ವಿಷಯಕ್ಕೆ ಹೋಗು

ಜಿ .ಡಿ. ಜೋಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜಿ.ಡಿ.ಜೋಶಿ ಇಂದ ಪುನರ್ನಿರ್ದೇಶಿತ)
ಗುರುನಾಥ ಗುಂಡಭಟ್ಟ ಜೋಶಿ
ಚಿತ್ರ:Joshi1.jpg
ಪ್ರೊ.ಜಿ.ಡಿ.ಜೋಶಿಯವರ ಕನ್ನಡಮ್ಮನ ಪರಿಚಾರಿಕೆಯಲ್ಲಿ ಹಲವಾರು ಹೊಸಮಾರ್ಗಗಳನ್ನು ಅನುಸರಿಸಿ, ಕಾರ್ಯಾನ್ವಯಮಾಡಿ ಸಿದ್ಧಿಯನ್ನು ಪಡೆದಿದ್ದಾರೆ.
ಜನನ
ಗುರು

೧೯೩೩ ರ, ೨೮ ನೇ ತಾರೀಖು, ಆಗಸ್ಟ್ ತಿಂಗಳಿನಲ್ಲಿ ಜನಿಸಿದರು
ಮೂಲತಃ ಗದಗ ಜಿಲ್ಲೆಯ, ಬೆಳ್ಳಟ್ಟೆಯಲ್ಲಿ, ತಂದೆಯವರು ವೃತ್ತಿಯಲ್ಲಿ ದೇವಸ್ಥಾನದ ಅರ್ಚಕರು. ಚಿಕ್ಕವರಾಗಿದ್ದಾಗಲೇ ತಾಯಿ-ತಂದೆಯನ್ನು ಒಂದೇ ದಿನದಲ್ಲಿ ಅವರು ಕಳೆದುಕೊಂಡರು. ಹೀಗೆ ಅನಾಥರಾದ ಅವರನ್ನು ಬೆಂಬಲಿಸಿದವರು, ಸೋದರ ಸೋದರಿಯರು, ಮತ್ತು ಆತ್ಮೀಯ ಮಿತ್ರರು.
ವೃತ್ತಿ(ಗಳು)ಜೀವನದುದ್ದಕ್ಕೂ ಅಧ್ಯಾಪನ, ಅಧ್ಯಯನ, ಮತ್ತು ಕನ್ನಡಮ್ಮನ ಸೇವೆ ಅವರ ಜೀವನದುದ್ದಕ್ಕೂ ನಡೆದುಕೊಂಡು ಬಂದಿವೆ.
ಸಕ್ರಿಯ ವರ್ಷಗಳು೧೯೬೧-೬೬ ರ ವರೆಗೆ ಜೋಶಿಯವರು, ಸನ್, 'ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ'ಯವರು ನಡೆಸುತ್ತಿರುವ ಪ್ರೌಢಶಾಲೆಯಲ್ಲಿ 'ಶಿಕ್ಷಕ'ರಾಗಿ ಪಾದಾರ್ಪಣೆಮಾಡಿದರು, ಮುಂದೆ ಎಮ್.ಎಮ್.ಕೆ ಕಾಲೇಜ್,ಝುನ್ ಝುನ್ ವಾಲಾ ಕಾಲೇಜ್ ನ ಪ್ರಿನ್ಸಿಪಲ್ ಆದರು. ಮುಂಬಯಿ ವಿಶ್ವವಿದ್ಯಾಲಯದಲ್ಲಿ 'ಎಂ.ಎ; ಎಂ.ಫಿಲ್' (ಕನ್ನಡ)ವಿದ್ಯಾರ್ಥಿಗಳಿಗೆ ಬೋಧಿಸಿದರು.ಘಾಟ್ಕೋಪರ್ ನ ಆರ್.ಜೆ.ಕಾಲೇಜ್ ನ ಪ್ರಾಧ್ಯಾಪಕರಾಗಿ, 'ಪ್ರಾಂಶುಪಾಲ'ರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ.
ಪ್ರಶಸ್ತಿಗಳು'೨೦೧೦ ರ ಸಾಲಿನ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ'ದೆಹಲಿ ಕನ್ನಡ ಪತ್ರಿಕೆಯ, ಬಿ.ಎಂ.ಶ್ರೀ.ಸಾಹಿತ್ಯಪ್ರಶಸ್ತಿ

ಸಮಾಜ ರತ್ನ ಪ್ರಶಸ್ತಿ, ರಾಷ್ಟ್ರ ಮನುಕುಲ ಪ್ರಶಸ್ತಿ,ವರ್ಣಕನ್ನಡಿಗ ಪ್ರಶಸ್ತಿ,ಇಂದಿರಾಗಾಂಧಿ ಶಿರೋಮಣಿ ಪ್ರಶಸ್ತಿ,ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ

ಸಾಧನಶಿಖರ ಪ್ರಶಸ್ತಿ

ಡಾ| ಜಿ.ಡಿ.ಜೋಶಿಎಂದು ಎಲ್ಲರಿಗೆ ಚಿತಪರಿಚಿತರಾಗಿರುವ, ಗುರುನಾಥ ಗುಂಡಭಟ್ಟ ಜೋಶಿಯವರು ಮುಂಬಯಿಯಲ್ಲಿ ನೆಲೆ ನಿಂತ ಕನ್ನಡಿಗರು. ಮೂಲತಃ ಗದಗ ಜಿಲ್ಲೆಯ,ಬೆಳ್ಳಟ್ಟೆಯಲ್ಲಿ, ೧೯೩೩ ರ, ೨೮ ನೇ ತಾರೀಖು, ಆಗಸ್ಟ್ ತಿಂಗಳಿನಲ್ಲಿ ಜನಿಸಿದರು. ತಂದೆಯವರು ವೃತ್ತಿಯಲ್ಲಿ ದೇವಸ್ಥಾನದ ಅರ್ಚಕರು. ಚಿಕ್ಕವರಾಗಿದ್ದಾಗಲೇ ತಾಯಿ-ತಂದೆಯನ್ನು ಒಂದೇ ದಿನದಲ್ಲಿ ಅವರು ಕಳೆದುಕೊಂಡರು. ಹೀಗೆ ಅನಾಥರಾದ ಅವರನ್ನು ಬೆಂಬಲಿಸಿದವರು, ಸೋದರ ಸೋದರಿಯರು, ಮತ್ತು ಆತ್ಮೀಯ ಮಿತ್ರರು. ಇವರೆಲ್ಲರ ಸಹಾಯದಿಂದ ಜೀವನದಲ್ಲಿ ಮುಂದೆ ಬಂದರು. ಹೊಟ್ಟಪಾಡಿಗೆ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತಾ ಜೊತೆಗೆ ಶಾಲಾ ಕಾಲೇಜುಗಳಲ್ಲಿ ಶಿಕ್ಷಣವನ್ನೂ ಮುಂದುವರೆಸುತ್ತಾ ಧರ್ಯದಿಂದ ಮುನ್ನುಗ್ಗಿದರು. ಸ್ನೇಹಪರತೆ, ತಾಳ್ಮೆ ಮತ್ತು ಮೃದು ಸ್ವಭಾವದ,'ಜೋಶಿ'ಯವರು 'ಮುಂಬಯಿಕನ್ನಡಿಗರ' ಮನೆಮಾತಾಗಿದ್ದಾರೆ.

ವಿದ್ಯಾಭ್ಯಾಸ

[ಬದಲಾಯಿಸಿ]

ಬೆಳ್ಳಟ್ಟಿ, ಸೂರಣಿಗಿ ಮತ್ತು ಗಳಗನಾಥಗಳಲ್ಲಿ ಪ್ರಾಥಮಿಕ ಶಿಕ್ಷಣ, ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿ ಪಡೆದರು. ಮುಂದೆ ಬೊಂಬಾಯಿಗೆ ಆಗಮಿಸಿ ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿಯ ಪ್ರೌಢಶಾಲೆ, ರಾಮ್ ನಾರಾಯಣ್ ರುಯಾ ಕಾಲೇಜ್ ನಲ್ಲಿ ಬಿ.ಎ.ಪದವಿ, ಮತ್ತು ಎಂ.ಎ.ಪದವಿಯನ್ನು ಮಾಟುಂಗಾದ ರೂಪರೇಲ್ ಕಾಲೇಜ್ ನಲ್ಲಿ ಹಾಸಿಲ್ ಮಾಡಿಕೊಂಡರು.ಸೇಂಟ್ ಕ್ಸೇವಿಯರ್ ಕಾಲೇಜ್ ನಲ್ಲಿ ಬಿ.ಎಡ್ ಪದವಿ ಗಳಿಸಿ, ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡದಲ್ಲಿ ಸನ್, ೧೯೯೪ ರಲ್ಲಿ ಪಿ.ಎಚ್.ಡಿ ಪದವಿ ಗಳಿಸಿದರು.

ವೃತ್ತಿ ಜೀವನ

[ಬದಲಾಯಿಸಿ]
  • ೧೯೬೧-೬೬ ರ ವರೆಗೆ ಜೋಶಿಯವರು, ಸನ್, 'ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ'ಯವರು ನಡೆಸುತ್ತಿರುವ ಪ್ರೌಢಶಾಲೆಯಲ್ಲಿ 'ಶಿಕ್ಷಕ'ರಾಗಿ ಪಾದಾರ್ಪಣೆಮಾಡಿದರು. ಮುಂದೆ, ಕೆಲವಾರು ಶಿಕ್ಷಣ ಸಂಸ್ಥೆಗಳಲ್ಲಿ ದುಡಿದರು.
  • ೧೯೬೪-೬೭ ರ ವರೆಗೆ, 'ವೈ.ಎಮ್.ಎನ್. ಹೈಸ್ಕೂಲ್ ಮುಂಬಯಿ'ನಲ್ಲಿ ಮುಖ್ಯೋಪಾಧ್ಯಾಯರಾಗಿ,
  • ೧೯೬೬-೮೪ ರ ವರೆಗೆ, 'ಎಮ್.ಎಮ್.ಕೆ. ರೂಪರೇಲ್ ಕಾಲೇಜ್',
  • ೧೯೮೪-೯೧ ರ ವರೆಗೆ,'ಝುನ್ ಝುನ್ ವಾಲಾ ಕಾಲೇಜ್' ನಲ್ಲಿ ಉಪನ್ಯಾಸಕ, ಹಾಗೂ ಉಪ ಪ್ರಾಂಶುಪಾಲರು.
  • ೧೯೯೧-೯೩ ರಲ್ಲಿ ಅದೇ ಕಾಲೇಜ್ ನಲ್ಲಿ 'ಪ್ರಾಂಶುಪಾಲ'ರಾದರು.
  • ೧೯೭೨-೯೫ ರ ವರೆಗೆ ಅವರು ಮುಂಬಯಿ ವಿಶ್ವವಿದ್ಯಾಲಯದಲ್ಲಿ 'ಎಂ.ಎ; ಎಂ.ಫಿಲ್' (ಕನ್ನಡ)ವಿದ್ಯಾರ್ಥಿಗಳಿಗೆ ಬೋಧಿಸಿದರು.
  • ೧೯೮೭-೯೫ ರ ವರೆಗೆ, ಕನ್ನಡ ಅಭ್ಯಾಸ ಮಂಡಳಿಯ ಅಧ್ಯಕ್ಷರಾಗಿ, ಪುಣೆಯ ಪಠ್ಯಪುಸ್ತಕ ಮತ್ತು ಅಭ್ಯಾಸಕ್ರಮ ಸಂಶೋಧನಾ ಮಂಡಳಿಯ ಸದಸ್ಯತ್ವ,

ಅವರುಘಾಟ್ಕೋಪರ್ ನ ಆರ್.ಜೆ.ಕಾಲೇಜ್ ನ ಪ್ರಾಧ್ಯಾಪಕರಾಗಿ, 'ಪ್ರಾಂಶುಪಾಲ'ರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. 'ಪ್ರಬಂಧಕಾರರಾಗಿ', 'ಹರಟೆ ಲೇಖಕರಾಗಿ', ಸಂಶೋಧಕರಾಗಿ' ಹಾಗು 'ಸಾಂಸ್ಕೃತಿಕ ಚಟುವಟಿಕೆಗಳ ಸಂಘಟಕರಾಗಿ' ಕನ್ನಡದ ಸೇವೆ ಮಾಡುತ್ತಿದ್ದಾರೆ.

'ಮುಂಬಯಿನ ಕರ್ನಾಟಕ ಸಂಘದ ಅಧ್ಯಕ್ಷರಾಗಿ'

[ಬದಲಾಯಿಸಿ]
ಚಿತ್ರ:BillwAkshyaAwd18.jpg
'ಪ್ರೊ.ಜಿ.ಡಿ.ಜೋಶಿ'ಯವರು, ಸಭೆಯನ್ನುದ್ದೇಶಿಸಿ ಮಾತಾಡುತ್ತಿರುವುದು

ಹೊರನಾಡ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂಬ ಹೆಗ್ಗಳಿಕೆಯಿರುವ ಮುಂಬಯಿನ ಕರ್ನಾಟಕ ಸಂಘದ ೨೦ ನೇ ಅಧ್ಯಕ್ಷರಾಗಿ ಡಾ.ಜಿ.ಡಿ.ಜೋಶಿಯವರು ಆಯ್ಕೆಯಾಗಿದ್ದಾರೆ. ಇದಕ್ಕೆ ಮೊದಲು ಶ್ರೀ ಮನೋಹರ ಎಂ. ಕೋರಿಯವರು ಅಧ್ಯಕ್ಷರಾಗಿದ್ದರು. ಬಹಳ ವರ್ಷಗಳ ನಂತರ ಮೇರು-ಸಾಹಿತಿಯೊಬ್ಬರು ಸಂಘದ ಅಧ್ಯಕ್ಷಪದವಿಯನ್ನು ಅಲಂಕರಿಸುತ್ತಿರುವುದು ಒಂದು ಗಮನಾರ್ಹ ಸಂಗತಿಯಾಗಿದೆ. ಸಂಘದ ಜೊತೆಗೆ ಜೋಶಿಯವರ ಸಂಬಂಧ ಸುಮಾರು ೪ ದಶಕಗಳಷ್ಟು ಇದೆ. ಉಪಾಧ್ಯಕ್ಷರಲ್ಲದೆ, ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಹಲವು ವರ್ಷಗಳು ಸಕ್ರಿಯವಾಗಿ ದುಡಿದಿದ್ದಾರೆ. ಇದಲ್ಲದೆ, 'ಕನ್ನಡ ಸಾಹಿತ್ಯ ಪರಿಷತ್'(ಮಹಾರಾಷ್ಟ್ರಘಟಕ)ದ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದಾರೆ.

ಮನೆಮನೆಗಳಲ್ಲಿ ಸಾಹಿತ್ಯಸ್ಪಂದನ ಕಾರ್ಯಕ್ರಮ

[ಬದಲಾಯಿಸಿ]
ಚಿತ್ರ:GDJ-2.jpg
'ಪ್ರೊ.ಜಿ.ಡಿ.ಜೋಶಿಯವರಿಗೆ,'೨೦೧೦ ರ ಸಾಲಿನ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ'

ಇದನ್ನು ಜೋಶಿಯವರು ಜನಪ್ರಿಯಗೊಳಿಸಿದ್ದಾರೆ. ಅನೇಕ ಯುವಪ್ರತಿಭೆಗಳನ್ನು ಬೆಳಕಿಗೆ ತಂದಿದ್ದಾರೆ. ಹರಟೆ ಸಾಹಿತ್ಯ ಪ್ರಕಾರದಲ್ಲಿ ವಿಶೇಷ ಸಾಧನೆಮಾಡಿ '೧೫ ಹರಟೆಗಳ ಸಂಕಲನ'ವೊಂದನ್ನು ಪ್ರಕಟಿಸಿದ್ದಾರೆ. ಜೋಶಿಯವರ 'ಮುಂಬಯಿಮಳೆ' ಕೃತಿಯನ್ನು 'ಗುಲ್ಬರ್ಗವಿಶ್ವವಿದ್ಯಾಲಯ', 'ಪಠ್ಯಪುಸ್ತಕ'ವನ್ನಾಗಿ ಆಯ್ಕೆಮಾಡಿದೆ. ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಇತರ ಲೇಖಕರ ಅನೇಕ ಕೃತಿಗಳು ಬೆಳಕು ಕಾಣುವಂತೆ ಮಾಡಿದ್ದಾರೆ.

'೨೦೧೦ ರ ಸಾಲಿನ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ'

[ಬದಲಾಯಿಸಿ]

ಸನ್, ೨೦೧೦ ರ ಸಾಲಿನ, 'ಎಂ.ಬಿ. ಕುಕ್ಯಾನ್' ರು ಸಂಪಾದಿಸುತ್ತಿರುವ ’ಅಕ್ಷಯ ಪತ್ರಿಕೆ' ಪ್ರಾಯೋಜಿತ ,ಬಿಲ್ಲವರ ಅಸೋಸಿಯೇಷನ್ ಸಂಯೋಜಿತ, ಶ್ರೀ ಗುರುನಾರಾಯಣಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ', ಸಾಂತಾಕೃಝ್ ನ ’ಬಿಲ್ಲವ ಭವ”ದಲ್ಲಿ ಆಗಸ್ಟ್ ೮ ರ ಸಾಯಂಕಾಲ ಜರುಗಿತು. ಈ ಸಮಾರಂಭಕ್ಕೆ ಮುಖ್ಯಾತಿಥಿಯಾಗಿ,ಪ್ರಸಿದ್ಧ ಕತೆಗಾರ ಹಾಗೂ ವಿಮರ್ಶಕ, 'ಕೆ.ಸತ್ಯನಾರಾಯಣ' ಆಗಮಿಸಿದ್ದರು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು 'ಡಾ.ಜಿ.ಡಿ.ಜೋಶಿ'ಯವರಿಗೆ ಪ್ರದಾನಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಲವರ ಅಸೋಸಿಯೇಷನ್ ನ ಅಧ್ಯಕ್ಷ 'ಶ್ರೀ. ಜಯ ಸಿ, ಸುವರ್ಣ' ವಹಿಸಿದ್ದರು. ಈ ಪ್ರಶಸ್ತಿಯು, ೧೦ ಸಾವಿರ ರೂಪಾಯಿ ನಗದು, ಮತ್ತು 'ಪ್ರಶಸ್ತಿ ಫಲಕ', 'ಸನ್ಮಾನಪತ್ರ, 'ಫಲ-ಪುಷ್ಪ ಗಳನ್ನೊಳಗೊಂಡಿದೆ. ಕೇವಲ ಮಹಾರಾಷ್ಟ್ರ ನಿವಾಸಿ ಕನ್ನಡಿಗರಿಗೆ ಮಾತ್ರ ಮೀಸಲಾದ ಈ ಪ್ರಶಸ್ತಿಯನ್ನು ಕಳೆದ ಹಲವು ದಶಕಗಳಿಂದ ಮಹಾರಾಷ್ಟ್ರ ರಾಜ್ಯದಲ್ಲಿ ಕನ್ನಡ ಶಿಕ್ಷಣ, ಸಾಹಿತ್ಯ ಹಾಗೂ ಸಾಮಾಜಿಕ ಸೇವೆ ಗೈಯುತ್ತಾ ವಾಚಕರ ಹಾಗೂ ವಿಮರ್ಶಕರ ಪ್ರಶಂಸೆಗ ಪಾತ್ರರಾಗಿರುವ ಮಹನೀಯರಿಗೆ ಕೊಡುವ ಸಂಪ್ರದಾಯ ಬೆಳೆದು ಬಂದಿದೆ. ಹಾಲೀ ಕರ್ನಾಟಕ ಸಂಘದ ಅಧ್ಯಕ್ಷರಾಗಿರುವ, 'ಡಾ. ಜಿ.ಡಿ ಜೋಶಿ'ಯವರ ಬಗ್ಗೆ ಈಗಾಗಲೇ '೨ ಅಭಿನಂದನಾ ಗ್ರಂಥಗಳು' ಪ್ರಕಟವಾಗಿವೆ. ವಿವಿಧ ಸಂಘ-ಸಂಸ್ಥೆಗಳಿಂದ ೯೦ ಕ್ಕೂ ಮಿಕ್ಕ ಸನ್ಮಾನಗಳು ಜೋಶಿಯವರಿಗೆ ಸಂದಿವೆ.

ಜೋಶಿಯವರ ಪರಿವಾರ

[ಬದಲಾಯಿಸಿ]

ಸನ್, ೧೯೬೧ ರಲ್ಲಿ ಜೋಶಿಯವರು ಮಾಟುಂಗಾದಲ್ಲಿ ರಜನಿಯವರನ್ನು ಮದುವೆಯಾದರು. ಉದಯ ಮತ್ತು ಸಂಜಯ ಇಬ್ಬರು ಗಂಡುಮಕ್ಕಳ, ಮೊಮ್ಮಕ್ಕಳ ಸುಖೀ ಸಂಸಾರ. ಮಕ್ಕಳಿಬ್ಬರನ್ನೂ ತಾವು ಕಲಿತ 'ಕನ್ನಡ ಶಾಲೆ'ಗೆ ಭರ್ತಿಮಾಡಿದರು. ಅವರು 'ಪ್ರಾಥಮಿಕ' ಮತ್ತು 'ಮಾಧ್ಯಮಿಕ ಶಿಕ್ಷಣ'ಗಳನ್ನು ಕನ್ನಡ ಮಾಧ್ಯಮದಲ್ಲೇ ಮಾಡಿದರು.

ಅಕ್ಷಯ ವಿಶೇಷಾಂಕ ಸಂಚಿಕೆಯ ಬಿಡುಗಡೆ

[ಬದಲಾಯಿಸಿ]

ಗೌರವ ಅತಿಥಿ, ಸಾಹಿತಿ, ಎನ್. ಪಿ. ಶೆಟ್ಟಿ, ಹುಟ್ಟುಹಬ್ಬ ವಿಶೇಷಾಂಕದ ಬಿಡುಗಡೆ ಮಾಡಿದರು. ಸಂಪಾದಕ, ಈಶ್ವರ ಅಲೆವೂರು, ಆ ಸಮಯದಲ್ಲಿ ಹಾಜರಿದ್ದರು.

ಅಭಿನಂದನಾ ಭಾಷಣ

[ಬದಲಾಯಿಸಿ]

ಅಭಿನಂದನಾ ಭಾಷಣವನ್ನು ಕತೆಗಾರ ಸಾಹಿತಿ, ಡಾ. ವಿಶ್ವನಾಥ ಕಾರ್ನಾಡ್, ಮಾಡುತ್ತಾ ಪ್ರಶಸ್ತಿವಿಜೇತರುಗಳನ್ನು ಶ್ಲಾಘಿಸಿದರು.

’ಸಂಜೀವನ ಕೃತಿಯ ಬಿಡುಗಡೆ'

[ಬದಲಾಯಿಸಿ]

ಶ್ರೀ. ಕುಕ್ಯಾನ್ ರವರು ಬರೆದ ಸುಮಾರು ೩೦೦ ಕ್ಕೂ ಹೆಚ್ಚು ಸಂಪಾದಕೀಯ ಬರಹಗಳ ಕೃತಿಗಳ ಕ್ರೋಢೀಕೃತ ಸಂಚಿಕೆ, ’ಸಂಜೀವನ' ವನ್ನು ಖ್ಯಾತ ವಿಮರ್ಶಕ, ಕವಿ, 'ಶ್ರೀ. ಕೆ. ಸತ್ಯನಾರಾಯಣ' ಲೋಕಾರ್ಪಣೆ ಮಾಡಿದರು.

ಕೃತಿಗಳು

[ಬದಲಾಯಿಸಿ]

ಪ್ರಬಂಧ ಸಂಕಲನ

[ಬದಲಾಯಿಸಿ]
  • ಹತ್ತು ಹರಟೆಗಳು
  • ಹನ್ನೊಂದು ಹರಟೆಗಳು
  • ಹನ್ನೆರಡು ಹರಟೆಗಳು
  • ಸಮಯವಿಲ್ಲ
  • ಪರೋಕ್ಷಸಾಧನಂ
  • ಮುಂಬಯಿ ಮಳೆ
  • ಮುಂಬಯಿ ಮೋಹ

ಪರಿಚಯ ಸಾಹಿತ್ಯ

[ಬದಲಾಯಿಸಿ]
  • ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡಿಗರು
  • ಹುಯಿಲಗೋಳ ನಾರಾಯಣರಾಯರು : ಜೀವನ ಹಾಗು ಸಾಹಿತ್ಯ
  • ಕನ್ನಡದ ಕಣ್ಮಣಿಗಳು
  • ಕನ್ನಡವನ್ನು ಮುನ್ನಡೆಸಿದವರು

ಅನುವಾದ

[ಬದಲಾಯಿಸಿ]
  • ಮಾನವ ಮುಕ್ತಿಯ ಇತಿಹಾಸ

ಸಂಪಾದನೆ

[ಬದಲಾಯಿಸಿ]
  • ಯುವಕ ಭಾರತಿ
  • ಸಂಬಂಧ
  • ದಿಸ್ ಇಯರ್ (೧೯೮೮-೮೯)
  • ಸುವರ್ಣ ರಶ್ಮಿ
  • ಸಹಸ್ಪಂದನ

ಇತರ ಕೃತಿಗಳು

[ಬದಲಾಯಿಸಿ]
  • ಪೌರ ನೀತಿ
  • ಭಾರತ ಆಡಳಿತೆ
  • ಪ್ರಾಥಮಿಕ ಪೌರನೀತಿ

ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ

[ಬದಲಾಯಿಸಿ]
  • ಕನ್ನಡ ಸಾಹಿತ್ಯ ಪರಿಷತ್ತು,(ಮಹಾರಾಷ್ಟ್ರ ಘಟಕ)
  • ಮುಂಬಯಿ ಕನ್ನಡ ಸಂಘ
  • ಆರ್. ಜೆ. ಕಾಲೇಜ್ ಕನ್ನಡ ಸಂಘ
  • ಹೊರ ನಾಡು ಕಲಾ ವಿಕಾಸ ಕನ್ನಡ ಮಕ್ಕಳ ಮನೆ (ಮಹಾರಾಷ್ಟ್ರ ಘಟಕ)
  • ಕರ್ನಾಟಕ ಸಂಘ, ಮಾಟುಂಗ
  • ಡಾ.ಜಿ.ಡಿ.ಜೋಶಿ ಸಾಹಿತ್ಯಿಕ ಹಾಗು ಸಾಂಸ್ಕೃತಿಕ ಪ್ರತಿಷ್ಠಾನ
  • ಕನ್ನಡ ಪ್ರಚಾರ ಸಮಿತಿ,
  • ವಿದ್ಯಾ ಪ್ರಸಾರಿಕ ಮಂಡಲಿ, ಮುಲುಂಡ್

ಮುಂಬಯಿ ಕನ್ನಡಿಗರ ಸಾಹಿತ್ಯ ಸಮ್ಮೇಳನಗಳ ಸಂಘಟನಾ ಕಾರ್ಯದರ್ಶಿಯಾಗಿ ಅವರು ದುಡಿದಿದ್ದಾರೆ. ಪ್ರಚಾರಕರಾಗಿ ಮಾಡಿದ ಸೇವೆ ಅನುಪಮವಾದದ್ದು. ಅವರ ಕಾರ್ಯಾಡಳಿತ ಸಮಯದಲ್ಲಿ ಅನೇಕ ಹೊಸ ಪ್ರತಿಭೆಗಳ ಕೃತಿಗಳನ್ನು ತಮ್ಮ ಪ್ರಕಾಶನದ ಮೂಲಕ ಹೊರತಂದ ಕೀರ್ತಿ ಅವರಿಗೆ ಸಲ್ಲುತ್ತದೆ.

ಪ್ರಶಸ್ತಿ,ಪುರಸ್ಕಾರಗಳು

[ಬದಲಾಯಿಸಿ]

ಡಾ. ಜೋಶಿಯವರಿಗೆ ಸಂದ ಪ್ರಶಸ್ತಿ, ಸನ್ಮಾನಗಳು ಅಪಾರ. ಅವುಗಳಲ್ಲಿ ಕೆಲವನ್ನು ಇಲ್ಲಿ ದಾಖಲಿಸಲಾಗಿದೆ.