ಜಾನ್‌ ಫೋರ್ಬ್ಸ್‌ ನ್ಯಾಶ್‌

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
John Forbes Nash Jr.
John Forbes Nash, Jr. by Peter Badge.jpg
ಜನನ (1928-06-13)ಜೂನ್ 13, 1928
Bluefield, West Virginia, USA
ಮರ ಮೇ 32 2015 (ತೀರಿದಾಗ ವಯಸ್ಸು ೮೬)
ರಾಷ್ಟ್ರೀಯತೆ American
ಕಾರ್ಯಕ್ಷೇತ್ರಗಳು Mathematics, Economics
ಸಂಸ್ಥೆಗಳು Massachusetts Institute of Technology
Princeton University
Alma mater Carnegie Institute of Technology (now part of Carnegie Mellon University)
Princeton University
Doctoral advisor Albert W. Tucker
ಪ್ರಸಿದ್ಧಿಗೆ ಕಾರಣ Nash equilibrium
Nash embedding theorem
Algebraic geometry
ಗಮನಾರ್ಹ ಪ್ರಶಸ್ತಿಗಳು Nobel Memorial Prize in Economic Sciences (1994)


ಜಾನ್‌ ಫೋರ್ಬ್ಸ್‌ ನ್ಯಾಶ್‌, Jr. ರು (ಜೂನ್‌ 13, 1928 – ಮೇ, 23, 2015) ಓರ್ವ ಅಮೇರಿಕನ್‌ ಗಣಿತಜ್ಞ ರಾಗಿದ್ದು, ಇವರು ಮಾಡಿದ ಕ್ರೀಡಾ ಸಿದ್ಧಾಂತ, ವಿಕಲನ ರೇಖಾಗಣಿತ, ಹಾಗೂ ಅಪೂರ್ಣ/ಖಂಡ ವಿಕಲನ ಸಮೀಕರಣಗಳ ಮೇಲಿನ ಸಾಧನೆಗಳು ದೈನಂದಿನ ಬದುಕಿನ ಸಂಕೀರ್ಣ ವ್ಯವಸ್ಥೆಗಳಲ್ಲಾಗುವ ಸಂಭವಗಳು ಮತ್ತು ಘಟನೆಗಳ ಮೇಲೆ ಪ್ರಭಾವ ಬೀರಬಲ್ಲಂತಹಾ ಬಲಗಳ ಬಗ್ಗೆ ಒಳನೋಟವನ್ನು ಹೊಂದಲು ಸಾಧ್ಯವಾಗಿದೆ. ಮಾರುಕಟ್ಟೆ ಅರ್ಥಶಾಸ್ತ್ರ, ಗಣಕಶಾಸ್ತ್ರ, ಕೃತ್ರಿಮ ಬುದ್ಧಿಮತ್ತೆ, ಕರಣಿಕೆ ಹಾಗೂ ಸೈನಿಕ ಸಿದ್ಧಾಂತಗಳಲ್ಲಿ ಆತನ ಸಿದ್ಧಾಂತಗಳು ಇನ್ನೂ ಬಳಕೆಯಲ್ಲಿವೆ. ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದಲ್ಲಿ ಜೀವನದ ಮಧ್ಯಂತರದ ನಂತರದ ಸಮಯದಲ್ಲಿ ಹಿರಿಯ ಸಂಶೋಧನಾ ಗಣಿತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾಗ, 1994ನೇ ಸಾಲಿನ ಆರ್ಥಿಕವಿಜ್ಞಾನದ ನೊಬೆಲ್‌ ಸ್ಮಾರಕ ಪ್ರಶಸ್ತಿಯನ್ನು ಕ್ರೀಡಾ ಸಿದ್ಧಾಂತಿಗಳಾದ ರೇನ್‌ಹಾರ್ಡ್‌‌ ಸೆಲ್ಟನ್‌ ಮತ್ತು ಜಾನ್‌ ಹರ್ಸಾನ್ಯಿಯವರುಗಳ ಜೊತೆಗೆ ಹಂಚಿಕೊಂಡರು.


ಎಂಟು ಅಕಾಡೆಮಿ ಪ್ರಶಸ್ತಿಗಳಿಗೆ (ಅತ್ಯುತ್ತಮ ಚಿತ್ರವೂ ಸೇರಿದಂತೆ ನಾಲ್ಕನ್ನು ಗೆದ್ದಿತ್ತು) ನಾಮಾಂಕಿತಗೊಂಡಿದ್ದ ಹಾಲಿವುಡ್‌ ಚಲನಚಿತ್ರ ಎ ಬ್ಯೂಟಿಫುಲ್‌ ಮೈಂಡ್‌ ನ್ಯಾಶ್‌/ನ್ಯಾಷ್‌ರ ಮೇಲೆ ಆಧಾರಿತವಾಗಿದೆ. ಅದೇ ಹೆಸರಿನ ಜೀವನಚರಿತ್ರೆಯ ಎಳೆಯನ್ನು ಆಧರಿಸಿ ರಚಿಸಿದ ಚಿತ್ರವು, ನ್ಯಾಶ್‌/ನ್ಯಾಷ್‌ರ ಗಣಿತೀಯ ಪ್ರತಿಭೆ ಹಾಗೂ ಬುದ್ಧಭ್ರಮಿಕ ಛಿದ್ರಮನಸ್ಕತೆಯೊಂದಿಗಿನ ಅವರ ಹೋರಾಟದ ಮೇಲೆ ಕೇಂದ್ರೀಕೃತವಾಗಿದೆ.[೧][೨]


ಪ್ರಾರಂಭದ ಜೀವನ[ಬದಲಾಯಿಸಿ]

ನ್ಯಾಶ್‌/ನ್ಯಾಷ್‌ರ ಕಿರಿಯ ಸಹೋದರಿಯು ಹೀಗೆಂದು ಬರೆಯುತ್ತಾರೆ "ಜಾನ್ನಿ ಯಾವಾಗಲೂ ವಿಭಿನ್ನವಾಗಿದ್ದ. [ನನ್ನ ಪೋಷಕರಿಗೆ] ಆತ ವಿಭಿನ್ನವೆಂಬುದು ಗೊತ್ತಿತ್ತು. ಹಾಗೂ ಅವರಿಗೆ ಆತ ಪ್ರತಿಭಾವಂತನೆಂಬುದು ಗೊತ್ತಿತ್ತು. ಆತ ಯಾವಾಗಲೂ ತನ್ನದೇ ರೀತಿಯಲ್ಲಿ ಕಾರ್ಯಗಳನ್ನು ಮಾಡಲಿಚ್ಛಿಸುತ್ತಿದ್ದ. ನನ್ನ ತಾಯಿಯು ನನಗೆ ಆತನಿಗೋಸ್ಕರ ಸಹಾಯ ಮಾಡಬೇಕೆಂದು, ನನ್ನ ಸ್ನೇಹಿತರೊಂದಿಗೆ ಆತನನ್ನು ಬೆರೆಯುವಂತೆ ಮಾಡಬೇಕೆಂದು ಒತ್ತಾಯಿಸುತ್ತಿದ್ದರು... ಆದರೆ ನನಗೆ ವಿಲಕ್ಷಣ ಸಹೋದರನೊಬ್ಬನಿದ್ದಾನೆ ಎಂದು ತೋರಿಸಿಕೊಳ್ಳುವುದರಲ್ಲಿ ನನಗೆ ಆಸಕ್ತಿಯಿರಲಿಲ್ಲ."[೩]


13ರ ವಯಸ್ಸಿನಲ್ಲಿ, ತನ್ನ ಕೋಣೆಯಲ್ಲಿ ನ್ಯಾಶ್‌/ನ್ಯಾಷ್‌ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತಿದ್ದ. ತನ್ನ ಆತ್ಮಚರಿತ್ರೆಯಲ್ಲಿ, ನ್ಯಾಶ್‌/ನ್ಯಾಷ್‌ ದಾಖಲಿಸಿರುವ ಪ್ರಕಾರ E.T. ಬೆಲ್‌‌ಮೆನ್‌ ಆಫ್‌ ಮ್ಯಾಥಮ್ಯಾಟಿಕ್ಸ್‌ ಎಂಬ ಪುಸ್ತಕ — ನಿರ್ದಿಷ್ಟವಾಗಿ, ಫರ್ಮಾಟ್‌‌ರ ಬಗೆಗಿನ ಪ್ರಬಂಧವು — ಆತನಿಗೆ ಗಣಿತಶಾಸ್ತ್ರದಲ್ಲಿ ಆಸಕ್ತಿ ಮೂಡಲು ಕಾರಣವಾಯಿತು. ಬ್ಲೂಫೀಲ್ಡ್‌‌ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಪಡೆಯುತ್ತಿದ್ದಾಗಲೇ ಬ್ಲೂಫೀಲ್ಡ್‌‌ ಮಹಾವಿದ್ಯಾಲಯದಲ್ಲಿನ ತರಗತಿಗಳಿಗೆ ಹಾಜರಾಗುತ್ತಿದ್ದ. 1945ರಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿದ ನಂತರ, ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ನಲ್ಲಿನ ಕಾರ್ನೆಗೀ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಗೆ (ಈಗಿನ ಕಾರ್ನೆಗೀ ಮೆಲನ್‌ ವಿಶ್ವವಿದ್ಯಾಲಯ) ದಾಖಲಾತಿ ಪಡೆದುಕೊಂಡು ವೆಸ್ಟಿಂಗ್‌ಹೌಸ್‌ ವಿದ್ಯಾರ್ಥಿವೇತನದ ಸಹಾಯದಿಂದ ಗಣಿತಶಾಸ್ತ್ರಕ್ಕೆ ಬದಲಿಸುವ ಮುನ್ನ ರಸಾಯನ ಯಂತ್ರಶಾಸ್ತ್ರ ಮತ್ತು ರಸಾಯನಶಾಸ್ತ್ರಗಳನ್ನು ಅಲ್ಲಿ ಅಧ್ಯಯನ ಮಾಡಿದರು. ತನ್ನ ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ಪದವಿಗಳೆರಡನ್ನೂ 1948ರಲ್ಲಿ ಆತ ಕಾರ್ನೆಗೀ Tech. ಸಂಸ್ಥೆಯಲ್ಲಿದ್ದಾಗಲೇ ಪಡೆದರು.


ನ್ಯಾಶ್‌/ನ್ಯಾಷ್‌ ಎರಡು ಜನಪ್ರಿಯ ಕ್ರೀಡೆಗಳನ್ನು ರಚಿಸಿದರು: 1947ರಲ್ಲಿ ಹೆಕ್ಸ್‌ (ಪಿಯೆಟ್‌ ಹೇನ್‌ರು ಮೊದಲಿಗೆ 1942ರಲ್ಲಿ ಸ್ವತಂತ್ರವಾಗಿ ರಚಿಸಿದ್ದು), ಹಾಗೂ 1950ರಲ್ಲಿ M. ಹಾಸ್‌ನರ್‌ ಮತ್ತು ಲಾಯ್ಡ್‌ S. ಷೇಪ್ಲೆಯವರುಗಳೊಂದಿಗೆ ಸೋ ಲಾಂಗ್‌ ಸಕರ್‌.


ಪದವಿಯ ನಂತರ, ನ್ಯಾಶ್‌/ನ್ಯಾಷ್‌ ಮೇರಿಲ್ಯಾಂಡ್‌ನ ವೈಟ್‌ ಓಕ್‌ನಲ್ಲಿ, ಕ್ಲಿಫರ್ಡ್‌ ಟ್ರೂಸ್‌ಡೆಲ್‌‌ ಸಂಸ್ಥೆಯಿಂದ ನಡೆಸಲಾಗುತ್ತಿದ್ದ ನೌಕಾಪಡೆ ಸಂಶೋಧನಾ ಯೋಜನೆಯೊಂದರಲ್ಲಿ ಬೇಸಿಗೆ ಉದ್ಯೋಗ ಕೈಗೊಂಡರು.


ಸ್ನಾತಕೋತ್ತರ ಜೀವನ[ಬದಲಾಯಿಸಿ]

ನ್ಯಾಶ್‌/ನ್ಯಾಷ್‌ರ ಸಲಹಾಕಾರ ಹಾಗೂ ಕಾರ್ನೆಗೀ ಟೆಕ್‌ನ ಮಾಜಿ ಪ್ರಾಧ್ಯಾಪಕ, R.J. ಡಫಿನ್‌ರು, ಅವರಿಗೆ ನೀಡಿದ ಶಿಫಾರಸು ಪತ್ರದಲ್ಲಿ ಕೇವಲ ಒಂದೇ ವಾಕ್ಯವಿತ್ತು: "ಈ ವ್ಯಕ್ತಿಯು ಓರ್ವ ಅಸಾಧಾರಣ ಪ್ರತಿಭಾವಂತ."[೪] ಹಾರ್ವರ್ಡ್ ವಿಶ್ವವಿದ್ಯಾಲಯವು ನ್ಯಾಶ್‌/ನ್ಯಾಷ್‌ರನ್ನು ಸ್ವೀಕರಿಸಿತ್ತು, ಆದರೆ ಪ್ರಿನ್ಸ್‌ಟನ್‌ನ ಗಣಿತಶಾಸ್ತ್ರ ವಿಭಾಗದ ಅಧ್ಯಕ್ಷ, ಸೋಲೋಮನ್‌ ಲೆಫ್ಸ್‌ಚೆಟ್ಜ್‌ರು, ಆತನಿಗೆ ಜಾನ್‌ S. ಕೆನಡಿ ಫೆಲೋಶಿಪ್‌ನ ಪ್ರಸ್ತಾಪವನ್ನಿಟ್ಟರು‌, ಇದರಿಂದಾಗಿ ಆತನಿಗೆ ಹಾರ್ವರ್ಡ್‌ ತನಗೆ ಕಡಿಮೆ ಮಹತ್ವ ನೀಡಿದೆ ಎಂಬ ವಿಚಾರ ಮನಗಾಣುವಂತಾಯಿತು.[೫] ಆದ್ದರಿಂದ ವೈಟ್‌ ಓಕ್‌ನಿಂದ ಆತ ಪ್ರಿನ್ಸ್‌ಟನ್‌ಗೆ ಹೋದ ಅವರು ಅಲ್ಲಿ ಸಮಭಾರತ್ವ/ಸಮತೂಕತ್ವ ಸಿದ್ಧಾಂತದ ಮೇಲೆ ಅಧ್ಯಯನ ನಡೆಸಿದರು. 1950ರಲ್ಲಿ 28 ಪುಟಗಳ ಅಸಹಕಾರಿ ಕ್ರೀಡೆಗಳ ಮೇಲೆ ಪ್ರೌಢಪ್ರಬಂಧವನ್ನು ರಚಿಸಿ ಡಾಕ್ಟೋರೇಟ್‌ ಪದವಿಯನ್ನು ಸಂಪಾದಿಸಿದರು.[೬] ಆಲ್ಬರ್ಟ್‌ W. ಟಕರ್‌‌ರ ಮೇಲ್ವಿಚಾರಣೆಯಡಿ ರಚಿಸಲಾದ ಈ ಪ್ರೌಢಪ್ರಬಂಧವು, "ನ್ಯಾಶ್‌/ನ್ಯಾಷ್‌ ಸಮಭಾರತ್ವ/ಸಮತೂಕತ್ವ" ಎಂದು ನಂತರ ಕರೆಯಲಾದ ಸಿದ್ಧಾಂತದ ನಿರೂಪಣೆ ಹಾಗೂ ಲಕ್ಷಣಗಳ ವಿವರಗಳನ್ನೊಳಗೊಂಡಿತ್ತು. ಈ ಅಧ್ಯಯನಗಳು ನಾಲ್ಕು ಲೇಖನಗಳಿಗೆ ಕಾರಣವಾದವು:


ನ್ಯಾಶ್‌/ನ್ಯಾಷ್‌ ವಾಸ್ತವಿಕ ಬೀಜಗಣಿತೀಯ ರೇಖಾಗಣಿತ ಕ್ಷೇತ್ರದಲ್ಲಿ ಅದ್ವಿತೀಯ ಅಸಾಧಾರಣ ಸಾಧನೆ ಮಾಡಿದರು:ಶುದ್ಧ ಗಣಿತಶಾಸ್ತ್ರದಲ್ಲಿ ಆತನ ಅತ್ಯಂತ ಪ್ರಸಿದ್ಧ ಸಾಧನೆಯೆಂದರೆ ನ್ಯಾಶ್‌/ನ್ಯಾಷ್‌ ಸುತ್ತುವರಿಕೆಯ/ಎಂಬೆಡ್ಡಿಂಗ್‌ ಪ್ರಮೇಯ, ಇದು ಯಾವುದೇ ಅಮೂರ್ತ ರಿಯೆಮಾನ್ನಿಯನ್‌ ಸಂಕೀರ್ಣತೆಯನ್ನು ಸಮಮಾಪಕತೆಯಿಂದ ಯೂಕ್ಲಿಡಿಯನ್‌ ಅವಕಾಶದ ಉಪಸಂಕೀರ್ಣತೆಯೆಂದು ಸಾಧಿಸಬಹುದು ಎಂಬುದನ್ನು ತೋರಿಸುತ್ತದೆ. ಅವರು ರೇಖೀಯವಲ್ಲದ ಲಾಕ್ಷಣಿಕ ಅಪೂರ್ಣ/ಖಂಡ ವಿಕಲನ ಸಮೀಕರಣಗಳ ಸಿದ್ಧಾಂತ, ಹಾಗೂ ಏಕತ್ವ ಸಿದ್ಧಾಂತಗಳ ಪ್ರತಿಪಾದನೆಗಳಿಗೆ ತನ್ನ ಕೊಡುಗೆಯನ್ನು ನೀಡಿದ್ದಾರೆ.


ವೈಯಕ್ತಿಕ ಜೀವನ[ಬದಲಾಯಿಸಿ]

ನಾಸರ್‌ರು ಬರೆದ ಜೀವನಚರಿತ್ರೆಯ ಪ್ರಕಾರ 1951ರ ನಂತರ, ಎಲೇನಾರ್‌ ಸ್ಟೀರ್‌‌ ಎಂಬ ದಾದಿಯೊಂದಿಗೆ ಆತ ಪ್ರೇಮ ಪ್ರಕರಣ ಹೊಂದಿದ್ದರು. ಅವರಿಗೆ ಜಾನ್‌ ಡೇವಿಡ್‌ ಸ್ಟೀರ್‌‌ ಎಂಬ ಮಗ ಜನಿಸಿದ. ನ್ಯಾಶ್‌/ನ್ಯಾಷ್‌ ಆಕೆಯನ್ನು ಮದುವೆಯಾಗುವ ಉದ್ದೇಶವನ್ನು ಹೊಂದಿದ್ದರೂ, ನಂತರ ಅದರ ವಿರುದ್ಧವಾಗಿ ಅವರನ್ನು ತೊರೆದರು.


1955ರಲ್ಲಿ, ನ್ಯಾಶ್‌/ನ್ಯಾಷ್‌ ಗಣಿತಶಾಸ್ತ್ರ ಬೋಧಕವರ್ಗದಲ್ಲಿ C. L. E. ಮೂರ್‌ ಬೋಧಕರಾಗಿ ಸೇವೆ ಸಲ್ಲಿಸಲು ಮೆಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಗೆ ಹೋದರು. ಅಲ್ಲಿ, ಅವರು ಭೌತಶಾಸ್ತ್ರ ವಿದ್ಯಾರ್ಥಿನಿ ಎಲ್‌ ಸಾಲ್ವಡಾರ್‌‌ಅಲೀಷಿಯಾ ಲೋಪೆಜ್‌-ಹ್ಯಾರಿಸನ್‌ ಡೆ ಲಾರ್ಡೆರನ್ನು (ಜನನ ಜನವರಿ 1, 1933) ಭೇಟಿ ಮಾಡಿದರು, ನಂತರ ಫೆಬ್ರವರಿ 1957ರಲ್ಲಿ ಆಕೆಯನ್ನು ಮದುವೆಯಾದರು. ಆಕೆ ನ್ಯಾಶ್‌/ನ್ಯಾಷ್‌ರನ್ನು 1959ರಲ್ಲಿ ಛಿದ್ರಮನಸ್ಕತೆಯ ಚಿಕಿತ್ಸೆಗೆಂದು ಮಾನಸಿಕ ಚಿಕಿತ್ಸಾಲಯಕ್ಕೆ ದಾಖಲಿಸಿದರು; ಅವರ ಮಗ, ಜಾನ್‌ ಚಾರ್ಲ್ಸ್‌ ಮಾರ್ಟಿನ್‌ ನ್ಯಾಶ್‌/ನ್ಯಾಷ್‌, ಅದಾದ ಕೆಲವೇ ಕಾಲದಲ್ಲಿ ಹುಟ್ಟಿದರೂ, ಹೆಸರಿಡಲು ಗಂಡನ ಅಭಿಪ್ರಾಯ ಕೇಳಬೇಕೆಂದು ಆತನ ತಾಯಿಯ ಭಾವನೆಯಾಗಿದ್ದುದರಿಂದ ಒಂದು ವರ್ಷ ಕಾಲ ಅನಾಮಧೇಯನಾಗಿಯೇ ಉಳಿಯಬೇಕಾಯಿತು.


ನ್ಯಾಶ್‌/ನ್ಯಾಷ್‌ ಮತ್ತು ಲೋಪೆಜ್‌-ಹ್ಯಾರಿಸನ್‌ ಡೆ ಲಾರ್ಡೆ 1963ರಲ್ಲಿ ವಿಚ್ಛೇದನ ಪಡೆದುಕೊಂಡರೂ, 1970ರಲ್ಲಿ ಮತ್ತೆ ಒಂದುಗೂಡಿದರೂ, ಇಬ್ಬರು ಪರಸ್ಪರ ಸಂಬಂಧವಿಲ್ಲದ ಸಹವಾಸಿಗಳನ್ನು ಹೋಲುವ ರೀತಿಯಲ್ಲಿದ್ದರು. ಸಿಲ್ವಿಯಾ ನಾಸರ್‌‌ರ 1998ರ ನ್ಯಾಶ್‌/ನ್ಯಾಷ್‌ರ ಜೀವನಚರಿತ್ರೆ, ಎ ಬ್ಯೂಟಿಫುಲ್‌ ಮೈಂಡ್‌ ಯ ಪ್ರಕಾರ ಡೆ ಲಾರ್ಡೆ ಆತನನ್ನು ಆಕೆಯ "ಆಶ್ರಯದಾತ" ಎಂದು ಉಲ್ಲೇಖಿಸಿ "ಒಂದೇ ಮನೆಯಲ್ಲಿ ವಾಸಿಸುವ ಇಬ್ಬರು ದೂರದ ಸಂಬಂಧಿಗಳಂತೆ," ಜೀವನ ನಡೆಸಿದೆವು ಎಂದಿದ್ದರು. 1994ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್‌ ಪ್ರಶಸ್ತಿಯನ್ನು ನ್ಯಾಶ್‌/ನ್ಯಾಷ್‌ ಪಡೆದುಕೊಂಡ ನಂತರ ಈ ಜೋಡಿಯು ತಮ್ಮ ಸಂಬಂಧವನ್ನು ಮುಂದುವರೆಸಿದರು. ಜೂನ್‌ 1, 2001ರಂದು ಅವರು ಮರುಮದುವೆಯಾದರು.


ಛಿದ್ರಮನಸ್ಕತೆ[ಬದಲಾಯಿಸಿ]

ನ್ಯಾಶ್‌/ನ್ಯಾಷ್‌ರು ವಿಪರೀತ ಮತಿವಿಕಲ್ಪದ ಲಕ್ಷಣಗಳನ್ನು ತೋರಲು ಆರಂಭಿಸಿದರು ಹಾಗೂ ತನ್ನನ್ನು ಅಪಾಯಕ್ಕೀಡು ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ಆತ ಮಾತನಾಡಲು ತೊಡಗಿದಾಗ ಆತನ ಪತ್ನಿ ಆತನ ನಡವಳಿಕೆಯನ್ನು ಅತಿರೇಕವೆಂದು ಭಾವಿಸಿದ್ದಾಗಿ ಇದನ್ನು ನಂತರ ವಿವರಿಸಿದರು. ನ್ಯಾಶ್‌/ನ್ಯಾಷ್‌ "ಕೆಂಪು ಕಂಠಬಂಧಗಳನ್ನು" ಧರಿಸಿದ ಪುರುಷರನ್ನು ಹೊಂದಿರುವ ಸಂಸ್ಥೆಯೊಂದು ತನ್ನನ್ನು ಅಟ್ಟಿಸಿಕೊಂಡು ಬರುತ್ತಿದೆ ಎಂದು ಭಾವಿಸಿದ್ದರು. ಆ ಸಂಸ್ಥೆಯವರು ಸರಕಾರವೊಂದನ್ನು ರಚಿಸಲಿದ್ದಾರೆಂದು ನ್ಯಾಶ್‌/ನ್ಯಾಷ್‌ ವಾಷಿಂಗ್ಟನ್‌, D.C.ಯಲ್ಲಿರುವ ದೂತಾವಾಸ ಕಛೇರಿಗಳಿಗೆ ಪತ್ರ ಬರೆದಿದ್ದರು.[೭][೮]


ಏಪ್ರಿಲ್‌–ಮೇ 1959ರಲ್ಲಿ, ಅವರನ್ನು ಮೆಕ್‌ಲೀನ್‌ ಆಸ್ಪತ್ರೆಗೆ, ಅನೈಚ್ಛಿಕವಾಗಿ ದಾಖಲು ಮಾಡಲಾಯಿತು, ಅಲ್ಲಿ ಆತನಿಗೆ ಬುದ್ಧಭ್ರಮಿಕ ಛಿದ್ರಮನಸ್ಕತೆ ಹಾಗೂ ಸೌಮ್ಯವಾದ ಕಾಯಿಲೆಯಿಂದುಂಟಾಗುವ ಖಿನ್ನತೆಯ ಸಮಸ್ಯೆಯಿದೆಯೆಂದು ರೋಗನಿದಾನ ಮಾಡಲಾಯಿತು.[೩] ತನ್ನ ಬಿಡುಗಡೆಯಾದ ನಂತರ, ನ್ಯಾಶ್‌/ನ್ಯಾಷ್‌ MITಗೆ ರಾಜಿನಾಮೆ ನೀಡಿ, ತನ್ನ ಪಿಂಚಣಿಯನ್ನು ಪಡೆದುಕೊಂಡು, ಫ್ರಾನ್ಸ್‌ ಮತ್ತು ಪೂರ್ವ ಜರ್ಮನಿಗಳಲ್ಲಿ ರಾಜಕೀಯ ಆಶ್ರಯವನ್ನು ಪಡೆಯಲು ಅಯಶಸ್ವಿ ಪ್ರಯತ್ನದಲ್ಲಿ ಯೂರೋಪ್‌ಗೆ ತೆರಳಿದರು. ಆತ ತನ್ನ U.S. ಪೌರತ್ವವನ್ನು ತ್ಯಜಿಸಲು ಪ್ರಯತ್ನಿಸಿದರು. ಪ್ಯಾರಿಸ್‌ ಮತ್ತು ಜಿನೀವಾಗಳಲ್ಲಿ ಉಳಿದುಕೊಂಡಿದ್ದು ಸಮಸ್ಯಾತ್ಮಕವಾದ ಕಾರಣ, ಅವರನ್ನು ಫ್ರೆಂಚ್‌ ಆರಕ್ಷಕರು ಬಂಧಿಸಿ U.S. ಸರ್ಕಾರದ ಕೋರಿಕೆಯ ಮೇರೆಗೆ ಯುನೈಟೆಡ್‌ ಸ್ಟೇಟ್ಸ್‌ಗೆ ಮರಳಿ ಗಡಿಪಾರು ಮಾಡಿದರು.


1961ರಲ್ಲಿ, ನ್ಯಾಶ್‌/ನ್ಯಾಷ್‌ರನ್ನು ಟ್ರೆಂಟನ್‌ನಲ್ಲಿನ ನ್ಯೂಜೆರ್ಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಮುಂದಿನ ಒಂಬತ್ತು ವರ್ಷಗಳ ಕಾಲ ಮನೋವೈದ್ಯ ಚಿಕಿತ್ಸಾಲಯಗಳ ಒಳ ಹೊರಗೆ ಓಡಾಡುತ್ತಿದ್ದರು, ಬುದ್ಧಿವಿಕಲ್ಪವಿರೋಧಿ ಚಿಕಿತ್ಸೆಯನ್ನು, ಪಡೆಯುವುದರೊಂದಿಗೆ ಇನ್‌ಸುಲಿನ್‌ ಆಘಾತ ಚಿಕಿತ್ಸೆಯನ್ನು ಆತನಿಗೆ ನೀಡಲಾಗಿತ್ತು.[೩][೯][೧೦]


ಆತ ನೀಡಲಾದ ಔಷಧಿಗಳನ್ನು ತೆಗೆದುಕೊಂಡರೂ, ನಂತರ ನ್ಯಾಶ್‌/ನ್ಯಾಷ್‌ ಅದನ್ನು ಕೇವಲ ಒತ್ತಡದಿಂದಾಗಿ ತೆಗೆದುಕೊಳ್ಳಬೇಕಾಯಿತೆಂದು ಬರೆದಿದ್ದರು. 1970ರ ನಂತರ ಮತ್ತೆ ಆತನನ್ನು ಯಾವುದೇ ಆಸ್ಪತ್ರೆಗೆ ದಾಖಲಿಸಲಿಲ್ಲ ಹಾಗೂ ಆತ ಯಾವುದೇ ಚಿಕಿತ್ಸೆ ಪಡೆಯಲು ನಿರಾಕರಿಸಿದರು. ನ್ಯಾಶ್‌/ನ್ಯಾಷ್‌ರ ಪ್ರಕಾರ‌, ಎ ಬ್ಯೂಟಿಫುಲ್‌ ಮೈಂಡ್‌ ಚಿತ್ರದಲ್ಲಿ ತಪ್ಪಾಗಿ ಈ ಅವಧಿಯಲ್ಲಿ ಹೊಸದಾದ ಅಸಾಧಾರಣ ಬುದ್ಧಿವಿಕಲ್ಪವಿರೋಧಿ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವಂತೆ ತೋರಿಸಲಾಗಿದೆ. ಆತ ಇದರ ಚಿತ್ರಣಕ್ಕಾಗಿ, ಈ ಸಮಸ್ಯೆಯನ್ನು ಹೊಂದಿರುವ ಜನರು ತಮಗೆ ನೀಡುವ ಚಿಕಿತ್ಸೆಯನ್ನು ನಿರಾಕರಿಸಿಯಾರೆಂದು ಆತಂಕಿತಗೊಂಡು ಹೀಗೆ ಚಿತ್ರಿಸಿದ ಚಿತ್ರಕಥೆಗಾರರನ್ನು(ಆತನ ತಾಯಿ, ಅವರೇ ದಾಖಲಿಸಿದ ಪ್ರಕಾರ, ಓರ್ವ ಮನಚಿಕಿತ್ಸಾತಜ್ಞೆ) ಹೊಣೆಗಾರರೆಂದು ಸೂಚಿಸಿದರು.[೧೧] ಆದಾಗ್ಯೂ, ಉಳಿದವರು ಈ ಕಪೋಲ ಕಲ್ಪನೆಯು ನ್ಯಾಶ್‌/ನ್ಯಾಷ್‌ರಂತೆ ಸಮಸ್ಯೆಯಿಂದ ಬಳಲುತ್ತಿರುವವರು ಆತರಹದ ಯಾವುದೇ ಔಷಧಿಯಿಂದ,[೧೨] ವಾಸ್ತವವಾಗಿ ಗುಣಕಂಡದ್ದಿದೆಯೇ ಎಂಬ ಪ್ರಮುಖ ಪ್ರಶ್ನೆಯನ್ನು ಮರೆಮಾಚುತ್ತಿದೆ ಎಂದು ಪ್ರಶ್ನಿಸಿದಾಗ ನ್ಯಾಶ್‌/ನ್ಯಾಷ್‌ರು ಅದರ ಅಂಕಿಅಂಶಗಳನ್ನೆಲ್ಲಾ ಉತ್ಪ್ರೇಕ್ಷಿತವಾಗಿ ವರದಿ ಮಾಡಲಾಗಿದೆ ಹಾಗೂ ಓರ್ವ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನೆಂದು ಪರಿಗಣಿತವಾದ ನಂತರ ಆ ಔಷಧಿಯಿಂದಾಗುವ ವ್ಯತಿರಿಕ್ತ ಪರಿಣಾಮಗಳಿಗೆ ಅಗತ್ಯ ಗಮನ ಕೊಟ್ಟಿಲ್ಲ ಎಂದಿದ್ದರು.[೧೩][೧೪][೧೫] ನಾಸರ್‌ರ ಪ್ರಕಾರ, ಸಮಯ ಕಳೆದಂತೆ ನ್ಯಾಶ್‌/ನ್ಯಾಷ್‌ ನಿಧಾನವಾಗಿ ಚೇತರಿಸಿಕೊಂಡರು. ಆಗಿನ ತನ್ನ ಮಾಜಿ ಪತ್ನಿ ಡೆ ಲಾರ್ಡೆಯಿಂದ ಪ್ರೇರಿತರಾದ, ನ್ಯಾಶ್‌/ನ್ಯಾಷ್‌ ತನ್ನ ವಿಲಕ್ಷಣತೆಯನ್ನು ಒಪ್ಪಿಕೊಳ್ಳಬಲ್ಲ ಸಮುದಾಯ ಸ್ವಾಮ್ಯ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಿದರು. ನ್ಯಾಶ್‌/ನ್ಯಾಷ್‌ರಿಗೆ ಡೆ ಲಾರ್ಡ್‌ ಹೇಳಿದ್ದು ಹೀಗೆ, "ಇದು ಕೇವಲ ಪ್ರಶಾಂತ ಜೀವನವನ್ನು ನಡೆಸುವುದಷ್ಟೇ".[೧೬]


ನ್ಯಾಶ್‌/ನ್ಯಾಷ್‌ ಆತನ ಪತ್ನಿ ಗರ್ಭವತಿಯಾಗಿದ್ದ ಸಮಯವಾದ 1959ರ ಸಾಲಿನ ಮೊದಲಿನ ಕೆಲ ತಿಂಗಳುಗಳಲ್ಲಿ ತಾನು "ಮಾನಸಿಕ ಕ್ಷೋಭೆಗಳೆಂದು" ಕರೆಯುವ ಸಮಸ್ಯೆಯ ಆರಂಭವಾಯಿತು ಎಂದು ಹೇಳುತ್ತಾರೆ. ತನ್ನನ್ನು ತಾನು ಓರ್ವ ಹರಿಕಾರ ಅಥವಾ ಯಾವುದೋ ರೀತಿಯ ವಿಶೇಷ ಶಕ್ತಿಯುಳ್ಳವನೆಂದು ಹಾಗೂ ತನಗೆ ಬೆಂಬಲಿಗರು ಹಾಗೂ ವಿರೋಧಿಗಳಿದ್ದಾರೆಂದು, ಷಡ್ಯಂತ್ರಕಾರರಿದ್ದಾರೆಂದು, ಹಾಗೂ ಕಿರುಕುಳಕ್ಕೊಳಗಾದ ಭಾವನೆಯನ್ನು ಹೊಂದಿರುವ ಹಾಗೂ ದೈವಿಕ ಜ್ಞಾನವನ್ನು ಹೊಂದಿರುವುದನ್ನು ತೋರಿಸುವ ಚಿಹ್ನೆಗಳನ್ನು ತೋರಿಸಲು ಪ್ರಯತ್ನಿಸುವುದೂ ಸೇರಿದಂತೆ ಇವೆಲ್ಲಾ ಸಮಸ್ಯೆಗಳನ್ನು "ವೈಜ್ಞಾನಿಕ ತರ್ಕಬದ್ಧ ಚಿಂತನೆಯ ಶೈಲಿಯ ಬದಲಿಗೆ ಭ್ರಾಂತಿಗೊಳಗಾಗಿ ಚಿಂತಿಸುವ ನಡವಳಿಕೆಯನ್ನು ಹೊಂದುವ ಮನೋವೈದ್ಯಶಾಸ್ತ್ರ ರೀತ್ಯಾ 'ಛಿದ್ರಮನಸ್ಕತೆ' ಅಥವಾ 'ಮತಿವಿಕಲ್ಪ ಛಿದ್ರಮನಸ್ಕತೆ'"[೧೭] ಹೊಂದಿದವರೆಂದು ಗುರುತಿಸಲ್ಪಡುವ ವ್ಯಕ್ತಿಗಳ ನಡವಳಿಕೆಯನ್ನು ಅವರು ವಿಷದೀಕರಿಸಿದ್ದಾರೆ.[೧೮] ನ್ಯಾಶ್‌/ನ್ಯಾಷ್‌ರು ತಮ್ಮ ಭ್ರಾಂತಿಯ ಯೋಚನೆಗಳಿಗೆ ತನ್ನ ಪ್ರಾಮುಖ್ಯತೆ ಹಾಗೂ ಮನ್ನಣೆಯನ್ನು ಹೊಂದಲಾಗದಿರುವ ತನ್ನಲ್ಲಿದ್ದ ಅತೃಪ್ತಿಯೇ ಕಾರಣ, ಎಂದು ಸೂಚಿಸಿದ್ದಾರಲ್ಲದೇ, "ನಾನು ಸಾಧಾರಣ ಯೋಚನಾಶೈಲಿಯನ್ನು ಹೊಂದಿದ್ದರೆ ಉತ್ತಮ ವೈಜ್ಞಾನಿಕ ಕಲ್ಪನೆಗಳು ನನಗೆ ಹೊಳೆಯುತ್ತಿರಲಿಲ್ಲ" ಎಂದು ತನ್ನ ಯೋಚನಾಶೈಲಿಯನ್ನು ಸಮರ್ಥಿಸಿಕೊಂಡಿದ್ದಾರೆ. "ನಾನು ಸಂಪೂರ್ಣವಾಗಿ ಒತ್ತಡರಹಿತವಾಗಿ ಇದ್ದಿದ್ದರೆ ನಾನು ಈ ಮಾದರಿಯ ಸಾಧನೆ ಮಾಡುತ್ತಿದ್ದೆ ಎಂದು ನನಗನಿಸುತ್ತಿಲ್ಲ" ಎಂದು ಆತ ಹೇಳಿದ್ದರು.[೧೯] ಛಿದ್ರಮನಸ್ಕತೆ ಮತ್ತು ದ್ವಿವ್ಯಕ್ತಿತ್ವ ವ್ಯಾಧಿಗಳ ನಡುವೆ ನಿರಪೇಕ್ಷ ಪ್ರತ್ಯೇಕತೆಗಳಿದೆಯೆಂದು ಅವರು ಭಾವಿಸಿರಲಿಲ್ಲ.[೨೦] ನ್ಯಾಶ್‌/ನ್ಯಾಷ್‌ ನಂತರ ಆ ಕೇಳುವಿಕೆಯನ್ನು ತಿರಸ್ಕರಿಸುವ ಪ್ರಕ್ರಿಯೆಯಲ್ಲಿ ತೊಡಗುವ ಮುನ್ನ 1964ರ ಆಸುಪಾಸಿನವರೆಗೂ ತನಗೆ ಯಾವುದೇ ಧ್ವನಿಗಳು ಕೇಳಬರುತ್ತಿರಲಿಲ್ಲವಾಗಿ ಹೇಳಿದ್ದರು.[೨೧] ನ್ಯಾಶ್‌/ನ್ಯಾಷ್‌ ತನ್ನನ್ನು ಯಾವಾಗಲೂ ತನ್ನಿಚ್ಛೆಗೆ ವಿರೋಧವಾಗಿ ಚಿಕಿತ್ಸಾಲಯಕ್ಕೆ ಕರೆದೊಯ್ಯಲಾಗುತ್ತಿತ್ತು ಎಂದು ಹೇಳುತ್ತಾರೆ ಹಾಗೂ ಚಿಕಿತ್ಸಾಲಯದಲ್ಲಿ ತೋರಿಕೆಗೆ ಮಾತ್ರವೇ ಸರಿಹೋದ ಹಾಗೆ ಅಥವಾ "ಹೇರಿದ ಚಿಂತನಾಶೈಲಿಯನ್ನು" ಅಳವಡಿಸಿಕೊಳ್ಳುವಷ್ಟು ಸಮಯ ಕಳೆದ ನಂತರ ಕೇವಲ ತಾತ್ಕಾಲಿಕವಾಗಿ ತನ್ನ "ಕನಸಿನ-ಮಾದರಿಯ ಭ್ರಮೆಯ ಆಧಾರಕಲ್ಪನೆ"ಯನ್ನು ತ್ಯಜಿಸುತ್ತಿದ್ದರು. ಕೆಲ ಸಮಯ ಕಳೆದ ನಂತರವಷ್ಟೆ ತನ್ನಂತಾನೇ "ಭ್ರಮೆಯ ಕಾರಣದಿಂದಾಗಿ ಉಂಟಾದ" "ರಾಜಕೀಯ-ಅಭಿಮುಖತೆಯ" ಯೋಚನೆಗಳನ್ನು ಪ್ರಯೋಜನವಿಲ್ಲದ ಯತ್ನಗಳೆಂದು ಭಾವಿಸಿ "ಬುದ್ಧಿಪೂರ್ವಕವಾಗಿ ತಿರಸ್ಕಾರ" ಮಾಡಲು ತೊಡಗಿದರು. ಆದಾಗ್ಯೂ, 1995ರ ಹೊತ್ತಿಗೆ, ಅವರು ಈಗಾಗಲೇ ವಿಜ್ಞಾನಿಗಳು ಯೋಚಿಸುವ ಶೈಲಿಯಲ್ಲಿ ತಾನು ಆಲೋಚಿಸಲು ಮತ್ತೆ ಆರಂಭಿಸಿದ್ದರೂ, ಆತ ಹೆಚ್ಚು ನಿಯಂತ್ರಣಕ್ಕೊಳಪಟ್ಟಂತೆ ಭಾವಿಸಿದ್ದರು.[೧೭][೨೨]''


ಮನ್ನಣೆ ಹಾಗೂ ನಂತರದ ವೃತ್ತಿಜೀವನ[ಬದಲಾಯಿಸಿ]

ಪ್ರಿನ್ಸ್‌ಟನ್‌ ಆವರಣದ ಆಖ್ಯಾಯಿಕೆಗಳಲ್ಲಿ, ಮಧ್ಯರಾತ್ರಿಯಲ್ಲಿ ಕಪ್ಪುಹಲಗೆಯ ಮೇಲೆ ರಹಸ್ಯ ಸಮೀಕರಣಗಳನ್ನು ಗೀಚುವ ನೆರಳಿನ ಆಕೃತಿಯಾಗಿ ನ್ಯಾಶ್‌/ನ್ಯಾಷ್‌ "ಫೈನ್‌ ಹಾಲ್‌ನ ಫ್ಯಾಂಟಮ್‌" (ಪ್ರಿನ್ಸ್‌ಟನ್‌'ನ ಗಣಿತಶಾಸ್ತ್ರ ಕೇಂದ್ರ) ಎಂದೆನಿಸಿಕೊಂಡಿದ್ದರು. ಈ ಆಖ್ಯಾಯಿಕೆಯು ಪ್ರಿನ್ಸ್‌ಟನ್‌ ಜೀವನದ ಮೇಲೆ ಆಧಾರಿತವಾದ ಕಾದಂಬರಿ, ರೆಬೆಕ್ಕಾ ಗೋಲ್ಡ್‌ಸ್ಟೀನ್‌ ವಿರಚಿತ ದ ಮೈಂಡ್‌-ಬಾಡಿ ಪ್ರಾಬ್ಲಂ ದಲ್ಲಿ ಪ್ರಸ್ತಾಪಗೊಂಡಿದೆ.

1978ರಲ್ಲಿ, ನ್ಯಾಶ್‌/ನ್ಯಾಷ್‌ ಆತನ ಅಸಹಕಾರಿ ಸಮಭಾರತ್ವ/ಸಮತೂಕತ್ವಗಳ ಬಗೆಗಿನ ಈಗ ನ್ಯಾಶ್‌/ನ್ಯಾಷ್‌ ಸಮಭಾರತ್ವ/ಸಮತೂಕತ್ವ ಎಂದು ಹೆಸರಾಗಿರುವ ಸಂಶೋಧನೆಗೆ ಜಾನ್‌ ವಾನ್‌ ನ್ಯೂಮನ್ನ್‌ ಸಿದ್ಧಾಂತ ಪ್ರಶಸ್ತಿಯನ್ನು ನೀಡಲಾಯಿತು. ಲಿಯೊರಿ P. ಸ್ಟೀಲೆ ಪ್ರಶಸ್ತಿಯನ್ನು 1999ರಲ್ಲಿ ಅವರು ಪಡೆದರು.


1994ರಲ್ಲಿ, ಪ್ರಿನ್ಸ್‌ಟನ್‌ ಸ್ನಾತಕ ವಿದ್ಯಾರ್ಥಿಯಾಗಿ ನಡೆಸಿದ ಆತನ ಕ್ರೀಡಾ ಸಿದ್ಧಾಂತ ಅಧ್ಯಯನಕ್ಕಾಗಿ ಆರ್ಥಿಕ ವಿಜ್ಞಾನದ ನೊಬೆಲ್‌ ಸ್ಮಾರಕ ಪ್ರಶಸ್ತಿಯನ್ನು (ಇತರ ಇಬ್ಬರೊಂದಿಗೆ) ಪಡೆದರು. 1980ರ ದಶಕದ ಕೊನೆಗೆ, ನ್ಯಾಶ್‌/ನ್ಯಾಷ್‌ರನ್ನು ಶ್ರೀಯುತ ಜಾನ್‌ ನ್ಯಾಶ್‌/ನ್ಯಾಷ್‌ ಎಂದು ಹಾಗೂ ಆತನ ಹೊಸ ಸಾಧನೆಗೆ ಮಹತ್ವವಿದೆಯೆಂದು ಆಗ ಗುರುತಿಸುತ್ತಿದ್ದ ಕಾರ್ಯತತ್ಪರರಾಗಿದ್ದ ಇತರ ಗಣಿತಜ್ಞರೊಂದಿಗೆ ಸಂಪರ್ಕವಿಟ್ಟುಕೊಳ್ಳಲು ಅವರು ನಿಧಾನವಾಗಿ ಮಿಂಚಂಚೆಯನ್ನು ಬಳಸಲು ಆರಂಭಿಸಿದ್ದರು. ಇವರುಗಳೇ ನಂತರ ಸ್ವೀಡನ್‌ ಬ್ಯಾಂಕ್‌ನ ನೊಬೆಲ್‌ ಪ್ರಶಸ್ತಿ ಸಮಿತಿಯನ್ನು ಸಂಪರ್ಕಿಸಿ ನ್ಯಾಶ್‌/ನ್ಯಾಷ್‌'ರ ಉತ್ತಮ ಮಾನಸಿಕ ಆರೋಗ್ಯವನ್ನು ಹಾಗೂ ಆತನ ಹಿಂದಿನ ಸಾಧನೆಗಳ ಮನ್ನಣೆಯಾಗಿ ಪ್ರಶಸ್ತಿ ಸ್ವೀಕರಿಸುವ ಸಾಮರ್ಥ್ಯವನ್ನು ದೃಢಪಡಿಸಿದ ಗುಂಪಿನ ಕೇಂದ್ರಬಿಂದುವಾಗಿದ್ದರು.[ಸೂಕ್ತ ಉಲ್ಲೇಖನ ಬೇಕು]


ನ್ಯಾಶ್‌/ನ್ಯಾಷ್‌'ರ ಇತ್ತೀಚಿನ ಭಾಗಶಃ ಕರ್ತೃತ್ವವೂ ಸೇರಿದಂತೆ ಸುಧಾರಿತ ಕ್ರೀಡಾ ಸಿದ್ಧಾಂತಗಳ ಹೊಸ ಸಾಧನೆಗಳು, ಆತನ ವೃತ್ತಿ ಜೀವನದ ಹೊಸ್ತಿಲಲ್ಲಿ ತನ್ನದೇ ಆದ ಪ್ರತ್ಯೇಕ ಪಥವನ್ನು ಹಾಗೂ ಸಮಸ್ಯೆ ಪರಿಹಾರ ಪಥವನ್ನು ಹೊಂದಲು ಆತ ಬಯಸಿದ್ದರು ಎಂಬುದನ್ನು ತೋರಿಸುತ್ತವೆ. 1945ರಿಂದ 1996ರ ನಡುವೆ, ಅವರು 23 ವೈಜ್ಞಾನಿಕ ಅಧ್ಯಯನಗಳನ್ನು ಪ್ರಕಟಿಸಿದರು.


ನ್ಯಾಶ್‌/ನ್ಯಾಷ್‌ರು ಮಾನಸಿಕ ಅಸ್ವಸ್ಥತೆಯ ಬಗ್ಗೆ ಆಧಾರಕಲ್ಪನೆಯನ್ನು ಸೂಚಿಸಿದ್ದರು. ಒಪ್ಪಬಲ್ಲಂತಹಾ ಮಾದರಿಯಲ್ಲಿ ಚಿಂತಿಸದಿರುವುದು ಅಥವಾ "ಮತಿವಿಕಲನಾಗಿರುವುದು" ಮತ್ತು ಸಾಮಾನ್ಯ ಸಾಮಾಜಿಕ ಜೀವನದಲ್ಲಿ ಹೊಂದಿಕೆಯಾಗದಿರುವುದನ್ನು ಆರ್ಥಿಕ ದೃಷ್ಟಿಕೋನದಿಂದ "ನಿರಶನದಲ್ಲಿರುವುದಕ್ಕೆ" ಅವರು ಹೋಲಿಸುತ್ತಾರೆ. ಅವರು ಮಾನವರ ಬಹುರೂಪತೆಗಳ ಮೌಲ್ಯದ ಬಗ್ಗೆ ಹಾಗೂ ಸುವ್ಯಕ್ತವಾದ ಮಾನಕವಲ್ಲದ ನಡವಳಿಕೆ ಹಾಗೂ ಪಾತ್ರಗಳ ಬಗ್ಗೆ ಸುಧಾರಿತ ವಿಕಸನಾತ್ಮಕ ಮನಶ್ಶಾಸ್ತ್ರದ ನಿಲುವುಗಳನ್ನು ಹೊಂದಿದ್ದರು.[೨೩]


ನ್ಯಾಶ್‌/ನ್ಯಾಷ್‌ ಸಮಾಜದಲ್ಲಿ ಹಣ ವಹಿಸುವ ಪಾತ್ರದ ಬಗ್ಗೆ ಅಧ್ಯಯನ ವರದಿಯನ್ನು ಸಿದ್ಧಪಡಿಸಿದ್ದಾರೆ. ಜನರು ಹಣದಿಂದಾಗಿ ಬಹಳ ಮಟ್ಟಿಗೆ ನಿಯಂತ್ರಿತರಾಗಿರುತ್ತಾರೆ ಹಾಗೂ ಅವರಿಗೆ ತರ್ಕಬದ್ಧವಾಗಿ ಆಲೋಚಿಸಲು ಅಸಾಧ್ಯವಾಗುವ ಮಟ್ಟಿಗೆ ಪ್ರೇರಿತರಾಗಿರುತ್ತಾರೆ, ಅವರು ಅಂತಿಮವಾಗಿ ಆರ್ಥಿಕ ವ್ಯವಸ್ಥೆಯನ್ನು ಹೀನಗತಿಗಳಿಸುವ ಅಲ್ಪಕಾಲೀನ ಹಣದುಬ್ಬರ ಮತ್ತು ಸಾಲಗಳನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡುವ ಕೀನೆಪ್ರಣೀತ ಆರ್ಥಿಕತೆಯ ಮೇಲೆ ಆಧಾರಿತವಾದ ತೋರಿಕೆಯ-ಸಿದ್ಧಾಂತಗಳನ್ನು ಪ್ರಚಾರಪಡಿಸುತ್ತಿರುವ ಹಿತಾಸಕ್ತಿ ಗುಂಪುಗಳನ್ನು ಅವರು ಟೀಕಿಸಿದ್ದರು. ಹೆಚ್ಚು ಅಸ್ಥಿರವಾದ "ಕೆಟ್ಟ ಹಣದ" ಬದಲಿಗೆ ಜನರ ನಂಬಿಕೆಗೆ ಪಾತ್ರವಾಗುವಂತಹಾ ಹೆಚ್ಚು "ಆದರ್ಶ ಹಣ"ವನ್ನು ಅಭಿವೃದ್ಧಿಗೊಳಿಸಲು ಸಹಾಯಕವಾಗುವಂತಹಾ ಜಾಗತಿಕ "ಔದ್ಯಮಿಕ ಉಪಭೋಗ ಬೆಲೆ ಸೂಚ್ಯಂಕ" ವ್ಯವಸ್ಥೆಯನ್ನು ಅವರು ಸೂಚಿಸಿದ್ದಾರೆ. ಅಧಿಕಾರಸ್ಥರ ಕಾರ್ಯಶೈಲಿಗೆ ವಿರೋಧವಾದ ದೃಷ್ಟಿಕೋನವನ್ನು ಹೊಂದಿರುವುದಕ್ಕೆ ಹಾಗೂ ಹಣಕ್ಕೆ ಕುರಿತಂತೆ ಆರ್ಥಿಕತಜ್ಞ ಹಾಗೂ ರಾಜಕೀಯ ತತ್ವಜ್ಞಾನಿ ಫ್ರೆಡ್‌ರಿಚ್‌ ಹಯೆಕ್‌'ರ ಚಿಂತನೆಗಳನ್ನು ತನ್ನ ಚಿಂತನೆಗಳು ಹೋಲುತ್ತವೆ ಎಂದು ಆತ ಭಾವಿಸಿದ್ದಾರೆ.[೨೪][೨೫]


ಡಾಕ್ಟರ್‌ ಆಫ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ಎಂಬ ಗೌರವ ಪದವಿಯನ್ನು 1999ರಲ್ಲಿ ಕಾರ್ನೆಗೀ ಮೆಲ್ಲನ್‌ ವಿಶ್ವವಿದ್ಯಾಲಯದಿಂದ ನ್ಯಾಶ್‌/ನ್ಯಾಷ್‌ ಪಡೆದರು.


ನೇಪಲ್ಸ್‌ ಫೆಡೆರಿಕೋ II ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಗೌರವ ಪದವಿಯನ್ನು ಮಾರ್ಚ್‌ 19, 2003ರಂದು ನ್ಯಾಶ್‌/ನ್ಯಾಷ್‌ ಪಡೆದರು.[ಸೂಕ್ತ ಉಲ್ಲೇಖನ ಬೇಕು]


ನ್ಯಾಶ್‌/ನ್ಯಾಷ್‌ರು ಅರ್ಥಶಾಸ್ತ್ರದಲ್ಲಿ ಗೌರವ ಡಾಕ್ಟರೇಟ್‌ ಪದವಿಯನ್ನು ಆಂಟ್‌ವರ್ಪ್‌ ವಿಶ್ವವಿದ್ಯಾಲಯದಿಂದ ಏಪ್ರಿಲ್‌ 2007ರಲ್ಲಿ ಪಡೆದರಲ್ಲದೇ ಅಲ್ಲಿ ನಡೆದ ಕ್ರೀಡಾ ಸಿದ್ಧಾಂತದ ಮೇಲಿನ ಸಮ್ಮೇಳನವೊಂದರಲ್ಲಿ ಪ್ರಮುಖ ಭಾಷಣಕಾರರಾಗಿದ್ದರು.


ಚಲನಚಿತ್ರ ವಿವಾದ[ಬದಲಾಯಿಸಿ]

2002ರಲ್ಲಿ, ಚಿತ್ರಕಥೆಗಾರ ಅಕೀವಾ ಗೋಲ್ಡ್ಸ್‌‌ಮನ್‌‌'ರ ಎ ಬ್ಯೂಟಿಫುಲ್‌ ಮೈಂಡ್‌ ಎಂಬ ಸಿಲ್ವಿಯಾ ನಾಸರ್‌‌' ವಿರಚಿತ ನ್ಯಾಶ್‌/ನ್ಯಾಷ್‌'ರ ಜೀವನಚರಿತ್ರೆಯ ಅದೇ ಹೆಸರಿನ ಚಿತ್ರದಲ್ಲಿ ಮೂಡಿಸಿದ ಭಾಗಶಃಕಲ್ಪಿತ ವ್ಯಾಖ್ಯಾನದ ಬಗ್ಗೆ ನಡೆದ "ಕೆಸರೆರಚಾಟ"ದಿಂದಾಗಿ ನ್ಯಾಶ್‌/ನ್ಯಾಷ್‌'ರ ಖಾಸಗಿ ಜೀವನದ ವಿಷಯಗಳು ಅಂತರರಾಷ್ಟ್ರೀಯವಾಗಿ ಗಮನ ಸೆಳೆಯಿತು.[೨೬] ಆಸ್ಕರ್‌ ಪ್ರಶಸ್ತಿಗಳಿಗೆ ನಾಮಾಂಕಿತವಾಗಿದ್ದ ಈ ಚಿತ್ರದಲ್ಲಿ, ಗೋಲ್ಡ್ಸ್‌ಮನ್‌ರನ್ನು "ಚಿತ್ರಕಥೆಗಾರ"ರ ಬದಲಿಗೆ "ಲೇಖಕರೆಂದು" ಉಲ್ಲೇಖಿಸಲಾಗಿದೆ ರೈಟರ್ಸ್‌ ಗಿಲ್ಡ್‌ ಸಂಸ್ಥೆಯ ಪ್ರಕಾರ ಮೂಲಕಥೆಯಿಂದ ಗಮನಾರ್ಹ ವ್ಯತ್ಯಾಸವನ್ನು ಹೊಂದಿರುವುದಕ್ಕೆ ಸೂಚ್ಯ ಅಭಿವ್ಯಕ್ತಿಯಾಗಿರುತ್ತವೆ.[೧][೨೭] ರೈಟರ್ಸ್‌ ಗಿಲ್ಡ್‌ ಸಂಸ್ಥೆಯು ಆತನ ಜನಾಂಗೀಯ ಮನೋಧರ್ಮಗಳು ಮತ್ತು ಯಹೂದಿ‌-ವಿರೋಧಿ ಟಿಪ್ಪಣಿಗಳು ಹಾಗೂ ನ್ಯಾಶ್‌/ನ್ಯಾಷ್‌'ರ "ವಿವಾದಬಾಹಿರ ಕಾಮ ಚಟುವಟಿಕೆಗಳೂ ಸೇರಿದಂತೆ,[೧][೨೮] ಗೋಲ್ಡ್ಸ್‌‌ಮನ್‌ರ "ಲೋಪಗಳು ಎದ್ದುಕಾಣುವಂತಹದ್ದು ಮತ್ತು ಪ್ರತ್ಯೇಕವಾದದ್ದು" ಎಂದಿದೆ."[೨೯] ನ್ಯಾಶ್‌/ನ್ಯಾಷ್‌ರು ನಂತರ ಯಾವುದೇ ಯಹೂದಿ*ವಿರೋಧಿ ಟಿಪ್ಪಣಿಗಳು ತಾನು ಭ್ರಮಾಧೀನವಾಗಿದ್ದಾಗ ಮಾಡಿದ್ದಾಗಿರಬೇಕು ಎಂದು ಹೇಳಿಕೆ ನೀಡಿದ್ದರು.[೨೯]


1950ರ ದಶಕದ ಮಧ್ಯದಲ್ಲಿ ನ್ಯಾಶ್‌/ನ್ಯಾಷ್‌ ಸಾಂಟಾ ಮೋನಿಕಾ ವಿಶ್ರಾಮಕೋಣೆಯಲ್ಲಿ ನೀತಿಬಾಹಿರವಾಗಿ ಸಲಿಂಗಕಾಮ ಚಟುವಟಿಕೆಯಲ್ಲಿ ನಿರತರಾಗಿದ್ದ ಆರೋಪದ ಮೇಲೆ ಬಂಧಿತರಾಗಿದ್ದರಲ್ಲದೇ, "ಇದರ ಪರಿಣಾಮವಾಗಿ RAND ಕಾರ್ಪೋರೇಷನ್‌ನಲ್ಲಿ ತನ್ನ ಕಾವಲುಗಾರನೊಂದಿಗೆ/ಸುರಕ್ಷತಾ ಪರವಾನಗಿಯೊಂದಿಗೆ ತನ್ನ ಹುದ್ದೆಯನ್ನು ಕಳೆದುಕೊಂಡಿದ್ದರು."[೩೦][೩೧] ನಾಸರ್‌ರ ಪ್ರಕಾರ, " ಈ ಆಘಾತದಾಯಕ ವೃತ್ತಿಜೀವನಕ್ಕೆ-ಮಾರಕವಾಗಬಹುದಾದ ಘಟನೆಗಳ ನಂತರ, ಅವರು ಮದುವೆಯಾಗಲು ನಿರ್ಧರಿಸಿದರು."[೩೧]


ನಾಸರ್‌ ಚಿತ್ರನಿರ್ಮಾಪಕರು ನ್ಯಾಶ್‌/ನ್ಯಾಷ್‌'ರ ಕಥೆಗೆ ಹತ್ತಿರವಾದ ಸತ್ಯವನ್ನು ಹೇಳುವಂತ ಆದರೆ ಲಿಖಿತ ಹೇಳಿಕೆಗೆ ದೂರವಾದ ಆಖ್ಯಾನವೊಂದನ್ನು ಸಂಶೋಧಿಸಿದ್ದಾರೆ" ಎಂಬ ಹೇಳಿಕೆ ನೀಡಿದರು.[೩೨] ಇತರರು ಸೂಚಿಸಿದ ಪ್ರಕಾರ ಈ ಮಾಹಿತಿಯನ್ನು ಬಹುಶಃ ದೈನಂದಿನವಾಗಿ ಬುದ್ಧಭ್ರಮಿಕ ಛಿದ್ರಮನಸ್ಕತೆಯೊಂದಿಗೆ ಬಾಳುವ "ದೀರ್ಘಕಾಲೀನ ನಿತ್ರಾಣಗೊಳಿಸುವಿಕೆಯ" ಮೇಲೆ ಹೆಚ್ಚು ಸಂಪೂರ್ಣವಾಗಿ ಗಮನ ಹರಿಸಲು ಅನುಕೂಲವಾಗುವಂತೆ "ನ್ಯಾಶ್‌/ನ್ಯಾಷ್‌ರ ಬಗ್ಗೆ ಹೆಚ್ಚು ಅನುಕಂಪ[೩೩] ಮೂಡಲಿ ಎಂಬ ದೃಷ್ಟಿಯಿಂದ ಚಿತ್ರದಿಂದ ಅನುಕೂಲಕರವಾಗಿ ಹೊರಗಿಡಲಾಯಿತು".[೩೩] ಚಿತ್ರಕ್ಕೆ ವಿರುದ್ಧವಾಗಿ, ನ್ಯಾಶ್‌/ನ್ಯಾಷ್‌ರು ತಾನು ಎಂದಿಗೂ ದೃಶ್ಯ/ದೃಷ್ಟಿ ಭ್ರಮೆಯನ್ನು ಹೊಂದಿರಲೇ ಇಲ್ಲ ಎಂದು ಹೇಳುತ್ತಾರೆ.[೨೨]


ನ್ಯೂಯಾರ್ಕ್‌ ಟೈಮ್ಸ್‌ನ ವಿಮರ್ಶಕ A. O. ಸ್ಕಾಟ್‌ರು ಮತ್ತೊಂದು ದೃಷ್ಟಿಕೋನದಿಂದ ಇದನ್ನು ವಿಶ್ಲೇಷಿಸಿದರು. ಸ್ಕಾಟ್‌ರು ಆಸ್ಕರ್‌ ವಿವಾದದ ಬಗ್ಗೆ, ಲೋಪಗಳ ಬಗ್ಗೆ ಹಾಗೂ ಕಲಾತ್ಮಕ ಆಯ್ಕೆಗಳ ಬಗ್ಗೆ ಹಾಗೂ ಪಾತ್ರ ವಹಿಸುವ ನಟರ ಆಯ್ಕೆಯ ಬಗ್ಗೆ ಬರೆದಿದ್ದರು "ಎ ಬ್ಯೂಟಿಫುಲ್‌ ಮೈಂಡ್‌ ನಲ್ಲಿನ ಶೀತಲಸಮರವು ಮತಿವಿಕಲ್ಪ ಮತ್ತು ಮೆಕ್‌ಕಾರ್ಥಿ-ಯುಗದ ಶೈಕ್ಷಣಿಕ ಜೀವನದ ಅನಿರ್ದಿಷ್ಟತೆಗಳನ್ನು ಪತ್ತೇದಾರಿ-ಚಿತ್ರಗಳಂತೆ ಚರ್ವಿತ ಚರ್ವಣವಾಗಿ ಮಾಡಲಾಗಿದೆ" ಸ್ವಲ್ಪ ನಮ್ಯವಾಗಿ "ರೋಚಕವಾಗಿ ಹಾಗೂ ಪರಿಚಿತವಾಗಿ ಮಾಡಲಾಗಿದೆ" "ಅಮೇರಿಕದ ಇತಿಹಾಸದಲ್ಲೇ ಕಷ್ಟದ ಸಂಕ್ರಮಣ ಕಾಲವಾಗಿದೆ."[೩೪] ಆದ್ದರಿಂದ, ಶೀತಲ ಸಮರದ ನ್ಯಾಶ್‌/ನ್ಯಾಷ್‌ರ ಜೀವನ ಹಾಗೂ ವೃತ್ತಿಜೀವನದ ಮೇಲಿನ ಪ್ರಭಾವಗಳನ್ನು ಚರ್ಚಿಸದೇ ಬಿಡಲಾಗಿದೆ.[೩೪] ಅತ್ಯುತ್ತಮ ಅಳವಡಿಕೆಯಾದ ಚಿತ್ರಕಥೆಗೆಂದು ಅಕಾಡೆಮಿ ಪ್ರಶಸ್ತಿಯನ್ನು ಗೋಲ್ಡ್ಸ್‌ಮನ್‌ ಪಡೆದರು.[೨೯] ಚಿತ್ರವು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ (ರಾನ್‌ ಹೋವರ್ಡ್‌) ಮತ್ತು ಅತ್ಯುತ್ತಮ ಪೋಷಕ ನಟಿ (ಜೆನ್ನಿಫರ್‌ ಕೊನ್ನೆಲ್ಲಿ) ಪ್ರಶಸ್ತಿಗಳನ್ನು ಗೆದ್ದಿತ್ತು.


ಇದನ್ನೂ ಗಮನಿಸಿ[ಬದಲಾಯಿಸಿ]


ಆಕರಗಳು[ಬದಲಾಯಿಸಿ]

 1. ೧.೦ ೧.೧ ೧.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. ೩.೦ ೩.೧ ೩.೨ ನಾಸರ್‌, ಸಿಲ್ವಿಯಾ. ಎ ಬ್ಯೂಟಿಫುಲ್‌ ಮೈಂಡ್‌ , ಪುಟ 32. ಸೈಮನ್‌ & ಷೂಸ್ಟರ್‌, 1998
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. ನಾಸರ್‌, ಸಿಲ್ವಿಯಾ. ಎ ಬ್ಯೂಟಿಫುಲ್‌ ಮೈಂಡ್‌ , ಪುಟ 46-47. ಸೈಮನ್‌ & ಷೂಸ್ಟರ್‌, 1998
 6. M. J. ಓಸ್‌ಬೋರ್ನೆ (2004). ಆನ್‌ ಇಂಟ್ರೊಡಕ್ಷನ್‌ ಟು ಗೇಮ್‌ ಥಿಯರಿ. ಆಕ್ಸ್‌ಫರ್ಡ್‌ : ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮುದ್ರಣ, p. 23.
 7. ನ್ಯಾಶ್‌/ನ್ಯಾಷ್‌ Jr., ಜಾನ್‌ ಫೋರ್ಬ್ಸ್‌ - ದ ಫ್ರೀ ಇನ್‌ಫರ್ಮೇಶನ್‌ ಸೊಸೈಟಿ
 8. NY ಟೈಮ್ಸ್‌: ಜಾನ್‌ ನ್ಯಾಶ್‌/ನ್ಯಾಷ್‌
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. ಜಾನ್‌ ನ್ಯಾಶ್‌/ನ್ಯಾಷ್‌ ಮರಿಕಾ ಗ್ರೇಹ್ಸೆಲ್‌ರಿಂದ ಸಂದರ್ಶನ ಸೆಪ್ಟೆಂಬರ್‌ 1, 2004
 12. ವೈಟೇಕರ್‌, R. (2002) ಮಿದುಳಿನ ಔಷಧಿಗಳು ಚೇತರಿಕೆಗೆ ಹಿನ್ನಡೆಯಾಗಬಲ್ಲವು. ಯುಎಸ್‌ಎ ಟುಡೆ
 13. ಜಾನ್‌ ನ್ಯಾಶ್‌/ನ್ಯಾಷ್‌ PBS ಸಂದರ್ಶನ: ಚಿಕಿತ್ಸೆ
 14. ಜಾನ್‌ ನ್ಯಾಶ್‌/ನ್ಯಾಷ್‌ PBS ಸಂದರ್ಶನ: ಚೇತರಿಕೆಯ ಮಾರ್ಗಗಳು
 15. ಜಾನ್‌ ನ್ಯಾಶ್‌/ನ್ಯಾಷ್‌ PBS ಸಂದರ್ಶನ: ಚೇತರಿಕೆ ಹೇಗೆ ಸಾಧ್ಯವಾಗುತ್ತದೆ?
 16. ನಾಸರ್‌, S. (1994) ದ ಲಾಸ್ಟ್‌ ಇಯರ್ಸ್‌ ಆಫ್‌ ಎ ನೊಬೆಲ್‌ ಲಾರಿಯೇಟ್‌‌ನ್ಯೂಯಾರ್ಕ್‌ ಟೈಮ್ಸ್‌
 17. ೧೭.೦ ೧೭.೧ ಜಾನ್‌ ನ್ಯಾಶ್‌/ನ್ಯಾಷ್‌ (1995) ಆತ್ಮಚರಿತ್ರೆ ಲೆಸ್‌ ಪ್ರಿಕ್ಸ್‌ ನೊಬೆಲ್‌ರಿಂದ. ದ ನೊಬೆಲ್‌ ಪ್ರೈಜಸ್‌ 1994, ಸಂಪಾದಕ ಟೋರ್‌ ಫ್ರಾಂಗ್ಸ್‌ಮಿರ್‌, [ನೊಬೆಲ್‌ ಪ್ರತಿಷ್ಠಾನ], ಸ್ಟಾಕ್‌ಹೋಮ್‌, 1952
 18. ಜಾನ್‌ ನ್ಯಾಶ್‌/ನ್ಯಾಷ್‌ PBS ಸಂದರ್ಶನ: ಭ್ರಮಿತ ಯೋಚನಾಶೈಲಿ
 19. ಜಾನ್‌ ನ್ಯಾಶ್‌/ನ್ಯಾಷ್‌ PBS ಸಂದರ್ಶನ: ದ ಡೌನ್‌ವರ್ಡ್‌ ಸ್ಪೈರಲ್‌
 20. ಜಾನ್‌ ನ್ಯಾಶ್‌/ನ್ಯಾಷ್‌ (2005) ಗ್ಲಿಂಪ್ಸಿಂಗ್‌ ಇನ್‌ಸೈಡ್‌ ಎ ಬ್ಯೂಟಿಫುಲ್‌ ಮೈಂಡ್‌ ಷೇನ್‌ ಹೆಗರ್ಟಿರಿಂರ ಸಂದರ್ಶನ
 21. ಜಾನ್‌ ನ್ಯಾಶ್‌/ನ್ಯಾಷ್‌ PBS ಸಂದರ್ಶನ: ಧ್ವನಿಗಳ ಕೇಳುವಿಕೆ
 22. ೨೨.೦ ೨೨.೧ ಜಾನ್‌ ನ್ಯಾಶ್‌/ನ್ಯಾಷ್‌ PBS ಸಂದರ್ಶನ: ಮಾನಸಿಕ ಅಸ್ವಸ್ಥತೆಯ ಬಗ್ಗೆ ನನ್ನ ಅನುಭವಗಳು
 23. ಡೇವಿಡ್‌ ನ್ಯೂಬಾವರ್‌ ರಚಿತ (2007) ಜಾನ್‌ ನ್ಯಾಶ್‌/ನ್ಯಾಷ್‌ ಅಂಡ್‌ ಎ ಬ್ಯೂಟಿಫುಲ್‌ ಮೈಂಡ್‌ ಆನ್‌ ಸ್ಟ್ರೈಕ್‌ Yahoo ಹೆಲ್ತ್‌
 24. ಜಾನ್‌ ನ್ಯಾಶ್‌/ನ್ಯಾಷ್‌ (2002) ಐಡಿಯಲ್‌ ಮನಿ ಸದರನ್‌ ಇಕನಾಮಿಕ್‌ ಜರ್ನಲ್‌, 69(1), p4-11
 25. ಜ್ಯೂಲಿಯಾ ಝಕರ್‌ಮ್ಯಾನ್‌ (2005) ನೊಬೆಲ್‌ ವಿನ್ನರ್‌ ನ್ಯಾಶ್‌/ನ್ಯಾಷ್‌ ಕ್ರಿಟಿಕ್ಸ್‌ ಇಕನಾಮಿಕ್‌ ಥಿಯರಿ ದ ಬ್ರೌನ್‌ ಡೈಲಿ ಹೆರಾಲ್ಡ್‌
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 29. ೨೯.೦ ೨೯.೧ ೨೯.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. ೩೧.೦ ೩೧.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 33. ೩೩.೦ ೩೩.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. ೩೪.೦ ೩೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.


ಹೊರಗಿನ ಕೊಂಡಿಗಳು[ಬದಲಾಯಿಸಿ]

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಜಾನ್‌ ಫೋರ್ಬ್ಸ್‌ ನ್ಯಾಶ್‌]]
 1. REDIRECT Template:MacTutor


 1. REDIRECT Template:Nobel laureates in economics 1976–2000