ಗೋಲ್ಡನ್ ಆಮೆ ಜೀರುಂಡೆ
ಗೋಲ್ಡನ್ ಆಮೆ ಜೀರುಂಡೆ | |
---|---|
Scientific classification | |
ಸಾಮ್ರಾಜ್ಯ: | |
ವಿಭಾಗ: | |
ವರ್ಗ: | |
ಗಣ: | |
ಉಪಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | |
ಪ್ರಜಾತಿ: | C. sexpunctata
|
Binomial name | |
ಚಾರಿಡೊಟೆಲ್ಲಾ ಸೆಕ್ಸ್ಪಂಕ್ಟೇಟಾ (Fabricius, 1781)
| |
Synonyms | |
|
ಗೋಲ್ಡನ್ ಆಮೆ ಜೀರುಂಡೆಯು ಕ್ರಿಸೊಮೆಲಿಡೆ ಕುಟುಂಬಕ್ಕೆ ಸೇರಿದ ಜೀರುಂಡೆಯ ಒಂದು ಜಾತಿ. ಇದು ಅಮೆರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಚಾರಿಡೊಟೆಲ್ಲಾ ಸೆಕ್ಸ್ಪಂಕ್ಟೇಟಾ..[೧] ಇದನ್ನು ಆಂಗ್ಲ ಭಾಷೆಯಲ್ಲಿ ಗೋಲ್ಡ್ ಬಗ್,ಗೋಲ್ಡೆನ್ ಟಾರ್ಟೋಯಿಸ್ ಬೀಟಲ್,ಸ್ವೀಟ್ ಪೊಟಾಟೊ ಬೀಟಲ್ ಮತ್ತು ಟಾರ್ಟೋಯಿಸ್ ಬೀಟಲ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. [೨]
ಇದು ಎರಡುಉಪಜಾತಿಗಳನ್ನು ಹೊಂದಿದೆ.
- ಉಪಜಾತಿ ಬೈಕಲರ್
- ಉಪಜಾತಿ ಸೆಕ್ಸ್ಪಂಕ್ಟೇಟಾ
ಜೀವನಚಕ್ರ
[ಬದಲಾಯಿಸಿ]ಹೆಣ್ಣು ಜೀರುಂಡೆಯು ತನ್ನ ಮೊಟ್ಟೆಗಳನ್ನು ಮರದ ಕಾಂಡ ಅಥವ ಎಲೆಗಳ ಮೇಲೆ ಇಡುತ್ತದೆ. ಮೊಟ್ಟೆಯು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಹಳದಿ ಅಥವಾ ಕೆಂಪು-ಕಂದು ಬಣ್ಣದ ಲಾರ್ವಾವು ೫ರಿಂದ೧೦ ದಿನಗಳೊಳಗೆ ಮೊಟ್ಟೆಯೊಡೆದು ಹೊರಬರುತ್ತದೆ. ೨ರಿಂದ೩ ಮೂರುವಾರಗಳೊಳಗೆ ಲಾರ್ವಾವು ಕಂದು ಬಣ್ಣದ ಪೊರೆಹೊಂದಿದ ಹುಳುವಾಗಿ ಮಾರ್ಪಡುತ್ತದೆ.[೩] ವಯಸ್ಕ ಜೀರುಂಡೆ ೫ರಿಂದ೭ ಮಿ.ಮೀ.ಉದ್ದವಿರುತ್ತದೆ.[೪] ಬೆಳವಣಿಗೆಯಾದಂತೆ ದೇಹದ ಬಣ್ಣ ಬದಲಾಗುತ್ತದೆ. ಬಣ್ಣವು ಅದರ ಬೆಳವಣಿಗೆಯ ಮೂಲಕ ಅಂದರೆ ಸಂಯೋಗದ ಸಮಯದಲ್ಲಿ,ಅಡಚಣೆಯ ಸಮಯದಲ್ಲಿ ಬದಲಾಗುತ್ತದೆ. ಬೇರೆ ಜೀವಿಗಳಿಂದ ತೊಂದರೆಗೆ ಒಳಗಾದಾಗ ತನ್ನ ಕಾಲುಗಳನ್ನು ದೇಹದ ಹತ್ತಿರಕ್ಕೆ ಆಮೆಗಳ ರೀತಿ ಎಳೆದುಕೊಳ್ಳುತ್ತದೆ.[೫]
ಆಹಾರ
[ಬದಲಾಯಿಸಿ]ಕಾನ್ವಾಲ್ವ್ಯುಲೇಷಿಯೆ ಕುಟುಂಬಕ್ಕೆ ಸೇರಿದ ಸಸ್ಯಗಳಾದ ಸಿಹಿಗೆಣಸು,ಮಾರ್ನಿಂಗ್ ಗ್ಲೋರಿ ಹಾಗೂ ಮುಂತಾದ ಸಸ್ಯಗಳ ಎಲೆಯನ್ನು ಅವುಗಳು ತಿನ್ನುತ್ತದೆ.[೬]
ನೈಸರ್ಗಿಕ ಶತ್ರುಗಳು
[ಬದಲಾಯಿಸಿ]ಕಣಜ ಪರಾಸೈಟಾಯ್ಡ್ ಟೆಟ್ರಾಸ್ಟಿಕಸ್ ಕ್ಯಾಸಿಡಸ್ ಬರ್ಕ್ಸ್ ಮತ್ತು ಫ್ಲೈ ಪರಾಸೈಟಾಯ್ಡ್ ಯುಸೆಲೇಟರ್ಯಾಪ್ಸಿಸ್ ಡಿಮ್ಮೋಕಿ ಇವುಗಳು ಗೋಲ್ಡನ್ ಆಮೆ ಜೀರುಂಡೆಯ ಮೇಲೆ ದಾಳಿ ಮಾಡುತ್ತವೆ. ಚುಚ್ಚುವ ಮತ್ತು ಹೀರುವ ಬಾಯಿಯ ಭಾಗಗಳನ್ನು ಹೊಂದಿರುವ ಡ್ಯಾಮ್ಸೆಲ್ ಬಗ್,ಶೀಲ್ಡ್ ಬಗ್,ಎಸ್ಸಾಸಿನ್ ಬಗ್ ಇದರ ಶತ್ರುಗಳು.[೭]
ಉಲ್ಲೇಖಗಳು
[ಬದಲಾಯಿಸಿ]- ↑ https://www.learnaboutnature.com/insects/beetles/golden-tortoise-beetle/
- ↑ https://books.google.co.in/books?id=3V_w-6tA8hYC&pg=PA170&dq=golden+tortoise+
- ↑ https://keys.lucidcentral.org/keys/sweetpotato/key/Sweetpotato%20Diagnotes/Media/Html/TheProblems/Pest-LeafChewingInsects/TortoiseBeetles/tortoise%20beetles.htm
- ↑ https://twistedsifter.com/2012/08/golden-tortoise-beetle-pictures/
- ↑ https://wiki.bugwood.org/HPIPM:Golden_Tortoise_Beetle
- ↑ https://bugguide.net/node/view/8826
- ↑ http://entnemdept.ufl.edu/creatures/veg/potato/golden_tortoise_beetle.htm