ಗೌರಿ ಜೋಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೌರಿ ಜೋಗ್
ಗೌರಿ ಜೋಗ್ ಕಥಕ್ ನೃತ್ಯ ಪ್ರದರ್ಶನ
Born
ಗೌರಿ ಕಾಳೆ

೧೯೭೦
ನಾಗಪುರ, ಭಾರತ
Occupation(s)ಕಥಕ್ ನರ್ತಕಿ, ಶಿಕ್ಷಕಿ ಮತ್ತು ನೃತ್ಯ ಸಂಯೋಜಕಿ.
Websitehttp://www.gaurijog.com


ಗೌರಿ ಜೋಗ್ ಚಿಕಾಗೋದ ಕಥಕ್ ನೃತ್ಯಗಾರ್ತಿ, ನೃತ್ಯ ಸಂಯೋಜಕಿ ಮತ್ತು ಸಂಶೋಧನಾ ವಿದ್ವಾಂಸರಾಗಿದ್ದಾರೆ. ಅವರು ಕಥಕ್ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದರು ಮತ್ತು ಲಕ್ನೋ ಮತ್ತು ಜೈಪುರ ಘರಾನಾದ ನೃತ್ಯಗಾರ್ತಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅವರ ರಚನೆಗಳು ಕೃಷ್ಣ ಲೀಲಾ, [೧] ಶಕುಂತಲಾ, ಝಾನ್ಸಿ ಕಿ ರಾಣಿ, ಕಥಕ್ ಯಾತ್ರೆ, [೨] ಈಸ್ಟ್ ಮೀಟ್ಸ್ ವೆಸ್ಟ್, ಫೈರ್ - ದಿ ಫಿಯರಿ ಟೇಲ್ [೩] ಇತರವುಗಳನ್ನು ಒಳಗೊಂಡಿದೆ. ಅವರು ಕಥಕ್‌ ನಲ್ಲಿರುವ ತಾಂತ್ರಿಕ ಅಂಶಗಳ ಮೂಲಕ ಸಾಂಪ್ರದಾಯಿಕ "ಕಥೆ ಹೇಳುವ ಕಲೆ" ಗೆ ಜೀವ ತುಂಬುತ್ತಾರೆ. ಕೆಲವು ಬಾಲಿವುಡ್ ಹೆಜ್ಜೆಗಳು ಮತ್ತು ಯೋಗವನ್ನು ಕಥಕ್‌ಗೆ ಸಂಯೋಜಿಸುವ ವಿಶಿಷ್ಟ ವಿಧಾನದಿಂದಾಗಿ ಅವರು ವಿಶೇಷವಾಗಿ ಯುವ ಪೀಳಿಗೆಯಲ್ಲಿ ಬಹಳ ಜನಪ್ರಿಯರಾಗಿದ್ದಾರೆ ಮತ್ತು ಸಂಪ್ರದಾಯದ ಗಡಿಗಳನ್ನು ದಾಟದಂತೆ ನೋಡಿಕೊಳ್ಳುತ್ತಾರೆ. ಕಥಕ್ ಅನ್ನು ಫ್ಲಮೆಂಕೊ, ಭರತನಾಟ್ಯ, ಒಡಿಸ್ಸಿ, ಮೆಕ್ಸಿಕನ್ ಮತ್ತು ಅಮೇರಿಕನ್ ಬ್ಯಾಲೆಗಳೊಂದಿಗೆ ಸಂಯೋಜಿಸುವ ಅವರ ಪ್ರಯೋಗಗಳು ಅನೇಕ ಪುರಸ್ಕಾರಗಳನ್ನು ಗೆದ್ದಿವೆ. ೧೯೯೯ ರಿಂದ ಗೌರಿ ಜೋಗ್ [೪] ಮತ್ತು ಅವರ ಗುಂಪು ಉತ್ತರ ಅಮೇರಿಕಾ ಮತ್ತು ಭಾರತದಲ್ಲಿ ೩೨೫ ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ಪ್ರದರ್ಶಿಸಿದೆ.

ಆರಂಭಿಕ ಜೀವನ ಮತ್ತು ಹಿನ್ನೆಲೆ[ಬದಲಾಯಿಸಿ]

ಗೌರಿ ಜೋಗ್ ಅವರು ೧೯೭೦ ರಲ್ಲಿ ನಾಗ್ಪುರ್ ದಲ್ಲಿ ಜನಿಸಿದರು ಮತ್ತು ಲಕ್ನೋ ಘರಾನಾದ ಅವರ ಗುರು ಮದನ್ ಪಾಂಡೆ ಅವರಿಂದ ಶಿಸ್ತುಬದ್ಧ ಮತ್ತು ನಿಖರವಾದ ತರಬೇತಿಯನ್ನು ಪಡೆದರು. ಲಯಬದ್ಧ ಪಾದದ ಮತ್ತು ಅದರ ಕ್ರಮಪಲ್ಲಟನೆಗಳಿಗೆ ಒತ್ತು ನೀಡಿದರು. ಅವರು ಅಭಿನಯ ಕಲೆಗೆ ಹೆಸರುವಾಸಿಯಾದ ಜೈಪುರ ಘರಾನಾದ ಲಲಿತಾ ಹರ್ದಾಸ್ ಅವರಿಂದ ಕಥಕ್ ನೃತ್ಯವನ್ನು ಅಧ್ಯಯನ ಮಾಡಿದರು. ಮುಂಬೈನ ಮಾಧುರಿತಾ ಸಾರಂಗ್ ಅವರ ಬಳಿಯೂ ಓದಿದ್ದರು. ಅವರು ೫ ನೇ ವಯಸ್ಸಿನಲ್ಲಿ ನೃತ್ಯ ತರಬೇತಿಯನ್ನು ಪ್ರಾರಂಭಿಸಿದರು ಮತ್ತು ಅವರು ೭ ವರ್ಷದವರಿದ್ದಾಗ ಮೊದಲ ಪ್ರದರ್ಶನ ನೀಡಿದರು. ಗೌರಿ ಜೋಗ್ ಅವರು ನಾಗ್ಪುರ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಸೈನ್ಸ್ ಮತ್ತು ನ್ಯೂಟ್ರಿಷನ್ ಮತ್ತು ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪಂಡಿತ್ ಬಿರ್ಜು ಮಹಾರಾಜ್ ಸೇರಿದಂತೆ ಭಾರತದ ಪ್ರಖ್ಯಾತ ಕಥಕ್ ಗುರುಗಳ ಹಲವಾರು ಕಾರ್ಯಾಗಾರಗಳಲ್ಲಿ ಅವರು ಭಾಗವಹಿಸಿದ್ದಾರೆ. ಅವರು ಕಥಕ್‌ ನ ಲಕ್ನೋ ಮತ್ತು ಜೈಪುರ ಘರಾನಾ ಸಂಯೋಜನೆಯನ್ನು ಅಭ್ಯಾಸ ಮಾಡುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. "Asian Media USA, Krishna Leela – an artistic portrayal of Lord Krishna's life story, 14 April 2014". Archived from the original on 4 ಮಾರ್ಚ್ 2016. Retrieved 17 ಸೆಪ್ಟೆಂಬರ್ 2023.
  2. Jog/articleshow/12452430.cms Times Of India, Journey of Indian dance by Gauri Jog, 29 March 2012
  3. Narthaki, Fire – the Fiery Tale - Gauri Jog and her group captivate the audience, 17 March 2007
  4. Artist India Gallery, Artist Gauri Jog, 17 January 2006[ಶಾಶ್ವತವಾಗಿ ಮಡಿದ ಕೊಂಡಿ]

ಅಧಿಕೃತ ಜಾಲತಾಣ[ಬದಲಾಯಿಸಿ]

ಗೌರಿ ಜೋಗ್