ವಿಷಯಕ್ಕೆ ಹೋಗು

ಚಿತ್ರಾನ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರಾನ್ನ
ಮೂಲ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಕರ್ನಾಟಕ
ವಿವರಗಳು
ಸೇವನಾ ಸಮಯಉಪಹಾರ
ಮುಖ್ಯ ಘಟಕಾಂಶ(ಗಳು)ಅನ್ನ
ಪ್ರಭೇದಗಳುಮಾವಿನಕಾಯಿ ಚಿತ್ರಾನ್ನ, ನಿಂಬೆಹಣ್ಣು ಚಿತ್ರಾನ್ನ, ಈರುಳ್ಳಿ ಚಿತ್ರಾನ್ನ, ಕಾಯಿ ಸಾಸಿವೆ ಚಿತ್ರಾನ್ನ

ಚಿತ್ರಾನ್ನ ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ತಯಾರಿಸಲಾದ ಅನ್ನದ ಒಂದು ಖಾದ್ಯ. ಇದನ್ನು ಅನ್ನವನ್ನು ಒಗ್ಗರಣೆ ಅಥವಾ ಗೊಜ್ಜಿನೊಂದಿಗೆ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಒಗ್ಗರಣೆಯಲ್ಲಿ ವಿಶಿಷ್ಟವಾದವುಗಳೆಂದರೆ ಸಾಸಿವೆ ಬೀಜಗಳು, ಕರಿದ ಬೇಳೆಗಳು, ಕಡಲೇಕಾಯಿ, ಕರಿಬೇವು, ಮೆಣಸಿನಕಾಯಿ, ನಿಂಬೆರಸ ಮತ್ತು ಮಾವಿನಕಾಯಿಯ ಹೆರೆತದಂತಹ ಇತರ ಐಚ್ಛಿಕ ಪದಾರ್ಥಗಳು. ಸೇರಿಸಿದ ಅರಿಸಿನ ಪುಡಿಯು ಚಿತ್ರಾನ್ನಕ್ಕೆ ಅದರ ಹಳದಿ ಬಣ್ಣವನ್ನು ನೀಡುತ್ತದೆ. ಕೆಲವರು ಒಗ್ಗರಣೆಯಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಗಳನ್ನು ಕೂಡ ಬಳಸುತ್ತಾರೆ. ಆದರೆ ಇವು ಸಾಂಪ್ರದಾಯಿಕವಾಗಿ ಪಾಕವಿಧಾನದ ಭಾಗವಾಗಿರುವುದಿಲ್ಲ. ಈ ಖಾದ್ಯವು ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದಲ್ಲಿ ಜನಪ್ರಿಯವಾಗಿದೆ. ಇಲ್ಲಿ ಇದು ದೈನಂದಿನ ಆಹಾರದ ಭಾಗವಾಗಿಬಿಟ್ಟಿದೆ.

ವಿಧಗಳು[ಬದಲಾಯಿಸಿ]

ಬಳಸಲಾದ ಪದಾರ್ಥಗಳನ್ನು ಅವಲಂಬಿಸಿ, ವಿವಿಧ ಬಗೆಯ ಚಿತ್ರಾನ್ನಗಳನ್ನು ತಯಾರಿಸಬಹುದು:

  • ನಿಂಬೆಹಣ್ಣು ಚಿತ್ರಾನ್ನ : ಇದೇ ಪ್ರಸಿದ್ಧ 'ಲೆಮನ್ ರೈಸ್'. ಅನ್ನವನ್ನು ಅರಿಶಿನ ಮತ್ತು ನಿಂಬೆ ರಸದೊಂದಿಗೆ ಮಿಶ್ರಣಮಾಡಿ ಇದನ್ನು ತಯಾರಿಸಲಾಗುತ್ತದೆ.
  • ಈರುಳ್ಳಿ ಚಿತ್ರಾನ್ನ : ಬಾಡಿಸಿದ ಈರುಳ್ಳಿ, ಸಾಸಿವೆ ಬೀಜಗಳು, ಕಡಲೆ ಬೇಳೆ ಮತ್ತು ಹಸಿರು ಮೆಣಸಿನಕಾಯಿಯನ್ನು ಅನ್ನದೊಂದಿಗೆ ಮಿಶ್ರಣ ಮಾಡಲಾಗುತ್ತದೆ.
  • ಮಾವಿನಕಾಯಿ ಚಿತ್ರಾನ್ನ : ಮಾವಿನಕಾಯಿಯನ್ನು ಪೇಸ್ಟ್ ಆಗಿ ರುಬ್ಬಿಕೊಂಡು ಅನ್ನದೊಂದಿಗೆ ಮಿಶ್ರಣ ಮಾಡಲಾಗುತ್ತದೆ.
  • ಕಾಯಿ ಸಾಸಿವೆ ಚಿತ್ರಾನ್ನ : ತೆಂಗಿನಕಾಯಿ ತುರಿ ಮತ್ತು ಸಾಸಿವೆ ಬೀಜಗಳನ್ನು ಪೇಸ್ಟ್ ಆಗಿ ರುಬ್ಬಿಕೊಂಡು ಅನ್ನದೊಂದಿಗೆ ಮಿಶ್ರಣ ಮಾಡಲಾಗುತ್ತದೆ.