ಜೋಶ್ನಾ ಚಿನ್ನಪ್ಪ
ಜೋಶ್ನಾ ಚಿನ್ನಪ್ಪ (ಜನನ ೧೫ ಸೆಪ್ಟೆಂಬರ್ ೧೯೮೬,) ಅವರು ಭಾರತೀಯ ವೃತ್ತಿಪರ ಸ್ಕ್ವ್ಯಾಷ್ ಆಟಗಾರರಾಗಿದ್ದಾರೆ.[೧]
ಜನನ
[ಬದಲಾಯಿಸಿ]ಜೋಶ್ನಾ ಚಿನ್ನಪ್ಪ ಅವರು ಸೆಪ್ಟೆಂಬರ್ ೧೫, ೧೯೮೬ ರಂದು ಚೆನ್ನೈನಲ್ಲಿ ಜನಿಸಿದರು.[೨]
ಆರಂಭಿಕ ಜೀವನ
[ಬದಲಾಯಿಸಿ]ಜೋಶ್ನಾ ಚಿನ್ನಪ್ಪ ಅವರು ೨೦೧೬ ರಲ್ಲಿ ವಿಶ್ವದ ಆಟಗಾರರಲ್ಲಿ ೧೦ ನೇ ಸ್ಥಾನವನ್ನು ಗಳಿಸಿದ್ದಾರೆ. ೨೦೦೩ ರಲ್ಲಿ ಬ್ರಿಟಿಷ್ ಸ್ಕ್ವ್ಯಾಷ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರನಾಗಿದ್ದ ಜೋಶ್ನಾ ಅವರು ೧೯ ನೇ ವಯಸ್ಸಿನಲ್ಲಿಯೇ ಕಿರಿಯ ಭಾರತೀಯ ಮಹಿಳಾ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ನ ಮೊದಲ ಫಲಾನುಭವಿ ಜೋಶ್ನಾ ಚಿನ್ನಪ್ಪರವರು. ೨೦೧೪ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಜೋಶ್ನಾ ಚಿನ್ನಪ್ಪ ಮತ್ತು ದೀಪಿಕಾ ಪಳ್ಳಿಕಾಲ್.ಕಾರ್ತಿಕ್ ಸ್ಕ್ವ್ಯಾಷ್ ಮಹಿಳಾ ಡಬಲ್ಸ್ ಚಿನ್ನದ ಪದಕವನ್ನು ಗೆದ್ದುಕೊಂಡರು. ಅಲ್ಲದೆ ಭಾರತದಲ್ಲಿ ಮೊದಲ ಬಾರಿಗೆ ಕಾಮನ್ವೆಲ್ತ್ ಗೇಮ್ಸ್ ಪದಕವನ್ನು ಗಳಿಸಿದ ಆಟಗಾರರಾಗಿದ್ದಾರೆ. ಈ ಇಬ್ಬರು ಆಟಗಾರರು ೨೦೧೮ರ ಪಂದ್ಯಾವಳಿಯಲ್ಲಿ ಗೋಲ್ಡ್ ಕೋಸ್ಟ್ ಆವೃತ್ತಿಯನ್ನು ನ್ಯೂಜಿಲೆಂಡ್, ಜೊಯೆಲ್ಲೆ ಕಿಂಗ್ ಮತ್ತು ಅಮಂಡಾ ಲ್ಯಾಂಡರ್ಸ್-ಮರ್ಫಿ ತಂಡವನ್ನು ಸೋಲಿಸುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಶೀರ್ಷಿಕೆಗಳು
[ಬದಲಾಯಿಸಿ]ಮೇ ೨೦೧೨ ರಲ್ಲಿಚೆನ್ನೈ ಓಪನ್ ಗೆಲ್ಲುವ ಮೂಲಕ ಜೋಶ್ನಾ ಇಂಗ್ಲೆಂಡ್ನ ಸಾರಾ ಜೇನ್ ಪೆರಿ ಅವರನ್ನು ಸೋಲಿಸಿದರು.[೩] ಫೆಬ್ರವರಿ ೨, ೨೦೧೪ ರಂದು ವಿನ್ನಿಪೇಗ್ ವಿಂಟರ್ ಓಪನ್ ಟ್ರೋಫಿಯನ್ನು ಗೆದ್ದುಕೊಂಡಳು. ಇದು ಅವಳ ಮೊದಲ WSA ವಿಶ್ವ ಪ್ರಶಸ್ತಿ, ಈಜಿಪ್ಟಿನ `ಹೆಬಾ ಎಲ್ ಟೋರ್ಕಿ'ಯನ್ನು ೧೧-೧೩, ೧೧-೮, ೧೧-೫, ೩-೧೧, ೧೨-೧೦ ಅಂತರದಲ್ಲಿ ಫೈನಲ್ನಲ್ಲಿ ಸೋಲಿಸಿತು.[೪]
- ಏಷಿಯನ್ ಗೇಮ್ಸ್, ೨೦೧೮-ಕಂಚು (ಸಿಂಗಲ್ಸ್), ಬೆಳ್ಳಿ (ತಂಡ).
- ಕಾಮನ್ವೆಲ್ತ್ ಗೇಮ್ಸ್, ೨೦೧೮-ವಿಜೇತೆ.
- ಏಷಿಯನ್ ಸ್ಕ್ವಾಷ್ ಟೈಟಲ್, ೨೦೧೭-ವಿಜೇತೆ.
- ಎನ್.ಎಸ್.ಸಿ. ಸೀರಿಸ್ ನಂ.೬ (ಟೂರ್ ೧೨) ೨೦೦೯ -ವಿಜೇತೆ.
- ಬ್ರಿಟಿಷ್ ಜೂನಿಯರ್ ಓಪನ್, ೨೦೦೫ -ವಿಜೇತೆ.
- ಏಷಿಯನ್ ಜೂನಿಯರ್, ೨೦೦೫ -ವಿಜೇತೆ.
- ವರ್ಲ್ಡ್ ಜೂನಿಯರ್ ಚಾಂಪಿಯನ್ಶಿಪ್ಸ್, ಬೆಲ್ಜಿಯಮ್, ೨೦೦೫ - ರನ್ನರ್ ಅಪ್.
- ಬ್ರಿಟಿಷ್ ಓಪನ್ ಜೂನಿಯರ್, ೨೦೦೪ - ರನ್ನರ್ ಅಪ್.
- ಎಸ್.ಎ.ಎಫ್. ಗೇಮ್ಸ್, ಪಾಕಿಸ್ತಾನ್, ೨೦೦೪ - ಚಿನ್ನ
- ಹಾಂಗ್ ಕಾಂಗ್ ಈವೆಂಟ್, ೨೦೦೪ - ರನ್ನರ್ ಅಪ್.
- ಏಷಿಯನ್ ಚಾಂಪಿಯನ್ಶಿಪ್, ೨೦೦೪ - ಕಂಚು.
- ಮಲೇಷಿಯನ್ ಜೂನಿಯರ್, ೨೦೦೪ - ವಿಜೇತೆ.
- ಇಂಡಿಯನ್ ನ್ಯಾಷನಲ್ ಜೂನಿಯರ್, ೨೦೦೪ - ವಿಜೇತೆ.
- ಇಂಡಿಯನ್ ನ್ಯಾಷನಲ್ ಸೀನಿಯರ್, ೨೦೦೪ - ವಿಜೇತೆ.
ಉಲ್ಲೇಖಗಳು
[ಬದಲಾಯಿಸಿ]- ↑ https://psaworldtour.com/players/view/7884/joshna-chinappa
- ↑ https://www.mapsofindia.com/who-is-who/sports/joshna-chinappa.html
- ↑ https://timesofindia.indiatimes.com/sports/more-sports/others/Joshna-Chinappa-clinches-Chennai-Open/articleshow/13522175.cms
- ↑ "ಆರ್ಕೈವ್ ನಕಲು". Archived from the original on 2019-03-27. Retrieved 2019-03-27.