ಜೋಗಿ (ಚಲನಚಿತ್ರ)
ಜೋಗಿ (ಚಲನಚಿತ್ರ) | |
---|---|
ಜೋಗಿ | |
ನಿರ್ದೇಶನ | ಪ್ರೇಮ್ |
ನಿರ್ಮಾಪಕ | ಪಿ.ಕೃಷ್ಣಪ್ರಸಾದ್, ರಾಮಪ್ರಸಾದ್ |
ಪಾತ್ರವರ್ಗ | ಶಿವರಾಜ್ಕುಮಾರ್ ಜೆನ್ನಿಫರ್ ಕೊತ್ವಾಲ್ ಅರುಂಧತಿನಾಗ್, ರಮೇಶ್ ಭಟ್, ಮಾ.ಕಿಶನ್, ರಘು, ಯತಿರಾಜ್ |
ಸಂಗೀತ | ಗುರುಕಿರಣ್ |
ಛಾಯಾಗ್ರಹಣ | ಎಂ.ಆರ್.ಸೀನು |
ಸಂಕಲನ | ಶ್ರೀನಿವಾಸ್ ಪಿ.ಬಾಬು |
ಬಿಡುಗಡೆಯಾಗಿದ್ದು | ೨೦೦೫ |
ಸಾಹಸ | ಜನಾರ್ಧನ್ |
ಚಿತ್ರ ನಿರ್ಮಾಣ ಸಂಸ್ಥೆ | ಅಶ್ವಿನಿ ಪ್ರೊಡಕ್ಷನ್ಸ್ |
ಸಾಹಿತ್ಯ | ಪ್ರೇಂ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸೋನು ಕಕ್ಕರ್, ಪ್ರೇಂ, ಗುರುರಾಜ ಹೊಸಕೋಟೆ, ಶಂಕರ ಮಹದೇವನ್, ಎಸ್.ಸುನೀತ, ಬಿ.ಜಯಶ್ರೀ, ಗುರುಕಿರಣ್, ವಿಜಯ್ ಯೇಸುದಾಸ್, ಮುರಳಿ ಮೋಹನ್, ಹರಿಹರನ್, ನಿತ್ಯಶ್ರಿ, ಸುನಿತಾ ಚೌಹಾಣ್ |
ಜೋಗಿ - ವರ್ಷ ೨೦೦೫ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರಗಳಲ್ಲೊಂದು. ಶಿವರಾಜಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಜೆನ್ನಿಫರ್ ಕೊತ್ವಾಲ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಕಥೆ
[ಬದಲಾಯಿಸಿ]ಮಾದೇಶ(ಶಿವರಾಜಕುಮಾರ್) ಮಹದೇಶ್ವರ ಬೆಟ್ಟದ ಬಳಿಯ ಹಳ್ಳಿಯ ಮುಗ್ದಯುವಕ. ಮಾದೇಶನಿಗೆ ತಾಯಿಯ (ಅರುಂಧತಿನಾಗ್) ಕುಣಿತವೆಂದರೆ ಬಹಳ ಅಚ್ಚುಮೆಚ್ಚು. ಅಸ್ವಸ್ಥರಾಗಿದ್ದ ಮಾದೇಶನ ತಂದೆಯು (ರಮೇಶ್ ಭಟ್) ನಿಧನರಾದಾಗ, ತಾಯಿಗೊಳಪಡಿಸಿದ ವಿಧವಾಶಾಸ್ತ್ರಗಳಿಗೆ ರೊಚ್ಚಿ, ವಿರೋಧ ವ್ಯಕ್ತಪಡಿಸುವ ಮಾದೇಶನು ತಾಯಿಯನ್ನು ಸುಖವಾಗಿಡಬೇಕೆಂಬ ಉದ್ದೇಶದೊಂದಿಗೆ ಬೆಂಗಳೂರಿಗೆ ಬರುತ್ತಾನೆ.
ಸಂದರ್ಭದ ಸುಳಿವಿಗೆ ಸಿಕ್ಕು ಮಚ್ಚು ಹಿಡಿಯುತ್ತಾನೆ.
ಈ ನಡುವೆ ಮಗನನ್ನು ಹುಡುಕುವ ಹಂಬಲದಲ್ಲಿ ತಾಯಿಯೂ ಕೂಡ ಬೆಂಗಳೂರಿಗೆ ಬರುತ್ತಾಳೆ. ಅನಿರೀಕ್ಷಿತವಾಗಿ ಪತ್ರಕರ್ತೆಯೊಬ್ಬಳ (ಜೆನ್ನಿಫರ್ ಕೊತ್ವಾಲ್) ಪರಿಚಯವಾಗುತ್ತದೆ. ಆ ಪತ್ರಕರ್ತೆಯು ತಾಯಿಗೆ ಮಗನನ್ನು ಹುಡುಕಿಕೊಡಲು ಪ್ರಯತ್ನಿಸುತ್ತಾಳೆ.
ತಾಯಿ ಮಗ ಕೊನೆಗೆ ಭೇಟಿಯಾಗುತ್ತಾರೆಯೇ? ಪತ್ರಕರ್ತೆಯ ಪ್ರಯತ್ನಗಳು ಫಲಕಾರಿಯಾಗುವುದೇ? ಇದು ಚಿತ್ರದ ಅಂತಿಮ ತಿರುಳು.
ಸ್ವಾರಸ್ಯ
[ಬದಲಾಯಿಸಿ]- ಚಿತ್ರದ ಆರಂಭದ ದೃಶ್ಯದಲ್ಲಿ ಡಾ.ರಾಜ್ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ಜೋಗಿಯ (ತಮ್ಮ ಪುತ್ರ ಶಿವರಾಜ್ಕುಮಾರ್ ಪಾತ್ರ) ಜೋಳಿಗೆಗೆ ಕಾಣಿಕೆಗಳನ್ನರ್ಪಿಸುತ್ತಾರೆ.
- ನಾಯಕಿ ಜೆನ್ನಿಫರ್ ಕೊತ್ವಾಲ್ ಅಭಿನಯದ ಮೊದಲ ಕನ್ನಡ ಚಲನಚಿತ್ರ
- ಕರಿಯ, ಎಕ್ಸ್ಕ್ಯೂಸ್ ಮಿ ನಂತರ ಮೂರನೇ ಯಶಸ್ವಿ ಚಿತ್ರವನ್ನು ನಿರ್ದೇಶಿಸಿದ ನಿರ್ದೇಶಕ ಪ್ರೇಂಗೆ - ಹ್ಯಾಟ್ರಿಕ್ ನಿರ್ದೇಶಕ ಎಂದು ಮಾಧ್ಯಮಗಳಿಂದ, ಅಭಿಮಾನಿಗಳಿಂದ ಬಿರುದು.