ಟಾಟಾ ಸ್ಟೀಲ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಾಟಾ ಸ್ಟೀಲ್‌
ಸಂಸ್ಥೆಯ ಪ್ರಕಾರPublic (ಬಿಎಸ್‌ಇ: 500470)
ಸ್ಥಾಪನೆ1907
ಮುಖ್ಯ ಕಾರ್ಯಾಲಯJamshedpur, Jharkhand, India[೧]
ಪ್ರಮುಖ ವ್ಯಕ್ತಿ(ಗಳು)Ratan Tata (Chairman)
B Muthuraman (Managing Director)
ಉದ್ಯಮSteel
ಉತ್ಪನ್ನHot and cold rolled coils and sheets
Wire and rods
Construction bars
Pipes
Structurals and forging quality steel
ಆದಾಯ US$32.77 billion (2009)[೨]
ಒಟ್ಟು ಆಸ್ತಿ $31.16 billion (2009)
ಉದ್ಯೋಗಿಗಳು86,548 (2009)[೩]
ಪೋಷಕ ಸಂಸ್ಥೆTata Group
ಜಾಲತಾಣTataSteel.com

TISCO ಹಾಗೂ ಟಾಟಾ ಐರನ್‌ ಅಂಡ್‌ ಸ್ಟೀಲ್‌ ಕಂಪೆನಿ ಲಿಮಿಟೆಡ್ ‌ ಎಂದೂ ಈ ಹಿಂದೆ ಕರೆಯಲ್ಪಡುತ್ತಿದ್ದ ಟಾಟಾ ಸ್ಟೀಲ್ ‌ (ಬಿಎಸ್‌ಇ: 500470), 31 ದಶಲಕ್ಷ ಟನ್ನುಗಳ ವಾರ್ಷಿಕ ಕಚ್ಚಾ ಉಕ್ಕು ಸಾಮರ್ಥ್ಯದೊಂದಿಗೆ ವಿಶ್ವದ ಆರನೇ ಅತಿ ದೊಡ್ಡ ಉಕ್ಕು ಕಂಪೆನಿಯಾಗಿದೆ. ದೇಶೀಯ ಉತ್ಪಾದನೆಯಲ್ಲಿ ಭಾರತದಲ್ಲಿನ ಖಾಸಗಿ ವಲಯದ ಬೃಹತ್‌ ಉಕ್ಕು/ಉಕ್ಕಿನ ಕಂಪೆನಿಯಾಗಿದೆ. ಫಾರ್ಚ್ಯೂನ್‌ ಗ್ಲೋಬಲ್‌ 500 ಸೂಚಿಕೆಯಲ್ಲಿ 258ನೇ ಶ್ರೇಯಾಂಕಿತವಾಗಿರುವ ಇದು, ಭಾರತಜಾರ್ಖಂಡ್‌ ರಾಜ್ಯದ ಜಮ್‌ಷೆಡ್‌ಪುರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.[೪][೫] ಇದು ಟಾಟಾ ಕಂಪೆನಿಗಳ ಸಮೂಹದ ಭಾಗವಾಗಿದೆ. ಟಾಟಾ ಸ್ಟೀಲ್‌ Rs 1,32,110 ಕೋಟಿ ಮೊತ್ತದ ಸಂಘಟಿತ ಆದಾಯವನ್ನು ಹಾಗೂ Rs 12,350 ಕೋಟಿಗೂ ಮೀರಿದ ನಿವ್ವಳ ಲಾಭವನ್ನು ಮಾರ್ಚ್‌ 31, 2008ರಂದು ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಹೊಂದಿರುವ ಭಾರತದ ಎರಡನೇ-ಬೃಹತ್ ಹಾಗೂ ಖಾಸಗಿ ವಲಯದಲ್ಲಿನ ಎರಡನೇ ಅತ್ಯಧಿಕ ಲಾಭದಾಯಕ ಕಂಪೆನಿಯಾಗಿದೆ.[೬][೭]

ಇದರ ಪ್ರಮುಖ ಸ್ಥಾವರ/ಘಟಕವು ಜಾರ್ಖಂಡ್‌ ರಾಜ್ಯದ ಜಮ್‌ಷೆಡ್‌ಪುರದಲ್ಲಿದ್ದು, ತನ್ನ ಇತ್ತೀಚಿನ ಸ್ವಾಧೀನಪಡಿಸುವಿಕೆಗಳೊಂದಿಗೆ, ಕಂಪೆನಿಯು ಬಹುರಾಷ್ಟ್ರೀಯವೆನಿಸಿಕೊಂಡಿದ್ದು ತನ್ನ ಕಾರ್ಯಾಚರಣೆಗಳನ್ನು ಅನೇಕ ರಾಷ್ಟ್ರಗಳಲ್ಲಿ ನಡೆಸುತ್ತಿದೆ. Honeywellನಿಂದ ಪೂರೈಕೆಯಾದ DCSಅನ್ನು ಜಮ್‌ಷೆಡ್‌ಪುರ ಸ್ಥಾವರ/ಘಟಕವು ಹೊಂದಿದೆ.ಟಾಟಾ ಸ್ಟೀಲ್‌ನ ನೊಂದಾಯಿತ ಕಚೇರಿಯು ಮುಂಬಯಿನಲ್ಲಿದೆ. ಕಂಪೆನಿಯು ವಿಶ್ವದ ಅತ್ಯುತ್ತಮ ಉಕ್ಕು/ಉಕ್ಕಿನ ತಯಾರಕರೆಂದೂ ಕೂಡಾ ವರ್ಲ್ಡ್‌ ಸ್ಟೀಲ್‌ ಡೈನಾಮಿಕ್ಸ್‌ ಸಂಸ್ಥೆಯಿಂದ 2005ರಲ್ಲಿ ಮಾನ್ಯತೆ ಪಡೆದುಕೊಂಡಿತ್ತು.[೮] ಕಂಪೆನಿಯು ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌/ಮುಂಬಯಿ ಸ್ಟಾಕ್‌ ವಿನಿಮಯ ಕೇಂದ್ರ ಹಾಗೂ ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಆಫ್‌ ಇಂಡಿಯಾ/ಭಾರತೀಯ ರಾಷ್ಟ್ರೀಯ ಸ್ಟಾಕ್‌ ವಿನಿಮಯ ಕೇಂದ್ರಗಳಲ್ಲಿ ಕೂಡಾ ದಾಖಲಾಗಿದ್ದು, ಸುಮಾರು 82,700 ಉದ್ಯೋಗಿಗಳನ್ನು ಹೊಂದಿದೆ (2007ರ ಹಾಗೆ).[೩]

ಇತಿಹಾಸ[ಬದಲಾಯಿಸಿ]

ಟಾಟಾ ಸ್ಟೀಲ್‌ಅನ್ನು ಭಾರತೀಯ ಪಾರ್ಸೀ ಉದ್ಯಮಿ ಜಮ್‌ಷೇಟ್‌ಜಿ ನಸ್ಸೆರ್‌ವಾನ್‌ಜಿ ಟಾಟಾರವರು 1907ರಲ್ಲಿ (ಅವರು 1904ರಲ್ಲಿ, ಯೋಜನೆಯು ಪೂರ್ಣಗೊಳ್ಳುವ ಮುನ್ನವೇ ಮರಣಿಸಿದರು) ಸ್ಥಾಪಿಸಿದರು. ಟಾಟಾ ಸ್ಟೀಲ್‌ ಬ್ರಿಟನ್‌ನಲ್ಲಿಯೇ ದಿನಕ್ಕೆ 12-ಗಂಟೆಗಳ ಕೆಲಸ ಕಾನೂನಾತ್ಮಕವಾಗಿ ಕಡ್ಡಾಯವಾಗಿದ್ದಾಗ 1912ರಷ್ಟು ಮುಂಚೆಯೇ ದಿನಕ್ಕೆ 8-ಗಂಟೆಗಳ ಕೆಲಸದ ಪದ್ಧತಿಯನ್ನು ಪರಿಚಯಿಸಿತ್ತು. ಇದು 1920ರಲ್ಲಿ ಸಂಬಳ-ಸಹಿತ-ರಜೆಯ ವ್ಯವಸ್ಥೆಯನ್ನು ಪರಿಚಯಿಸಿತ್ತಾದರೂ, ಭಾರತದ ಉದ್ಯೋಗದಾತರಿಗೆ ಇದು ಕಡ್ಡಾಯವಾಗಿದ್ದು 1945ರಲ್ಲಿಯಷ್ಟೇ. ಇದೇ ರೀತಿ, ಟಾಟಾ ಸ್ಟೀಲ್‌ ತನ್ನ ನೌಕರರಿಗಾಗಿ ಪ್ರಾವಿಡೆಂಟ್‌ ಫಂಡ್‌/ಕ್ಷೇಮನಿಧಿ 1920ರಷ್ಟು ಹಿಂದೆಯೇ ಆರಂಭಿಸಿತ್ತು, 1952ರಲ್ಲಿ ಮಾತ್ರವೇ ಇದು ಎಲ್ಲಾ ಉದ್ಯೋಗದಾತರಿಗೆ ಅನ್ವಯಿಸುವ ಪ್ರಾವಿಡೆಂಟ್‌ ಫಂಡ್‌/ಕ್ಷೇಮನಿಧಿ ಕಾಯಿದೆ ಯಿಂದಾಗಿ ಕಾನೂನಾಗಿದ್ದು. ಟಾಟಾ ಸ್ಟೀಲ್‌'ನ ಕುಲುಮೆಗಳ ಕಾರ್ಯಾಚರಣೆಗಳು ಎಂದಿಗೂ ನೌಕರರ ಪ್ರತಿಭಟನೆಯ ಕಾರಣದಿಂದ ನಿಲುಗಡೆಗೊಂಡಿಲ್ಲದಿರುವುದು ಒಂದು ಅಸೂಯಾಜನಕ ದಾಖಲೆಯಾಗಿದೆ.

ಸಾಮರ್ಥ್ಯ ವಿಸ್ತರಣೆ[ಬದಲಾಯಿಸಿ]

ಟಾಟಾ ಸ್ಟೀಲ್‌ 2015ರ ಹೊತ್ತಿಗೆ 100 ದಶಲಕ್ಷ ಟನ್ನುಗಳ ಉತ್ಪಾದನಾ ಸಾಮರ್ಥ್ಯ ಹೊಂದುವ ಮಹತ್ವಾಕಾಂಕ್ಷೆಯ ಗುರಿಯನ್ನು ಇಟ್ಟುಕೊಂಡಿದೆ. ವ್ಯವಸ್ಥಾಪಕ ನಿರ್ದೇಶಕ B. ಮುತ್ತುರಾಮನ್ 100 ದಶಲಕ್ಷ ಟನ್ನುಗಳ ಗಳಿಸುವಿಕೆಯಲ್ಲಿ, ಟಾಟಾ ಸ್ಟೀಲ್‌ ಹಸಿರುಕ್ಷೇತ್ರ ಸೌಲಭ್ಯಗಳು/ಹಿಂದಿನ ಅಭಿವೃದ್ಧಿ ಹೊಂದಿಲ್ಲದ ಪ್ರದೇಶಗಳ ಅಭಿವೃದ್ಧಿಪಡಿಸುವಿಕೆಗಳು ಹಾಗೂ ಸ್ವಾಧೀನಪಡಿಸಿಕೊಳ್ಳುವಿಕೆಗಳ ನಡುವೆ 50-50ರ ಸಮತೋಲನವನ್ನು ಯೋಜಿಸಿದೆ ಎಂದು ಹೇಳಿದ್ದಾರೆ.[೯][೧೦]

  • ಕೋರಸ್‌ನ 18.2 ದಶಲಕ್ಷ ಟನ್ನುಗಳ ಉತ್ಪಾದನೆ, ನ್ಯಾಟ್‌ಸ್ಟೀಲ್‌ನ ಎರಡು ದಶಲಕ್ಷ ಟನ್ನುಗಳ ಉತ್ಪಾದನೆ ಹಾಗೂ ಮಿಲ್ಲೆನಿಯಮ್‌ ಸ್ಟೀಲ್‌ನ 1.2 ದಶಲಕ್ಷ ಟನ್ನುಗಳ ಉತ್ಪಾದನೆಗಳನ್ನೊಳಗೊಂಡಂತೆ ಸಾಗರೋತ್ತರ ಸ್ವಾಧೀನಪಡಿಸುವಿಕೆಗಳ ಮೂಲಕ ಈಗಾಗಲೇ 21.4 ದಶಲಕ್ಷ ಟನ್ನುಗಳ ಏರಿಕೆ ಹೊಂದಲಾಗಿದೆ. ಟಾಟಾ ಮತ್ತೂ 29 ದಶಲಕ್ಷ ಟನ್ನುಗಳನ್ನು ಸ್ವಾಧೀನಪಡಿಸಿಕೊಳ್ಳುವಿಕೆಯ ಮಾರ್ಗದಲ್ಲಿಯೇ ಸೇರಿಸಲು ಯೋಜಿಸುತ್ತಿದೆ.[೯][೧೦]
  • ಟಾಟಾ ಸ್ಟೀಲ್‌ ಭಾರತದ ಒಳಗೆ ಹಾಗೂ ಹೊರಗೆ [೯] ಗಳೂ ಸೇರಿದಂತೆ ಹಿಂದಿನ ಅಭಿವೃದ್ಧಿ ಹೊಂದಿಲ್ಲದ ಪ್ರದೇಶಗಳ ಅಭಿವೃದ್ಧಿಪಡಿಸುವಿಕೆಯ ಯೋಜನೆಗಳ ಸರಣಿಯನ್ನೇ ಪೂರೈಸಿದೆ
  1. ಒಡಿಶಾ/ಒಡಿಶಾದಲ್ಲಿ 6 ದಶಲಕ್ಷ ಟನ್ನುಗಳ ಸ್ಥಾವರ/ಘಟಕ (ಭಾರತ)
  2. ಜಾರ್ಖಂಡ್‌ ರಾಜ್ಯದಲ್ಲಿ 12 ದಶಲಕ್ಷ ಟನ್ನುಗಳು (ಭಾರತ)
  3. ಛತ್ತೀಸ್‌ಗಢದಲ್ಲಿ 5 ದಶಲಕ್ಷ ಟನ್ನುಗಳು (ಭಾರತ)
  4. ಇರಾನ್‌ನಲ್ಲಿ 3-ದಶಲಕ್ಷ ಟನ್ನುಗಳ ಸ್ಥಾವರ/ಘಟಕ
  5. ಬಾಂಗ್ಲಾದೇಶದಲ್ಲಿ 2.4-ದಶಲಕ್ಷ ಟನ್ನುಗಳ ಸ್ಥಾವರ/ಘಟಕ
  6. ಜಮ್‌ಷೆಡ್‌ಪುರದಲ್ಲಿನ 5 ದಶಲಕ್ಷ ಟನ್ನುಗಳ ಸಾಮರ್ಥ್ಯದ ವಿಸ್ತರಣೆ (ಭಾರತ)
  7. ವಿಯೆಟ್ನಾಮ್‌ನಲ್ಲಿನ 4.5 ದಶಲಕ್ಷ ಟನ್ನುಗಳ ಸ್ಥಾವರ/ಘಟಕ (ಸಾಧ್ಯತೆಯ ಅಧ್ಯಯನಗಳು ನಡೆಯುತ್ತಿವೆ)

ಸ್ವಾಧೀನಪಡಿಸುವಿಕೆಗಳು[ಬದಲಾಯಿಸಿ]

ಕೋರಸ್‌[ಬದಲಾಯಿಸಿ]

  • 20 ಅಕ್ಟೋಬರ್‌ 2006 ರಂದು, ಟಾಟಾ ಸ್ಟೀಲ್‌ 100% ಹೂಡಿಕೆಯನ್ನು ಪಡೆದುಕೊಳ್ಳಲು ಆಂಗ್ಲೋ-ಡಚ್‌ ಉಕ್ಕು ತಯಾರಕ ಕಂಪೆನಿ ಕೋರಸ್‌ಅನ್ನು ಪ್ರತಿ ಷೇರಿಗೆ 455 ಪೆನ್ಸ್‌ಗಳಂತೆ GBP 4.3 ಶತಕೋಟಿಗಳ ಸಂಚಿತ ಮೊತ್ತದ ಸಂಪೂರ್ಣ ನಗದು ವ್ಯವಹಾರದಲ್ಲಿ, ತಾನು ಒಪ್ಪಿಗೆ ನೀಡಿದ್ದೇನೆ ಎಂದು ಘೋಷಿಸಿತು.
  • 19 ನವೆಂಬರ್‌ 2006ರಂದು, ಬ್ರೆಝಿಲ್‌ನ ಉಕ್ಕು ಕಂಪೆನಿ ಕಂಪಾನ್ಹಿಯಾ ಸೈಡ್‌ರರ್ಜಿಕಾ ನ್ಯಾಕಿ/ಷನಲ್‌ (CSN) ಕೋರಸ್‌ಗೆ ಪ್ರತಿ ಷೇರಿಗೆ 475 ಪೆನ್ಸ್‌ಗಳಂತೆ £4.5ಶತಕೋಟಿಗಳ ಮೊತ್ತದ ಪ್ರತಿ ಪ್ರಸ್ತಾಪವನ್ನು ಮುಂದಿಟ್ಟಿತು.
  • 11 ಡಿಸೆಂಬರ್‌ 2006ರಂದು, ಟಾಟಾ ಪ್ರಸ್ತಾಪವನ್ನು ಪೂರ್ವಭಾವಿಯಾಗಿಯೇ 500 ಪೆನ್ಸ್‌ಗಳಿಗೆ ಏರಿಸಿತು, ನಂತರದ ಕೆಲವೇ ಗಂಟೆಗಳಲ್ಲಿ £4.9 ಶತಕೋಟಿ ಮೊತ್ತದ ವ್ಯವಹಾರವೆನಿಸಿದ ಪ್ರತಿ ಷೇರಿಗೆ 515 ಪೆನ್ಸ್‌ಗಳ CSN'ನ ಪ್ರಸ್ತಾಪವು ತುರುಫೆಬ್ಬಿಸಿತು. ಕೋರಸ್‌ ಆಡಳಿತ ಮಂಡಳಿಯು ಒಡನೆಯೇ ಎರಡೂ ಪರಿಷ್ಕರಿತ ಪ್ರಸ್ತಾಪಗಳನ್ನು ತನ್ನ ಷೇರುದಾರರ ಮುಂದಿಟ್ಟಿತು.
  • 31 ಜನವರಿ 2007ರಂದು ಟಾಟಾ ಸ್ಟೀಲ್‌ ಕೋರಸ್‌ನ ತಮ್ಮ ಏಲಂ ಬೆಲೆಯನ್ನು ಪ್ರತಿ ಷೇರಿಗೆ 608 ಪೆನ್ಸ್‌ಗಳಂತೆ ಏರಿಸುವ ಮೂಲಕ, ಕೋರಸ್‌ £6.7 ಶತಕೋಟಿ ಮೊತ್ತದ ವ್ಯವಹಾರವನ್ನು ತನ್ನದಾಗಿಸಿಕೊಂಡಿತು; ಅದರ ಪರಿಣಾಮವಾಗಿ ಸ್ವಾಧೀನಪಡಿಸಿಕೊಳ್ಳುವಿಕೆಯ ಒಪ್ಪಿಗೆ ಹಾಗೂ ವ್ಯವಹಾರ ಪೂರ್ಣಗೊಳ್ಳುವಿಕೆಯ ಮುಕ್ತಾಯದ ನಂತರ ಎರಡೂ ಕಂಪೆನಿಗಳ ಸೇರ್ಪಡಿಕೆಯು ವಿಶ್ವದ ಐದನೇ ಬೃಹತ್‌ ಉಕ್ಕು/ಉಕ್ಕಿನ ಕಂಪೆನಿಯನ್ನು ಸೃಷ್ಟಿಸಲಿದೆ.

ಇತರೆ ಸ್ವಾಧೀನಪಡಿಸುವಿಕೆಗಳು[ಬದಲಾಯಿಸಿ]

  • ಆಗಸ್ಟ್‌ 2004ರಲ್ಲಿ, ಟಾಟಾ ಸ್ಟೀಲ್‌ ಸಿಂಗಪೂರ್‌ ಮೂಲದ ನ್ಯಾಟ್‌ಸ್ಟೀಲ್‌ Ltdನೊಂದಿಗೆ ಅದರ ಉಕ್ಕು ಉದ್ದಿಮೆಯನ್ನು ಸಿಂಗಪೂರ್‌ $486.4 ದಶಲಕ್ಷ (ಅಂದಾಜು Rs 1,313 ಕೋಟಿ)ಗಳ ಮೊತ್ತಕ್ಕೆ ಸಂಪೂರ್ಣ ನಗದು ವ್ಯವಹಾರದಲ್ಲಿ ಸ್ವಾಧೀನಪಡಿಸಿಕೊಳ್ಳುವಿಕೆಯ ನಿರ್ಣಾಯಕ ಒಪ್ಪಂದಗಳನ್ನು ಮಾಡಿಕೊಂಡಿತು.[೧೧]
  • 2005ರಲ್ಲಿ, ಟಾಟಾ ಸ್ಟೀಲ್‌ ಥೈಲೆಂಡ್‌ ಮೂಲದ ಮಿಲ್ಲೆನಿಯಮ್‌ ಸ್ಟೀಲ್‌ನ 40% ಹೂಡಿಕೆಯನ್ನು $130 ದಶಲಕ್ಷ (approx. Rs 600 ಕೋಟಿ)ಗಳ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿತು.[೧೨]
  • 2007ರಲ್ಲಿ ಟಾಟಾ ಸ್ಟೀಲ್‌ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ, ನ್ಯಾಟ್‌ಸ್ಟೀಲ್‌ ಏಷ್ಯಾ Pte Ltd ಮೂಲಕ ವಿಯೆಟ್ನಾಮಿನಲ್ಲಿನ ಎರಡು ಉತ್ತಮ ವಹಿವಾಟಿನ: SSE ಸ್ಟೀಲ್‌ Ltd, ವಿನೌಸ್ಟೀಲ್‌ Ltd ಕಂಪೆನಿಗಳ ನಿಯಂತ್ರಣಾ ಹೂಡಿಕೆಗಳನ್ನು ಸ್ವಾಧೀನಪಡಿಸಿಕೊಂಡಿತು.[೧೩]

ವಿವಾದಗಳು[ಬದಲಾಯಿಸಿ]

ಕಂಪೆನಿಯು ಅಭಿವೃದ್ಧಿ ಹಾಗೂ ಲಾಭಗಳಿಕೆಯ ಬಗೆಗಿನ ಒಲವು ಒಂದು ಕಾಲದಲ್ಲಿ ಹೆಸರಾಗಿದ್ದ ಮಾನವಹಿತ/ಪ್ರೇಮ ಪ್ರವೃತ್ತಿಯನ್ನು ಸಂಪೂರ್ಣವಾಗಿ ಹಿಂದೂಡಿದ್ದು, ಅನೇಕ ಸ್ಥಳಗಳಲ್ಲಿ ಸಾಮಾಜಿಕವಾಗಿ ಹಾಗೂ ದೀರ್ಘಕಾಲೀನವಾಗಿ ಪರಿಸರೀಯವಾಗಿ ಹಾನಿಯುಂಟು ಮಾಡುತ್ತಿರುವುದಾಗಿ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ.[೧೪] ಇದಕ್ಕೆ ಪ್ರತಿಕ್ರಿಯೆಯಾಗಿ, ಟಾಟಾ ಹಸಿರುಮನೆ ಸವೆತ, ಕಚ್ಚಾ ವಸ್ತುಗಳು ಹಾಗೂ ನೀರಿನ ಬಳಕೆಗಳಲ್ಲಿನ ಇಳಿಕೆಗಳೂ ಸೇರಿದಂತೆ ತನ್ನ ಪರಿಸರ ಹಾಗೂ ಮೂಲಸಂಪತ್ತುಗಳ ರಕ್ಷಣೆಗಾಗಿರುವ ಯೋಜನೆಗಳನ್ನು ಉಲ್ಲೇಖಿಸುತ್ತದೆ. ಕಂಪೆನಿಯು ತ್ಯಾಜ್ಯವಸ್ತುಗಳ ಮರುಬಳಕೆ ಹಾಗೂ ಪುನರುಜ್ಜೀವನಗಳನ್ನು ಹೆಚ್ಚಿಸಿರುವುದಲ್ಲದೇ ತನ್ನ ವಶದಲ್ಲಿರುವ ಗಣಿಗಳು ಹಾಗೂ ಕಲ್ಲಿದ್ದಲು ಗಣಿಗಳ ಪ್ರದೇಶಗಳಲ್ಲಿ ಅರಣ್ಯ ಮರುಪೂರಣದ ಮೂಲಕ ಮರುಗಳಿಕೆ ಮಾಡುತ್ತಿದೆ. ಟಾಟಾ ಸ್ಟೀಲ್‌'ನ, ಪರಿಸರ ಹಾಗೂ ಔದ್ಯೋಗಿಕ ಆರೋಗ್ಯ ವಿಭಾಗದ ಮುಖ್ಯಸ್ಥ "2003-04ರ ಸಾಲಿನಲ್ಲಿ ನಮ್ಮ ಮಾಲಿನ್ಯ-ನಿಯಂತ್ರಣ ಯೋಜನೆಗಳಲ್ಲಿನ ಬಂಡವಾಳ ಹೂಡಿಕೆಯು Rs 400 ಕೋಟಿಗಳ ಆಸುಪಾಸಿನಲ್ಲಿತ್ತು."[೧೫]

ಧಮ್ರಾ ಬಂದರು[ಬದಲಾಯಿಸಿ]

ಧಮ್ರಾ ಬಂದರು, ಲಾರ್ಸನ್‌ & ಟೂಬ್ರೋ ಹಾಗೂ ಟಾಟಾ ಸ್ಟೀಲ್‌ಗಳ ಜಂಟಿ ಯೋಜನೆಯಾಗಿದ್ದು‌, ಗ್ರೀನ್‌ಪೀಸ್‌, ವೈಲ್ಡ್‌ಲೈಫ್‌ ಪ್ರೊಟೆಕ್ಷನ್‌ ಸೊಸೈಟಿ ಆಫ್‌ ಇಂಡಿಯಾ ಹಾಗೂ ಒಡಿಶಾ ಟ್ರೆಡಿಷನಲ್‌ ಫಿಷ್‌ವರ್ಕರ್ಸ್‌ ಯೂನಿಯನ್‌ನಂತಹಾ ಸಂಘಸಂಸ್ಥೆಗಳ ಟೀಕೆಗೆ ಉತ್ತರವಾಗಿ ಆರಂಭವಾಗಿದೆ. ಈ ಬಂದರನ್ನು ಅಂತರರಾಷ್ಟ್ರೀಯ ಮಹತ್ವದ ರಾಮ್‌ಸರ್‌ ಜೌಗುಭೂಮಿಯಲ್ಲಿ ಮ್ಯಾಂಗ್ರೋವ್‌ನ ಮನಸೆಳೆಯುವ ವೈವಿಧ್ಯಮಯ ತಳಿಯ ಮರಗಳು, ಉಪ್ಪುನೀರಿನ ಮೊಸಳೆಗಳು ಹಾಗೂ ವ್ಯಾಪಕ ಪಕ್ಷಿ ಸಂತತಿಗಳಿಗೆ ಗೃಹವಾಗಿರುವ ಭೀತರ್‌ಕಾನಿಕಾ ಅಭಯಾರಣ್ಯದ ಐದು ಕಿಲೋಮೀಟರ್‌ಗಳ ವ್ಯಾಪ್ತಿಯಲ್ಲಿ ಕಟ್ಟಲಾಗುತ್ತಿದೆ. ಆಮೆಗಳು ನೆಲೆಸಿರುವ ಗಹಿರ್‌ಮಾತಾ ಅಭಯಾರಣ್ಯದ ಕಡಲಕರೆಗಳಿಂದ ಅಂದಾಜು 15 km. ದೂರದಲ್ಲಿರುವುದಲ್ಲದೇ ಬಂದರು ಪ್ರದೇಶದ ಸನಿಹದಲ್ಲಿರುವ ಪ್ರದೇಶಗಳಲ್ಲಿ ಸಹಾ ಆಮೆಗಳು ಕಂಡುಬರುತ್ತವೆ. ಆಮೆಗಳ ನಿವಾಸದ ಹಾಗೂ ಆಹಾರಸೇವನೆಯ ಸಂಭಾವ್ಯ ಪ್ರಭಾವಗಳ ಜೊತೆಗೇ ಬಂದರಿನ ಹಸಿಮಣ್ಣಿನ ಗುಡ್ಡೆಗಳೇ ಕುದುರೆ ಲಾಳಾಕೃತಿಯ ಏಡಿಗಳಿಗೆ ಹಾಗೂ ಸರೀಸೃಪ ಹಾಗೂ ಉಭಯವಾಸಿಗಳ ಅಪರೂಪದ ತಳಿಗಳ ಸಂಗೋಪನೆಯ ಪ್ರದೇಶವಾಗಿದೆ. ಅಂತಹಾ ಒಂದು ತಳಿಯೆಂದರೆ, ಫೆಜೆರ್‌ವರ್ಯಾ ಕಾನ್ರಿವೋರಾ ಎಂಬ ಹೆಸರಿನ ಉಭಯಚರವಾಗಿದ್ದು ಭಾರತೀಯ ಪ್ರಧಾನಭೂಮಿಯಲ್ಲಿ ಇದೊಂದೇ ಸ್ಥಳದಲ್ಲಿ ಇರುವುದು ದಾಖಲೆಯಾಗಿದೆ. [೧೬] [೧೭]

ಸಾಂಸ್ಥಿಕ/ಕಾರ್ಪೋರೇಟ್‌ ಶ್ರೇಯಾಂಕಗಳು[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2010-01-07. Retrieved 2010-05-15.
  2. "Tata Steel reports Consolidated Results for the Financial Year (2008)!-- Bot generated title -->". Archived from the original on 2010-02-17. Retrieved 2010-05-15.
  3. ೩.೦ ೩.೧ "Tata Steel Annual Report 2008-09" (PDF). Archived from the original (PDF) on 2012-04-25. Retrieved 2010-05-15.
  4. "ಕಂಪೆನಿಯ ಸವಿವರ ಮಾಹಿತಿ". Archived from the original on 2008-08-21. Retrieved 2010-05-15.
  5. ಟಾಟಾ ಸ್ಟೀಲ್‌ ಪ್ಲಾನ್ಸ್‌ ಪೂಲಿಂಗ್‌ ಆಫ್‌ ರಾ ಮೆಟೀರಿಯಲ್ಸ್‌ - ಸ್ಟೀಲ್‌-Ind'l ಗೂಡ್ಸ್‌/ Svs-ನ್ಯೂಸ್‌ ಬೈ ಇಂಡಸ್ಟ್ರಿ-ನ್ಯೂಸ್‌ -ದ ಇಕನಾಮಿಕ್‌ ಟೈಮ್ಸ್‌
  6. "31ನೇ ಮಾರ್ಚ್‌, 2008ಕ್ಕೆ ಕೊನೆಗೊಂಡ ವರ್ಷದ ಆರ್ಥಿಕ ಫಲಿತಾಂಶಗಳು". Archived from the original on 2013-06-21. Retrieved 2010-05-15.
  7. ಕೋರಸ್‌ನ ಕೊಳ್ಳುವಿಕೆಯು ಟಾಟಾ ಸ್ಟೀಲ್‌ಅನ್ನು ರಿಲಯನ್ಸ್‌ನ ನಂತರದ ಸ್ಥಾನಕ್ಕೆ ಎಳೆತಂದಿದೆ
  8. [7] ^ [೧] Archived 2008-09-07 ವೇಬ್ಯಾಕ್ ಮೆಷಿನ್ ನಲ್ಲಿ.
  9. ೯.೦ ೯.೧ ೯.೨ "ಟಾಟಾಗಳಿಗೆ ಹೆಚ್ಚಿನದರ ಹಸಿವು". Archived from the original on 2008-02-03. Retrieved 2010-05-15.
  10. ೧೦.೦ ೧೦.೧ http://www.financialexpress.com/old/fe_full_story.php?content_id=162675 Unabated appetite for global growth
  11. "ಟಾಟಾ ಸ್ಟೀಲ್‌ ನ್ಯಾಟ್‌ಸ್ಟೀಲ್‌ಅನ್ನು ಸ್ವಾಧೀನಪಡಿಸಿಕೊಂಡಿತು". Archived from the original on 2006-11-27. Retrieved 2010-05-15.
  12. ಟಾಟಾ ಸ್ಟೀಲ್‌ ಟು ಬೈ ಥಾಯ್‌ co ಫಾರ್‌ $130 m
  13. ಟಾಟಾ ಸ್ಟೀಲ್‌ ಆರ್ಮ್‌ ಬೈಸ್‌ ಪ್ಲಾಂಟ್ಸ್‌ ಇನ್ ವಿಯೆಟ್ನಾಮ್‌
  14. ""ಟಾಟಾ'ಸ್‌ ಎನ್‌ವಿರಾನ್‌ಮೆಂಟಲ್‌ ರೆಕಾರ್ಡ್‌", ಭೋಪಾಲ್‌ನಲ್ಲಿನ ನ್ಯಾಯಕ್ಕಾಗಿನ ಅಂತರರಾಷ್ಟ್ರೀಯ ಅಭಿಯಾನ (ಫೆಬ್ರವರಿ 09, 2007)". Archived from the original on 2009-03-06. Retrieved 2010-05-15.
  15. "ಸಲೋನಿ ಮೇಘಾನಿ, "ಎ ಟೇಲ್‌ ಆಫ್‌ ಟು ಐಡಿಯಾಸ್‌", ಟಾಟಾ ಸ್ಟೀಲ್‌ ಜಾಲತಾಣ". Archived from the original on 2007-12-09. Retrieved 2010-05-15.
  16. "ಗ್ರೀನ್‌ಪೀಸ್: ಬಯೋಡೈವರ್ಸಿಟಿ ಆಸೆಸ್‌ಮೆಂಟ್‌ ಆಫ್‌ ಧಾಮ್ರಾ ಪೋರ್ಟ್‌". Archived from the original on 2010-07-27. Retrieved 2010-05-15.
  17. ಧಾಮ್ರಾ ಬಂದರು ಜಾಲ ತಾಣ