋಪಿನ ಹೊರಗಡೆ ಮತ್ತು ಅದಕ್ಕೆ ಸಂಬಂಧಿಸಿದ ದೇಶಗಳಲ್ಲಿ ಕಾಲವು ಬೇರೆ ಬೇರೆ ಜಾಲಬಂಧಗಳಿಗೆ ಸಂಬಂಧಿಸಿದ್ದಾಗಿದೆ. ಅಮೇರಿಕಾವನ್ನು ಹೊರತುಪಡಿಸಿ ಯುರೋಪ್‌ನ ದೇಶಗಳಲ್ಲಿ ಪ್ರಚಾರಕ್ಕಾಗಿ ಗೊತ್ತುಮಾಡಲಾದ ದಲ್ಲಾಲಿಗಳ ಹೆಸರನ್ನು ಪ್ರಚಾರದ ಮೊದಲು ಅಥವಾ ಕೊನೆಯಲ್ಲಿ ತೋರಿಸಬಹುದಾಗಿತ್ತು.
ಯುನೈಟೆಡ್ ಕಿಂಗ್‌ಡಮ್
[ಬದಲಾಯಿಸಿ]- ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಷನ್ ಪರವಾನಿಗೆ ಶುಲ್ಕ ಮತ್ತು ಹೊಸ ವಸ್ತುಗಳನ್ನು ಪರಿಚಯವನ್ನು ಮಾಡುವುದರ ಹೊರತಾಗಿ(ಒಂದು ವೇಳೆ ಬೇಗನೇ ಮಾರುಕಟ್ಟೆಗೆ ಬರುವ ಅಥವಾ ಮುಂದೆ ಬರುವ ವಿಷಯಗಳ ನ್ನು ಪ್ರಸ್ತಾಪಿಸುವುದರ ಮೇಲೆ) ಶುಲ್ಕವನ್ನು ಪಡೆಯುವುದರ ಮೂಲಕ ಅಸ್ಥಿತ್ವಕ್ಕೆ ಬಂದಿತು. ವಾಣಿಜ್ಯ ಪ್ರಸಾರ ಮಾದ್ಯಮಗಳು, Ofcom ಏರ್‌ಟೈಮ್ ನ ಮೌಲ್ಯವು ಪ್ರಚಾರ ಮಾಡುವ ಅವಧಿಯನ್ನು ಎಲ್ಲ ಮಾಧ್ಯಮಗಳಿಗೂ ಸರಾಸರಿ ಗಂಟೆಗೆ ಏಳು ನಿಮಿಷಗಳಂತೆ ನೀಡಿತು. ಆದರೆ ಯಾವುದೇ ಒಂದು ಗಡಿಯಾರದಲ್ಲಿ ತೋರಿಸುವ ಗಂಟೆಯಲ್ಲಿ ಹನ್ನೆರಡು ನಿಮಿಷಕ್ಕಿಂತ(ಸಂಜೆ ಆರರಿಂದ ಹನ್ನೊಂದು ಗಂಟೆಯ ಒಳಗೆ ಎಂಟು ನಿಮಿಷಗಳ ಕಾಲಾವಧಿ) ಹೆಚ್ಚಿಗೆ ಪ್ರಚಾರವನ್ನು ಪ್ರಸಾರ ಮಾಡುವಂತಿರಲಿಲ್ಲ.
- ಅಮೇರಿಕಾದಿಂದ ಬ್ರಿಟನ್‌ಗೆ ರಪ್ತಾದ ’ಲೊಸ್ಟ್’ ಗೆ ನೀಡಿದ ಒಂದು ಗಂಟೆಯ ಕಾಲಾವಧಿಯಲ್ಲಿ ೪೨ ನಿಮಿಷಗಳನ್ನು ಅವುಗಳ ಬಗೆಗಿನ ಪ್ರಚಾರಕ್ಕಾಗಿ ತೆಗೆದಿರಿಸಬಹುದಾಗಿತ್ತು ಅಂದರೆ ಅಂದಾಜು ಒಂದು ಮೂರಾಂಶ ಕಾಲವನ್ನು ಪ್ರಚಾರಕ್ಕಾಗಿ ಬಳಸಿ ಕೊಳ್ಳಬಹುದಾಗಿತ್ತು. ನೇರ ಪ್ರಸಾರ ಮಾಡುವ WWE ರಾದಂತಹ ಕುಸ್ತಿಪಂದ್ಯಗಳನ್ನು ಪ್ರಸಾರ ಮಾಡುವ ಮಾಧ್ಯಮಗಳು ಅವರ ಹೊಸ ಉತ್ಪನ್ನಗಳನ್ನು ಅಮೇರಿಕಾದ ಪ್ರಚಾರದ ಬದಲಾಗಿ ಪ್ರಚಾರಾವಧಿಯಲ್ಲಿ ಪ್ರಸಾರ ಮಾಡಬಹುದಾಗಿದೆ. ತಿಳುವಳಿಕೆ ನೀಡುವ(ಅಡ್‌ಮ್ಯಾಗ್ಸ್ ಎಂದು ಕರೆಯುತ್ತಾರೆ) ಕಾರ್ಯಕ್ರಮಗಳು ೧೯೫೫ ರಲ್ಲಿ ITV ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದವು ಆದರೆ ೧೯೬೩ ರಲ್ಲಿ ಇದನ್ನು ನಿಷೇಧಿಸಲಾಯಿತು. ಪ್ರಥಮ ಬಾರಿಗೆ ಪ್ರಸಾರವಾದ ಪ್ರಚಾರವೆಂರೆ ಎಸ್.ಆರ್ ಟೂತ್ ಪೇಸ್ಟ್‌ಗಾಗಿ ಮಾಡಿದ ಪ್ರಚಾರವಾಗಿದೆ.
- ಇದನ್ನು ೨೨, ಸಪ್ಟೆಂಬರ್ ೧೯೫೫ರಂದು ITV ಮಾಧ್ಯಮದ ಮೂಲಕ ಪ್ರಸಾರ ಮಾಡಲಾಯಿತು.(ಇದು ಪ್ರಚಾರವು ಪ್ರಾರಂಭವಾದ ಪ್ರಥಮ ದಿನವಾಗಿದೆ.)[೧೩] ವಿವಿಧ ಪ್ರಸಾರಕೇಂದ್ರಗಳು ದೂರವಾಣಿಯಲ್ಲಿ ಮೂಡಿಬರುವ ಪ್ರಚಾರಗಳಿಗೆ ಹೊಸ ಆಯಾಮವನ್ನು ನೀಡಿದವು. *ಇದರಿಂದಾಗಿ ಹೆಚ್ಚು ಹೆಚ್ಚು ಜನರನ್ನು ಪ್ರಚಾರದ ಮೂಲಕ ತಲುಪುವುದು ಅತ್ಯಂತ ಸುಲಭದ ವಿಷಯವಾಯಿತು. ಮೂವತ್ತು ಸೆಕೆಂಡುಗಳ ಪ್ರಚಾರವನ್ನು ಸ್ಕೈ ನ್ಯೂಸ್, ಎಂಟಿವಿ ಅಥವಾ E4ನಂತಹ ಪ್ರಸಾರ ಕೆಂದ್ರಗಳ ಮೂಲಕ £500000ಕ್ಕಿಂತ ಕಡಿಮೆ ಮೊತ್ತಗಳಲ್ಲಿ ಪ್ರಚಾರ ಮಾಡ ಬಹುದಾಗಿದೆ. ಬ್ಯೂಸಿನೆಸ್ ಚಾನೆಲ್ ಅಥವಾ ಮೊಟಾರ್ಸ್ ಟಿವಿ ಅಥವಾ ರೀಯಲ್ ಎಸ್ಟೇಟ್ ಟಿವಿ ಮುಂತಾದವುಗಳು ಹೆಚ್ಚು ಜನರನ್ನೂ ತಲುಪುತ್ತವೆ ಮತ್ತು £500ಕ್ಕಿಂತ ಕಡಿಮೆ ದರದಲ್ಲಿ ಮೂವತ್ತು ಸೆಕೆಂಡುಗಳ ಪ್ರಚಾರವನ್ನು ಮಾಡಬಹುದಾಗಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹೊಸ ಪ್ರಸಾರ ಕೇಂದ್ರಗಳು ವಾರಕ್ಕೊಂದರಂತೆ ಹುಟ್ಟಿಕೊಳ್ಳುತ್ತಿವೆ ಮತ್ತು ಪ್ರಚಾರದ ಅವಕಾಶಗಳೂ ವಿಫುಲವಾಗುತ್ತಿದೆ.
- ೨೦೦೮ ರಲ್ಲಿ ಆಪ್‌ಕಾಮ್ ದೂರದರ್ಶನದ ಪ್ರಚಾರದ ಬಗ್ಗೆ ಮತ್ತು ವ್ಯಾಪಾರ ವಹಿವಾಟಿನ ಬಗ್ಗೆ ಇದ್ದ ಕಾಯಿದೆ Archived 2009-09-03 ವೇಬ್ಯಾಕ್ ಮೆಷಿನ್ ನಲ್ಲಿ. ಯನ್ನು ತಿದ್ದುಪಡಿ ಮಾಡಿ ಆದೇಶ ಹೊರಡಿಸಿತು, ಇದರಲ್ಲಿ ಸಾಮಾನ್ಯವಾಗಿ ಅವರ ಕೋಡ್‌ಗಳನ್ನು ಬದಲಾಯಿಸುವ ಉದ್ದೇಶವನ್ನು ಹೊಂದಿದ್ದು, ಪ್ರಚಾರಕ್ಕಾಗಿ ತೆಗೆದುಕೊಳ್ಳುವ ಹಣ ಮತ್ತು ಹಂಚಿಕೆಗೆ ಸಂಬಂದಿಸಿದ್ದಾಗಿತ್ತು(Rules on the Amount and Distribution of Advertising (RADA)) . ಮತ್ತು ಇದು ಪ್ರಚಾರವು ಪ್ರಸಾರವಾಗುವ ಸಮಯ ಪ್ರಚಾರದ ಕಾಲಮಿತಿಗಳನ್ನು ನಿರ್ಬಂದಿಸುತ್ತಿತ್ತು.
- ’ಪೆಸ್’ ಪ್ರಸಾರ ಕೆಂದ್ರದ[೧೧] ದೂರದರ್ಶನದಲ್ಲಿನ ಪ್ರಚಾರ ತಜ್ಞರಾದ ನಿಕ್ ಇಲ್‌ಸ್ಟ್‌ನ್ (Nick Illston) ಹೇಳುವ ಪ್ರಕಾರ ITV ಯು £250,000 ಮೊತ್ತವನ್ನು 30 ಸೆಕೆಂಡುಗಳ ಪ್ರಚಾರಕ್ಕಾಗಿ ೨೦೧೦ನೇ ಸಾಲಿನಲ್ಲಿನ ಬ್ರಿಟಿಷ್ ಗಾಟ್ ಟ್ಯಾಲೆಂಟ್ (Britain's Got Talent) ಶ್ರೇಣಿಯಲ್ಲಿ ಪಡೆದುಕೊಳ್ಳುತ್ತಿದೆ.ಮತ್ತು ಈ ಕಾರ್ಯಕ್ರಮವು ದೂರದರ್ಶನ ಪ್ರಸಾರದಲ್ಲಿ ಅತ್ಯಂತ ಹೆಚ್ಚು ವೆಚ್ಚದಾಯಕ ಪ್ರಚಾರದ ಅವಕಾಶವಾಗಿದೆ.[೧೧]
ಜರ್ಮನಿ
[ಬದಲಾಯಿಸಿ]ಬ್ರಿಟನ್‌ನಲ್ಲಿರುವಂತೆ ಜರ್ಮನಿಯಲ್ಲೂ ಸಾರ್ವಜನಿಕ ದೂರದರ್ಶನ ಕೇಂದ್ರಗಳು ತಮ್ಮದೇ ಆದ ಪ್ರಮುಖ ಮಾರುಕಟ್ಟೆ ಪಾಲುದಾರಿಕೆಯನ್ನು ಹೊಂದಿವೆ. ಅವರ ಕಾರ್ಯಕ್ರಮಗಳಿಗೆ ಅನುಮತಿ ಶುಲ್ಕದ ಮೂಲಕ ಬಂಡವಾಳ ನೀಡಲಾಗುತ್ತದೆ ಹಾಗೆಯೇ ಜಾಹೀರಾತುಗಳನ್ನು ಭಾನುವಾರ ಮತ್ತು ರಜಾದಿನಗಳನ್ನು ಹೊರತು ಪಡಿಸಿ ದಿನದ ನಿರ್ದಿಷ್ಟ ಅವಧಿಯಲ್ಲಿ ಮಾತ್ರ (5 ಪಿ.ಎಂ. ರಿಂದ 8 ಪಿ.ಎಂ) ಪ್ರಸಾರ ಮಾಡಬಹುದು. ಖಾಸಗಿ ಕೇಂದ್ರಗಳು ತಮ್ಮ ಕಾರ್ಯಕ್ರಮದ ಒಂದು ಘಂಟೆಯ ಅವಧಿಯಲ್ಲಿ ೧೨ ನಿಮಿಷಗಳ ಜಾಹೀರಾತುಗಳನ್ನು ಕನಿಷ್ಠ ೨೦ ನಿಮಿಷಗಳ ಕಾರ್ಯಕ್ರಮದ ನಡುವೆ
ಫ್ರಾನ್ಸ್
[ಬದಲಾಯಿಸಿ]ಯೂರೋಪಿನ ದೇಶದಲ್ಲಿ ಫ್ರಾನ್ಸ್‌ಮಾತ್ರವೇ ವ್ಯವಸ್ಥಿತವಾದ ಗಡಿಯಾರದ ಸಮಯವನ್ನು ಬಳಸಿಕೊಳ್ಳದಿರುವುದು. ಒಂದು ದಿನದಲ್ಲಿ ಸರಾಸರಿಯಾಗಿ ಒಂದು ತಾಸಿಗೆ ೯ ನಿಮಿಷ ಜಾಹೀರಾತನ್ನು ಹಾಕಲು Conseil supérieur de l'audiovisuel ಅನುಮತಿಸುತ್ತದೆ. ಖಾಸಗಿ ಕೇಂದ್ರಗಳು ಒಂದು ತಾಸಿಗಿಂತ ಕಡಿಮೆ ಅವಧಿಯ ಕಾರ್ಯಕ್ರಮವಿದ್ದಾಗ ಮಾತ್ರ ಒಂದು ಜಾಹೀರಾತು ವಿರಾಮ ಮತ್ತು ಒಂದು ತಾಸಿಗಿಂತ ಹೆಚ್ಚಿಗೆ ಇದ್ದಾಗ ಎರಡು ಜಾಹೀರಾತನ್ನು ಪ್ರಕಟಿಸುತ್ತವೆ. ಸಾರ್ವಜನಿಕ ವಾಹಿನಿಗಳಲ್ಲಿ ೮ ಘಂಟೆಯ ನಂತರ ಜಾಹೀರಾತು ಪ್ರಕಟಿಸುವುದನ್ನು ನಿಷೇಧಿಸಲಾಗಿದೆ ಮತ್ತು ೨೦೧೨ ರಿಂದ ಇದು ಸಂಪೂರ್ಣವಾಗಿ ನಿಲ್ಲಲಿದೆ.
ಐರ್ಲೆಂಡ್
[ಬದಲಾಯಿಸಿ]- ಐರ್‌ಲ್ಯಾಂಡ್ ಗಣರಾಜ್ಯದಲ್ಲಿ, ಬ್ರಾಡ್‌ಕಾಸ್ಟಿಂಗ್ ಕಮಿಶನ್ ಆಫ್ ಐರ್‌ಲ್ಯಾಂಡ್ ಎಲ್ಲಾ ಪ್ರಸಾರಕರಿಗೂ ಒಂದು ತಾಸಿಗೆ ಕೇವಲ 10ನಿಮಿಷ ಮಾತ್ರ ಜಾಹೀರಾತು ನೀಡಲು ಅನುಮತಿ ನೀಡಿದೆ.[೧೪] ಸಾರ್ವಜನಿಕ ನಿಧಿಯಿಂದ ನಡೆಯುತ್ತಿರುವ ಪ್ರಸಾರಕರಿಗೂ ಮತ್ತು ವಾಣಿಜ್ಯೀಕ ಟಿವಿ ಪ್ರಸಾರಕರಿಗೂ ಜಾಹೀರಾತು ಪ್ರಕಟಿಸುವ ನಿಮಿಷದಲ್ಲಿ ವ್ಯತ್ಯಾಸವಿದೆ.
- ಪ್ರಸಾರಕರಿಗೆ ದೂರದರ್ಶನ ಅನುಮತಿಶುಲ್ಕದ ಮೂಲಕ ಬಂಡವಾಳ ನೀಡಲಾಗುತ್ತದೆ , RTÉ ಮತ್ತು TG4, ಗಳು ತಮ್ಮ ಪ್ರಸಾರದ ಅವಧಿಯ 10%ರಷ್ಟನ್ನು ಜಾಹೀರಾತುಗಳಿಗೆ ನೀಡಲು ಅನುಮತಿ ವಾಣಿಜ್ಯೀಕ ಪ್ರಸಾರಕರಿಗೆ TV3 ಮತ್ತು 3e (ವಾಹಿನಿ 6) ಮತ್ತು ಸೆಟಾಂಟಾ ಐರ್ಲೆಂಡ್‌ಗೆ ಒಟ್ಟಾರೆ ಪ್ರಸಾರದ ಸಮಯದಲ್ಲಿ ಕನಿಷ್ಠ 15%ರಷ್ಟು ಜಾಹೀರಾತು ನೀಡಲು ಅನುಮತಿ ನೀಡಲಾಗಿದೆ. ಪ್ರಸಾರಕರ ವಿಧವನ್ನವಲಂಭಿಸಿ ತಾಸಿಗೆ ಸುಮಾರು ೬ ನಿಮಿಷಗಳು ಅಥವಾ ೯ ನಿಮಿಷಗಳಾಗಿ ಚಾಲ್ತಿಯಲ್ಲಿದೆ.
ಫಿನ್‌ಲ್ಯಾಂಡ್
[ಬದಲಾಯಿಸಿ]- ಫಿನ್‌ಲ್ಯಾಂಡ್‌ನಲ್ಲಿ, ಸರ್ಕಾರಿ ಒಡೆತನದ ವೈಎಲ್‌ಇ ಪ್ರಸಾರಕ ಕಂಪನಿಯಿಂದ ವಾಣುಜ್ಯೀಕವಲ್ಲದ ಎರಡು ಮುಖ್ಯವಾದ ವಾಹಿನಿಗಳು ನಡೆಸಲ್ಪಡುತ್ತಿದ್ದು, ಪ್ರಮುಖವಾದ ಕ್ರೀಡಾ ಘಟನೆಗಳು ನಡೆದಾಗ ಮಾತ್ರವೇ ವಿರಳವಾಗಿ ಜಾಹೀರಾತು ಪ್ರಕಟಿಸುತ್ತವೆ. ಮೂರು ಮುಖ್ಯ ವಾಣಿಜ್ಯೀಕ ವಾಹಿನಿಗಳಾದಎಂಟಿವಿ3, ಸಬ್ ( ಎಂಟಿವಿ3ಯ ಅಧೀನ ಸಂಸ್ಥೆ), ಮತ್ತು ನಿಲೊನೆನ್ (ಫಿನ್ನಿಶ್‌ನಲ್ಲಿ "ನಂಬರ್ ಫೋರ್"), ಇವೆಲ್ಲವು ವಿರಾಮದ ಅವಧಿಯಲ್ಲಿ ಅಂದಾಜು ೧೫ ನಿಮಿಷಗಳ ಜಾಹೀರಾತು ಪ್ರಕಟಿಸುತ್ತವೆ. ಡಿಜಿಟಲ್ ಟಿವಿಗಳು ಪರಿಚಯವಾದ ನಂತರದಲ್ಲಿ ಹಲವಾರು ಟಿವಿ ವಾಹಿನಿಗಳು ಹುಟ್ಟಿಕೊಂಡವು. ವೈಎಲ್‌ಇ ಜೊತೆಗೆ ಮುಖ್ಯ ಪ್ರಸಾರಕರು (ಚಂದಾ ವಾಹಿನಿಗಳನ್ನೊಳಗೊಂಡಂತೆ) ಎಲ್ಲಾ ಹೊಸದಾದ ವಾಹಿನಿಗಳನ್ನು ಸೇರಿಸಿಕೊಂಡವು.
- ಅಗಸ್ಟ್ ೨೦೦೭ ರಲ್ಲಿ ಅನಲಾಗ್ ಪ್ರಸಾರವು ನಿಂತಿತು ಮತ್ತು ರಾಷ್ಟ್ರದ ಟಿವಿ ಸೇವೆಗಳು ಈಗ ಸಂಪೂರ್ಣವಾಗಿ ಡಿಜಿಟಲ್‌ಗಳಾಗಿವೆ. ಕೊನೆಯಲ್ಲಿ ಪ್ರಾತಿನಿಧಿಕ ವಿರಾಮ ಸುಮಾರು ೪ ನಿಮಿಷಗಳು. ವೈಯಕ್ತಿಕ ಜಾಹೀರಾತುಗಳ ಪ್ರಸಾರದ ಅವಧಿಯು ಕೇಲವು ಸೆಕೆಂಡುಗಳ ಕಾಲ ವ್ಯತ್ಯಾಸವಾಗಬಹುದು (೭, ೧೦ ಮತ್ತು ೧೫ ನಿಮಿಷಗಳು ಸಾಮಾನ್ಯ). ಆದರೆ ಇತ್ತೀಚಿನ ದಿನಗಳಲ್ಲಿ ಇದು ಅಪರೂಪವಾಗಿದ್ದು ಒಂದು ನಿಮಿಷ ಮಾತ್ರವಾಗಿದೆ. ಬಹುರಾಷ್ಟ್ರೀಯ ಕಂಪನಿಗಳ ಹಲವಾರು ಜಾಹೀರಾತುಗಳು ಇಂಗ್ಲೀಷ್ ಭಾಷೆಯಿಂದ ಅನುವಾದಗೊಂಡ ವುಗಳಾಗಿವೆ. ಆದಾಗ್ಯೂ ಸ್ವೀಡಿಷ್ ಫಿನ್‌ಲ್ಯಾಂಡ್‌ನ ಇತರೆ ಅಧೀಕೃತ ಭಾಷೆಗಳನ್ನು ಹೊಂದಿದ್ದು ಚುನಾವಣೆಯ ಸಂದರ್ಭದಲ್ಲಿ ಕೆಲವು ರಾಜಕೀಯ ಜಾಹೀರಾತುಗಳನ್ನು ಹೊರತು ಪಡಿಸಿದರೆ ಉಳಿದ ಸಮಯದಲ್ಲಿ ಸ್ವೀಡಿಷ್ ಉಪಶೀರ್ಷಿಕೆ ಅಥವಾ ಸ್ವೀಡಿಷ್ ಭಾಷೆಯ ಜಾಹೀರಾತುಗಳನ್ನು ತೋರಿಸಲಾಗುವುದಿಲ್ಲ. ಇಂಗ್ಲೀಷ್ ಭಾಷೆಯ ಜಾಹೀರಾತುಗಳು ಪ್ರಕಟವಾಗುವುದು ಅಪರೂಪವೇನಲ್ಲ.
ರಷ್ಯಾ
[ಬದಲಾಯಿಸಿ]ರಷ್ಯಾದ ಜಾಹೀರಾತು ವಿರಾಮವು ೨ ಭಾಗಗಳನ್ನು ಒಳಗೊಂಡಿದೆ: ಸಂಯುಕ್ತ ಜಾಹೀರಾತು ಮತ್ತು ಪ್ರಾದೇಶಿಕ ಜಾಹೀರಾತು. ಒಂದು ತಾಸಿಗೆ ಅನುಕ್ರಮವಾಗಿ ಪ್ರಸಾರದ ಅವಧಿಯು ೪ ನಿಮಿಷಗಳು ಮತ್ತು ೧೫ ನಿಮಿಷಗಳು.
ಡೆನ್ಮಾರ್ಕ್
[ಬದಲಾಯಿಸಿ]- ಡ್ಯಾನಿಷ್‌ನ ಡಿಆರ್-ವಾಹಿನಿಗಳು ದೂರದರ್ಶನ ಅನುಮತಿಯ ಬಂಡವಾಳದಿಂದ ನಡೆಯುತ್ತಿದೆ ಹೀಗಾಗಿ ಇವರು ಎಂದಿಗೂ ಯಾವುದೇ ಜಾಹೀರಾತನ್ನು ತೋರಿಸುವುದಿಲ್ಲ. ಇತರೆ ಡ್ಯಾನಿಷ್ ದೂರದರ್ಶನ ಜಾಲವಾದ ಟಿವಿ2 ಮಾತ್ರವೇ ಕಾರ್ಯಕ್ರಮದ ನಡುವೆ ಬ್ಲಾಕ್ಸ್‌ಗಳಲ್ಲಿ ಜಾಹೀರಾತು ನೀಡುತ್ತದೆ. ಮುಂದಿನ ಪ್ರದರ್ಶನದ ಆಧಾರದ ಮೇಲೆ ೨ ರಿಂದ ೧೦ ನಿಮಿಷದವರೆಗೆ ಇದರ ಸಮಯವಿರುತ್ತದೆ.
- ಡೆನ್ಮಾರ್ಕ್‌ನಲ್ಲಿ ವಾಣಿಜ್ಯೀಕ ವಿರಾಮಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು ಮಕ್ಕಳನ್ನು ಗುರಿಯಾಗಿಸಿಕೊಂಡ ಜಾಹೀರಾತುಗಳ ಮೇಲೆ ನಿರ್ಬಂಧವಿದೆ. ಕನಾಲ್ ೫ ಮತ್ತು ಟಿವಿ3 ಯಂತವುಗಳಿಗೆ ಮಾತ್ರವೆ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವ ಅನುಮತಿ ಇದ್ದು ಇವುಯುನೈಟೆಡ್ ಕಿಂಗ್ಡಮ್‌ನಿಂದ ಉಪಗ್ರಹದ ಮೂಲಕ ಪ್ರಸಾರವಾಗುತ್ತವೆ.
ಏಷ್ಯಾ ಪೆಸಿಫಿಕ್
[ಬದಲಾಯಿಸಿ]ಮಲೇಶಿಯಾ
[ಬದಲಾಯಿಸಿ]- ಸರಕಾರದ ಸ್ವಾಮ್ಯಕ್ಕೊಳಪಟ್ಟವುಗಳಾಗಿರಲಿ ಅಥವಾ ಖಾಸಗಿಯಾಗಿರಲಿ, ಎಲ್ಲಾ ದೂರದರ್ಶನ ಕೇಂದ್ರಗಳು ಮತ್ತು ದೂರದರ್ಶನ ವಾಹಿನಿಗಳು ಜಾಹೀರಾತುಗಳನ್ನು ಪ್ರಸಾರ ಮಾಡುತ್ತವೆ. ಮಲೇಶಿಯಾದಲ್ಲಿ ಸ್ಥಳೀಯ ಮತ್ತು ವಿದೇಶೀ ಕಾರ್ಯಕ್ರಮಗಳ ನಡುವೆ ಮಾದರಿಯೆಂದು ಪರಿಗಣಿಸಲ್ಪಟ್ಟಿರುವ ವಿರಾಮದ ಕಾಲಾವಧಿಯು ವ್ಯತ್ಯಾಸ ಹೊಂದಿದ್ದರೆ ರಾಷ್ಟ್ರದ ರಾಜ್ಯ ಪ್ರಸಾರ ಕೇಂದ್ರವಾದ ಆರ್‌ಟಿಎಂ, ಸಾಮಾನ್ಯವಾಗಿ ಚಿಕ್ಕ ವಾಣಿಜ್ಯ ವಿರಾಮವನ್ನು ಹೊಂದಿದೆ. ಅರ್ಧಗಂಟೆಯ ಕಾರ್ಯಕ್ರಮಗಳ ನಡುವೆ ಸಾಮಾನ್ಯವಾಗಿ ಎರಡು ವಾಣಿಜ್ಯ ವಿರಾಮಗಳಿರುತ್ತವೆ ಮತ್ತು ವಾರ್ತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ/ಅಪೇಕ್ಷೆಯೊಂದಿಗೆ ಒಂದು ಗಂಟೆಯ ಅವಧಿಯ ಕಾರ್ಯಕ್ರಮಗಳ ನಡುವೆ ಮೂರು ವಾಣಿಜ್ಯ ವಿರಾಮಗಳಿರುತ್ತವೆ.
- ರಾಮದನ್ ತಿಂಗಳಲ್ಲಿ ಉಪವಾಸವನ್ನು ಕೊನೆಗೊಳಿಸುವಂತೆ ಪ್ರಕಟಣೆಯನ್ನು ನೀಡುವುದರ ಹೊರತಾಗಿ ಮತ್ತು ಪ್ರತೀ ಮಂಗಳವಾರ ಮತ್ತು ಗುರುವಾರ ಸಾಯಂಕಾಲ 7.30ಕ್ಕೆ ಪ್ರಸಾರವಾಗುವ ಮಲಯ್ ನಾಟಕ ಮತ್ತು ಮಲಯ ನಾಟಕಗಳ ಪುನರ್ ಪ್ರಸಾರದ ಅಕೇಸಿಯ ಕಾರ್ಯಕ್ರಮದ ನಡುವಿನ ಸಮಯದ ಹೊರತಾಗಿ ಭೂಮಿಯ ಮೇಲಿನ ದೂರದರ್ಶನವು ಪ್ರಸ್ತುತ ಪ್ರಸರಣಗೊಂಡ ಕಾರ್ಯಕ್ರಮದ ನಡುವೆ ಮಾತ್ರ ಜಾಹೀರಾತುಗಳನ್ನು ಪ್ರಸಾರ ಮಾಡುತ್ತದೆ. ೧೯೯೯ರಲ್ಲಿ ಮಲೇಶಿಯಾದ ದೂರದರ್ಶನ ಕೇಂದ್ರಗಳು ಗಂಟೆಗೆ ಕೇವಲ ೧೫ ನಿಮಿಷಗಳ ಕಾಲ ಮಾತ್ರ ದೂರದರ್ಶನ ಜಾಹೀರಾತುಗಳನ್ನು ಪ್ರಸಾರ ಮಾಡುತ್ತವೆ. ಈಗ ಅದು ಸುಮಾರು ೨೦ ನಿಮಿಷಗಳವರೆಗೆ ವೃದ್ಧಿಸಲ್ಪಟ್ಟು ಪ್ರತೀ ವಾಣಿಜ್ಯ ವಿರಾಮಕ್ಕೆ ೧೦ - ೧೫ ಜಾಹೀರಾತುಗಳು ಪ್ರಸಾರಗೊಳ್ಳುತ್ತವೆ.
- ಪ್ರಥಮ ಬಾರಿಗೆ ಸಿರ್ಕ, ೧೯೯೫ ರಲ್ಲಿ ಪರಿಚಯಿಸಲ್ಪಟ್ಟ ಮಲೇಶಿಯನ್ ದೂರದರ್ಶನ ಜಾಹೀರಾತುಗಳು ಮೊತ್ತಮೊದಲು KP/YYYY/XXXX ರಲ್ಲಿ ಕಂಡುಹಿಡಿಯಲ್ಪಟ್ಟವು. ಕೆಪಿ ಎಂಬುದು ಮಾಹಿತಿ ಖಾತೆಯ ಸಂಕ್ಷಿಪ್ತ ರೂಪವಾದರೆ YYYY ಎಂಬುದು ಜಾಹೀರಾತು ಉತ್ಪಾದನೆಗೊಂಡ ವರ್ಷ ಮತ್ತು XXXX ಎಂಬುದು ಅನುಮತಿ ನೀಡಲ್ಪಟ್ಟ ಜಾಹೀರಾತುಗಳ ಸಂಖ್ಯೆ, ಮತ್ತು ಹಿಂದೆ ಇದು ಜಾಹೀರಾತಿನ ಆರಂಭದಲ್ಲಿ ಅಥವಾ ಕೊನೆಯಲ್ಲಿ ತೋರಿಸಲ್ಪಡುತ್ತಿತ್ತು ಮತ್ತು ಚಿಕ್ಕ ಜಾಹೀರಾತುಗಳಲ್ಲಿ ಕೆಲವು ಜಾಹೀರಾತುಗಳು (೧೫ ಸೆಕೆಂಡಿಗಿಂತ ಕಡಿಮೆ ಅವಧಿಯ)ಜಾಹೀರಾತು ಪ್ರದರ್ಶನವಾಗುವ ಅವಧಿಯುದ್ದಕ್ಕೂ ಈ ಸಂಕೇತಗಳನ್ನು ತೋರಿಸುತ್ತವೆ. ೨೦೧೦ ರ ಸಮಯದಲ್ಲಿ ಈ ಸಂಕೇತಗಳನ್ನು ಬಳಸುವ ಜಾಹೀರಾತುಗಳು (2009 ರ ಮಧ್ಯ-ಅಂತಿಮ ಸಮಯಕ್ಕಿಂತಲೂ ಹಿಂದೆ ಪ್ರಸಾರವಾದ) ಈಗಲೂ ದೂರದರ್ಶನಗಳಲ್ಲಿ ಪ್ರಸಾರಗೊಳ್ಳುತ್ತಿವೆ.
- ಇತರ ಜಾಹೀರಾತುಗಳನ್ನು ನೀಡುವ ಪರವಾನಗಿಯು ೧೯೯೫ ರ ಪೂರ್ವದಲ್ಲಿ ಬಳಸಲ್ಪಡುತ್ತಿದ್ದ ಔಷಧೀಯ ಜಾಹೀರಾತುಗಳಿಗಾಗಿ ಕೆಕೆಎಲ್‌ಐಯು (ಆರೋಗ್ಯ ಇಲಾಖೆ, ಔಷಧೀಯ ಜಾಹೀರಾತು ಪ್ರಾಧಿಕಾರ), ಮತ್ತು ಕೀಟನಾಶಕಗಳ ಜಾಹೀರಾತುಗಳಿಗಾಗಿ ಜೆಐಆರ್‌ಪಿ (ಕೀಟನಾಶಕ ಜಾಹೀರಾತು ವಿಭಾಗ)ಗಳನ್ನೊಳಗೊಂಡಿದೆ. ಎಲ್ಲಾ ಕೀಟನಾಶಕ ಜಾಹೀರಾತುಗಳು "INI IALAH IKLAN RACUN PEROSAK" ಎಂಬ ಪದಗಳನ್ನು(ಇದು ಕೀಟನಾಶಕ ಜಾಹೀರಾತು) ಮತ್ತು ಜೆಐಆರ್‌ಪಿ ಜಾಹೀರಾತು ಸಂಕೇತವನ್ನು ಜಾಹೀರಾತಿನ ಆರಂಭದಲ್ಲಿ ಮತ್ತು "BACALAH LABEL KELUARAN SEBELUM MENGGUNAKANNYA" (ಬಳಸುವ ಮೊದಲು ಹೆಸರುಪಟ್ಟಿಯನ್ನು ಓದಿ) ಎಂಬ ಪದಗಳನ್ನು ಜಾಹೀರಾತಿನ ಅಂತ್ಯದಲ್ಲಿ ತೋರಿಸುವುದು ಕಡ್ಡಾಯವಾಗಿದೆ.
- ಇದು ವಾರ್ತಾ ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿಯೂ (ಮ್ಯಾಗಜೀನ್) ಉಪಯೋಗಿಸ ಲ್ಪಡುತ್ತಿತ್ತು. ೨೦೦೯ ರ ಮಧ್ಯಾಂತ್ಯದಲ್ಲಿ ಜಾಹೀರಾತುಗಳು KPKK/XXXX/YYYY ಜೊತೆಗೆ ತೋರಿಸಲ್ಪಡುತ್ತಿತ್ತು. ಇದರಲ್ಲಿ, KPKK ಯು ಮಾಹಿತಿ, ಸಂಪರ್ಕ ಮತ್ತು ಸಂಸ್ಕೃತಿಗಳ ಸಂಕ್ಷಿಪ್ತ ರೂಪವಾಗಿದೆ ಮತ್ತು ಇದು ಜಾಹೀರಾತಿನ ಆರಂಭದಲ್ಲಿ ಪ್ರದರ್ಶಿಸಲ್ಪಡುತ್ತಿತ್ತು. ಆರ್‌ಟಿಎಮ್‌ಗಳಲ್ಲಿ ಪ್ರದರ್ಶಿಸಲ್ಪಡುವ ಜಾಹೀರಾತುಗಳಲ್ಲಿ ಇದು ಸರ್ವೇ ಸಾಮಾನ್ಯ ಮತ್ತು ಅಸ್ಟ್ರೋ ಉಪಗ್ರಹಾಧಾರಿತ ದೂರದರ್ಶನ ಸೇವಾಕೇಂದ್ರ ಮತ್ತು ಮೀಡಿಯಾ ಪ್ರಿಮಾ ಸ್ವಾಮ್ಯಕ್ಕೊಳಪಟ್ಟ ದೂರದರ್ಶನ ಕೇಂದ್ರಗಳಾದ ಟಿವಿ3, ಎನ್‌ಟಿವಿ7, 8ಟಿವಿ ಮತ್ತು ಟಿವಿ9 ಇವೇ ಮೊದಲಾದುವುಗಳಲ್ಲಿ ಪ್ರದರ್ಶನಗೊಳ್ಳಲ್ಪಡುವ ಕೆಲವು ಜಾಹೀರಾತುಗಳಲ್ಲಿ ಕೂಡಾ ಸಾಮಾನ್ಯವಾಗಿವೆ.
- ಉಪಗ್ರಹದಿಂದ ಒಳಬರುವ ಸೂಚನೆಗಳಲ್ಲಿನ ನಿಧಾನಗತಿಗೆ ಕೂಡಾ ಆಸ್ಟ್ರೋ ಹೆಸರುವಾಸಿಯಾಗಿದ್ದು, ಕಾರ್ಯಕ್ರಮದ ಆರಂಭ ಮತ್ತು ಮುಕ್ತಾಯಗಳು ನಿಜವಾದ ಆರಂಭ ಮತ್ತು ಮುಕ್ತಾಯದ ಸಮಯಕ್ಕಿಂತ ಎರಡರಿಂದ ಐದು ನಿಮಿಷಗಳವರೆಗೆ ನಿಧಾನವಾಗಿದ್ದು (ಉದಾಹರಣೆಗೆ ಮಧ್ಯಾಹ್ನ ೧:೩೦ ಕ್ಕೆ ಪ್ರಸಾರಗೊಳ್ಳುವ ಕಾರ್ಯಕ್ರಮವು ಮಧ್ಯಾಹ್ನ ೧.೩೩ಕ್ಕೆ ಆರಂಭಗೊಳ್ಳುತ್ತವೆ). ಜೊತೆಗೆ ಸರಕಾರದ ನಿಯಮಗಳಿಗನುಗುಣವಾಗಿ, ಮಲೇಶಿಯದ ಮುದ್ರಾಂಕಿತ ಕಂಪನಿಗಳಾದ ಸೋನಿ, ಪ್ಯಾನಸೋನಿಕ್, ನೋಕಿಯ ಮತ್ತು ಎಲ್‌ಜಿಗಳ ಹೊರತಾಗಿ ವಿದೇಶಗಳಿಂದ ಉತ್ಪಾದಿಸಲ್ಪಟ್ಟ ಜಾಹೀರಾತುಗಳನ್ನು ನಿಷೇಧಿಸುವ ಸಲುವಾಗಿ, ಮತ್ತು ರಾಷ್ಟ್ರದೊಳಗೇ ತಯಾರಿಸಲ್ಪಟ್ಟ ಜಾಹೀರಾತುಗಳನ್ನು ಪ್ರಸಾರಮಾಡುವ ಉದ್ದೇಶದಿಂದ ಈ ವಾಹಿನಿಗಳಲ್ಲಿ ಪ್ರಸಾರಗೊಳ್ಳುವ ಕಾರ್ಯಕ್ರಮಗಳ ನಡುವೆ ವಾಣಿಜ್ಯ ಜಾಹೀರಾತುಗಳನ್ನು ಪ್ರಸಾರ ಮಾಡುತ್ತವೆ. ೧೯೯೫ ರ ನಂತರದಲ್ಲಿ ರಾತ್ರಿ ೧೦ ಗಂಟೆಯ ಬಳಿಕ ಮಲಯ್ ಕಾರ್ಯಕ್ರಮಗಳಲ್ಲದ ಸಮಯದಲ್ಲಿ ಆಲ್ಕೋಹಾಲಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರಸಾರ ಮಾಡುವುದು ರಾಷ್ಟ್ರದಲ್ಲಿ ನಿಷೇಧಕ್ಕೊಳಪಟ್ಟರೆ, ೧೯೯೫ರ ನಂತರ ಸಿಗರೇಟ್ ಪೆಟ್ಟಿಗೆಗಳನ್ನು ತೋರಿಸುವಂತಹ ಸಿಗರೇಟ್ ಜಾಹೀರಾತುಗಳು ಕೂಡಾ ನಿಷೇಧಕ್ಕೊಳಪಟ್ಟಿವೆ.
- ೨೦೦೩ ರಿಂದ ಪೂರ್ಣಪ್ರಮಾಣದಲ್ಲಿ ನಿಷೇಧಕ್ಕೊಳಗಾಗಿದೆ. ಮಕ್ಕಳ ಕಾರ್ಯಕ್ರಮಗಳ ಸಮಯದಲ್ಲಿ ಸಿದ್ಧಪಡಿಸಿದ ಆಹಾರ (ಫಾಸ್ಟ್ ಫುಡ್)ಗಳ ಜಾಹೀರಾತುಗಳನ್ನು ಪ್ರದರ್ಶಿಸುವುದು ೨೦೦೭ ರಿಂದ ನಿಷೇಧಿಸಲ್ಪಟ್ಟಿದೆ. ಮಲೇಶಿಯನ್ ದೂರದರ್ಶನ ಜಾಹೀರಾತುಗಳಿಗೆ ಕೂಡಾ ಕೆಲವು ನಿರ್ಬಂಧಗಳಿದ್ದು ೧೮ ಮೇಲ್ಪಟ್ಟ ವಯಸ್ಕರಿಗಾಗಿ ತೋರಿಸುವ ಜಾಹೀರಾತುಗಳು, ಸ್ತ್ರೀಯರಿಗೆ ಸಂಬಂಧಿಸಿದ ಉತ್ಪನ್ನಗಳ ಜಾಹೀರಾತುಗಳು ಮತ್ತು ಅನಾರೋಗ್ಯಕರ ಆಹಾರಪದಾರ್ಥಗಳ ಜಾಹೀರಾತುಗಳನ್ನು ಮಕ್ಕಳಿಗಾಗಿ ಪ್ರದರ್ಶಿಸಲ್ಪಡುವ ಕಾರ್ಯಕ್ರಮಗಳ ನಡುವೆ ಪ್ರದರ್ಶಿಸಲೇ ಬಾರದು ಮತ್ತು ಮಲಯ ಕಾರ್ಯಕ್ರಮಗಳು ನಡೆಯುತ್ತಿರುವಾಗ ಲಾಟರಿ ಜಾಹೀರಾತುಗಳನ್ನು ಪ್ರದರ್ಶಿಸುವುದು ನಿರ್ಬಂಧಕ್ಕೊಳಪಟ್ಟಿದೆ. ಮಹಿಳೆಯರ ಒಳ ಉಡುಪುಗಳ ಜಾಹೀರಾತುಗಳಿಗೆ ಮಲೇಶಿಯನ್ ದೂರದರ್ಶನಗಳಲ್ಲಿ ನಿರ್ಬಂಧ ಹೇರಲಾಗಿದೆ ಆದರೆ, ಮಲೇಶಿಯಾದಲ್ಲಿ ಪ್ರಕಟಗೊಳ್ಳುವ ಮಲಯ ಅಲ್ಲದ ಮ್ಯಾಗಜೀನ್‌ಗಳಲ್ಲಿ ಇವುಗಳ ಪ್ರಕಟಣೆಗೆ ಅನುಮತಿ ನೀಡಲಾಗಿದೆ.
ಫಿಲಿಫೈನ್ಸ್
[ಬದಲಾಯಿಸಿ]ಪಿಲಿಪ್ಪೈನ್ಸ್‌ನಲ್ಲಿ ಜಾಹೀರಾತು ನೀಡುವುದು ಪ್ರತಿಯೊಬ್ಬ ಪ್ರಸಾರಕರ ಸ್ವಯಂ ನಿಯಂತ್ರಣಕ್ಕೊಳಪಟ್ಟಿದೆ. ಸ್ವಯಂ-ನಿಯಂತ್ರಿತ ಸಂಸ್ಥೆಯಾದ ಪಿಲಿಪ್ಪೈನ್ಸ್‌ನ ಪ್ರಸಾರಕರ ಒಕ್ಕೂಟವು ರಾಷ್ಟ್ರದ ಹೆಚ್ಚಿನ ಎಲ್ಲಾ ದೂರದರ್ಶನಗಳನ್ನು ಮತ್ತು ರೇಡಿಯೋ ಪ್ರಸಾರಕರನ್ನು ಪ್ರತಿನಿಧಿಸಿದ್ದು, ಜಾಹೀರಾತಿನ ಕಾಲಾವಧಿಯನ್ನು ಗಂಟೆಗೆ 18 ನಿಮಿಷಕ್ಕೆ ನಿಗಧಿಪಡಿಸಿದೆ ಹಾಗೂ, ಇದು "ಸಾರ್ವಜನಿಕರ ಆಸಕ್ತಿಯನ್ನು ಉತ್ತೇಜಿಸಲು" ತೆಗೆದುಕೊಂಡ ಒಂದು ಪ್ರಯತ್ನವಾಗಿದೆ.[೧೫][೧೬]
ಆಸ್ಟ್ರೇಲಿಯಾ
[ಬದಲಾಯಿಸಿ]ಯುರೋಪ್ ಯೂನಿಯನ್‌ನಂತೆ ಆಸ್ಟ್ರೇಲಿಯದ ವಾಣಿಜ್ಯ ದೂರದರ್ಶನಗಳಲ್ಲಿ ಜಾಹೀರಾತುಗಳನ್ನು ನೀಡುವುದು 24 ಗಂಟೆಗಳ ಕಾಲಾವಧಿಯನ್ನು ಕೆಲವೊಂದು ಪ್ರಮಾಣದವರೆಗೆ ನಿರ್ಬಂಧಕ್ಕೊಳಗಾಗಿದೆ. ಆದರೆ, ಯಾವುದೇ ನಿರ್ಧಿಷ್ಟ ಗಂಟೆಯಲ್ಲಿ ಎಷ್ಟು ಜಾಹೀರಾತುಗಳು ಕಾಣಿಸಿಕೊಳ್ಳ ಬಹುದು ಎಂಬುದರ ಬಗ್ಗೆ ಯಾವುದೇ ನಿಯಮ-ನಿರ್ಬಂಧಗಳಿಲ್ಲ.[೧೭] ಆಸ್ಟ್ರೇಲಿಯಾದ ದೂರದರ್ಶನವು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಜಾಹೀರಾತು ವಿಷಯವನ್ನು ಒಳಗೊಂಡಿದೆ. ಪ್ರಧಾನ ಸಮಯವು 18 ನಿಮಿಷಗಳ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜಾಹೀರಾತುಗಳನ್ನು ಪ್ರತೀಗಂಟೆಗೆ ಪ್ರದರ್ಶಿಸುತ್ತವೆ. ಮಾಹಿತಿ ಹೊಂದಿರುವ ವಿವರವನ್ನು ಹೊಂದಿರುವ ಉತ್ಪನ್ನಗಳ ಮೇಲೆ ಮುದ್ರಣಗೊಂಡ ಉತ್ಪನ್ನ ಜಾಹೀರಾತುಗಳನ್ನು ’ಸಾರ್ವಜನಿಕ ಹಿತಾಸಕ್ತಿಯ ಪ್ರಕಟಣೆಗಳು’ ಎಂದು ನಿರ್ಧರಿಸಲಾಗುತ್ತದೆ. ಹಾಗೂ ಕಾಲಾವಧಿಯ ನಿರ್ಬಂಧವನ್ನು ಅವುಗಳ ಮೇಲೆ ಹೇರಲಾಗಿರುವುದಿಲ್ಲ; ಇದೇ ಪ್ರಕಾರ "ಈ ಕಾರ್ಯಕ್ರಮದ ಪ್ರಾಯೋಜಕರು" ಎಂಬ ಪ್ರಸಾರಕ್ಕೆ ಮತ್ತು ಸ್ಟೇಷನ್ ಗುರುತು ಮಾಹಿತಿಗೂ ಕೂಡ ಜಾಹೀರಾತು ದರವನ್ನು ಹಾಕಲಾಗುವುದಿಲ್ಲ. ಆಸ್ಟ್ರೇಲಿಯಾದ ವೀಕ್ಷಕರು ಒಂದು ಗಂಟೆಯ ಅವಧಿಯ ಕಾರ್ಯಕ್ರಮದಲ್ಲಿ ಕೇವಲ 40 ನಿಮಿಷಗಳಲ್ಲಿ ಮಾತ್ರ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ. ವಿದೇಶಿ, ಹಳೆಯ ದೂರದರ್ಶನ ಕಾರ್ಯಕ್ರಮಗಳು ಮತ್ತು ಸಿನೆಮಾಗಳನ್ನು ಗಮನಾರ್ಹವಾಗಿ ಕಡಿಮೆ ಅವಧಿಯವನ್ನಾಗಿ ಮಾಡಲಾಗಿದೆ. ಉದಾಹರಣೆಗೆ ಹಾಸ್ಯ ಕಾರ್ಯಕ್ರಮಗಳಲ್ಲಿ ಜಾಹೀರಾತುಗಳನ್ನು ಬಳಸಿಕೊಳ್ಳುವುದು ಹೆಚ್ಚು. ಕಾರ್ಯಕ್ರಮ ಪ್ರಾರಂಭದ ಮೊದಲು ಮತ್ತು ಕಾರ್ಯಕ್ರಮದ ಕೊನೆಯ ಎಂಡ್ ಕ್ರೆಡಿಟ್ ಮುಗಿದ ನಂತರದಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುವ ದೇಶಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದು. ಆಸ್ಟ್ರೇಲಿಯಾದಲ್ಲಿ ದೂರದರ್ಶನ ಜಾಹೀರಾತಿಗೆ ಕೆಲವೊಂದು ಗಮನಾರ್ಹ ನಿರ್ಭಂದಗಳನ್ನು ಹಾಕಲಾಗಿದೆ. ಸಿಗರೇಟ್ ಜಾಹಿರಾತು ಪ್ರಕಟಿಸುವಲ್ಲಿ ಸಂಪೂರ್ಣ ನಿಷೇಧ. ಮಕ್ಕಳಿಗೆ ಸಂಬಧಿಸಿದಂತಹ ಜಾಹೀರಾತುಗಳನ್ನು ಕಾರ್ಯಕ್ರಮದ ಸಮಯದಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ. ಎಬಿಸಿ, ನೇಷನ್ಸ್ ಪಬ್ಲಿಕ್ ಬ್ರಾಡ್‌ಕಾಸ್ಟರ್, ಇದು ಯಾವುದೇ ಹೊರ ಜಾಹೀರಾತುಗಳನ್ನು ಪ್ರಕಟ ಮಾಡುವುದಿಲ್ಲ. ಆದರೆ ಕಾರ್ಯಕ್ರಮಗಳ ನಡುವೆ ತನ್ನದೇ ಕಾರ್ಯಕ್ರಮದ ಜಾಹೀರಾತನ್ನು ಪ್ರಸಾರಮಾಡುತ್ತದೆ. ಆದರೆ ಇದು ಕೇವಲ ತಾಸಿಗೆ ಐದು ನಿಮಿಷಗಳಷ್ಟು ಮಾತ್ರ. ಎಸ್‌ಬಿಎಸ್, 2005ರಲ್ಲಿ ಹೊರಗಿನ ಜಾಹೀರಾತುಗಳನ್ನು ವಾಣಿಜ್ಯ ಕೇಂದ್ರಗಳಂತೆ ಪ್ರಸಾರಮಾಡುವ ಮೊದಲು ಜಾಹೀರಾತಿನ ಮೇಲೆ ನಿರ್ಬಂಧವನ್ನು ಹೊಂದಿತ್ತು.
ನ್ಯೂಜಿಲೆಂಡ್
[ಬದಲಾಯಿಸಿ]ನ್ಯೂಜಿಲೆಂಡ್‍ನ ರಾಜ್ಯದ-ಅಧೀನದಲ್ಲಿರುವ ಅಥವಾ ಖಾಸಗಿ ಮಾಲಿಕತ್ವದಲ್ಲಿರುವ ಎಲ್ಲಾ ಪ್ರಮುಖ ದೂರದರ್ಶನ ವಾಹಿನಿಗಳು (ಚಾನೆಲ್‌ಗಳು) ಪ್ರತಿ ಘಂಟೆಯ ಸರಾಸರಿ 15 ನಿಮಿಷಗಳ ತೆಗೆದುಕೊಳ್ಳುವಿಕೆಯ ಜೊತೆಗೆ ಜಾಹೀರಾತುಗಳನ್ನು ವಿಶ್ಲೇಷಿಸುತ್ತವೆ. ಅರ್ಧ-ಘಂಟೆಯ ಒಂದು ಕಾರ್ಯಕ್ರಮಲ್ಲಿ ಎರಡು ಜಾಹೀರಾತು ವಿರಾಮಗಳಿರುತ್ತವೆ, ಮತ್ತು ಒಂದು-ಘಂಟೆಯ ಅವಧಿಯ ಕಾರ್ಯಕ್ರಮದಲ್ಲಿ ನಾಲ್ಕು ಜಾಹೀರಾತುಗಳಿರುತ್ತವೆ. ಕ್ರಿಸ್‌ಮಸ್ ದಿನ, ಗುಡ್ ಫ್ರೈಡೇ, ಈಸ್ಟರ್ ಸಂಡೇ, ಮತ್ತು ಮಿಡ್‌ಡೇ ಗೂ ಮುಂಚಿನ ಭಾನವಾರದ ಬೆಳಗಿನ ವೇಳೆಗಳಲ್ಲಿಯೂ ಕೂಡ ದೂರದರ್ಶನ ಜಾಹೀರಾತುಗಳು ನಿಷೇಧಿಸಲ್ಪಟ್ಟಿರುತ್ತವೆ (ಆದಾಗ್ಯೂ ಟಿವಿ3 ವಾಹಿನಿಯು 2007 ರ ರಗ್ಬಿ ವಿಶ್ವ ಕಪ್ ಸಮಯದಲ್ಲಿ ಭಾನುವಾರದ ಬೆಳಗಿನ ಸಮಯದಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಿತ್ತು). ಹಾಗೆಯೇ, ಕೆಲವು ನಿರ್ದಿಷ್ಟ ಉತ್ಪನ್ನಗಳ ಜಾಹೀರಾತು ನೀಡುವಿಕೆಯೂ ಕೂಡ ನಿರ್ಬಂಧಿಸಲ್ಪಟ್ಟಿವೆ (ಉದಾಹರಣೆಗೆ ಆಲ್ಕೋಹಾಲ್, ಅನಾರೋಗ್ಯಕರ ಆಹಾರಗಳು) ಅಥವಾ ನಿಷೇಧಿಸಲ್ಪಟ್ಟಿವೆ (ಉದಾಹರಣೆಗೆ ತಂಬಾಕು). ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಅಥಾರಿಟಿ (ಜಾಹೀರಾತು ಗುಣಾತ್ಮಕ ಪ್ರಾಧಿಕಾರ)ಯು ಜಾಹೀರಾತು ಅನುವರ್ತನೆಗೆ ಜವಾಬ್ದಾರಿಯಾಗಿದೆ, ಮತ್ತು ಜಾಹೀರಾತು ಆಪಾದನೆಗಳ ಜೊತೆಗೆ ವ್ಯವಹರಿಸುತ್ತದೆ (ಚುನಾವಣಾ ಜಾಹೀರಾತನ್ನು ಹೊರತುಪಡಿಸಿ, ಇದಕ್ಕೆ ಬ್ರಾಡ್‌ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿಯು ಜವಾಬ್ದಾರಿಯನ್ನು ಹೊಂದಿರುತ್ತದೆ).
ಕೊರಿಯಾ, ದಕ್ಷಿಣ
[ಬದಲಾಯಿಸಿ]ಪ್ರಸ್ತುತ ನಿಯಮಗಳಡಿಯಲ್ಲಿ, ಭೂ ವಾಹಿನಿಗಳು ಕಾರ್ಯಕ್ರಮದಲ್ಲಿ ವಾಣಿಜ್ಯ ವಿರಾಮಗಳನ್ನು ತೆಗೆದುಕೊಳ್ಳುವಂತಿಲ್ಲ. ಆದ್ದರಿಂದ, ಜಾಹೀರಾತುಗಳು ಒಂದು ಕಾರ್ಯಕ್ರಮದ ಪರಿಚಯ ಮತ್ತು ಪ್ರಾರಂಭದ ನಡುವೆ ಇರಿಸಲ್ಪಟ್ಟಿರುತ್ತದೆ, ಮತ್ತು ಎಂಡ್ ಕ್ರೆಡಿಟ್ಸ್ ಮತ್ತು ಕಾರ್ಯಕ್ರಮದ ಕೊನೆಯ ನಡುವೆ ಪ್ರದರ್ಶಿಸಲ್ಪಡುತ್ತದೆ. ಭೂ ವಾಹಿನಿಗಳು ಅನೇಕ ವೇಳೆ ದ ಟೆನ್ ಕಮಾಂಡ್‌ಮೆಂಟ್ಸ್‌ನಂತಹ ದೀರ್ಘ-ಅವಧಿಯ ಕರ್ಯಕ್ರಮಗಳನ್ನು ಭಾಗಗಳಾಗಿ ವಿಂಗಡಿಸುತ್ತವೆ ಮತ್ತು ಪ್ರತಿ ಭಾಗವನ್ನು ಒಂದು ಪ್ರತ್ಯೇಕ ಕಾರ್ಯಕ್ರಮ ಎಂಬುದಾಗಿ ಪರಿಗಣಿಸುತ್ತವೆ. ಭೂ ವಾಹಿನಿಗಳು ಆಟಗಳ ಕಾರ್ಯಕ್ರಮಗಳ ನಡೆಯುವಿಕೆಯ ಸಮಯದಲ್ಲಿ ವಿರಾಮದ ಅವಧಿಯಲ್ಲಿ ವಾಣಿಜ್ಯ ವಿರಾಮವನ್ನು ತೆಗೆದುಕೊಳ್ಳಬಹುದು.
ಪೇ-ದೂರದರ್ಶನ ವಾಹಿನಿಗಳು ಕಾರ್ಯಕ್ರಮದ-ಮಧ್ಯ ವಾಣಿಜ್ಯ ವಿರಾಮಗಳನ್ನು ತೆಗೆದುಕೊಳ್ಳಬಹುದು, ಆದಾಗ್ಯೂ ಕೆಲವು ಪೇ ವಾಹಿನಿಗಳು ಭೂ ವಾಹಿಗಳು ಮಾಡುವ ರೀತಿಯಲ್ಲಿಯೇ ಜಾಹೀರಾತುಗಳನ್ನು ಸರಿಹೊಂದಿಸಿಡುತ್ತವೆ. ಭೂ ವಾಹಿನಿಗಳಲ್ಲಿ ಜಾಹೀರಾತುಗಳಿಗೆ ನಿರ್ವಹಣೆಗಳು (ನಿರ್ಬಂಧಗಳು) ಪೇ ವಾಹಿನಿಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ದಕ್ಷಿಣ ಕೋರಿಯನ್-ಅಲ್ಲದ ವಾಹಿನಿಗಳು ಈ ನಿರ್ಬಂಧಗಳ ಅಡಿಯಲ್ಲಿ ಬರುವುದಿಲ್ಲ. ತಂಬಾಕಿನ ಜಾಹೀರಾತುಗಳು ನಿಷೇಧಿಸಲ್ಪಟ್ಟಿವೆ.
ಲ್ಯಾಟಿನ್ ಅಮೆರಿಕ
[ಬದಲಾಯಿಸಿ]ಅರ್ಜೆಂಟೈನಾ
[ಬದಲಾಯಿಸಿ]2010 ರ ದಶಕದ ಕೊನೆಯ ನಂತರದಿಂದ, ಅರ್ಜೆಂಟೈನಾದ ಎಲ್ಲಾ ದೂರದರ್ಶನ ವಾಹಿನಿಗಳು (ರಾಷ್ಟ್ರದಿಂದ ನಿರ್ವಹಿಸಲ್ಪಡುವ ಕೇಬಲ್ ವಾಹಿನಿಗಳನ್ನೂ ಒಳಗೊಂಡಂತೆ) ಜಾಹೀರಾತುಗಳನ್ನು ಇತರ ಕಾರ್ಯಕ್ರಮಗಳಿಂದ "ಎಸ್ಪೆಷಿಯೋ ಪಬ್ಲಿಸಿಟಾರಿಯೋ" ("ಅಡ್ವರ್ಟೈಸಿಂಗ್ ಸ್ಪೇಸ್") ಎಂಬ ಬರಹದ ಜೊತೆಗೆ ಬಂಪರ್‌ಗಳನ್ನು (ಪ್ರತಿಬಂಧಕ) ಬಳಸಿಕೊಂಡು ಪ್ರತ್ಯೇಕಿಸುವಂತೆ ಆದೇಶವನ್ನು ನೀಡಲ್ಪಟ್ಟಿದ್ದವು. ವಾಣಿಜ್ಯ ಜಾಹೀರಾತು ನೀಡುವಿಕೆಯು ಪ್ರತಿ ಘಂಟೆಗೆ 12 ನಿಮಿಷಗಳಿಗೆ ನಿರ್ಬಂಧಿಸಲ್ಪಟ್ಟಿವೆ. ಕಾರ್ಯಕ್ರಮದ-ಮಧ್ಯದಲ್ಲಿ ಜಾಹೀರಾತು ಪ್ರದರ್ಶನವು ಅನುಮತಿಯನ್ನು ನೀಡಲ್ಪಟ್ಟಿದೆ, ಆದರೆ ಪ್ರತಿ ಘಂಟೆಗೆ 12 ನಿಮಿಷದ ಖೋಟಾಕ್ಕೆ ಪರಿಗಣಿಸಲ್ಪಡುತ್ತವೆ. ಅಂದರೆ 60 ನಿಮಿಷಗಳ ಒಂದು ಕಾರ್ಯಕ್ರಮವು 2 ನಿಮಿಷಗಳ ಇನ್-ಪ್ರಾಗ್ರಾಮ್ ಜಾಹೀರಾತನ್ನು ಹೊಂದಿದ್ದರೆ, ವಾಣಿಜ್ಯ ಜಾಹೀರಾತುಗಳು ಆ ನಿರ್ದಿಷ್ಟ ಘಂಟೆಗೆ 10 ನಿಮಿಷಗಳಿಗೆ ನಿರ್ಬಂಧಿಸಲ್ಪಡಬೇಕು. ಹಾಗಾಗದಿದ್ದ ಪಕ್ಷದಲ್ಲಿ ಆ ವಾಹಿನಿಯು ದಂಡವನ್ನು ತುಂಬಬೇಕಾಗಬಹುದು.
ಜನಪ್ರಿಯ ಸಂಗೀತದ ಬಳಕೆ
[ಬದಲಾಯಿಸಿ]1980 ರ ದಶಕಕ್ಕೂ ಮುಂಚೆ ದೂರದರ್ಶನ ಜಾಹೀರಾತುಗಳಲ್ಲಿ ಸಂಗೀತವು ಸಾಮಾನ್ಯವಾಗಿ ಪ್ರಾಸಾನುಪ್ರಾಸಗಳು ಮತ್ತು ಸಾಂದರ್ಭಿಕ ಸಂಗೀತಕ್ಕೆ ಸೀಮಿತವಾಗಿದ್ದವು; ಕೆಲವು ಸಂದರ್ಭಗಳಲ್ಲಿ ಒಂದು ನಿರ್ದಿಷ್ಟ ಉತ್ಪನ್ನಕ್ಕೆ ಒಂದು ವಿಷಯಾಧಾರಿತ ಹಾಡು ಅಥವಾ ಒಂದು ಪ್ರಾಸಾನುಪ್ರಾಸವನ್ನು ರಚಿಸುವ ಸಲುವಾಗಿ ಒಂದು ಜನಪ್ರಿಯ ಹಾಡಿನ ಸಾಹಿತ್ಯವು ಬದಲಾಯಿಸಲ್ಪಡುತ್ತಿತ್ತು. ಇದರ ಒಂದು ಉದಾಹರಣೆಯು ಇತ್ತೀಚಿನ ಜನಪ್ರಿಯ ಗೋಕೋಂಪೇರ್.ಕಾಮ್ ಜಾಹೀರಾತಿನಲ್ಲಿ ಕಂಡುಬರುತ್ತದೆ, ಅದು ಮೊದಲನೆಯ ಜಾಗತಿಕ ಯುದ್ಧದ ಸಮಯದಲ್ಲಿ ಜಾರ್ಜ್ ಎಮ್ ಚೌಹಾನ್‌ರಿಂದ ರಚಿಸಲ್ಪಟ್ಟ "ಓವರ್ ದೆರ್", 1917 ರ ಜನಪ್ರಿಯ ಹಾಡನ್ನು ಯುನೈಟೆಡ್ ಸ್ಟೇಟ್ಸ್ ಸೈನಿಕರ ಜೊತೆಗಿನ ಎರಡೂ ಯುದ್ಧದಲ್ಲಿ ಬಳಸಿಕೊಂಡಿತು. 1971 ರಲ್ಲಿ ಸಂಭಾಷಣೆಯು ಸಂಭವಿಸಲ್ಪಟ್ಟಿತು, ಆ ಸಂದರ್ಭದಲ್ಲಿ ಕೋಕಾ ಕೋಲಾ ಕಂಪನಿಗೆ ಬರೆಯಲ್ಪಟ್ಟ ಒಂದು ಹಾಡು ನ್ಯೂ ಸೀಕರ್ಸ್‌ರಿಂದ " ಐ ವುಡ್ ಲೈಕ್ ಟು ಟೀಚ್ ದ ವರ್ಲ್ಡ್ ಟು ಸಿಂಗ್" ಎಂಬ ಪಾಪ್ ಸಿಂಗಲ್ ಆಗಿ ಪುನರ್-ದಾಖಲಿಸಲ್ಪಟ್ಟಿತು. ಕೆಲವು ಪಾಪ್ ಮತ್ತು ರಾಕ್ ಹಾಡುಗಳು ಕವರ್ ಬ್ರ್ಯಾಂಡ್‌ಗಳಿಂದ ಜಾಹೀರಾತುಗಳಲ್ಲಿ ಬಳಸಿಕೊಳ್ಳುವ ಸಲುವಾಗಿ ಪುನಃ-ನಮೂದಿಸಲ್ಪಟ್ಟವು, ಆದರೆ ಈ ಉದ್ದೇಶಕ್ಕಾಗಿ ಮೂಲ ದಾಖಲೆಗಳ ಅನುಮತಿ ನೀಡುವಿಕೆಯ ವೆಚ್ಚವು 1980 ರ ದಶಕದ ಕೊನೆಯವರೆಗೂ ನಿಷೇಧಿಸಲ್ಪಟ್ಟಿತ್ತು. ದೂರದರ್ಶನ ಜಾಹೀರಾತುಗಳಲ್ಲಿ ಮುಂಚಿತವಾಗಿ-ದಾಖಲಿಸಲ್ಪಟ್ಟ ಜನಪ್ರಿಯ ಹಾಡುಗಳ ಬಳಕೆಯು ಮುಂಚಿತವಾಗಿ 1985 ರಲ್ಲಿ ಅರೇಥಾ ಫ್ರಾಂಕ್‌ಲಿನ್‌ರ ಹಾಡು "ಫ್ರೀವೇ ಲವ್" ಮೂಲ ಧ್ವನಿಮುದ್ರಣವನ್ನು ಬರ್ಜರ್ ಕಿಂಗ್ ರೆಸ್ಟೋರೆಂಟ್‌ಗೆ ಒಂದು ದೂರದರ್ಶನ ಜಾಹೀರಾತಿನಲ್ಲಿ ಕಂಡುಬಂದಿತು. ಇದು 1987 ರಲ್ಲಿಯೂ ಸಂಭವಿಸಲ್ಪಟ್ಟಿತು, ಆ ಸಮಯದಲ್ಲಿ ನಿಕ್ ದ ಬೀಟಲ್ಸ್‌ನ ಹಾಡು "ರೆವೊಲ್ಯುಷನ್"ನ ಮೂಲ ಧ್ವನಿಮುದ್ರಣವನ್ನು ಅಥ್ಲೆಟಿಕ್ ಶೂಗಳ ಒಂದು ಜಾಹೀರಾತಿನಲ್ಲಿ ಬಳಸಿಕೊಂಡಿತು. ಅದರ ನಂತರದಿಂದ, ಹಲವಾರು ಉತ್ತಮ ಜನಪ್ರಿಯ ಹಾಡುಗಳು ಅದೇ ರಿತಿಯಲ್ಲಿ ಬಳಸಿಕೊಳ್ಳಲ್ಪಟ್ಟವು. ಹಾಡುಗಳು ಮಾರಾಟ ಮಾಡಲ್ಪಡುವ ಉತ್ಪನ್ನದ ಬಗೆಗಿನ ಒಂದು ವಿಷಯವನ್ನು ವಾಸ್ತವಿಕ ರೀತಿಯಲ್ಲಿ ವಿವರಿಸುತ್ತದೆ (ಅಂದರೆ ಚೆವಿ ಟ್ರಕ್‌ಗಳಿಗೆ ಬಳಸಿಕೊಳ್ಳಲ್ಪಟ್ಟ ಬಾಬ್ ಸೇಗರ್‌ರ "ಲೈಕ್ ಎ ರಾಕ್") ಆದರೆ ಹೆಚ್ಚಿನ ವೇಳೆ ಇವುಗಳು ಪ್ರದರ್ಶಿಸಲ್ಪಟ್ ಉತ್ಪನ್ನಕ್ಕೆ ನೀಡಿದ ಹಾಡಿನ ಬಗೆಗೆ ಕೇಳುಗರು ಹೊಂದಿರುವ ಉತ್ತಮ ಅಭಿಪ್ರಾಯವನ್ನು ಸಂಯೋಜಿಸುವುದಕ್ಕೆ ಬಳಸಲ್ಪುತ್ತವೆ. ಕೆಲವು ದೃಷ್ಟಾಂತಗಳಲ್ಲಿ, ಜಾಹೀರಾತು ನೀಡುವಿಕೆಯಲ್ಲಿ ಹಾಡಿನ ಮೂಲ ಅರ್ಥವು ಸಂಪೂರ್ಣವಾಗಿ ವಿಭಿನ್ನವಾಗಿರಬಹುದು ಅಥವಾ ಬಳಕೆಯ ಅರ್ಥಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿರಬಹುದು; ಉದಾಹರಣೆಗೆ ಇಗ್ಗಿ ಪಾಪ್‌ರ ಹೆರಾಯಿನ್ ಚಟದ ಬಗೆಗಿನ ಒಂದು ಹಾಡಾದ "ಲಸ್ಟ್ ಫಾರ್ ಲೈಫ್" ಇದು ರಾಯಲ್ ಕ್ಯಾರಬೀನ್ ಇಂಟರ್‌ನ್ಯಾಷನಲ್, ಒಂದು ವಿಹಾರ ಷಿಪ್ ಲೈನ್‌ನ ಜಾಹೀರಾತು ನೀಡುವುದಕ್ಕೆ ಬಳಸಿಕೊಳ್ಳಲ್ಪಟ್ಟಿತು. ಪ್ರಮುಖ ಆರ್ಟಿಸ್ಟ್‌ಗಳ ಜೊತೆಗೆ ಸಂಗೀತ-ಕೇಳುವಿಕೆಯ ಒಪ್ಪಂದಗಳು, ಅದರಲ್ಲೂ ಪ್ರಮುಖವಾಗಿ ಮುಂಚೆ ಜಾಹೀರಾತು ಉದ್ದೇಶಕ್ಕಾಗಿ ಅನುಮತಿಯನ್ನು ನೀಡಿರದ ತಮ್ಮ ಧ್ವನಿಮುದ್ರಣಗಳಿಗಾಗಿ, ಉದಾಹರಣೆಗೆ ರೋಲಿಂಗ್ ಸ್ಟೋನ್ಸ್‌ರ "ಸ್ಟಾರ್ಟ್ ಮಿ ಅಪ್"ನ ಮೈಕ್ರೋಸಾಫ್ಟ್ ಬಳಕೆ ಮತ್ತು ಆಪಲ್ ಇಂಕ್‌ನ ಯು2 ದ "ವರ್ಟಿಗೋ" ಗಳು ತಮ್ಮಷ್ಟಕ್ಕೇ ತಾವೇ ಪ್ರಕಟಣೆಯ ಒಂದು ಮೂಲವಾಗಿ ಬದಲಾಗಲ್ಪಟ್ಟವು.
ಮುಂಚಿನ ದೃಷ್ಟಾಂತಗಳಲ್ಲಿ, ಹಾಡುಗಳು ಮೂಲ ಸಾಹಿತ್ಯಗಾರರ ಪ್ರತಿರೋಧದ ವಿರುದ್ಧವಾಗಿಯೂ ಬಳಸಿಕೊಳ್ಳಲ್ಪಡುತ್ತಿದ್ದವು, ಅವರು ತಮ್ಮ ಸಂಗೀತದ ಪ್ರಕಟಣೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿರುತ್ತಿದ್ದರು, ಇವುಗಳಲ್ಲಿ ಬೀಟಲ್ಸ್‌ನ ಸಂಗೀತವು ಪ್ರಾಯಶಃ ಹೆಚ್ಚು-ತಿಲಿಯಲ್ಪಟ್ಟ ಒಂದು ಉದಾಹರಣೆಯಾಗಿದೆ; ತೀರಾ ಇತ್ತೀಚಿನಲ್ಲಿ ಕಲಾಕಾರರು ತಮ್ಮ ಸಂಗೀತಗಳ ಕ್ರಿಯಾಶೀಲ ಬಳಕೆಯನ್ನು ಜಾಹೀರಾತುಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಜಾಹೀರಾತುಗಳಲ್ಲಿ ಬಳಸಿಕೊಳ್ಳಲ್ಪಟ್ತ ನಂತರದಿಂದ ಹಾಡುಗಳು ಜನಪ್ರಿಯತೆಯನ್ನು ಗಳಿಸಿವೆ ಮತ್ತು ಅವುಗಳ ಮಾರಾಟವೂ ಹೆಚ್ಚಾಗಲ್ಪಟ್ಟಿವೆ. ಲೇವಿ’ಸ್ ಕಂಪನಿಯು ಇದರ ಒಂದು ಜನಪ್ರಿಯ ದೃಷ್ಟಾಂತವಾಗಿದೆ, ಅದು ಹಲವಾರು ಒನ್ ಹಿಟ್ ವಂಡರ್‌ಗಳನ್ನು ತನ್ನ ಜಾಹೀರಾತುಗಳಲ್ಲಿ ಬಳಸಿಕೊಳ್ಳಲ್ಪಟ್ಟಿವೆ ("ಇನ್‌ಸೈಡ್", "ಸ್ಪೇಸ್‍ಮ್ಯಾನ್", ಮತ್ತು "ಫ್ಲ್ಯಾಟ್‌ಬೀಟ್" ನಂತಹ ಹಾಡುಗಳು). 2010 ರಲ್ಲಿ, ಪಿಆರ್‌ಎಸ್ ಫಾರ್ ಮ್ಯೂಸಿಕ್‌ನಿಂದ ನಡೆಸಲ್ಪಟ್ಟ ಸಂಶೋಧನೆಯು ದ ಪೊಲಿಫೋನಿಕ್ ಸ್ಪ್ರೀ ಯ ಲೈಟ್ & ಡೇ ಇದು ಯುಕೆ ಟಿವಿ ಜಾಹೀರಾತಿನಲ್ಲಿ ಅತ್ಯಂತ ಹೆಚ್ಚು ಬಳಸಿಕೊಳ್ಳಲ್ಪಟ್ಟ ಹಾಡಾಗಿತ್ತು ಎಂಬುದನ್ನು ಬಹಿರಂಗಪಡಿಸಿತು.[೧೮]
ಕೆಲವುವೇಳೆ ಜಾಹೀರಾತಿನಲ್ಲಿ ಕೆಲವು ಜನಪ್ರಿಯ ಹಾಡುಗಳ ಬಳಕೆಯು ಒಂದು ವಿರೋಧಾತ್ಮಕ ಪ್ರತಿಕ್ರಿಯೆಯನ್ನು ಸೃಷ್ಟಿಸಿದೆ. ಅನೇಕ ವೇಳೆ ಇದರಲ್ಲಿನ ತೊಂದರೆಯೆಂದರೆ ಜನರು ತಮಗೆ ಮಹತ್ವ ಎನಿಸುವ ಮೌಲ್ಯಗಳನ್ನು ಪ್ರೇರೇಪಿಸುವ ಹಾಡುಗಳನ್ನು ಜಾಹೀರಾತುಗಳಲ್ಲಿ ಬಳಸಿ ಕೊಳ್ಳುವ ವಿಚಾರವು ಇಷ್ಟವಾಗುವುದಿಲ್ಲ. ಉದಾಹರಣೆಗೆ ಸ್ಲೈ ಎಂಡ್ ದ ಫ್ಯಾಮಿಲಿ ಸ್ಟೋನ್ ದ ವರ್ಣನೀತಿಯ-ವಿರದ್ಧದ ಹಾಡು "ಎವರಿಡೇ ಪೀಪಲ್" ಇದು ಒಂದು ಕಾರ್‌ನ ಜಾಹೀರಾತಿನಲ್ಲಿ ಬಳಸಿಕೊಳ್ಳಲ್ಪಟ್ಟಿತ್ತು, ಇದು ಜನರಲ್ಲಿ ಕ್ರೋಧತೆಯನ್ನುಂಟು ಮಾಡಿತು.[who?] ಜಾಹೀರಾತುಗಳಿಗೆ ಸಾಮಾನ್ಯ ಶ್ರೇಯಾಂಕಗಳು ಅನೇಕ ವೇಳೆ ಪ್ರಾಥಮಿಕ ಉಪಕರಣಗಳಾಗಿ ಕ್ಲ್ಯಾರಿನೆಟ್‌ಗಳು, ಸೆಕ್ಸೋಫೋನ್‌ಗಳು, ಅಥವಾ ಇತರ ಸ್ಟ್ರಿಂಗ್‌ಗಳನ್ನು (ಉದಾಹರಣೆಗೆ ಶ್ರವಣದ/ವಿದ್ಯುತ್ ಗಿಟಾರ್‌ಗಳು ಮತ್ತು ವಯೋಲಿನ್) ಬಳಸಿಕೊಳ್ಳುತ್ತವೆ.
1990 ರ ದಶಕದ ಕೊನೆಯ ವೇಳೆಯಲ್ಲಿ ಮತ್ತು 2000 ರ ದಶಕದ ಪ್ರಾರಂಭದಲ್ಲಿ, ಎಲೆಕ್ಟ್ರಾನಿಕಾ ಸಂಗೀತವು ದೂರದರ್ಶನ ಜಾಹೀರಾತುಗಳಲ್ಲಿ ಹಿನ್ನೆಲೆ ಸಂಗೀತವಾಗಿ ಹೆಚ್ಚಾಗಿ ಬಳಸಿಕೊಳ್ಳಲ್ಪಟ್ಟಿತು, ಪ್ರಾಥಮಿಕವಾಘಿ ಆಟೋಮೊಬೈಲ್‌ಗಳಿಗೆ,[೧೯] ಮತ್ತು ನಂತರದಲ್ಲಿ ಇತರ ಟೆಕ್ನಾಲೊಜಿಕಲ್ ಮತ್ತು ಉದ್ದಿಮೆಯ ಉತ್ಪನ್ನಗಳಿಗೆ ಅಂದರೆ ಕಂಪ್ಯೂಟರ್ ಮತ್ತು ಆರ್ಥಿಕ ಸೇವೆಗಳಿಗೆ ಬಳಸಿಕೊಳ್ಳಲ್ಪಟ್ಟವು. ದೂರದರ್ಶ ಜಾಹೀರಾತು ನೀಡುವಿಕೆಯು ಹೊಸ ಕಲಾವಿದರಿಗೆ ತಮ್ಮ ಕಾರ್ಯಕ್ಕೆ ವೀಕ್ಷಕರಿಂದ ಮೆಚ್ಚುಗೆಯನ್ನು ಗಳಿಸಿಕೊಳ್ಳುವುದಕ್ಕೆ ಒಂದು ಜನಪ್ರಿಯ ವೇದಿಕೆಯಾಗಿ ಬದಲಾಗಲ್ಪಟ್ಟಿದೆ, ಅದರ ಜೊತೆಗೆ ಕೆಲವು ಜಾಹೀರಾತುಗಳು ಕಲಾವಿದರು ಮತ್ತು ಹಾಡಿನ ಮಾಹಿತಿಯನ್ನು ಪರದೆಯ ಮೇಲೆ ಜಾಹೀರಾತಿನ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಪ್ರಕಟಿಸುತ್ತವೆ.
ಟೀವಿ ಜಾಹೀರಾತುಗಳ ಭವಿಷ್ಯ
[ಬದಲಾಯಿಸಿ]ಟಿವೋದಂತಹ ಡಿಜಿಟಲ್ ವೀಡಿಯೋ ರೆಕಾರ್ಡರ್‌ಗಳ (ಡಿಜಿಟಲ್ ಟೆಲಿವಿಷನ್ ರೆಕಾರ್ಡರ್‌ಗಳು ಅಥವಾ ಡಿಟಿಆರ್‌ಗಳು ಎಂದೂ ಕರೆಯಲ್ಪಡುತ್ತವೆ) ಮತ್ತು ಸ್ಕೈ+, ಡಿಷ್ ನೆಟ್‌ವರ್ಕ್ ಮತ್ತು ಆಸ್ಟ್ರೋ ಮ್ಯಾಕ್ಸ್‌ಗಳಂತಹ ಸೇವೆಗಳ ಪ್ರಸ್ತಾವನೆಯು ಒಂದು ಹಾರ್ಡ್ ಡ್ರೈವ್‌ನೊಳಕ್ಕೆ ದೂರದರ್ಶನ ಕಾರ್ಯಕ್ರಮಗಳ ದಾಖಲಾತಿಗೆ ಸಹಾಯವನ್ನೊದಗಿಸಿತು, ಇದು ವೀಕ್ಷಕರಿಗೆ ಮುಂಚೆಯೇ ದಾಖಲಿಸಲ್ಪಟ್ಟ ಕಾರ್ಯಕ್ರಮಗಳ ಜಾಹೀರಾತುಗಳನ್ನು ಮುನ್ನಡೆಯುವಂತೆ ಮಾಡುವುದಕ್ಕೆ ಅಥವಾ ಅದನ್ನು ಆಟೋಮ್ಯಾಟಿಕ್ ಆಗಿ ಸ್ಕಿಪ್ ಆಗುವಂತೆ ಮಾಡುವ ಆಯ್ಕೆಗಳನ್ನು ಒದಗಿಸಿತು.
ಡಿಜಿಟಲ್ ವೀಡಿಯೋ ರೆಕಾರ್ಡರ್‌ಗಳು ವೀಕ್ಷಕರಿಗೆ ಜಾಹೀರಾತುಗಳನ್ನು ನೋಡದಿರುವುದಕ್ಕೆ ಆಯ್ಕೆಗಳನ್ನು ನೀಡುವ ಮೂಲಕ ದೂರದರ್ಶನ ಜಾಹೀರಾತುಗಳಿಗೆ ಒಂದು ಬೆದರಿಕೆಯನ್ನು ಒಡ್ಡಿವೆ ಎಂಬ ಊಹೆಯು ಅಸ್ತಿತ್ವದಲ್ಲಿದೆ. ಆದಾಗ್ಯೂ ಯುಕೆ ಪ್ರದರ್ಶನಗಳಿಂದ ಬಂದ ಒಂದು ಸಾಕ್ಷ್ಯವೆಂದರೆ ಇದು ಸತ್ಯ ಸಂಗತಿಯಲ್ಲ ಎಂಬುದು. 2008 ರ ಕೊನೆಯ ವೇಳೆಗೆ 22 ಪ್ರತಿಶತ ಯುಕೆ ಕುಟುಂಬಗಳು ಡಿಟಆರ್ ಅನ್ನು ಹೊಂದಿದ್ದವು. ಈ ಕುಟುಂಬಗಳಲ್ಲಿ ಹೆಚ್ಚಿನವುಗಳು ಸ್ಕೈ+ ಅನ್ನು ಹೊಂದಿದ್ದವು ಮತ್ತು ಈ ಮನೆಗಳಿಂದ ಮಾಹಿತಿಯು (33,000ಕ್ಕೂ ಹೆಚ್ಚು ಮನೆಗಳಿಂದ ಸ್ಕೈವ್ಯೂ[೨೦] ಪ್ಯಾನೆಲ್ ಮೂಲಕ ಸಂಗ್ರಹಿಸಲ್ಪಟ್ಟ ಮಾಹಿತಿ) ಹೇಳುವುದೇನೆಂದರೆ, ಒಮ್ಮೆ ಒಂದು ಕುಟುಂಬವು ಒಂದು ಡಿಟಿಆರ್ ಅನ್ನು ಹೊಂದಿದರೆ, ಅವರು ದೂರದರ್ಶನವನ್ನು ಮುಂಚೆ ವೀಕ್ಷಿಸುತಿದ್ದಕ್ಕಿಂತ 17 ಪ್ರತಿಶತ ಹೆಚ್ಚು ವೀಕ್ಷಿಸುತ್ತಾರೆ. ಅವರ ವೀಕ್ಷಣೆಯ 82 ಪ್ರತಿಶತವು ಜಾಹೀರಾತುಗಳನ್ನು ಮುಂದುವರೆಸದೆಯೇ ಸಾಮಾನ್ಯ, ಪ್ರಾಥಮಿಕ, ಬ್ರಾಡ್‌ಕಾಸ್ಟ್ ಟಿವಿ ಯನ್ನು ವೀಕ್ಷಿಸುವುದಾಗಿತ್ತು. ಟಿವಿ ವೀಕ್ಷಕರಲ್ಲಿ 18 ಪ್ರತಿಶತವು ಟೈಮ್-ಷಿಫ್ಟೆಡ್ ಆಗಿದ್ದರು (ಅಂದರೆ ಲೈವ್ ಬ್ರಾಡ್‌ಕಾಸ್ಟ್ ಅನ್ನು ವೀಕ್ಷಿಸುವವರಾಗಿರಲಿಲ್ಲ), 30 ವೀಕ್ಷಕರು ಈಗಲೂ ಕೂಡ ಪ್ರತಿಶತ ಜಾಹೀರಾತುಗಳನ್ನು ಸಾಮಾನ್ಯ ವೇಗದಲ್ಲಿ ವೀಕ್ಷಿಸುತ್ತಾರೆ. ಒಟ್ಟಾರೆಯಾಗಿ, ಒಂದು ಡಿಟಿಆರ್ ಅನ್ನು ಹೊಂದುವಿಕೆಯ ಮೂಲಕ ಉತ್ತೇಜಿಸಲ್ಪಟ್ಟ ಇನ್ನೂ ಹೆಚ್ಚಿನ ವೀಕ್ಷಿಸುವಿಕೆಯು 2 ಪ್ರತಿಶತ ವಿಕ್ಷಕರು ತಾವು ಡಿಟಿಆರ್ ಅನ್ನು ಹಾಕಿಸಿಕೊಳ್ಳುವುದಕ್ಕೆ ಮುಂಚೆ ವೀಕ್ಷಿಸುತ್ತಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸಾಮಾನ್ಯ ವೇಗದಲ್ಲಿ ಜಾಹೀರಾತುಗಳನ್ನು ವೀಕ್ಷಿಸುವುದು ಕಂಡುಬಂದಿತು ಸ್ಕೈವ್ಯೂ ಸಾಕ್ಷ್ಯವು ಬ್ರಾಡ್‌ಕಾಸ್ಟರ್ಸ್ ಆಡಿಯನ್ಸ್ ರಿಸರ್ಚ್ ಬೋರ್ಡ್ (ಬಿಎಆರ್‌ಬಿ) ಮತ್ತು ಲಂಡನ್ ಬಿಸಿನೆಸ್ ಸ್ಕೂಲ್‌ಗಳಿಂದ ವಾಸ್ತವಿಕ ಡಿಟಿಆರ್ ನಡುವಳಿಕೆಗಳ ಅಧ್ಯಯನಗಳ ಮೂಲಕ ಪುನರ್ನಿರ್ದೇಶಿಸಲ್ಪಟ್ಟವು.
ಟಿವಿ ಜಾಹೀರಾತುಗಳ ಇತರ ವಿಧಗಳು ಟಿವಿ ಕಾರ್ಯಕ್ರಮಗಳಲ್ಲಿ ಉತ್ಪನ್ನ ಪ್ಲೇಸ್‌ಮೆಂಟ್‌ಗಳನ್ನು ಒಳಗೊಳ್ಳುತ್ತವೆ. ಉದಾಹರಣೆಗೆ, ಎಕ್ಸ್ಟ್ರೀಮ್ ಮೇಕ್‌ಓವರ್:ಹೋಮ್ ಎಡಿಷನ್ ಇದು ಸಿಯರ್ಸ್, ಕೆನ್‌ಮೋರ್, ಮತ್ತು ಹೋಮ್ ಡಿಪೋಟ್ ಇವುಗಳನ್ನು ಈ ಕಂಪನಿಗಳಿಂದ ನಿರ್ದಿಷ್ಟವಾಗಿ ಉತ್ಪನ್ನಗಳನ್ನು ಬಳಸಿಕೊಳ್ಳುವ ಮೂಲಕ ಜಾಹೀರಾತು ನೀಡುತ್ತದೆ, ಮತ್ತು ಎನ್‌ಎಎಸ್‌ಸಿಎಆರ್‌ನ ಸ್ಪ್ರಿಂಟ್ ಕಪ್ ನಂತಹ ಸ್ಪೋರ್ಟ್ಸ್ ಈವೆಂಟ್‌ಗಳು ಅವುಗಳ ಸ್ಪಾನ್ಸರ್‌ಗಳ ಮೂಲಕ ಹೆಸರಿಸಲ್ಪಟ್ಟವು, ಮತ್ತು ವಾಸ್ತವವಾಗಿ, ರೇಚ್ ಕಾರ್‌ಗಳು ಹೆಚ್ಚಾಗಿ ಜಾಹೀರಾತುಗಳಲ್ಲಿ ಅಡಕವಾಗಿರುತ್ತವೆ. ಕಸ್ಮಿಕವಾಗಿ, ಕನಿಷ್ಠಪಕ್ಷ ಉತ್ತರ ಅಮೇರಿಕಾದಲ್ಲಿ, ಹಲವಾರು ಪ್ರಮುಖ ಸ್ಪೋರ್ಟಿಂಗ್ ವೆನ್ಯುಗಳು ವ್ರಿಗ್ಲೇಯ್ ಫೀಲ್ಡ್‌ನಷ್ಟು ಹಳೆಯ ದಿನಾಂಕಕ್ಕೆ ಸಂಬಂಧಿಸಿದ ವಾಣಿಜ್ಯ ಕಂಪನಿಗಳಿಗೆ ಹೆಸರಿಸಲ್ಪಟ್ಟಿವೆ. ಸ್ಟ್ರೀಮಿಂಗ್ ಆನ್‌ಲೈನ್ ವೀಡಿಯೋದಂತಹ ಹೊಸ ಮಾಧ್ಯಮಗಳ ಮೂಲಕ ಬಿತ್ತರಿಸಲ್ಪಟ್ಟ ದೂರದರ್ಶ ಕಾರ್ಯಕ್ರಮಗಳೂ ಕೂಡ ದೂರದರ್ಶನ ಜಾಹೀರಾತು ನೀಡುವಿಕೆಯ ಮೂಲಕ ಆದಾಯವನ್ನು ಗಳಿಸುವುದಕ್ಕೆ ಸಾಂಪ್ರದಾಯಿಕ ವಿಧಾನಗಳ ವಿಭಿನ್ನ ಸಂಭವನೀಯತೆಗಳನ್ನು ಬೆಳಕಿಗೆ ತರುತ್ತವೆ.[೨೧]
ಹೆಚ್ಚಾಗಿ ಒಂದೇ ವಾಹಿನಿಯಲ್ಲಿನ ಟಿವಿ ಪ್ರದರ್ಶನಗಳಿಗೆ ತೋರಿಸಲ್ಪಡುವ ಮತ್ತೊಂದು ವಿಧದ ಜಾಹೀರಾತು ಟಿವಿ ಪರದೆಯ ಕೆಳಗಡೆಯಲ್ಲಿ ಕಂಡುಬರುವ ಒಂದು ಜಾಹೀರಾತು ಆಗಿರುತ್ತದೆ, ಅದು ಪರದೆಯ ಸ್ವಲ್ಪ ಮಾತ್ರದ ಚಿತ್ರವನ್ನು ಬ್ಲಾಕ್ ಮಾಡುತ್ತದೆ. "ಬ್ಯಾನರ್‌ಗಳು", ಅಥವಾ "ಲೋಗೋ ಬಗ್‌ಗಳು" ಎಂದು ಕರೆಯಲ್ಪಡುವ ಅವುಗಳು ಮೀಡಿಯಾ ಕಂಪನಿಗಳಿಂದ ದ್ವಿತೀಯಕ ಘಟನೆಗಳು (2E) ಎಂಬುದಾಗಿ ಪರಿಗಣಿಸಲ್ಪಡುತ್ತವೆ ಇದು ತೀವ್ರತರವಾದ ವಾತಾವರಣದ ಬಗೆಗಿನ ಎಚ್ಚರಿಕೆಯು ನೀಡಲ್ಪಡುವ ರೀತಿಯಲ್ಲಿಯೇ ಮಾಡಲ್ಪಡುತ್ತದೆ, ಆದರೆ ಇವುಗಳು ಹೆಚ್ಚು ಪುನರಾವರ್ತಿತವಾಗಿ ಪ್ರದರ್ಶಿಸಲ್ಪಡುತ್ತವೆ. ಅವುಗಳು ಕೆಲವು ವೇಳೆ ಪರದೆಯ 5 ರಿಂದ 10 ಪ್ರತಿಶತ ಪ್ರದೇಶವನ್ನು ಮಾತ್ರ ಆಕ್ರಮಿಸಿಕೊಳ್ಳಬಹುದು, ಆದರೆ ಹೆಚ್ಚೆಂದರೆ ಅವುಗಳು ಪರದೆಯ 25 ಪ್ರತಿಶತ ಪ್ರದೇಶವನ್ನು ಆಕ್ರಮಿಸಿಕೊಳ್ಳಬಹುದಾಗಿದೆ. ಕಾರ್ಯಕ್ರಮದ ವಿಷಯದ ಭಾಗಗಳಾದ ಉಪಶೀರ್ಷಿಕೆಗಳು ಬ್ಯಾನರ್‌ಗಳ ಮೂಲಕ ಸಂಪೂರ್ಣವಾಗಿ ಅಸ್ಪಷ್ಟವಾಗಲ್ಪಡಬಹುದು. ಕೆಲವುಗಳು ಗದ್ದಲವನ್ನೂ ಉಂಟಮಾಡುತ್ತವೆ ಮತ್ತು ಪರದೆಯೆಲ್ಲೆಡೆ ಚಲಿಸುತ್ತ ಇರುತ್ತವೆ. ಒಂದು ಉದಾಹರಣೆಯೆಂದರೆ ಥ್ರೀ ಮೂನ್ಸ್ ಓವರ್ ಮೈಲ್‌ಫೋರ್ಡ್‌ನ 2E ಜಾಹೀರಾತುಗಳು, ಅವುಗಳು ಟಿವಿ ಪ್ರದರ್ಶನಗಳ ಪ್ರೀಮಿಯರ್‌ನ ಹಲವು ತಿಂಗಳುಳ ಮೊದಲೇ ಬಿತ್ತರಿಸಲ್ಪಡುತ್ತವೆ. ಪರದೆಯ ಕೆಳ-ಎಡಭಾಗದ ಸರಿಸುಮಾರು 25 ಪ್ರತಿಶತ ಭಾಗವನ್ನು ತೆಗೆದುಕೊಳ್ಳುವ ಒಂದು ವೀಡೀಯೋ ಮತ್ತೊಂದು ದೂರದರ್ಶನ ಕಾರ್ಯಕ್ರಮದ ಅವಧಿಯಲ್ಲಿ ಒಂದು ಜೊತೆಗಿನ ವಿಸ್ಪೋಟನದ ಜೊತೆಗೆ ಚಂದ್ರನೊಳಕ್ಕೆ ಪರಿಣಾಮ ಬೀರುವ ಒಂದು ಧೂಮಕೇತುವನ್ನು ಪ್ರದರ್ಶಸುತ್ತವೆ.
ಗೂಗಲ್‌ನ ಎರಿಕ್ ಶ್ಮಿಡ್ಟ್ ಇದು ದೂರದರ್ಶನ ಜಾಹೀರಾತು ಬಿತ್ತರ ಮತ್ತು ಅದನ್ನು ಅತ್ಯುತ್ತಮವಾಗಿಸುವಿಕೆಯ ವ್ಯಾಪಾರಕ್ಕೆ ಪ್ರವೇಶಿಸುವುದಕ್ಕೆ ಯೋಜನೆಗಳನ್ನು ಘೋಷಿಸಿದೆ. ಗೂಗಲ್ ಒಂದು ತತ್‌ಕ್ಷಣದ ವೀಡಿಯೋ ಉತ್ಪಾದನೆ ಮತ್ತು ನೆಟ್‌ವರ್ಕ್ (ಸಂಪರ್ಕಜಾಲ) ಇರಿಸುವಿಕೆಯ ಫೂಟ್‌ಹೋಲ್ಡ್ ನ ಕೊರತೆಯನ್ನು ಅನುಭವಿಸುತ್ತಿದೆ ಎಂಬ ಸತ್ಯಸಂಗತಿಯ ಹೊರತಾಗಿಯೂ ಇದು ಸಂಭವಿಸುತ್ತದೆ. ಇದು ಹೇಗೆ ಸಂಭವಿಸುತ್ತದೆ ಎಂಬುದರ ಬಗ್ಗೆ ಕೆಲವು ಮಾಹಿತಿಗಳು ಲಭ್ಯವಿದೆ, ಆದರೆ ಅವುಗಳು ರೇಡಿಯೋ ಬ್ರಾಡ್‌ಕಾಸ್ಟ್‌ನಲ್ಲಿ ತಮ್ಮ ವ್ಯಾಪಾರಿ ತಂತ್ರವು ನಿರ್ದೇಶಿಸಲ್ಪಟ್ಟ ಒಂದು ಸಮ ರೀತೀಯ ಮಾದರಿಯನ್ನು ಬಳಸಿಕೊಳ್ಳುತ್ತವೆ, ಅವು ಆಪರೇಷನ್ ಸಿಸ್ಟಮ್ ಸರ್ವೀಸ್ ಪ್ರೊವೈಡರ್‌ಗಳ ಸ್ವಾಧೀನಪಡಿಸಿಕೊಳ್ಳುವಿಕೆಯನ್ನು ಒಳಗೊಂಡಿದ್ದವು.[೨೨][೨೩]
ಆನ್‌ಲೈನ್ ವೀಡಿಯೋ ನಿರ್ದೇಶಕಗಳು ಪರಸ್ಪರ ಕಾರ್ಯನಡೆಸುವ ಜಾಹೀರಾತು ನೀಡುವಿಕೆಯ ಒಂದು ಹೊರಹೊಮ್ಮುತ್ತಿರುವ ವಿಧಗಳಾಗಿವೆ, ಅವುಗಳು ಪ್ರಾಥಮಿಕವಾಗಿ ದೂರದರ್ಶನಕ್ಕಾಗಿ ನಿರ್ಮಿಸಲ್ಪಟ್ಟ ಜಾಹೀರಾತುಗಳನ್ನು ಹಿಂದಕ್ಕೆ ತರುವುದಕ್ಕೆ ಮತ್ತು ಅದಕ್ಕೆ ಪ್ರತಿಕ್ರಿಯಿಸುವುದಕ್ಕೆ ಸಹಾಯ ಮಾಡುತ್ತವೆ. ಈ ನಿರ್ದೇಶಕಗಳು ಪ್ರತಿಕ್ರಿಯೆ ಶೀಟ್‌ಗಳು ಮತ್ತು ಕ್ಲಿಕ್-ಟು-ಕಾಲ್‌ನಂತಹ ಇತರ ಮೌಲ್ಯ-ವರ್ಧಿತ ಸೇವೆಗಳನ್ನು ನೀಡುವ ಸಂಭವನೀಯತೆಯನ್ನೂ ಹೊಂದಿವೆ, ಅವು ಬ್ರ್ಯಾಂಡ್‌ನ ಜೊತೆಗೆ ಪರಸ್ಪರ ಕ್ರಿಯೆಯ ಸಂಭಾವ್ಯತೆಯನ್ನು ಹೆಚ್ಚು ವರ್ಧಿಸುತ್ತದೆ.
2008-09 ಟಿವಿ ಸೀಸನ್ ಸಮಯದಲ್ಲಿ, ಫಾಕ್ಸ್ ಒಂದು ಹೊಸ ತಂತ್ರಗಾರಿಕೆಯ ಜೊತೆಗೆ ಪ್ರಯೋಗವನ್ನು ನಡೆಸಿತು, ಅದಕ್ಕೆ ನೆಟ್‌ವರ್ಕ್ "ರಿಮೋಟ್-ರಹಿತ ಟಿವಿ" ಎಂಬ ಹೆಸರನ್ನು ನೀಡಿತು. ಫ್ರಿಂಜ್ ಮತ್ತು ಡೊಲ್‌ಹೌಸ್‌ನ ಉಪಕಥೆಗಳು ಸರಿಸುಮಾರು ಹತ್ತು ನಿಮಿಷಗಳ ಜಾಹೀರಾತುಗಳನ್ನು ಒಳಗೊಂಡಿದ್ದವು, ಇದು ಇತರ ದೀರ್ಘ-ಅವಧಿಯ ಕಾರ್ಯಕ್ರಮಗಳಲ್ಲಿ ಬರುವ ಜಾಹೀರಾತುಗಳಿಗಿಂತ ನಾಲ್ಕರಿಂದ ಆರು ನಿಮಿಷ ದೀರ್ಘವಾಗಿತ್ತು. ಅಲ್ಪಾವಧಿಯ ವಾಣಿಜ್ಯ ವಿರಾಮಗಳು ವೀಕ್ಷಕರನ್ನು ಕಾರ್ಯನಿರತವಾಗಿರಿಸುತ್ತವೆ ಮತ್ತು ಜಾಹೀರಾತುದಾರರ ಬ್ರ್ಯಾಂಡ್‌ನ ನೆನೆಸಿಕೊಳ್ಳುವಿಕೆಯನ್ನು ಉತ್ತಮಗೊಳಿಸುತ್ತವೆ, ಹಾಗೆಯೇ ವಾಹಿನಿಯನ್ನು ಬದಲಾಯಿಸುವುದು ಮತ್ತು ಹಳೆಯ ಜಾಹೀರಾತುಗಳನ್ನು ಮುಂದಕ್ಕೆ ಹೋಗುವಂತೆ ಮಾಡುವುದನ್ನು ತಪ್ಪಿಸುತ್ತವೆ ಎಂಬುದಾಗಿ ಫಾಕ್ಸ್ ಹೇಳಿದ್ದಾರೆ. ಆದಾಗ್ಯೂ, ಈ ತಂತ್ರಗಾರಿಕೆಯು ನೆಟ್‌ವರ್ಕ್ ಊಹಿಸಿದಷ್ಟು ಯಶಸ್ವಿಯಾಗಿರಲಿಲ್ಲ ಮತ್ತು ಇದು ಮುಂದಿನ ಅವಧಿಗೆ ಮಂದುವರೆಯುತ್ತದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಿರಲಿಲ್ಲ.[೨೪]
ಇವನ್ನೂ ಗಮನಿಸಿ
[ಬದಲಾಯಿಸಿ]- ಜಾಹೀರಾತು
- ರಾಜಕೀಯ ಟಿವಿ ಜಾಹೀರಾತು ನೀಡುವಿಕೆ
- ಆಕ್ರಮಣಶೀಲ ಜಾಹೀರಾತು
- ದೂರದರ್ಶನ ಜಾಹೀರಾತುಗಳಲ್ಲಿ ಲಿಂಗ ಏಕಪ್ರಕಾರತೆಗಳು
- ಉತ್ಪನ್ನ ನಿಯೋಜನೆ
- ಪ್ರಚಾರ (ಮಾರ್ಕೆಟಿಂಗ್)
- ಪ್ರಾಯೋಜಕ (ಮಾಣಿಜ್ಯ)
- ಆಡ್‌ಸ್ಟಾಕ್ ಜಾಹೀರಾತು
- ರೇಡಿಯೋ ಜಾಹೀರಾತು
- ಪ್ರೋಮೋ (ಮಾಧ್ಯಮ)
- ಉದ್ದಿಮೆ ಗುಣಮಟ್ಟ ಜಾಹೀರಾತು ಸಂಶೋಧಕ
- ಮಾರ್ಕೆಟಿಂಗ್
- ಬ್ರ್ಯಾಂಡ್
- ಥಿಂಕ್‌ಬಾಕ್ಸ್
- ಜಾಹೀರಾತು ಪ್ರತಿಬಂಧಕ (ಬಂಪರ್)
- ಸಾರ್ವಜನಿಕ ಸೇವಾ ಘೋಷಣೆ
- ದೂರದರ್ಶನ ಅನುಮತಿ
- ಪರಸ್ಪರ ಜಾಹೀರಾತು
ಉಲ್ಲೇಖಗಳು
[ಬದಲಾಯಿಸಿ]- ↑ ಫ್ರಿಟ್ಜ್ ಪ್ಲಾಸರ್, ಗ್ಲೋಬಲ್ ಪಾಲಿಟಿಕಲ್ ಕ್ಯಾಂಪೇನಿಂಗ್ , ಪುಟ226
- ↑ "ಆರ್ಕೈವ್ ನಕಲು". Archived from the original on 2010-11-20. Retrieved 2011-04-23.
- ↑ "A U. S. Television Chronology, 1875–1970". Jeff560.tripod.com. Retrieved 2009-08-19.
- ↑ ಐಟಿವಿಯ ಅತ್ಯಂತ ಉತ್ತಮ ಜಾಹೀರಾತುಗಳು Archived 2009-03-05 ವೇಬ್ಯಾಕ್ ಮೆಷಿನ್ ನಲ್ಲಿ.. ಮರುಸಂಪಾದಿಸಲ್ಪಟ್ಟಿದೆ
- ೨೦೧೦-೦೭-೩೦.
- ↑ 100 ಅತ್ಯುತ್ತಮ ಟಿವಿ ಜಾಹೀರಾತುಗಳು. 2010-07-30ರಂದು ಮರು ಸಂಪಾದಿಸ ಲಾಯಿತು
- ↑ ದೂರದರ್ಶನ ಜಾಹೀರಾತುಗಳು ಎಷ್ಟು ವೆಚ್ಚದಾಯಕವಾಗಿರುತ್ತವೆ?
- ↑ ೭.೦ ೭.೧ ೭.೨ Storey, Michael (2009-04-23). "THE TV COLUMN: Not in 18-49 age group? TV execs write you off". Arkansas Democrat Gazette. Archived from the original on 2009-08-22. Retrieved 2008-05-02.
- ↑ Santiago, Rosario (2007-10-03). articles/ greys-anatomy/for-advertising-purposes-greys-11849.aspx "For Advertising Purposes, 'Grey's Anatomy' May Well be Colored Green". BuddyTV. Retrieved 2009-05-03.
{{cite news}}
: Check|url=
value (help) - ↑ Downey, Kevin (2008-07-07). com/artman2/publish/ Research_25/ DRVs_ giving _broadcast_more_gray_hairs.asp "DVRs giving broadcast more gray hairs". Media Life Magazine. Retrieved 2009-05-09.
{{cite news}}
: Check|url=
value (help)[ಶಾಶ್ವತವಾಗಿ ಮಡಿದ ಕೊಂಡಿ] - ↑ "ಆರ್ಕೈವ್ ನಕಲು". Archived from the original on 2013-09-02. Retrieved 2011-04-23.
- ↑ ೧೧.೦ ೧೧.೧ ೧೧.೨ "PRESS DIGEST - British business - April 18". Reuters. 2010-04-18. Archived from com/article/ idUSLDE63H00G20100418 the original on 2013-07-15. Retrieved 2021-08-10.
{{cite news}}
: Check|url=
value (help) - ↑ European Parliament. "Culture and Education Committee endorses new TV advertising rules (2007-11-13)". Archived from the original on 2008-06-09. Retrieved 2008-05-05.
- ↑ "1950's Commercials". Whirligig-tv.co.uk. 1955-09-22. Retrieved 2009-08-19.
- ↑ Broadcasting Commission of Ireland. "Radio and Television Act, 1988" (PDF). Archived from the original (PDF) on 2009-02-05. Retrieved 2009-01-28.
- ↑ "ಕೆಬಿಪಿ: ಒಂದು ಘಂಟೆಗೆ ಕೇವಲ 18 ನಿಮಿಷಗಳ ಜಾಹೀರಾತುಗಳು - INQUIRER.net, ಪಿಲಿಫೈನ್ ನ್ಯೂಸ್ ಫಾರ್ ಫಿಲಿಪಿನೋಸ್". Archived from the original on 2008-03-10. Retrieved 2011-04-23.
- ↑ "Business - ABS-CBN supports cap on ad load - INQUIRER.net". News.google.com. 2008-03-17. Retrieved 2009-08-19.
- ↑ "ಆರ್ಕೈವ್ ನಕಲು" (PDF). Archived from the original (PDF) on 2014-02-13. Retrieved 2011-04-23.
- ↑ ಸೇನ್ಸ್‌ಬರಿಸ್ ಸಾಂಗ್ ಟಾಪ್ಸ್ ಆಯ್‌ಡ್ಸ್ ಪ್ಲೇಲಿಸ್ಟ್
- ↑ ದ ಚೇಂಜಿಂಗ್ ಶೇಪ್ ಆಫ್ ದ ಕಲ್ಚರ್ ಇಂಡಸ್ಟ್ರಿ; ಆರ್ ಹೌ ಡಿಡ್ ಇಲೆಕ್ಟ್ರೋನಿಕಾ ಮ್ಯೂಜಿ? , ಟಿಮೋಥಿ ಡ್. ಟೇಲರ್, ಕ್ಯಾಲರ್ನಿಯಾ ವಿಶ್ವವಿದ್ಯಾಲಯ, ಲಾಸ್ ಏಂಲೀಸ್, ಟೆಲಿವಿಜನ್ & ನ್ಯೂ ಮೀಡಿಯಾ, ಆವೃತ್ತಿ Vol. 8, ಸಂಖ್ಯೆ. 3, 235-258 (2007)
- ↑ ಸ್ಕೈವ್ಯೂ
- ↑ ಉದಾಹರಣೆಗೆ extrememedium.com ಅನ್ನು ನೋಡಿ
- ↑ "Magnolia Ventures - Technology Development Report". Magven.com. 2006-08-21. Archived from the original on 2011-07-17. Retrieved 2009-08-19.
- ↑ ಡಿಮಾರ್ಕ್
- ↑ Brian Stelter (2009-02-12). "Fox TV's Gamble: Fewer Ads in a Break, but Costing More". ದ ನ್ಯೂ ಯಾರ್ಕ್ ಟೈಮ್ಸ್. Retrieved 2009-02-13.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Television Commercials ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- ಹಾಸ್ಯ ಟಿವಿ ಜಾಹೀರಾತುಗಳು Archived 2011-04-26 ವೇಬ್ಯಾಕ್ ಮೆಷಿನ್ ನಲ್ಲಿ. - ಜನಪ್ರಿಯ ಜಾಹೀರಾತುಗಳ ಒಂದು ಸಂಗ್ರಹ
- ಆಯ್ಡ್ವ್ಯೂವ್ಸ್ - ಡ್ಯೂಕ್ ಯುನಿವರ್ಸಿಟಿ ಲೈಬ್ರರೀಸ್ ಇಜಿಟಲ್ ಕಲೆಕ್ಷನ್ : ವಿಂಟೇಜ್ ದೂರದರ್ಶನ ಜಾಹೀರಾತುಗಳ ಒಂದು ಡಿಜಿಟಲ್ ಸಂಗ್ರಹ
- ಹಾಸ್ಯ ಟಿವಿ ಜಾಹೀರಾತುಗಳು Archived 2015-08-01 ವೇಬ್ಯಾಕ್ ಮೆಷಿನ್ ನಲ್ಲಿ. - ಹಾಸ್ಯ ಟಿವಿ ಜಾಹೀರಾತುಗಳ ಒಂದು ಡಿಜಿಟಲ್ ಡಾಟಾಬೇಸ್
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: URL
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Articles with limited geographic scope from March 2010
- Articles with invalid date parameter in template
- All articles with specifically marked weasel-worded phrases
- Articles with specifically marked weasel-worded phrases from November 2010
- Articles with Open Directory Project links
- ಮಧ್ಯವರ್ತಿಯ ಮೂಲಕ ಜಾಹೀರಾತು ನೀಡುವಿಕೆ
- ಮಾರ್ಕೆಟಿಂಗ್
- ಪ್ರಚಾರ ಮತ್ತು ಮಾರುಕಟ್ಟೆ ಸಂಪರ್ಕಗಳು
- ದೂರದರ್ಶನ ಪರಿಭಾಷೆ
- ದೂರದರ್ಶನ ಜಾಹೀರಾತುಗಳು
- ಸಮೂಹ ಮಾಧ್ಯಮ