ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಜಾಗತಿಕ ತಾಪಮಾನ ಏರಿಕೆಯ ಅಪಾಯಗಳು ಮತ್ತು ಪರಿಣಾಮಗಳ ಬಗ್ಗೆ ನೀಡಲಾದ ಗ್ರಾಫಿಕಲ್ ವಿವರಣೆ. ಈ ವರದಿಗೆ ನಂತರ ಮಾಡಲಾದ ಸುಧಾರಣೆಗಳ ಪ್ರಕಾರ ಅಪಾಯಗಳು ಗಣನೀಯವಾಗಿ ಹೆಚ್ಚಾದವು.ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು ಮತ್ತು ಹವಾಗುಣ ಬದಲಾವಣೆಗಳು ಈ ಲೇಖನದಲ್ಲಿ "ಜಾಗತಿಕ ತಾಪಮಾನ ಏರಿಕೆ" ಮತ್ತು "ಹವಾಗುಣ ಬದಲಾವಣೆ" - ಈ ಎರಡೂ ಪದಗಳನ್ನು ಒಂದರ ಬದಲಾಗಿ ಇನ್ನೊಂದರಂತೆ ಬಳಸಲಾಗಿದೆ. ಪರಿಸರ ಮತ್ತು ಮಾನವ ಜೀವನದ ಬಗ್ಗೆ ಕಳಕಳಿ ಮೂಡಿಸಿವೆ. ಉಪಕರಣ ಮೂಲದ ಉಷ್ಣತಾ ದಾಖಲೆಗಳು, ಏರುತ್ತಿರುವ ಸಮುದ್ರಮಟ್ಟಗಳು, ಹಾಗೂ ಉತ್ತರ ಗೋಳಾರ್ಧದಲ್ಲಿ ಕಡಿಮೆಯಾಗುತ್ತಿರುವ ಹಿಮವೇ ಮುಂತಾದುವುಗಳನ್ನು ಹವಾಗುಣ ಬದಲಾವಣೆಯ ಸಾಕ್ಷಿಗಳನ್ನಾಗಿ ಬಳಸಿಕೊಳ್ಳಲಾಗಿದೆ ಪ್ರಕಾರ, "20ನೇ ಶತಮಾನದ ಮಧ್ಯಭಾಗದಿಂದಲೂ ಗಮನಿಸಲಾಗುತ್ತಿರುವ ಹೆಚ್ಚಿನಜಾಗತಿಕ ಸರಾಸರಿ ತಾಪಮಾನದಲ್ಲಿನ ಏರಿಕೆಗೆ ಇರಬಹುದಾದ ಕಾರಣ ಎಂದರೆ ಮಾನವ ಹಸಿರುಮನೆ ಅನಿಲಗಳ ಸಾಂದ್ರತೆಗಳಲ್ಲಿ ಕಂಡುಬರುತ್ತಿರುವ ಹೆಚ್ಚಳ". ಭವಿಷ್ಯದ ಹವಾಗುಣ ಬದಲಾವಣೆಗಳು ಜಾಗತಿಕ ತಾಪಮಾನ ಏರಿಕೆಯ ಹೆಚ್ಚಳ (ಎಂದರೆ, ಸರಾಸರಿ ಜಾಗತಿಕ ಉಷ್ಣತೆಯ ಪ್ರವೃತ್ತಿಯಲ್ಲಿ ಏರಿಕೆ), ಸಮುದ್ರಮಟ್ಟದಲ್ಲಿ ಏರಿಕೆ, ಹಾಗೂ ಕೆಲವು ಹವಾಮಾನ ವೈಪರೀತ್ಯದ ಘಟನೆಗಳ ಪುನರಾವರ್ತನೆಯಲ್ಲಿ ಆಗಬಹುದಾದ ಏರಿಕೆಗಳನ್ನು ಒಳಗೊಂಡಿರುವುದೆಂದು ಊಹೆ ಮಾಡಲಾಗಿದೆ. ಪರಿಸರವ್ಯವಸ್ಥೆಗಳು ಹವಾಗುಣ ಬದಲಾವಣೆಗಳಿಗೆ ಹೆಚ್ಚು ಭೇದ್ಯವಾಗಿರುವುದನ್ನು ಗಮನಿಸಲಾಗಿದೆ. ಭವಿಷ್ಯದ ಹವಾಗುಣ ಬದಲಾವಣೆಗೆ ಹೊಂದಿಕೊಳ್ಳುವಲ್ಲಿ ಮಾನವ ವ್ಯವಸ್ಥೆಗಳು ವೈವಿಧ್ಯಮಯ ಸಾಮರ್ಥ್ಯಗಳನ್ನು ಹೊಂದಿರುವುದನ್ನು ಕಾಣಬಹುದು.ಭವಿಷ್ಯದ ಹವಾಗುಣದಲ್ಲಿ ದೊಡ್ಡ ಬದಲಾವಣೆಗಳ ಅಪಾಯವನ್ನು ಕಡಿಮೆಮಾಡುವ ಸಲುವಾಗಿ, ಹಲವಾರು ದೇಶಗಳು ತಮ್ಮ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಹಲವಾರು ಕಾರ್ಯನೀತಿಗಳನ್ನು ರೂಪಿಸಿಕೊಂಡು ಜಾರಿಗೆ ತಂದಿವೆ.

ಸ್ಥೂಲ ಅವಲೋಕನ[ಬದಲಾಯಿಸಿ]

ಕಳೆದ ಸುಮಾರು ನೂರು ವರ್ಷಗಳ ಯಾಂತ್ರಿಕ ಉಷ್ಣತಾ ದಾಖಲೆಗಳನ್ನು ಅವಲೋಕಿಸಿದರೆ ಕಂಡುಬರುವ ಹವಾಗುಣ ಪ್ರವೃತ್ತಿಯು ಸರಾಸರಿ ಜಾಗತಿಕ ತಾಪಮಾನದಲ್ಲಿ ಏರಿಕೆಯನ್ನು, ಎಂದರೆ ಜಾಗತಿಕ ತಾಪಮಾನ ಏರಿಕೆಯನ್ನು ತೋರಿಸುತ್ತದೆ. ಗಮನಿಸಲಾದ ಇತರ ಬದಲಾವಣೆಗಳೆಂದರೆ:ಆರ್ಕ್‌ಟಿಕ್‍ನ ಕುಗ್ಗುವಿಕೆಆರ್ಕ್‌ಟಿಕ್‍ ಮೀಥೇನ್ ಹೊರಸೂಸುವಿಕೆ ಪರ್ಮಾಫ್ರಾಸ್ಟ್ ಪ್ರದೇಶಗಳಿಂದ ಭೌತ ಇಂಗಾಲದ ಬಿಡುಗಡೆ ಹಾಗೂ ಕರಾವಳಿಯ ಹೂಳುಗಳಲ್ಲಿ ಆರ್ಕ್‌ಟಿಕ್‍ ಮೀಥೇನ್ ಹೊರಸೂಸುವಿಕೆ, ಮತ್ತು ಸಮುದ್ರಮಟ್ಟದಲ್ಲಿ ಏರಿಕೆ ಈ ಶತಮಾನದಲ್ಲಿ ಸರಾಸರಿ ಜಾಗತಿಕ ತಾಪಮಾನವು ಏರುವುದೆಂದು ಊಹೆ ಮಾಡಲಾಗಿದ್ದು, ಇದರಿಂದಾಗಿ ಹವಾಮಾನ ವೈಪರೀತ್ಯದ ಘಟನೆಗಳ ಪುನರಾವರ್ತನೆಯಲ್ಲಿ ಹೆಚ್ಚಳ ಮತ್ತು ಮಳೆಬೀಳುವಿಕೆಯ ಸಂವಿಧಾನಗಳಲ್ಲಿ ಬದಲಾವಣೆಗಳುಂಟಾಗುವ ಸಂಭವನೀಯತೆಗಳು ಹೆಚ್ಚಾಗಿವೆ. ಜಾಗತಿಕ ಮಟ್ಟದಿಂದ ಕೆಳಗಿಳಿದು ಪ್ರಾದೇಶಿಕ ಮಟ್ಟಕ್ಕೆ ಬರುವುದಾದಲ್ಲಿ ಇಲ್ಲಿಯೂ ಹವಾಗುಣ ಹೇಗೆ ಬದಲಾಗುವುದೆನ್ನುವುದರ ಬಗ್ಗೆ ಅತಂತ್ರ ನಿಲುವುಗಳು ಹೆಚ್ಚುತ್ತಿರುವುದನ್ನು ಕಾಣಬಹುದು. ಈ ತಾಪಮಾನ ಏರಿಕೆಯ ಊಹಿಸಲಾಗದ ಪರಿಣಾಮಗಳು ಉಂಟಾಗುವ ಸಂಭವನೀಯತೆಯು ಹವಾಗುಣ ಬದಲಾವಣೆಯ ವೇಗ, ಪರಿಮಾಣ, ಮತ್ತು ಕಾಲಮಿತಿಯನ್ನು ಅವಲಂಬಿಸಿದೆ.ಹವಾಗುಣ ಬದಲಾವಣೆಯ ಕೆಲವು ಭೌತಿಕ ಪರಿಣಾಮಗಳು ಖಂಡಗಳ ಮತ್ತು ಜಾಗತಿಕ ಮಟ್ಟದವಾಗಿದ್ದು ಇವನ್ನು ಮತ್ತೆ ಸರಿಪಡಿಸಲು ಸಾಧ್ಯವಾಗದು. 21ನೇ ಶತಮಾನದ ಕೊನೆಯ ವೇಳೆಗೆ ಸಮುದ್ರಮಟ್ಟವು 18ರಿಂದ 59 ಸೆ.ಮೀ(7.1ರಿಂದ 23.2 ಇಂಚು)ಗಳಷ್ಟು ಏರುವುದೆಂದು ಎಣಿಕೆಹಾಕಲಾಗಿದೆ. ವೈಜ್ಞಾನಿಕಪ್ರಜ್ಞೆಯ ಕೊರತೆಯಿಂದಾಗಿ ಈ ಸಮುದ್ರಮಟ್ಟದ ಏರಿಕೆಯ ಎಣಿಕೆಯಲ್ಲಿ ಮಂಜುಗೆಡ್ಡೆಯ ಎಲ್ಲಾ ಹಾಳೆಗಳ ಕೊಡುಗೆಯನ್ನು ಪರಿಗಣಿಸಲಾಗಿಲ್ಲ ಈ ಶತಮಾನದಲ್ಲಿಯೇ Meridional Overturning Circulationನ ವೇಗವು ತಗ್ಗುವ ಸಾಧ್ಯತೆ ಹೆಚ್ಚಾಗಿದೆ, ಆದರೂ ಅಟ್ಲಾಂಟಿಕ್ ಮತ್ತು ಯುರೋಪ್ ಖಂಡಗಳ ಉಷ್ಣತೆಯು ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಾಗಿ ಬಹುಶಃ ಹೆಚ್ಚಾಗಿಯೇ ಇರುತ್ತದೆ. 1–4°Cಯಷ್ಟು ಜಾಗತಿಕ ತಾಪಮಾನ ಏರಿಕೆಯುಂಟಾದಲ್ಲಿ (1990–2000ಕ್ಕೆ ಸಂಬಂಧಿಸಿದಂತೆ), ಗ್ರೀನ್‍ಲ್ಯಾಂಡ್ ಮಂಜುಗಡ್ಡೆ ಹೊದಿಕೆಯ ಕೆಲಭಾಗವು ಕರಗಲು ಹಲವಾರು ಶತಮಾನಗಳು ಅಥವಾ ಸಾವಿರ ವರ್ಷಗಳನ್ನು ತೆಗೆದುಕೊಳ್ಳಬಹುದಾದ ಮಿತವಾದ ಸಾಧ್ಯತೆಗಳಿವೆ. ಪಶ್ಚಿಮ ಅಂಟಾರ್ಕ್‌ಟಿಕ್ ಮಂಜುಗಡ್ಡೆ ಹೊದಿಕೆಯ ಪಾರ್ಶ್ವಿಕ ಕರಗುವಿಕೆಯನ್ನೂ ಪರಿಗಣಿಸುವುದಾದಲ್ಲಿ ಸಮುದ್ರದ ಮಟ್ಟದಲ್ಲಿ 4–6 ಮೀಟರ‍್ಗಳಷ್ಟು ಅಥವಾ ಅದಕ್ಕಿಂತ ಜಾಸ್ತಿ ಏರಿಕೆಯುಂಟಾಗಬಹುದು ಮಾನವ ವ್ಯವಸ್ಥೆಗಳ ಮೇಲೆ ಹವಾಗುಣ ಬದಲಾವಣೆಗಳ ಪರಿಣಾಮವು ಬಹುಶಃ ಅಸಮಾನವಾಗಿ ಹಂಚಿಕೆಯಾಗಬಹುದು. ಕೆಲವು ಪ್ರದೇಶಗಳು ಮತ್ತು ವಲಯಗಳಿಗೆ ಲಾಭಗಳುಂಟಾಗುವುದು ಮತ್ತು ಕೆಲವು ಕಡೆಗಳಲ್ಲಿ ಬಹಳ ನಷ್ಟಗಳುಂಟಾಗುವುದು ಕಂಡುಬರಬಹುದೆಂದು ಅಂದಾಜು ಮಾಡಲಾಗಿದೆ. ಆದರೆ ತಾಪಮಾನ ಏರಿಕೆಯ ಮಟ್ಟವು ಹೆಚ್ಚಾಗುತ್ತಿದ್ದಂತೆ (2–3°Cಗಿಂತ ಹೆಚ್ಚು, 1990ರ ಮಟ್ಟಕ್ಕೆ ಸಂಬಂಧಿಸಿದಂತೆ) ಲಾಭಗಳು ಕಡಿಮಾಯಾಗುತ್ತ ನಷ್ಟಗಳು ಹೆಚ್ಚಾಗುವ ಸಾಧ್ಯತೆಗಳೇ ಜಾಸ್ತಿ. ಕೆಳಗಿನ ಅಕ್ಷಾಂಶರೇಖಾ ಪ್ರದೇಶಗಳು ಮತ್ತು ಕಡಿಮೆ ಅಭಿವೃದ್ಧಿಗೊಂಡಿರುವ ಪ್ರದೇಶಗಳಿಗೆ ಹವಾಗುಣ ಬದಲಾವಣೆಗಳಿಂದ ಹೆಚ್ಚಿನ ತೊಂದರೆಗಳುಂಟಾಗಬಹುದು. ಮಾನವಿಕ ವ್ಯವಸ್ಥೆಗಳು ಹವಾಗುಣ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆಯೆನ್ನಬಹುದಾದರೂ ಈ ಹೊಂದಿಕೊಳ್ಳುವಿಕೆಗೆ ತೆರಬೇಕಾದ ಬೆಲೆಯ ಅಂದಾಜು ಯಾರಿಗೂ ಇಲ್ಲ ಮತ್ತು ಇದು ಬಹಳ ದುಬಾರಿಯಾಗಿರುವ ಸಾಧ್ಯತೆಗಳೇ ಜಾಸ್ತಿಯಾಗಿವೆ.Cite error: Closing </ref> missing for <ref> tag 1993ರಿಂದ, TOPEX/Poseidonನಿಂದ ಕಳುಹಿಸಲಾದ ಉಪಗ್ರಹದ ಔನ್ನತ್ಯಮಾಪನವು ಇದು ವರ್ಷದಂತೆ ಆಗುತ್ತಿರುವುದನ್ನು ಸೂಚಿಸುತ್ತದೆ ಸಮುದ್ರಮಟ್ಟವು ಈಗ ಗಿಂತ ಹೆಚ್ಚು ಎಂದರೆ 20,000 ವರ್ಷಗಳ ಹಿಂದೆ ಇದ್ದಂತಹ]ಗಿಂತ ಹೆಚ್ಚಿನ ಏರಿಕೆಯನ್ನು ತೋರಿಸುತ್ತಿದೆ. ಈ ರೀತಿಯ ಭಾರೀ ಏರಿಕೆ ಸುಮಾರು 7000 ವರ್ಷಗಳ ಹಿಂದೆ ಕಂಡುಬಂದಿತ್ತುನ ನಂತರ ಜಾಗತಿಕ ತಾಪಮಾನವು ಕಡಿಮೆಯಾಗಿ ಈಗಿನ ಮುಂಚೆ 4000 ಮತ್ತು 2500 ವರ್ಷಗಳ ನಡುವೆ ಸಮುದ್ರಮಟ್ಟದಲ್ಲಿ ನಷ್ಟು ತಗ್ಗುವಿಕೆಯನ್ನುಂಟುಮಾಡಿತು3000 ವರ್ಷಗಳ ಹಿಂದಿನಿಂದ 1ನೇ ಶತಮಾನದ ಆರಂಭದವರೆಗೆ ಸಮುದ್ರಮಟ್ಟವು ಆಗಾಗ ನಡೆಯುತ್ತಿದ್ದ ಸಣ್ಣಪುಟ್ಟ ಏರಿಳಿತಗಳನ್ನು ಬಿಟ್ಟರೆ ಹೆಚ್ಚೂಕಡಿಮೆ ಒಂದೇ ಮಟ್ಟದಲ್ಲಿದ್ದಿತು. ಅದರೆ, ನಿಂದ ಸಮುದ್ರಮಟ್ಟದಲ್ಲಿ ಕೆಲಪ್ರಮಾಣದ ಏರಿಕೆಯುಂಟಾಗಿರಬಹುದು; ಏಕೆಂದರೆ ಪೆಸಿಫಿಕ್ ಸಾಗರದಲ್ಲಿ ದೊರೆತಿರುವ ಸಾಕ್ಷ್ಯಾಧಾರಗಳು 700 BPಯ ಹೊತ್ತಿಗೆ ಈಗಿನ ಮಟ್ಟಕ್ಕಿಂತ ಬಹುಶ ಏರಿಕೆಯುಂಟಾಗಿರುವುದನ್ನು ತೋರಿಸುತ್ತವೆ 2007ರಲ್ಲಿ ಪ್ರಕಟಿತವಾದ ಲೇಖನವೊಂದರಲ್ಲಿ, ಕ್ಲೈಮ್ಯಾಟಾಲಜಿಸ್ಟ್ ಆಗಿರುವ ಜೇಮ್ಸ್ ಹ್ಯಾನ್‌ಸೆನ್ et al. ಧ್ರುವಪ್ರದೇಶಗಳ ಹಿಮವು ಕ್ರಮೇಣವಾಗಿ ಮತ್ತು ಒಂದೇ ದಿಕ್ಕಿನಲ್ಲಿ ಕರಗುವುದಿಲ್ಲವೆಂದೂ,ಇನ್ನೊಂದು ಭೂವೈಜ್ಞಾನಿಕ ದಾಖಲೆಯ ಪ್ರಕಾರ ಹಿಮದ ಹಾಳೆಗಳು ಒಂದು ಮಿತಿಯನ್ನು ದಾಟಿದಲ್ಲಿ ಇದಕ್ಕಿದ್ದಂತೆ ಅಸ್ಥಿರವಾಗುವುದು ಕಂಡುಬರುತ್ತದೆ. ಈ ಲೇಖನದಲ್ಲಿ ಹ್ಯಾನ್‌ಸೆನ್ et al. ಈ ರೀತಿ ಬರೆಯುತ್ತಾರೆ: ಪರಿಸ್ಥಿತಿಗಳು ಈ ಶತಮಾನದ ವೇಳೆಯಲ್ಲಿ ದೊಡ್ಡಪ್ರಮಾಣದ ಸಮುದ್ರಮಟ್ಟ ಏರಿಕೆಯನ್ನುಂಟುಮಾಡಬಹುದೆಂಬ ನಮ್ಮ ಕಾಳಜಿ (Hansen 2005) ಮತ್ತು ಇಪ್ಪತ್ತೊಂದನೇ ಶತಮಾನದ ಸಮುದ್ರಮಟ್ಟದ ಏರಿಕೆಗೆ ಗ್ರೀನ್‌ಲ್ಯಾಂಡ್ ಮತ್ತು ಅಂಟಾರ್ಕ್‌ಟಿಕಾಗಳ ಕೊಡುಗೆ ಬಹಳ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದು ಪ್ರತಿಪಾದಿಸುವ IPCC (2001, 2007)ನ ಯೋಚನೆಗಳು ಬಹಳ ಭಿನ್ನವಾಗಿವೆ. ಆದರೆ IPCCಯ ವಿಶ್ಲೇಷಣೆ ಮತ್ತು ಪ್ರಕ್ಷೇಪಣಗಳು ಒದ್ದೆ ಹಿಮದ ಹಾಳೆಗಳ ನಶಿಸುವಿಕೆಯ ನಾನ್‌ಲೀನಿಯರ್ ಭೌತಶಾಸ್ತ್ರವನ್ನಾಗಲೀ, ಹಿಮದ ತೊರೆಗಳ ಮತ್ತು ಹಿಮದ ಬದುಗಳ ಕೊರಕಲುಗಳನ್ನಾಗಲೀ ಪರಿಗಣನೆಗೆ ತೆಗೆದುಕೊಂಡಿಲ್ಲ, ಇದಲ್ಲದೆ ಹಿಮದ ಹಾಳೆಗಳ ತೂರಿಕೆ ಮತ್ತು ಸಮುದ್ರಮಟ್ಟದ ಏರಿಕೆಗಳ ನಡುವಿನ ಗಮನಾರ್ಹ ಹಿನ್ನಡೆಯ ಗೈರುಹಾಜರಾತಿಗೆ ಕಾರಣವಾಗಿ ನಾವು ಮಂಡಿಸಿರುವ ಪ್ರಾಚೀನಹವಾಗುಣ ಸಾಕ್ಷಿಗಳ ಜತೆಗೂ ಅವರು ಸುಸಂಬದ್ಧರಾಗಿಲ್ಲ ಒಂದು ಹಿಮದ ಹಾಳೆಯ ಕುಸಿಯುವಿಕೆಯಿಂದ ಉಂಟಾಗುವ ಸಮುದ್ರಮಟ್ಟದ ಏರಿಕೆಯು ಜಾಗತಿಕವಾಗಿ ಅಸಮಾನವಾಗಿ ಹಂಚಿಕೆಯಾಗುವುದು. ಹಿಮದ ಹಾಳೆಯ ಸುತ್ತ ಉಂಟಾಗುವ ಭೂರಾಶಿಯ ನಷ್ಟದಿಂದಾಗಿ ಅಲ್ಲಿನಗುರುತ್ವಾಕರ್ಷಣ ಸಾಮರ್ಥ್ಯ]]ವು ಕಡಿಮೆಯಾಗಿ, ಸ್ಥಳೀಯ ಸಮುದ್ರ ಮಟ್ಟದ ಏರಿಕೆಯನ್ನು ತಡೆಯುವುದು ಅಥವಾ ಸಮುದ್ರಮಟ್ಟದ ಕುಸಿತವನ್ನೂ ಕೂಡ ಉಂಟುಮಾಡುವುದು. ಸ್ಥಳೀಯ ಭೂರಾಶಿಯ ನಷ್ಟದಿಂದಾಗಿ ಭೂಮಿಯ ಮೊಮೆಂಟ್ ಆಫ್ ಇನರ್ಶಿಯಾ(ನಿಶ್ಚಲತೆಯ ಘಳಿಗೆ) ಕೂಡಾ ಬದಲಾಗುತ್ತದೆ, ಏಕೆಂದರೆ ಭೂಮಿಯ ಆವರಣದ ಹರಿವು ಈ ಭೂರಾಶಿಯ ನಷ್ಟವನ್ನು ಭರಿಸಲು 10–15 ಸಾವಿರ ವರ್ಷಗಳಾದರೂ ಬೇಕು. ಈ ಮೊಮೆಂಟ್ ಆಫ್ ಇನರ್ಶಿಯಾದ ಬದಲಾವಣೆಯು ಟ್ರೂ ಪೊಲಾರ್ ವಾಂಡರ್ಗೆ ಕಾರಣವಾಗುತ್ತದೆ, ಇದರಲ್ಲಿ ಭೂಮಿಯ ಆವರ್ತನೆಯ ಅಕ್ಷರೇಖೆಯು ಸೂರ್ಯನಿಗೆ ತಕ್ಕಂತೆ ಸ್ಥಿರವಾಗಿದ್ದರೂ ಭೂಮಿಯ ಕಠಿಣವಾದ ಗೋಲವು ಅದಕ್ಕೆ ತಕ್ಕಂತೆ ತಿರುಗುತ್ತಿರುತ್ತದೆ. ಇದರಿಂದ ಭೂಮಿಯ ಸಮಭಾಜಕವೃತ್ತದ ಉಬ್ಬುವಿಕೆಯ ಸ್ಥಾನವು ಬದಲಾಗಿ ಇದು ಮತ್ತೆ ಜಿಯಾಯ್ಡ್ ಅಥವಾ ಸಂಭವನೀಯ ಜಾಗತಿಕ ವಿಸ್ತಾರದ ಮೇಲೆ ಪ್ರಭಾವ ಬೀರುತ್ತದೆ. 2009ರಲ್ಲಿ ನಡೆಸಲಾದ ಪಶ್ಚಿಮ ಅಂಟಾರ್ಕ್‌ಟಿಕ್ ಹಿಮದ ಹಾಳೆಯ ಕುಸಿತದ ಪರಿಣಾಮಗಳನ್ನು ಕುರಿತ ಅಧ್ಯಯನವು ಈ ಎರಡೂ ಪರಿಣಾಮಗಳ ಫಲಿತಾಂಶವನ್ನು ತೋರಿಸುತ್ತದೆ. ಇಲ್ಲಿ ಜಾಗತಿಕವಾಗಿ ಉಂಟಾಗಬೇಕಾಗಿದ್ದ 5 ಮೀಟರ್‌ಗಳಷ್ಟು ಸಮುದ್ರಮಟ್ಟದ ಏರಿಕೆಯ ಬದಲಾಗಿ ಪಶ್ಚಿಮ ಅಂಟಾರ್ಕ್‌ಟಿಕಾದಲ್ಲಿ ಸುಮಾರು 25 ಸೆಂಟೀಮೀಟರ್‌ಗಳಷ್ಟು ಸಮುದ್ರಮಟ್ಟದ ಕುಸಿತವುಂಟಾಯಿತು ಹಾಗೂ ಯುನೈಟೆಡ್ ಸ್ಟೇಟ್ಸ್, ಕೆನಡಾದ ಕೆಲವು ಭಾಗಗಳು, ಹಾಗೂ ಹಿಂದೂ ಮಹಾಸಾಗರದಲ್ಲಿ 6.5 ಮೀಟರ್‌ಗಳಷ್ಟು ಸಮುದ್ರಮಟ್ಟದ ಏರಿಕೆ ಕಂಡುಬಂದಿತು 1961 ರಿಂದ 2003ರವರೆಗೆ ಜಾಗತಿಕ ಸಾಗರ ತಾಪಮಾನವು ಮೇಲ್ಮೈಯಲ್ಲಿ 0.10 °C ಇದ್ದುದು ಈಗ ಅಷ್ಟು ಉಷ್ಣತೆ 700 ಮೀ. ಆಳದಲ್ಲಿ ಕಂಡುಬರುತ್ತಿದೆ. ಒಂದು ವರ್ಷದಿಂದ ಇನ್ನೊಂದಕ್ಕೆ ಮತ್ತು ದೀರ್ಘಕಾಲಿಕ ಸಮಯದ ಶ್ರೇಣಿಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಜಾಗತಿಕ ಸಾಗರ ಉಷ್ಣತಾಂಶಗಳನ್ನು ಗಮನಿಸಿದಾಗ ಅದು 1991ರಿಂದ 2003ರವರೆಗೆ ಹೆಚ್ಚಿನ ಉಷ್ಣತಾ ಏರಿಕೆಯನ್ನು ತೋರಿಸಿದರೆ, 2003ರಿಂದ 2007ರವರೆಗೆ ಸ್ವಲ್ಪ ಶೈತ್ಯವನ್ನು ಕೂಡ ತೋರುತ್ತದೆ.ಅಂಟಾರ್ಕ್‌‍ಟಿಕ್‌ನ ದಕ್ಷಿಣ ಸಾಗರದ ಉಷ್ಣತೆಯು 1950ರ ಮತ್ತು 1980ರ ದಶಕಗಳ ನಡುವೆ 0.17 °C (0.31 °F)ನಷ್ಟು ಜಾಸ್ತಿಯಾಗಿದ್ದು, ಇದು ಪ್ರಪಂಚದ ಸಾಗರಗಳೆಲ್ಲದರ ಉಷ್ಣತೆಯ ಎರಡರಷ್ಟು.ಜೀವ ವ್ಯವಸ್ಥೆಗಳ ಮೇಲೆ ಪರಿಣಾಮವನ್ನುಂಟುಮಾಡುವುದು ಮಾತ್ರವಲ್ಲ, (ಉದಾ. ಕರಗುವ ಸಮುದ್ರದ ಮಂಜುಗಡ್ಡೆಯು ಅದರ ಒಳಭಾಗದಲ್ಲಿ ಬೆಳೆಯುವ ಅಲ್ಜೀಗಳ ಮೇಲೆ ದುಷ್ಪಣಾಮವುಂಟುಮಾಡುವುದು), ತಾಪಮಾನ ಏರಿಕೆಯು CO2ವನ್ನು ಹೀರಿಕೊಳ್ಳುವ ಸಾಗರದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

ಆಮ್ಲತೆಯ ಹೆಚ್ಚಳ[ಬದಲಾಯಿಸಿ]

ಸಾಗರದ ಆಮ್ಲೀಕರಣವು ವಾತಾವರಣದಲ್ಲಿ CO2ನ ಸಾಂದ್ರತೆಯ ಏರಿಕೆಯಿಂದ ಉಂಟಾಗುತ್ತದೆ, ಮತ್ತು ಇದು ಜಾಗತಿಕ ತಾಪಮಾನ ಏರಿಕೆಯ ನೇರ ಪರಿಣಾಮ ಅಲ್ಲ. ಜೀವಿಗಳು ಉತ್ಪಾದಿಸುವ ಹೆಚ್ಚಿನ CO2ವನ್ನು ಸಾಗರಗಳು ಕರಗಿದ ಅನಿಲದ ರೂಪದಲ್ಲಿ ಇಲ್ಲವೇ ಸತ್ತಮೇಲೆ ಅಸ್ಥಿಪಂಜರಗಳ ರೂಪದಲ್ಲಿ ಸಾಗರದ ತಳಸೇರಿ ಸುಣ್ಣ ಅಥವಾ ಸುಣ್ಣದಕಲ್ಲುಗಳಾಗಿ ಮಾರ್ಪಾಡು ಹೊಂದುವ ಸಣ್ಣಪುಟ್ಟ ಸಾಗರಜೀವಿಗಳ ರೂಪದಲ್ಲಿ ಹೀರಿಕೊಳ್ಳುತ್ತವೆ. ಸಾಗರಗಳು ಸದ್ಯಕ್ಕೆ ವಾರ್ಷಿಕವಾಗಿ ತಲಾ ಒಂದು ಟನ್ನಿನಷ್ಟು CO2 ಅನ್ನು ಹೀರಿಕೊಳ್ಳುತ್ತವೆ. ಒಂದು ಅಂದಾಜಿನ ಪ್ರಕಾರ ಸಾಗರಗಳು ಮಾನವ ಚಟುವಟಿಕೆಗಳಿಂದ ಉತ್ಪತ್ತಿಯಾದ ಸುಮಾರು ಅರ್ಧಭಾಗದಷ್ಟು CO2 ಅಷ್ಟನ್ನೂ ಸುಮಾರು 1800ರಿಂದ ಹೀರಿಕೊಂಡಿವೆ ಎಂದು ಎಣಿಕೆ ಹಾಕಲಾಗಿದೆ(1800ರಿಂದ 1994ರವರೆಗ 118 ± 19 ಪೆಟಾಗ್ರಾಮ್ಸ್‌ನಷ್ಟು ಇಂಗಾಲ) ನೀರಿನಲ್ಲಿ CO2 ಒಂದು ದುರ್ಬಲವಾದ ಇಂಗಾಲಾಮ್ಲವಾಗಿ ಪರಿವರ್ತಿತವಾಗುತ್ತದೆ, ಮತ್ತು ಔದ್ಯಮಿಕ ಕ್ರಾಂತಿಯ ನಂತರ ಹಸಿರುಮನೆ ಅನಿಲಗಳಲ್ಲಿ ಉಂತಾಗಿರುವ ಹೆಚ್ಚಳವು ಸಮುದ್ರಜಲದ ಸರಾಸರಿ pH (ಆಮ್ಲೀಯತೆಯ ಪ್ರಯೋಗಾಲಯ ಮಾನಕ) ಅನ್ನು 0.1 ಯುನಿಟ್‌ಗಳಿಂದ to 8.2 ಗೆ ಹೆಚ್ಚಿಸಿದೆ. ಸೂಚಿಸಲಾಗಿರುವ ಹೊರಸೂಸುವಿಕೆಗಳು pH ಅನ್ನು 2100ರ ಹೊತ್ತಿಗೆ ಇನ್ನೂ 0.5ರಷ್ಟು ಕಡಿಮೆ ಮಾಡಬಹುದು ಮತ್ತು ಅಲ್ಲಿಂದೀಚೆಗೆ ನೂರಾರು ಸಹಸ್ರಮಾನಗಳಲ್ಲಿಯೂ ಕಂಡಿಲ್ಲದ ಮಟ್ಟಕ್ಕೆ, ಈ ಅವಧಿಯಲ್ಲಿ ಎಂದೂ ಕಂಡು-ಕೇಳಿರದಷ್ಟು ವೇಗದಲ್ಲಿ - ಬಹುಶಃ 100 ಪಟ್ಟಿನಷ್ಟು ಕಡಿಮೆ ಮಾಡಬಹುದು. ಹೆಚ್ಚುತ್ತಿರುವ ಆಮ್ಲೀಯತೆಯು ಹವಳಗಳ (ಪ್ರಪಂಚದ ಶೇಕಡಾ 16ರಷ್ಟು ಹವಳದ ದಿಬ್ಬಗಳು 1998ರಲ್ಲಿ ಬಿಸಿಯಾದ ನೀರಿನಿಂದ ಉಂಟಾದ ಬ್ಲೀಚಿಂಗ್‌ನಿಂದಾಗಿ ಸಾವನ್ನಪ್ಪಿದವು ಈ ವರ್ಷವು ದಾಖಲಾದ ಅತಿ ಬಿಸಿಯಾದ ವರ್ಷವಾಗಿದೆ) ಮತ್ತು ಕ್ಯಾಲ್ಷಿಯಂ ಕಾರ್ಬೋನೇಟ್ನ ಚಿಪ್ಪುಗಳನ್ನುಳ್ಳ ಇತರ ಜೀವಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದೆಂಬ ಕಾಳಜಿಯನ್ನು ವ್ಯಕ್ತಪಡಿಸಲಾಗಿದೆ ನವೆಂಬರ್ 2009ರ Science ನಲ್ಲಿ ಪ್ರಕಟವಾದ ಕೆನಡಾDepartment of Fisheries and Oceansನ ವಿಜ್ಞಾನಿಗಳು ಬರೆದ ಒಂದು ಲೇಖನದಲ್ಲಿ ಅವರು ಬ್ಯೂಫೋರ್ಟ್ ಸಮುದ್ರಪ್ಲ್ಯಾಂಕ್‌ಟನ್ ಚಿಪ್ಪುಗಳನ್ನು ಕಟ್ಟುವ ಕ್ಯಾಲ್ಷಿಯಂ ಕ್ಲೋರೈಡ್‌ನ ಮಟ್ಟದಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿರುವುದನ್ನು ಕಂಡಿರುವುದು ವರದಿಯಾಗಿತ್ತು.Cite error: Closing </ref> missing for <ref> tag ಇದರಿಂದಾಗಿ ಉತ್ತರ ಅಟ್ಲಾಂಟಿಕ್ ಡ್ರಿಫ್ಟ್ನಿಂದ ಬೆಚ್ಚಗಾಗುವ ಪ್ರದೇಶಗಳಾದ ಸ್ಕ್ಯಾಂಡಿನೇವಿಯಾ ಮತ್ತು ಬ್ರಿಟನ್ಗೆ ತೊಂದರೆಯಾಗಬಹುದು. ಈ ಪರಿಚಲನೆಯಲ್ಲಿ ಕುಸಿತವುಂಟಾಗಬಹುದಾದ ಸಾಧ್ಯತೆಗಳು ಸ್ಪಷ್ಟವಾಗಿಲ್ಲ; ಆದರೆ ಗಲ್ಫ್ ಸ್ಟ್ರೀಮ್ ಕೆಲಕಾಲದವರೆಗೆ ಸ್ಥಿರವಾಗುವುದು ಮತ್ತು ಉತ್ತರ ಅಟ್ಲಾಂಟಿಕ್ ಡ್ರಿಫ್ಟ್ ಕ್ಷೀಣಿಸುವುದರ ಸಾಧ್ಯತೆಗಳ ಬಗ್ಗೆ ಕೆಲವು ಸಾಕ್ಷ್ಯಾಧಾರಗಳು ಲಭ್ಯವಿವೆ. ಆದರೆ ಕ್ಷೀಣಿಸುವುದರ ಪ್ರಮಾಣ ಮತ್ತು ಅದು ಪರಿಚಲನೆಯನ್ನು ನಿಲ್ಲಿಸಬಹುದಾದ ಸಾಧ್ಯತೆಗಳ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಇಲ್ಲಿನವರೆವಿಗೂ ಉತ್ತರ ಯುರೋಪ್ ಅಥವಾ ಹತ್ತಿರದ ಸಾಗರಗಳಲ್ಲಿ ಯಾವುದೇ ಶೈತ್ಯೀಕರಣವು ಕಂಡುಬಂದಿಲ್ಲ.ಲೆಂಟನ್ et al.ನ ಸಂಶೋಧನೆಯ ಪ್ರಕಾರ "ಕೃತಕ ಮಾದರಿಗಳು ಈ ಶತಮಾನದಲ್ಲಿ ಒಂದು THC ಟಿಪ್ಪಿಂಗ್ ಪಾಯಿಂಟ್ ಅನ್ನು ಸ್ಪಷ್ಟವಾಗಿ ದಾಟುವುದು" ಎಂದು ಕಂಡುಹಿಡಿಯಲಾಯಿತು

ಆಕ್ಸಿಜನ್ ಕೊರತೆ[ಬದಲಾಯಿಸಿ]

ಸಾಗರಗಳಲ್ಲಿ ಕರಗಿರುವ ಆಕ್ಸಿಜನ್ ಮಟ್ಟವು ಕಡಿಮೆಯಾಗಬಹುದು ಮತ್ತು ಇದರಿಂದ ಸಾಗರದ ಜೀವರಾಶಿಗಳ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗಬಹುದು

ಧನಾತ್ಮಕ ಮರಳುವಿಕೆಯ ಪರಿಣಾಮಗಳು[ಬದಲಾಯಿಸಿ]

ಧನಾತ್ಮಕ ಫೀಡ್‌ಬ್ಯಾಕ್ಗಳು ಜಾಗತಿಕ ತಾಪಮಾನ ಏರಿಕೆಯ ಗಮನಿಸಲಾದ ಮತ್ತು ಉಂಟಾಗಬಹುದಾದ ಪರಿಣಾಮಗಳಾಗಿದ್ದು ಇವು ಮತ್ತೂ ಹೆಚ್ಚಿನ ಜಾಗತಿಕ ತಾಪಮಾನ ಏರಿಕೆಯುಂಟಾಗಲು ಕಾರಣವಾಗುತ್ತವೆ. IPCC Fourth Assessment Reportನ ಪ್ರಕಾರ "ಆಂಥ್ರೊಪೋಜೆನಿಕ್ ತಾಪಮಾನ ಏರಿಕೆಯ ಕೆಲವು ಪರಿಣಾಮಗಳು ದಿಢೀರನೆ ಉಂಟಾಗುವುದು ಅಥವಾ ಮರುಸ್ಥಿತಿಗೆ ಹೋಗಲು ಅಸಾಧ್ಯವಾಗಿರುವಂಥವಾಗಿದ್ದು ಹವಾಗುಣದ ಬದಲಾವಣೆಯ ವೇಗ ಮತ್ತು ಪರಿಮಾಣಗಳನ್ನು ಅವಲಂಬಿಸಿವೆ". ಈ ಪರಿಸ್ಥಿತಿಯುಂಟಾಗಲು ಈ ಧನಾತ್ಮಕ ವ್ಯಾಖ್ಯಾನಗಳು ಪ್ರಮುಖ ಕಾರಣಗಳಾಗಿವೆ.

ಕರಗುವ ಪರ್ಮಾಫ್ರಾಸ್ಟ್ ಪೀಟ್ ಜೌಗುಪ್ರದೇಶಗಳಿಂದ ಮೀಥೇನ್ ಬಿಡುಗಡೆ[ಬದಲಾಯಿಸಿ]

ಪಶ್ಚಿಮ ಸೈಬೀರಿಯಾವು ಪ್ರಪಂಚದ ಅತಿ ದೊಡ್ಡ ಪೀಟ್ ಜೌಗುಪ್ರದೇಶವಾಗಿದ್ದು, ಇದು 11,000 ವರ್ಷಗಳ ಹಿಂದೆ, ಕಳೆದ ಹಿಮಯುಗದ ಕೊನೆಯಲ್ಲಿ ರೂಪುಗೊಂಡ ಪರ್ಮಾಫ್ರಾಸ್ಟ್ ಪೀಟ್ ಜೌಗಿನ ಒಂದು ಮಿಲಿಯನ್ ಚದರ ಕಿಲೋಮೀಟರ್‌ ವಿಸ್ತಾರದ ಪ್ರದೇಶವಾಗಿದೆ. ಇದರ ಪ್ರಮಾಫ್ರಾಸ್ಟ್‌ನ ಕರಗುವಿಕೆಯಿಂದ ಮುಂದಿನ ಹಲವಾರು ದಶಕಗಳವರೆಗೆ ಮೀಥೇನ್ ಅನಿಲವು ಬೃಹತ್ ಪ್ರಮಾಣದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಬಹಳ ಪರಿಣಾಮಕಾರೀ ಹಸಿರುಮನೆ ಅನಿಲವಾಗಿರುವ ಮೀಥೇನ್ ಮುಂದಿನ ಹಲವಾರು ದಶಕಗಳವರೆಗೆ ಸುಮಾರು 70,000 ಮಿಲಿಯನ್ ಟನ್ಗಳಷ್ಟು ಬೃಹತ್ ಪ್ರಮಾಣದಲ್ಲಿ ಬಿಡುಗಡೆಯಾಗಲಿದ್ದು, ಇದು ಹಸಿರುಮನೆ ಅನಿಲ ಹೊರಸೂಸುವಿಕೆಯ ಮತ್ತೊಂದು ಮೂಲವಾಗುತ್ತದೆ ಇದೇ ರೀತಿಯ ಕರಗುವಿಕೆ ಪೂರ್ವ ಸೈಬೀರಿಯಾದಲ್ಲಿ ಕಂಡುಬಂದಿದೆಲಾರೆನ್ಸ್ et al. (2008)ರ ಪ್ರಕಾರ ಆರ್ಕ್‌ಟಿಕ್ ಸಮುದ್ರದ ಹಿಮದ ಕರಗುವಿಕೆಯು ಆರ್ಕ್‌ಟಿಕ್ ಪರ್ಮಾಫ್ರಾಸ್ಟ್ ಅನ್ನು ವೇಗವಾಗಿ ಕರಗಿಸಿ ಮತ್ತು ಹೆಚ್ಚು ತಾಪಮಾನ ಏರಿಕೆಯನ್ನು ಪ್ರಚೋದಿಸುವಂಥ ಒಂದು ಮರಳುವಿಕೆಯ ಸರಣಿಯನ್ನು ಆರಂಭಿಸಬಹುದು

ಹೈಡ್ರೇಟ್‌ಗಳಿಂದ ಮೀಥೇನ್ ಬಿಡುಗಡೆ[ಬದಲಾಯಿಸಿ]

ಮೀಥೇನ್ ಹೈಡ್ರೇಟ್ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಮೀಥೇನ್ ಕ್ಲಾಥ್ರೇಟ್, ಒಂದು ರೀತಿಯ ನೀರಿನ ಮಂಜುಗಡ್ಡೆಯಾಗಿದ್ದು ತನ್ನ ಹರಳು ರಚನೆಯಲ್ಲಿ methane ಅನ್ನು ಹೊಂದಿರುತ್ತದೆ. ಭೂಮಿಯ ಸಾಗರಗರ್ಭದ ಪದರಗಳಲ್ಲಿ ಮೀಥೇನ್ ಕ್ಲಾಥ್ರೇಟ್‌ನ ಬಹಳ ದೊಡ್ಡ ನಿಕ್ಷೇಪಗಳನ್ನು ಕಂಡುಹಿಡಿಯಲಾಗಿದೆ. ಪಲಾಯನ ಹಸಿರುಮನೆ ಪರಿಣಾಮದ ಮೂಲಕ ಈ ಮೀಥೇನ್ ಕ್ಲಾಥ್ರೇಟ್ ನಿಕ್ಷೇಪಗಳಿಂದ ಬೃಹತ್ ಪ್ರಮಾಣದ ನೈಸರ್ಗಿಕ ಅನಿಲವು ಬಿಡುಗಡೆಯಾಗುವುದನ್ನು ಭೂತಕಾಲದ ಮತ್ತು ವರ್ತಮಾನದ ಹವಾಗುಣ ಬದಲಾವಣೆಗೆ ಪ್ರಮುಖ ಕಾರಣವೆಂದು ತರ್ಕಿಸಲಾಗಿದೆ. ಈ ಹಿಡಿದಿರಿಸಲ್ಪಟ್ಟ ಮೀಥೇನ್‌ನ ಬಿಡುಗಡೆಯು ತಾಪಮಾನ ಏರಿಕೆಯ ಒಂದು ಪ್ರಮುಖ ಪರಿಣಾಮವಾಗಿದೆ; ಮೀಥೇನ್ ಇಂಗಾಲದ ಡೈಆಕ್ಸೈಡ್‌ಗಿಂತ ಹೆಚ್ಚು ಶಕ್ತಿಶಾಲೀ ಅನಿಲವಾದ್ದರಿಂದ ಇದು ಜಾಗತಿಕ ತಾಪಮಾನವನ್ನು 5°ಗಳಷ್ಟು ಹೆಚ್ಚಿಸಬಹುದೆಂದು ಎಣಿಕೆಮಾಡಲಾಗಿದೆ. ಈ ಸಿದ್ಧಾಂತದ ಪ್ರಕಾರ ಇದು ವಾತಾವರಣದಲ್ಲಿ ಲಭ್ಯವಿರುವ ಆಕ್ಸಿಜನ್‌ನ ಪ್ರಮಾಣದ ಮೇಲೆ ಬಹಳ ದೊಡ್ಡ ಪ್ರಭಾವವನ್ನುಂಟುಮಾಡಬಹುದು. ಈ ಸಿದ್ಧಾಂತವನ್ನು ಪರ್ಮಿಯನ್-ಟ್ರಯಾಸ್ಸಿಕ್ ನಿರ್ನಾಮ ವಿದ್ಯಮಾನ ಎಂಬ ಭೂಮಿಯ ಮೇಲಿನ ಬಹಳ ವಿಷಮವಾದ ಸಮೂಹ ಅಳಿವಿನ ವಿದ್ಯಮಾನವನ್ನು ವಿವರಿಸಲು ಬಳಸಿಕೊಳ್ಳಲಾಗಿದೆ. 2008ರಲ್ಲಿ American Geophysical Unionಗೋಸ್ಕರ ನಡೆಸಲಾದ ಒಂದು ಸಂಶೋಧನಾ ಯಾತ್ರೆಯ ಸಮಯದಲ್ಲಿ ಸೈಬೀರಿಯನ್ ಆರ್ಕ್‌ಟಿಕ್ ಪ್ರದೇಶದಲ್ಲಿ ಸಾಮಾನ್ಯವಾಗಿ ಇರಬೇಕಾದ್ದಕ್ಕಿಂತ 100 ಪಟ್ಟು ಹೆಚ್ಚಿನ ಮೀಥೇನ್ ಮಟ್ಟಗಳು ಕಂಡು ಬಂದಿದ್ದು, ಇದು ಲೆನಾ ನದಿಯ ಹೊರಪಾತ್ರ ಮತ್ತು ಲ್ಯಾಪ್ಟೆವ್ ಸಮುದ್ರ ಹಾಗೂ ಪೂರ್ವ ಸೈಬೀರಿಯನ್ ಸಮುದ್ರಗಳ ನಡುವೆ ಇರುವ ಪ್ರದೇಶಗಳ ಪ್ರಮಾಫ್ರಾಸ್ಟ್ ಸಮುದ್ರತಳದ ನೆಲದಲ್ಲಿನ ಹೆಪ್ಪುಗಟ್ಟಿರುವ ’ಮುಚ್ಚಳ’ವೊಂದರಲ್ಲಿ ಉಂಟಾಗಿರುವ ರಂಧ್ರಗಳಿಂದ ಬಿಡುಗಡೆಯಾಗುತ್ತಿರಬಹುದಾದ ಮೀಥೇನ್ ಕ್ಲಾಥ್ರೇಟ್ ಎಂದು ಊಹಿಸಲಾಗಿದೆ

ಇಂಗಾಲ ಚಕ್ರದ ಫೀಡ್‌ಬ್ಯಾಕ್‌ಗಳು[ಬದಲಾಯಿಸಿ]

ಕೆಲವು ಊಹೆಗಳು ಮತ್ತು ಸಾಕ್ಷ್ಯಾಧಾರಗಳ ಪ್ರಕಾರ ಜಾಗತಿಕ ತಾಪಮಾನ ಏರಿಕೆಯಿಂದ ಭೂಮಿಯ ಜೀವವ್ಯವಸ್ಥೆಗಳಿಂದ ಇಂಗಾಲವು ಕಡಿಮೆಯಾಗಿ ವಾತಾವರಣದಲ್ಲಿ CO2 ಮಟ್ಟವು ಜಾಸ್ತಿಯಾಗಬಹುದು. ಹಲವಾರು ಹವಾಗುಣ ಮಾದರಿಗಳ ಪ್ರಕಾರ 21ನೇ ಶತಮಾನದ ಜಾಗತಿಕ ತಾಪಮಾನ ಏರಿಕೆಯು ಈ ಏರಿಕೆಗೆ ಭೂಮಿಕ ಇಂಗಾಲ ಚಕ್ರದ ಪ್ರತಿಕ್ರಿಯೆಯಿಂದ ತೀವ್ರಗೊಳ್ಳಬಹುದೆಂದು ತೋರಿಸಲಾಗಿದೆC4MIP ಅಧ್ಯಯನದ ಎಲ್ಲಾ 11 ಮಾದರಿಗಳು ಕಂಡುಕೊಂಡ ಪ್ರಕಾರ ಹವಾಗುಣದ ಬದಲಾವಣೆಯನ್ನು ಪರಿಗಣನೆಗೆ ತೆಗೆದುಕೊಳ್ಳುವುದಾದಲ್ಲಿ ಮನುಷ್ಯಮೂಲದ CO2ನ ಹೆಚ್ಚಿನ ಭಾಗವು ಹವೆಯಲ್ಲಿಯೇ ಉಳಿಯುತ್ತದೆ. ಇಪ್ಪತ್ತೊಂದನೇ ಶತಮಾನದ ಕೊನೆಯ ಭಾಗದಲ್ಲಿ ಈ ಹೆಚ್ಚಿನ CO2 ಮಟ್ಟದಲ್ಲಿ ಎರಡು ವಿಪರೀತ ಮಾದರಿಗಳಲ್ಲಿ 20 ಮತ್ತು 200 ppm ಏರಿಳಿತವಾಗುವುದನ್ನು ತೋರಿಸಿ, ಹೆಚ್ಚಿನ ಮಾದರಿಗಳಲ್ಲಿ 50 ಮತ್ತು 100 ppmನಷ್ಟು ಏರಿಳಿತವನ್ನು ತೋರಿಸಿತು. ಹೆಚ್ಚಿನ CO2 ಮಟ್ಟಗಳಿಂದ 0.1°ರಿಂದ 1.5 °C ವರೆಗೆ ಹವಾಗುಣ ತಾಪಮಾನ ಹೆಚ್ಚಾಯಿತು. ಆದರೂ ಈ ಸೂಕ್ಷ್ಮತೆಗಳ ಪರಿಮಾಣದ ಬಗ್ಗೆ ಬಹಳ ದೊಡ್ಡ ಅನಿಶ್ಚಿತತೆಯಿದ್ದಿತು. ಎಂಟು ಮಾದರಿಗಳು ಹೆಚ್ಚಿನ ಬದಲಾವಣೆಗೆ ಭೂಮಿಯನ್ನು ಕಾರಣವಾಗಿ ತೋರಿಸಿದರೆ ಮೂರು ಮಾದರಿಗಳು ಇದಕ್ಕೆ ಸಮುದ್ರವೇ ಕಾರಣವೆಂದು ತೋರಿಸುತ್ತಿದ್ದವು. ಈ ಕೇಸ್‌ಗಳ ಅತಿದೊಡ್ಡ ಸಾಕ್ಷಿಯೆಂದರೆ ಉತ್ತರ ಗೋಳಾರ್ಧದ ಬೋರಿಯಲ್ ಅರಣ್ಯಗಳ ಎತ್ತರಪ್ರದೇಶಗಳ ಮಣ್ಣಿನಿಂದ ಹೆಚ್ಚಿದ ಇಂಗಾಲದ ಉಸಿರಾಟ. ಇದರಲ್ಲಿ ಒಂದು ಪ್ರತ್ಯೇಕ ಮಾದರಿ(HadCM3) ದಕ್ಷಿಣ ಅಮೆರಿಕಾದ ಅಮೆಜಾನ್ ಮಳೆಕಾಡುಗಳಲ್ಲಿ ಗಣನೀಯವಾಗಿ ಕಡಿಮೆಯಾದ ಮಳೆಬೀಳುವಿಕೆಗೆ ಪ್ರತಿಕ್ರಿಯೆಯಾಗಿ ಆರಂಭವಾಗಿರುವ ಇಂಗಾಲದ ಒಂದು ಉಪಚಕ್ರದ ಮರಳುವಿಕೆಯನ್ನು ತೋರಿಸುತ್ತದೆ ಈ ಮಾದರಿಗಳು ಯಾವುದೇ ಭೂಮಿಕ ಇಂಗಾಲ ಚಕ್ರದ ಮರಳುವಿಕೆಯ ಶಕ್ತಿಯ ಬಗ್ಗೆ ಒಮ್ಮತಕ್ಕೆ ಬರದೇ ಹೋದರೂ, ಈ ಮರಳುವಿಕೆಗಳು ಜಾಗತಿಕ ತಾಪಮಾನ ಏರಿಕೆಯನ್ನು ತೀವ್ರಗೊಳಿಸುವುವೆಂದು ಎಲ್ಲಾ ಮಾದರಿಗಳು ಸೂಚಿಸುತ್ತವೆ. ಇಂಗ್ಲೆಂಡಿನ ಮಣ್ಣು ಕಳೆದ 25 ವರ್ಷಗಳಿಂದ ವಾರ್ಷಿಕವಾಗಿ ನಾಲ್ಕು ಮಿಲಿಯನ್ ಟನ್‌ಗಳಷ್ಟು ಇಂಗಾಲವನ್ನು ಕಳೆದುಕೊಳ್ಳುತ್ತಿದೆಯೆಂದು ಅಧ್ಯಯನಗಳ ಮೂಲಕ ಗಮನಿಸಿರುವ ಬೆಲ್ಲಾಮಿ et al., ತಮ್ಮ Natureನ ಸೆಪ್ಟೆಂಬರ್ 2005ರ ಲೇಖನದಲ್ಲಿ ಈ ಫಲಿತಾಂಶಗಳನ್ನು ಭೂಮಿ ಬಳಕೆಯಿಂದಾದ ಬದಲಾವಣೆಗಳಿಂದ ವಿವರಿಸಲಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯ ಫಲಿತಾಂಶಗಳು ಗಹನವಾದ ನಮೂನೆಗಳ ಜಾಲವನ್ನು ಅವಲಂಬಿಸಿದ್ದು ಇದರಿಂದಾಗಿ ಇವು ಜಾಗತಿಕ ಮಟ್ಟದಲ್ಲಿ ಲಭ್ಯವಿಲ್ಲ. ಇಡೀ ಯುನೈಟೆಡ್ ಕಿಂಗ್‍ಡಮ್ ಅನ್ನು ಮಾದರಿಯಾಗಿ ತೆಗೆದುಕೊಂಡು ಸಮಾನಾಂತರವಾಗಿ ಅಂದಾಜಿಸಿದಾಗ ಅವರು ವಾರ್ಷಿಕವಾಗಿ 13 ಮಿಲಿಯನ್ ಟನ್‌ಗಳಷ್ಟು ನಷ್ಟವಾಗುವುದೆಂದು ಸೂಚಿಸುತ್ತಾರೆ. ಇದು ಕ್ಯೋಟೋ ಒಪ್ಪಂದದಡಿಯಲ್ಲಿ ಯು.ಕೆ ಸಾಧಿಸಿದ ಇಂಗಾಲದ ಡೈ ಆಕ್ಸೈಡ್‌ನ ಹೊರಸೂಸುವಿಕೆಯ ಕಡಿತಕ್ಕೆ ಸಮವಾಗಿದೆ (ವಾರ್ಷಿಕವಾಗಿ 12.7 ಮಿಲಿಯನ್ ಟನ್‌ಗಳಷ್ಟು ಇಂಗಾಲ) ಒಂದು ಸಲಹೆಯ ಪ್ರಕಾರ (ಕ್ರಿಸ್ ಫ್ರೀಮನ್ರಿಂದ) ಪೀಟ್ ಜೌಗುಗಳಿಂದ ನೀರಿನ ಹರಿವುಗಳಿಗೆ ಬಿಡುಗಡೆಯಾಗುವ ಕರಗಿರುವ ಸಾವಯವ ಇಂಗಾಲ (DOC)ದ ಬಿಡುಗಡೆಯು (ಇಲ್ಲಿಂದ ಅದು ವಾತಾವರಣವನ್ನು ಪ್ರವೇಶಿಸುವುದು) ಜಾಗತಿಕ ತಾಪಮಾನ ಏರಿಕೆಯಲ್ಲಿ ಧನಾತ್ಮಕ ಮರಳುವಿಕೆಯನ್ನುಂಟುಮಾಡುತ್ತದೆ. ಪಾಚಿಭೂಮಿಗಳಲ್ಲಿ ಸದ್ಯ ಸಂಗ್ರಹವಾಗಿರುವ ಇಂಗಾಲ(390–455 ಗಿಗಾಟನ್‌ಗಳು, ಭೂಮ್ಯಾಧರಿತ ಇಂಗಾಲ ಸಂಗ್ರಹದ ಮೂರನೇ ಒಂದು ಭಾಗ)ವು ವಾತಾವರಣದಲ್ಲಿ ಈಗಾಗಲೇ ಇರುವ ಇಂಗಾಲದ ಅರ್ಧಭಾಗದಷ್ಟಾಗಿದೆ. ನೀರಿನ DOC ಮಟ್ಟಗಳು ಗಮನಾರ್ಹವಾಗಿ ಏರುತ್ತಿವೆ; ಫ್ರೀಮನ್‌ರ ಸಿದ್ಧಾಂತದ ಪ್ರಕಾರ, ಇದಕ್ಕೆ ವಾತಾವರಣದದ CO2 ಮಟ್ಟಗಳಲ್ಲಿನ ಏರಿಕೆಯು ಪ್ರಾಥಮಿಕ ಉತ್ಪಾದಕತೆಯ ಉದ್ದೀಪನೆಯ ಮೂಲಕ ಹೊಣೆಗಾರನಾಗಿದೆಯೇ ಹೊರತು ತಾಪಮಾನ ಏರಿಕೆಗಳಲ್ಲ. ಹವಾಗುಣ ಬದಲಾವಣೆಯ ಕಾರಣದಿಂದಾಗಿ ಹೆಚ್ಚುತ್ತಿವೆಯೆನ್ನಲಾಗುತ್ತಿರುವ ಮರಗಳ ಸಾವುಗಳು ಒಂದು ಧನಾತ್ಮಕ ಮರಳುವಿಕೆ ಪರಿಣಾಮವಾಗಿದೆ. ಇದು ನೈಸರ್ಗಿಕ ಸಸ್ಯಸಂಕುಲದ ಹೆಚ್ಚಳವು ಒಂದು ಋಣಾತ್ಮಕ-ಮರಳುವಿಕೆ ಪರಿಣಾಮಕ್ಕೆ ಕಾರಣವಾಗುವುದೆಂಬ ಹಿಂದಿನ ಪ್ರಚಲಿತ ನಂಬಿಕೆಯನ್ನು ಅಲ್ಲಗಳೆಯುತ್ತದೆ.

ಕಾಳ್ಗಿಚ್ಚುಗಳು =[ಬದಲಾಯಿಸಿ]

IPCC Fourth Assessment Reportನ ಪ್ರಕಾರ, ಮೆಡಿಟರೇನಿಯನ್ ಯುರೋಪ್ ಮುಂತಾದ ಮಧ್ಯ-ಅಕ್ಷಾಂಶ ಭೂಭಾಗಗಳು ಕಡಿಮೆ ಮಳೆ ಮತ್ತು ಬರದ ಅಪಾಯಗಳನ್ನು ಹೆಚ್ಚು ಎದುರಿಸಬೇಕಾಗಿ ಬಂದು ಇದರಿಂದಾಗಿ ಕಾಳ್ಗಿಚ್ಚುಗಳು ದೊಡ್ಡ ಪ್ರಮಾಣದಲ್ಲಿ ಹಾಗೂ ನಿಯಮಿತವಾಗಿ ಉಂಟಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಹೆಚ್ಚುಹೆಚ್ಚು ಸಂಗ್ರಹಿತ ಇಂಗಾಲವು ವಾತಾವರಣಕ್ಕೆ ಅದು ನೈಸರ್ಗಿಕವಾಗಿ ಮರುಹೀರಿಕೆ ಮಾಡುವುದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬಿಡುಗಡೆಯಾಗುವುದೇ ಅಲ್ಲದೆ, ಭೂಮಿಯ ಒಟ್ಟು ಅರಣ್ಯಭಾಗವನ್ನು ಕಡಿಮೆಮಾಡಿ ಒಂದು ಧನಾತ್ಮಕ ಮರಳುವಿಕೆ ಉರುಳನ್ನು ರೂಪಿಸುತ್ತದೆ. ಈ ಮರಳುವಿಕೆ ಸುರುಳಿಯ ಭಾಗವಾಗಿ ಬದಲೀ ಅರಣ್ಯಗಳ ತೀವ್ರಗತಿಯ ಬೆಳವಣಿಗೆ ಹಾಗೂ ಉತ್ತರ ಅಕ್ಷಾಂಶಗಳ ಹವಾಗುಣಗಳು ಅರಣ್ಯಗಳ ಸಂರಕ್ಷಣೆಗೆ ಹೆಚ್ಚು ಅನುಕೂಲಕರವಾಗಿರುವುದರಿಂದ ಉತ್ತರದೆಡೆ ಅರಣ್ಯಗಳ ವಲಸೆ - ಇವೆರಡೂ ಕಂಡುಬರುತ್ತವೆ. ಆದರೆ ಇಲ್ಲಿ ನವೀಕರಿಸಬಹುದಾದ ಇಂಧನಗಳಾದ ಅರಣ್ಯಗಳ ಸುಡುವಿಕೆಯನ್ನು ಜಾಗತಿಕ ತಾಪಮಾನ ಏರಿಕೆಗೆ ಸಹಕಾರಿಯೆಂದು ಪರಿಗಣಿಸಬಹುದೇ ಎಂಬ ಪ್ರಶ್ನೆಯೇಳುತ್ತದೆ ಕುಕ್ ಮತ್ತು ವ್ಹಿಜೀ ಅಮೆಜಾನ್ ಮಳೆಕಾಡುಗಳಲ್ಲಿಯೂ ಕಾಳ್ಗಿಚ್ಚುಗಳು ಉಂಟಾಗಿ, ಇದರಿಂದ ಪೂರ್ವ ಅಮೆಜಾನ್ ಪ್ರಾಂತ್ಯದ ಕಾಟಿಂಗಾ ಸಸ್ಯಸಂಪತ್ತಿಗೆ ಸ್ಥಿತ್ಯಂತರಗೊಳ್ಳುವಂತೆ ಆಗುವುದು ಎಂದು ಕಂಡಿಹಿಡಿದಿದ್ದಾರೆ

ಸಮುದ್ರದ ಮಂಜಿನ ಹಿಮ್ಮೆಟ್ಟುವಿಕೆ[ಬದಲಾಯಿಸಿ]

ಸಮುದ್ರವು ಸೂರ್ಯನಿಂದ ಉಷ್ಣತೆಯನ್ನು ಹೀರಿಕೊಂಡರೆ, ಹಿಮವು ಹೆಚ್ಚಾಗಿ ಸೂರ್ಯಕಿರಣಗಳನ್ನು ವಾಪಾಸು ಅಂತರಿಕ್ಷಕ್ಕೆ ಪ್ರತಿಫಲಿಸುತ್ತದೆ. ಹೀಗಾಗಿ ಹಿಮ್ಮೆಟ್ಟುತ್ತಿರುವ ಸಮುದ್ರದ ಹಿಮವು ಕರಗಿದ ಸಮುದ್ರ ನೀರನ್ನು ಸೂರ್ಯಕಿರಣಗಳು ಬಿಸಿಮಾಡಲು ಅವಕಾಶನೀಡುವುದರ ಮೂಲಕ ಹೆಚ್ಚುನ ತಾಪಮಾನ ಏರಿಕೆಗೆ ಕಾರಣವಾಗುತ್ತದೆ. ಈ ಕ್ರಿಯೆಯು ಒಂದು ಕಪ್ಪು ಕಾರು ಬಿಸಿಲಿನಲ್ಲಿ ಬಿಳಿಯ ಕಾರಿಗಿಂತ ಬೇಗನೆ ಬಿಸಿಯಾಗುವುದಕ್ಕೆ ಸಮವಾಗಿದೆ. ಈ ಅಲ್ಬೆಡೋ ಬದಲಾವಣೆಯು ಉತ್ತರ ಗೋಳಾರ್ಧದ ಧ್ರುವಪ್ರದೇಶ ಉಷ್ಣತೆಗಳು ಪ್ರಪಂಚದ ಇತರ ಭಾಗಗಳಿಗಿಂತ ಎರಡುಪಟ್ಟು ಹೆಚ್ಚಾಗುವುದು ಎಂದು IPCC ಸೂಚಿಸಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಸೆಪ್ಟೆಂಬರ್ 2007ರಲ್ಲಿ, ಆರ್ಕ್‌ಟಿಕ್ ಸಮುದ್ರ ಹಿಮಪ್ರದೇಶವು 1979ರಿಂದ 2000ರವರೆಗಿನ ಬೇಸಿಗೆಯ ಸರಾಸರಿ ಕನಿಷ್ಠ ಪ್ರದೇಶದ ಅರ್ಧಭಾಗದಷ್ಟು ಕಡಿಮೆಯಾಯಿತು.ಸೆಪ್ಟೆಂಬರ್ 2007ರಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಆರ್ಕ್‌ಟಿಕ್ ಹಿಮವು ವಾಯವ್ಯ ಹಾದಿಯು ಹಡಗು ಪ್ರಯಾಣಕ್ಕೆ ಅನುವುಮಾಡಿಕೊಡುವಷ್ಟು ಹಿಂದಕ್ಕೆ ಸರಿದುಕೊಂಡಿತು.ಆದರೆ 2007 ಮತ್ತು 2008ರ ನಷ್ಟಗಳು ತಾತ್ಕಾಲಿಕವಾಗಿರಲೂಬಹುದು ನ ಮಾರ್ಕ್ ಸಿರ್ರೀಜ್ ಬೇಸಿಗೆಕಾಲದ ವೇಳೆಗೆ ಆರ್ಕ್‌ಟಿಕ್ ಹಿಮಹೊದಿಕೆಯು ಹಿಮರಹಿತವಾಗಿರಬಹುದು ಎಂದು "ಸಕಾರಣ ಅಂದಾಜು" ಮಾಡಲು 2030 ಸರಿಯಾದ ಕಾಲವೆಂದು ಹೇಳುತ್ತಾರೆ ಜಾಗತಿಕ ತಾಪಮಾನ ಏರಿಕೆಯ ಧ್ರುವಪ್ರದೇಶ ವಿಸ್ತರಣೆಯು ದಕ್ಷಿಣ ಗೋಳಾರ್ಧದಲ್ಲಿ ನಡೆಯುವ ಸಾಧ್ಯತೆಗಳಿಲ್ಲ ಅಂಟಾರ್ಕ್‌ಟಿಕ್ ಸಮುದ್ರ ಹಿಮವು 1979Cite error: Closing </ref> missing for <ref> tag ಅಂದಾಜುಮಾಡಲಾದ ಸಾಂಕೇತಿಕ ಹವಾಗುಣ ಬದಲಾವಣೆಗಳ ಪರಿಣಾಮವಾಗಿ ಒಟ್ಟು ವಿಶ್ವ ಉತ್ಪಾದಕತೆಯು ಕೆಲವು ಪ್ರತಿಶತ ಹೆಚ್ಚು ಅಥವಾ ಕಡಿಮೆಯಾಗಬಹುದು. ಒಟ್ಟು ವಿಶ್ವ ಉತ್ಪಾದಕತೆಯಲ್ಲಿ ಸಣ್ಣ ಬದಲಾವಣೆಗಳಾದರೂ ರಾಷ್ಟ್ರೀಯ ಅರ್ಥವ್ಯವಸ್ಥೆಗಳಲ್ಲಿ ಸಾಪೇಕ್ಷವಾಗಿ ಬಹ್ ದೊಡ್ಡ ಬದಲಾವಣೆಗಳಾಗುತ್ತವೆ.

ವಿಮೆ =[ಬದಲಾಯಿಸಿ]

ಅಪಾಯಗಳಿಂದ ಬಹಳ ನೇರವಾಗಿ ಪ್ರಭಾವಿತವಾಗುವಂಥ ಒಂದು ಉದ್ಯಮವೆಂದರೆ ವಿಮಾ ಉದ್ಯಮ 2005ರಲ್ಲಿ ಸಲ್ಲಿಸಲಾದ Association of British Insurersನ ವರದಿಯ ಪ್ರಕಾರ, ಇಂಗಾಲದ ಹೊರಸೂಸುವಿಕೆಯನ್ನು ಮಿತಗೊಳಿಸುವುದರಿಂದ 2080ರ ವೇಳೆಗೆ ಉಷ್ಣವಲಯದ ಸೈಕ್ಲೋನ್‌ಗಳಿಂದ ಉಂಟಾಗಬಹುದಾದ ಶೇಕಡಾ 80ರಷ್ಟು ವಾರ್ಷಿಕ ಖರ್ಚನ್ನು ಕಡಿತಗೊಳಿಸಬಹುದು Association of British Insurersನ ಜೂನ್ 2004ರ ವರದಿಯಲ್ಲಿ ಘೋಷಿಸಿದ ಪ್ರಕಾರ"ಹವಾಮಾನ ಬದಲಾವಣೆಯು ಭವಿಷ್ಯದ ಪೀಳಿಗೆಗಳು ಎದುರಿಸಬೇಕಾದ ದೂರದ ವಿದ್ಯಮಾನ ಅಲ್ಲ. ಇದು ತನ್ನ ಹಲವಾರು ರೂಪಗಳ ಮೂಲಕ ಈಗಾಗಲೇ ವಿಮಾದಾರರ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಈ ವರದಿಯು ಮನೆಗಳು ಮತ್ತು ಆಸ್ತಿಗಳಿಗೆ ಹವಾಗುಣ ಬದಲಾವಣೆಯ ಅಪಾಯಗಳು ಈಗಾಗಲೇ ವಾರ್ಷಿಕವಾಗಿ 2–4 %ರಷ್ಟು ಹೆಚ್ಚುತ್ತಿರುವುದನ್ನು, ಹಾಗೂ ಕಳೆದ ಐದು ವರ್ಷಗಳ ಅವಧಿಗೆ ಹೋಲಿಸಿದರೆ 1998–2003ರ ಅವಧಿಯಲ್ಲಿ ಯು,ಕೆ.ಯಲ್ಲಿ ಚಂಡಮಾರುತ ಹಾಗೂ ಪ್ರವಾಹದ ಹಾವಳಿಗಳಿಂದಾಗಿ ನಷ್ಟದ ಬಾಧ್ಯತೆಗಳು ದ್ವಿಗುಣವಾಗಿ £6 ಬಿಲಿಯನ್‌ನಷ್ಟಾಗಿರುವುದನ್ನು ಗಮನಿಸಿತು. ಇದರ ಫಲಸ್ವರೂಪವಾಗಿ ವಿಮೆಯ ಪ್ರೀಮಿಯಮ್‌ಗಳು ಹೆಚ್ಚು ದುಬಾರಿಯಾಗುತ್ತಿದ್ದು, ಕೆಲವೊಂದು ಪ್ರದೇಶಗಳಲ್ಲಿ ಕೆಲವು ಜನರಿಗೆ ಪ್ರವಾಹ ವಿಮೆಯು ಕೈಗೆಟಕದೇ ಹೋಗುವ ಅಪಾಯವಿದೆ. 2002ರ ಒಂದು ಅಧ್ಯಯನದಲ್ಲಿ ಪ್ರಪಂಚದ ಅತಿ ದೊಡ್ಡ ವಿಮಾ ಕಂಪನಿಗಳಾದ Munich Re ಮತ್ತು Swiss Reಗಳನ್ನೊಳಗೊಂಡಂತೆ ಹಲವಾರು ಆರ್ಥಿಕ ಸಂಸ್ಥೆಗಳು "ಹವಾಮಾನ ವೈಪರೀತ್ಯದ ವಿದ್ಯಮಾನಗಳ ಪುನರಾವರ್ತನೆಯ ಹೆಚ್ಚಳ ಮತ್ತು ಸಾಮಾಜಿಕ ಪ್ರವೃತ್ತಿಗಳ ಮೇಳೈಕೆಗಳು" ಮುಂದಿನ ದಶಕದಲ್ಲಿ ಯು.ಎಸ್.‌ಗೆ ವಾರ್ಷಿಕವಾಗಿ ಸುಮಾರು $150 ಬಿಲಿಯನ್‌ನಷ್ಟು ನಷ್ಟವನ್ನುಂಟುಮಾಡಬಹುದೆಂದು ಎಚ್ಚರಿಕೆ ನೀಡಿದವು ಈ ನಷ್ಟಗಳು ವಿಮೆ ಮತ್ತು ಅನಾಹುತ ಪರಿಹಾರದ ವೆಚ್ಚಗಳ ಹೆಚ್ಚಳದ ಮೂಲಕ ಗ್ರಾಹಕರು, ತೆರಿಗೆ ನೀಡುವವರು ಮತ್ತು ಉದ್ಯಮದ ಮೇಲೆ ಹೊರೆಯಾಗಬಹುದು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಿಮೆಯ ನಷ್ಟಗಳು ಬಹಳ ಹೆಚ್ಚಾಗುತ್ತಿವೆ. ಚೋಯ್ ಮತ್ತು ಫಿಶರ್‌(2003)ರ ಪ್ರಕಾರ ವಾರ್ಷಿಕ ಸೋರಿಕೆಯಲ್ಲಿ ಪ್ರತಿ 1% ಹೆಚ್ಚಳವೂ ಕೂಡ ನಷ್ಟವನ್ನು 2.8%ರಷ್ಟು ಹೆಚ್ಚುಮಾಡಬಹುದು 1950ರ ದಶಕದಿಂದೀಚೆಗೆ ಹೆಚ್ಚಾಗಿರುವ ಮಳೆಯಂತಹ ಹವಾಮಾನ-ಸಂಬಂಧೀ ವಿದ್ಯಮಾನಗಳ ಪುನರಾವರ್ತನೆ ಹೆಚ್ಚಾಗಿದ್ದರೂ ಕೂಡ ಈ ಒಟ್ಟು ಏರಿಕೆಗಳು ಸಾಮಾನ್ಯವಾಗಿ ಭೇದ್ಯವಾಗಿರುವ ಕರಾವಳಿ ಪ್ರದೇಶಗಳ ಜನಸಂಖ್ಯಾ ಹೆಚ್ಚಳ ಹಾಗೂ ಸ್ವತ್ತುಗಳ ಬೆಲೆಗಳಲ್ಲಿನ ಹೆಚ್ಚಳಗಳಿಂದಾಗಿ ಆಗಿವೆ

ಸಾರಿಗೆ[ಬದಲಾಯಿಸಿ]

ಹೆಚ್ಚಿನ ತಾಪಮಾನ ಏರಿಕೆಯ ಏರುಪೇರುಗಳಿಂದಾಗಿ ರಸ್ತೆಗಳು, ವಿಮಾನ ನಿಲ್ದಾಣಗಳ ರನ್‌ವೇಗಳು, ರೇಲ್ವೇ ಲೈನ್‌ಗಳು, ಪೈಪ್‌ಲೈನ್‌ಗಳು (ಎಣ್ಣೆಯ ಪೈಪ್‌ಲೈನ್ಗಳು, ಒಳಚರಂಡಿಗಳು, ನೀರಿನ ಮೆಯಿನ್ಗಳು ಮುಂತಾದವನ್ನೊಳಗೊಂಡಂತೆ) ಮೊದಲಾದವನ್ನು ನಿರ್ವಹಣೆ ಮಾಡಲು ಮತ್ತು ನವೀಕರಣಗೊಳಿಸಲು ಹೆಚ್ಚು ವೆಚ್ಚ ಮಾಡಬೇಕಾಗಿ ಬರಬಹುದು. ಈಗಾಗಲೇ ಪ್ರತಿಕೂಲ ಪರಿಣಾಮಗಳನ್ನು ಅನುಭವಿಸುತ್ತಿರುವ ಪ್ರದೇಶಗಳಲ್ಲೊಂದಾದ ಪರ್ಮಾಫ್ರಾಸ್ಟ್ ಪ್ರಾಂತ್ಯದಲ್ಲಿ ಹೆಚ್ಚಿನ ಮಟ್ಟದ ಭೂಕುಸಿತವು, ಸೊಟ್ಟಗಾದ ರಸ್ತೆಗಳು, ಕುಸಿದ ತಳಪಾಯಗಳು ಹಾಗೂ ವಿಪರೀತವಾಗಿ ಬಿರುಕುಬಿಟ್ಟ ರನ್‌ವೇಗಳು ಉಂಟಾಗಲು ಕಾರಣವಾಗಿದೆ.


ಕೃಷಿಯ ಮೇಲಿನ ಪರಿಣಾಮಗಳು[ಬದಲಾಯಿಸಿ]

ಆಹಾರ[ಬದಲಾಯಿಸಿ]

ಹವಾಗುಣ ಬದಲಾವಣೆಯು ಕೃಷಿಯ ಮೇಲೆ ಮಿಶ್ರ ಪರಿಣಾಮವನ್ನುಂಟುಮಾಡುವುದು. ಹಲವಾರು ಪ್ರದೇಶಗಳು ಮಿತವಾದ ತಾಪಮಾನ ಏರಿಕೆಯಿಂದ ಲಾಭ ಪಡೆದರೆ ಕೆಲವು ಪ್ರದೇಶಗಳು ನಷ್ಟವನ್ನನುಭವಿಸುತ್ತವೆ ಕಡಿಮೆ ಅಕ್ಷಾಂಶದಲ್ಲಿರುವ ಪ್ರದೇಶಗಳು ಕಡಿಮೆ ಫಸಲು Low-latitude areas are at most risk of suffering decreased crop yields. ಮಧ್ಯ ಮತ್ತು ಎತ್ತರದ ಅಕ್ಷಾಂಶಗಳ ಪ್ರದೇಶಗಳು (1980–99ರ ಅವಧಿಗೆ ಸಂಬಂಧಿಸಿದಂತೆ) 1–3°Cರವರೆಗಿನ ತಾಪಮಾನ ಏರಿಕೆಯ ಸಮಯದಲ್ಲಿ ಹೆಚ್ಚಿನ ಫಸಲು ಉತ್ಪಾದನೆಯನ್ನು ಕಂಡವು.

IPCC ವರದಿಯ ಪ್ರಕಾರ, 3°Cಗಿಂತ ಹೆಚ್ಚಿನ ತಾಪಮಾನ ಏರಿಕೆಯುಂಟಾದಲ್ಲಿ ಜಾಗತಿಕ ಕೃಷಿ ಉತ್ಪನ್ನದಲ್ಲಿ ಇಳಿಕೆಯುಂಟಾಗುವುದು. ಆದರೆ ಈ ಹೇಳಿಕೆಯನ್ನು ಕಡಿಮೆ ಅಥವಾ ಮಧ್ಯಮ ಭರವಸೆಯೊಡನೆ ನೀಡಲಾಗಿದೆ.   ಈ ವರದಿಯಲ್ಲಿ ಅಧ್ಯಯನ ಮಾಡಲಾದ ಹೆಚ್ಚಿನ ಕೃಷಿಪದ್ಧತಿಗಳು ಹವಾಗುಣ ವೈಪರೀತ್ಯ ವಿದ್ಯಮಾನಗಳು, ಕೀಟ ಬಾಧೆ ಮತ್ತು ರೋಗಗಳ ಹರಡುವಿಕೆ, ಇಲ್ಲವೇ ಹವಾಗುಣ ಬದಲಾವಣೆಗೆ 

ಹೊಂದಿಕೊಳ್ಳಲು ಕಾರಣವಾಗಬಹುದಾದ ಬೆಳವಣಿಗೆಗಳನ್ನು ಒಳಗೊಂಡಿಲ್ಲ. New Scientist ನ ಒಂದು ಲೇಖನದಲ್ಲಿ ಅಕ್ಕಿಯ ಫಸಲಿನ ಮೇಲೆ ತಾಪಮಾನ ಏರಿಕೆಯಿಂದ ಯಾವ ರೀತಿಯ ಪರಿಣಾಮಗಳುಂಟಾಗಬಹುದೆಂದು ವಿವರಿಸಲಾಗಿದೆ 2005ರಲ್ಲಿ Royal Societyಯು ನಡೆಸಿದ ಅಧಿವೇಶನವೊಂದರಲ್ಲಿ ವಾತಾವರಣದಲ್ಲಿ ಹೆಚ್ಚಿದ ಇಂಗಾಲದ ಡೈಆಕ್ಸೈಡ್‌‌ನಿಂದ ಉಂಟಾಗುವ ಲಾಭಗಳನ್ನು ಹವಾಗುಣ ಬದಲಾವಣೆಯ ಋಣಾತ್ಮಕ ಪರಿಣಾಮಗಳು ಹಿಮ್ಮೆಟ್ಟಿಸುತ್ತವೆ ಎಂದು ತಿಳಿಸಲಾಯಿತು

ಕರಾವಳಿ ಮತ್ತು ತಗ್ಗುಪ್ರದೇಶಗಳು[ಬದಲಾಯಿಸಿ]

ವಾಪಾರವಹಿವಾಟುಗಳ ಐತಿಹಾಸಿಕ ಕಾರಣದಿಂದಾಗಿ ಪ್ರಪಂಚದ ಹಲವಾರು ಅತಿದೊಡ್ಡ ಹಾಗೂ ಶ್ರೀಮಂತ ನಗರಗಳು ಕರಾವಳಿಪ್ರದೇಶಗಳಲ್ಲಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅತ್ಯಂತ ಬಡಜನರು ಸಾಮಾನ್ಯವಾಗಿ ಆಹಾರಸಮತಳಭಾಗಗಳಲ್ಲಿ ವಾಸಿಸುತ್ತಾರೆ, ಏಕೆಂದರೆ ಅದು ಅವರಿಗೆ ದೊರಕಿರುವ ಜಾಗ ಮಾತ್ರವಾಗಿರುತ್ತದೆ ಅಥವಾ ಕೃಷಿಗೆ ಬೇಕಾದ ಫಲವತ್ತಾದ ಭೂಮಿಯಾಗಿರುತ್ತದೆ. ಈ ವಾಸಸ್ಥಾನಗಳಲ್ಲಿ dykeಗಳು ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಗಳೇ ಮೊದಲಾದ ಮೂಲಭೂತ ಸೌಕರ್ಯಗಳ ಕೊರತೆಯಿರುತ್ತದೆ. ಬಡ ಸಮುದಾಯಗಳು ವಿಮೆ, ಉಳಿತಾಯ ಅಥವಾ ಅವಘಡಗಳಿಂದ ಚೇತರಿಸಿಕೊಳ್ಳಲು ಬೇಕಾದ ಸಾಲದ ಸೌಕರ್ಯ - ಇವಾವುದನ್ನೂ ಹೊಂದಿರುವುದಿಲ್ಲ. ಭವಿಷ್ಯದ ಹವಾಗುಣ ಬದಲಾವಣೆಗಳಿಂದಾಗಿ ಕಿಕ್ಕಿರಿದ ಕರಾವಳೀ ಪ್ರದೇಶಗಳು ಸಮುದ್ರಮಟ್ಟ ಏರಿಕೆಯ ಅಪಾಯವನ್ನೂ ಹೆಚ್ಚಾಗಿ ಎದುರಿಸಬೇಕಾಗಬಹುದು ಮತ್ತು ತೀವ್ರವಾದ ಹವಾಮಾನ ವೈಪರೀತ್ಯಗಳಿಂದ ಹಾನಿಯನ್ನನುಭವಿಸುವಂತೆ ಆಗಬಹುದು ಹೊಂದಾಣಿಕೆಯ ಸಾಮರ್ಥ್ಯಗಳ ವ್ಯತ್ಯಾಸದಿಂದಾಗಿ, ಅಭಿವೃದ್ಧಿಶೀಲ ದೇಶಗಳ ಕರಾವಳಿಪ್ರದೇಶಗಳ ಹೊಂದಾಣಿಕೆಯು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಕರಾವಳಿಗಳ ಹೊಂದಾಣಿಕೆಗಿಂತ ಕಷ್ಟಕರವಾಗಬಹುದು 2006ರಲ್ಲಿ ನಿಕೊಲ್ಸ್ ಮತ್ತು ಟಾಲ್ ನಡೆಸಿದ ಅಧ್ಯಯನವೊಂದು ಸಮುದ್ರಮಟ್ಟದ ಏರಿಕೆಯ ಪರಿಣಾಮಗಳನ್ನು ಪರಿಗಣಿಸುತ್ತದೆ ಪರಿಸ್ಥಿತಿಗಳು]] ಸಮುದ್ರಮಟ್ಟದ ಏರುವಿಕೆಯ ಎದುರು ಬಹಳ ದುರ್ಬಲವಾಗಿ ಕಂಡುಬರುತ್ತವೆ. ಇದು ಪ್ರಾಥಮಿಕವಾಗಿ ಸಮುದ್ರಮಟ್ಟದ ಏರುವಿಕೆಯ ಪರಿಮಾಣಕ್ಕಿಂತ ಹೆಚ್ಚಾಗಿಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಲ್ಲಿನ (ಕರಾವಳಿ ಜನಸಂಖ್ಯೆ, Gross Domestic Product (GDP) ಮತ್ತು GDP/capita) ಏರುಪೇರನ್ನು ಸೂಚಿಸುತ್ತದೆ. ಈ ಮೊದಲಿನ ಅಧ್ಯಯನಗಳಲ್ಲಿ ತೋರಿಸಿರುವಂತೆ, ಸಣ್ಣ ದ್ವೀಪಗಳು ಮತ್ತು ನದೀಮುಖಜಭೂಮಿಯ ಪ್ರದೇಶಗಳು ಹೆಚ್ಚು ಭೇದ್ಯವಾಗಿವೆ. ಒಟ್ಟಾಗಿ ಹೇಳುವುದಾದಲ್ಲಿ, ಈ ಫಲಿತಾಂಶಗಳಿಂದ ಮಾನವ ಸಮಾಜಗಳು ಸಮುದ್ರಮಟ್ಟ ಏರಿಕೆಗೆ ಪ್ರತಿಕ್ರಿಯಿಸಲು ಸಾಮಾನ್ಯವಾಗಿ ಅಂದಾಜುಮಾಡಲಾಗಿರುವುದಕ್ಕಿಂತ ಹೆಚ್ಚಿನ ಆಯ್ಕೆಗಳನ್ನು ಹೊಂದಿರುವುದು ತಿಳಿದುಬರುತ್ತದೆ. ಆದರೆ, ಈ ನಿರ್ಧಾರಕ್ಕೆ ಬರುವ ಮೊದಲು ನಾವು ಈ ಆಯ್ಕೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ ಹಾಗೂ ಮಹತ್ವದ ಪರಿಣಾಮಗಳು ಉಂತಾಗುವ ಸಾಧ್ಯತೆಗಳಿವೆ ಎಂದೂ ತಿಳಿದುಕೊಳ್ಳಬೇಕಾಗಿದೆ

ವಲಸೆ[ಬದಲಾಯಿಸಿ]

ಟುವಾಲುನಂತಹ ಪೆಸಿಫಿಕ್ ಸಾಗರದ ಕೆಲವು ದ್ವೀಪರಾಷ್ಟ್ರಗಳು ಪ್ರವಾಹದ ಪರಿಸ್ಥಿತಿಯನ್ನು ನಿಯಂತ್ರಿಸುವುದು ಆರ್ಥಿಕವಾಗಿ ಅಸಾಧ್ಯವಾದ್ದರಿಂದ ಅನ್ಯದಾರಿಯಿಲ್ಲದೇ ತಮ್ಮ ನೆಲವನ್ನು ಬಿಟ್ಟು ವಲಸೆಹೋಗಬೇಕಾಗುವ ಪರಿಸ್ಥಿತಿಯ ಬಗ್ಗೆ ಚಿಂತಿತರಾಗಿದ್ದಾರೆ. ಟುವಾಲು ನ್ಯೂಜಿಲ್ಯಾಂಡ್‌ನ ಜತೆಗೆ ಹಂತಹಂತವಾಗಿ ಜನರ ಸ್ಥಳಾಂತರ ಮಾಡುವ ತಾತ್ಕಾಲಿಕ ಒಪ್ಪಂದವನ್ನು ಮಾಡಿಕೊಂಡಿದೆ ಆಂಡ್ರೂ ಸಿಮ್ಸ್ The Guardian ಅಕ್ಟೋಬರ್ 2003 1990ರ ದಶಕದಲ್ಲಿ ಹಲವಾರು ಅಂದಾಜುಗಳ ಪ್ರಕಾರ ಸುಮಾರು 25 ಮಿಲಿಯನ್ ಸಂಖ್ಯೆಯ ಪರಿಸರ ಸಂತ್ರಸ್ತರು ಇರುವರೆಂಬ ಎಣಿಕೆಮಾಡಲಾಗಿತ್ತು. (ಪರಿಸರ ನಿರಾಶ್ರಿತರನ್ನು ನಿರಾಶ್ರಿತರ ಅಧಿಕೃತ ವಿವರಣೆಯಲ್ಲಿ ಒಳಗೊಳ್ಳಲಾಗಿಲ್ಲ; ಈ ವಿವರಣೆಯು ನಿರಾಶ್ರಿತರನ್ನು ರಾಜಕೀಯ ಕಿರುಕುಳವನ್ನು ತಪ್ಪಿಸಿಕೊಳ್ಳಲು ಪಲಾಯನ ಮಾಡುತ್ತಿರುವ ವಲಸೆಗಾರರೆಂದು ವಿವರಿಸುತ್ತದೆ.) ವಿಶ್ವಸಂಸ್ಥೆಯ ಸಹಕಾರದೊಂದಿದೆ ಪ್ರಪಂಚದ ಸರ್ಕಾರಗಳಿಗೆ ಸಲಹೆ ನೀಡುವ Intergovernmental Panel on Climate Change (IPCC)ಯ ಅಂದಾಜಿನಂತೆ 2050ರ ಹೊತ್ತಿಗೆ ಕರಾವಳಿ ಪ್ರವಾಹ, ಸಾಗರತಟಗಳ ಭೂಕೊರೆತ ಮತ್ತು ಕೃಷಿಯ ನಷ್ಟದಿಂದಾಗಿ ಸುಮಾರು 150 ಮಿಲಿಯನ್ ಪರಿಸರ ನಿರಾಶ್ರಿತರು ಇರುತ್ತಾರೆ. (150 ಮಿಲಿಯನ್ ಎಂದರೆ 2050ರ ಅಂದಾಜು 10 ಬಿಲಿಯನ್ ವಿಶ್ವ ಜನಸಂಖ್ಯೆಯ ಶೇಕಡಾ 1.5 ಭಾಗ.

ವಾಯುವ್ಯ ಸ್ಥಿತ್ಯಂತರ[ಬದಲಾಯಿಸಿ]

ವಾಯುಮಂಡಲ-ಸಾಗರ ಸಾಧಾರಣ ಪರಿಚಲನಾ ಮಾದರಿಯ ಪ್ರಯೋಗವೊಂದರಲ್ಲಿ ಕಂಡುಬಂದಂತೆ 1950ರ ದಶಕದಿಂದ 2050ರ ದಶಕದವರೆಗಿನ ಆರ್ಕ್‌ಟಿಕ್ ಮಂಜುಗಡ್ಡೆಯ ಸಾಂದ್ರತೆಯ ಬದಲಾವಣೆಗಳು ಕರಗುತ್ತಿರುವ ಆರ್ಕ್‌ಟಿಕ್ ಹಿಮವು ಬೇಸಿಗೆಯಲ್ಲಿ ವಾಯುವ್ಯ ದಾರಿಯನ್ನು ತೆರೆಯುವುದು ಮತ್ತು ಇದು ಯುರೋಪ್ ಮತ್ತು ಏಷ್ಯಾಗಳ ನಡುವಣ ಸುಮಾರು 5,000 ನಾಟಿಕಲ್ ಮೈಲು(9,000 ಕಿಮೀ)ಗಳಷ್ಟು ಹಡಗುಪ್ರಯಾಣವನ್ನು ಕಡಿಮೆಗೊಳಿಸುತ್ತದೆ. ಪನಾಮಾ ಕಾಲುವೆಯ ಮೂಲಕ ತಮ್ಮ ಗಾತ್ರದ ಕಾರಣದಿಂದಾಗಿ ಹಾದುಹೋಗಲು ಸಾಧ್ಯವಾಗದೆ ದಕ್ಷಿಣ ಅಮೆರಿಕಾದ ಭೂಶಿರವನ್ನು ತಾಕಿ ಹೋಗಬೇಕಾಗಿರುವ ಸುಪರ್‌ಟ್ಯಾಂಕರ್ಗಳಿಗೆ ಬಹಳ ಪ್ರಯೋಜನವುಂಟಾಗುವುದು. Canadian Ice Serviceನ ಪ್ರಕಾರ 1969 ಮತ್ತು 2004ರ ನಡುವೆ ಕೆನಡಾದ ಪೂರ್ವಭಾಗದ ಆರ್ಕ್‌ಟಿಕ್ ಆರ್ಚಿಪೆಲಾಗೋನ ಒಟ್ಟು ಹಿಮವು ಶೇಕಡಾ 15ರಷ್ಟು ಕಡಿಮೆಯಾಗಿದೆ.ಸೆಪ್ಟೇಂಬರ್ 2007ರಲ್ಲಿ, ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ವಾಯುವ್ಯ ಹಾದಿಯು ಹಡಗುಗಳು ಹಾದುಹೋಗಲು ಅನುಕೂಲವಾಗುವಷ್ಟು ದೂರದವರೆಗೆ ಆರ್ಕ್‌ಟಿಕ್ ಹಿಮದ ಹೊದಿಕೆ ಹಿಂದೆ ಹೋಗಿತ್ತು ಆಗಸ್ಟ್ 2008ರಲ್ಲಿ, melting ಸಮುದ್ರ ಹಿಮದ ಕರಗುವಿಕೆಯಿಂದ ಒಂದೇ ಬಾರಿಗೆ ವಾಯುವ್ಯ ಹಾದಿ ಮತ್ತು ಉತ್ತರ ಸಮುದ್ರ ಹಾದಿಗಳು ತೆರೆದುಕೊಂಡಿದ್ದರಿಂದ ಆರ್ಕ್‌ಟಿಕ್ ಐಸ್ ಕ್ಯಾಪ್‌ನ ಸುತ್ತ ನೌಕಾಯಾನ ಮಾಡುವುದು ಸಾಧ್ಯವಾಯಿತು.ಆಗಸ್ಟ್ 25, 2008ರಂದು ವಾಯುವ್ಯ ಹಾದಿ ತೆರೆಯಿತು ಮತ್ತು ಉತ್ತರ ಸಮುದ್ರ ಹಾದಿಗೆ ತಡೆಯಾಗಿದ್ದ ಹಿಮದ ಹೊರಚಾಚು ಮುಂದಿನ ಕೆಲವೇ ದಿನಗಳಲ್ಲಿ ಕರಗಿಹೋಯಿತು. ಆರ್ಕ್ಟಿಕ್ ಕುಗ್ಗುವಿಕೆಯಿಂದಾಗಿ ಜರ್ಮನಿಯ ಬ್ರೆಮೆನ್ಬೆಲುಗಾ ಸಮೂಹವು 2009ರಲ್ಲಿ ತಮ್ಮ ಹಡಗನ್ನು ಮೊದಲನೇ ಬಾರಿಗೆ ಉತ್ತರ ಸಮುದ್ರ ಹಾದಿಯ ಮೂಲಕ ಕಳುಹಿಸುವ ಉದ್ದೇಶವನ್ನು ಘೋಷಿಸಿತು.

ಅಭಿವೃದ್ಧಿ[ಬದಲಾಯಿಸಿ]

ಜಾಗತಿಕ ತಾಪಮಾನ ಏರಿಕೆಯ ಒಟ್ಟು ಪರಿಣಾಮಗಳು ಬಹಳ ವ್ಯತಿರಿಕ್ತವಾಗಿದ್ದು ಈ ಪರಿಣಾಮಗಳನ್ನು ಉಪಶಮನಗೊಳಿಸಲು ಯಾವುದೇ ಸಂಪನ್ಮೂಲಗಳನ್ನು ಹೊಂದಿಲ್ಲದ ಜನರು ಮತ್ತು ರಾಷ್ಟ್ರಗಳ ಮೇಲೆ ಹೆಚ್ಚು ತೀವ್ರವಾಗಿರುತ್ತವೆ. ಇದರಿಂದಾಗಿ ಆರ್ಥಿಕ ಬೆಳವಣಿಗೆt ಮತ್ತುd ಬಡತನದ ನಿರ್ಮೂಲನಗಳನ್ನು ಮಂದಗೊಳಿಸಿ, Millennium Development Goalsಗಳನ್ನು ಸಾಧಿಸುವುದಕ್ಕೆ ಅಡ್ಡಿಯುಂಟುಮಾಡುತ್ತವೆ.ಅಕ್ಟೋಬರ್ 2004ರಲ್ಲಿ Working Group on Climate Change and Development ಎಂಬ ಅಭಿವೃದ್ಧಿ ಮತ್ತು ಪರಿಸರ NGOಗಳ ಸಂಯೋಜನೆಯು ಅಭಿವೃದ್ಧಿಯ ಮೇಲೆ ಹವಾಗುಣ ಬದಲಾವಣೆಯ ಪರಿಣಾಮಗಳನ್ನು ತೋರಿಸುವ ಅಪ್ ಇನ್ ಸ್ಮೋಕ್ ಎಂಬ ವರದಿಯೊಂದನ್ನು ಬಿಡುಗಡೆ ಮಾಡಿತು. ಈ ವರದಿ ಮತ್ತು ಜುಲೈ 2005ರ ಇನ್ನೊಂದು ವರದಿಯಾದ ಆಫ್ರಿಕಾ-ಅಪ್ ಇನ್ ಸ್ಮೋಕ್?] ಗಳಲ್ಲಿ ವಿಶೇಷವಾಗಿ ಆಫ್ರಿಕಾದಲ್ಲಿ ಕಡಿಮೆ ಮಳೆ ಮತ್ತು ವಿಪರೀತ ಹವಾಗುಣ ವಿದ್ಯಮಾನಗಳಿಂದಾಗಿ ಹಸಿವು ಮತ್ತು ರೋಗಗಳು ಹೆಚ್ಚಾಗುವುವೆಂದು ಹೇಳಲಾಗಿದೆ. ಇವುಗಳ ಪರಿಣಾಮಗಳಿಗೆ ತುತ್ತಾದವರ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮಗಳುಂಟಾಗುವ ಸಾಧ್ಯತೆಗಳಿವೆ.

ಪರಿಸರ ವ್ಯವಸ್ಥೆಗಳು[ಬದಲಾಯಿಸಿ]

ತಡೆಹಿಡಿಯದೆ ಹೋದ ಜಾಗತಿಕ ತಾಪಮಾನ ಏರಿಕೆಯಿಂದ ಹೆಚ್ಚಿನ ಭೌತಿಕ ಜೀವಪ್ರದೇಶಗಳ ಮೇಲೆ ಪರಿಣಾಮ ಬೀರಬಹುದು. ಹೆಚ್ಚುತ್ತಿರುವ ಜಾಗತಿಕ ತಾಪಮಾನ ಎಂದರೆ ಜೀವವ್ಯವಸ್ಥೆಗಳು ಬದಲಾಗುತ್ತವೆ; ಕೆಲವು ಜೀವಪ್ರಭೇದಗಳು ಬದಲಾಗುತ್ತಿರುವ ಸ್ಥಿತಿಗಳಿಂದಾಗಿ ತಮ್ಮ ನೆಲೆಗಳಿಂದ ಹೊರದೂಡಲ್ಪಡುತ್ತಿದ್ದು(ಬಹುಶಃ ಅಳಿವಿನಂಚಿಗೆ ಬಂದಿದ್ದು), ಇನ್ನಿತರ ಪ್ರಭೇದಗಳು ವೃದ್ಧಿಗೊಳ್ಳುತ್ತವೆ. ಜಾಗತಿಕ ತಾಪಮಾನ ಏರಿಕೆಯ ಅನುಷಂಗಿಕ ಪರಿಣಾಮಗಳಾದ ಕಡಿಮೆಯಾದ ಹಿಮದ ಹೊದಿಕೆ, ಸಮುದ್ರ ಮಟ್ಟಗಳಲ್ಲಿ ಏರಿಕೆ, ಹಾಗೂ ಹವಾಮಾನ ಬದಲಾವಣೆಗಳು ಮಾನವ ಚಟುವಟಿಕೆಗಳ ಮೇಲಷ್ಟೇ ಅಲ್ಲ, ಜೀವವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತವೆ. ಭೂಮಿಯ ಹವಾಮಾನ ಬದಲಾವಣೆಗಳು ಮತ್ತು ಜೀವಸಂಕುಲಗಳ ಅಳಿವಿನ ನಡುವೆ ಕಳೆದ 520 ಮಿಲಿಯನ್ ವರ್ಷಗಳಿಂದ ಇರುವ ಸಂಬಂಧವನ್ನು ಅಧ್ಯಯನ ಮಾಡುತ್ತಿರುವ University of Yorkನ ವಿಜ್ಞಾನಿಗಳು ಬರೆಯುತ್ತಾರೆ - "ಬರಲಿರುವ ಶತಮಾನಗಳಲ್ಲಿ ಇರುತ್ತದೆನ್ನಲಾದ ಜಾಗತಿಕ ತಾಪಮಾನಗಳು ಒಂದು ಹೊಸ ’ಸಮೂಹ ಅಳಿವಿನ ವಿದ್ಯಮಾನ’ಕ್ಕೆ ಕಾರಣವಾಗಬಹುದು ಮತ್ತು ಇದರಿಂದಾಗಿ ಭೂಮಿಯ ಶೇಕಡಾ 50 ಭಾಗದಷ್ಟು ಪ್ರಾಣಿ ಮತ್ತು ಸಸ್ಯಸಂಕುಲಗಳು ನಾಶವಾಗುವುವು. ಅಪಾಯದಲ್ಲಿರುವ ಕೆಲವು ಜೀವಪ್ರಭೇದಗಳು ಆರ್ಕ್‌ಟಿಕ್ ಮತ್ತು ಅಂಟಾರ್ಕ್‌ಟಿಕ್‌ನ ಪ್ರಾಣಿಪಕ್ಷಿಗಳಾದ ಧ್ರುವಕರಡಿಗಳುಮತ್ತು ಎಂಪರರ್ ಪೆಂಗ್ವಿನ್ಗಳನ್ನು ಒಳಗೊಂಡಿದೆ. ಆರ್ಕ್‌ಟಿಕ್‌ನಲ್ಲಿ ಹಡ್ಸನ್ ಬೇಯಲ್ಲಿನ ನೀರು ಇಂದು ಮೂವತ್ತು ವರ್ಷ ಹಿಂದೆ ಇದ್ದಿದ್ದಕ್ಕಿಂತ ಮೂರುವಾರ ಹೆಚ್ಚು ಅವಧಿಯವರೆಗೆ ಮಂಜುಗಡ್ಡೆ ಮುಕ್ತವಾಗಿದ್ದು ಇದರಿಂದ ಸಮುದ್ರದ ಮಂಜುಗಡ್ಡೆಗಳ ಮೇಲೆ ಬೇಟೆಯಾಡುವುದನ್ನು ಬಯಸುವ ಧ್ರುವಕರಡಿಗಳಿಗೆ ತೊಂದರೆಯಾಗುತ್ತದೆ. ಸೈತ್ಯಪೂರ್ಣ ಹವಾಗುಣಗಳ ಮೇಲೆ ಅವಲಂಬಿತವಾಗಿರುವ ಕೆಲವು ಜೀವಪ್ರಭೇದಗಳು, ಉದಾಹರಣೆಗೆ ತಣ್ಣಗಿನ ಚಳಿಗಾಲವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಲೆಮ್ಮಿಂಗ್‌ಗಳನ್ನು ಬೇಟೆಯಾಡುವ ಗಿರ್‌ಫಾಲ್ಕನ್ಗಳು, ಹಾಗೂ ಸ್ನೋವೀ ಔಲ್ಗಳಿಗೆ ಬಹಳ ತೊಂದರೆಯುಂಟಾಗಬಹುದು ಸಾಗರದ ಅಕಶೇರುಕಗಳು ತಾವು ಹೊಂದಿಕೊಂಡಿರುವ ಪಮಾನಗಳಲ್ಲಿ, ಅದು ಎಷ್ಟೇ ತಣ್ಣಗಿರಲಿ, ಅತ್ಯಧಿಕ ಬೆಳವಣಿಗೆ ಹೊಂದುತ್ತವೆ, ಮತ್ತು ಎತ್ತರದ ಅಕ್ಷಾಂಶಗಳು ಮತ್ತು ಉನ್ನತಪ್ರದೇಶಗಳಲ್ಲಿ ಕಂಡುಬರುವ ಶೀತರಕ್ತ ಪ್ರಾಣಿಗಳು ಬೆಳವಣಿಗೆಯ ಋತುವಿನ ಕಡಿಮೆ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುವ ಸಲುವಾಗಿ ವೇಗವಾಗಿ ಬೆಳೆಯುತ್ತವೆ.[೧] ಲಾಡ್ಜ್‌ಪೋಲ್ ಪೈನ್ ಮರಗಳನ್ನು (ನವೆಂಬರ್ 2008ರಂತೆ) ಕೊಂದಿದ್ದು ಇದು ಹಿಂದೆ ದಾಖಲಾದ ಯಾವುದೇ ಕೀಟದ ಪಿಡುಗಿಗಿಂತ ಗಣನೀಯವಾಗಿ ಬೃಹತ್ ಗಾತ್ರದ್ದಾಗಿದೆಹಾಗೂ ಭೂಖಂಡದ ವಿಭಜನೆಯ ಜಾಗದಲ್ಲಿ 2007ರಲ್ಲಿ ಬೀಸುತ್ತಿದ್ದ ಬಹಳ ವೇಗವಾದ ಗಾಳಿಯನ್ನೂ ದಾಟಿ ಅಲ್ಬರ್ಟಾಗೆ ಬಂದು ತಲುಪಿತು. ಇದೇ ರೀತಿಯ ಇನ್ನೊಂದು ಪಿಡುಗು, ಸ್ವಲ್ಪ ಸಣ್ಣ ಗಾತ್ರದಲ್ಲಿ 1999ರ ಹೊತ್ತಿಗೆ ಕೊಲೊರಾಡೋ, ವ್ಯೋಮಿಂಗ್, ಮತ್ತು ಮೊಂಟಾನಾಗಳಲ್ಲಿ ಆರಂಭವಾಯಿತು. ಯುನೈಟೆಡ್ ಸ್ಟೇಟ್ಸ್‌ನ ಅರಣ್ಯ ಇಲಾಖೆಯವರ ಪ್ರಕಾರ 2011 ಮತ್ತು 2013ರ ನಡುವೆ ಕೊಲೊರಾಡೋನ ಐದು ಇಂಚುಗಳಿಗಿಂತ ಹೆಚ್ಚು ಸುತ್ತಳತೆಯ ಸುಮಾರು ಎಲ್ಲಾ Script error ಲಾಡ್ಜ್‌ಪೋಲ್ ಪೈನ್ ಮರಗಳು ನಷ್ಟವಾಗುತ್ತವೆ ಉತ್ತರದ ಅರಣ್ಯಗಳು ಇಂಗಾಲದ ತೊಟ್ಟಿಗಳಾಗಿರುವುದರಿಂದ, ಸತ್ತ ಅರಣ್ಯಗಳು ಇಂಗಾಲದ ಪ್ರಮುಖ ಮೂಲವಾಗಿದ್ದು ಇಂತಹ ಬೃಹತ್ ವಿಸ್ತಾರದ ಅರಣ್ಯಗಳ ನಷ್ಟದಿಂದಾಗಿ ಜಾಗತಿಕ ತಾಪಮಾನ ಏರಿಕೆಯ ಮೇಲೆ ಧನಾತ್ಮಕ ಪ್ರಭಾವವುಂಟಾಗುತ್ತದೆ. ನಿಕೃಷ್ಟ ವರುಷಗಳ ಅವಧಿಯಲ್ಲಿ ಬೀಟ್‌ಲ್ ಪಿಡುಗಿನಿಂದುಂಟಾಗುವ ಇಂಗಾಲದ ಹೊರಸೂಸುವಿಕೆಯು ಇಡೀ ಕೆನಡಾದ ವಾರ್ಷಿಕ ಸರಾಸರಿ ಕಾಳ್ಗಿಚ್ಚುಗಳ ಇಂಗಾಲ ಹೊರಸೂಸುವಿಕೆ ಅಥವಾ ಆ ದೇಶದ ಐದು ವರುಷಗಳ ಸಾರಿಗೆ ಚಲನೆಯಿಂದುಂಟಾಗುವ ಇಂಗಾಲ ಹೊರಸೂಸುವಿಕೆಗೆ ಸಮಾನವಾಗಿವೆ ಕೂಡಲೇ ಉಂಟಾಗುವ ಜೀವವ್ಯವಸ್ಥೆಯ ಮತ್ತು ಆರ್ಥಿಕವ್ಯವಸ್ಥೆಗಳ ಮೇಲಿನ ಪರಿಣಾಮಗಳನ್ನು ಬಿಟ್ಟರೆ, ಈ ಸತ್ತ ಬೃಹತ್ ಅರಣ್ಯಗಳಿಗೆ ಕಾಳ್ಗಿಚ್ಚಿನ ಅಪಾಯವಿದೆ. ಬೆಚ್ಚಗಾಗುತ್ತಿರುವ ಹವಾಗುಣದಿಂದಾಗಿ ಹಲವಾರು ಆರೋಗ್ಯಪೂರ್ಣ ಅರಣ್ಯಗಳಿಗೂ ಕಾಳ್ಗಿಚ್ಚುಗಳ ಅಪಾಯ ಬಂದೊದಗಿದೆ. ಉತ್ತರ ಅಮೆರಿಕಾದ ಬೋರಿಯಲ್ ಅರಣ್ಯಗಳ ಹತ್ತು ವರ್ಷಗಳ ಕಾಳ್ಗಿಚ್ಚಿನ ಸರಾಸರಿಯು ಹಲವಾರು ದಶಕಗಳವರೆಗೆ 10,000 km²(2.5 ಮಿಲಿಯನ್ ಎಕರೆಗಳು)ನಷ್ಟಿದ್ದುದು 1970ರಿಂದೀಚೆಗೆ ವಾರ್ಷಿಕವಾಗಿ 28,000 km²(7 ಮಿಲಿಯನ್ ಎಕರೆಗಳು)ನಷ್ಟಾಗಿದೆ ಈ ಬದಲಾವಣೆಯು ಅರಣ್ಯ ನಿರ್ವಹಣಾ ಪದ್ಧತಿಗಳಲ್ಲಿ ಆಗಿರಬಹುದಾದ ಬದಲಾವಣೆಗಳಿಂದ ಆಗಿರಬಹುದಾದರೂ, ಪಶ್ಚಿಮ ಯು.ಎಸ್ ನಲ್ಲಿ 1986ರಿಂದೀಚಿನ ಸಮಯದಲ್ಲಿ 1970ರಿಂದ 1986ರವರೆಗಿನ ಅವಧಿಯನ್ನು ಪರಿಗಣಿಸುವುದಾದಲ್ಲಿ ಬಿಸಿಯಾದ ಬೇಸಿಗೆಗಳಿಂದಾಗಿ ದೊಡ್ಡ ಕಾಳ್ಗಿಚ್ಚುಗಳು ನಾಲ್ಕುಪಟ್ಟು ಮತ್ತು ಸುಟ್ಟುಹೋದ ಅರಣ್ಯದ ವಿಸ್ತೀರ್ಣವು ಆರುಪಟ್ಟು ಹೆಚ್ಚಾಗಿದೆ. ಇದೇ ರೀತಿಯ ಕಾಳ್ಗಿಚ್ಚು ಚಟುವಟಿಕೆಗಳು ಕೆನಡಾದಲ್ಲಿ 1920ರಿಂದ 1999ರವರೆಗೆ ವರದಿಯಾಗಿವೆ1997ರಿಂದೀಚೆಗೆ ಇಂಡೋನೇಶಿಯಾದ ಕಾಳ್ಗಿಚ್ಚುಗಳೂ ಕೂಡ ನಾಟಕೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಅರಣ್ಯಗಳಲ್ಲಿರುವ ಕೃಷಿಯ ಭಾಗವನ್ನು ಅಚ್ಚುಕಟ್ಟು ಮಾಡುವ ಸಲುವಾಗಿ ಹಲವಾರು ಬಾರಿ ಈ ಬೆಂಕಿಗಳನ್ನು ಹಚ್ಚಲಾಗುತ್ತದೆ. ಇದರಿಂದಾಗಿ ಈ ಪ್ರಾಂತ್ಯದ ದೊಡ್ಡ ಪೀಟ್ ಜೌಗುಪ್ರದೇಶಗಳಿಗೆ ಬೆಂಕಿ ಹತ್ತಿಕೊಂಡು ಈ ಪೀಟ್ ಜೌಗುಗಳ ಎಂಕಿಯಿಂದ ಹೊರಸೂಸುವ CO₂ನ ಪ್ರಮಾಣವು ಫಾಸಿಲ್ ಫ್ಯುಯೆಲ್ ಕಂಬಶ್ಚನ್‌ನಿಂದ ಹುಟ್ಟಿಕೊಳ್ಳುವ CO₂ನ ಶೇಕಡಾ 15ರಷ್ಟಿದೆ.<r


ಪರ್ವತಗಳು[ಬದಲಾಯಿಸಿ]

ಪರ್ವತಗಳು ಭೂಮಿಯ ಒಟ್ಟು ಮೇಲ್ಮೈನ ಸುಮಾರು ಶೇಕಡಾ 25 ಭಾಗದಷ್ಟಿದ್ದು ಜಾಗತಿಕ ಜನಸಂಖ್ಯೆಯ ಹತ್ತನೇ ಒಂದು ಭಾಗಕ್ಕೆ ಆಶ್ರಯ ನೀಡಿವೆ. ಜಾಗತಿಕ ಹವಾಗುಣದಲ್ಲಿನ ಬದಲಾವಣೆಗಳು ಪರ್ವತಗಳಲ್ಲಿ ವಾಸಿಸುವವರಿಗೆ ಹಲವಾರು ಅಪಾಯಗಳನ್ನೊಡ್ಡುವ ಸಾಧ್ಯತೆಗಳಿವೆ ಸಂಶೋಧಕರು ಕಾಲಾನುಕ್ರಮದಲ್ಲಿ ಹವಾಗುಣ ಬದಲಾವಣೆಯು ಪರ್ವತ ಹಾಗೂ ತಗ್ಗುಪ್ರದೇಶಗಳ ಜೀವವ್ಯವಸ್ಥೆಗಳ ಮೇಲೆ, ಕಾಳ್ಗಿಚ್ಚುಗಳ ತೀವ್ರತೆ ಮತ್ತು ಮರುಕಳಿಸುವಿಕೆಯಲ್ಲಿ, ಅರಣ್ಯದ ಜೀವವ್ಯವಸ್ಥೆಯ ವೈವಿಧ್ಯತೆಯ ಮೇಲೆ ಹಾಗೂ ನೀರಿನ ವಿತರಣೆಯ ಮೇಲೆ ಪರಿಣಾಮ ಬೀರಬಹುದೆಂದು ನಿರೀಕ್ಷಿಸುತ್ತಿದ್ದಾರೆ.ಅಧ್ಯಯನಗಳ ಪ್ರಕಾರ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹವಾಗುಣವು ಇನ್ನೂ ಬೆಚ್ಚಗಾದರೆ ಕಡಿಮೆ ಎತ್ತರದಲ್ಲಿರುವ ಪರಿಸರಗಳು ಎತ್ತರದ ಆಲ್‌ಪೈನ್ ವಲಯದವರೆಗೂ ಹರಡುವ ಸಾಧ್ಯತೆಗಳಿವೆ ಜೊಯೆಲ್ ಬಿ. ಸ್ಮಿಥ್ ಮತ್ತು ಡೆನಿಸ್ ಟಿರ್ಪಾಕ್ US-EPA ಡಿಸೆಂಬರ್ 1989</ref> ಈ ರೀತಿಯ ಸ್ಥಳಾಂತರದಿಂದಾಗಿ ಅಪರೂಪದ ಆಲ್‌ಪೈನ್ ಹುಲ್ಲುಗಾವಲುಗಳು ಮತ್ತು ಇತರ ಎತ್ತರಪ್ರದೇಶದ ನೆಲೆಗಳ ಮೇಲೆ ಇವು ಅತಿಕ್ರಮಣ ಮಾಡುತ್ತವೆ. ಹೆಚ್ಚು ಎತ್ತರಪ್ರದೇಶಗಳಲ್ಲಿರುವ ಸಸ್ಯಗಳು ಮತ್ತು ಪ್ರಾಣಿಗಳು ಸ್ಥಳೀಯ ಹವಾಗುಣದ ದೀರ್ಘಕಾಲೀನ ಬದಲಾವಣೆಗಳಿಗೆ ಹೊಂದಿಕೊಳ್ಳಲು ಪರ್ವತಗಳಲ್ಲಿ ಮತ್ತೂ ಎತ್ತರಕ್ಕೆ ಹೋಗುವುದರಿಂದ ಹೊಸ ನೆಲೆಗಳಿಗೆ ಬಹಳ ಕಡಿಮೆ ಸ್ಥಳ ದೊರಕುವುದು. ಹವಾಗುಣದ ಬದಲಾವಣೆಗಳು ಪರ್ವತ ಹಿಮಾಚ್ಛಾದನೆ ಮತ್ತು ಗ್ಲೇಶಿಯರ್‌ಗಳ ಆಳದ ಮೇಲೆ ಪರಿಣಾಮ ಬೀರುತ್ತವೆ. ಅವುಗಳ ಋತುಮಾನ ಕರಗುವಿಕೆಯಲ್ಲಿ ಯಾವುದೇ ಮಟ್ಟದ ಬದಲಾವಣೆಗಳು ಪರ್ವತಗಳ ಕರಗಿದ ತಾಜಾನೀರಿನ ಹರಿವಿನ ಮೇಲೆ ಅವಲಂಬಿತವಾಗಿರುವ ಪ್ರದೇಶಗಳಮೇಲೆ ಬಲವಾದ ಪ್ರಭಾವ ಬೀರಬಹುದು. ಹೆಚ್ಚುವ ಉಷ್ಣತೆಯಿಂದಾಗಿ ಹಿಮವು ವಸಂತಕಾಲದಲ್ಲಿ ಬೇಗನೆ ಮತ್ತು ಹೆಚ್ಚು ವೇಗವಾಗಿ ಕರಗುವುದರಿಂದ ಹರಿವಿನ ಸಮಯ ಮತ್ತು ವಿತರಣೆಯಲ್ಲಿ ವ್ಯತ್ಯಾಸಗಳುಂಟಾಗಬಹುದು. ಈ ಬದಲಾವಣೆಗಳು ನೈಸರ್ಗಿಕ ವ್ಯವಸ್ಥೆಗಳು ಹಾಗೂ ಮಾನವ ಉಪಯೋಗಕ್ಕೆ ಬರುವಂತಹ ತಾಜಾನೀರಿನ ಲಭ್ಯತೆಯ ಮೇಲೆ ಪ್ರಭಾವ ಬೀರಬಹುದು

ಜೀವವ್ಯವಸ್ಥೆಗಳ ಉತ್ಪಾದಕತೆ[ಬದಲಾಯಿಸಿ]

ಸ್ಮಿತ್ ಮತ್ತು ಹಿಟ್ಜ್ 2003ರಲ್ಲಿ ಮಂಡಿಸಿದ ಲೇಖನವೊಂದರ ಪ್ರಕಾರ ಸರಾಸರಿ ಜಾಗತಿಕ ತಾಪಮಾನದ ಏರಿಕೆ ಹಾಗೂ ಜೀವವ್ಯವಸ್ಥೆಯ ಉತ್ಪಾದನಾ ಸಾಮರ್ಥ್ಯಗಳ ನಡುವಿನ ಸಂಬಂಧವು ಲಾಕ್ಷಣಿಕವಾದ್ದೆಂದು ತಾರ್ಕಿಕವಾಗಿ ಊಹಿಸಬಹುದು. ಇಂಗಾಲದ ಡೈಯಾಕ್ಸೈಡ್‌ನ ಹೆಚ್ಚುವ ಸಾಂದ್ರತೆಯು ಗಿಡಮರಗಳ ಬೆಳವಣಿಗೆಗೆ ಹೆಚ್ಚು ಪೂರಕವಾಗುವುದು ಮಾತ್ರವಲ್ಲದೆ ಹೆಚ್ಚು ನೀರನ್ನು ಬೇಡುತ್ತದೆ. ಹೆಚ್ಚಿನ ತಾಪಮಾನಗಳು ಮೊದಮೊದಲಿನಲ್ಲಿ ಸಸ್ಯಗಳ ಬೆಳವಣಿಗೆಗೆ ಪೂರಕವಾಗಿ ಕಾಣಬಹುದು. ಕ್ರಮೇಣವಾಗಿ ಉಚ್ಛ್ರಾಯವನ್ನು ತಲುಪಿದ ಈ ಬೆಳವಣಿಗೆಯು ಕ್ಷೀಣಿಸಲು ಆರಂಭಿಸುವುದು.[೨] ಏಪ್ರಿಲ್ 2008ರಲ್ಲಿ ನೀಡಿದ ಅದರ ವರದಿಯಲ್ಲಿ ಉಷ್ಣತೆಯಲ್ಲಿನ ಏರಿಕೆಯ ಕಾರಣದಿಂದಾಗಿ ಪಪುವಾ ನ್ಯೂಗಿನಿಹೈಲ್ಯಾಂಡ್ ಪ್ರದೇಶದಲ್ಲಿ ಮಲೇರಿಯಾ ಜ್ವರಗಳ ಸಂಖ್ಯೆ ಹೆಚ್ಚಾಗಲಿದೆಯೆಂದು ತಿಳಿಸಲಾಯಿತು.

ಮಕ್ಕಳು[ಬದಲಾಯಿಸಿ]

2007ರಲ್ಲಿ, American Academy of Pediatrics ಜಾಗತಿಕ ಹವಾಮಾನ ಬದಲಾವಣೆ ಮತ್ತು ಮಕ್ಕಳ ಆರೋಗ್ಯ ದ ಬಗೆಗಿನ ನೀತಿಯ ವರದಿಯಲ್ಲಿ ಈ ರೀತಿಯಾಗಿ ಹೇಳಿದರು: ಹವಾಗುಣ ಬದಲಾವಣೆಯಿಂದ ನೇರವಾಗಿ ಆರೋಗ್ಯದ ಮೇಲೆ ಉಂಟಾಗಬಹುದಾದ ಕೆಲವು ಪರಿಣಾಮಗಳೆಂದರೆ ಹವಾಮಾನ ವೈಪರೀತ್ಯದ ಘಟನೆಗಳು and ನೈಸರ್ಗಿಕ ಅನಾಹುತಗಳು, ಹವಾಮಾನ-ಸೂಕ್ಶ್ಮ ಸಾಂಕ್ರಾಮಿಕರೋಗಗಳು, increases in ಹವಾಮಾಲಿನ್ಯ-ಸಂಬಂಧೀ ಖಾಯಿಲೆಗಳು, ಹಾಗೂ ಉಷ್ಣತೆಗೆ ಸಂಬಂಧಿಸಿದ, ಹೆಚ್ಚು ಮಾರಕವಾದ ಕಾಯಿಲೆಗಳು. ಈ ಎಲ್ಲಾ ಪಂಗಡಗಳಲ್ಲಿ, ಇತರ ವರ್ಗಗಳಿಗೆ ಹೋಲಿಸಿದಾಗ ಮಕ್ಕಳಿಗೆ ಉಂಟಾಗಬಹುದಾದ ಅಪಾಯಗಳು ಹೆಚ್ಚಾಗಿವೆ 2008-04-29ರಂದು, ಒಂದು UNICEF UK ವರದಿಯು ಕಂಡುಕೊಂಡ ಪ್ರಕಾರ ಜಾಗತಿಕ ತಾಪಮಾನ ಏರಿಕೆಯು ಈಗಾಗಲೆ ಪ್ರಪಂಚದಾದ್ಯಂತ ಹೆಚ್ಚು ಸೂಕ್ಷ್ಮವಾಗಿರುವ ಮಕ್ಕಳ ಜೀವನಮಟ್ಟವನ್ನು ಅಪಾಯಕ್ಕೊಡ್ಡಿರುವುದಷ್ಟೇ ಅಲ್ಲ, ವಿಶ್ವಸಂಸ್ಥೆಯ Millennium Development Goals ಅನ್ನು ಸಾಧಿಸಲು ಕಷ್ಟಕರ ಪರಿಸ್ಥಿತಿಯನ್ನು ತಂದೊಡ್ಡಿದೆ. ಜಾಗತಿಕ ತಾಪಮಾನ ಏರಿಕೆಯು ಶುದ್ಧ ನೀರು ಮತ್ತು ಆಹಾರ ಸಾಮಗ್ರಿಗಳು, ಅದರಲ್ಲೂ ವಿಶೇಷವಾಗಿ ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ದುರ್ಲಭವಾಗುವ ಸಾಧ್ಯತೆಗಳಿವೆ. ಅನಾಹುತಗಳು, ಹಿಂಸೆ ಮತ್ತು ರೋಗಗಳು ಹೆಚ್ಚುಹೆಚ್ಚಾಗಿ ನಡೆಯುವುದರಿಂದ, ಭವಿಷ್ಯದ ಅತ್ಯಂತ ಬಡ ಮಕ್ಕಳ ಭವಿಷ್ಯವು ಬಹಳ ದುರ್ಗಮವಾಗಿದೆ.

ಭದ್ರತೆ[ಬದಲಾಯಿಸಿ]

Military Advisory Board ಎಂಬ ನಿವೃತ್ತ ಯು.ಎಸ್.ಜನರಲ್‌ಗಳು ಹಾಗೂ ಅಡ್ಮಿರಲ್‌ಗಳ ಸಮಿತಿಯು "National Security and the Threat of Climate Change." ಎಂಬ ಶೀರ್ಷಿಕೆಯ ವರದಿಯೊಂದನ್ನು ಬಿಡುಗಡೆ ಮಾಡಿತು. ಈ ವರದಿಯ ಪ್ರಕಾರ ಜಾಗತಿಕ ತಾಪಮಾನ ಏರಿಕೆಯಿಂದ ಭದ್ರತಾ ವಿವಕ್ಷೆಗಳುಂಟಾಗಬಹುದೆಂದೂ, ಈಗಾಗಲೇ ಸೂಕ್ಷ್ಮ ಪ್ರದೇಶಗಳೆನ್ನಿಸಿಕೊಂಡಲ್ಲಿ ಇದು "ಬೆದರಿಕೆಯನ್ನು ಹೆಚ್ಚುಮಾಡು"ವುದೆಂದೂ ಈ ವರದಿಯು ಎಣಿಕೆಹಾಕಿದೆ.[೩] ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ಮಾರ್ಗರೆಟ್ ಬೆಕೆಟ್ರವರ ವಾದದ ಪ್ರಕಾರ "ಅಸ್ಥಿರ ಹವಾಗುಣವು ಸಂಘರ್ಷವನ್ನು ಹೆಚ್ಚಿಸುವಂಥ ವಲಸೆಯ ಒತ್ತಡಗಳು ಮತ್ತು ಸಂಪನ್ಮೂಲಗಳಿಗಾಗಿ ಸ್ಪರ್ಧೆಯೇ ಮುಂತಾದವನ್ನು ಉಲ್ಬಣಗೊಳಿಸುತ್ತದೆ. U.N. Council Hits Impasse Over Debate on Warming]. The New York Times, ಏಪ್ರಿಲ್ 17, 2007.2007ರ ಮೇ 8ರಂದು ಪುನರ್ಪಡೆದದ್ದು ಇದಕ್ಕೂ ಕೆಲವು ವಾರಗಳ ಮುನ್ನ ಯು.ಎಸ್ ಸೆನೇಟರುಗಳಾದ ಚಕ್ ಹೇಗೆಲ್ (R-NB) ಮತ್ತು ರಿಚರ್ಡ್ ಡರ್ಬಿನ್ (D-IL) ಯು.ಎಸ್. ಕಾಂಗ್ರೆಸ್‌ನಲ್ಲಿ ಪರಿಚಯಿಸಿದ ಕರಡು ಮಸೂದೆಯೊಂದರ ಪ್ರಕಾರ ಫೆಡರಲ್ ಗುಪ್ತಚರ ಏಜೆನ್ಸಿಗಳು ಹವಾಮಾನ ಬದಲಾವಣೆಗಳಿಂದುಂಟಾಗಬಹುದಾದ ಭದ್ರತಾ ಸವಾಲುಗಳ ಮೌಲ್ಯಮಾಪನ ಮಾಡಲೆಂದು ಒಂದು National Intelligence Estimate ಅನ್ನು ಮಾಡಲು ಒಂದಾಗಬೇಕೆಂದು ತಿಳಿಸಲಾಗಿತ್ತು Salon, April 9, 2007. 2007ರ ಮೇ 8ರಂದು ನರ್ಪಡೆದದ್ದು.</ref> ನವೆಂಬರ್ 2007ರಂದು, Center for Strategic and International Studies ಮತ್ತು ಹೊಸದಾಗಿ ಸ್ಥಾಪಿಸಲಾದ Center for a New American Security ಎಂಬ ವಾಷಿಂಗ್ಟನ್ನಿನ ಎರಡು ಥಿಂಕ್ ಟ್ಯಾಂಕ್‌ಗಳು ಮೂರು ವಿವಿಧ ಜಾಗತಿಕ ತಾಪಮಾನ ಏರಿಕೆ ಪರಿಸ್ಥಿತಿಗಳಲ್ಲಿ ಪ್ರಪಂಚದಾದ್ಯಂತ ಉಂಟಾಗಬಹುದಾದ ಭದ್ರತಾ ವಿವಕ್ಷೆಗಳ ಬಗೆಗೆ ಒಂದು ವರದಿಯನ್ನು ಪ್ರಕಟಿಸಿದರು. ಈ ವರದಿಯು ಮೂರು ವಿವಿಧ ಪರಿಸ್ಥಿತಿಗಳ ಬಗ್ಗೆ ಪರ್ಯಾಲೋಚನೆ ಮಾಡುತ್ತದೆ - ಇವುಗಳಲ್ಲಿ ಎರಡು ಸುಮಾರು 30ವರ್ಷಗಳದ್ದಾಗಿದ್ದರೆ, ಇನ್ನೊಂದು ಸುಮಾರು 2100ರವರೆಗಿನ ಪರಿಸ್ಥಿತಿಯನ್ನು ಪರಿಗಣಿಸುತ್ತದೆ. ಅದರ ಸಾಮಾನ್ಯ ಫಲಿತಾಂಶಗಳ ಪ್ರಕಾರ ಪ್ರವಾಹಗಳು "...ಪ್ರಾದೇಶಿಕ ಮತ್ತು ರಾಷ್ಟ್ರೀಯ ಅನನ್ಯತೆಗಳಿಗೂ ಸವಾಲೊಡ್ಡುವ ಸಾಮರ್ಥ್ಯವನ್ನು ಹೊಂದಿದೆ. ರಾಷ್ಟ್ರಗಳ ನಡುವೆ ಸಂಪನ್ಮೂಲಗಳಿಗಾಗಿ ಸಶಸ್ತ್ರ ಸಂಘರ್ಷಗಳು, ಉದಾಹರಣೆಗೆ ನೈಲ್ ಮತ್ತು ಅದರ ಉಪನದಿಗಳ ನಡುವೆ, ನಡೆಯಬಹುದು.." ಹಾಗೂ "ಏರುವ ಉಷ್ಣತೆ ಮತ್ತು ಸಮುದ್ರಮಟ್ಟಗಳಿಂದ ಉಂಟಾಗಬಹುದಾದ ದೊಡ್ಡ ತೊಂದರೆಯೆಂದರೆ ದೇಶಗಳ ಒಳಗೆ ಮತ್ತು ಈಗಿರುವ ಗಡಿರೇಖೆಗಳಲ್ಲಿ ನಡೆಯಬಹುದಾದ ದೊಡ್ಡಮಟ್ಟದ ಜನರ ವಲಸೆಹೋಗುವಿಕೆಗಳು.2009ರ ಒಂದು ಅಧ್ಯಯನವು ಏರುತ್ತಿರುವ ಉಷ್ಣತೆ ಮತ್ತು ಹಿಂಸೆಯ ನಡುವಿನ ಸಂಬಂಧವಿರುವುದೆಂಬ ಊಹೆಯನ್ನು ಪ್ರಶ್ನಿಸುತ್ತದೆ. ರಿಚರ್ಡ್ ಟಾಲ್ ಮತ್ತು ಸೆಬ್ಯಾಸ್ಟಿಯನ್ ವ್ಯಾಗ್ನರ್ 1000 ಮತ್ತು 2000ದವರೆಗೆ ಯುರೋಪಿನ ಹವಾಗುಣ ಹಾಗೂ ಸಂಘರ್ಷಗಳ ಬಗೆಗಿನ ದತ್ತಾಂಶವನ್ನು ಸಂಗ್ರಹಿಸಿದರು. ಅವರು 18ನೇ ಶತಮಾನದ ನಡುಭಾಗದವರೆಗೂ ಸರಾಸರಿ ಉಷ್ಣತೆ ಮತ್ತು ಸಂಘರ್ಷಗಳ ಸಂಖ್ಯೆಯ ನಡುವೆ ಗಮನಾರ್ಹವಾದ ಋಣಾತ್ಮಕ ಸಂಬಂಧವಿತ್ತೆಂದೂ, ಆದರೆ ಈ ಕಾಲಘಟ್ಟದ ನಂತರ ಈ ಸಂಬಂಧವು ತನ್ನ ಸಮತೋಲನವನ್ನು ಕಾಪಾಡಿಕೊಂಡು ಬಂದಿದೆಯೆಂಬ ನಿರ್ಣಯಕ್ಕೆ ಬಂದರು. ಟಾಲ್ ಮತ್ತು ವ್ಯಾಗ್ನರ್ ಔದ್ಯಮಿಕ ಕ್ರಾಂತಿಯ ವೇಳೆಗೆ ಕೃಷಿ ಮತ್ತು ಸಾರಿಗೆಯಲ್ಲಿ ಅಭಿವೃದ್ಧಿಯುಂಟಾದಾಗ ಯುದ್ಧ ಮತ್ತು ಶೈತ್ಯಪೂರ್ಣ ಹವಾಗುಣದ ನಡುವಿನ ಸಂಬಂಧ ಮುಗಿದುಹೋಯಿತೆಂದೂ ಎಂದು ವಾದಿಸಿದರು. The Economist ಸಲಹೆ ನೀಡುವ ಪ್ರಕಾರ ಅವರ ಅಧ್ಯಯನದಿಂದ ಹವಾಮಾನದಿಂದ ಉಂಟಾಗುವ ಸಂಘರ್ಷಗಳನ್ನು ಬೆಳೆ ಅಭಿವೃದ್ಧಿಯ ಪ್ರಕ್ರಿಯೆಯಿಂದ ಗಣನೀಯವಾಗಿ ಕಡಿಮೆಗೊಳಿಸಬಹುದು.[೪]
Cite error: <ref> tags exist, but no <references/> tag was found