ಜ್ಯೋತಿ ಪ್ರಕಾಶ್ ನಿರಾಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಪೋರಲ್

ಜ್ಯೋತಿ ಪ್ರಕಾಶ್ ನಿರಾಲಾ

ಅಶೋಕ ಚಕ್ರ (ಸೈನ್ಯದ ಸನ್ಮಾನ)
ಜನನ(೧೯೮೬-೧೧-೧೫)೧೫ ನವೆಂಬರ್ ೧೯೮೬[೧]
ರೊಹ್ತಾಸ್ ಜಿಲ್ಲೆ, ಬಿಹಾರ
ಮರಣNovember 18, 2017(2017-11-18) (aged 31)
ಬಂಡಿಪೋರ ಜಿಲ್ಲೆ, ಜಮ್ಮು ಮತ್ತು ಕಾಶ್ಮೀರ
ವ್ಯಾಪ್ತಿಪ್ರದೇಶ ಭಾರತ
ಶಾಖೆ ಭಾರತೀಯ ವಾಯು ಸೇನೆ
ಸೇವಾವಧಿ೨೦೦೫-೨೦೧೭
ಶ್ರೇಣಿ(ದರ್ಜೆ) ಕಾರ್ಪೋರಲ್
ಸೇವಾ ಸಂಖ್ಯೆ೯೧೮೨೦೩
ಘಟಕ ರಾಷ್ಟ್ರೀಯ ರೈಫಲ್ಸ್‌ (deputed)
ಗರುಡ್ ಕಮಾಂಡೋ ಪಡೆ
ಪ್ರಶಸ್ತಿ(ಗಳು) ಅಶೋಕ ಚಕ್ರ

ಕಾರ್ಪೋರಲ್ ಜ್ಯೋತಿ ಪ್ರಕಾಶ್ ನಿರಾಲಾ(೧೫ ನವೆಂಬರ್ ೧೯೮೬ -೧೮ ನವೆಂಬರ್ ೨೦೧೭) ಅವರು ಗರುಡ್ ಕಮಾಂಡೋ ಪಡೆಯ ಸದಸ್ಯರಾಗಿದ್ದರು. ಅವರಿಗೆ ಜನವರಿ ೨೦೧೮ ರಲ್ಲಿ, ಮರಣೋತ್ತರವಾಗಿ ಭಾರತದ ಅತ್ಯುನ್ನತ ಶಾಂತಿಕಾಲದ ಮಿಲಿಟರಿ ಗೌರವವಾದ ಅಶೋಕ ಚಕ್ರವನ್ನು ನೀಡಲಾಯಿತು. ನೆಲದಾಳಿ ಯುದ್ಧಕ್ಕಾಗಿ ಪ್ರಶಸ್ತಿಯನ್ನು ಪಡೆದ ಸುಹಾಸ್ ಬಿಸ್ವಾಸ್ ಮತ್ತು ರಾಕೇಶ್ ಶರ್ಮಾ ನಂತರ ನಿರಾಲಾರವರು ಮೂರನೆಯವರಾಗಿ ಈ ಗೌರವವನ್ನು ಪಡೆದ ಏರ್‌ಮ್ಯಾನ್ ಆಗಿದ್ದಾರೆ.[೨] [೩] [೪]

ಆರಂಭಿಕ ಮತ್ತು ವೈಯಕ್ತಿಕ ಜೀವನ[ಬದಲಾಯಿಸಿ]

ನಿರಾಲಾ ಅವರು ಬಿಹಾರದ ರೋಹ್ತಾಸ್ ಜಿಲ್ಲೆಯ ಬದ್ಲಾಡಿ ಗ್ರಾಮದ ನಿವಾಸಿಯಾಗಿದ್ದರು. [೫] ನಿರಾಲಾರವರು ನವೆಂಬರ್ ೧೫, ೧೯೮೬ ರಂದು ಯಾದವ್ ಕುಟುಂಬದಲ್ಲಿ ತೇಜ್ ನಾರಾಯಣ ಸಿಂಗ್ ಯಾದವ್ ಮತ್ತು ಮಾಲ್ತಿ ದೇವಿಗೆ ಜನಿಸಿದರು. [೬] [೭]

ಜ್ಯೋತಿ ಪ್ರಕಾಶ್ ನಿರಾಲಾ ಅವರು ಸುಷ್ಮಾನಂದ ಯಾದವ್ ಅವರನ್ನು ೨೦೧೦ ರಲ್ಲಿ ವಿವಾಹವಾದರು ಮತ್ತು ಅವರಿಗೆ ಜಿಜ್ಞಾಸಾ ಕುಮಾರಿ ಎಂಬ ಮಗಳಿದ್ದಾಳೆ. [೮] [೯]

ಸೇನಾ ಸೇವೆ[ಬದಲಾಯಿಸಿ]

ನಿರಾಲಾ ಅವರು ೨೦೦೫ ರಲ್ಲಿ ಭಾರತೀಯ ವಾಯುಪಡೆಯ ಗರುಡ್ ಕಮಾಂಡೋ ದಳಕ್ಕೆ ಸೇರಿದರು. ಅವರ ಘಟಕವನ್ನು ೧೩ ರಾಷ್ಟ್ರೀಯ ರೈಫಲ್ಸ್‌ಗೆ ನಿಯೋಜಿಸಲಾಯಿತು ಮತ್ತು ಆಪರೇಷನ್ ರಕ್ಷಕ್ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆ ಮಾಡಲಾಯಿತು. [೧೦] [೧೧] [೧೨]

ಅಶೋಕ ಚಕ್ರ[ಬದಲಾಯಿಸಿ]

ಜ್ಯೋತಿ ಪ್ರಕಾಶ್ ನಿರಾಲಾ ಅವರ ಪತ್ನಿ ವಿಧವೆಯಾಗಿ ಮತ್ತು ತಾಯಿಯವರು ೨೬ ಜನವರಿ ೨೦೧೮ ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಅಶೋಕ ಚಕ್ರವನ್ನು ಸ್ವೀಕರಿಸಿರುತ್ತಾರೆ.

ತಾಂತ್ರಿಕ ಗುಪ್ತಚರರು ನೀಡಿದ ಸುಳಿವಿನ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಚಂದರ್ಗರ್ ಗ್ರಾಮದಲ್ಲಿ ಗರುಡ್ ತುಕಡಿ ಮತ್ತು ೧೩ ರಾಷ್ಟ್ರೀಯ ರೈಫಲ್ಸ್ ಜಂಟಿಯಾಗಿ ಆಕ್ರಮಣವನ್ನು ಪ್ರಾರಂಭಿಸಿದವು. ಉಗ್ರರು ಅಡಗಿರುವ ಶಂಕಿತ ಮನೆಯನ್ನು ನಿರಾಲಾರವರ ತುಕಡಿಯು ರಹಸ್ಯವಾಗಿ ಸಮೀಪಿಸಿತು ಮತ್ತು ಬಹು ಹತ್ತಿರದಿಂದ ಹೊಂಚು ಹಾಕಿ ದಾಳಿ ನಡೆಸಿತು. ಹಗುರವಾದ ಮೆಷಿನ್ ಗನ್‌ನೊಂದಿಗೆ ಶಸ್ತ್ರಸಜ್ಜಿತವಾದ ನಿರಾಲಾ ಅಡಗುತಾಣದ ಸಮೀಪದಲ್ಲಿ ಬಚ್ಚಿಟ್ಟುಕೊಂಡರು ಹಾಗೂ ಉಗ್ರರು ತಪ್ಪಿಸಿಕೊಳ್ಳಬಹುದಾದ ಎಲ್ಲಾ ಮಾರ್ಗಗಳನ್ನು ಕಡಿತಗೊಳಿಸಿದರು. [೧೧] [೧೩] [೧೪]

ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಆರು ಉಗ್ರರು ಗುಂಡು ಹಾರಿಸಿ ಗ್ರೆನೇಡ್‌ಗಳನ್ನು ಎಸೆದರು. ನಿರಾಲಾರವರು ಪ್ರತಿದಾಳಿ ನಡೆಸಿದರು ಮತ್ತು ಇಬ್ಬರು 'ಎ' ವರ್ಗದ ಉಗ್ರರನ್ನು ಹೊಡೆದು ಉರುಳಿಸಿದರು ಹಾಗೂ ಇನ್ನಿಬ್ಬರು ಗಾಯಗೊಂಡರು. ಗುಂಡಿನ ವಿನಿಮಯದಲ್ಲಿ ನಿರಾಲಾರವರು ಕಿರುಶಸ್ತ್ರಾಸ್ತ್ರಗಳ ಗುಂಡಿನ ದಾಳಿಗೆ ಒಳಗಾಗಿದ್ದರು ಮತ್ತು ತೀವ್ರವಾಗಿ ಗಾಯಗೊಂಡಿದ್ದರೂ ಸಹ ಗುಂಡು ಹಾರಿಸುತ್ತಲೇ ಇದ್ದರು. ಎಲ್ಲಾ ಆರು ಉಗ್ರರು ಹತರಾಗಿದ್ದರು. ಈ ದಾಳಿಯಲ್ಲಾದ ಮಾರಣಾಂತಿಕ ಗಾಯಗಳಿಂದಾಗಿ ನಿರಾಲಾ ಮರಣ ಹೊಂದಿದರು. [೧೧] [೧೩] [೧೪]

೨೦೧೮ ರ ಜನವರಿ ೨೬ ರಂದು ಅವರಿಗೆ ಅಶೋಕ ಚಕ್ರವನ್ನು ನೀಡಲಾಯಿತು. ನಿರಾಲಾರವರು ಉಗ್ರಗಾಮಿಗಳ ವಿರುದ್ಧ ಹೋರಾಡುವಲ್ಲಿ ಶೌರ್ಯವನ್ನು ಮತ್ತು ತಮ್ಮ ದೇಶಸೇವೆಯನ್ನು ಪ್ರದರ್ಶಿಸಿದರು. [೧೧] ಲಕ್ಷರ್-ಎ-ತೈಬಾದ ಸ್ಥಳೀಯ ನಾಯಕತ್ವವನ್ನು ತೊಡೆದುಹಾಕಿದ ಕೀರ್ತಿ ಜ್ಯೋತಿ‌ ಪ್ರಕಾಶ್ ನಿರಾಲಾ ಅವರಿಗೆ ಸಲ್ಲುತ್ತದೆ. ಕಾರ್ಯಾಚರಣೆಯ ಸಮಯದಲ್ಲಿ ಕೊಲ್ಲಲ್ಪಟ್ಟ ಉಗ್ರರಲ್ಲಿ ಒಬ್ಬ ೨೦೦೮ ರ ಮುಂಬೈ ದಾಳಿಯ ಪ್ರಮುಖ ಯೋಜಕ ಲಷ್ಕರ್-ಎ-ತೊಯ್ಬಾ ಕಮಾಂಡರ್ ಝಕಿ-ಉರ್-ರೆಹಮಾನ್ ಲಖ್ವಿ ಅವರ ಸೋದರಳಿಯ. [೧೫] [೧೬]

ಉಲ್ಲೇಖಗಳು[ಬದಲಾಯಿಸಿ]

  1. "Martyred Garud commando to be cremated at Chandigarh". DailyPost.in (in ಅಮೆರಿಕನ್ ಇಂಗ್ಲಿಷ್). 2017-11-19. Archived from the original on 2018-01-27. Retrieved 2018-01-27.
  2. "Martyred Corporal Jyoti Prakash Nirala joins elite IAF club tomorrow - Times of India". indiatimes.com. January 25, 2018. Retrieved January 25, 2018.
  3. "Press Information Bureau". www.pib.nic.in (in ಇಂಗ್ಲಿಷ್). Retrieved 2018-01-27.
  4. "IAF commando Jyoti Prakash Nirala awarded Ashok Chakra for role in Kashmir encounter that killed six terrorists. - Firstpost". www.firstpost.com. January 25, 2018. Retrieved January 25, 2018.
  5. "Army pays floral tributes to Corporal Jyoti Prakash in J-K". India Today (in ಅಮೆರಿಕನ್ ಇಂಗ್ಲಿಷ್). 2017-11-19. Retrieved 2018-01-27.
  6. "Corporal Jyoti Prakash Nirala AC | Honourpoint" (in ಅಮೆರಿಕನ್ ಇಂಗ್ಲಿಷ್). 18 November 2017. Retrieved 2021-09-11.
  7. "बहन पर जान छिड़कते थे शहीद कमांडो निराला, साथी जवानों ने शादी में निभाई भाई की रस्म". Amar Ujala (in ಹಿಂದಿ). Retrieved 2021-09-11.
  8. "मरणोपरांत मिलेगा वायु सेना के कमांडो ज्योति प्रसाद को अशोक चक्र". Navbharat Times (in ಹಿಂದಿ). Retrieved 2021-09-11.
  9. "3 commandos of city IAF station killed in 38 days - Times of India". The Times of India. Retrieved 2018-01-27.
  10. "Army pays floral tributes to Corporal Jyoti Prakash in J-K".
  11. ೧೧.೦ ೧೧.೧ ೧೧.೨ ೧೧.೩ "Press Information Bureau". www.pib.nic.in (in ಇಂಗ್ಲಿಷ್). Retrieved 2018-01-27."Press Information Bureau".
  12. "Sole Ashok Chakra goes to Jyoti Prakash Nirala, IAF Garud commando". Deccan Herald. 25 January 2018. Retrieved 2018-01-27.
  13. ೧೩.೦ ೧೩.೧ "IAF commando Jyoti Prakash Nirala awarded Ashok Chakra for role in Kashmir encounter that killed six terrorists. - Firstpost". www.firstpost.com. January 25, 2018. Retrieved January 25, 2018."IAF commando Jyoti Prakash Nirala awarded Ashok Chakra for role in Kashmir encounter that killed six terrorists. - Firstpost".
  14. ೧೪.೦ ೧೪.೧ "Martyred Corporal Jyoti Prakash Nirala joins elite IAF club tomorrow - Times of India". indiatimes.com. January 25, 2018. Retrieved January 25, 2018."Martyred Corporal Jyoti Prakash Nirala joins elite IAF club tomorrow - Times of India".
  15. "Inspiring story of Jyoti Prakash Nirala – first Garud Commando to get Ashok Chakra posthumously". financialexpress.com. January 25, 2018. Retrieved January 25, 2018.
  16. Team, Editorial (2018-01-27). "Interesting Facts about Jyoti Prakash Nirala, Ashok Chakra awardee". SSBToSuccess (in ಅಮೆರಿಕನ್ ಇಂಗ್ಲಿಷ್). Retrieved 2018-01-27.