ಚರ್ಚೆಪುಟ:ಭೀಮಸೇನ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧. ಕುಂತಿಯ ಐದು ಜನ ಮಕ್ಕಳಲ್ಲಿ - ಎಂಬ ವಾಕ್ಯವನ್ನು ಪಾಂಡವರಲ್ಲಿ ಎಂದು ಬದಲಾಯಿಸಬಹುದಲ್ಲವೇ? ಕರ್ಣನೂ ಕುಂತಿಯ ಮಗನಾದ್ದರಿಂದ, ಕುಂತಿಗೆ ಆರು ಜನ ಮಕ್ಕಳು.

೨. ಭೀಮನು ಮಧ್ಯಮ ಪಾಂಡವನಲ್ಲ. ಭೀಮ ಅರ್ಜುನನಿಗಿಂತ ದೊಡ್ಡವನು (ಎರಡನೇ ಪಾಂಡವ). ಮಧ್ಯಮ ಪಾಂಡವ ಎಂದು ಖ್ಯಾತಿ ಪಡೆದವನು ಅರ್ಜುನ. - ಮನ|Mana Talk - Contribs ೧೫:೧೪, ೮ ಆಗಸ್ಟ್ ೨೦೦೬ (UTC)


ಮನ, ನಿಮ್ಮ ಪ್ರಶ್ನೆ ನನ್ನನ್ನು ಯೋಚಿಸುವಂತೆ ಮಾಡಿತು. ಭೀಮನನ್ನು ಮಧ್ಯಮ ಎನ್ನುತ್ತಾರೆ. (ಅರ್ಜುನನನ್ನೂ ಮಧ್ಯಮ ಎನ್ನುತ್ತಾರೇನೋ?) ಯಾವ ಕಾರಣದಿಂದ ಭೀಮನಿಗೆ ಈ ಹೆಸರು ಬಂದಿತು ಎಂಬುದನ್ನು ತಿಳಿಯಬೇಕಾಗಿದೆ. ಸಂಸ್ಕೃತ ಕವಿ ಭಾಸನು "ಮಧ್ಯಮ ವ್ಯಾಯೋಗ" ಎಂಬ ಪ್ರಸಿದ್ಧ ನಾಟಕವನ್ನು ಬರೆದಿದ್ದಾನೆ. - http://www.bhavans.info/store/bookdetail.asp?bid=165&bauth=Sudha+Bhattacharjee
ಪಾಂಡವರು ಎಂದರೆ ಪಂಚ ಪಾಂಡವರು ಎಂದೇ ಪ್ರಸಿದ್ಧರು. ಕರ್ಣನು ಅದರಲ್ಲಿ ಸೇರಿಲ್ಲ. ನಾನು ಬರೆದಿರುವ "ಕುಂತಿಯ ಐದು ಜನ ಮಕ್ಕಳಲ್ಲಿ" ಎಂಬ ವಾಕ್ಯವನ್ನು ಬೇಕಿದ್ದರೆ ಬದಲಿಸಬಹುದು. ನಿಮ್ಮ ಲೆಕ್ಕದಂತೆ ತೆಗೆದುಕೊಂಡರೆ ಕುಂತಿಗೆ ನಾಲ್ಕು ಜನ ಮಕ್ಕಳು. :) ನಕುಲ, ಸಹದೇವರು ಕುಂತಿಯ ಮಕ್ಕಳಲ್ಲ, ಮಾದ್ರಿಯ ಮಕ್ಕಳಲ್ಲವೇ?.
ವಿವಾಹ ಪೂರ್ವದಲ್ಲಿ ಜನಿಸಿದ ಕರ್ಣನನ್ನು ಬಿಟ್ಟು, ಕುಂತಿಗೆ ಮೂರು ಜನ ಮಕ್ಕಳು - ಅವರಲ್ಲಿ ಭೀಮ ನಡುವಿನವನು - ಈ ಕಾರಣದಿಂದ ಭೀಮ ಮಧ್ಯಮನಾದನೇ? ತಿಳಿಯದು. ತಿಳಿದವರು ಈ ವಿಷಯದ ಬಗ್ಗೆ ಬೆಳಕು ಚೆಲ್ಲಲಿ.
ಇನ್ನೊಂದು ವಿಶೇಷ: ಪುಟ್ಟಣ್ಣ ಕಣಗಾಲ್ ಅವರ ಪಡುವಾರಳ್ಳಿ ಪಾಂಡವರು ಚಿತ್ರದಲ್ಲಿಯೂ ಐದೇ ಜನ ನಾಯಕರು. :) ತ್ರಿವೇಣಿ ಚರ್ಚೆ - ಕಾಣಿಕೆಗಳು ೧೬:೧೭, ೮ ಆಗಸ್ಟ್ ೨೦೦೬ (UTC)


ಕರ್ಣನು ಪಾಂಡವರಲ್ಲಿ ಒಬ್ಬ ಎಂದು ನಾನೆಲ್ಲಿ ಹೇಳಿದೆ? :)
ಪಾಂಡವ = ಪಾಂಡುವಿನ ಮಗ. ಪಾಂಡವರು = ಪಾಂಡುವಿನ ಮಕ್ಕಳು. ಕರ್ಣನು ಪಾಂಡುವಿನ ಮಗನಲ್ಲ, ಹಾಗಾಗಿ ಅವನು ಪಾಂಡವರಲ್ಲಿ ಒಬ್ಬನಾಗಲು ಸಾಧ್ಯವಿಲ್ಲ.
ಈ ಐವರು ಪಾಂಡವರು: ೧.ಯುಧಿಷ್ಠಿರ (ಧರ್ಮರಾಯ) ೨.ಭೀಮಸೇನ ೩.ಅರ್ಜುನ ೪.ನಕುಲ ೫.ಸಹದೇವ.
ಅಂದರೆ ಮಧ್ಯದಲ್ಲಿ ಇರುವವನು ಅರ್ಜುನ. ಹಾಗಾಗಿ, ಅರ್ಜುನನೇ ಮಧ್ಯಮ ಪಾಂಡವ.
ಹುಣಸೂರು ಕೃಷ್ಣಮೂರ್ತಿ ಸಂಭಾಷಣೆ, ನಿರ್ದೇಶನದ ಬಬ್ರುವಾಹನ ಕನ್ನಡ ಚಲನಚಿತ್ರದ ಸಂಭಾಷಣೆಯಲ್ಲಿಯೂ ಅರ್ಜುನನನ್ನು ಮಧ್ಯಮ ಪಾಂಡವ ಎಂದು ಕರೆಯಲಾಗಿದೆ. ಮತ್ತಾವುದಾದರೂ ಪುರಾವೆ ಸಿಕ್ಕಿದರೆ ತಿಳಿಸುವೆ. - ಮನ|Mana Talk - Contribs ೧೬:೪೬, ೮ ಆಗಸ್ಟ್ ೨೦೦೬ (UTC)


ಭೀಮನನ್ನು ಮಧ್ಯಮ ಪಾಂಡವ ಎಂದು ನಾನು ಎಲ್ಲೂ ಕೇಳಿಲ್ಲ,ಅರ್ಜುನನು ಪಾಂಡವರಲ್ಲಿ ಮಧ್ಯದವನು - ನಾನುಯಾರು೧೬:೪೬, ೮ ಆಗಸ್ಟ್ ೨೦೦೬
ಅಂತರ್ಜಾಲದಲ್ಲಿ ಸ್ವಲ್ಪ ಜಾಲಾಡಿದಾಗ ಸಿಕ್ಕಿದ ಮಾಹಿತಿ:
" Indra – the Lord of Devas who wanted his son Arjuna, the madhyama pAndava to win against karna." - lists.cs.columbia.edu
"...The revelation of His(Krishna's) viswaroopam to Arjuna in the Kurukshetra battlefield despite being one such instance, the purpose was not only to make the Pandava Madhyama realise that he was bidding adieu to his swadharma of fighting for a just cause despite being a kshatriya but also to let the entire mankind become aware of its ultimate goal of realisation of the inner self,..." - The Hindu Newspaper
ಕೆಲವು ಬ್ಲಾಗ್ ಗಳಲ್ಲಿಯೂ ಈ ಬಗ್ಗೆ ಬರೆಯಲಾಗಿದೆ. ಆದರೆ, ಬ್ಲಾಗ್ ಗಳಲ್ಲಿನ ಮಾಹಿತಿಯನ್ನು ಇಲ್ಲಿ ಪರಿಗಣಿಸಲಾಗುವುದಿಲ್ಲವಾದ್ದರಿಂದ, ಅವನ್ನು ಹಾಕುತ್ತಿಲ್ಲ. - ಮನ|Mana Talk - Contribs ೧೭:೪೭, ೮ ಆಗಸ್ಟ್ ೨೦೦೬ (UTC)