ವಿಷಯಕ್ಕೆ ಹೋಗು

ಚಂಡಿ ಪ್ರಸಾದ್ ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂಡಿ ಪ್ರಸಾದ್ ಭಟ್
ಜನನ೨೩ ಜೂನ್ ೧೯೩೪
ಗೋಪೇಶ್ವರ್, ಚಮೋಲಿ, ಉತ್ತರಖಂಡ, ಭಾರತ
ವೃತ್ತಿಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ
ಸಕ್ರಿಯ ವರ್ಷಗಳು೧೯೬೦-
ಪೋಷಕ(ರು)ಗಂಗಾ ರಾಮ್ ಭಟ್ (ತಂದೆ), ಮಹೇಶಿ ದೇವಿ ತಪ್ಲಿಯಾಲ್ (ತಾಯಿ)
ಪ್ರಶಸ್ತಿಗಳುಗಾಂಧಿ ಶಾಂತಿ ಪುರಸ್ಕಾರ (೨೦೧೩)

ಚಂಡಿ ಪ್ರಸಾದ್ ಭಟ್ ಭಾರತದ ಗಾಂಧಿವಾದಿ ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ. ೧೯೬೪ರಲ್ಲಿ ದಶೋಲಿ ಗ್ರಾಮ ಸ್ವರಾಜ್ಯ ಸಂಘವನ್ನು ಗೋಪೇಶ್ವರದಲ್ಲಿ ಸ್ಥಾಪಿಸಿದರು, ನಂತರ ಇದು ಚಿಪ್ಕೊ ಚಳುವಳಿಯ ಮಾತೃ ಸಂಸ್ಥೆಯಾಯಿತು.[] ೧೯೮೨ರಲ್ಲಿ ಈ ಕೆಲಸಕ್ಕಾಗಿ ಅವರಿಗೆ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಮತ್ತು ೨೦೦೫ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ೨೦೧೩ರಲ್ಲಿ ಗಾಂಧಿ ಶಾಂತಿ ಪುರಸ್ಕಾರವನ್ನು ಸ್ವೀಕರಿಸಿದರು.

ಆರಂಭಿಕ ಜೀವನ

[ಬದಲಾಯಿಸಿ]

೨೩ ಜೂನ್ ೧೯೩೪ರಲ್ಲಿ ಗಂಗಾ ರಾಮ್ ಭಟ್ ಮತ್ತು ಮಹೇಶಿ ದೇವಿ ತಪ್ಲಿಯಾಲ್ ರವರ ಎರಡನೇ ಮಗನಾಗಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಇವರು ಉತ್ತರಖಂಡದ ಚಮೋಲಿ ಜಿಲ್ಲೆಯ ಗೋಪೇಶ್ವರದಲ್ಲಿ ತನ್ನ ತಾಯಿಯ ಆಶ್ರಯದಲ್ಲಿ ಬೆಳೆದರು.

ವೃತ್ತಿ ಜೀವನ

[ಬದಲಾಯಿಸಿ]

ಚಿಪ್ಕೊ ಚಳುವಳಿಯ ಪ್ರವರ್ತಕರಲ್ಲಿ ಒಬ್ಬರು. ಜಯಪ್ರಕಾಶ ನಾರಾಯಣರವರ ಭಾಷಣದಿಂದ ಸ್ಪೂರ್ತಿ ಪಡೆದುಕೊಂಡು, ಸರ್ವೋದಯ ಚಳುವಳಿ ಮತ್ತು ಗಾಂದಿ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೬೪ರಲ್ಲಿ ದಶೋಲಿ ಗ್ರಾಮ ಸ್ವರಾಜ್ಯವನ್ನು ಸ್ಥಾಪಿಸಿದರು. ಈ ಸಂಸ್ಥೆಯು ಗೋಪೇಶ್ವರ ಹಳ್ಳಿಯಲ್ಲಿ ವಾಸಿಸುವ ಜನರಿಗೆ ಅರಣ್ಯ ಆಧಾರಿತ ಕೈಗಾರಿಕೆಗಳಲ್ಲಿ, ಮರದ ಉಪಕರಣಗಳು ಮತ್ತು ಆಯುರ್ವೇದ ಔಷಧಿಗಳಿಗೆ ಗಿಡಮೂಲಿಕೆಗಳನ್ನು ಸಂಗ್ರಹಿಸುವ ಮತ್ತು ಮಾರಾಟ ಮಾಡುವ ಉದ್ಯೋಗವನ್ನು ಕಲ್ಪಿಸಿಕೊಟ್ಟಿತ್ತು.ರಷ್ಯಾ, ಅಮೇರಿಕಾ, ಜರ್ಮನ್, ಜಪಾನ್, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಫ್ರಾನ್ಸ್, ಮೆಕ್ಸಿಕೊ, ಸ್ಪೇನ್, ಚೀನಾ ಹೀಗೆ ಮುಂತಾದ ದೇಶಗಳಿಗೆ ಪ್ರಯಾಣಿಸಿ ಹಲವಾರು ರಾಷ್ಟೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ೨೦೦೩ರಲ್ಲಿ ರಾಷ್ಟ್ರೀಯ ಅರಣ್ಯ ಕಮಿಷನ್ ನ ಸದಸ್ಯರಾಗಿ ನೇಮಕಗೊಂಡಿದ್ದರು. ಚಂಡಿ ಪ್ರಸಾದ್ ರವರಿಗೆ ರಾಷ್ಟ್ರಿಯ ಏಕತೆಗಾಗಿ ಇಂದಿರಾ ಗಾಂಧಿ ಪುರಸ್ಕಾರವನ್ನು ನೀಡಿದ್ದಾರೆ.[]

ಪ್ರಶಸ್ತಿ ಮತ್ತು ಗೌರವ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. https://www.news18.com/news/india/chipko-movement-founder-chandi-prasad-bhatt-to-get-congress-indira-gandhi-award-for-national-integration-2341781.html
  2. https://www.business-standard.com/article/pti-stories/environmentalist-chandi-prasad-bhatt-awarded-indira-gandhi-award-for-national-integration-by-cong-119101100588_1.html
  3. "ಆರ್ಕೈವ್ ನಕಲು". Archived from the original on 2019-12-08. Retrieved 2019-12-08.
  4. https://timesofindia.indiatimes.com/india/Gandhi-Peace-Prize-for-Chandi-Prasad-Bhatt/articleshow/31231359.cms