ವಿಷಯಕ್ಕೆ ಹೋಗು

ಗ್ರೇಸ್ ಬ್ರೆವ್ಸ್ಟರ್ ಮುರ್ರೆ ಹಾಪರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಡ್ಮಿರಲ್ ಗ್ರೇಸ್ ಎಂ ಹಾಪರ್, ೧೯೮೪

ಗ್ರೇಸ್ ಬ್ರೆವ್ಸ್ಟರ್ ಮುರ್ರೆ ಹಾಪರ್ ( ೯ ಡಿಸೆಂಬರ್೧೯೦೬ - ೧ ಜನವರಿ ೧೯೯೨) ಅಮೇರಿಕಾದ ಗಣಕಯಂತ್ರ ವಿಜ್ಞಾನಿ ಹಾಗೂ ನೇವಿ ಅಡ್ಮಿರಲ್ ಆಗಿದ್ದರು.[] ೧೯೪೪ ರಲ್ಲಿ ಹಾರ್ವರ್ಡ್ ಮಾರ್ಕ್ ೧ ಗಣಕಯಂತ್ರದ ಮೊದಲ ಪ್ರೋಗ್ರಾಮರ್ಗಳಲ್ಲಿ ಒಬ್ಬರಾಗಿದ್ದರು.[]ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆಯ ಮೊದಲ ಕಂಪೈಲರನ್ನು ಆವಿಷ್ಕರಿಸಿದರು, ಹಾಗೂ ಯಂತ್ರ ಸ್ವತಂತ್ರವಾದ ಪ್ರೋಗ್ರಾಮಿಂಗ್ ಭಾಷೆಯನ್ನು ಜನಪ್ರಿಯಗೊಳಿಸಿದರು.ಇದರಿಂದಾಗಿ ಕೊಬಾಲ್ ಎಂಬ ಉನ್ನತ ಮಟ್ಟದ ಪ್ರೋಗ್ರಾಮಿಂಗ್ ಭಾಷೆ ರೂಪಗೊಂಡಿತು. ಆಕೆಯ ನೌಕಾ ಶ್ರೇಣಿಯ ಮತ್ತು ಸಾಧನೆಗಳ ಕಾರಣದಿಂದಾಗಿ ಇವರನ್ನು ಕೆಲವೊಮ್ಮೆ "ಅಮೇಜಿಂಗ್ ಗ್ರೇಸ್" ಎಂದು ಕರೆಯಲಾಗುತ್ತದೆ.[][] ಇವರ ಮರಣದನಂತರ ನವೆಂಬರ್ ೨೨, ೨೦೧೬ ರಂದು ಬರಾಕ್ ಒಬಾಮ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ಪದಕವನ್ನು ನೀಡಲಾಯಿತು.[]

ಆರಂಭಿಕ ಜೀವನ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ಹಾಪರ್ ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ತನ್ನ ಕುಟುಂಬದ ಮೂವರು ಮಕ್ಕಳಲ್ಲಿ ಹಿರಿಯಳಾಗಿದ್ದಳು. ಆಕೆಯ ಪೋಷಕರು, ವಾಲ್ಟರ್ ಫ್ಲೆಚರ್ ಮರ್ರಿ ಮತ್ತು ಮೇರಿ ಕ್ಯಾಂಪ್ಬೆಲ್ ವ್ಯಾನ್ ಹಾರ್ನೆ, ಡಚ್ ಮತ್ತು ಸ್ಕಾಟಿಷ್ ಮೂಲದವರು. ಆಕೆಯ ಮುತ್ತಜ್ಜ, ಅಲೆಕ್ಸಾಂಡರ್ ವಿಲ್ಸನ್ ರಸ್ಸೆಲ್, ಅಮೇರಿಕಾದ ನೌಕಾಪಡೆಯ ಅಡ್ಮಿರಲಾಗಿದ್ದರು ಹಾಗೂ ಅಂತರ್ಯುದ್ಧದ ಸಮಯದಲ್ಲಿ ಮೊಬೈಲ್ ಬೇ ಕದನದಲ್ಲಿ ಹೋರಾಡಿದರು. ಗ್ರೇಸ್ ಬಾಲ್ಯದಲ್ಲಿ ಅತ್ಯಂತ ಕೂಲಂಕುಷವಾಗಿದ್ದಳು. ತನ್ನ ಏಳನೆಯ ವಯಸ್ಸಿನಲ್ಲಿಯೇ ಅವರು ಗಡಿಯಾರ ಹೇಗೆ ಚಲಿಸುತ್ತದೆ ಎಂದು ತಿಳಿದುಕೊಳ್ಳುವುದ್ದಕ್ಕೆ ನಿರ್ಧರಿಸಿದರು. ತನ್ನ ತಾಯಿಗೆ ಅವಳು ಏನು ಮಾಡುತ್ತಿರುವುದೆಂದು ಅರಿತುಕೊಳ್ಳುವ ಮುನ್ನ ಅವಳು ಏಳು ಗಡಿಯಾರಗಳನ್ನು ನೆಲಸಮ ಮಾಡಿದ್ದಳು. ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣಕ್ಕಾಗಿ ಪ್ಲೇನ್ಫೀಲ್ಡ್, ನ್ಯೂಜೆರ್ಸಿಯ ಹರ್ಟ್ರಿಡ್ಜ್ ಶಾಲೆಯನ್ನು ಸೇರಿಕೊಂಡರು.ಇವರು ೧೯೨೮ ರಲ್ಲಿ ವಸ್ಸಾರ್ ರಿಂದ ಫಿ ಬೀಟಾ ಕಪ್ಪಾ ಪದವಿ ಹಾಗೂ ಗಣಿತ ಮತ್ತು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು ಮತ್ತು ೧೯೩೦ರಲ್ಲಿ ಯೇಲ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ೧೯೩೪ ರಲ್ಲಿ ಗಣಿತಶಾಸ್ತ್ರದಲ್ಲಿ ಒಯ್ಸ್ಟನ್ನ್ ಓರೇಯವರ ನಿರ್ದೇಶನದಲ್ಲಿ ಯೇಲ್ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಗಳಿಸಿದರು.[] ಅದೇ ವರ್ಷದಲ್ಲಿಯೇ ತನ್ನ ಪ್ರೌಢ ಪ್ರಬಂಧವಾದ "ನ್ಯೂ ಟೈಪ್ಸ್ ಆಫ್ ಇರ್ರೆಡುಸಿಬಿಲಿಟಿ ಕ್ರೈಟೀರಿಯ" ಪ್ರಕಟಿತವಾಯಿತು. ೧೯೩೧ ರಲ್ಲಿ ಗಣಿತ ಅಧ್ಯಾಪಕರಾಗಿ ತನ್ನ ವೃತ್ತಿಯನ್ನು ಪ್ರಾರಂಭಿಸಿ,ನಂತರ ೧೯೪೧ ರಲ್ಲಿ ಪ್ರಾಧ್ಯಾಪಕರಾದರು. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಫೋಸ್ಟರ್ ವಿನ್ಸೆಂಟ್ ಹಾಪರನ್ನು ೧೯೩೦ ರಲ್ಲಿ ಮದುವೆಯಾದರು.

ವೃತ್ತಿ ಜೀವನ

[ಬದಲಾಯಿಸಿ]
ಹವಾರ್ಡಿನ ಬ್ಯೂರೋ ಹಡಗುಗಳು ಎಣಿಕೆ ಪ್ರಾಜೆಕ್ಟಿನಲ್ಲಿ ಹಾಪರ್ನ ಸಹಿ

೧೯೪೩ ರಲ್ಲಿ ವಿಶ್ವ ಸಮರ ಎರಡರ ಸಂದರ್ಭದಲ್ಲಿ, ಹಾಪರ್ ವಾಸ್ಸರ್ನಲ್ಲಿ ಗೈರುಹಾಜರಿ ರಜೆಯನ್ನು ಪಡೆದ ನಂತರ ಯುನೈಟೆಡ್ ಸ್ಟೇಟ್ಸ್ ನೌಕಾ ಮೀಸಲಲ್ಲಿ ಪ್ರತಿಜ್ಞಬದ್ಧರಾದರು. ಮ್ಯಾಸಚೂಸೆಟ್ಸಿನ ನಾರ್ಥಾಂಪ್ಟನ್ನಲ್ಲಿನ ಸ್ಮಿತ್ ಕಾಲೇಜಿನಲ್ಲಿ ನೌಕಾ ಮೀಸಲು ಮಿಡ್ಶಿಪ್ಮೆನ್ ಶಾಲೆಯಲ್ಲಿ ತರಬೇತಿಯನ್ನು ಪಡೆದರು. ಹಾಪರ್ ೧೯೪೪ ರಲ್ಲಿ ತನ್ನ ವರ್ಗದಲ್ಲಿ ಪ್ರಥಮ ಶ್ರೇಣಿಯನ್ನು ಪಡೆದು ಪದವಿಯನ್ನು ಗಳಿಸಿದರು. ಒಂದು ಕಿರಿಯ ಗ್ರೇಡಿನ ಲೆಫ್ಟಿನೆಂಟ್ ಆಗಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಬ್ಯೂರೋ ಹಡಗುಗಳು ಎಣಿಕೆ ಪ್ರಾಜೆಕ್ಟ್ ನಲ್ಲಿ ನೇಮಕಗೊಂಡರು. ಇವರು ಹೋವರ್ಡ್ ಎಚ್ ಐಕೆನ್ ನೇತೃತ್ವದ ಮಾರ್ಕ್ ೧ ಕಂಪ್ಯೂಟರ್ ಪ್ರೋಗ್ರಾಮಿಂಗ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದರು.ಹಾಪರ್ ಮತ್ತು ಐಕೆನ್ ಮಾರ್ಕ್ ೧ ರ ಬಗ್ಗೆ ಸ್ವಯಂಚಾಲಿತ ಸೀಕ್ವೆನ್ಸ್ ನಿಯಂತ್ರಿತ ಕೋಷ್ಟಕ ಎಂಬ ಹೆಸರಿನಲ್ಲಿ ಮೂರು ಪತ್ರಿಕೆಗಳನ್ನು ಸಹಲೇಖಕಿಸಿದರು. ಯುದ್ಧದ ಕೊನೆಯಲ್ಲಿ ಸಾಮಾನ್ಯ ನೌಕಾಪಡೆಗೆ ವರ್ಗಾಯಿಸುವ ಹಾಪರ್ನ ಕೋರಿಕೆಯು ತನ್ನ ವಯಸ್ಸಿನ ಕಾರಣದಿಂದಾಗಿ ನಿರಾಕರಿಸಲಾಯಿತು. ಹಾಪರ್ ೧೯೪೯ ರವರೆಗೆ ಹಾರ್ವರ್ಡ್ ಕಂಪ್ಯುಟೇಷನ್ ಲ್ಯಾಬ್ನಲ್ಲಿ ಉಳಿದರು. ೧೯೪೯ ರಲ್ಲಿ ಹಿರಿಯ ಗಣಿತತಜ್ಞರಾಗಿ ಎಕೆರ್ಟ್-ಮೌಕ್ಲ್ಯ್ ಕಂಪ್ಯೂಟರ್ ಕಾರ್ಪೊರೇಶನಲ್ಲಿ ಹಾಗು ಯುನಿವಾಕ್ ೧ ರ ಅಭಿವೃದ್ಧಿ ತಂಡವನ್ನು ಸೇರಿಕೊಂಡರು.ತನ್ನ ಮೂಲ ಕಂಪೈಲರಿನ ಕೆಲಸ ಮಾಡಲಾಗುತ್ತಿರುವಾಗ ೧೯೫೦ ರಲ್ಲಿ ಕಂಪನಿಯನ್ನು ರೆಮಿಂಗ್ಟನ್ ರಾಂಡ್ ಕಾರ್ಪೊರೇಷನ್ ಆಕ್ರಮಿಸಿತು. ಅದು ಎ ಕಂಪೈಲರ್ ಎಂದು, ಹಾಗು ಅದರ ಮೊದಲ ಆವೃತ್ತಿಯನ್ನು ಎ-೦ ಎಂದು ಕರೆಯಲಾಗಿತ್ತು. ೧೯೫೨ ರಲ್ಲಿ ಇವರು ಕಾರ್ಯಾಚರಣೆಯ ಕಂಪೈಲರನ್ನು ಹೊಂದಿದ್ದರು.

UNIVAC ಕೀಲಿಪೆಡ್ಡಿಗೆಯಲ್ಲಿ ಹಾಪರ್

೧೯೫೪ ರಲ್ಲಿ ಹಾಪರ್, ಸ್ವಯಂಚಾಲಿತ ಪ್ರೋಗ್ರಾಮಿಂಗ್ ಕಂಪನಿಯ ಮೊದಲ ನಿರ್ದೇಶಕರಾಗಿ, ಹಾಗೂ ತಮ್ಮ ಇಲಾಖೆಯ ಮೊದಲ ಕಂಪೈಲರ್ ಆಧಾರಿತ ಪ್ರೋಗ್ರಾಮಿಂಗ್ ಭಾಷೆಗಳಾದ ಮ್ಯಾತ್-ಮಾಟಿಕ್ ಮತ್ತು ಫ್ಲೋ-ಮಾಟಿಕನ್ನು ಬಿಡುಗಡೆ ಮಾಡಿದರು.[] ೧೯೫೯ರಲ್ಲಿ ದತ್ತಾಂಶ ವ್ಯವಸ್ಥೆಗಳ ಭಾಷೆಗಳ ಸಮ್ಮೇಳನ (CODASYL) ಎಂಬ ಎರಡು ದಿನದ ಸಮ್ಮೇಳನದಲ್ಲಿ ಉದ್ಯಮ ಮತ್ತು ಸರ್ಕಾರದ ಕಂಪ್ಯೂಟರ್ ತಜ್ಞರು ಒಟ್ಟುಗೂಡಿದರು.ಹಾಪರ್, ಸಮಿತಿಯ ತಾಂತ್ರಿಕ ಸಮಾಲೋಚಕರಾಗಿ ಕಾರ್ಯನಿರ್ವಹಿಸಿದರು ಹಾಗೂ ತಮ್ಮ ಮಾಜಿ ನೌಕರರು ಹೊಸ ಭಾಷೆ ಕೊಬಾಲನ್ನು ವ್ಯಾಖ್ಯಾನಿಸುವ ಅಲ್ಪಾವಧಿಯ ಸಮಿತಿಯಲ್ಲಿದ್ದರು. ಈ ಹೊಸ ಭಾಷೆಯೂ ಐಬಿಎಂ ನ ಕೋಂಟ್ರಾನ್(COMTRAN ) ಭಾಷೆಯ ವಿಸ್ತರಿಸಲಾಯಿತು. ಕಂಪ್ಯೂಟರ್ ಕಾರ್ಯಕ್ರಮಗಳು ಇಂಗ್ಲೀಷ್ ಅಂತಹ ಭಾಷೆಯಲ್ಲಿ ಬರೆಯಬಹುದು ಎಂಬ ಹಾಪರ್ನ ನಂಬಿಕೆಯೂ ಈ ಹೊಸ ವ್ಯವಹಾರ ಭಾಷೆಯಲ್ಲಿ ವಶಪಡಿಸಿಕೊಂಡು, ಕೊಬಾಲ್ ಇಲ್ಲಿಯವರೆಗಿನ ಅತ್ಯಂತ ಸರ್ವತ್ರ ವ್ಯಾಪಾರ ಭಾಷೆಯನ್ನಾಗಿ ನೇಮಕ ಮಾಡಲಾಗಿತ್ತು. ೧೯೬೭ ರಿಂದ ೧೯೭೭ ರವರೆಗೂ ಹಾಪರ್ ನೌಕಾಪಡೆಯ ಪ್ರೊಗ್ರಾಮಿಂಗ್ ಭಾಷೆಗಳ ಗುಂಪಿನ ನಿರ್ದೇಶಕರಾಗಿ,ಮಾಹಿತಿ ಸಿಸ್ಟಮ್ಸ್ ಯೋಜನಾ ಕಚೇರಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದರು.

ಗ್ರೇಸ್ ಹಾಪರ್ ಕೊಮೊಡೊರಾಗಿ ಆಯ್ಕೆಯಾದ ಸಂದರ್ಭ

೧೯೭೩ ರಲ್ಲಿ ಇವರನ್ನು ಸೇನಾ ನಾಯಕನಾಗಿ ನೇಮಕಮಾಡಲಾಯಿತು. ಇವರು ಕೊಬಾಲ್ ಪ್ರೋಗ್ರಾಮಿಂಗ್ ಭಾಷೆಗೆ ಮೌಲ್ಯೀಕರಣ ತಂತ್ರಾಂಶವನ್ನು ಬೆಳೆಸಿದರು. ಅದರ ಕಂಪೈಲರ್ ಇಡೀ ನಾವಿಕ ಸೈನ್ಯ ಗುಣಮಟ್ಟದ ಕಾರ್ಯಕ್ರಮದ ಭಾಗವಾಗಿತ್ತು. ೧೯೭೦ ರ ದಶಕದಲ್ಲಿ ಹಾಪರ್, ದೊಡ್ಡ, ಕೇಂದ್ರೀಕೃತ ವ್ಯವಸ್ಥೆಗಳನ್ನು ಸಣ್ಣ, ವಿತರಣೆ ಕಂಪ್ಯೂಟರ್ಗಳ ಜಾಲಗಳನ್ನಾಗಿ ಬದಲಾಯಿಸಲು ರಕ್ಷಣಾ ಇಲಾಖೆಯಲ್ಲಿ ಪ್ರತಿಪಾದಿಸಿದರು. ಯಾವುದೇ ಕಂಪ್ಯೂಟರ್ ನೋಡ್ ಅನ್ನು ಯಾವುದೇ ಬಳಕೆದಾರರು ಸಾಮಾನ್ಯ ದತ್ತಾಂಶ ಜಾಲದಲ್ಲಿ ಪ್ರವೇಶಿಸಬಹುದು.[] ಅವರು ಕಂಪ್ಯೂಟರ್ ವ್ಯವಸ್ಥೆಗಳನ್ನು ಪರೀಕ್ಷಿಸುವ ಅನುಷ್ಠಾನವನ್ನು ಅಭಿವೃದ್ಧಿಸಿದರು.೧೯೮೦ ರಲ್ಲಿ, ಈ ಪರೀಕ್ಷೆಗಳು ನ್ಯಾಷನಲ್ ಬ್ಯೂರೋ ಆಫ್ ಸ್ಟಾಂಡರ್ಡ್ಸ್ ವಹಿಸಿಕೊಂಡಿದೆ. ಈಗ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಅಂಡ್ ಟೆಕ್ನಾಲಜಿ (NIST) ಎಂದು ಕರೆಯಲಾಗುತ್ತದೆ.

ನಿವೃತ್ತಿ ಜೀವನ

[ಬದಲಾಯಿಸಿ]

೧೯೬೬ ರ ಅಂತ್ಯದಲ್ಲಿ ಹಾಪರ್ ನೌಕಾಪಡೆಯ ನಿಯಮಗಳಿಗನುಸಾರವಾಗಿ, ೬೦ನೇ ವಯಸ್ಸಿನಲ್ಲಿ ಕಮಾಂಡರ್ ದರ್ಜೆಯಲ್ಲಿ ನೌಕಾ ಮೀಸಲಿನಿಂದ ನಿವೃತ್ತರಾದರು.[] ಅವರು ಆಗಸ್ಟ್ ೧೯೬೭ ರಲ್ಲಿ ಆರು ತಿಂಗಳ ಕಾಲ ಸಕ್ರಿಯ ಕರ್ತವ್ಯವೂ ಅನಿರ್ದಿಷ್ಟ ಹುದ್ದೆಯಾಗಿತ್ತು.ಇವರು ಮತ್ತೆ ೧೯೭೧ ರಲ್ಲಿ ನಿವೃತ್ತರಾದರು. ಆದರೆ ೧೯೭೨ ರಲ್ಲಿ ಮತ್ತೆ ಸಕ್ರಿಯ ಕರ್ತವ್ಯಕ್ಕೆ ಮರಳಲು ಹೇಳಲಾಯಿತು.ಇವರನ್ನು ೧೯೭೩ ರಲ್ಲಿ ಅಡ್ಮಿರಲ್ ಎಲ್ಮೋ ಆರ್ ಝುಮವಾಲ್ಟ್ ಜೂನಿಯರ್, ಕ್ಯಾಪ್ಟನನ್ನಾಗಿ ನೇಮಕ ಮಾಡಲಾಯಿತು. ಆಗಸ್ಟ್ ೧೪, ೧೯೮೬ ರಂದು ಉದ್ದೇಶರಹಿತವಾಗಿ ನೌಕಾಪಡೆಗೆ ನಿವೃತ್ತರಾದರು. ನಿವೃತ್ತಿಯ ಸಮಯದಲ್ಲಿ ಅವರು ಅಮೇರಿಕಾದ ನೌಕಾಪಡೆಯ ಹಳೆಯ ಸಕ್ರಿಯ ಕರ್ತವ್ಯ ಕಾರ್ಯಾರಂಭದ ಅಧಿಕಾರಿಯಾಗಿದ್ದರು. ನಂತರ, ಡಿಜಿಟಲ್ ಇಕ್ವಿಪ್ಮೆಂಟ್ ಕಾರ್ಪೋರೇಷನ್ ಹಿರಿಯ ಸಲಹೆಗಾರರಾಗಿ ನೇಮಕಗೊಳಿಸಲಾಯಿತು, ಅವರು ೧೯೯೨ ರಲ್ಲಿ ನಿಧನರಾಗುವ ತನಕ ಉಳಿಸಿಕೊಂಡಿರುವ ಒಂದು ಸ್ಥಾನವಾಗಿತ್ತು. ಅವರು ಡಿಜಿಟಲ್ ತಾಂತ್ರಿಕ ಸೌಲಭ್ಯಗಳನ್ನು ಹೆಚ್ಚು ಸಂದರ್ಶಿಸಿದರು, ಇವರು ಸಾಮಾನ್ಯವಾಗಿ ಟೀಕೆಗಳನ್ನು ಹರ್ಷೋದ್ಗಾರದಿಂದ ಸ್ವೀಕರಿಸುತ್ತಿದ್ದರು. ಹಾಪರ್,ತನ್ನ ಸೇವೆ ಸಮಯದಲ್ಲಿ ಸಾಮಾನ್ಯವಾಗಿ ಏಕೆ ಉಪಗ್ರಹಗಳ ಸಂವಹನ ಬಹಳ ಹೊತ್ತು ತೆಗೆದುಕೊಳ್ಳತ್ತದೆಂದು ಅಡ್ಮಿರಲ್ಸ್ ಮತ್ತು ಜನರಲ್ಗಳಿಂದ ಪದೇ ಪದೇ ಕೇಳಲಾಗುತಿತ್ತು ? ಆದ್ದರಿಂದ ತನ್ನ ಉಪನ್ಯಾಸಗಳನ್ನು ಅವರು ಬಳಕೆಯಲ್ಲಿಲ್ಲದ ಬೆಲ್ ಸಿಸ್ಟಮ್ ೨೫ ಜೋಡಿ ದೂರವಾಣಿ ಕೇಬಲ್ ಬಳಸಿ ನ್ಯಾನೊಸೆಕೆಂಡ್ ಸಚಿತ್ರಿಸಿದರು. ಆ ಕೇಬಲನ್ನು ೧೧.೮ ಇಂಚ್ ಉದ್ದ ಕತ್ತರಿಸಿ, ಒಂದು ನ್ಯಾನೋಸೆಕೆಂಡ್ ಬೆಳಕು ಸಂಚರಿಸುತ್ತಿದ ದೂರ, ಮತ್ತು ತನ್ನ ಕೇಳುಗರಿಗೆ ವೈಯಕ್ತಿಕ ತಂತಿಗಳನ್ನು ಕೊಟ್ಟರು. ಸೇವೆಯಲ್ಲಿ ಇಲ್ಲವಾದರೂ,ತಮ್ಮ ಉಪನ್ಯಾಸಗಳಿಗೆ ಯಾವಾಗಲೂ ತನ್ನ ನೌಕಾಪಡೆಯ ಸಂಪೂರ್ಣ ಸಮವಸ್ತ್ರವನ್ನು ಧರಿಸಿದ್ದರು, ಇದು ಅಮೇರಿಕಾದ ನೌಕಾಪಡೆಯ ಸಮವಸ್ತ್ರದ ಕಟ್ಟುಪಾಡುಗಳಿಗೊಳಗಾಗಿದೆ.ಇವರನ್ನು ಆರ್ಲಿಂಗ್ಟನ್ ನ್ಯಾಷನಲ್ ಸಮಾಧಿಯ ಪೂರ್ಣ ಸೇನಾ ಗೌರವಗಳ ಜೊತೆಗೆ ಹೂಳಲಾಯಿತು. ತನ್ನ ಸೇವೆ ಮತ್ತು ಸಾಧನೆಗಳ ಗೌರವಾಗಿ, ಅಮೇರಿಕಾದ ನೌಕಾ ಅಕಾಡೆಮಿಯೂ ತನ್ನ ಭವಿಷ್ಯದ ಸೈಬರ್ ಕಟ್ಟಡದ ಹೆಸರನ್ನು ಹಾಪರಿನ ಹೆಸರಿನಲ್ಲಿಡುವುದೆಂದು ಸೆಪ್ಟೆಂಬರ್ ೮,೨೦೧೬ ರಂದು ಘೋಷಿಸಿತು.[೧೦]

ಪ್ರಶಸ್ತಿಗಳು

[ಬದಲಾಯಿಸಿ]

೧೯೬೯ ರಲ್ಲಿ ಹಾಪರ್ಗೆ, "ಇನಾಗುರಲ್ ಡೇಟಾ ಪ್ರೊಸೆಸಿಂಗ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಮ್ಯಾನ್ ಆಫ಼್ ದಿ ಇಯರ್ ಅವಾರ್ಡ್" ದೊರಕಿತು.ಈಗ ಇದನ್ನು ಡಿಸ್ಟಿಂಗ್ವಿಶ್ಡ್ ಇನ್ಫಾರ್ಮಶನ್ ಸೈನ್ಸಸ್ ಅವಾರ್ಡ್ ಎಂದು ಕರೆಯಲಾಗುತ್ತದೆ.[೧೧] ೧೯೮೬ ರಲ್ಲಿ ನಿವೃತ್ತಿಯ ನಂತರ, ಇವರಿಗೆ ರಕ್ಷಣಾ ಪಡೆಯ ಡಿಸ್ಟಿಂಗ್ವಿಶ್ಡ್ ಸರ್ವಿಸ್ ಮೆಡಲ್ ದೊರಕಿತು. ೧೯೮೮ ರಲ್ಲಿ ವಾಷಿಂಗ್ಟನಲ್ಲಿ ನಡೆದ ಟೋಸ್ಟ್ ಮಾಸ್ಟರಸ್ ಇಂಟರ್ನ್ಯಾಷನಲ್ ಸಮಾವೇಶದಲ್ಲಿ ಗೋಲ್ಡನ್ ಗೆವಲ್ ಪ್ರಶಸ್ತಿ ಲಭಿಸಿತು. ೧೯೯೧ ರಲ್ಲಿ ನ್ಯಾಷನಲ್ ಮೆಡಲ್ ಆಫ್ ಟೆಕ್ನಾಲಜಿ ದೊರಕಿತು.೨೦೧೬ ನವೆಂಬರ್ ೨೨ ರಂದು ಹಾಪರಿಗೆ ಮರಣೋತ್ತರವಾಗಿ ಸ್ವಾತಂತ್ರ್ಯಅಧ್ಯಕ್ಷೀಯ ಪದಕವನ್ನು ಕಂಪ್ಯೂಟರ್ ವಿಜ್ಞಾನದ ಕ್ಷೇತ್ರದಲ್ಲಿ ತನ್ನ ಸಾಧನೆಗಳ ಬಹುಮಾನವಾಗಿ ನೀಡಲಾಯಿತು. ಮೈಕ್ರೋಸಾಫ್ಟ್ ಕಾರ್ಪೊರೇಷನಿನ ಮಹಿಳೆಯರು "ಹಾಪರ್ಸ್" ಎಂಬ ನೌಕರರ ಗುಂಪನ್ನು ರೂಪಿಸಿದರು ಮತ್ತು ಅವರ ಗೌರವಾರ್ಥವಾಗಿ ವಿದ್ಯಾರ್ಥಿವೇತನವನ್ನು ನೀಡಿದರು. ಈಗ ವಿಶ್ವಾದ್ಯಂತ ಹಾಪರ್ಸಿನಲ್ಲಿ ೩೦೦೦ಕ್ಕೂ ಅಧಿಕ ಸದಸ್ಯರು ಹೊಂದಿರುವುದು.ಅಮೇರಿಕಾದ ನೌಕಾ ಅಕಾಡೆಮಿಯಲ್ಲಿ ಕ್ರೇ ಎಕ್ಸ್ ಸಿ 30(XC30) ಸೂಪರ್ಕಂಪ್ಯೂಟರನ್ನು "ಗ್ರೇಸ್" ಎಂದು ಹೆಸರಿಸಲಾಗಿದೆ. ಗ್ರೇಸ್ ಹಾಪರ್ ತನ್ನ ಜೀವಿತಾವಧಿಯಲ್ಲಿ ವಿಶ್ವದಾದ್ಯಂತ ವಿಶ್ವವಿದ್ಯಾಲಯಗಳಿಂದ ೪೦ ಗೌರವ ಪದವಿಗಳನ್ನು ಪಡೆದಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. http://content.yudu.com/A2qfj4/201403March/resources/3.htm
  2. "ಆರ್ಕೈವ್ ನಕಲು". Archived from the original on 2016-04-07. Retrieved 2017-11-05.
  3. http://wvegter.hivemind.net/abacus/CyberHeroes/Hopper.htm
  4. https://www.agnesscott.edu/lriddle/women/hopper.htm
  5. http://www.cbsnews.com/news/white-house-medal-of-freedom-margaret-hamilton-grace-hopper/
  6. "ಆರ್ಕೈವ್ ನಕಲು". Archived from the original on 2014-09-01. Retrieved 2017-11-05.
  7. https://books.google.co.in/books?id=QmfyK0QtsRAC&q=hopper&redir_esc=y#v=snippet&q=hopper&f=false
  8. http://www.cbi.umn.edu/hostedpublications/pdf/McGee_Book-4.2.2.pdf
  9. "ಆರ್ಕೈವ್ ನಕಲು". Archived from the original on 2017-10-19. Retrieved 2017-11-05.
  10. https://www.navytimes.com/articles/naval-academy-to-honor-computer-scientist-grace-hopper
  11. http://www.aitp.org/?DISA