ಅಶೋಕ ಚಕ್ರ (ಪ್ರಶಸ್ತಿ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

Ashoka Chakra Ribbon

ಅಶೋಕ ಚಕ್ರವು ಭಾರತೀಯ ಸೇನೆ ತನ್ನ ಯೋಧರಿಗೆ ನೀಡುವ ಶೌರ್ಯ ಪ್ರಶಸ್ತಿಯಾಗಿದೆ.


ರಣರಂಗದ ಹೊರಗಡೆ ಯೋಧನೊಬ್ಬ ತನ್ನ ಅಪ್ರತಿಮ ಶೌರ್ಯ,ಸಾಹಸ ಮತ್ತು ತ್ಯಾಗಕ್ಕಾಗಿ ಪಡೆಯಬಹುದಾದ ಪದಕವಿದು.ಸಾಮಾನ್ಯವಾಗಿ ಶಾಂತಿ ಸಮಯದಲ್ಲಿ ಪ್ರದಾನ ಮಾಡುವ ಪರಮ ವೀರ ಚಕ್ರಕ್ಕೆ ಸಮಾಂತರವಾದ ಪ್ರಶಸ್ತಿ ಇದಾಗಿದೆ.ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ಪದಕಗಳು ಅಶೋಕ ಚಕ್ರದ ವಿಸ್ತರಿತಗೊಂಡ ಪ್ರಶಸ್ತಿಗಳಾಗಿವೆ.


ಹಿನ್ನೆಲೆ[ಬದಲಾಯಿಸಿ]

ಅಶೋಕ ಚಕ್ರವನ್ನು ಮೊಟ್ಟಮೊದಲಿಗೆ ಜನವರಿ ೪,೧೯೫೨ರಲ್ಲಿ ಹುಟ್ಟುಹಾಕಲಾಯಿತು.ಆಗ ಇದನ್ನು 'ಅಶೋಕ ಚಕ್ರ-ಕ್ಲಾಸ್ ೧','ಅಶೋಕ ಚಕ್ರ-ಕ್ಲಾಸ್ ೨','ಅಶೋಕ ಚಕ್ರ-ಕ್ಲಾಸ್ ೩' ಎಂದು ವಿಂಗಡಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು.ನಂತರ ೧೯೬೭ರಲ್ಲಿ ಈ 'ವರ್ಗ'ವನ್ನು ತೆಗೆದು ಹಾಕಿ 'ಕೀರ್ತಿ ಚಕ್ರ' ಮತ್ತು'ಶೌರ್ಯ ಚಕ್ರ'ವೆಂದು ವಿಂಗಡಿಸಲಾಯಿತು.