ಗ್ಯಾಸ್ ಕ್ರೊಮ್ಯಾಟೋಗ್ರಫಿ (ಅನಿಲ ವರ್ಣರೇಖನ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Gas chromatography
A gas chromatograph with a headspace sampler
AcronymGLC, GC
Classificationchromatography
Analytesorganic
inorganic
must be volatile
ManufacturersAgilent (a spin-off of Hewlett-Packard)
LECO Corporation
PerkinElmer
Shimadzu
Thermo Electron Corporation
Varian, Inc.
Alpha MOS - Perichrom
Other techniques
RelatedThin layer chromatography
High performance liquid chromatography
HyphenatedGas chromatography-mass spectrometry

ಗ್ಯಾಸ್‌ ಕ್ರೊಮ್ಯಾಟೋಗ್ರಫಿ ಎನ್ನುವುದು ವಿಭಜನೆ ಮಾಡದೆಯೇ ಹಿಂಗಿಸಬಹುದಾದ ಸಂಯುಕ್ತಗಳನ್ನು ಬೇರ್ಪಡಿಸಲು ಮತ್ತು ವಿಶ್ಲೇಷಿಸಲು ವಿಶ್ಲೇಷಣಾತ್ಮಕ ರಸಾಯನಶಾಸ್ತ್ರದಲ್ಲಿ ಬಳಸುವ ಕ್ರೊಮ್ಯಾಟೋಗ್ರಫಿ. ಗ್ಯಾಸ್‌ ಕ್ರೊಮ್ಯಾಟೋಗ್ರಫಿಯ ಸಾಮಾನ್ಯ ಉಪಯೋಗಗಳೆಂದರೆ ನಿರ್ದಿಷ್ಟ ವಸ್ತುವಿನ ಶುಭ್ರತೆಯನ್ನು ಪರೀಕ್ಷಿಸುವುದು, ಅಥವಾ ಒಂದು ಮಿಶ್ರಣದ ವಿವಿಧ ಘಟಕಗಳನ್ನು ಬೇರ್ಪಡಿಸುವುದು (ಅಂತಹ ಘಟಕಗಳ ಸಾಪೇಕ್ಷ ಪರಿಮಾಣವನ್ನು ಕೂಡ ನಿರ್ಧರಿಸಬಹುದು). ಕೆಲವು ಸಂದರ್ಭಗಳಲ್ಲಿ ಗ್ಯಾಸ್‌ ಕ್ರೊಮ್ಯಾಟೋಗ್ರಫಿಯ ಸಹಾಯದಿಂದ ಒಂದು ಸಂಯುಕ್ತವನ್ನು ಗುರುತಿಸಬಹುದು. ಸಂಸ್ಕರಣಾ ಕ್ರೊಮ್ಯಾಟೋಗ್ರಫಿಯಲ್ಲಿ, ಮಿಶ್ರಣದಿಂದ ಶುದ್ಧ ಸಂಯುಕ್ತಗಳನ್ನು ತಯಾರಿಸಲು ಗ್ಯಾಸ್‌ ಕ್ರೊಮ್ಯಾಟೋಗ್ರಫಿಯನ್ನು ಬಳಸಬಹುದು.[೧]

ಗ್ಯಾಸ್‌ ಕ್ರೊಮ್ಯಾಟೋಗ್ರಫಿಯಲ್ಲಿ, ಚಲನಾ ಹಂತ (ಅಥವಾ "ಸಂಚಾರಿ ಹಂತ")ವು ವಾಹಕ ಅನಿಲ, ಸಾಮಾನ್ಯವಾಗಿ ಹೀಲಿಯಂ ಮುಂತಾದ ನಿಶ್ಚಲ ಅನಿಲ ಅಥವಾ ನೈಟ್ರೋಜೆನ್‌ ಮುಂತಾದ ಅಪ್ರತಿಕ್ರಿಯಾತ್ಮಕ ಅನಿಲ. ನಿಶ್ಚಲ ಹಂತ ಎಂದರೆ ಗಾಜು ಅಥವಾ ಲೋಹದ ನಳಿಕೆಯೊಳಗಿರುವ, ಕಾಲ್ಮ‌ ಎಂದು ಕರೆಯಲಾಗುವ ನಿಶ್ಚಲ ಘನವಸ್ತುವನ್ನು ಅವಲಂಬಿಸಿರುವ ದ್ರಾವಣದ ಅತಿಸೂಕ್ಶ್ಜ ಪದರ ಅಥವಾ ಸಮಸಂಯುಕ್ತ (ಊರ್ಧ್ವಪಾತದಲ್ಲಿ ಬಳಸುವ ಬೇರ್ಪಡಿಕೆ ಕಾಲಮ್‌ಗೆ ನೀಡುವ ಶುಶ್ರೂಷೆ). ಗ್ಯಾಸ್‌ ಕ್ರೊಮ್ಯಾಟೊಗ್ರಫಿಯನ್ನು ನಡೆಸಲು ಬಳಸುವ ಸಾಧನವನ್ನು ಗ್ಯಾಸ್‌ ಕ್ರೊಮ್ಯಾಟೊಗ್ರಾಫ್‌ (ಅಥವಾ "ಏರೋಗ್ರಾಫ್‌", "ಅನಿಲ ವಿಭಜಕ") ಎಂದು ಕರೆಯುತ್ತಾರೆ.

ವಿಶ್ಲೇಷಣೆಗೆ ಒಳಪಡುವ ಅನಿಲ ಸಂಯುಕ್ತಗಳು, ವಿವಿಧ ನಿಶ್ಚಲ ಹಂತಗಳನ್ನು ಬಳಿದಿರುವ ಕಾಲಮ್‌ನ ಗೋಡೆಗಳೊಂದಿಗೆ ವರ್ತಿಸುತ್ತವೆ. ಇದರಿಂದ ಪ್ರತಿಯೊಂದು ಸಂಯುಕ್ತವೂ ಬೇರೆ ಬೇರೆ ಸಮಯದಲ್ಲಿ ಬೇರ್ಪಡುತ್ತದೆ, ಇದನ್ನು ಸಂಯುಕ್ತದ ಧಾರಣ ಸಮಯ ಎಂದು ಕರೆಯಲಾಗುತ್ತದೆ. ಗ್ಯಾಸ್‌ ಕ್ರೊಮ್ಯಾಟೊಗ್ರಫಿ ವಿಶ್ಲೇಷಣೆಯ ಉಪಯುಕ್ತತೆ ಇರುವುದು ಈ ಧಾರಣ ಸಮಯಗಳ ತುಲನೆಯಲ್ಲಿ.

ತಾತ್ವಿಕವಾಗಿ ಗ್ಯಾಸ್‌ ಕ್ರೊಮ್ಯಾಟೊಗ್ರಫಿ ಕಾಲಮ್‌ ಕ್ರೊಮ್ಯಾಟೊಗ್ರಫಿಯನ್ನೇ ಹೋಲುತ್ತದೆ (ಹಾಗೆಯೇ ಎಚ್‌ಪಿಎಲ್‌ಸಿ, ಟಿಎಲ್‌ಸಿ) ಮುಂತಾದ ಇತರ ವಿಧಗಳನ್ನು ಹೋಲುತ್ತದೆ, ಆದರೆ ಗಮನೀಯ ವ್ಯತ್ಯಾಸಗಳನ್ನೂ ಹೊಂದಿದೆ. ಮೊದಲನೆಯದಾಗಿ, ಮಿಶ್ರಣದಿಂದ ವಿವಿಧ ಸಂಯುಕ್ತಗಳನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ದ್ರಾವಕ ನಿಶ್ಚಲ ಹಂತ ಮತ್ತು ಅನಿಲ ಚಲನಾ ಹಂತದಲ್ಲಿ ನಡೆಸಲಾಗುತ್ತದೆ, ಆದರೆ ಕಾಲಮ್‌ ಕ್ರೊಮ್ಯಾಟೊಗ್ರಫಿಯಲ್ಲಿ ನಿಶ್ಚಲ ಹಂತ ಘನವಾಗಿದ್ದು ಚಲನಾ ಹಂತ ದ್ರಾವಕವಾಗಿರುತ್ತದೆ. (ಆದ್ದರಿಂದ ಅದರ ಪೂರ್ಣ ಹೆಸರು "ಅನಿಲ-ದ್ರಾವಕ ಕ್ರೊಮ್ಯಾಟೊಗ್ರಫಿ", ಕ್ರಮವಾಗಿ ಸಂಚಾರಿ ಮತ್ತು ನಿಶ್ಚಲ ಹಂತವನ್ನು ಸೂಚಿಸುತ್ತದೆ. ಎರಡನೆಯದಾಗಿ, ಅನಿಲ ಹಂತವು ಯಾವ ಕಾಲಮ್‌ ಮೂಲಕ ಸಾಗಬೇಕೋ ಆ ಕಾಲಮ್‌ಅನ್ನು, ತಾಪಮಾನವನ್ನು ನಿಯಂತ್ರಿಸಬಹುದಾದ ಓವೆನ್‌ನಲ್ಲಿ ಗುರುತಿಸಲಾಗುತ್ತದೆ, ಆದರೆ ಕಾಲಮ್‌ ಕ್ರೊಮ್ಯಾಟೊಗ್ರಫಿಯಲ್ಲಿ (ಸಾಮಾನ್ಯವಾಗಿ) ಅಂತಹ ತಾಪಮಾನ ನಿಯಂತ್ರಣ ಇರುವುದಿಲ್ಲ. ಮೂರನೆಯದಾಗಿ, ಅನಿಲ ಹಂತದಲ್ಲಿ ಸಂಯುಕ್ತದ ಸಾಂದ್ರೀಕರಣ ಎನ್ನುವುದು ಕೇವಲ ಅನಿಲದ ಆವಿ ಒತ್ತಡಕಾರ್ಯ.[೧]

ಎರಡೂ ಪ್ರಕ್ರಿಯೆಗಳು ಕುದಿ ಉಷ್ಣತೆ (ಅಥವಾ ಆವಿ ಒತ್ತಡ)ದ ವ್ಯತ್ಯಾಸಗಳ ಆಧಾರದ ಮೇಲೆ ಒಂದು ಮಿಶ್ರಣದ ಸಂಯುಕ್ತಗಳನ್ನು ಬೇರ್ಪಡಿಸುವುದರಿಂದ ಗ್ಯಾಸ್‌ ಕ್ರೊಮ್ಯಾಟೊಗ್ರಫಿಯು ಬೇರ್ಪಡಿಕೆ ಊರ್ಧ್ವಪಾತವನ್ನೂ ಹೋಲುತ್ತದೆ. ಆದ್ದರಿಂದ, ಬೇರ್ಪಡಿಕೆ ಊರ್ಧ್ವಪಾತವನ್ನು ಸಾಮಾನ್ಯವಾಗಿ ದೊಡ್ಡ ಪ್ರಮಾಣದ ಮಿಶ್ರಣದಿಂದ ಭಾಗಗಳನ್ನು ಬೇರ್ಪಡಿಸಲು ಬಳಸಲಾಗುತ್ತದೆ, ಆದರೆ ಗ್ಯಾಸ್‌ ಕ್ರೊಮ್ಯಾಟೊಗ್ರಫಿಯನ್ನು ಅದಕ್ಕಿಂತ ಎಷ್ಟೋ ಕಡಿಮೆ ಪ್ರಮಾಣಗಳಲ್ಲೂ ಬಳಸಬಹುದು (ಅಂದರೆ ಅತಿಕಡಿಮೆ ಪ್ರಮಾಣ).[೧]

ಗ್ಯಾಸ್‌ ಕ್ರೊಮ್ಯಾಟಿಗ್ರಫಿಯನ್ನು ಕೆಲವು ವೇಳೆ ಆವಿ-ಹಂತ ಕ್ರೊಮ್ಯಾಟೊಗ್ರಫಿ , ಅಥವಾ ಅನಿಲ-ದ್ರಾವಕ ವಿಭಜಕ ಕ್ರೊಮ್ಯಾಟೊಗ್ರಫಿ ಎಂದೂ ಕರೆಯಲಾಗುತ್ತದೆ. ಈ ಬದಲೀ ಹೆಸರುಗಳನ್ನು ವೈಜ್ಞಾನಿಕ ಸಾಹಿತ್ಯದಲ್ಲಿ ಹೆಚ್ಚಾಗಿ ಕಾಣಬಹುದು. ಸರಿಯಾಗಿ ಹೇಳಬೇಕೆಂದರೆ, ಅನಿಲ-ದ್ರಾವಕ ವಿಭಜಕ ಕ್ರೊಮ್ಯಾಟೊಗ್ರಫಿಯೇ ಸರಿಯಾದ ಪದ ಮತ್ತು ಹಲವು ಲೇಖಕರು ಅದನ್ನೇ ಬಳಸುತ್ತಾರೆ.[೧]

ಇತಿಹಾಸ[ಬದಲಾಯಿಸಿ]

ಕ್ರೊಮ್ಯಾಟೊಗ್ರಫಿಯು ರಷ್ಯಾದ ವಿಜ್ಞಾನಿ ಮೈಕೇಲ್‌ ಸೆಮೆನೊವಿಶ್‌ ಟ್ಸ್ವೆಟ್‌ನ ಕೆಲಸಗಳಲ್ಲಿ 1903ರಷ್ಟು ಹಿಂದೆಯೇ ಕಾಣಸಿಗುತ್ತದೆ. 1947ರಲ್ಲಿ ಜರ್ಮನಿಯ ಪದವಿ ವಿದ್ಯಾರ್ಥಿ ಫ್ರಿಟ್‌ ಪ್ರಯಾರ್‌ ಘನ ಸ್ಥಿತಿಯ ಅನಿಲ ಕ್ರೊಮ್ಯಾಟೊಗ್ರಫಿಯನ್ನು ಕಂಡುಹಿಡಿದ. ದ್ರಾವಕ-ದ್ರಾವಕ (1941) ಮತ್ತು ಕಾಗದ ಕ್ರೊಮ್ಯಾಟೊಗ್ರಫಿಯನ್ನು (1944) ಅಭಿವೃದ್ಧಿಪಡಿಸಿದ್ದಕ್ಕಾಗಿ ನೊಬೆಲ್‌ ಪ್ರಶಸ್ತಿ ಪಡೆದ ಆರ್ಚರ್‌ ಜಾನ್‌ ಪೋರ್ಟರ್‌ ಮಾರ್ಟಿನ್‌ ಅನಿಲ ಕ್ರೊಮ್ಯಾಟೊಗ್ರಫಿಯ ಅಭಿವೃದ್ಧಿಗೆ ಅಡಿಪಾಯ ಹಾಕಿದ ಮತ್ತು ನಂತರದ ದಿನಗಳಲ್ಲಿ ದ್ರಾವಕ-ಅನಿಲ ಕ್ರೊಮ್ಯಾಟೊಗ್ರಫಿಯನ್ನು ನಿರ್ಮಿಸಿದ (1950). ಎರಿಕಾ ಕ್ರೆಮೆರ್‌ ಹಲವು ಮೂಲಭೂತ ಕೆಲಸಗಳನ್ನು ಮಾಡಿದರು ಮತ್ತು ಪ್ರಯಾರ್‌ರ ಕೆಲಸಗಳ ಮೇಲ್ವಿಚಾರಣೆ ಮಾಡಿದರು.

ಗ್ಯಾಸ್‌ ಕ್ರೊಮ್ಯಾಟೊಗ್ರಫಿ ವಿಶ್ಲೇಷಣೆ[ಬದಲಾಯಿಸಿ]

ಗ್ಯಾಸ್‌ ಕ್ರೊಮ್ಯಾಟೊಗ್ರಾಫ್‌ ಎನ್ನುವುದು, ಒಂದು ಸಂಕೀರ್ಣ ಸ್ಯಾಂಪಲ್‌ನಲ್ಲಿರುವ ರಸಾಯನಿಕಗಳನ್ನು ಬೇರ್ಪಡಿಸಲು ಬಳಸುವ ಒಂದು ರಸಾಯನಿಕ ವಿಶ್ಲೇಷಣಾ ಸಾಧನ. ಗ್ಯಾಸ್‌ ಕ್ರೊಮ್ಯಾಟೊಗ್ರಾಫ್‌ ಸಾಧನವು ಕಾಲಮ್‌ ಎಂಬ ಒಂದು ಕಿರಿದಾದ ನಳಿಕೆಯನ್ನು ಬಳಸಿಕೊಳ್ಳುತ್ತದೆ, ಇದರ ಮೂಲಕ ಸ್ಯಾಂಪಲ್‌ನ ವಿವಿಧ ರಾಸಯನಿಕ ಭಾಗಗಳು ಒಂದು ಅನಿಲ ಪ್ರವಾಹದಲ್ಲಿ ಸಾಗುತ್ತವೆ (ವಾಹಕ ಅನಿಲ, ಸಂಚಾರಿ ಹಂತ ). ತಮ್ತಮ್ಮ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳ ಆಧಾರದ ಮೇಲೆ ಮತ್ತು ನಿಶ್ಚಲ ಹಂತ ಎನ್ನುವ ನಿರ್ದಿಷ್ಟ ಕಾಲಮ್‌ನೊಂದಿಗಿನ ತಮ್ಮ ಪರಿಸ್ಪಂದನದ ಆಧಾರದ ಮೇಲೆ ಬೇರೆ ಬೇರೆ ವಿವಿಧ ರಾಸಾಯನಿಕಗಳು ವಿವಿಧ ವೇಗದಲ್ಲಿ ಸಾಗುತ್ತವೆ. ರಾಸಾಯನಿಕಗಳು ಕಾಲಮ್‌ನ ಕಡೆಯ ಹಂತವನ್ನು ದಾಟಿದ ಮೇಲೆ, ಅವುಗಳನ್ನು ವಿದ್ಯುನ್ಮಾನಿಕವಾಗಿ ಪತ್ತೆಹಚ್ಚಲಾಗುತ್ತದೆ. ಕಾಲ್ಮ‌ನಲ್ಲಿ ನಿಶ್ಚಲ ಹಂತದ ಕೆಲಸವೇನೆಂದರೆ ವಿವಿಧ ಭಾಗಗಳನ್ನು ಬೇರ್ಪಡಿಸುವುದು, ಪ್ರತಿಯೊಂದೂ ಬೇರೆ ಬೇರೆ ಸಮಯದಲ್ಲಿ ಕಾಲಮ್‌ನಿಂದ ಹೊರಹೋಗುವಂತೆ ಮಾಡುವುದು (ಧಾರಣಾ ಸಮಯ ). ಈ ಕ್ರಮವನ್ನು ಅಥವಾ ಧಾರಣ ಸಮಯವನ್ನು ಬದಲಾಯಿಸಲು ಅನಿಲದ ಹರಿವಿನ ವೇಗ ಮತ್ತು ಉಷ್ಣತೆಯನ್ನೂ ಬಳಸಬಹುದು.

ಗ್ಯಾಸ್‌ ಕ್ರೊಮ್ಯಾಟೊಗ್ರಫಿಯ ವಿಶ್ಲೇಷಣೆಯಲ್ಲಿ ಒಂದು ನಿರ್ದಿಷ್ಟ/ಗೊತ್ತಾದ ಮೊತ್ತದ ಅನಿಲ ಅಥವಾ ದ್ರಾವಕ ವಿಶ್ಲೇಷಕವನ್ನು ಕಾಲಮ್‌ನ "ದ್ವಾರ"ದಲ್ಲಿ ಹಾಕಲಾಗುತ್ತದೆ (ಶಿರ). ಹಾಗೆ ಮಾಡಲು ಸಾಮಾನ್ಯವಾಗಿ ಮೈಕ್ರೊಸಿರೇಂಜ್‌ (ಅಥವಾ, ಘನ ಹಂತದ ಅತಿಸೂಕ್ಷ್ಮಸಂಗ್ರಹ ನೂಲುಗಳನ್ನು, ಅಥವಾ ಒಂದು ಅನಿಲ ಉಗಮಕ್ಕೆ ಬದಲಾಯಿಸುವ ವ್ಯವಸ್ಥೆ) ಬಳಸಲಾಗುತ್ತದೆ. ವಾಹಕ ಅನಿಲವು ಕಾಲಮ್‌ನ ಮೂಲಕ ವಿಶ್ಲೇಷಕ ಅಣುವನ್ನು ತೆಗೆದುಕೊಂಡು ಹೋಗುತ್ತದೆ. ಈ ಚಲನೆಯ ಮೂಲಕ ಕಾಲಮ್‌ಗೆ ಅಂಟಿಕೊಂಡಿರುವ ವಿಶ್ಲೇಷಕ ಅಣುವನ್ನು ತೆಗೆದುಕೊಂಡು ಹೋಗಲು ಅಥವಾ ಕಾಲಮ್‌ನಲ್ಲಿ ಪ್ಯಾಕ್‌ ಮಾಡಲು ಬಳಸುವ ವಸ್ತುಗಳಿಗೆ ಅಂಟಿಕೊಂಡಿರುವ ಅಣುಗಳನ್ನು ತೆಗೆಯಲು ಇದನ್ನು ಬಳಸಲಾಗುತ್ತದೆ. ಅಣುಗಳು ಕಾಲಮ್‌ನ ಮೂಲಕ ಎಷ್ಟು ವೇಗವಾಗಿ ಸಾಗುತ್ತದೆ ಎಂಬುದು ಹೀರಿಕೊಳ್ಳುವ ಬಲದ ಮೇಲೆ ಅವಲಂಬಿತವಾಗಿರುತ್ತದೆ, ಇದು ಅಣುವಿನ ವಿಧದ ಮೇಲೆ ಮತ್ತು ನಿಶ್ಚಲ ಹಂತದ ವಸ್ತುಗಳ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿಯೊಂದು ಅಣುವೂ ಬೇರೆ ಬೇರೆ ವೇಗವನ್ನು ಹೊಂದಿರುವುದರಿಂದ, ವಿಶ್ಲೇಷಿತ ಮಿಶ್ರಣದ ಬೇರೆ ಬೇರೆ ಅಂಶಗಳನ್ನು ಅವು ಬೇರೆ ಬೇರೆ ಸಮಯ(ಧಾರಣ ಸಮಯ)ದಲ್ಲಿ ಕಾಲಮ್‌ ಮೂಲಕ ಸಾಗಿ ಕಾಲಮ್‌ನ ಅಂತ್ಯ ತಲುಪುವಾಗ ಬೇರ್ಪಡಿಸಲಾಗುತ್ತದೆ. . ಕಾಲಮ್‌ನ ಬಹಿದ್ವಾರ ಹರಿವನ್ನು ನಿಯಂತ್ರಿಸಲು ಒಂದು ಪತ್ತೆಕಾರಿ ಯಂತ್ರವನ್ನು ಬಳಸಲಾಗುತ್ತದೆ; ಇದರಿಂದ ಪ್ರತಿಯೊಂದು ಅಂಶವು ಯಾವ ಸಮಯದಲ್ಲಿ ಬಹಿದ್ವಾರವನ್ನು ಮುಟ್ಟುತ್ತದೆ ಎಂಬುದನ್ನು ಮತ್ತು ಆ ಅಂಶದ ಪರಿಮಾಣವನ್ನು ನಿರ್ಧರಿಸಬಹುದು. ಸಾಮಾನ್ಯವಾಗಿ, ವಸ್ತುಗಳು ಕಾಲಮ್‌ನಿಂದ ಯಾವ ಕ್ರಮದಲ್ಲಿ ಹೊರಬರುತ್ತದೋ ಆ ಕ್ರಮದಲ್ಲಿ ಮತ್ತು ಕಾಲಮ್‌ನ ಒಳಗಿರುವ ವಿಶ್ಲೇಷಕದ ಧಾರಣಾ ಸಮಯದ ಆಧಾರದ ಮೇಲೆ ಅವುಗಳನ್ನು (ಗುಣಾತ್ಮಕವಾಗಿ) ಗುರುತಿಸಲಾಗುತ್ತದೆ.

ಭೌತಿಕ ಭಾಗಗಳು[ಬದಲಾಯಿಸಿ]

ಅನಿಲ ವರ್ಣರೇಖನದ ರೇಖಾಚಿತ್ರ

ಆಟೋಸ್ಯಾಂಪ್ಲರ್‌ಗಳು[ಬದಲಾಯಿಸಿ]

ಒಂದು ಸ್ಯಾಂಪಲ್‌ಅನ್ನು ಪ್ರವೇಶದ್ವಾರದಲ್ಲಿ ಸ್ವಯಂಚಾಲಿತವಾಗಿ ಹಾಕಲು ಆಟೋಸ್ಯಾಂಪ್ಲರ್‌ ಬಳಕೆಯಾಗುತ್ತದೆ. ಸ್ಯಾಂಪಲ್‌ಅನ್ನು ಕೈಯಿಂದ ಹಾಕಬಹುದು ಆದರೆ ಇತ್ತೀಚೆಗೆ ಯಾರೂ ಹಾಗೆ ಮಾಡುವುದಿಲ್ಲ. ಸ್ವಯಂಚಾಲಿತವಾಗಿ ಹಾಕುವುದರಿಂದ ಸರಿಯಾದ ವಿವರ ಕೊಡಲು ಸಹಾಯವಾಗುತ್ತದೆ ಮತ್ತು ಸಮಯವನ್ನೂ ಉಳಿಸಬಹುದು.

ವಿವಿಧ ರೀತಿಯ ಆಟೊಸ್ಯಾಂಪ್ಲರ್‌ಗಳು ಇವೆ. ಆಟೋಸ್ಯಾಂಪ್ಲರ್‌ಗಳನ್ನು ಸ್ಯಾಂಪಲ್‌ ಸಾಮರ್ಥ್ಯದ ಮೇಲೆ (ಆಟೋ-ಇಂಜೆಕ್ಟರ್‌ಗಳಿ‌ಗೆ ಎದುರಾಗಿ ಆಟೋಸ್ಯಾಂಪ್ಲರ್‌ಗಳು, ಇಲ್ಲಿ ಆಟೋ-ಇಂಜೆಕ್ಟರ್‌ಗಳು ಕಡಿಮೆ ಸ್ಯಾಂಪಲ್‌ಗಳ ಮೇಲೆ ಕೆಲಸ ಮಾಡುತ್ತದೆ), ರೊಬೊಟ್‌ ತಂತ್ರಜ್ಞಾನಗಳ ಮೇಲೆ (ಎಕ್ಸ್‌ವೈ‌ಜೆಡ್‌ ರೋಬೋಟ್‌ಗೆ ಎದುರಾಗಿ ತಿರುಗುವ ರೋಬೋಟ್‌ಗಳು – ಅತಿ ಸಾಮಾನ್ಯವಾದುದು), ಅಥವಾ ವಿಶ್ಲೇಷಣೆಯ ಮೇಲೆ ವಿಂಗಡಿಸಬಹುದು:

a complete range of autosamplers. ಐತಿಹಾಸಿಕವಾಗಿ, ಆಟೋಸ್ಯಾಂಪ್ಲರ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ರಾಷ್ಟ್ರಗಳೆಂದರೆ ಯುನೈಟೆಡ್‌ ಸ್ಟೇಟ್ಸ್‌, ಇಟಲಿ ಮತ್ತು ಸ್ವಿಜರ‍್‌ಲ್ಯಾಂಡ್‌.

ಪ್ರವೇಶದ್ವಾರಗಳು[ಬದಲಾಯಿಸಿ]

ಕಾಲಮ್‌ ಪ್ರವೇಶದ್ವಾರ ವು (ಅಥವಾ ಇಂಜೆಕ್ಟರ್‌ ) ವಾಹಕ ಅನಿಲದ ನಿರಂತರ ಪ್ರವಾಹಕ್ಕೆ ಸ್ಯಾಂಪಲ್‌ಅನ್ನು ಸೇರಿಸಲು ಸಹಾಯ ಮಾಡುತ್ತದೆ. ಪ್ರವೇಶದ್ವಾರ ಎನ್ನುವುದು ಕಾಲಮ್‌ ತುದಿ ಗೆ ಅಂಟಿಸಿದ ಒಂದು ಯಂತ್ರ.

ಸಾಮಾನ್ಯವಾದ ಪ್ರವೇಶದ್ವಾರ ವಿಧಗಳೆಂದರೆ:

  • (ಒಡೆದ/ಒಡೆಯದ) ಇಂಜೆಕ್ಟರ್‌ ; ಕಾಯಿಸಿದ ಸಣ್ಣ ಗೂಡಿಗೆ ಸ್ಯಾಂಪಲ್‌ಅನ್ನು ಸಿರಿಂಜ್‌ನ ಮೂಲಕ ಗೋಡೆಯ ಮುಖಾಂತರ ಸೇರಿಸಲಾಗುತ್ತದೆ - ಉಷ್ಣತೆಯು ಸ್ಯಾಂಪಲ್‌ ಮತ್ತು ಸ್ಯಾಂಪಲ್‌ ಮಾತೃಕೆಯ ಬಾಷ್ಪೀಭವನವಾಗಲು ಸಹಾಯಕಾರಿ. ನಂತರ ವಾಹಕ ಅನಿಲವು ಸ್ಯಾಂಪಲ್‌ನ ಸಂಪೂರ್ಣತೆಯನ್ನು (ಒಡೆಯದ ಪ್ರಕಾರ) ಅಥವಾ ಒಂದು ಭಾಗವನ್ನು (ಒಡೆದ ಪ್ರಕಾರ) ಕಾಲಮ್‌ನ ಒಳಕ್ಕೆ ತಳ್ಳುತ್ತದೆ. ಒಡೆದ ಪ್ರಕಾರದಲ್ಲಿ, ಇಂಜೆಕ್ಷನ್‌ ಗೂಡಿನಲ್ಲಿರುವ ಸ್ಯಾಂಪಲ್‌/ವಾಹಕ ಅನಿಲ ಮಿಶ್ರಣದ ಒಂದು ಭಾಗವನ್ನು ಒಡೆದ ದ್ವಾರ ದ ಮೂಲಕ ಬರಿದುಮಾಡಲಾಗುತ್ತದೆ. ಅಧಿಕ ವಿಶ್ಲೇಷಕ ಸಾಂದ್ರೀಕರಣಗಳನ್ನು ಹೊಂದಿರುವ ಸ್ಯಾಂಪಲ್‌ಗಳೊಂದಿಗೆ ಕೆಲಸ ಮಾಡುವಾಗ ಒಡೆದ ಇಂಜೆಕ್ಷನ್‌ಅನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ(>0.1%) ಆದರೆ ಕಡಿಮೆ ಪ್ರಮಾಣದ ವಿಶ್ಲೇಷಕಗಳನ್ನು ಹೊಂದಿರುವ ಶೋಧನಾ ವಿಶ್ಲೇಷಣೆಗಳಿಗೆ ಒಡೆಯದ ಇಂಜೆಕ್ಷನ್‌ಗಳು ಹೆಚ್ಚು ಸೂಕ್ತ. (<0.01%)
  • ಕಾಲಮ್‌ ಮೇಲಿನ ಪ್ರವೇಶದ್ವಾರ ; ಇಲ್ಲಿ ಸ್ಯಾಂಪಲ್‌ಅನ್ನು ಸಂಪೂರ್ಣವಾಗಿ, ಶಾಖವಿಲ್ಲದೆ ಸೇರಿಸಲಾಗುತ್ತದೆ.
  • ಪಿಟಿವಿ ಇಂಜೆಕ್ಟರ್‌ ; 1979ರಲ್ಲಿ ವೋಗ್ಟ್‌ ಮೊದಲ ಬಾರಿಗೆ ತಾಪಮಾನ-ಪ್ರೊಗ್ರಾಮ್‌ ಮಾಡಿ ಸ್ಯಾಂಪಲ್‌ ಸೇರಿಸುವುದನ್ನು ಪರಿಚಯಿಸಿದ. ಮೂಲತಃ, ವೋಗ್ಟ್‌ ಈ ತಂತ್ರವನ್ನು ಕ್ಯಾಪಿಲ್ಲರಿ ಗ್ಯಾಸ್‌ ಕ್ರೊಮ್ಯಾಟೊಗ್ರಫಿಯಲ್ಲಿ ದೊಡ್ಡ ಸ್ಯಾಂಪಲ್‌ ಪರಿಮಾಣಗಳನ್ನು ಸೇರಿಸುವ ವಿಧಾನವಾಗಿ ಅಭಿವೃದ್ಧಿಪಡಿಸಿದ (250 µLವರೆಗೆ). ವೋಗ್ಟ್‌ ಒಂದು ನಿಯಂತ್ರಿತ ಇಂಜೆಕ್ಷನ್‌ ವೇಗದಲ್ಲಿ ಸ್ಯಾಂಪಲ್‌ಅನ್ನು ಲೈನರ್‌ಗೆ ಸೇರಿಸಿದನು. ಲೈನರ್‌ನ ತಾಪಮಾನವನ್ನು ದ್ರಾವಕದ ಕುದಿ ಉಷ್ಣತೆಗಿಂತ ಸ್ವಲ್ಪ ಕೆಳಗೆ ಇಡಲಾಗಿತ್ತು. ಅಲ್ಪ-ಕುದಿಯ ದ್ರಾವಕವನ್ನು ನಿರಂತರವಾಗಿ ಆವಿ ಮಾಡಲಾಯಿತು ಮತ್ತು ಒಡೆದ ರೇಖೆಯ ಮೂಲಕ ಹೊರಕಳಿಸಲಾಯಿತು. ಈ ತಂತ್ರವನ್ನು ಆಧರಿಸಿ, ಪೋಯ್‌ ಪ್ರೊಗ್ರಾಮ್‌ ಮಾಡಿದ ಆವಿಕಾರಕ ಇಂಜೆಕ್ಟರ್‌ಅನ್ನು ತಯಾರಿಸಿದ; ಪಿಟಿವಿ. ಸ್ಯಾಂಪಲ್‍ಅನ್ನು ಪ್ರಾರಂಭದ ಅಲ್ಪ ಲೈನರ್‌ ತಾಪಮಾನದಲ್ಲಿ ಸೇರಿಸುವ ಮೂಲಕ ಸಾಂಪ್ರದಾಯಿಕ ಶಾಖ ಇಂಜೆಕ್ಷನ್‌ ತಂತ್ರದ ಅನಾನೂಕೂಲಗಳನ್ನು ಬೈಪಾಸ್‌ ಮಾಡಬಹುದು.
  • ಅನಿಲ ಮೂಲ ಪ್ರವೇಶದ್ವಾರ ಅಥವಾ ಅನಿಲ ಸ್ವಿಚಿಂಗ್ ವಾಲ್ವ್‌ ; ಸಾಮಾನ್ಯವಾಗಿ ಆರು-ದ್ವಾರದ ಸ್ವಿಚಿಂಗ್‌ ವಾಲ್ವ್‌ ಆದ ವಸ್ತುವಿಗೆ ಬಾಟೆಲ್‌ಗಳಲ್ಲಿ ಸಂಗ್ರಹಿಸಿದ ಅನಿಲ ಸ್ಯಾಂಪಲ್‌ಗಳನ್ನು ಅಂಟಿಸಲಾಗುತ್ತದೆ. ಸ್ಯಾಂಪಲ್‌ಅನ್ನು ಹಿಂದೆ ಬರಿದು ಮಾಡಿದ ಸ್ಯಾಂಪಲ್‌ ಕುಣಿಕೆ ಗೆ ವಿಸ್ತರಿಸಬಹುದಾದರೂ ವಾಹಕ ಅನಿಲದ ಪ್ರವಾಹಕ್ಕೆ ಅಡ್ಡಿಯುಂಟಾಗುವುದಿಲ್ಲ. ಸ್ವಿಚ್‌ ಆದ ನಂತರ, ಸ್ಯಾಂಪಲ್‌ ಲೂಪ್‌ನಲ್ಲಿರುವ ವಸ್ತುಗಳನ್ನು ವಾಹಕ ಅನಿಲ ಪ್ರವಾಹಕ್ಕೆ ಸೇರಿಸಲಾಗುತ್ತದೆ.
  • ಪರ್ಜ್‌-ಮತ್ತು-ಟ್ರ್ಯಾಪ್‌ ವ್ಯವಸ್ಥೆ ; ಒಂದು ನಿಶ್ಚಲ ಅನಿಲವನ್ನು ನೀರು ತುಂಬಿದ ಅನಿಲದ ಮೂಲಕ ಬುದ್ಬುದಿಸಲಾಗುತ್ತದೆ, ಇದರಿಂದ ಮಾತೃಕೆಯಲ್ಲಿರುವ ಬೇಗನೆ ಆವಿಯಾಗುವ-ಕರಗದ ರಾಸಾಯನಿಕಗಳನ್ನು ಹೊರದೂಡಲು ಸಹಾಯವಾಗುತ್ತದೆ. ಈ ಕರಗದ ರಾಸಾಯನಿಕಗಳನ್ನು ಒಂದು ಹೀರಿಕೊಳ್ಳಬಲ್ಲ ಸಾಮರ್ಥ್ಯದ ಕಾಲಮ್‍ನಲ್ಲಿ, ಸುತ್ತಿರುವ ತಾಪಮಾನದಲ್ಲಿ 'ಹಿಡಿದಿಡಲಾಗುತ್ತದೆ' (ಬಲೆ ಅಥವಾ ಸಾಂದ್ರಕಾರಕ ಎಂದೂ ಕರೆಯಲಾಗುತ್ತದೆ). ನಂತರ ಆ ಬಲೆಯನ್ನು ಕಾಯಿಸಿ ಕರಗದ ರಾಸಾಯನಿಕಗಳನ್ನು ವಾಹಕ ಅನಿಲದ ಪ್ರವಾಹಕ್ಕೆ ಬಿಡಲಾಗುತ್ತದೆ. ಪೂರ್ವ-ಸಾಂದ್ರೀಕರಣ ಅಥವಾ ಶುದ್ಧೀಕರಣ ಮಾಡಬೇಕಾದ ಸ್ಯಾಂಪಲ್‌ಗಳನ್ನು ಇಂತಹ ವ್ಯವಸ್ಥೆಗೆ ಹಾಕಬಹುದು, ಸಾಮಾನ್ಯವಾಗಿ ಒಡೆದ/ಒಡೆಯದ ದ್ವಾರಗಳಿಗೆ ಸೇರಿಕೊಂಡ ಹಾಗೆ.
  • ಘನ ಹಂತ ಸೂಕ್ಷ್ಮಸಂಗ್ರಹಣೆ ಯು ಪರ್ಜ್‍ ಮತ್ತು ಟ್ರ್ಯಾಪ್‌ ವ್ಯವಸ್ಥೆಗೆ ಸುಲಭವಾದ, ಕಡಿಮೆ ಖರ್ಚಿನ ಬದಲಿಯನ್ನು ಸೂಚಿಸುತ್ತದೆ. ಇದರ ಸಿರಿಂಜ್‌ ಬಹೋಪಯೋಗಿಯಾಗಿದ್ದು ಸರಳವಾದ ಒಡೆದ/ಒಡೆಯದ ದ್ವಾರಗಳನ್ನು ಇದು ಬಳಸಿಕೊಳ್ಳುತ್ತದೆ.

ಕಾಲಂಗಳು[ಬದಲಾಯಿಸಿ]

ಗ್ಯಾ‌ಸ್ ಕ್ರೊಮ್ಯಾಟೊಗ್ರಫಿಯಲ್ಲಿ ಎರಡು ರೀತಿಯ ಕಾಲಮ್‌ಗಳನ್ನು ಬಳಸಲಾಗುತ್ತದೆ:

  • ಪ್ಯಾಕ್ಡ್‌ ಕಾಲಮ್‌ಗಳು - ಇವು ಉದ್ದದಲ್ಲಿ 1.5 - 10 ಮೀಟರ್‌ ಮತ್ತು ಆಂತರಿಕ ವ್ಯಾಸ 2 - 4 ಮಿಮೀ ಹೊಂದಿರುತ್ತದೆ. ನಳಿಕೆಯನ್ನು ಸಾಮಾನ್ಯವಾಗಿ ಸ್ಟೀಲ್‌ ಅಥವಾ ಗಾಜಿನಿಂದ ಮಾಡಲಾಗುತ್ತದೆ. ಸರಿಯಾಗಿ ವಿಂಗಡಿಸಿದ, ದ್ರವ ಅಥವಾ ಘನ ನಿಶ್ಚಲ ಹಂತಗಳನ್ನು ಬಳಿದಿರುವ, ನಿಶ್ಚಲ, ಘನ ಆಧಾರ ವಸ್ತುಗಳ ಪ್ಯಾಕಿಂಗ್‌ ಹೊಂದಿರುತ್ತದೆ (ಉದಾ. ಏಕಾಣುಸಹಿತ ಮಣ್ಣು). ಯಾವ ವಸ್ತುವನ್ನು ಬಳಿದಿದೆ ಎಂಬುದು ಯಾವ ರೀತಿಯ ವಸ್ತುಗಳನ್ನು ಪ್ರಬಲವಾಗಿ ಹೀರಲಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ನಿರ್ದಿಷ್ಟ ರೀತಿಯ ಸಂಯುಕ್ತಗಳನ್ನು ಬೇರ್ಪಡಿಸಲು ರಚಿಸಿದ ಹಲವು ಕಾಲಮ್‍‌ಗಳು ಲಭ್ಯವಿದೆ.
  • ಕ್ಯಾಪಿಲರಿ ಕಾಲಮ್‌ಗಳು ಅತಿ ಸಣ್ಣ ಆಂತರಿಕ ವ್ಯಾಸವನ್ನು ಹೊಂದಿರುತ್ತವೆ, ಕೆಲವು ಹತ್ತು ಮಿಲಿಮೀಟರ್‌ಗಳವರೆಗೆ, ಮತ್ತು 25-60 ಮೀಟರ್‌ಗಳವರೆಗೆ ಉದ್ದ ಇರುವುದು ಸಾಮಾನ್ಯ. ಕಾಲಮ್‌ನ ಒಳಗಿನ ಗೋಡೆಗಳಿಗೆ ಸಕ್ರಿಯ ವಸ್ತುಗಳನ್ನು ಬಳಿಯಲಾಗುತ್ತದೆ (ಡಬ್ಲ್ಯೂ.ಸಿ.ಒ.ಟಿ.(WCOT) ಕಾಲಮ್‌ಗಳು), ಕೆಲವು ಕಾಲಮ್‌ಗಳು ಸಮಾನಾಂತರ ಸೂಕ್ಷ್ಮರಂಧ್ರಗಳನ್ನು ಒಳಗೊಂಡು ಘನದಂತೆ ತೋರುತ್ತದೆ (ಪಿ.ಎಲ್‌.ಒ.ಟಿ.(PLOT) ಕಾಲಮ್‌ಗಳು). ಬಹುತೇಕ ಕ್ಯಾಪಿಲರಿ ಕಾಲಮ್‌ಗಳು ಕರಗಿಸಿದ ಸಿಲಿಕಾದಿಂದ ಮಾಡಲಾಗಿರುತ್ತದೆ ಮತ್ತು ಹೊರಗೆ ಪಾಲಿಐಮೈಡ್‌ನ ಕವಚ ಇರುತ್ತದೆ. ಈ ಕಾಲಮ್‌ಗಳನ್ನು ಬಾಗಿಸಬಹುದು ಆದ್ದರಿಂದ ಒಂದು ಉದ್ದದ ಕಾಲಂಅನ್ನು ಸಣ್ಣ ಸುರುಳಿಯಾಗಿ ಸುತ್ತಬಹುದು.
  • ನಿಶ್ಚಲ ಹಂತದ ಅನನ್ವಯಗಳು, ಒಂದೇ ಕಾಲಮ್‌ನಲ್ಲಿ ಸಮಾನಾಂತರ ಕಾಲಮ್‌ಗಳ ಪರಿಹಾರಕ್ಕೆ ಎಡೆಮಾಡಿಕೊಡುವ ಸಂದರ್ಭಗಳಲ್ಲಿ ಹೊಸ ಅಭಿವೃದ್ಧಿ ಗಳನ್ನು ಎದುರು ನೋಡಲಾಗುತ್ತದೆ. ಈ ಹೊಸ ಅಭಿವೃದ್ಧಿಗಳಲ್ಲಿ ಕೆಲವೆಂದರೆ:
    • ಆಂತರಿಕವಾಗಿ ಕಾದ ಸೂಕ್ಷ್ಮವೇಗ ದ ಕಾಲಮ್‌ಗಳು, ಇಲ್ಲಿ ಎರಡು ಕಾಲಮ್‌ಗಳು - ಒಂದು ಆಂತರಿಕ ಕಾಯುವ ತಂತಿ ಮತ್ತು ಒಂದು ಉಷ್ಣಮಾಪಕವನ್ನು ಒಂದು ಸಾಮಾನ್ಯ ಕಾಲಮ್‌ ಕೋಶದೊಳಗೆ (ಸೂಕ್ಷ್ಮವೇಗ Archived 2009-06-20 ವೇಬ್ಯಾಕ್ ಮೆಷಿನ್ ನಲ್ಲಿ.) ಸೇರಿಸಲಾಗುತ್ತದೆ.
    • ಸೂಕ್ಷ್ಮನಿಬಿಡ ಕಾಲಮ್‌ಗಳು Archived 2009-02-27 ವೇಬ್ಯಾಕ್ ಮೆಷಿನ್ ನಲ್ಲಿ. (1/16" OD) ಕಾಲಮ್‌ನೊಳಗೆ ಕಾಲಮ್‌ ಜೋಡಿಸಿದ ಕಾಲಮ್‌ಗಳು. ಇಲ್ಲಿ ಹೊರಗಿನ ಕಾಲಮ್‌ ಸ್ಥಳವನ್ನು ಒಳಗಿನ ಕಾಲಮ್‌ ಸ್ಥಳಕ್ಕಿಂತ ಭಿನ್ನವಾಗಿ ಸಿದ್ಧಪಡಿಸಲಾಗುತ್ತದೆ, ಇದರಿಂದ ಎರಡು ಕಾಲಮ್‌ಗಳ ಬೇರ್ಪಡಿಕೆ ಚರ್ಯಗಳು ಒಂದೇ ಕಾಲಮ್‌ನಲ್ಲಿ ಒದಗುತ್ತದೆ. ಇದು ಪ್ರವೇಶದ್ವಾರದಲ್ಲಿ ಮತ್ತು ಕ್ಯಾಪಿಲ್ಲರಿ ಕಾಲಮ್‌ ಉಪಕರಣದಲ್ಲಿ ಸುಲಭವಾಗಿ ಹಿಡಿಸುತ್ತದೆ.

ಕಾಲಮ್‌ನ ಗುಂಟ ಸಾಗುವ ವೇಗದ ಮತ್ತು ಅಣುಗುಂಪಿನ ಹೀರಿಕೊಳ್ಳುವಿಕೆಯಲ್ಲಿಯ ತಾಪಮಾನ-ಅವಲಂಬನೆ ಯ ಕಾರಣ ಕಾಲಮ್‌ ತಾಪಮಾನವನ್ನು ನಿಖರವಾದ ಕೆಲಸಕ್ಕೆ ಬೇಕಾದ ಡಿಗ್ರಿಯ ಹತ್ತರಲ್ಲಿ ಕೆಲವು ಭಾಗದಷ್ಟು ಮಾತ್ರ ಇರುವಂತೆ ಜಾಗರೂಕತೆಯಿಂದ ನಿಯಂತ್ರಿಸಬೇಕಾಗುತ್ತದೆ. ತಾಪಮಾನವನ್ನು ಕಡಿಮೆ ಮಾಡುವುದರಿಂದ ಗರಿಷ್ಠ ಬೇರ್ಪಡಿಕೆ ಮಟ್ಟವು ಉಂಟಾಗಬಹುದು, ಆದರೆ ಅತ್ಯಧಿಕ ಬೇರ್ಪಡಿಕೆ ಸಮಯದಲ್ಲಿ ಪರಿಣಮಿಸಬಹುದು. ಬೇಕಾದ ಬೇರ್ಪಡಿಕೆಯನ್ನು ಒದಗಿಸಲು ತಾಪಮಾನವನ್ನು ನಿರಂತರವಾಗಿ ಹೆಚ್ಚಿಸಬಹುದು ಅಥವಾ ಹಂತಹಂತವಾಗಿ ಹೆಚ್ಚಿಸಬಹುದು. ಇದನ್ನು ತಾಪಮಾನ ಪ್ರೊಗ್ರಾಮ್‌ ಎಂದು ಕರೆಯಲಾಗುತ್ತದೆ. ವಿಶ್ಲೇಷಣೆಯ ಸಮಯದಲ್ಲಿ ಪ್ರವಾಹದ ವೇಗವನ್ನು ಬದಲಾಯಿಸಲು ವಿದ್ಯುನ್ಮಾನ ಒತ್ತಡ ನಿಯಂತ್ರಣವನ್ನು ಉಪಯೋಗಿಸಬಹುದು, ಇದರಿಂದ ಒಪ್ಪಬಹುದಾದ ಬೇರ್ಪಡಿಕೆ ಮಟ್ಟವನ್ನು ಕಾಯ್ದುಕೊಂಡೂ ಕಡಿಮೆ ಸಮಯದಲ್ಲಿ ಪರೀಕ್ಷೆ ಮಾಡಿ ಮುಗಿಸುವುದು ಸಾಧ್ಯವಾಗುತ್ತದೆ .

ವಾಹಕ ಅನಿಲದ ಆಯ್ಕೆ (ಸಂಚಾರಿ ಹಂತ ) ಬಹಳ ಮುಖ್ಯ, ಜಲಜನಕ ಅತ್ಯಂತ ಸಮರ್ಥವಾಗಿದ್ದು ಅತ್ಯುತ್ತಮ ಬೇರ್ಪಡಿಕೆಯನ್ನು ಕೊಡುತ್ತದೆ. ಆದಾಗ್ಯೂ, ಸಾಮರ್ಥ್ಯದಲ್ಲಿ ಜಲಜನಕಕ್ಕೆ ಹೋಲಿಸಬಹುದಾದ ಹೀಲಿಯಂ‌ ಅಧಿಕ ಪ್ರವಾಹ ವೇಗ ಸರಣಿಯನ್ನು ಹೊಂದಿದೆ, ಜೊತೆಗೆ ಹೀಲಿಯಂ‌ ಉರಿ ಹತ್ತಿಕೊಳ್ಳದ ವಸ್ತು ಮತ್ತು ಅಧಿಕ ಸಂಖ್ಯೆಯ ಪತ್ತೆಕಾರಕಗಳೊಂದಿಗೆ ಕೆಲಸ ಮಾಡುತ್ತದೆ. ಆದ್ದರಿಂದ ಅತಿ ಸಾಮಾನ್ಯವಾಗಿ ಬಳಸುವ ಅನಿಲ ಎಂದರೆ ಹೀಲಿಯಂ.

ಪತ್ತೆಕಾರಕs[ಬದಲಾಯಿಸಿ]

ಗ್ಯಾಸ್‌ ಕ್ರೊಮ್ಯಾಟೊಗ್ರಫಿಯಲ್ಲಿ ಹಲವು ರೀತಿಯ ಪತ್ತೆಕಾರಕಗಳನ್ನು ಬಳಸಲಾಗುತ್ತದೆ. ಅತಿ ಸಾಮಾನ್ಯವಾದವುಗಳೆಂದರೆ ಬೆಂಕಿಯ ವಿದ್ಯುದಣೀಕರಣ ಪತ್ತೆಕಾರಕ ಮತ್ತು ಉಷ್ಣವಾಹಕತ್ವ ಪತ್ತೆಕಾರಕ. ಎರಡು ಹಲವು ಭಾಗಗಳಿಗೆ ಸೂಕ್ಷ್ಮ ಗ್ರಾಹಿಯಾಗಿರುತ್ತದೆ ಮತ್ತು ಹಲವು ಸಾಂದ್ರೀಕರಣಗಳ ಮೇಲೆ ಕೆಲಸ ಮಾಡುತ್ತದೆ. ಉಷ್ಣವಾಹಕತ್ವ ಪತ್ತೆಕಾರಕಗಳು ಮೂಲಭೂತವಾಗಿ ಸಾರ್ವತ್ರಿಕವಾದದ್ದು ಮತ್ತು ವಾಹಕ ಅನಿಲವನ್ನು ಬಿಟ್ಟು ಬೇರೆ ಯಾವುದೇ ಭಾಗವನ್ನು ಪತ್ತೆಹಚ್ಚಲು ಇದನ್ನು ಬಳಸಬಹುದು (ತಾಪಮಾನದಲ್ಲಿ ಆ ಭಾಗಗಳ ಉಷ್ಣವಾಹಕತ್ವವು ವಾಹಕ ಅನಿಲಕ್ಕಿಂತ ಬೇರೆಯಾಗಿರುವವರೆಗೆ), ಬೆಂಕಿಯ ವಿದ್ಯುದಣೀಕರಣಗಳು ಪ್ರಾಥಮಿಕವಾಗಿ ಜಲಕಾರ್ಬನ್‌ಗಳಿಗೆ ಸೂಕ್ಷ್ಮಗ್ರಾಹಿಗಳಾಗಿರುತ್ತವೆ, ಮತ್ತು ಉಷ್ಣವಾಹಕತ್ವ ಪತ್ತೆಕಾರಕಗಳಿಗಿಂತಲೂ ಸೂಕ್ಷ್ಮಗ್ರಾಹಿಗಳಾಗಿರುತ್ತವೆ. ಆದಾಗ್ಯೂ, ಬೆಂಕಿಯ ವಿದ್ಯುದಣೀಕರಣ ಪತ್ತೆಕಾರಕಗಳು ನೀರನ್ನು ಪತ್ತೆಹಚ್ಚಲಾರವು. ಎರಡೂ ಪತ್ತೆಕಾರಕಗಳೂ ಸ್ವಲ್ಪಮಟ್ಟಿಗೆ ದೃಢವಾದವೇ. ಉಷ್ಣವಾಹಕತ್ವ ಪತ್ತೆಕಾರಕಗಳು ಅನಪಾಯಕಾರಿಯಾದ್ದರಿಂದ, ಬೆಂಕಿಯ ವಿದ್ಯುದಣೀಕರಣಕ್ಕೆ ಮೊದಲು ಸರಣಿಯಲ್ಲಿ ಇದನ್ನು ಉಪಯೋಗಿಸಬಹುದು (ಅಪಾಯಕಾರಿ), ಆದ್ದರಿಂದ ಒಂದೇ ವಿಶ್ಲೇಷಕದ ಪೂರಕ ವಿವರವನ್ನು ಕೊಟ್ಟಂತಾಗುತ್ತದೆ.

ಇತರ ಪತ್ತೆಕಾರಕಗಳು ನಿರ್ದಿಷ್ಟ ಪ್ರಕಾರದ ವಸ್ತುಗಳಿಗೆ ಮಾತ್ರ ಸೂಕ್ಶ್ಮಗ್ರಾಹಿಯಾಗಿವೆ, ಅಥವಾ ಸಣ್ಣ ಸಾಂದ್ರೀಕರಣಗಳ ಶ್ರೇಣಿಯ ಮೇಲೆ ಮಾತ್ರ ಕೆಲಸ ಮಾಡಬಲ್ಲುದು. ಅವೆಂದರೆ:

ಕೆಲವು ಕ್ರೊಮ್ಯಾಟೊಗ್ರಾಫ್‌ಗಳನ್ನು ಪತ್ತೆಕಾರಕಆಗಿ ವರ್ತಿಸುವ ಸಮೂಹ ವರ್ಣಪಟಲಮಾಪಕಗಳಿಗೆ ಜೋಡಿಸಿರಲಾಗುತ್ತದೆ. ಇದಕ್ಕೆ ಇಂಗ್ಲಿಷ್‌ನಲ್ಲಿ ಜಿಸಿ-ಎಂಎಸ್‌ ಎಂದು ಹೆಸರು. ಕೆಲವು ಜಿಸಿ-ಎಂಎಸ್‌ಗಳನ್ನು ಎನ್‌ಎಂ‌ಆರ್‌ ವರ್ಣಪಟಲಮಾಪಕಕ್ಕೆ ಜೋಡಿಸಿರಲಾಗುತ್ತದೆ, ಇದು ಬ್ಯಾಕ್‌ಅಪ್‌ ಪತ್ತೆಕಾರಕಆಗಿ ಕೆಲಸ ಮಾಡುತ್ತದೆ. ಈ ಜೋಡಣೆಗೆ ಇಂಗ್ಲಿಷ್‌ನಲ್ಲಿ ಜಿಸಿ-ಎಂಎಸ್‌-ಎನ್‌ಎಂಆರ್‌ ಎಂದು ಹೆಸರು. ಕೆಲವು ಜಿಸಿ-ಎಂಎಸ್‌-ಎನ್‌ಎಂಆರ್‌ಗಳನ್ನು, ಬ್ಯಾಕ್‌ಅಪ್‌ ಪತ್ತೆಕಾರಕಆಗಿ ಕೆಲಸ ಮಾಡುವ ಅತಿಗೆಂಪು ವರ್ಣಪಟಲಫೋಟೋಮಾಪಕಕ್ಕೆ ಜೋಡಿಸಲಾಗುತ್ತದೆ. ಈ ಜೋಡಣೆಗೆ ಇಂಗ್ಲಿಷ್‌ನಲ್ಲಿ ಜಿಸಿ-ಎಂಎಸ್‌-ಎನ್‌ಎಂ‌ಆರ್‌-ಐಆರ್‌ ಎಂದು ಹೆಸರು. ಆದಾಗ್ಯೂ, ಅನೇಕ ವಿಶ್ಲೇಷಣೆಗಳನ್ನು ಕೇವಲ ಶುದ್ಧ ಜಿಸಿ-ಎಂಎಸ್‌ನಿಂದಲೇ ಪರಿಪೂರ್ಣ ಮಾಡಬಹುದಾದ ಕಾರಣ ಇದು ಬಹಳ ವಿರಳ ಎಂಬುದನ್ನೂ ಗಮನಿಸಬೇಕು.

ವಿಧಾನಗಳು[ಬದಲಾಯಿಸಿ]

ವಿಧಾನ ಎಂದರೆ ಒಂದು ಗೊತ್ತಾದ ವಿಶ್ಲೇಷಣೆಗೆ ಗ್ಯಾಸ್ ಕ್ರೊಮ್ಯಾಟೊಗ್ರಫಿಯು ಕಾರ್ಯ ನಿರ್ವಹಿಸುವ ಪರಿಸ್ಥಿತಿಗಳ ಒಟ್ಟು ಮೊತ್ತ. ವಿಧಾನದ ಅಭಿವೃದ್ಧಿ ಎನ್ನುವುದು ಬೇಕಾದ ವಿಶ್ಲೇಷಣೆಗೆ ಯಾವ ಪರಿಸ್ಥಿತಿಗಳು ಸಮರ್ಪಕವಾಗಿವೆ ಮತ್ತು/ಅಥವಾ ಸೂಕ್ತವಾಗಿವೆ ಎಂಬುದನ್ನು ನಿರ್ಧರಿಸುವ ಪ್ರಕ್ರಿಯೆ.

ಬೇಕಾದ ವಿಶ್ಲೇಷಣೆಗೆ ತಕ್ಕ ಹಾಗೆ ಬದಲಾಯಿಸಬಹುದಾದ ಪರಿಸ್ಥಿತಿಗಳೆಂದರೆ ಪ್ರವೇಶದ್ವಾರ ತಾಪಮಾನ, ಪತ್ತೆಕಾರಕ ತಾಪಮಾನ, ಕಾಲಮ್‌ ತಾಪಮಾನ ಮತ್ತು ತಾಪಮಾನ ಪ್ರೊಗ್ರಾಮ್‌, ವಾಹಕ ಅನಿಲ ಮತ್ತು ವಾಹಕ ಅನಿಲದ ಪ್ರವಾಹ ವೇಗ, ಕಾಲಮ್‌ನ ನಿಶ್ಚಲ ಹಂತ, ವ್ಯಾಸ ಮತ್ತು ಉದ್ದ, ಪ್ರವೇಶದ್ವಾರದ ವಿಧ ಮತ್ತು ಪ್ರವಾಹ ವೇಗ, ಸ್ಯಾಂಪಲ್‌ನ ಗಾತ್ರ ಮತ್ತು ಇಂಜೆಕ್ಷನ್‌ ತಂತ್ರ. ಗ್ಯಾಸ್‌‍ ಕ್ರೊಮ್ಯಾಟೊಗ್ರಫಿಯಲ್ಲಿ ಅನುಸ್ಥಾಪಿತವಾದ ಪತ್ತೆಕಾರಕ(ಗಳ)ನ್ನು ಅವಲಂಬಿಸಿ (ಕೆಳಗೆ ನೋಡಿ), ಬದಲಾಯಿಸಬಹುದಾದ ಹಲವು ಪತ್ತೆಕಾರಕ ಪರಿಸ್ಥಿತಿಗಳು ಇರಬಹುದು. ಕೆಲವು ಗ್ಯಾಸ್‌ ಕ್ರೊಮ್ಯಾಟೊಗ್ರಾಫ್‌ನಲ್ಲಿ ಸ್ಯಾಂಪಲ್‌ ಮತ್ತು ವಾಹಕ ಪ್ರವಾಹದ ದಾರಿಯನ್ನೇ ಬದಲಾಯಿಸುವ ವಾಲ್ವ್‌ಗಳು ಇರುತ್ತವೆ. ಈ ವಾಲ್ವ್‌ಗಳನ್ನು ಮುಚ್ಚುವ ಮತ್ತು ತೆಗೆಯುವ ಸಮಯಗಳು ವಿಧಾನದ ಅಭಿವೃದ್ಧಿಗೆ ಪ್ರಮುಖವಾಗಬಹುದು.

ಮೇಲಿರುವ ಚಿತ್ರವು, ಮೂರು ನಿಮಿಷದ ಆವೃತ್ತಿಯಂತೆ ನಿರಂತರವಾಗಿ ಕೆಲಸ ಮಾಡುವ ಜಿಯೋಸ್ಟ್ರ್ಯಾಟಾ ಟೆಕ್ನಾಲಜೀಸ್‌ ಎಕ್ಲಿಪ್ಸ್‌ ಗ್ಯಾಸ್‌ ಕ್ರೊಮ್ಯಾಟೊಗ್ರಾಫ್‌ನ ಒಳಭಾಗವನ್ನು ತೋರಿಸುತ್ತದೆ. ಸ್ಯಾಂಪಲ್‌ ಕುಣಿಕೆಯೊಳಗೆ ಪರೀಕ್ಷಾ ಅನಿಲವನ್ನು ಬಿಡಲು ಎರಡು ವಾಲ್ವ್‌ಗಳನ್ನು ಬಳಸಲಾಗುತ್ತದೆ. ಸ್ಯಾಂಪಲ್‌ ಕುಣಿಕೆಯನ್ನು ಪರೀಕ್ಷಾ ಅನಿಲದಿಂದ ತುಂಬಿದ ನಂತರ, ಸ್ಯಾಂಪಲ್‌ ಕುಣಿಕೆಯ ಮೇಲೆ ವಾಹಕ ಅನಿಲದ ಒತ್ತಡವನ್ನು ತರಲು ವಾಲ್ವ್‌ಗಳನ್ನು ಮತ್ತೆ ಸ್ವಿಚ್‌ ಮಾಡಲಾಗುತ್ತದೆ ಮತ್ತು ಸ್ಯಾಂಪಲ್‌ಅನ್ನು ಬೇರ್ಪಡಿಕೆಗಾಗಿ ಕಾಲಮ್‌ನ ಮೂಲಕ ನುಗ್ಗಿಸಲಾಗುತ್ತದೆ.

ವಾಹಕ ಅನಿಲ ಆಯ್ಕೆ ಮತ್ತು ಪ್ರವಾಹ ವೇಗಗಳು[ಬದಲಾಯಿಸಿ]

ಸಾಮಾನ್ಯವಾದ ವಾಹಕ ಅನಿಲಗಳೆಂದರೆ ಹೀಲಿಯಂ‌, ಸಾರಜನಕ, ಆರ್ಗಾನ್‌, ಜಲಜನಕ ಮತ್ತು ಗಾಳಿ. ಯಾವ ಗಾಳಿಯನ್ನು ಉಪಯೋಗಿಸಬೇಕೆಂಬುದನ್ನು ಯಾವ ಪತ್ತೆಕಾರಕಅನ್ನು ಬಳಸಲಾಗುತ್ತಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ, ಉದಾಹರಣೆಗೆ, ಡಿಐಡಿಗೆ ವಾಹಕ ಅನಿಲವಾಗಿ ಹೀಲಿಯಂ‌ ಬೇಕು. ಆದಾಗ್ಯೂ, ಅನಿಲ ಸ್ಯಾಂಪಲ್‌ಗಳನ್ನು ವಿಶ್ಲೇಷಿಸುವಾಗ, ಕೆಲವೊಮ್ಮೆ ವಾಹಕವನ್ನು ಸ್ಯಾಂಪಲ್‌ನ ಮಾತೃಕೆಯ ಆಧಾರದ ಮೇಲೆ ಆಯ್ಕೆ ಮಾಡಲಗುತ್ತದೆ. ಉದಾಹರಣೆಗೆ ಒಂದು ಆರ್ಗಾನ್‌ನ ಮಿಶ್ರಣವನ್ನು ವಿಶ್ಲೇಷಿಸುವಾಗ, ಆರ್ಗಾನ್‌ ವಾಹಕವನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ, ಏಕೆಂದರೆ ಸ್ಯಾಂಪಲ್‌ನಲ್ಲಿರುವ ಆರ್ಗಾನ್‌ ಕ್ರೊಮ್ಯಾಟೊಗ್ರಾಮ್‌ನಲ್ಲಿ ಕಾಣುವುದಿಲ್ಲ. ಸುರಕ್ಷತೆ ಮತ್ತು ಲಭ್ಯತೆಯೂ ಕೂಡ ವಾಹಕ ಅನಿಲದ ಆಯ್ಕೆಯನ್ನು ನಿರ್ಧರಿಸಬಹುದು, ಉದಾಹರಣೆಗೆ, ಜಲಜನಕ ಹತ್ತಿಕೊಳ್ಳಬಹುದು, ಮತ್ತು ಅತಿ-ಶುದ್ಧ ಹೀಲಿಯಂ‌ ವಿಶ್ವದ ಕೆಲವು ಪ್ರದೇಶದಲ್ಲಿ ಸಿಗದೇ ಹೋಗಬಹುದು. (ನೋಡಿ: ಹೀಲಿಯಂ‌--ಹುಟ್ಟು ಮತ್ತು ಉತ್ಪಾದನೆ.)

ಶೀಘ್ರಗ್ರಾಹಿತ್ವದ ಮಟ್ಟವು ಪ್ರಮುಖ ಪಾತ್ರ ವಹಿಸುತ್ತಾದರೂ, ಅನೇಕವೇಳೆ ಪತ್ತೆಕಾರಕ ವಾಹಕ ಅನಿಲದ ಶುದ್ಧತೆಯನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ, 99.995% ಅಥವಾ ಅದಕ್ಕಿಂತ ಹೆಚ್ಚಿನ ಶುದ್ಧ ವಸ್ತುಗಳನ್ನು ಬಳಸಲಾಗುತ್ತದೆ. ಸಾಮಾನ್ಯ ಶುದ್ಧತೆಗಳನ್ನು ಗುರುತಿಸುವ ಹೆಸರುಗಳೆಂದರೆ "ಜೀರೋ ಗ್ರೇಡ್‌" "ಅಲ್ಟ್ರಾ-ಹೈ ಪ್ಯೂರಿಟಿ ಗ್ರೇಡ್‌," "4.5 ಗ್ರೇಡ್‌" ಮತ್ತು "5.0 ಗ್ರೇಡ್‌."

ತಾಪಮಾನವು ಹೇಗೆ ವಿಶ್ಲೇಷಣೆಯ ಮೇಲೆ ಪರಿಣಾಮ ಬೀರುತ್ತದೆಯೋ ಹಾಗೆಯೇ ವಾಹಕ ಅನಿಲದ ಪ್ರವಾಹ ವೇಗ (ಮೇಲೆ ನೋಡಿ). ಪ್ರವಾಹ ವೇಗವು ಹೆಚ್ಚಿದ್ದಷ್ಟೂ ವಿಶ್ಲೇಷಣೆ ವೇಗವಾಗಿ ಆಗುತ್ತದೆ, ಆದರೆ ವಿಶ್ಲೇಷಣೆಗೊಳಪಡುವ ವಸ್ತುಗಳ ಬೇರ್ಪಡಿಕೆ ನಿಧಾನವಾಗಿ ಆಗುತ್ತದೆ. ಆದ್ದರಿಂದ, ಪ್ರವಾಹ ವೇಗವನ್ನು ಆಯ್ಕೆ ಮಾಡುವುದೆಂದರೆ ಬೇರ್ಪಡಿಕೆಯ ಮಟ್ಟ ಮತ್ತು ವಿಶ್ಲೇಷಣೆಯ ಸಮಯದ ನಡುವೆ ಒಂದರ ಆಯ್ಕೆ, ಕಾಲಮ್‌ ತಾಪಮಾನದ ಆಯ್ಕೆಯ ಹಾಗೆ.

1990ಕ್ಕೆ ಮೊದಲು ತಯಾರಿಸಿದ ಗ್ಯಾಸ್‌ ಕ್ರೊಮ್ಯಾಟೊಗ್ರಾಫ್‌ಗಳಲ್ಲಿ, ವಾಹಕ ಪ್ರವೇಶದ್ವಾರ ಒತ್ತಡವನ್ನು ಅಥವಾ "ಮೇಲ್ಮಟ್ಟದ ಕಾಲಮ್‌ ಒತ್ತಡ"ವನ್ನು ನಿಯಂತ್ರಿಸುವ ಮೂಲಕ ವಾಹಕ ಪ್ರವಾಹ ವೇಗವನ್ನು ನಿಯಂತ್ರಿಸಲಾಗುತ್ತಿತ್ತು. ವಿದ್ಯುನ್ಮಾನ ಪ್ರವಾಹ ಮಾಪಕದಿಂದ ಅಥವಾ ಬುದ್ಬುದ ಪ್ರವಾಹ ಮಾಪಕದಿಂದ ನಿಜವಾದ ವಾಹಕವೇಗವನ್ನು ಕಾಲಮ್‌ನ ಬಹಿದ್ವಾರದಲ್ಲಿ ಅಳೆಯಲಾಗುತ್ತಿತ್ತು, ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವ ಮತ್ತು ಹತಾಶೆ ಹುಟ್ಟಿಸುವ ಪ್ರಕ್ರಿಯೆಯಾಗಿತ್ತು. ಒತ್ತಡವನ್ನು ಪರೀಕ್ಷೆಯ ಸಮಯದಲ್ಲಿ ಬದಲಾಯಿಸುವುದು ಸಾಧ್ಯವಿರಲಿಲ್ಲ, ಆದ್ದರಿಂದ ವಿಶ್ಲೇಷಣೆಯ ಸಮಯದಲ್ಲಿ ಪ್ರವಾಹವು ಸ್ಥಿರವಾಗಿಯೇ ಇರುತ್ತಿತ್ತು. ಪ್ರವಾಹ ವೇಗ ಮತ್ತು ಪ್ರವೇಶ ದ್ವಾರ ಒತ್ತಡವನ್ನು ಪಾಯ್‌ಸ್ಯುಲ್ಲೇಸ್‌ ಈಕ್ವೇಷನ್‌ ಆಫ್‌ ಕಂಪ್ರೆಸ್ಸೆಬಲ್‌ ಫ್ಲ್ಯೂಯಿಡ್ಸ್‌ನಿಂದ ಕಂಡುಹಿಡಿಯಲಾಗುತ್ತದೆ.

ಆದರೆ, ಅನೇಕ ಆಧುನಿಕ ಗ್ಯಾಸ್‌ ಕ್ರೊಮ್ಯಾಟೊಗ್ರಾಫ್‌ಗಳು ಪ್ರವಾಹ ವೇಗವನ್ನು ವಿದ್ಯುಮಾನಿಕವಾಗಿ ಅಳೆಯುತ್ತವೆ ಮತ್ತು ಪ್ರವಾಹ ವೇಗವನ್ನು ನಿರ್ಧರಿಸಲು ಅನಿಲದ ಒತ್ತಡವನ್ನು ವಿದ್ಯುನ್ಮಾನಿಕವಾಗಿ ನಿಯಂತ್ರಿಸುತ್ತವೆ. ಪರಿಣಾಮವೇನೆಂದರೆ, ವಾಹಕ ಒತ್ತಡಗಳನ್ನು ಮತ್ತು ಪ್ರವಾಹ ವೇಗಗಳನ್ನು ಪರೀಕ್ಷೆಯ ಸಮಯದಲ್ಲಿ ಬದಲಾಯಿಸಬಹುದು; ತಾಪಮಾನ ಪ್ರೊಗ್ರಾಮ್‌ಗಳ ಹಾಗೆ ಒತ್ತಡ/ಪ್ರವಾಹ ಪ್ರೊಗ್ರಾಮ್‌ಗಳನ್ನು ಸರಿಪಡಿಸಬಹುದು.

ನಿಶ್ಚಲ ಸಂಯುಕ್ತ ಆಯ್ಕೆ[ಬದಲಾಯಿಸಿ]

ಒಂದು ದ್ರಾವಣದ ದೃವೀಯತೆ ನಿಶ್ಚಲ ಸಂಯುಕ್ತವನ್ನು ಆಯ್ಕೆ ಮಾಡುವಲ್ಲಿ ಬಹಳ ಪ್ರಮುಖ. ಒಂದು ನಿರ್ಧಿಷ್ಟ ಸಂದರ್ಭದಲ್ಲಿ ದ್ರಾವಣದಂತಹದ್ದೇ ದೃವೀಯತೆಯನ್ನು ಹೊಂದಿರಬಹುದು. ನಳಿಕಾ ಕಾಲಮ್‌ಗಳಲ್ಲಿ ಸಾಮಾನ್ಯ ನಿಶ್ಚಲ ಹಂತಗಳೆಂದರೆ ಸೈನೊಪ್ರೊಪಿಲ್ಫಿನಾಯಿಲ್‌, ಡಿಮಿಥಾಯಿಲ್‌ ಪಾಲಿಸೈಲೋಕ್ಸೇನ್‌, ಕಾರ್ಬೊವ್ಯಾಕ್ಸ್‌ ಪಾಲಿಇಥಾಯಿಲ್‌ನೆಗ್ಲಿಕೋಲ್‌, ಬೈಸ್ಯಾನೊಪ್ರೊಪಿಲ್‌ ಸೈನೊಪ್ರೊಪಿಲ್‌ಫಿನಾಯಿಲ್ ಪಾಲಿಸಿಲೊಕ್ಸೇನ್‌ ಮತ್ತು ಡಿಫಿನಾಯಿಲ್‌ ಡಿಮಿಥಾಯಿಲ್‌ ಪಾಲಿಸಿಲೋಕ್ಸೇನ್‌. ಪ್ಯಾಕ್ಡ್‌ ಕಾಲಮ್‌ಗಳಿಗೆ ಅಧಿಕ ಆಯ್ಕೆಗಳು ಲಭ್ಯವಿದೆ.[೨]

ಪ್ರವೇಶ ದ್ವಾರದ ವಿಧಗಳು ಮತ್ತು ಪ್ರವಾಹ ವೇಗಗಳು[ಬದಲಾಯಿಸಿ]

ಪ್ರವೇಶದ್ವಾರದ ವಿಧ ಮತ್ತು ಇಂಜೆಕ್ಷನ್‌ ತಂತ್ರವು ಸ್ಯಾಂಪಲ್‌ ದ್ರವವೋ, ಅನಿಲವೋ ಹೀರಿದ್ದೋ ಅಥವಾ ಘನ ಸ್ಥಿತಿಯಲ್ಲಿರುವುದೋ ಮತ್ತು ಆವಿ ಮಾಡಬೇಕಾದ ದ್ರಾವಕದ ಮಾತೃಕೆ ಇದೆಯೋ ಇಲ್ಲವೋ ಎಂಬುದರ ಮೇಲೆ ಅವಲಂಬಿತವಾಗುತ್ತದೆ. ಪರಿಸ್ಥಿತಿಗಳು ಸರಿಯಾಗಿ ತಿಳಿದಿದ್ದರೆ ಕರಗಿದ ಸ್ಯಾಂಪಲ್‌ಗಳನ್ನು ಸಿಒಸಿ ಇಂಜೆಕ್ಟರ್‌ ಮೂಲಕ ನೇರವಾಗಿ ಕಾಲಮ್‌ನ ಮೇಲೆ ಹಾಕಬಹುದು; ಒಂದು ದ್ರಾವಕದ ಮಾತೃಕೆಯನ್ನು ಆವಿಮಾಡಬೇಕಾದರೆ ಅಥವಾ ಭಾಗಶಃ ತೆಗೆದುಹಾಕಬೇಕಾದರೆ, ಒಂದು ಒಡೆದ/ಒಡೆಯದ ಇಂಜೆಕ್ಟರ್‌ಅನ್ನು ಬಳಸಲಾಗುತ್ತದೆ (ಅತಿ ಸಾಮಾನ್ಯ ಇಂಜೆಕ್ಷನ್‌ ತಂತ್ರ); ಅನಿಲ ಸ್ಯಾಂಪಲ್‌ಗಳನ್ನು (ಉದಾಹರಣೆಗೆ ಗಾಳಿ ಸಿಲಿಂಡರ್‌ಗಳು) ಸಾಮಾನ್ಯವಾಗಿ ಅನಿಲ ಸ್ವಿಚಿಂಗ್‌ ವಾಲ್ವ್‌ ವ್ಯವಸ್ಥೆಯನ್ನು ಬಳಸಿಕೊಂಡು ಇಂಜೆಕ್ಟ್‌ ಮಾಡಬಹುದು; ಹೀರಿದ ಸ್ಯಾಂಪಲ್‌ಗಳನ್ನು (ಉದಾಹರಣೆಗೆ, ಹೀರಿಕೊಳ್ಳುವ ಟ್ಯೂಬ್‌ಗಳಲ್ಲಿ) ಈ ರೀತಿಯ ಪರ್ಜ್‌ ಮತ್ತು ಟ್ರ್ಯಾಪ್‌ ವ್ಯವಸ್ಥೆಗಳಂತಹ ಬಾಹ್ಯ (ಆನ್‌ಲೈನ್‌ ಅಥವಾ ಆಫ್‌ಲೈನ್‌) ಹೀರಿಕೊಳ್ಳಬಲ್ಲ ಉಪಕರಣಗಳನ್ನು ಬಳಸಿಕೊಂಡು ಒಳತೂರಿಸಲಾಗುತ್ತದೆ ಅಥವಾ ಒಡೆದ/ಒಡೆಯದ ಒಳತೂರಿಸುವ ಉಪಕರಣ‌ಗಳನ್ನು ಬಳಸಿಕೊಂಡು ಹೀರಿಕೊಳ್ಳುವಂತೆ ಮಾಡಲಾಗುತ್ತದೆ (ಎಸ್‌ಪಿಎಮ್‌ಇ ಉಪಯೋಗಗಳು).

ಸ್ಯಾಂಪಲ್‌ ಗಾತ್ರ ಮತ್ತು ಇಂಜೆಕ್ಷನ್‌ ತಂತ್ರ[ಬದಲಾಯಿಸಿ]

ಸ್ಯಾಂಪಲ್‌ ಇಂಜೆಕ್ಷನ್‌[ಬದಲಾಯಿಸಿ]

ಅನಿಲ ವರ್ಣರೇಖನದಲ್ಲಿ ಹತ್ತನೇಯ ನಿಯಮ

ನಿಜವಾದ ಕ್ರೊಮ್ಯಾಟೊಗ್ರಫಿ ವಿಶ್ಲೇಷಣೆಯು ಸ್ಯಾಂಪಲ್‌ಅನ್ನು ಕಾಲಮ್‌ಗೆ ಹಾಕುವುದರಿಂದ ಪ್ರಾರಂಭವಾಗುತ್ತದೆ. ಕ್ಯಾಪಿಲ್ಲರಿ ಅನಿಲ ಕ್ರೊಮ್ಯಾಟೊಗ್ರಫಿಯ ಅಭಿವೃದ್ಧಿಯು ಇಂಜೆಕ್ಷನ್‌ ತಂತ್ರದಲ್ಲಿ ಹಲವು ತೊಂದರೆಗಳಿಗೆ ಎಡೆ ಮಾಡಿಕೊಟ್ಟಿತು. ಪ್ಯಾಕ್ಡ್‌ ಕಾಲಮ್‌ಗಳೊಂದಿಗೆ ಅನೇಕವೇಳೆ ಉಪಯೋಗಿಸುವ ಆನ್‌-ಕಾಲಮ್‌ ಇಂಜೆಕ್ಷನ್‌ ಕ್ಯಾಪಿಲ್ಲರಿ ಕಾಲಮ್‌ಗಳಿಂದ ಸಾಧ್ಯವಾಗಲಿಲ್ಲ. ಕ್ಯಾಪಿಲ್ಲರಿ ಅನಿಲ ಕ್ರೊಮ್ಯಾಟೊಗ್ರಫಿಯಲ್ಲಿ ಇಂಜೆಕ್ಷನ್‌ ವ್ಯವಸ್ಥೆಯು ಈ ಎರಡು ಆವಶ್ಯಕತೆಗಳನ್ನು ಪೂರೈಸಬೇಕು:

  1. ಇಂಜೆಕ್ಟ್‌ ಮಾಡಿದ ಮೊತ್ತವು ಕಾಲಮ್‌ಗೆ ಅತಿಭಾರವಾಗಬಾರದು.
  2. ಕ್ರೊಮ್ಯಾಟೊಗ್ರಾಫ್‌ನ ಪ್ರಕ್ರಿಯೆಯ ಕಾರಣದಿಂದಾಗುವ ವಿಸ್ತರಣೆಗಿಂತ ಇಂಜೆಕ್ಟ್‌ ಮಾಡಿದ ಪ್ಲಗ್‌ನ ಅಗಲವು ಕಡಿಮೆ ಇರಬೇಕು. ಈ ಆವಶ್ಯಕತೆಯನ್ನು ಪೂರೈಸದಿದ್ದಲ್ಲಿ ಕಾಲಮ್‌ನ ಬೇರ್ಪಡಿಕೆ ಸಾಮರ್ಥ್ಯವು ಕಡಿಮೆ ಆಗುತ್ತದೆ. ಒಂದು ಸಾಮಾನ್ಯ ನಿಯಮದ ಪ್ರಕಾರ, ಇಂಜೆಕ್ಟ್‌ ಮಾಡಿದ ಪರಿಮಾಣ Vinj, ಮತ್ತು ಪತ್ತೆಕಾರಕ ವಿದ್ಯುತ್ಕೋಶದ ಪರಿಮಾಣ, Vdet - ಇವುಗಳು ಕಾಲಮ್‌ನಿಂದ ಹೊರಹೋಗುವಾಗ ಬೇಕಾದ ವಸ್ತುವಿನ ಅಣುಗಳನ್ನು ಹೊಂದಿರುವ ಸ್ಯಾಂಪಲ್‌ನ ಪರಿಮಾಣವು ತೆಗೆದುಕೊಂಡ ಜಾಗದಲ್ಲಿ 1/10 ಭಾಗದಷ್ಟು ಜಾಗವನ್ನು ಮಾತ್ರ ತೆಗೆದುಕೊಳ್ಳಬೇಕು.

ಒಂದು ಒಳ್ಳೆಯ ಇಂಜೆಕ್ಷನ್‌ ತಂತ್ರವು ಪೂರೈಸಬೇಕಾದ ಆವಶ್ಯಕತೆಗಳೆಂದರೆ:

  • ಅದು ಕಾಲಮ್‌ನ ನಿರ್ದಿಷ್ಟ ಬೇರ್ಪಡಿಕೆ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕು
  • ಪ್ರಾತಿನಿಧಿಕ ಸ್ಯಾಂಪಲ್‌ಗಳಲ್ಲಿ ಸಣ್ಣ ಮೊತ್ತಗಳ ನಿಖರವಾದ ಮತ್ತು ಮರುಉತ್ಪಾದಿಸಬಹುದಾದ ಒಳತೂರುವಿಕೆಗೆ ಅವಕಾಶ ಕೊಡಬೇಕು.
  • ಸ್ಯಾಂಪಲ್‌ನ ಬಂಧದಲ್ಲಿ ಯಾವ ಬದಲಾವಣೆಯನ್ನೂ ತರಬಾರದು. ಕುದಿಯುವ ಬಿಂದು, ದೃವೀಯತೆ, ಸಾಂದ್ರೀಕರಣ ಅಥವಾ ಉಷ್ಣ/catalytic ದೃಢತೆಯ ಆಧಾರದ ಮೇಲೆ ಯಾವ ತಾರತಮ್ಯವನ್ನೂ ತೋರಬಾರದು.
  • ಅತಿ ಸಣ್ಣ ಪ್ರಮಾಣದ ವಿಶ್ಲೇಷಣೆಗೆ ಹಾಗೆಯೇ ಸಾಂದ್ರವಾದ ಸ್ಯಾಂಪಲ್‌ಗಳಿಗೆ ಅದು ಅನ್ವಯವಾಗುವಂತಿರಬೇಕು.

'' ಸ್ಯಾಂಪಲ್‌ಗಳು ಮತ್ತು ಗ್ಯಾಸ್‌ ಕ್ರೊಮ್ಯಾಟೊಗ್ರಾಫ್‌ಗೆ ಸಂವಾದಿಯಾದ ಕಾಲಮ್‌ನ ಆಯಾಮಗಳು [ಲಿಮಿಟ್‌ ಟೆಂಪ್] [ಡಿಸೆಂಬರ್-2009]

ERROR: {{Expand}} is a disambiguation entry; please do not transclude it. Instead, use a more specific template, such as {{Incomplete}}, {{Expand list}}, {{Missing}}, or {{Expand section}}.

ಕಾಲಮ್‌ ವಿಭಾಗ[ಬದಲಾಯಿಸಿ]

ERROR: {{Expand}} is a disambiguation entry; please do not transclude it. Instead, use a more specific template, such as {{Incomplete}}, {{Expand list}}, {{Missing}}, or {{Expand section}}.

ಕಾಲಮ್‌ ತಾಪಮಾನ ಮತ್ತು ತಾಪಮಾನ ಪ್ರೊಗ್ರಾಮ್‌[ಬದಲಾಯಿಸಿ]

ಅನಿಲ ವರ್ಣರೇಖನ ಒವನ್, ಕಿರುಕೊಳವೆ ಕಾಲಮ್ ತೋರಿಸಲು ತೆರೆದಿದೆ.

ಗ್ಯಾಸ್‌ ಕ್ರೊಮ್ಯಾಟೊಗ್ರಫಿಯಲ್ಲಿ ಕಾಲಮ್‌(ಗಳ)ನ್ನು ಒಂದು ಓವೆನ್‌ನಲ್ಲಿ ಇಡಲಾಗುತ್ತದೆ, ಇದರ ತಾಪಮಾನವನ್ನು ವಿದ್ಯುನ್ಮಾನಿಕವಾಗಿ ನಿಖರವಾಗಿ ಕಂಡುಹಿಡಿಯಲಾಗುತ್ತದೆ. ("ಕಾಲಮ್‌ನ ತಾಪಮಾನ"ದ ಬಗ್ಗೆ ಮಾತನಾಡುವಾಗ ವಿಶ್ಲೇಷಕನು ತಾಂತ್ರಿಕವಾಗಿ ಕಾಲಮ್‌ ಓವೆನ್‌ನ ತಾಪಮಾನವನ್ನೇ ಪ್ರಸ್ತಾಪಿಸಿರುತ್ತಾನೆ. ಆದಾಗ್ಯೂ, ಈ ವ್ಯತ್ಯಾಸವು ಪ್ರಮುಖವಲ್ಲ ಮತ್ತು ಈ ಲೇಖನದಲ್ಲಿಯೂ ಮುಂದೆ ವ್ಯತ್ಯಾಸ ಕಾಣಿಸುವುದಿಲ್ಲ.)

ಒಂದು ಸ್ಯಾಂಪಲ್‌ ಕಾಲಮ್‌ನ ಮೂಲಕ ಎಷ್ಟು ವೇಗವಾಗಿ ಚಲಿಸುತ್ತದೆ ಎಂಬುದು ನೇರವಾಗಿ ಕಾಲಮ್‌ನ ತಾಪಮಾನಕ್ಕೆ ಅನುಪಾತೀಯವಾಗಿರುತ್ತದೆ. ಕಾಲಮ್‌ನ ತಾಪಮಾನ ಹೆಚ್ಚಾದಷ್ಟೂ, ಸ್ಯಾಂಪಲ್‌ ಕಾಲಮ್‌ನ ಮೂಲಕ ಸಾಗುವ ವೇಗ ಹೆಚ್ಚಾಗುತ್ತದೆ. ಆದರೆ, ಕಾಲಮ್‌ನ ಮೂಲಕ ಸ್ಯಾಂಪಲ್‌ ಎಷ್ಟು ವೇಗವಾಗಿ ಸಾಗುತ್ತದೆಯೋ, ನಿಶ್ಚಲ ಹಂತದೊಂದಿಗೆ ಅಷ್ಟು ಕಡಿಮೆ ಪ್ರತಿಕ್ರಿಯೆ ತೋರುತ್ತದೆ, ಮತ್ತು ಕಡಿಮೆ ವಸ್ತುಗಳು ಬೇರ್ಪಡುತ್ತವೆ.

ಸಾಮಾನ್ಯವಾಗಿ, ವಿಶ್ಲೇಷಣೆಯ ಅವಧಿ ಮತ್ತು ಬೇರ್ಪಡಿಕೆಯ ಮಟ್ಟಗಳಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳಲು ಕಾಲಮ್‌ ತಾಪಮಾನವನ್ನು ನಿರ್ಧರಿಸಲಾಗುತ್ತದೆ.

ವಿಶ್ಲೇಷನೆಯುದ್ದಕ್ಕೂ ಒಂದೇ ಕಾಲಮ್‌ನ ತಾಪಮಾನವನ್ನು ಕಾಪಾಡುವ ವಿಧಾನಕ್ಕೆ "ಐಸೊತರ್ಮಲ್‌" ಎಂದು ಹೆಸರು. ಆದರೆ ಬಹುತೇಕ ವಿಧಾನಗಳು ವಿಶ್ಲೇಷಣೆಯ ಸಂದರ್ಭದಲ್ಲಿ ಕಾಲಮ್‌ನ ತಾಪಮಾನವನ್ನು ಹೆಚ್ಚಿಸಿಬಿಡುತ್ತದೆ, ಮೂಲ ತಾಪಮಾನ, ತಾಪಮಾನ ಹೆಚ್ಚುವ ವೇಗ ಮತ್ತು ಅಂತಿಮ ತಾಪಮಾನವನ್ನು "ತಾಪಮಾನ ಪ್ರೊಗ್ರಾಮ್‌ " ಎಂದು ಕರೆಯಲಾಗುತ್ತದೆ.

ತಾಪಮಾನ ಪ್ರೊಗ್ರಾಮ್‌ ವಿಶ್ಲೇಷಣೆಯಲ್ಲಿ ಬೇಗನೆ ಬೇರ್ಪಡುವ ವಸ್ತುಗಳನ್ನು ಸಮರ್ಪಕವಾಗಿ ಬೇರ್ಪಡಿಸಲು ಸಹಾಯ ಮಾಡುತ್ತದೆ, ನಿಧಾನವಾಗಿ ಬೇರ್ಪಡುವ ವಸ್ತುಗಳನ್ನು ಕಾಲಮ್‌ ಮೂಲಕ ಹೋಗಲು ಬಿಡುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ.

ಡೇಟಾ ಕಡಿಮೆ ಮಾಡುವುದು ಮತ್ತು ವಿಶ್ಲೇಷಣೆ[ಬದಲಾಯಿಸಿ]

ಗುಣಾತ್ಮಕ ವಿಶ್ಲೇಷಣೆ:

ಸಾಮಾನ್ಯವಾಗಿ ಕ್ರೊಮ್ಯಾಟೊಗ್ರಾಫ್‌ ಡೇಟಾವನ್ನು ಧಾರಣಾ ಸಮಯಕ್ಕೆ ಎದುರಾಗಿ (x-ಅಕ್ಷರೇಖೆ)ಪತ್ತೆಕಾರಕ ಪ್ರತಿಕ್ರಿಯೆಯ ನಕ್ಷೆಯಾಗಿ (y-ಅಕ್ಷರೇಖೆ) ನಿರೂಪಿಸಲಾಗುತ್ತದೆ. ಇದನ್ನು ಕ್ರೊಮ್ಯಾಟೊಗ್ರಾಮ್‌ ಎಂದು ಕರೆಯಲಾಗುತ್ತದೆ. ಕಾಲಮ್‌‍ನಿಂದ ವಿವಿಧ ಸಮಯಗಳಲ್ಲಿ ಬೇರ್ಪಡುವ, ಸ್ಯಾಂಪಲ್‌ನಲ್ಲಿರುವ ವಿಶ್ಲೇಷಣಕ್ಕೊಳಪಡುವ ವಸ್ತುಗಳನ್ನು ಪ್ರತಿನಿಧಿಸುವ ಶೃಂಗಗಳ ಪಂಕ್ತಿ ನಮಗೆ ದೊರೆಯುತ್ತದೆ. ವಿಧಾನದ ಪರಿಸ್ಥಿತಿಗಳು ಸ್ಥಿರವಾಗಿದ್ದರೆ ಧಾರಣಾ ಸಮಯವನ್ನು ಬಳಸಿಕೊಂಡು ಬೇಕಾದ ವಸ್ತುಗಳನ್ನು ಗುರುತಿಸಬಹುದು. ಹಾಗೆಯೇ, ಸ್ಥಿರವಾದ ಪರಿಸ್ಥಿತಿಗಳಲ್ಲಿ ಒಂದು ಸ್ಯಾಂಪಲ್‌ನ ಶೃಂಗಗಳ ಮಾದರಿಯು ಸ್ಥಿರವಾಗಿರುತ್ತದೆ ಮತ್ತು ವಿಶ್ಲೇಷಣಕ್ಕೊಳಪಡುವ ವಸ್ತುಗಳ ಸಂಕೀರ್ಣ ಮಿಶ್ರಣಗಳನ್ನು ಗುರುತಿಸಬಲ್ಲುದು. ಆದಾಗ್ಯೂ, ಬಹುತೇಕ ಆಧುನಿಕ ಉಪಯೋಗಗಳಲ್ಲಿ ಗ್ಯಾಸ್‌ ಕ್ರೊಮ್ಯಾಟೊಗ್ರಫಿಯನ್ನು, ಶೃಂಗಗಳು ಪ್ರತಿನಿಧಿಸುವ ವಿಶ್ಲೇಷಣೆಗೊಳಪಟ್ಟ ವಸ್ತುಗಳನ್ನು ಗುರುತಿಸಲು ಸಮರ್ಥವಾಗಿರುವ ಸಮೂಹ ವರ್ಣಪಟಲಮಾಪಕಕ್ಕೆ ಅಥವಾ ಅಂತಹ ಪತ್ತೆಕಾರಕಗೆ ಜೋಡಿಸಲಾಗುತ್ತದೆ.

ಪರಿಮಾಣಾತ್ಮಕ ವಿಶ್ಲೇಷಣೆ:

ಶೃಂಗದ ಕೆಳಗಿನ ಭಾಗವು, ಕ್ರೊಮ್ಯಾಟೊಗ್ರಾಮ್‌ನಲ್ಲಿ ವಿಶ್ಲೇಷಣೆಗೊಳಪಡುವ ವಸ್ತು ಎಷ್ಟಿದೆ ಎಂಬುದಕ್ಕೆ ಅನುಪಾತೀಯವಾಗಿರುತ್ತದೆ. ಗಣಿತಶಾಸ್ತ್ರದ ಉತ್ಪನ್ನವಾಕ್ಯವನ್ನು ಬಳಸಿ ಶೃಂಗದ ವಿಸ್ತೀರ್ಣವನ್ನು ಲೆಕ್ಕ ಮಾಡುವುದರ ಮೂಲಕ, ಮೂಲ ಸ್ಯಾಂಪಲ್‌ನಲ್ಲಿದ್ದ ವಿಶ್ಲೇಷಣೆಗೊಳಪಡುವ ವಸ್ತುವಿನ ಸಾಂದ್ರೀಕರಣಅನ್ನು ನಿರ್ಧರಿಸಬಹುದು. ವಿಶ್ಲೇಷಣೆಗೊಳಪಡುವ ವಸ್ತುವಿನ ಸಾಂದ್ರೀಕರಣಗಳಿಗೆ ಬರುವ ಪ್ರತಿಕ್ರಿಯೆಗಳ ಮೂಲಕ ಅಥವಾ ವಿಶ್ಲೇಷಣೆಗೊಳಪಡುವ ವಸ್ತುವಿನ ಸಾಪೇಕ್ಷಾ ಪ್ರತಿಕ್ರಿಯಾ ಅಂಶವನ್ನು ಕಂಡುಹಿಡಿಯುವ ಮೂಲಕ ಕ್ಯಾಲಿಬ್ರೇಷನ್‌ ಕರ್ವ್‌ಅನ್ನು ಬಳಸಿಕೊಂಡು ಸಾಂದ್ರೀಕರಣಅನ್ನು ಕಂಡುಹಿಡಿಯಬಹುದು. ಆಂತರಿಕ ನಿರ್ದಿಷ್ಟಮಾನ ಮತ್ತು ವಿಶ್ಲೇಷಣೆಗೊಳಪಡುವ ವಸ್ತುವಿನ ಅಪೇಕ್ಷಿತ ಅನುಪಾತವೇ ಸಾಪೇಕ್ಷಾ ಪ್ರತಿಕ್ರಿಯಾ ಅಂಶ (ಅಥವಾ ಬಾಹ್ಯ ನಿರ್ದಿಷ್ಟಮಾನ). ವಿಶ್ಲೇಷಣೆಗೆ ಒಳಪಡುವ ವಸ್ತುವಿನ ಒಂದು ಗೊತ್ತಾದ ಮೊತ್ತದ ಪ್ರತಿಕ್ರಿಯೆಯನ್ನು ಮತ್ತು ಆಂತರಿಕ ನಿರ್ದಿಷ್ಟಮಾನದ ಒಂದು ಸ್ಥಿರವಾದ ಮೊತ್ತವನ್ನು ಕಂಡುಹಿಡಿಯುವ ಮೂಲಕ ಇದನ್ನು ಲೆಕ್ಕಮಾಡಬಹುದು (ವಿಶ್ಲೇಷಣೆಗೊಳಪಡುವ ವಸ್ತುವಿನೊಂದಿಗೆ ವಿಶಿಷ್ಟವಾದ ಧಾರಣಾ ಸಮಯ ಹೊಂದಿರುವ, ಸ್ಥಿರವಾದ ಸಾಂದ್ರೀಕರಣನಲ್ಲಿ ಸ್ಯಾಂಪಲ್‌ಗೆ ಸೇರಿಸಲಾಗುವ ಒಂದು ರಾಸಾಯನಿಕ).

ಅನೇಕ ಆಧುನಿಕ ಜಿಸಿ-ಎಂಎಸ್‌ ವ್ಯವಸ್ಥೆಗಳಲ್ಲಿ, ಶೃಂಗಗಳನ್ನು ಬರೆಯಲು ಮತ್ತು ಸಂಯೋಜಿಸಲು ಕಂಪ್ಯೂಟರ್‌ ತಂತ್ರಾಂಶಗಳನ್ನು ಬಳಸಲಾಗುತ್ತದೆ ಮತ್ತು ಎಂಎಸ್‌ ವರ್ಣಪಟಲವನ್ನು ಪೂರ್ವ ವರ್ಣಪಟಲಗಳೊಂದಿಗೆ ಹೋಲಿಸಲಾಗುತ್ತದೆ.

ಉಪಯೋಗ[ಬದಲಾಯಿಸಿ]

ಸಾಧಾರಣವಾಗಿ, ca. 300 °C ಕೆಳಗೆ ಆವಿಯಾಗದ (ಮತ್ತು ಆದ್ದರಿಂದ ಆ ತಾಪಮಾನದವರೆಗೂ ದೃಢವಾಗಿರುವ) ವಸ್ತುಗಳನ್ನು ಪರಿಮಾಣಾತ್ಮಕವಾಗಿ ಅಳೆಯಬಹುದು. ಆ ಸ್ಯಾಂಪಲ್‌ಗಳಲ್ಲಿ ಉಪ್ಪು ಇರಬಾರದು; ಅವುಗಳಲ್ಲಿ ವಿದ್ಯುದಣುಗಳು ಇರಬಾರದು. ವಸ್ತುಗಳ ಅತಿಕಡಿಮೆ ಪ್ರಮಾಣವನ್ನು ಅಳೆಯಬಹುದು, ಆದರೆ ಅನೇಕವೇಳೆ ಸ್ಯಾಂಪಲ್‌ಅನ್ನು ಬೇಕಾದ-ಶುದ್ಧ ವಸ್ತುವಿರುವ ಸ್ಯಾಂಪಲ್‌ನೊಂದಿಗೆ ಹೋಲಿಸಬೇಕಾಗುತ್ತದೆ.

ಫಲಿತಾಂಶಗಳನ್ನು ಹೆಚ್ಚು ಅರ್ಥಪೂರ್ಣವಾಗಿಸಲು ವಿವಿಧ ತಾಪಮಾನ ಪ್ರೋಗ್ರಾಮ್‌ಗಳನ್ನು ಬಳಸಬಹುದು; ಉದಾಹರಣೆಗೆ ಗ್ಯಾಸ್‌ ಕ್ರೊಮ್ಯಾಟೊಗ್ರಫಿ ಪ್ರಕ್ರಿಯೆಯಲ್ಲಿ ಒಂದೇ ರೀತಿಯಾಗಿ ವರ್ತಿಸುವ ವಸ್ತುಗಳನ್ನು ಬೇರ್ಪಡಿಸಲು.

ಗ್ಯಾಸ್‌ ಕ್ರೊಮ್ಯಾಟೊಗ್ರಫಿಯಲ್ಲಿ ಕೆಲಸ ಮಾಡುವ ಉದ್ಯಮಿಗಳು ಒಂದು ರಾಸಾಯನಿಕ ಉತ್ಪನ್ನವನ್ನು ವಿಶ್ಲೇಷಿಸುತ್ತದೆ, ಉದಾಹರಣೆಗೆ ರಾಸಾಯನಿಕ ಕಾರ್ಖಾನೆಯ ಉತ್ಪನ್ನಗಳ ಗುಣಮಟ್ಟವನ್ನು ದೃಢೀಕರಿಸಲು; ಅಥವಾ ಮಣ್ಣು, ಗಾಳಿ ಅಥವಾ ನೀರಿನಲ್ಲಿರುವ ವಿಷ ವಸ್ತುಗಳನ್ನು ಅಳೆಯಲು. ಸರಿಯಾಗಿ ಉಪಯೋಗಿಸಿದಲ್ಲಿ ಗ್ಯಾಸ್‌ ಕ್ರೊಮ್ಯಾಟೊಗ್ರಫಿ ಬಹಳ ನಿಖರವಾದದ್ದು. ಅದು ವಸ್ತುಗಳ 1ಮಿಲೀ ದ್ರವದ ಸ್ಯಾಂಪಲ್‌ನಲ್ಲಿ ವಸ್ತುಗಳ ಪೈಕೊಮೋಲ್‌ಗಳನ್ನು ಅಳೆಯಬಹುದು ಅಥವಾ ಅನಿಲದ ಸ್ಯಾಂಪಲ್‌ಗಳಲ್ಲಿ ಸಾಂದ್ರೀಕರಣs ಒಂದು ಬಿಲಿಯನ್‌ಗೆ ಎಷ್ಟು ಭಾಗಗಳು ಎಂದು ಅಳೆಯಬಹುದು.

ಕಾಲೇಜುಗಳಲ್ಲಿನ ಪ್ರಾಯೋಗಿಕ ಕೋರ್ಸ್‌ಗಳಲ್ಲಿನ ವಿದ್ಯಾರ್ಥಿಗಳು ಲ್ಯಾವೆಂಡರ್‌ ಎಣ್ಣೆಯ ಭಾಗಗಳನ್ನು ಅಧ್ಯಯನ ಮಾಡುವಾಗ ಅಥವಾ ನಿಕೋಟಿಯಾನ ಬೆಂತಾಮಿಯಾನ ಗಿಡಗಳಿಗೆ ಕೃತಕವಾಗಿ ಹಾನಿಮಾಡಿದಾಗ ಹೊರಸೂಸುವ ಎತೈಲೀನ್‌ಅನ್ನು ಅಳೆಯುವಾಗ ಗ್ಯಾಸ್‌ ಕ್ರೊಮ್ಯಾಟೊಗ್ರಫಿಯ ಪರಿಚಯ ಪಡೆದಿರುತ್ತಾರೆ. ಈ ಗ್ಯಾಸ್‌ ಕ್ರೊಮ್ಯಾಟೊಗ್ರಫಿ ಜಲಕಾರ್ಬನ್‌ಗಳನ್ನು ವಿಶ್ಲೇಷಿಸುತ್ತದೆ (C2-C40+). ಒಂದು ಸಾಮಾನ್ಯ ಪ್ರಯೋಗದಲ್ಲಿ, ಹಗುರ ಅನಿಲಗಳನ್ನು ಬೇರ್ಪಡಿಸಲು ಒಂದು ಪ್ಯಾಕ್ಡ್‌ ಕಾಲಮ್‌ಅನ್ನು ಬಳಸಲಾಗುತ್ತದೆ, ನಂತರ ಇವುಗಳನ್ನು ಉಷ್ಣವಾಹಕತ್ವ ಪತ್ತೆಕಾರಕನಿಂದ ಪತ್ತೆಹಚ್ಚಲಾಗುತ್ತದೆ. ಜಲಕಾರ್ಬನ್‌ಗಳನ್ನು ಕ್ಯಾಪಿಲರಿ ಕಾಲಮ್‌ ಬಳಸಿಕೊಂಡು ಬೇರ್ಪಡಿಸಲಾಗುತ್ತದೆ ಮತ್ತು ಬೆಂಕಿ ವಿದ್ಯುದಣೀಕರಣ ಪತ್ತೆಕಾರಕಅನ್ನು ಬಳಸಿಕೊಂಡು ಪತ್ತೆಹಚ್ಚಲಾಗುತ್ತದೆ. H2ಅನ್ನು ಒಳಗೊಂಡ ಅನಿಲ ವಿಶ್ಲೇಷಣೆಯಲ್ಲಿ ಒಂದು ಕಷ್ಟವೇನೆಂದರೆ ಅತಿ ಸಾಮಾನ್ಯ ಮತ್ತು ಅತ್ಯಂತ ಸೂಕ್ಷ್ಮಗ್ರಾಹಿಯಾದ ನಿಶ್ಚಲ ವಾಹಕ ಹೀಲಿಯಂ‌ (ಶೀಘ್ರಗ್ರಾಹಿತ್ವವು ಪರಮಾಣು ಗುಂಪಿಗೆ ಅನುಪಾತೀಯವಾಗಿರುತ್ತದೆ) ಜಲಜನಕಕ್ಕೆ ಬಹುಪಾಲು ಹೋಲುವ ಉಷ್ಣ ವಾಹಕತ್ವವನ್ನು ಹೊಡಿರುವುದು (ಒಂದು ವ್ಹೀಟ್‌ಸ್ಟೋನ್‌ ಬ್ರಿಜ್‌ ರೀತಿಯ ರಚನೆಯಲ್ಲಿ ಯಾವಾಗ ಒಂದು ಭಾಗವು ಬೇರ್ಪಟ್ಟಿದೆ ಎಂಬುದನ್ನು ತೋರಿಸುವುದು ಯಾವುದೆಂದರೆ ಎರಡು ಬೇರೆ ಬೇರೆ ತಂತುಗಳ ಉಷ್ಣ ವಾಹಕತ್ವದ ನಡುವಿನ ವ್ಯತ್ಯಾಸ). ಈ ಕಾರಣಕ್ಕಾಗಿಯೇ ಸಾರಜನಕವನ್ನು ವಾಹಕವಾಗಿ ಉಪಯೋಗಿಸುವ ಜಲಜನಕಕ್ಕೆ ಬೇರೆಯಾದ ವಾಹಿನಿಯಿರುವ ಜೋಡಿ ಉಷ್ಣವಾಹಕತ್ವ ಪತ್ತೆಕಾರಕಗಳನ್ನು ಬಳಸುವುದು ಸಾಮಾನ್ಯ. ಅನಿಲ ಹಂತದ ರಾಸಾಯನಿಕ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸುವಾಗ ಆರ್ಗಾನ್‌ಅನ್ನು ಬಳಸಲಾಗುತ್ತದೆ. ಉದಾಹರಣೆಗೆ ಎಫ್‌-ಟಿ ಸಮನ್ವಯ, 2 ಬೇರೆ ಬೇರೆ ಅನಿಲ ವಾಹಕಗಳನ್ನು ಬಳಸುವ ಬದಲು ಒಂದೇ ಅನಿಲ ವಾಹಕವನ್ನು ಬಳಸುವ ಸಂದರ್ಭದಲ್ಲಿ ಇದನ್ನು ಬಳಸಬಹುದು. ಇಲ್ಲಿ ಶೀಘ್ರಗ್ರಾಹಿತ್ವವು ಕಡಿಮೆ ಆದರೆ ಅನಿಲ ಪೂರೈಕೆಯಲ್ಲಿ ಸರಳತೆಗೆ ಇದು ಕಾರಣವಾಗುತ್ತದೆ.

ಜನಪ್ರಿಯ ಸಂಸ್ಕೃತಿಗಳಲ್ಲಿ ಗ್ಯಾಸ್ ಕ್ರೊಮ್ಯಾಟೊಗ್ರಫಿ[ಬದಲಾಯಿಸಿ]

ಸಿನಿಮಾಗಳು, ಪುಸ್ತಕಗಳು ಮತ್ತು ಟಿವಿಗಳು ಸಾಮಾನ್ಯವಾಗಿ ಗ್ಯಾಸ್‌ ಕ್ರೊಮ್ಯಾಟೊಗ್ರಫಿಯ ಸಾಧ್ಯತೆಗಳನ್ನು ಮತ್ತು ಆ ಸಾಧನಗಳಿಂದಾಗುವ ಕೆಲಸಗಳನ್ನು ತಪ್ಪಾಗಿ ತಿಳಿಸುತ್ತವೆ.

ಉದಾಹರಣೆಗೆ ಯು.ಎಸ್‌.ನ ಟಿವಿ ಷೋ ಸಿಎಸ್‌ಐನಲ್ಲಿ ಗ್ಯಾಸ್‌ ಕ್ರೊಮ್ಯಾಟೊಗ್ರಫಿಯನ್ನು ಗೊತ್ತಿಲ್ಲದ ಸ್ಯಾಂಪಲ್‌ಗಳನ್ನು ವೇಗವಾಗಿ ಗುರುತಿಸಲು ಬಳಸಲಾಗುತ್ತದೆ. ವಿಶ್ಲೇಷಕನು ಸ್ಯಾಂಪಲ್‌ ಪಡೆದ ಹದಿನೈದು ನಿಮಿಷಗಳ ನಂತರ "ಇದು ಕಳೆದ ಎರಡು ವಾರಗಳಲ್ಲಿ ಶೆವ್ರಾನ್‌ ಸ್ಟೇಷನ್‌ನಿಂದ ತಂದಿರುವ ಗ್ಯಾಸೋಲೀನ್‌" ಎನ್ನುತ್ತಾನೆ.

ನಿಜವಾಗಿ ಹೇಳಬೇಕೆಂದರೆ, ಒಬ್ಬ ಸಾಮಾನ್ಯ ಗ್ಯಾಸ್‌ ಕ್ರೊಮ್ಯಾಟೊಗ್ರಫಿ ವಿಶ್ಲೇಷಕ ಇನ್ನೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಾನೆ; ಆಯ್ಕೆ ಮಾಡಿಕೊಂಡ ಪ್ರೊಗ್ರಾಮ್‌ನ ಪ್ರಕಾರ ಒಂದು ಸ್ಯಾಂಪಲ್‌ಅನ್ನೇ ಒಂದು ಗಂಟೆಗೂ ಹೆಚ್ಚು ಕಾಲ ಪರೀಕ್ಷಿಸಬೇಕಾಗುತ್ತದೆ; ಮತ್ತು ಮೊದಲನೇ ಸ್ಯಾಂಪಲ್‌‌ನಿಂದ ಅದು ಮುಕ್ತವಾಗಿ ಮುಂದಿನ ಸ್ಯಾಂಪಲ್‌ಗೆ ಅದನ್ನು ಬಳಸಬೇಕಾದರೆ ಕಾಲಮ್‌ಅನ್ನು ಇನ್ನೂ ಹೆಚ್ಚಿನ ಸಮಯ "ಕಾಯಿಸ"ಬೇಕಾಗುತ್ತದೆ. ಹಾಗೆಯೇ, ಅಧ್ಯಯನದ ವರದಿಗಳನ್ನು ಖಚಿತಪಡಿಸಲು ಹಲವು ಬಾರಿ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ - ಒಂದು ಗ್ಯಾಸ್‌ ಕ್ರೊಮ್ಯಾಟೊಗ್ರಫಿಯ ಏಕೈಕ ಸ್ಯಾಂಪಲ್‌ ಕೇವಲ ’ಪ್ರಾಯಶಃ’ ಫಲಿತಾಂಶವನ್ನು ಮಾತ್ರ ಕೊಡಬಹುದು. (ನೋಡಿ - ಅಂಕಿಅಂಶಗಳ ಪ್ರಮುಖತೆ).

ಗ್ಯಾಸ್‌ ಕ್ರೊಮ್ಯಾಟೊಗ್ರಫಿಯು ಬಹುತೇಕ ಸ್ಯಾಂಪಲ್‌ಗಳನ್ನು ಸಕಾರಾತ್ಮಕವಾಗಿಯೇನೂ ಗುರುತಿಸುವುದಿಲ್ಲ; ಮತ್ತು ಸ್ಯಾಂಪಲ್‌ನಲ್ಲಿರುವ ವಸ್ತುಗಳೆಲ್ಲವನ್ನೂ ಕಂಡುಹಿಡಿಯಲೇಬೇಕೆಂದೇನೂ ಇಲ್ಲ. ಗ್ಯಾಸ್‌ ಕ್ರೊಮ್ಯಾಟೊಗ್ರಫಿಯು ಹೆಚ್ಚೆಂದರೆ ಒಂದು ವಸ್ತುವು ಯಾವ ಸಾಪೇಕ್ಷ ಸಮಯದಲ್ಲಿ ಕಾಲಮ್‌ನಿಂದ ಹೊರಬಂತು ಮತ್ತು ಪತ್ತೆಕಾರಕ ಅದನ್ನು ಗ್ರಹಿಸಿತು ಎಂಬುದನ್ನು ಹೇಳುತ್ತದೆ. ಫಲಿತಾಂಶಗಳು ಅರ್ಥಪೂರ್ಣವಾಗಬೇಕಾದರೆ, ವಿಶ್ಲೇಷಕರು ಯಾವ ಯಾವ ಸಾಂದ್ರೀಕರಣಗಳಲ್ಲಿ ಯಾವ ವಸ್ತುಗಳನ್ನು ಅಪೇಕ್ಷಿಸಬಹುದು ಎಂಬುದನ್ನು ತಿಳಿದಿರಬೇಕು; ಆದಾಗ್ಯೂ, ವಸ್ತುವಿನ ಸಣ್ಣ ಮೊತ್ತವು ಅಧಿಕ ಸಾಂದ್ರೀಕರಣ ಮತ್ತು ಅದೇ ಸಾಪೇಕ್ಷ ಹೊರಹರಿವಿನ ಸಮಯವಿರುವ ವಸ್ತುವಿನ ಹಿಂದೆ ಅವಿತುಕೊಳ್ಳಬಹುದು. ಕೊನೆಯದಾಗಿ, ಆದರೆ ಅಷ್ಟೇ ಮುಖ್ಯವಾಗಿ ಸ್ಯಾಂಪಲ್‌ನ ಗ್ಯಾಸ್‌ ಕ್ರೊಮ್ಯಾಟೊಗ್ರಫಿ ಫಲಿತಾಂಶವನ್ನು ಕೇವಲ ಬೇಕಾದ ವಸ್ತುವನ್ನು ಹೊಂದಿರುವ ಸ್ಯಾಂಪಲ್‌ನೊಂದಿಗೆ ಪರೀಕ್ಷಿಸಬೇಕು.

ಸಮೂಹ ವರ್ಣಪಟಲಮಾಪಕವು ಭಾಗದ ಪರಮಾಣು ಗುಂಪುಗಳ ತೂಕವನ್ನು ಕಂಡುಹಿಡಿಯುವುದರಿಂದ, ಗ್ಯಾಸ್‌ಕ್ರೊಮ್ಯಾಟೊಗ್ರಫಿ-MSಯು ಈ ಅನುಮಾನವನ್ನು ಬಹುಮಟ್ಟಿಗೆ ಅಳಿಸಬಹುದು. ಆದರೆ ಅದು ಕೂಡ ಸಮಯ ತೆಗೆದುಕೊಳ್ಳುತ್ತದೆ ಮತ್ತು ಅದನ್ನು ಸರಿಯಾಗಿ ಮಾಡಲು ಸೂಕ್ತ ನೈಪುಣ್ಯ ಬೇಕಾಗುತ್ತದೆ.

ಹಾಗೆಯೇ, ಹಲವು ಗ್ಯಾಸ್‌ ಕ್ರೊಮ್ಯಾಟೊಗ್ರಫಿ ವಿಶ್ಲೇಷಣೆಗಳು ಒತ್ತುಗುಂಡಿ ಪ್ರಕ್ರಿಯೆಗಳಾಗಿರುವುದಿಲ್ಲ. ಸ್ಯಾಂಪಲ್‍ಅನ್ನು ಸುಮ್ಮನೆ ಒಂದು ಸ್ವಯಂ-ಮಾದರಿ ತಟ್ಟೆಯೊಳಗೆ ಸ್ಯಾಂಪಲ್‌ ಸೀಸೆಯನ್ನು ಹಾಕಿ, ಗುಂಡಿಯನ್ನು ಒತ್ತಿ ಕಂಪ್ಯೂಟರ್‌ ನಿಮಗೆ ಸ್ಯಾಂಪಲ್‌ ಬಗ್ಗೆ ಎಲ್ಲವನ್ನೂ ಹೇಳಬೇಕೆಂದು ಅಪೇಕ್ಷಿಸಲಾಗುವುದಿಲ್ಲ. ವಸ್ತುಗಳಿಗೆ ಅನುಗುಣವಾಗಿ ಕಾರ್ಯಕ್ರಮವನ್ನು ಜಾಗರೂಕತೆಯಿಂದ ಆಯ್ಕೆ ಮಾಡಿರಬೇಕು.

ಒಂದೇ ರೀತಿಯ ಸ್ಯಾಂಪಲ್‌ಗಳನ್ನು ಮತ್ತೆ ಮತ್ತೆ ಪರೀಕ್ಷಿಸಲು ಒತ್ತುಗುಂಡಿ ಪ್ರಕ್ರಿಯೆ ಇರಬಹುದು, ಉದಾಹರಣೆಗೆ ರಾಸಾಯನಿಕಗಳ ಉತ್ಪಾದನಾ ಪರಿಸರ ಅಥವಾ 20 ಸ್ಯಾಂಪಲ್‌ಗಳನ್ನು ಒಂದೇ ಪ್ರಯೋಗದಿಂದ ಪರೀಕ್ಷೆ ಮಾಡಿ ಒಂದು ವಸ್ತುವಿನ ಮಧ್ಯಕವನ್ನು ಕಂಡುಹಿಡಿಯುವಾಗ. ಆದಾಗ್ಯೂ, ಪುಸ್ತಕಗಳಲ್ಲಿ, ಸಿನೆಮಾಗಳಲ್ಲಿ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಚಿತ್ರಿಸಲಾಗುವ ತನಿಖಾ ಕೆಲಸಗಳಿಗೆ ಇದು ಖಂಡಿತ ಉದಾಹರಣೆಯಲ್ಲ.

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ Pavia, Donald L., Gary M. Lampman, George S. Kritz, Randall G. Engel (2006). Introduction to Organic Laboratory Techniques (4th Ed.). Thomson Brooks/Cole. pp. 797–817. ISBN 978-0-495-28069-9.{{cite book}}: CS1 maint: multiple names: authors list (link)
  2. ಟೆಂಪ್ಲೇಟು:ಸಿಟೇಷನ್‌

ಹೊರಗಿನ ಕೊಂಡಿಗಳು[ಬದಲಾಯಿಸಿ]

  • Gas Chromatography ಓಪನ್ ಡೈರೆಕ್ಟರಿ ಪ್ರಾಜೆಕ್ಟ್