ಜನಾ ಕೃಷ್ಣಮೂರ್ತಿ
ಬಿಜೆಪಿ ಅಧ್ಯಕ್ಷ | ೨೦೦೧-೨೦೦೨ |
---|---|
ಜನ್ಮ ದಿನಾಂಕ | ೨೪ ಮೇ ೧೯೨೮ |
ಸ್ಥಳದಲ್ಲಿ ಜನನ | ಮಧುರೈ, ಭಾರತ |
ಮರಣ ದಿನಾಂಕ | ಸೆಪ್ಟೆಂಬರ್ ೨೫, ೨೦೦೭ |
ಮರಣ ಸ್ಥಳ | ಚೆನೈ, ಭಾರತ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ವೃತ್ತಿ | ರಾಜಕಾರಣಿ, ವಕೀಲ |
ಕೆ ಜನಾ ಕೃಷ್ಣಮೂರ್ತಿ (೨೪ ಮೇ ೧೯೨೮ – ೨೫ ಸೆಪ್ಟೆಂಬರ್ ೨೦೦೭) ಅವರು ಭಾರತದ ರಾಜಕೀಯ ನಾಯಕರಾಗಿದ ್ದು ೨೦೦೧ರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಅಧ್ಯಕ್ಷರಾಗಿದ್ದರು. ಅವರು ಕೇಂದ್ರ ಕಾನೂನು ಸಚಿವ ಮತ್ತು ಭಾರತದ ಸಂಸತ್ತಿನ ಸದಸ್ಯರು ಕೂಡ ಆಗಿದ್ದರು.
ಆರಂಭಿಕ ಜೀವನ
[ಬದಲಾಯಿಸಿ]ಕೃಷ್ಣಮೂರ್ತಿಯವರು ತಮಿಳುನಾಡಿನ ಮಧುರೈನಲ್ಲಿ ಜನಿಸಿದರು ಮತ್ತು ಅವರ ಮಾತೃ ಭಾಷೆ ತೆಲುಗು ಆಗಿತ್ತು. ಅವರು ಚೆನ್ನೈನ ಕಾನೂನು ಕಾಲೇಜಿನ ಹೀರಿಯ ವಿದ್ಯಾರ್ಥಿಯಾಗಿದ್ದರು. ೧೯೬೫ರಲ್ಲಿ ಅವರು ಮಧುರೈನಲ್ಲಿಯ ತಮ್ಮ ಯಶಸ್ವಿ ಕಾನೂನು ವೃತ್ತಿಯನ್ನು ತ್ಯಜಿಸಿ ಅರ್ ಎಸ್ ಎಸ್ ನ ಆಗಿನ ಮುಖ್ಯಸ್ಥ ಎಂ. ಎಸ್. ಗೊಲವಾಲ್ಕರ್, ಅವರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ಪ್ರವೇಶಿಸಿದರು.
ರಾಜಕೀಯ ವೃತ್ತಿಜೀವನ
[ಬದಲಾಯಿಸಿ]೧೯೪೦ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರೀಯ ಸ್ವಯಂ ಸೇವಕರಾಗಿದ್ದ ಅವರು, ತಮಿಳುನಾಡಿನಲ್ಲಿ ಭಾರತೀಯ ಜನ ಸಂಘದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ದಕ್ಷಿಣ ಭಾರತದಲ್ಲಿ ಅಪರಿಚಿತವಾಗಿದ್ದ ಜನಸಂಘವನ್ನು ಅವರು ಪ್ರಚುರ ಪಡಿಸುವಲ್ಲಿ ತುಂಬಾ ಕ್ರಿಯಾಶೀಲರಾಗಿದ್ದರು.
೧೯೭೫ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ, ಅವರು ತಮಿಳುನಾಡಿನ ಪ್ರತಿರೋಧ ಚಳವಳಿಯ ಕಾರ್ಯದರ್ಶಿಯಾಗಿದ್ದರು . ೧೯೭೭ರಲ್ಲಿ ಜನತಾ ಪಕ್ಷದ, ಜೊತೆ ಜನಸಂಘವು ವಿಲೀನಗೊಂಡಾಗ ಅವರು ಅದರ ತಮಿಳುನಾಡು ಘಟಕದ ಪ್ರಧಾನ ಕಾರ್ಯದರ್ಶಿ ಆಗಿದ್ದರು. ೧೯೮೦ರಲ್ಲಿ, ಅವರು ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಎಸ್ಎಸ್ ಭಂಡಾರಿ, ಖುಶಾಭಾವು ಠಾಕ್ರೆ ಮತ್ತು ಜಗನ್ನಾಥರಾವ್ ಜೋಷಿವಯವರ ಜೊತೆಗೂಡಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಥಾಪನೆಗೆ ಸಹಾಯ ಮಾಡಿದರು. ಅವರು ಅದರ ಸಂಸ್ಥಾಪಕ ರಾಷ್ಟ್ರೀಯ ಕಾರ್ಯದರ್ಶಿ ಕೂಡ ಆಗಿದ್ದರು. ನಂತರ ೧೯೮೩ರಲ್ಲಿ, ಸಾಮಾನ್ಯ ಕಾರ್ಯದರ್ಶಿಗಳಾಗಿ ಮತ್ತು ೧೯೮೫ರಲ್ಲಿ ಪಕ್ಷದ ಉಪಾಧ್ಯಕ್ಷರು ಕೂಡ ಆದರು.
೧೯೮೦ರಿಂದ ೧೯೯೦ರವರೆಗೆ, ದಕ್ಷಿಣದ ನಾಲ್ಕು ರಾಜ್ಯಗಳಾದ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಬಿಜೆಪಿ ವಿಸ್ತರಿಸಲು ಅವರು ಸಹಾಯ ಮಾಡಿದರು.
೧೯೯೩ರಲ್ಲಿ ಎಲ್. ಕೆ. ಅಡ್ವಾಣಿಯವರ ಕೋರಿಕೆಯ ಮೇರೆಗೆ ಅವರು ದೆಹಲಿಗೆ ತೆರಳಿದರು ಮತ್ತು ಬಿಜೆಪಿಯ ಆರ್ಥಿಕ, ರಕ್ಷಣಾ ಮತ್ತು ವಿದೇಶಾಂಗ ನೀತಿಯ ಬೌದ್ಧಿಕ ಘಟಕ ಸ್ಥಾಪಿಸಿದರು. ೧೯೯೫ ನಂತರ ಅವರು ಬಿಜೆಪಿಯ ಪ್ರಧಾನ ಕಛೇರಿಯ ಉಸ್ತುವಾರಿಯನ್ನು ಸಹ ವಹಿಸಿಕೊಂಡರು ಅಲ್ಲದೇ ಅವರು ಪಕ್ಷದ ವಕ್ತಾರ ಕರ್ತವ್ಯವನ್ನು ಕೂಡ ನಿರ್ವಹಿಸಿದರು. ೧೯೯೮ ರಲ್ಲಿ, ಕೃಷ್ಣಮೂರ್ತಿಯವರು ಚೆನ್ನೈನ ದಕ್ಷಿಣ ಲೋಕಸಭಾ ಮತಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಅತ್ಯಂತ ಸಣ್ಣ ಅಂತರದಲ್ಲಿ ಸೋಲು ಅನುಭವಿಸಿದರು. ೨೦೦೧ರ ಮಾರ್ಚ್ ೧೪ರಂದು ಬಂಗಾರು ಲಕ್ಷ್ಮಣ್ ಅವರಿಂದ ಬಿಜೆಪಿ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡರು. ಜೂನ್ ೨೦೦೨ ರವರೆಗೆ ಅವರು ಆ ಕಚೇರಿಯನ್ನು ನಿರ್ವಹಿಸಿದರು.
ಕೃಷ್ಣಮೂರ್ತಿಯವರು ನಂತರ ಅಟಲ್ ಬಿಹಾರಿ ವಾಜಪೇಯಿಯವರ ಸಚಿವ ಸಂಪುಟದಲ್ಲಿ ಕೇಂದ್ರ ಕಾನೂನು ಮಂತ್ರಿಯಾದರು. ಒಂದೇ ವರ್ಷದಲ್ಲಿ ಅನಾರೋಗ್ಯದ ಕಾರಣ ಅವರು ಕೆಳಗಿಳಿಯಬೇಕಾಯಿತು. ಅವರು ರಾಜ್ಯಸಭೆಯಲ್ಲಿ ಗುಜರಾತ್ [೧] ರಾಜ್ಯವನ್ನು ಪ್ರತಿನಿಧಿಸುವ ಸಂಸತ್ತ ಸದಸ್ಯರಾಗಿದ್ದರು ಮತ್ತು ಸಂಸತ್ತಿನ ಸ್ಥಾಯಿ ಸಮಿತಿಗಳಾದ ಬಾಹ್ಯ ವ್ಯವಹಾರ ಮತ್ತು ರಕ್ಷಣಾ ಸಮಿತಿಯ ಸಕ್ರಿಯ ಸದಸ್ಯರು ಕೂಡ ಆಗಿದ್ದರು. ಅಲ್ಲದೇ ಅವರು ಪಿಟಿಶನ್ ಸಮಿತಿಯ ಅಧ್ಯಕ್ಷರು ಸಹ ಆಗಿದ್ದರು. ಅವರ ಅಧಿಕಾರಾವಧಿಯನ್ನು ಪೆಟ್ರೋಲ್ ಕಲಬೆರಕೆಯ ವರದಿಗೋಸ್ಕರ ನೆನೆಯಲಾಗುತ್ತದೆ.
ಮರಣ
[ಬದಲಾಯಿಸಿ]ಕೃಷ್ಣಮೂರ್ತಿಯವರು ೨೫ ಸೆಪ್ಟೆಂಬರ್ ೨೦೦೭ ರಂದು ನಿಧನರಾದರು. ಅವರು ಚೆನೈನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಮತ್ತು ಉಸಿರಾಟದ ಸಂಭಂದಿತ ಸಮಸ್ಯೆಗೆ ತುತ್ತಾದರು. ಅವರು ತಮ್ಮ ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ೩ ಹೆಣ್ಣು ಮಕ್ಕಳನ್ನು ಅಗಲಿದರು.
ಇದನ್ನುಸಹ ನೋಡಿ
[ಬದಲಾಯಿಸಿ]- ಹಿಂದೂ ರಾಷ್ಟ್ರೀಯತಾವಾದಿ ಪಕ್ಷಗಳು
ಉಲ್ಲೇಖಗಳು
[ಬದಲಾಯಿಸಿ]- ↑ "Rajya Sabha members". Archived from the original on 2019-02-14. Retrieved 2009-12-31.Check date values in:
|access-date=
(help)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Janaji.com Archived 2011-02-02 ವೇಬ್ಯಾಕ್ ಮೆಷಿನ್ ನಲ್ಲಿ.
- Life Sketch of Jana Krishnamurthi Archived 2007-10-18 ವೇಬ್ಯಾಕ್ ಮೆಷಿನ್ ನಲ್ಲಿ.
- Rediff Interview
- Report on Petrol Adulteration Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ.
- India's Cleanest Politician Archived 2007-06-21 at Archive.is
- Profile on Rajya Sabha website