ಗ್ಯಾರಿ ಕರ್ಸ್ಟೈನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ಯಾರಿ ಕರ್ಸ್ಟೈನ್
Gary Kirsten
Personal information
Full name
Gary Kirsten
BattingLeft-handed
BowlingRight arm off break
RelationsPaul Kirsten (brother)
Peter Kirsten (half-brother)
International information
National side
Test debut (cap 257)26 December 1993 v Australia
Last Test30 March 2004 v New Zealand
ODI debut (cap 28)14 December 1993 v Australia
Last ODI3 March 2003 v Sri Lanka
Domestic team information
YearsTeam
1987–2004Western Province
Career statistics
Competition ಟೆಸ್ಟ್ ODI FC LA
Matches 101 185 221 294
Runs scored 7,289 6,798 16,670 9,586
Batting average 45.27 40.95 48.31 36.58
100s/50s 21/34 13/45 46/79 18/58
Top score 275 188* 275 188*
Balls bowled 349 30 1,727 138
Wickets 2 0 20 3
Bowling average 71.00 41.80 37.33
5 wickets in innings 1
10 wickets in match n/a 0 n/a
Best bowling 1/0 6/68 1/25
Catches/stumpings 83/– 61/1 171/– 97/1
Source: Cricinfo, 28 December 2009

ಗ್ಯಾರಿ ಕರ್ಸ್ಟೈನ್ (ಕೇಪ್ ಟೌನ್ ನಲ್ಲಿ 1967 ರ ನವೆಂಬರ್ 23 ರಂದು ಜನನ) ಅವರು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗರು, ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡದ ತರಬೇತುದಾರರಾಗಿದ್ದಾರೆ. ಇವರು ಪ್ರಮುಖವಾಗಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ 1993 ರಿಂದ 2004 ನೇ ಸಾಲಿನ ನಡುವೆ ದಕ್ಷಿಣ ಆಫ್ರಿಕದ ಪರವಾಗಿ 101ಟೆಸ್ಟ್ ಪಂದ್ಯಗಳು ಮತ್ತು 185 ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇವರ ಕಿರಿಯ ಸಹೋದರರಾದ ಪೀಟರ್ ಅವರೂ ಸಹ ಪಶ್ಚಿಮ ಪ್ರಾಂತ್ಯದ ಪರವಾಗಿ ಪ್ರಾಂತೀಯ ಕ್ರಿಕೆಟ್‌ ಅನ್ನು ತದನಂತರ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪರವಾಗಿಯೂ ಆಟವಾಡಿದ್ದು ಇದರಲ್ಲಿ 1992 ರಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್‌ನ ಪ್ರಮುಖ ಕ್ಷಣವೂ ಒಳಗೊಂಡಿತ್ತು.

ಕರ್ಸ್ಟನ್ ಅವರು 1993 ರಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯ ತಂಡ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು. ಇವರು 2004 ರಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಪಂದ್ಯ ಗೆಲ್ಲಿಸಿದ ಆಟವಾಡಿ, ಪ್ರಥಮ ಇನ್ನಿಂಗ್ಸ್‌ನಲ್ಲಿ 76 ರನ್ ಬಾರಿಸುವುದರೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಹೊಂದಿದರು. ಅದೇ ತಂಡದ ವಿರುದ್ಧ ಪಂದ್ಯವನ್ನಾಡುವ ಮೂಲಕ 100 ಟೆಸ್ಟ್ ಪಂದ್ಯಗಳನ್ನಾಡಿದ ಏಕೈಕ ದಕ್ಷಿಣ ಆಫ್ರಿಕಾ ಆಟಗಾರ ಎಂಬ ಇತಿಹಾಸವನ್ನು ರಚಿಸಿದರು.

ವೃತ್ತಿ ಜೀವನ ಕಾಲದಲ್ಲಿ, ಕಸ್ಟೈರ್ನ್ ಅವರು ಟೆಸ್ಟ್ ಮತ್ತು ಒಂದು ದಿನದ ಕ್ರಿಕೆಟ್‌ಗಳೆರಡರಲ್ಲೂ ಬಲಿಷ್ಠ ಬ್ಯಾಟ್ಸ್‌ಮನ್ ಎಂಬ ಪ್ರಖ್ಯಾತಿಯನ್ನು ಗಳಿಸಿದ್ದರು. ಇವರು ಅಗತ್ಯಬಿದ್ದರೆ ಇನ್ನಿಂಗ್ಸ್‌ ವೇಗವನ್ನು ಹೆಚ್ಚಿಸುತ್ತಿದ್ದರಲ್ಲದೇ ಆಗಾಗ್ಗೆ ಸ್ಟೀವ್ ವಾ ಮತ್ತು ಜಸ್ಟಿನ್ ಲ್ಯಾಂಗರ್ ಅವರಂತೆ ಚೆಂಡಿಗಾಗಿ ನಿರೀಕ್ಷಿಸಿ ಆಟವಾಡುತ್ತಿರಲಿಲ್ಲ. ಇವರು ನಂಬಿಗಾರ್ಹ ಕ್ಷೇತ್ರರಕ್ಷಕರೂ ಸಹ ಆಗಿದ್ದರು.

ಜಾಕ್ವೆಸ್ ಕಾಲಿಸ್ ಅವರು ದಕ್ಷಿಣ ಆಫ್ರಿಕದ ಪರವಾಗಿ ಟೆಸ್ಟ್ ಪಂದ್ಯಗಳಲ್ಲಿ ಅತ್ಯಧಿಕ ರನ್‌ಗಳು ಮತ್ತು ಶತಕಗಳನ್ನು ಬಾರಿಸಿದ ದಾಖಲೆಯನ್ನು ಹೊಂದುವುದಕ್ಕೂ ಮೊದಲು ಕರ್ಸೈನ್ ಅವರು ಈ ದಾಖಲೆಯನ್ನು ತಮ್ಮ ಪರವಾಗಿ ಹೊಂದಿದ್ದರು. ಕರ್ಸ್ಟೈನ್ ಅವರು 9 ಟೆಸ್ಟ್ ರಾಷ್ಟ್ರಗಳ ವಿರುದ್ಧವೂ ಶತಕಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ದಕ್ಷಿಣ ಆಫ್ರಿಕಾ ತಂಡವು ಇಂಗ್ಲೆಂಡ್ ತಂಡದ ವಿರುದ್ಧ ಫಾಲೋ ಆನ್ ಆದ ನಂತರ ಬ್ಯಾಟ್ ಮಾಡಲ್ಪಟ್ಟಾಗ ಕರ್ಸ್ಟೈನ್ ಅವರು ಹದಿನಾಲ್ಕುವರೆ ಗಂಟೆಗಳಷ್ಟು ದೀರ್ಘಕಾಲ ಬ್ಯಾಟಿಂಗ್ ಮಾಡಿ 275 ರನ್ ಗಳಿಸಿದರು ಮತ್ತು ಇದು ಟೆಸ್ಟ್ ಇತಿಹಾಸದಲ್ಲಿ ಎರಡನೆಯ ಅತೀ ದೀರ್ಘಾವಧಿಯ ಇನ್ನಿಂಗ್ಸ್ (ಕಾಲಾವಧಿಯ ಲೆಕ್ಕದಲ್ಲಿ) ಎಂದು ದಾಖಲಿಸಲ್ಪಟ್ಟಿದೆ.[೧] ಈ ಅತ್ಯಧಿಕ ರನ್ ಗಳಿಕೆಯನ್ನು 2003 ರಲ್ಲಿ ಗ್ರೇಮ್ ಸ್ಮಿತ್ ಅವರು ಇಂಗ್ಲೆಂಡ್ ವಿರುದ್ಧ 277 ರನ್ ಬಾರಿಸುವುದರ ಮೂಲಕ ಹಿಂದಿಕ್ಕಿದರು. ಕರ್ಸ್ಟೈನ್ ಅವರು ಇಂದಿಗೂ ಸಹ ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾದ ಪರವಾಗಿ ಅತ್ಯಧಿಕ ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ; ಇವರು 1996 ವಿಶ್ವ ಕಪ್ ಸಂದರ್ಭದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಔಟಾಗದೇ 188 ರನ್ ಬಾರಿಸಿದರು ಮತ್ತು ಇದು ಒಂದು ದಿನದ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಇತಿಹಾಸದಲ್ಲಿ ನಾಲ್ಕನೇ ಅತ್ಯಧಿಕ ಮೊತ್ತವಾಗಿದೆ.

ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ತರಬೇತುದಾರರಾಗಿ[ಬದಲಾಯಿಸಿ]

ನಿವೃತ್ತಿಯ ನಂತರ, ಕರ್ಸೈನ್ ಅವರು ತಮ್ಮದೇ ಸ್ವಂತದ ಕ್ರಿಕೆಟ್ ಅಕಾಡೆಮಿಯೊಂದನ್ನು ಕೇಪ್ ಟೌನ್ನಲ್ಲಿ ಸ್ಥಾಪಿಸಿದರು.[೨] 2007 ರ ನವೆಂಬರ್‌ನಲ್ಲಿ, ಕಸ್ಟೈನ್ ಅರು ಭಾರತ ತಂಡದ ತರಬೇತುದಾರರ ಖಾಲಿ ಹುದ್ದೆಗೆ ಸ್ಪರ್ಧಾಳುವೆಂದು ತಿಳಿದು ಬಂತು.[೩] ಕರ್ಸ್ಟೈನ್ ಅವರಿಗೆ ಬಿಸಿಸಿಐ ಈ ಹುದ್ದೆಯನ್ನು ಎರಡು ವರ್ಷಗಳ ಒಪ್ಪಂದದ ಮೇರೆಗೆ ನೀಡಿತು ಮತ್ತು ಭಾರತದ ಆಟಗಾರರ ಪೂರ್ಣ ಬೆಂಬಲವನ್ನು ಹೊಂದಿರುವ ಬಗ್ಗೆ ಅವರು ಕೆಲವೊಂದಿಷ್ಟು ಭಿನ್ನಮತವನ್ನು ಹೊಂದಿದ್ದರೂ, ಡಿಸೆಂಬರ್ 4 ರಂದು ಅವರು ಈ ಹುದ್ದೆಯನ್ನು ಸ್ವೀಕರಿಸುತ್ತಿರುವುದಾಗಿ ದೃಢಪಡಿಸಿದರು.[೪]

2008 ರ ಮಾರ್ಚ್ 1 ರಂದು ಅವರು ಅಧಿಕೃತವಾಗಿ ತರಬೇತುದಾರನ ಕಾರ್ಯವನ್ನು ಪ್ರಾರಂಭಿಸಿದರು. ಆದರೆ, ಟೆಸ್ಟ್ ಸರಣಿಯ ಮೊದಲೇ ಅವರು ಭಾರತ ತಂಡದೊಂದಿಗೆ ಆಸ್ಟ್ರೇಲಿಯಕ್ಕೆ ಪ್ರಯಾಣ ಬೆಳೆಸಿದರು. ಅಧಿಕಾರ ವಹಿಸಿಕೊಂಡ ಬಳಿಕ ಅವರ ಪೂರ್ಣ ಪ್ರಮಾಣದ ಸರಣಿಯು ಅವರ ತಾಯ್ನಾಡು ದಕ್ಷಿಣ ಆಫ್ರಿಕಾದ ವಿರುದ್ಧವೇ ಆಗಿದ್ದು, ಮಾರ್ಚ್-ಏಪ್ರಿಲ್ 2008 ರಲ್ಲಿ ನಡೆದ ಈ ಸರಣಿಯು 1-1 ರಲ್ಲಿ ಡ್ರಾ ಆಯಿತು. ಹಾಗೆಯೇ, ಅವರ ಮಾರ್ಗದರ್ಶನದಲ್ಲಿ ಭಾರತವು ಕಿಟ್‌ಪ್ಲೈ ಕಪ್ ಮತ್ತು 2008 ಏಷ್ಯಾ ಕಪ್ ಫೈನಲ್‌ಗೆ ತಲುಪಿತು (ಭಾರತವು ಎರಡೂ ಫೈನಲ್‌ಗಳಲ್ಲಿ ಪರಾಭವಗೊಂಡಿತು). ಕರ್ಸ್ಟೈನ್ ಅವರ ಭಾರತದ ತರಬೇತುದಾರಿಕೆಯ ಕಾರ್ಯಾವಧಿಯಲ್ಲಿ ಭಾರತವು ತವರುನೆಲದಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಸರಣಿಯಲ್ಲಿ ಅದನ್ನು 2-0 ಇಂದ ಪರಾಭವಗೊಳಿಸಿತು. ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆಲ್ಲಲು ತಂಡವನ್ನು ಸಜ್ಜುಗೊಳಿಸಿದ ಜೊತೆಗೆ, ಕರ್ಸ್ಟೈನ್ ಅವರು ಶ್ರೀಲಂಕಾ ತಂಡದ ವಿರುದ್ಧ ಶ್ರೀಲಂಕಾದಲ್ಲಿ ನಡೆದ ದ್ವಿ-ರಾಷ್ಟ್ರ ಸರಣಿಯಲ್ಲಿ ಭಾರತವು ಮೊದಲ ಬಾರಿಗೆ ಜಯ ಸಾಧಿಸಿದ ಸಂದರ್ಭದಲ್ಲಿ ಮತ್ತು 40 ವರ್ಷಗಳ ನಂತರ ನ್ಯೂಜಿಲೆಂಡಿನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಮೊದಲ ಸರಣಿ ಜಯದ ಸಂದರ್ಭದಲ್ಲೂ ಭಾರತದ ತರಬೇತುದಾರರಾಗಿದ್ದರು. 2009 ರ ಸೆಪ್ಟೆಂಬರ್ 14 ರಂದು ಭಾರತವು ಶ್ರೀಲಂಕಾವನ್ನು 46 ರನ್‌ಗಳಿಂದ ಪರಾಭಗೊಳಿಸಿ ಕಾಂಪ್ಯಾಕ್ ಕಪ್ ಅನ್ನು ತನ್ನದಾಗಿಸಿಕೊಂಡಿತು. ಸ್ವತಃ ಅತ್ಯುನ್ನತ ಬ್ಯಾಟ್ಸ್‌ಮನ್ ಜೊತೆಗೆ, ಕರ್ಸ್ಟೈನ್ ಅವರು ಬ್ಯಾಟಿಂಗ್ ಪ್ರದರ್ಶನದಲ್ಲಿ ಗಮನಾರ್ಹ ಸುಧಾರಣೆಯನ್ನು ತಂದರು, ಹೆಚ್ಚಿನ ಪ್ರಮಾಣದಲ್ಲಿ ಯುವ ಆಟಗಾರರರಲ್ಲಿ ಉತ್ತಮ ಮಟ್ಟದ ವಿಶ್ವಾಸವನ್ನು ತುಂಬುವ ಅವರ ಸಾಮರ್ಥ್ಯವನ್ನು ಇದು ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿತ್ತು.

ಆಟದ ಕೌಶಲ್ಯಗಳು, ಆಟಗಾರರಲ್ಲಿ ಸ್ಪೂರ್ತಿ ತುಂಬುವಿಕೆ ಮತ್ತು ಆಟವಾಡುವಾಗ ಅಳವಡಿಸಿಕೊಳ್ಳಬೇಕಾದ ತಂತ್ರಗಳನ್ನು ಚರ್ಚಿಸುವ ಕುರಿತಂತೆ ಗ್ಯಾರಿ ಕರ್ಸ್ಟೈನ್ ಅವರನ್ನು ಎಲ್ಲಾ ಆಟಗಾರರು ಪ್ರಶಂಸಿಸಿದ್ದಾರೆ. ಫಲಿತಾಂಶವನ್ನು ಕೆಲವೇ ತಿಂಗಳುಗಳಲ್ಲಿ ನೋಡಬಹುದಾಗಿದೆ. ಎಲ್ಲಾ ಆಟಗಾರರಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿರುವ ಪ್ರದರ್ಶನದ ಸುಧಾರಣೆಯ ಹಿಂದಿನ ಪ್ರಮುಖ ಶಕ್ತಿಯಾಗಿ ಕರ್ಸ್ಟೈನ್ ಅವರನ್ನು ಪರಿಗಣಿಸಲಾಗಿದೆ. 2010 ರಲ್ಲಿ, ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಪ್ರಾರಂಭದ ಮೊದಲು, ಭಾರತ ಕ್ರಿಕೆಟ್ ತಂಡದ ನಾಯಕ ಎಂ.ಎಸ್.ಧೋನಿಯವರು ಕರ್ಸ್ಟೈನ್ ಅವರನ್ನು "ಭಾರತೀಯ ಕ್ರಿಕೆಟ್ ತಂಡಕ್ಕೆ ಆದ ಅತ್ಯುತ್ತಮ ಸಂಗತಿ" ಎಂದು ಬಣ್ಣಿಸಿದರು.

ವಿಶ್ವಕಪ್ & ಭಾರತ ತಂಡದ ಕಾರ್ಯವನ್ನು ತೊರೆಯುವುದು (2011)[ಬದಲಾಯಿಸಿ]

ಭಾರತವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸರಣಿಯನ್ನು 3-2 ರಿಂದ ಸೋತ ಬಳಿಕ, ಕೌಟುಂಬಿಕ ಭಾದ್ಯತೆಗಳ ಕಾರಣದಿಂದ ತಾನು ಬಿಸಿಸಿಐನೊಂದಿಗೆ ಒಪ್ಪಂದವನ್ನು ನವೀಕರಿಸುವುದಿಲ್ಲ ಎಂದು ಕರ್ಸ್ಟೈನ್ ಘೋಷಿಸಿದರು, ತಮ್ಮ ಎರಡು ಬೆಳೆಯುತ್ತಿರುವ ಮಕ್ಕಳಾದ ಜೋಶುವಾ ಮತ್ತು ಜೇಮ್ಸ್ ಹಾಗು ಪತ್ನಿಯೊಂದಿಗೆ ಸಮಯವನ್ನು ಕಳೆಯಲು ತಾವು ಬಯಸುವುದಾಗಿ ಮತ್ತು ತಾಯ್ನೆಲದಿಂದ ಮೂರು ವರ್ಷಗಳು ಹೊರಗಿರುವುದು ತೀರಾ ಅಧಿಕವಾಯಿತೆಂದು ಆಗಾಗ್ಗೆ ಹೇಳಿದ್ದರು. ವಿಶ್ವಕಪ್ ಪೂರ್ಣಗೊಂಡ ಬಳಿಕ ಕರ್ಸ್ಟೈನ್ ಅವರೊಂದಿಗಿನ ಒಪ್ಪಂದವು ಮುಕ್ತಾಯಗೊಳ್ಳಲಿದ್ದು, ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದೊಂದಿಗೆ ಕರ್ಸ್ಟೈನ್ ಅವರ ಕೊನೆಯ ಕಾರ್ಯನಿಯೋಜನೆಯು ವಿಶ್ವಕಪ್ ಆಗಲಿದೆ ಎಂದು ನಂಬಲಾಗಿದೆ. ಕರ್ಸ್ಟೈನ್ ಅವರ ಈ ಘೋಷಣೆಯ ತಕ್ಷಣವೇ, ದಕ್ಷಿಣ ಆಫ್ರಿಕಾ ತಂಡದ ತರಬೇತುದಾರರಾದ ಕೊರ್ರಿ ವಾನ್ ಜಿಲ್ ಅವರೂ ಸಹ ವಿಶ್ವಕಪ್ ಬಳಿಕ ತಮ್ಮ ಒಪ್ಪಂದವು ಮುಗಿಯಲಿದೆ ಎಂದು ಘೋಷಣೆ ಮಾಡುವುದರೊಂದಿಗೆ ಕರ್ಸ್ಟೈನ್ ಅವರು ದಕ್ಷಿಣ ಆಫ್ರಿಕಾ ತಂಡದ ತರಬೇತುದಾರರಾಗಿ ಸೇರುವ ಕುರಿತಂತೆ ಸುದ್ದಿ ಕೇಳಿ ಬಂದಿತು.[೫]

ಉದ್ಯಮ ಆಸಕ್ತಿಗಳು[ಬದಲಾಯಿಸಿ]

2007 ರಲ್ಲಿ, ಫರ್ಫಾರೆನ್ಸ್ ಜೋನ್ ಎಂಬ ಕಂಪನಿಯನ್ನು ರೂಪಿಸಲು ಪ್ಯಾಡಿ ಉಪ್ಟೋನ್ ಮತ್ತು ಡೇಲ್ ವಿಲಿಯಮ್ಸ್ ಅನ್ನು ಸೇರಿಕೊಂಡರು.[೬] ವೈಯಕ್ತಿಕ ಜನರು ಮತ್ತು ತಂಡಗಳೊಂದಿಗೆ ವ್ಯವಹಾರ ಮತ್ತು ಕ್ರೀಡೆಯಲ್ಲಿ ಕಾರ್ಯನಿರ್ವಹಿಸುವುದು ಮತ್ತು ಅವರ ಗ್ರಾಹಕರ ಅತ್ಯುತ್ತಮ ನಿರ್ವಹಣೆಯನ್ನು ಹೊರತರುವುದು ಕಂಪನಿಯ ಉದ್ದೇಶವಾಗಿತ್ತು. ಕಸ್ಟೈನ್ ಅವರು ಭಾರತೀಯ ತರಬೇತುದಾರರಾಗಿ ಮತ್ತು ಎರಡು ವರ್ಷದ ಅವದಿಗೆ ಉಪ್ಟೋನ್ ಇಂಡಿಯನ್ ಮೆಂಟಲ್ ಸುಧಾರಣೆ ತರಬೇತುದಾರರಾಗಿ ನೇಮಕೊಂಡಾಗ, ಅವರು ವ್ಯವಹಾರವನ್ನು ಮುಂದುವರಿಸಲು ನಿರ್ಧರಿಸಿದರು. ಕರ್ಸ್ಟೈನ್ ಅವರು ಭಾರತೀಯ ತರಬೇತುದಾರರಾಗಿ ನೇಮಕಗೊಂಡ ಬಳಿಕ ಇದು ಅದರ ಮೊದಲ ಯೋಜನೆಯು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗಾಗಿ ಸಮರ್ಪಿತವಾದ garykirsten.com,[೭] ವೆಬ್‌ಸೈಟ್ ಅನ್ನು ನಿರ್ಮಿಸಿದುದಾಗಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. "Cricinfo". Cricinfo. Retrieved 2010-12-20.
  2. "Kirsten keen on mental skills coach". Cricket.indiatimes.com. Retrieved 2010-12-20.
  3. "Gary Kirsten Lined Up As New India Coach". Cricketworld.com. 2007-11-27. Archived from the original on 2009-03-14. Retrieved 2010-12-20.
  4. "Kirsten Signs Two-Year Deal To Coach India". Cricketworld.com. 2007-12-04. Archived from the original on 2009-03-14. Retrieved 2010-12-20.
  5. http://www.espncricinfo.com/india/content/current/story/497999.html
  6. "Performance Zone web site". Performancezone.co.za. Archived from the original on 2018-08-13. Retrieved 2010-12-20.
  7. "Official web site of Gary Kirsten". Garykirsten.com. Retrieved 2010-12-20.
ಪೂರ್ವಾಧಿಕಾರಿ
Chandu Borde
Head coach of Indian national cricket team
2008-2011
ಉತ್ತರಾಧಿಕಾರಿ
To Be Decided