ವಿಷಯಕ್ಕೆ ಹೋಗು

ಚಂದಮಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂದಮಾಮ
ವಿಭಾಗಗಳುಮಕ್ಕಳ ಮಾಸಪತ್ರಿಕೆ
ಆವರ್ತನಮಾಸಿಕ
ಸ್ಥಾಪನೆಯ ಇಸವಿ1947
ಕೊನೆಯ ಸಂಚಿಕೆ2013
ಕಂಪನಿಜಿಯೊಡೆಸಿಕ್ ಲಿಮಿಟೆಡ್ (ಹಿಂದೆ ಜಿಯೋಡೆಸಿಕ್ ಇನ್ಫರ್ಮೇಷನ್ ಸಿಸ್ಟಮ್ಸ್ ಲಿಮಿಟೆಡ್)
ದೇಶಭಾರತ
ಭಾಷೆಇಂಗ್ಲಿಷ್, ಮರಾಠಿ, (ಚಂದೋಬಾ), ಮಲಯಾಳಂ (ಅಂಬಿಲಿ ಅಮ್ಮವಾನ್), ಮತ್ತು ಬೆಂಗಾಲಿ (ಚಂದಮಾಮಾ), ತಮಿಳು (ಅಂಬುಲಿಮಾಮಾ), ತೆಲುಗು, ಕನ್ನಡ (ಚಂದಮಾಮಾ), ಸಂಸ್ಕೃತ, ಅಸ್ಸಾಮಿ, ಹಿಂದಿ, ಒಡಿಯಾ (ಜಹ್ನಮಾಮು)

ಚೆನ್ನೈನಿಂದ ಹೊರಡುತ್ತಿದ್ದ ಮಕ್ಕಳ ಮಾಸಪತ್ರಿಕೆ. ಒಟ್ಟು ಓದುಗರ ಸಂಖ್ಯೆ ಸು. 200,000ಕ್ಕೂ ಮೀರಿತ್ತು. ಇದರ ಸ್ಥಾಪಕರು ಬಿ ನಾಗಿರೆಡ್ಡಿ ಮತ್ತು ಚಕ್ರಪಾಣಿ. ಸಂಪಾದಕರು ಮತ್ತು ಬಿ ವಿಶ್ವನಾಥರೆಡ್ಡಿ. 21 x 17ಸೆ.ಮೀ. ಆಕಾರದ ಬಿಡಿ ಪತ್ರಿಕೆಯ ಬೆಲೆ ರೂ.1 (ಫೆಬ್ರವರಿ 1974 ರಂದು) ಪ್ರತಿ ತಿಂಗಳ ಒಂದರಂದು ಪ್ರಕಟವಾಗುತ್ತಿತ್ತು. ೨೦೧೩ ಮಾರ್ಚಿನಿಂದ ಚಂದಮಾಮಾ ಪ್ರಕಟವಾಗುತ್ತಿಲ್ಲ.

ವಿವಿಧ ಭಾಷೆಗಳಲ್ಲಿ

[ಬದಲಾಯಿಸಿ]

ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ, ಗುಜರಾತಿ, ಇಂಗ್ಲಿಷ್, ಮಲಯಾಳಂ, ಬಂಗಾಲಿ, ಒರಿಯ, ಸಿಂಧಿ, ಪಂಜಾಬಿ, ಅಸ್ಸಾಮೀ, ಸಿಂಹಳ, ಸಂತಾಲೀ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು. ಕನ್ನಡ, ತೆಲುಗು, ಹಿಂದಿ, ಗುಜರಾತಿ, ಇಂಗ್ಲಿಷ್, ಬಂಗಾಲಿಗಳಲ್ಲಿ ಚಂದ ಮಾಮ, ತಮಿಳಿನಲ್ಲಿ ಅಂಬುಲಿ ಮಾಮ, ಮಲಯಾಳಂನಲ್ಲಿ ಅಂಬಿ ಅಮ್ಮಾವನ್, ಮರಾಠಿಯಲ್ಲಿ ಚಂದೋಬ, ಒರಿಯದಲ್ಲಿ ಜಹ್ನ ಮಾಮು ಎಂದು ಪತ್ರಿಕೆಯ ಹೆಸರು. ಪತ್ರಿಕೆ ತಮಿಳು ತೆಲುಗುಗಳಲ್ಲಿ 1947 ರಲ್ಲೂ, ಕನ್ನಡದಲ್ಲಿ 1948 ರಲ್ಲೂ, ಹಿಂದಿಯಲ್ಲಿ 1949ರಲ್ಲೂ, ಮರಾಠಿಯಲ್ಲಿ 1952 ರಲ್ಲೂ, ಗುಜರಾತಿಯಲ್ಲಿ 1954ರಲ್ಲೂ, ಇಂಗ್ಲಿಷ್, ಮಲಯಾಳಂಗಳಲ್ಲಿ 1970ರಲ್ಲೂ, ಬಂಗಾಲಿ, ಒರಿಯ ಗಳಲ್ಲಿ 1972ರಲ್ಲೂ ಆರಂಭ ವಾಯಿತು.

ಉದ್ದೇಶ ಮತ್ತು ವೈಶಿಷ್ಟ್ಯಗಳು

[ಬದಲಾಯಿಸಿ]

ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಬೆಳೆಸುವುದು, ದೇಶದ ಭವ್ಯಪರಂಪರೆಯನ್ನೂ ಪ್ರಾಚೀನ ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನೂ ಕಥೆಗಳ ಮತ್ತು ಇತಿಹಾಸದ ವೃತ್ತಾಂತದ ನಿರೂಪಣೆಯ ಮೂಲಕ ಅವರಿಗೆ ಪರಿಚಯ ಮಾಡಿ ಕೊಡುವುದು ಚಂದಮಾಮದ ಉದ್ದೇಶಗಳು. ಬಣ್ಣ ಬಣ್ಣದ ಚಿತ್ರಗಳು, ದೇಶವಿದೇಶಗಳ ಕಥೆಗಳು, ಓದುಗರ ಇಂದ್ರಿಯ ಗ್ರಹಣಶಕ್ತಿಯನ್ನೂ ಕಲ್ಪನಾಶಕ್ತಿಯನ್ನೂ ಕುದುರಿಸುವ ದೃಷ್ಟಿಯಿಂದ ಏರ್ಪಡಿಸುವ ಛಾಯಾಚಿತ್ರ ಶೀರ್ಷಿಕೆ ಸ್ಪರ್ಧೆ-ಇವು ಚಂದಮಾಮದ ಕೆಲವು ವೈಶಿಷ್ಟ್ಯಗಳು. ಪತ್ರಿಕೆ ಮಕ್ಕಳ ವಿವಿಧ ರುಚಿಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲರಿಗೂ ಆಕರ್ಷಣೀಯವಾಗುವಂತೆ ಪ್ರಕಟವಾಗುತ್ತಿದೆ.

ಸಂಸ್ಕೃತ ಕೃತಿಯಾದ ವೇತಾಳ ಪಂಚವಿಂಶತಿ ಕೃತಿಯ ವಿಕ್ರಮ ಮತ್ತು ಬೇತಾಳ ಕಥೆ ಧಾರಾವಾಹಿಯಾಗಿ ಪ್ರಕಟವಾಗಿ ಈ ಪತ್ರಿಕೆ ತುಂಬ ಜನಪ್ರಿಯವಾಯಿತು.

ಈಗಿನ ಸ್ಥಿತಿ

[ಬದಲಾಯಿಸಿ]

೨೦೦೭ ರಲ್ಲಿ ಚಂದಮಾಮಾ ಅನ್ನು ಮುಂಬೈಯ ಜಿಯೊದೇಸಿಕ್ (Geodesic) ಎಂಬ ತಂತ್ರಾಂಶ ಕಂಪನಿಯನ್ನು ಖರೀದಿಸಿತು. ಡಿಜಿಟಲ್ ಯುಗಕ್ಕ್ಕೆ ಚಂದಮಾಮಾವನ್ನು ಒಯ್ಯಲು ಕಂಪನಿಯು ಬಯಸಿತ್ತು. ಆದರೆ ಈಗ ಆ ಕಂಪನಿಯೇ ಬಾಕಿ ಇರುವ ಸಾಲಗಳನ್ನು ಕೊಡದೆ, ಮುಂಬಯಿ ಉಚ್ಚ ನ್ಯಾಯಾಲಯದಿಂದ ಮುಚ್ಚಲು ಆದೇಶ ಹೊಂದಿದೆ. ಹೀಗಾಗಿ ೨೦೧೩ ಮಾರ್ಚಿನಿಂದ ಚಂದಮಾಮಾ ಪ್ರಕಟವಾಗುತ್ತಿಲ್ಲ.

ಆದರೆ ಚಂದಮಾಮಾ ಬ್ರ್ಯಾಂಡ್ ಮತ್ತು ಬೌದ್ಧಿಕ ಸ್ವಾಮ್ಯ ಹಕ್ಕುಗಳನ್ನು ಮುಂದೊಮ್ಮೆ ಮಾರಬಹುದಾಗಿದೆ. ಪತ್ರಿಕೆಯ ಅಧಿಕೃತ ಜಾಲತಾಣವನ್ನು ಪತ್ರಿಕೆಯ ಮಾಲೀಕರು ನಡೆಸುತ್ತಿಲ್ಲವಾಗಿದ್ದು ಸದ್ಯದ ಜಾಲತಾಣಕ್ಕೂ ಚಂದಮಾಮಾ ಪತ್ರಿಕೆಗೂ ಸಂಬಂಧವಿಲ್ಲ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚಂದಮಾಮ&oldid=891624" ಇಂದ ಪಡೆಯಲ್ಪಟ್ಟಿದೆ