ವಿಷಯಕ್ಕೆ ಹೋಗು

ಗೋಕರ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗೋಕರ್ಣದ ತೀರ್ಥಗಳು ಇಂದ ಪುನರ್ನಿರ್ದೇಶಿತ)
ಗೋಕರ್ಣ
ಗೋಕರ್ಣ ನಗರದ ಪಕ್ಷಿನೋಟ
ಗೋಕರ್ಣ ನಗರದ ಪಕ್ಷಿನೋಟ
ಗೋಕರ್ಣದ ಓಂ ಕಡಲತೀರ

ಗೋಕರ್ಣ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಉತ್ತರ ಕನ್ನಡ
ನಿರ್ದೇಶಾಂಕಗಳು 14.55° N 74.31667° E
ವಿಸ್ತಾರ
 - ಎತ್ತರ
10.9 km²
 - 586 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
25851
 - /ಚದರ ಕಿ.ಮಿ.

ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ; ಪರಶುರಾಮ ಭೂಮಿ ಎಂಬ ಐತಿಹ್ಯಗಳನ್ನು ಹೊಂದಿರುವ ಈ ಪ್ರದೇಶ ವಾಯವ್ಯ ದಿಕ್ಕಿನಲ್ಲಿದೆ. ಕಾರವಾರದಿಂದ ಸುಮಾರು ೬೫ ಕಿ.ಮಿ. ದೂರದಲ್ಲಿದೆ.

ಪುಣ್ಯ ಕ್ಷೇತ್ರ

[ಬದಲಾಯಿಸಿ]

ಮಹಾಗಣಪತಿ ದೇವಾಲಯ, ಶಿವ (ಮಹಾಬಲೇಶ್ವರ) ದೇವಾಲಯಗಳು ಇದ್ದು ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ.ದೇವಾಲಯಗಳ ಸಮೀಪದಲ್ಲಿಯೇ ಸುಂದರ ಕಡಲ ತೀರವಿದ್ದು ನೋಡಲು ತುಂಬಾ ಆಕಷ೯ಣೀಯವಾಗಿದೆ.ಇದೊಂದು ಪ್ರವಾಸಿಗರ ತಾಣವಾಗಿದ್ದು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಗೋಕರ್ಣದಲ್ಲಿ ೩ ಸಮುದ್ರ ತೀರಗಳಿದ್ದು ನೋಡಲು ತುಂಬಾ ರಮಣೀಯವಾಗಿದೆ.

  1. ಅರ್ಧಚಂದ್ರಾಕಾರದ ಸಮುದ್ರ ತೀರ
  2. ಸಮುದ್ರ ತೀರ
  3. ಆಕಾರದ ಸಮುದ್ರ ತೀರ
GOKARNA MAHATME
GOKARNA PURANA SARA

ಗೋಕರ್ಣ

[ಬದಲಾಯಿಸಿ]

ಕನ್ನಡ ವಿಶ್ವಕೋಶದಲ್ಲಿ ಕೂಡ ಗೋಕರ್ಣ ಶಬ್ದದ ವಿವರಣೆ ನೀಡಲಾಗಿದೆ.ಗೋಕರ್ಣ ಎಂಬ ಹೆಸರು ಈ ಕ್ಷೇತ್ರಕ್ಕೆ ಹೇಗೆ ಬಂದಿತು ಎನ್ನುವುದಕ್ಕೆ ಹಾಗೂ ಸ್ಕಂದ ಪುರಾಣದ ಗೋಕರ್ಣ ಖಂಡದಲ್ಲಿ ೮ ನೇ ಅಧ್ಯಾಯದಲ್ಲಿ ಹಾಗೂ ಸ್ಕಂದ ಪುರಾಣದ ಸಹ್ಯಾದ್ರಿ ಉತ್ತರ ಖಂಡದಲ್ಲಿ ಹೀಗೆ ಹೇಳಲಾಗಿದೆ - ಧರಣೀಮಾಹ ಶಂಕರ ಮತ್ಸಂಯೋಗಾದಿಹ ಶುಭೇ ಭವಿಷ್ಯತಿ ಸುತಸ್ತವ | ಗ್ರಹಾಣಾಮಧಿಪಶ್ಚಂಡಃ $ಸೋಂಗಾರಕ ಇತಿ ಶ್ರುತಃ || ಭವಿಷ್ಯತೀದಂ ಭದ್ರಂ ತೇ ಕ್ಷೇತ್ರಂ ತ್ರೈಲೋಕ್ಯ ವಿಶ್ರುತಂ | ಗೋಶಬ್ದಃ ಪ್ರಠಮಂ ದೇವಿ ತ್ವಯಿ ಸಂಪರಿವರ್ತತೇ || ಕರ್ಣಶ್ಚಾಯಂ ತವ ಶುಭೇ ದೇವ್ಯಂಬುಗ್ರಹ ಯೋಗತಃ | ತಸ್ಮಾದ್ಗೋಕರ್ಣಮಿತಿ ಚ ಖ್ಯಾತಿಂ ಲೋಕೇ ಗಮಿಷ್ಯತಿ ||

  • ಗೋ ಎನ್ನುವುದು ಮೊಟ್ಟ ಮೊದಲಿಗೆ ಭೂಮಿಗೆ ಬಂದ ಸಂಜ್ಞೆಯಾಗಿದೆ. ಈ ಕ್ಷೇತ್ರವು ಕರ್ಣವಾಗಿದ್ದು ಶಿವನ ಸಂಯೋಗದಿಂದ ಇಲ್ಲಿ ಗ್ರಹಗಳಿಗೆ ಅಧಿಪನಾದ ಅಂಗಾರಕನು(ಆತನಿಗೆ ಕರ್ಣಸಂಜ್ಞೆ) ಹುಟ್ಟುತ್ತಾನೆ. ಭೂಮಿ ಹಾಗೂ ಅಂಬುಗ್ರಹ(ಅಂಗಾರಕ) ಕೂಡುವಿಕೆ ಅಥವಾ ಭೂಮಿ ಹಾಗೂ ರುದ್ರಯೋನಿ ಎಂದು ಖ್ಯಾತವಾದ ಗೋಕರ್ಣದ ಸ್ಥಲ ಇವುಗಳ ಕೂಡುವಿಕೆಯಿಂದಾಗಿ ಇದು ಗೋಕರ್ಣ ಎಂದು ಖ್ಯಾತವಾಗುತ್ತದೆ.
  • ರಾಮಾಯಣ ಕಾಲದಷ್ಟು ಹಳೆಯದಾದ ಗೋಕರ್ಣ ಜಾಗತಿಕವಾಗಿ ಹೆಸರಾದ ಕ್ಷೇತ್ರವಾಗಿದೆ. ಅನೇಕ ಧಾರ್ಮಿಕ ಕ್ಷೇತ್ರಗಳು ಇದ್ದರೂ ಇದು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಗೋಕರ್ಣದಲ್ಲಿ ಪ್ರಾಚೀನವಾದ ಶಿಲಾಲೇಖನಗಳು, ಪ್ರಾಚೀನವಾದ ಮಹಾಬಲೇಶ್ವರ ದೇವಾಲಯ ಇದೆ. ಪ್ರಾಚೀನವಾದ ವಾಯುಪುರಾಣದಂತಹ ಪುರಾಣಗಳಲ್ಲಿ ಈ ಕ್ಷೇತ್ರ ಉಲ್ಲೇಖಿತವಾಗಿರುವುಧು ಪ್ರಧಾನವಾದ ಅಂಶವಾಗಿದೆ.
  • ಈ ಕ್ಷೇತ್ರವು ತ್ರಿಸ್ಥಲವೆಂದು ಖ್ಯಾತವಾದ ಗೋಕರ್ಣ, ರಾಮಸೇತು, ಕಾಶಿ ಕ್ಷೇತ್ರಗಳಲ್ಲಿ ಒಂದಾಗಿದೆ. ಭರತ ಖಂಡದ ಹತ್ತು ಭಾಸ್ಕರ ಕ್ಷೇತ್ರಗಳಲ್ಲಿ ಇದು ಒಂದಾಗಿರುವುದರಿಂದ ಹಿಂದೂ ಜನರ ಪವಿತ್ರ ಕ್ಷೇತ್ರ ಇದಾಗಿದೆ. ಈ ಕ್ಷೇತ್ರವು ಸಮುದ್ರದಲ್ಲಿ ಸೇರಿತ್ತು. ಪರಶುರಾಮನು ಇದನ್ನು ಉದ್ಧರಿಸಿದನೆಂದು ಪುರಾಣ ಹೇಳುತ್ತದೆ. ವಾಯುಪುರಾಣದಲ್ಲಿ ೪೮ ನೇ ಅಧ್ಯಾಯದಲ್ಲಿ
  • ತಸ್ಯ ದ್ವೀಪಸ್ಯ ವೈ ಪೂರ್ವೇ ತೀರೇ ನದನದೀಪತೇಃ | ಗೋಕರ್ಣ ನಾಮಧೇಯಸ್ಯ ಶಂಕರಸ್ಯಾಲಯಂ ಮಹತ್ || ಎನ್ನಲಾಗಿದೆ.
  • ಬ್ರಹ್ಮಾಂಡ ಪುರಾಣದಲ್ಲಿ ಅನೇಕ ಕಡೆ ಗೋಕರ್ಣದ ಬಗೆಗಿನ ವಿಷಯಗಳು ಕಂಡು ಬರುತ್ತವೆ. ೫೭ ನೇ ಅಧ್ಯಾಯದಲ್ಲಿ ಗೋಕರ್ಣ ಕ್ಷೇತ್ರ ಹೇಗೆ ಪರಶುರಾಮ ಸೃಷ್ಟಿ ಎಂಬುಧನ್ನು ವಿವರಿಸಲಾಗಿದೆ.
  • ಗೋಕರ್ಣ ನಾಮ ವಿಖ್ಯಾತಂ ಕ್ಷೇತ್ರಂ ಸರ್ವ ಸುರಾರ್ಚಿತಮ್ | ಸಾರ್ಧಯೋಜನ ವಿಸ್ತಾರಮ್ ತೀರೇ ಪಶ್ಚಿಮ ವಾರಿಧೇಃ ||

ಇತ್ಯಾದಿಯಾಗಿ ಗೋಕರ್ಣದ ವಿಖ್ಯಾತಿಯನ್ನು ಅನೇಕ ಪುರಾಣಗಳಲ್ಲಿ ವಿವರಿಸಲಾಗಿದೆ. ಗೋಕರ್ಣ ಕ್ಷೇತ್ರ ಮಂಡಲದ ಕುರಿತಾಗಿ ವಿವರಣೆ=

  • ಪಂಚಕ್ರೋಶ ಪರೀಣಾಹಂ ಗೋಕರ್ಣ ಕ್ಷೇತ್ರ ಮಂದಲಮ್ || ಎಂಬುದಾಗಿ ಸ್ಕಂದ ಪುರಾಣದ ಸಹ್ಯಾದ್ರಿ ಉತ್ತರ ಖಂಡದಲ್ಲಿ ಹದಿನೈದು ಮೈಲಿಯ ಸುತ್ತಳತೆಯ ಕ್ಷೇತ್ರ ಗೋಕರ್ಣ ಮಂಡಲ ಎನ್ನಲಾಗಿದೆ.
  • ಜೊತೆಗೆ ಸಾರ್ಧ ಯೋಜನ ವಿಸ್ತೀರ್ಣಂ ಅರ್ಧ ಯೋಜನಮಾಯತಮ್ | ಕ್ಷೇತ್ರ ರೂಪೇಣ ತಿಷ್ಠಂತಂ ಶಿವಮ್ ಪಶ್ಯಂತಿ ಸೂರಯಃ || ಎನ್ನಲಾಗಿದೆ.
  • ಗೋಕರ್ಣ ಕುರಿತು ಸ್ಕಂಧ ಪುರಾಣದ ಕಾಶೀ ಖಂಡದಂತೆ ಗೋಕರ್ಣ ಖಂಡವೂ ಇದೆ. ಇದಲ್ಲದೇ ಸಂಕ್ಷೇಪವಾದ ಗೋಕರ್ಣ ಮಹಾತ್ಮೆ ಗ್ರಂಥಗಳೂ ಮುದ್ರಿತವಾಗಿದೆ.
Karnataka Gazetteerr Part 2.pdf

Gazetteer of Bombay.pdf

Gazetteer of Bombay.pdf

ಪೌರಾಣಿಕವಾಗಿ ಗೋಕರ್ಣ

[ಬದಲಾಯಿಸಿ]
  • ಶ್ರೀ ಕೈಲಾಸಾಧಿಪತಿಯಾದ ಶಂಕರನ ಪರಮ ಭಕ್ತನಾದ ರಾವಣನ ತಾಯಿ ಕೈಕಸೆ ಎಂಬುವಳು. ಈಕೆ ಒಂದು ದಿನ ಪಾರ್ಥಿವ ಲಿಂಗಪೂಜೆಯನ್ನು ಮಾಡಲು ನಿಶ್ಚೈಸಿ ಸಮುದ್ರದಲ್ಲಿ ಸ್ನಾನ ಮಾಡಿ ಮಳಲು ಲಿಂಗವನ್ನು ಮಾಡಿಕೊಂಡು ಪೂಜಿಸುತ್ತಿದ್ದಳು. ಆಗ ಸಮುದ್ರದ ತೆರೆಗಳು ಲಿಂಗ ವನ್ನು ಕೊಚ್ಚಿಕೊಂಡು ಹೋದವು. ಕೈಕಸೆಯು ದುಃಖಿಸುತ್ತಾ ಮಗನಾದ ರಾವಣನನ್ನು ನೆನೆದಳು. ಅವನು ಇದನ್ನು ನೋಡಿ ಎಲ್ಲವನ್ನೂ ಸಹಿಸಿ, ತಾಯೆ, ದುಃಖಿಸಬೇಡ. ಶಿವನನ್ನು ತಪಸ್ಸಿನಿಂದ ಒಲಿಸಿ ಅವನು ಪೂಜಿಸುವ ಪ್ರಾಣ ಲಿಂಗವನ್ನೇ ತಂದುಕೊಡುತ್ತೇನೆಂದು ಸಮಾಧಾನ ಪಡಿಸಿ ಕೈಲಾಸಕ್ಕೆ ಹೋದನು.
  • ಅಲ್ಲಿ ಆತನಿಗೆ ತನ್ನ ಶಕ್ತಿಯಿಂದ ಕೈಲಾಸವನ್ನೇ ಲಂಕೆಗೆ ಒಯ್ದರೆ ಹೇಗೆ ಎಂಬ ಬುಧ್ಧಿ ಹುಟ್ಟಿತು. ಆತ ತನ್ನ ಇಪ್ಪತ್ತು ತೋಳುಗಳ ಬಲದಿಂದ ಕೈಲಾಸವನ್ನು ಎತ್ತಲು ಕೈಲಾಸವು ಅಲುಗಾಡಿತು. ಪಾರ್ವತಿಯು ಭೀತಿಯಿಂದ ಶಿವನನ್ನು ಅಪ್ಪಿದಳು. ಶಿವನು ಪಾರ್ವತಿಯನ್ನು ಸಮಾಧಾನಪಡಿಸಿ ತನ್ನ ಎಡಗಾಲಿನ ಅಂಗುಷ್ಠದಿಂದ ಭೂಮಿಗೆ ಒತ್ತಿದನು. ರಾವಣನ ಕೈಗಳು ಪರ್ವತದ ಬುಡದಲ್ಲಿ ಸಿಕ್ಕಿದವು. ಅವನು ಬಾಧೆಯಿಂದ ನರಳುತ್ತ ಹರನನ್ನು ಪ್ರಾರ್ಥಿಸಲು ಶಿವನು ಕಾಲನ್ನು ಎತ್ತಿದನು. ರಾವಣನು ಬಲಾತ್ಕಾರದಿಂದ ತನ್ನ ಕೆಲಸವಾಗುವುದೆಂದು ತಿಳಿದು ನೋವಿಗೆ ಹೆದರದೇ ತಪಸ್ಸನ್ನು ಮಾಡಿದನು. ಅದಕ್ಕೂ ಶಿವ ಪ್ರಸನ್ನನಾಗದಿದ್ದಾಗ ತನ್ನ ತಲೆಯನ್ನೇ ಕಡಿದು ಬುರುಡೆಯನ್ನು ತಯಾರಿಸಿ ದೇಹದ ನಾಳಗಳಿಂದ ತಂತಿಯನ್ನು ಮಾಡಿ ಸಾಮಗಾನವನ್ನು ಹಾಡಿದನು. ರಾವಣನ ಸಾಮಗಾನಕ್ಕೆ ರುದ್ರ ಪ್ರಸನ್ನನಾಗಿ ಮೈದಡವಿ ಬೇಕಾದ ವರವನ್ನು ಬೇಡೆಂದನು.
  • ರಾವಣನು ನಮಸ್ಕರಿಸಿ ಶಿವನೇ, ನಿನ್ನ ಅನುಗ್ರಹದಿಂದ ಸಕಲ ಭಾಗ್ಯಗಳೂ ದೇವತೆಗಳೂ ನನ್ನ ದಾಸರಾಗಿರುವರು. ನನ್ನ ತಾಯಿಯು ನಿತ್ಯವೂ ಪೂಜಿಸಲು ನಿನ್ನಿಂದ ಪೂಜಿಸಲ್ಪಡುವ ಪ್ರಾಣಲಿಂಗವನ್ನು ಅನುಗ್ರಹಿಸು ಎಂದನು. ಭವನು ಆತ್ಮಲಿಂಗವನ್ನು ರಾವಣನಿಗೆ ಕೊಡುತ್ತ ಇದನ್ನು ಪೂಜಿಸುವವರ ಸಕಲ ಇಷ್ಟಾರ್ಥಗಳೂ ಕೈಗೂಡುವವು. ಅವರು ಈಶ್ವರನನ್ನೇ ಪಡೆಯುವರು. ಇದನ್ನು ಭೂಮಿಯಲ್ಲಿ ಎಲ್ಲಿಯೂ ಇಡದೇ ತೆಗೆದುಕೊಂಡು ಹೋಗಬೇಕು. ಭೂಮಿಯಲ್ಲಿ ಇಟ್ಟಿದ್ದಾದರೆ ಅದು ಅಲ್ಲೇ ಘಟ್ಟಿಯಾಗಿ ನಿಲ್ಲುತ್ತದೆ ಮತ್ತು ಅದು ಪುನಃ ಎತ್ತಲು ಸಾಧ್ಯವಿಲ್ಲ ಎಂದು ತಿಳಿಸಿ ಶಿವನು ಅಂತರ್ಧಾನನಾದನು. ರಾವಣನು ಹರ್ಷಿತನಾಗಿ ಹರನಿಗೆ ನಮಸ್ಕರಿಸಿ ಲಂಕೆಗೆ ಹೊರಟನು.
  • ಇದನ್ನೆಲ್ಲವನ್ನೂ ಲೋಕ ಸಂಚಾರಿಯಾದ ನಾರದನು ತಿಳಿದು ದೇವಲೋಕದಲ್ಲಿ ಸುಖಾಸೀನರಾಗಿರುವ ದೇವತೆಗಳನ್ನು ಕಂಡು "ಹೇ ದೇವತೆಗಳಿರಾ ರಾವಣನು ಕೈಲಾಸನಾಥನನ್ನು ತಪಸ್ಸಿನಿಂದ ಒಲಿಸಿಕೊಂಡು ಅವನ ಆತ್ಮಲಿಂಗವನ್ನು ಪಡೆದು ಲಂಕೆಗೆ ಹೋಗುತ್ತಿದ್ದಾನೆ. ಅವನು ಲಂಕೆಯನ್ನು ಸೇರಿದರೆ ಅದೇ ಕೈಲಾಸವಾಗುವುದು. ಅವನನ್ನು ದೇವ, ದಾನವ, ರಾಕ್ಷಸ, ಯಕ್ಷ, ಕಿನ್ನರ ಮನುಷ್ಯರಿಂದ ಜಯಿಸಲು ಸಾಧ್ಯವಿಲ್ಲ. ನೀವು ಕಾಲ ಕಳೆಯದೇ ಮಾರ್ಗ ಮಧ್ಯದಲ್ಲಿ ಅವನನ್ನು ತಡೆದು ಅವನ ಕೈಯಿಂದ ಪ್ರಾಣ ಲಿಂಗವನ್ನು ತಪ್ಪಿಸಿ ಭೂಮಿಯಲ್ಲಿ ಇಡುವಂತೆ ಮಾಡಿದರೆ ಪುನಃ ಆ ದುಷ್ಟನಿಗೆ ಅದು ಸಿಗುವುದಿಲ್ಲವೆಂದು ಶಿವನೇ ಹೇಳಿದ್ದಾನೆ. ಬೇಗನೇ ಕಾರ್ಯ ತತ್ಪರರಾಗಿ ಎಂದು ಹೇಳಿ ನಾರದನು ಹೊರಟು ಹೋದನು.
  • ದೇವತೆಗಳು ಗಾಬರಿಯಿಂದ ಏನೊಂದೂ ತಿಳಿಯದೇ ತಮ್ಮನ್ನು ಯಾವಾಗಲೂ ಕಷ್ಟದಲ್ಲಿ ರಕ್ಷಿಸುವ ಮಹಾವಿಷ್ಣುವಿನ ಸ್ತೋತ್ರ ಮಾಡಿ ಅವನಿಗೆ ಎಲ್ಲವನ್ನೂ ಅರಿಕೆ ಮಾಡಿದರು. ವಿಷ್ಣುವು ಹೊಸ ಸಂಕಟವು ಪ್ರಾಪ್ತವಾಯಿತಲ್ಲಾ ಎಂದು ಚಿಂತಿಸಿ ಅದಕ್ಕೊಂದು ಪರಿಹಾರವನ್ನು ಯೋಚಿಸಿ ಗಣಪತಿ ಯನ್ನು ಕರೆದು ರಾವಣನು ನಿನ್ನನ್ನು ಪೂಜಿಸದೇ ನಿನ್ನ ತಂದೆಯನ್ನು ತಪಸ್ಸಿನಿಂದ ಒಲಿಸಿಕೊಂಡು ಮನೆಗೆ ಹೋಗುತ್ತಿದ್ದಾನೆ. ಅವನಿಗೆ ನೀನು ವಿಘ್ನವನ್ನುಂಟು ಮಾಡು. ನಿನಗೆ ಮೋದಕ ಕಡಬು ಕರ್ಜೀಕಾಯಿ ಪಂಚಖಾದ್ಯ ಕಬ್ಬು ಮೊದಲಾದವುಗಳನ್ನು ಕೊಡುತ್ತೇನೆ. ನೀನು ರಾವಣನಿಂದ ಆತ್ಮಲಿಂಗವನ್ನು ಪಡೆದು ಭೂಮಿಯಲ್ಲಿ ಇರಿಸಬೇಕೆಂದು ತಿಳಿಸಿದನು. ದೇವತೆಗಳೂ ಭಕ್ತಿಯಿಂದ ಗಣಪತಿಯನ್ನು ಪೂಜಿಸಿ ಸ್ತೋತ್ರ ಮಾಡಿ ನಮ್ಮನ್ನು ಉದ್ಧರಿಸಬೇಕೆಂದು ಬೇಡಿಕೊಂಡರು.
  • ಗಣಪತಿಯು ಪಶ್ಚಿಮ ಸಮುದ್ರ ತೀರದಲ್ಲಿರುವ ಗೋಕರ್ಣದ ಸಮೀಪದಲ್ಲಿ ರಾವಣನು ಬರುತ್ತಿರುವುದನ್ನು ಕಂಡು ಬ್ರಹ್ಮಚಾರಿಯ ರೂಪವನ್ನು ಧರಿಸಿ ಕಬ್ಬುಗಳನ್ನು ತಿನ್ನುತ್ತಿದ್ದನು. ಆ ಕಾಲಕ್ಕೆ ಸರಿಯಾಗಿ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸೂರ್ಯನನ್ನು ಮರೆಮಾಡಿ ಸಂಧ್ಯಾಕಾಲವೆಂಬ ಭ್ರ ಮೆಯನ್ನು ರಾವಣನಿಗೆ ಉಂಟು ಮಾಡಿದನು. ರಾವಣನು ಬ್ರಾಹ್ಮಣನೂ, ಜ್ನಾನಿಯೂ ಕರ್ಮನಿಷ್ಠನೂ ಆದ್ದರಿಂದ, ಸೂರ್ಯನು ಅಸ್ತವಾದದ್ದನ್ನು ನೋಡಿ ಸಂಧ್ಯಾವಂದನೆಯನ್ನು ಮಾಡಬೇಕು. ಆದರೆ ಲಿಂಗವನ್ನು ಭೂಮಿಯ ಮೇಲೆ ಇಡುವಂತಿಲ್ಲ, ಏನು ಮಾಡಲಿ? ಎಂದು ಆಲೋಚಿಸುತ್ತಿ ರುವಾಗ ವಟುವೇಷಧಾರಿಯಾದ ಗಣಪತಿಯನ್ನು ಕಂಡನು.
  • ಮುಗುಳು ನಗೆಯಿಂದ ಅವನನ್ನು ಹತ್ತಿರ ಕರೆದು ಬಾಲಕನೆ, ಈ ಲಿಂಗವನ್ನು ಸ್ವಲ್ಪ ಹಿಡಿದುಕೊಂಡಿರು. ನಾನು ಸಂಧ್ಯಾವಂದನೆಯನ್ನು ಮುಗಿಸಿ ಬರುತ್ತೇನೆ. ಅಲ್ಲಿಯವರೆಗೆ ಭೂಮಿಯ ಮೇಲೆ ಇದನ್ನು ಇಡಬಾರದು; ಜೋಕೆ ಎಂದನು. ಗಣಪತಿಯು ಲಿಂಗವನ್ನು ತೆಗೆದುಕೊಂಡು ಇದು ಭಾರವಾಗಿದೆ; ನನ್ನಿಂದ ಬಹಳ ಹೊತ್ತು ಹಿಡಿದುಕೊಳ್ಳಲು ಸಾಧ್ಯವಿಲ್ಲ. ಮೂರು ಬಾರಿ ನಿನ್ನನ್ನು ಕರೆಯುತ್ತೇನೆ ನೀನು ಬರಬೇಕು. ಬರದಿದ್ದಲ್ಲಿ ಇದನ್ನು ಭೂಮಿಯ ಮೇಲೆ ಇಡುತ್ತೇನೆ, ಎಂದು ಹೇಳಲು ರಾವಣನು ಅದಕ್ಕೆ ಒಪ್ಪಿಕೊಂಡನು. ರಾವಣನು ಶೌಚವನ್ನು ಪೂರೈಸಿ ಕಾಲು ತೊಳೆ ಯುತ್ತಿರುವಾಗ ಒಮ್ಮೆ ರಾವಣಾ ಎಂದು ಕರೆದನು. ಅರ್ಘ್ಯವನ್ನು ಕೊಡುತ್ತಿರುವಾಗ ರಾವಣಾ ಎಂದು ಕರೆದನು. ಜಪವನ್ನು ಪ್ರಾರಂಭಿಸುತ್ತಿರುವಾಗ ಓ ರಾವಣಾ ಎಂದು ಮೂರನೇ ಬಾರಿ ಕೂಗಿದನು. ರಾವಣನು ಓ ಬಂದೆ ಎಂದು ಕೂಗುತ್ತ ಓಡಿ ಬರುವುದರೊಳಗಾಗಿ ಲಿಂಗವನ್ನು ಭೂಮಿಯ ಮೇಲೆ ಶಿವಸ್ಮರಣೆ ಮಾಡುತ್ತ ಇಟ್ಟನು.
  • ರಾವಣನು ಸಿಟ್ಟಿನಿಂದ ಗಣಪತಿಯ ನೆತ್ತಿಯ ಮೇಲೆ ಮುಷ್ಟಿಯಿಂದ ಗುದ್ದಿದನು. ಬಲಿಷ್ಟನಾದ ರಾವಣನ ಗುದ್ದಿನಿಂದ ನೆತ್ತಿಯ ಮೇಲೆ ಒಂದು ಕುಳಿಯಾಗಿ ಹೊಟ್ಟೆಯು ಕುಸಿಯಿತು. ರಾವಣನು ತನ್ನ ಶಕ್ತಿಯ ಗರ್ವದಿಂದ ಲಿಂಗವನ್ನು ಕೀಳಲು ಪ್ರಯತ್ನಿಸಿದನು. ಆದರೂ ಅದನ್ನು ಕೀಳಲು ಅವನಿಂದ ಆಗಲಿಲ್ಲ. ಆಗ ತನ್ನ ತಪಸ್ಸು ನಿಷ್ಫಲವಾದ ಸಿಟ್ಟಿನಿಂದ ಅಲ್ಲಿಯೇ ಬಿದ್ದ ಲಿಂಗದ ಸಂಪುಟವನ್ನು ದಾರವನ್ನೂ ಲಾಲ್ಕು ದಿಕ್ಕಿಗೆ ಬೀಸಿದನು. ಅದು ಸಜ್ಜೇಶ್ವರ, ಗುಣವಂತೇಶ್ವರ, ಧಾರೇಶ್ವರ. ಮೃಡೇಶ್ವರ ಎಂಬ ಹೆಸರಿನಿಂದ ಪ್ರಖ್ಯಾಥವಾಯಿತು.
  • ತನ್ನ ರಾಕ್ಷಸ ಶಕ್ತಿಯು ಸೋತು ಹೋಗಲು ನೀನೇ ಮಹಾಬಲನೆಂದು ಕೂಗಿದನು. ಆ ಕಾಲಕ್ಕೆ ದೇವತೆಗೆಳು ಮಂದಾರದ ಮಳೆಗಳನ್ನು(ಪುಷ್ಪವೃಷ್ಟಿ) ಸುರಿಸಿದರು. ವಿಷ್ಣುವು ಚಕ್ರವನ್ನು ತೆಗೆಯಲು ಸೂರ್ಯನು ಕಾಣಿಸಿಕೊಂಡನು. ಸುರರು ರಾವಣನನ್ನು ನೋಡಿ ಕಿಲಕಿಲನೆ ನಕ್ಕರು. ರಾವಣನು ನಾಚಿಕೆಯಿಂದ ಓಡಿ ಹೋದನು. ಇದನ್ನೆಲ್ಲವನ್ನೂ ಪರಮೇಶ್ವರನು ವಾಯುವಿನಿಂದ ತಿಳಿದು ಗೋಕರ್ಣಕ್ಕೆ ಬಂದನು. ಲಿಂಗವು ರಾವಣನಿಂದ ಬಹಳ ಘಾಸಿಯಾಗಿದ್ದನ್ನು ನೋಡಿ ಪಶ್ಚಾತ್ತಾಪ ಪಟ್ಟನು. ತಾನು ಲಿಂಗವನ್ನು ಪೂಜಿಸಿದನು.
  • ಆಗ ಅಲ್ಲಿಗೆ ಬಂದ ದೇವತೆಗಳನ್ನು ಕುರಿತು ತನ್ನ ಜನ್ಮಸ್ಥಲವಾದ ಗೋಕರ್ಣದಲ್ಲಿಯೇ ಗಣಪತಿಯು ಲಿಂಗವನ್ನು ಸ್ಥಾಪಿಸಿದ್ದರಿಂದ ಮೊದಲು ಗಣಪತಿಯನ್ನು ಪೂಜಿಸಿ ನಂತರ ಆತ್ಮಲಿಂಗವನ್ನು ಪೂಜಿಸಬೇಕೆಂದು ಅಪ್ಪಣೆ ಮಾಡಿ ಆತ್ಮಲಿಂಗವನ್ನು ಭಕ್ತಿಯಿಂದ ಪೂಜಿಸುವ ಭಕ್ತರ ಇಷ್ಟಾರ್ಥಗಳು ಕೈಗೂಡುವವು. ತಾನು ಇಲ್ಲಿಯೇ ವಾಸವಾಗುತ್ತೇನೆಂದು ಹೇಳಿ ಅಂತರ್ಧಾನನಾದನು. ಇದಕ್ಕೆ ಭೂ ಕೈಲಾಸವೆಂಬ ಹೆಸರಾಗಲಿ ಎಂದು ದೇವತೆಗಳು ಹೇಳಿ ಗಣಪತಿಯನ್ನೂ ಆತ್ಮಲಿಂಗವನ್ನೂ ಭಕ್ತಿಯಿಂದ ಪೂಜಿಸಿ ಅಂತರ್ಧಾನರಾದರು.
  • ನಂತರ ರಾವಣನು ಪುನಃ ತಾಯಿಯೊಡನೆ ಗೋಕರ್ಣಕ್ಕೆ ಬಂದು ಗಣಪತಿಯನ್ನೂ ಆತ್ಮಲಿಂಗವನ್ನೂ ಭಕ್ತಿಯಿಂದ ಪೂಜಿಸಿದನು. ಆಗ ಶಿವನು ಪ್ರತ್ಯಕ್ಷನಾಗಿ ನೀನು ದುಃಖಿಸುವ ಕಾರಣವಿಲ್ಲ. ನಿನ್ನಿಂದಲೇ ಲೋಕಕ್ಕೆ ಉಪಕಾರವಾಗಬೇಕಿತ್ತು. ನೀನು ನೆಪ ಮಾತ್ರ. ನಿನ್ನಿಂದ ಲಿಂಗಕ್ಕೆ ಘಾಸಿಯಾದರೂ, ನನ್ನ ಜನ್ಮಸ್ಥಳದಲ್ಲಿಯೇ ನನ್ನ ಮಗನಿಂದ ಸ್ಥಾಪಿಸಲ್ಪಟ್ಟದ್ದರಿಂದ ನನಗೆ ಆನಂದವಾಗಿದೆ. ನಿನಗೆ ಶುಭವಾಗಲಿ ಎಂದು ಹೇಳಿ ಅಂತರ್ಧಾನನಾದನು. ಹೀಗೆ ರಾವಣನಿಂದ ಸ್ಥಾಪಿಸಲ್ಪಟ್ಟ ಶಿವನ ಆತ್ಮಲಿಂಗವು ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತ ಸಿದ್ಧಿಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಈ ಕಥೆಯನ್ನು ಹಾಡಿನ ರೂಪದಲ್ಲಿ ಇಲ್ಲಿನ ಸ್ತ್ರೀಯರು ಹೀಗೆ ಹಾಡುತ್ತಾರೆ.

ಐತಿಹಾಸಿಕವಾಗಿ ಗೋಕರ್ಣ

[ಬದಲಾಯಿಸಿ]
South ndian Epigraphy
ಈ ಕ್ಷೇತ್ರದ ದೇವಾಲಯಗಳು ಕಟ್ಟಲ್ಪತ್ತಿದ್ದು ಪೂಜಾ ವಿನಿಯೋಗಗಳ ವ್ಯವಸ್ಥೆ ಎಂದಿನಿಂದಾಯಿತು ಎಂಬುದರ ಕಾಲನಿರ್ಣಯವು ಸಾದ್ಯಂತವಾಗಿ ದೊರೆಯಲಾರದು. Karnataka Gazetteerr Part 2.pdf

1983 Gazetteer Vol2 Chapter9,Kanara 1904 Gazetteer, Kanara 1883 Gazetteer ವೀಕ್ಷಿಸಿದಾಗ ಬಹು ಮುಖ್ಯವಾದ ಅಂಶಗಳು ತಿಳಿಯುತ್ತವೆ.ಹಾಗೆಯೇ ಗೋಕರ್ಣದಲ್ಲಿಯ ಶಿಲಾಶಾಸನಗಳು, ದೇವಾಲಯಗಳಲ್ಲಿಯ ಬರಹಗಳು, ಮದ್ರಾಸನಲ್ಲಿರುವ ಪುರಾತತ್ವ ಇಲಾಖೆಯ ದಾಖಲೆಗಳು South ndian Epigraphy.pdfಅನೇಕ ಐತಿಹಾಸಿಕ ಸಂಗತಿಗಳನ್ನು ಹೊರಹಾಕುತ್ತವೆ.

  • ಶ್ರೀ ಮಹಾಬಲೇಶ್ವರ ದೇವಾಲಯದ ನಂದೀ ಮಂಟಪದ ಪಶ್ಚಿಮ ದ್ವಾರದ ಮೇಲೆ ``ಪಾರುಪತ್ಯಗಾರ ಹಲಸುನಾಡು ವಿಶ್ವೇಶ್ವರಯ್ಯನ ಮುಖಾಂತರ ಶರ್ವರೀ ಸಂವತ್ಸರದ ಕಾರ್ತಿಕ ಶುದ್ಧ ೧ ರಲ್ಲೂ ರಂಗ ಮಂಟಪದ ಕೆಲಸ ಮುಗಿದಿದೆ``, ಎಂದು ಶಿಲಾಲೇಖವಿದೆ. ಆದರೆ ಇದರಲ್ಲಿ ಶಕೆ ಬರೆದಿಲ್ಲ. ಆದಾಗ್ಯೂ ಇದನ್ನು ಕಟ್ಟಿ ಬಹು ಕಾಲವಾಗಿರಬೇಕೆಂದು ಸ್ಪಷ್ಟವಾಗುತ್ತದೆ. ಇದನ್ನು ನಗರ ಸಂಸ್ಥಾನಿಕರು ಈ ಪಾರುಪತ್ಯಗಾರನ ಮುಖಾಂತರ ಕಟ್ಟಿಸಿದರೆಂಬ ಐತಿಹ್ಯವಿದೆ.
  • ಇತರ ದೇವಾಲಯಗಳನ್ನು ಬೇರೆ ಬೇರೆ ಭಜಕರು ಕಟ್ಟಿಸಿ ಪೂಜಾ ವಿನಿಯೋಗಗಳ ಬಗ್ಗೆ ಉಂಬಳಿ ಹಾಕಿಸಿ ಕೊತ್ತಿರಬೇಕೆಂದು ಕೆಲವು ದಾಖಲೆಗಳಿಂದ ತಿಳಿದು ಬರುತ್ತದೆ. ಈ ಕ್ಷೇತ್ರವು ಈ ಪ್ರಾಂತದ ಉಳಿದ ಸ್ಥಳಗಳಂತೆ ಮೊದಲು ಅಬ್ರಾಹ್ಮಣ್ಯವಾಗಿತ್ತೆಂತು ಇಲ್ಲಿಯ ಬ್ರಾಹ್ಮಣರಲ್ಲಿರುವ ಒಂದು ಶಿಲಾಲೇಖನದ ನಕಲಿನಿಂದ ತಿಳಿದು ಬರುತ್ತದೆ. ಈ ನಕಲು ಸಂಸ್ಕೃತ ಗದ್ಯ ರೂಪದಲ್ಲಿದೆ. ಇದಕ್ಕೂ ಉತ್ತರ ಸಹ್ಯಾದ್ರಿಎಂಬ ಪುರಾಣದ ೪೮ ಮತ್ತು ೮೬ ನೇ ಅಧ್ಯಾಯಗಳ ಹವ್ಯಕರ ಉತ್ಪತ್ತಿ ಎಂಬ ಭಾಗಕ್ಕೂ ಪೂರ್ಣ ಸಾಮ್ಯವಿರುತ್ತದೆ.
  • ವರದಾನದೀ ತೀರದ ಜಯಂತಿ ಎಂಬ ರಾಜಧಾನಿಯಲ್ಲಿ ಮಯೂರವರ್ಮನೆಂಬ ರಾಜನು ಆಳುತ್ತಿದ್ದನು. ಅವನು ಯಾತ್ರಾರ್ಥವಾಗಿ ಗೋಕರ್ಣಕ್ಕೆ ಬಂದಾಗ ಇಲ್ಲಿ ಬೇಡರು ವಾಸವಾಗಿದ್ದು ಅಬ್ರಾಹ್ಮಣ್ಯವಾಗಿರುವುದನ್ನು ಕಂಡು ವ್ಯಸನಪಟ್ಟು ಅಹಿಚ್ಛತ್ರ ದಕ್ಷಿಣಪಾಂಚಾಲಕ್ಕೆ ಹೋಗಿ ದ್ರವ್ಯ ದಿಂದಲೂ ವಿನಯದಿಂದಲೂ ಬ್ರಾಹ್ಮಣರನ್ನು ಸಂತೋಷ ಪಡಿಸಿ ಕರೆತಂದು ಈ ಪ್ರಾಂತದಲ್ಲಿ ಉಂಬಳಿಗಳನ್ನು ಹಾಕಿಕೊಟ್ಟು ಬ್ರಾಹ್ಮಣರನ್ನು ಸಂಸ್ಥಾಪಿಸಿದನು. ಕಾಲ ಕಾಲಕ್ಕೆ ಈ ಕ್ಷೇತ್ರದಲ್ಲಿ ಬ್ರಾಹ್ಮಣರ ವಸತಿಗಾಗಿ ಪೂಜಾ ವಿನಿಯೋಗಗಳು ನದೆಯುತ್ತಿರಬೇಕು.
  • ಆದರೆ ಮುಂದೆ ಮಯೂರವರ್ಮನ ಮರಣಾ ನಂತರ ಕಳ್ಳರ ಬಾಧೆಯಿಂದ ಬ್ರಾಹ್ಮಣರು ಈ ಪ್ರಾಂತವನ್ನೇ ಬಿಟ್ಟು ಸ್ವದೇಶಕ್ಕೆ ಹೋದರು. ಮಯೂರವರ್ಮನ ಮಗನಾದ ತ್ರಿನೇತ್ರ ಕದಂಬನು ಗೋಕರ್ಣ ಯಾತ್ರೆಗೆ ಬಂದಾಗ ಈ ಪ್ರಾಂತದ ರಾಜನಾದ ಚಂಡಸೇನನು ಅವನನ್ನು ಸತ್ಕರಿಸಿ ತನ್ನ ರಾಜ್ಯದಲ್ಲಿ ಬ್ರಾಹ್ಮಣ ವಸತಿಯನ್ನು ಉಂಟು ಮಾಡ ಬೇಕಾಗಿ ಕೇಳಿಕೊಂಡನು.
  • ತ್ರಿನೇತ್ರ ಕದಂಬನು ಬ್ರಾಹ್ಮಣರನ್ನು ಕರೆತಂದು ಸ್ಥಾಪಿಸಿದ್ದಲ್ಲದೇ ತನ್ನ ತಂಗಿಯಾದ ಕನಕಾವತಿಯನ್ನು ಚಂಡಸೇನನ ಮಗಲೋಕಾದಿತ್ಯನಿಗೆ ಕೊಟ್ಟು ಆಪ್ತತ್ವ ಮಾಡಿಕೊಂದನು. ಆದರೆ ಈ ಪ್ರಾಂತದಲ್ಲಿ ಹುಬ್ಬಾಸಿಗನೆಂಬ ಚಾಂಡಾಲನ ಬಾಧೆಯಾಗಲು ಬ್ರಾಹ್ಮಣರಲ್ಲಿ ಕೆಲವರು ತಮ್ಮ ದೇಶಕ್ಕೆ ಹೊರಟು ಹೋದರು. ಇನ್ನು ಕೆಲವರು ಜಾತಿಭ್ರಷ್ಠರಾಗಿ ಚಾಂಡಾಲರಾದರು.
    ಲೋಕಾದಿತ್ಯನು ತನ್ನ ಮಗಳ ಸ್ವಯಂವರದ ನೆಪ ಮಾಡಿ ಹುಬ್ಬಾಸಿಗನನ್ನು ಸೇನೆ ಸಹಿತ ನಾಶ ಮಾಡಿದ ಮತ್ತು ಅಹಿಚ್ಛತ್ರಕ್ಕೆ ಹೋಗಿ ಭಟ್ಟಾಚಾರ್ಯ ಪ್ರಮುಖರಿಂದ ಬ್ರಾಹ್ಮಣರನ್ನು ಸಮಾಧಾನಪಡಿಸಿ ಏಳು ಗೋತ್ರದ ಇಪ್ಪತ್ನಾಲ್ಕು ಬ್ರಾಹ್ಮಣ ಕುಟುಂಬಗಳನ್ನು ತಂದು ಅವರಿಗೆ ಉಂಬಳಿ ಹಾಕಿ ಕೊಟ್ಟು ಈ ಪ್ರಾಂತದಲ್ಲಿ ಇಟ್ಟನು. ಇದರಲ್ಲಿ ನಾಲ್ಕು ಗೋತ್ರದ ಎಂಟು ಕುಟುಂಬಗಳನ್ನು ಗೋಕರ್ಣದಲ್ಲಿಟ್ಟನು ಮತ್ತು ಈ ಬ್ರಾಹ್ಮಣರು ಸ್ವದೇಶಕ್ಕೆ ಹೋಗಬಾರದೆಂದು ಇವರ ವೇಷ ಭಾಷೆಗಳನ್ನು ಬದಲಾಯಿಸಿದನು.
  • ಮುಂದೆ ಈ ಪ್ರಾಂತವು ವಿಜಯನಗರದ ಅರಸರ ವಶಕ್ಕೆ ಹೋದ ಕಾಲದಲ್ಲಿ ಮಂತ್ರಿಗಳಾಗಿದ್ದು ಸನ್ಯಾಸವನ್ನು ತೆಗೆದುಕೊಂಡ ಮಾಧವಾಚಾರ್ಯರು ಶಕೆ ೧೩೧೩ ನೇ ಪ್ರಜಾಪತಿ ಸಂವತ್ಸರದ ಉತ್ತರಾಯಣದ ವಸಂತ ಋತು ವೈಶಾಖ ಮಾಸ ಬಹುಳ ಅಮಾವಾಸ್ಯೆಯ ಸೂರ್ಯಗ್ರಹಣದಲ್ಲಿ ತಾಮ್ರಶಾಸನ ಪೂರ್ವಕವಾಗಿ ಈ ಕ್ಷೇತ್ರದ ಬ್ರಾಹ್ಮಣರಿಗೆ ಈ ಮೇಲಿನ ಪ್ರಾಂತಗಳಿಂದ ವೃತ್ತಿ(ಸರ್ಥ) ವನ್ನು ಕಲ್ಪಿಸಿದರೆಂದು ಆ ಶಾಸನದ ನಕಲಿನಿಂದ ತಿಳಿಯುತ್ತದೆ. ( ಈ ನಕಲಿನಲ್ಲಿ ಹಿಂದಿನ ಸಂಗತಿಗಳನ್ನು ಸ್ವಲ್ಪದಲ್ಲಿ ವಿವರಿಸಿದ್ದಾರೆ.) ಈ ಮಧ್ಯದಲ್ಲಿ ಶ್ರೀ ಮಹಾಬಲೇಶ್ವರ ದೇವಾಲಯ ದ ಅರ್ಚಕರು ಜಂಗಮರಿದ್ದರೆಂದಲೂ ಅವರು ದೇವತ್ವವನ್ನು ಅಪಹರಿಸಿದ್ದಕ್ಕಾಗಿ ನಿರ್ವಂಶರಾದರೆಂದೂ ಒಂದು ದಾಖಲೆಯಿಂದ ಅರ್ಥವಾಗುತ್ತದೆ.
ಈ ಪ್ರಾಂತವು ಮೈಸೂರು ಪಾಳೇಗಾರ ಹೈದರಲಿ(ಬಾಬಹದ್ದರಿ) ವಂಶಕ್ಕೆ ಹೋಗುವ ಮೊದಲು ಕೆಳದಿ(ಇಕ್ಕೇರಿ) ಸಂಸ್ಥಾನಿಕರ ವಶದಲ್ಲಿತ್ತೆಂದೂ ಚೆನ್ನಮ್ಮಾಜಿ ಎಂಬ ರಾಣಿಯೂ, ಸೋಮಶೇಖರನೆಂಬ ನಾಯಕನೂ ಆಳಿದರೆಂದೂ ಇವರು ಲಿಂಗಾಯತ ಮತದವರಿರಬೇಕೆಂತಲೂ ಈ ಅರಸರ ಮೊಹರುಳ್ಳ ಕೆಲ ಸನದುಗಳಿಂದ ತಿಳಿಯುತ್ತದೆ.
  • ಇಲ್ಲಿಯ ಬ್ರಾಹ್ಮಣರು ಈ ಸಂಸ್ಥಾನಿಕರಲ್ಲಿ ಹೋಗಿ ಬೇರೆ ಬೇರೆ ಪೂಜಾ ವಿನಿಯೋಗಗಳನ್ನು ನೇಮಿಸಿಕೊಂಡು ಜಮೀನು ಊಂಬಳಿ ಹಕಿಸಿಕೊಂಡು ಬಂದರೆಂದು ಈ ಸನದುಗಳಿಂದಲೂ ಶ್ರೀ ಮಹಾಬಲೇಶ್ವರ ದೇವಸ್ಠಾನದ ಹಿಂದಿನ ಜಮಾಖರ್ಚಿನಿಂದಲೂ ಸಿದ್ಧವಾಗುತ್ತದೆ. ಈ ಪೂಜಾದಿ ವಿನಿಯೋಗಗಳಿಗೆ ಉಪಾದಿಗಳೆಂದು ಹೆಸರು. ಇದನ್ನು ಬೇರೆ ಬೇರೆಯವರು ಬೇರೆ ಬೇರೆಯವರ ಕಾಲಕ್ಕೆ ಪಡೆದುಕೊಂದರೆಂಬುದೂ ಸ್ಪಷ್ಟವಿರುತ್ತದೆ.

ಶ್ರೀ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಹಿಂದಿನ ಧರ್ಮದರ್ಶಿಗಳು

[ಬದಲಾಯಿಸಿ]

Shesh Venkataraman Jathar And Vighneshwara Damodar DixitOn 27July 1984 ಈ ಕೇಸ್ ನಲ್ಲಿ ನಮೂದಿಸಿದ ಪ್ರಕಾರ ಕೆಳಕಂಡ ಇಸವಿಗಳಲ್ಲಿ ದೇವಾಲಯದ ಟ್ರಸ್ಟ್ ಮೆಂಬರರು ಇದ್ದರೆಂದು ತಿಳಿಯುತ್ತದೆ.

ಇಸವಿ / ಟ್ರಸ್ಟ್ ಮೆಂಬರ ಸಂಖ್ಯೆ

1842 / 11

1865 / 8

1890-1920 / 11-14

1937-1938 / 8

1950-1951 / 3

1984 / 2


7/8/1910 ನೇ ಇಸ್ವಿಯಲ್ಲಿ ಟೆಂಪಲ್ ಕಮಿಟಿ ನೇಮಿಸಿದ ಮೊಕ್ತೇಸರರು

1) Annappa Kuppa Bhat Hire

2) Subbadi bin Venkat Adi

3) Ganapati Devaru Bhat Gopi

4) Dattatraya Mahaabaleshwara Upaadhyaya

5) Ganapa Rama Dixit Marigoli

6) Krishna Narayana Bhat Prasad

7) Ananta Vinaayaka Gokarna

8) Mangesha Ganapayya Chikramane

9) Upendra Narayana Bhat

10) Yeshavanta Sheshagiri Shanabhaga

11) Nagappa Vishweshwara Karanta

12) Ganesha Subba Bhat Gayatri

13) Dattatraya Mangarsayya

ಕೆಳಕಂಡ ದಾವಾ ಆರ್ಡರ್ ಗಳಲ್ಲಿ ಕೆಳಗಿನ ಸದಸ್ಯರುಗಳನ್ನು ಆಯಾ ಇಸ್ವಿಗಳಲ್ಲಿನ ಟ್ರಸ್ಟಿಗಳೆಂದು ಉಲ್ಲೇಖಿಸಲಾಗಿದೆ.

1] CIVIL SUIT NO-55/1919

1) Ganapati Devaru Bhat Gopi

2) Ananta Vinaayaka Gokarna

3) Annappa Kuppa Bhat Hire

4) Subbadi Venkatadi

5) Krishna Narayana Bhat Prasads

6) Nagappa Vishweshwara Karanta

7) Dattatraya Mangarsayya

8) Dattatraya Mahabaleshwara Upadhyaya

9) Mangesha Ganapayya Chikramane

10) Upendra Narayana Bhat

11) Ganesha Subba Bhat Gayatri

12) Dattatraya Pandurangappa

13) Ananta Ramarao

2] CIVIL SUIT NO-233/1938

1) Shankar Rama Bhat Gopi (Kota)

2) Krishna Narayana Bhat Prasad (Havik)

3) Mahabaleshwara Annappa Bhat Hire (Havik)

4) Damodara Dattatraya Upadhya (Havik)

5) Martu Narayana Bhatn (Gouda Sarasvata)

    3] CIVIL SUIT NO-55/1947

1) Mahabaleshwara Annappa Bhat Hire (Havik)

2) Krishna Narayana Bhat Prasad (Havik)

3) Damodara Dattatraya Upadhya (Havik)

ಪ್ರಾನ್ಕಿಸ್ ಬುಚನನ್ ಎಂಬ ವಿದೇಶೀ ಯಾತ್ರಿಗ ಗೋಕರ್ಣದ ಕುರಿತಾಗಿನ ಮಾಹಿತಿಯನ್ನು ಹೀಗೆ ಹೇಳಿದ್ದಾನೆ

ಶಂಕರಾಚಾರ್ಯರ ಆಗಮನ

[ಬದಲಾಯಿಸಿ]

ಆದಿ ಶಂಕರರು ಗೋಕರ್ಣಕ್ಕೆ ಬಂದು, ಗೋಕರ್ಣದ ಸಮೀಪದ ಅಶೋಕೆಯಲ್ಲಿ ಅದ್ಯ ರಘೋತ್ತಮ ಮಠವನ್ನು ಸ್ಥಾಪಿಸದರು ಮತ್ತು ಗೋಕರ್ಣದ ಪೂಜೆಯ ಜವಾಬ್ದಾರಿಯನ್ನು ಮಠಕ್ಕೆ ವಹಿಸಿದ್ದರು.

GOUREESHA KAYKINI

ಶಂಕರಾಚಾರ್ಯರ ಆಗಮನದ ಕುರಿತು ಉಲ್ಲೇಖಗಳು ಮೈಸೂರು ಓರಿಯಂಟಲ್ ಲೈಬ್ರರಿ ಹಾಗೂ ಮದ್ರಾಸ್ ಕಾಗದ ಪತ್ರಾಗಾರದಲ್ಲಿರುವ ಕೆಲ ಹಸ್ತಪ್ರತಿಗಳಲ್ಲಿ ಕಾಣ ಸಿಗುತ್ತದೆ. ಅದರ ಪ್ರತಿ ಹೀಗಿದೆ.

GGH

ಅಥಾಪರೇಹನ್ಯುಷಸಿ ಪ್ರತೀತೋ ನಿತ್ಯಕ್ರಿಯಾಮಂ ಶಿಷ್ಯಯುತೋ ನಿವರ್ತ್ಯ | ಕರ್ನಾಟಕಾಧೀಶ ಸುಧನ್ವ ಯುಕ್ತೋ ಗೋಕರ್ಣ ಯಾತ್ರಾಂ ಯತಿರಾಟ್ ಚಿಕೀರ್ಷು ಃ || ತೀರ್ತ್ವಾ ತತೋ ಸಾವಘನಾಶಿನೀಂ ನದೀಂ ಗತ್ವಾ ಮಹಾಕಾಲ್ಯುಪಕಂಠಮಾದೃತಃ | ಸಮೀಕ್ಷ್ಯ ದೇವೀಂ ಸ ಕಲಾವನಕ್ಷಮಾ

ಗೋಕರ್ಣದ ತಾಮ್ರಶಾಸನ

[ಬದಲಾಯಿಸಿ]
॥श्रीः॥
नमस्तुंग शिरस्तुंग चन्द्रचामर चारवे ।
त्रैलोक्यनगरारम्भ मूलस्तम्भाय शम्भवे ॥
स्वस्ति श्रीमज्जयाभ्युदय नृपशालीवाहनशकवर्ष १३१३ प्रवर्तमान प्रजापति नाम संवत्सरे उत्तरायणे वसन्त ऋतौ वैशाखमासे कृष्णेपक्षे अमायां सौम्य वासरे सूर्योपरागे भार्गव श्वामित्रां‍ऽगिरस :वासिष्ठेभ्यो महद्भ्यो ब्राह्मणेभ्यो श्रीमन्माधवाचार्यैर्दत्त ताम्रलेखन पत्रवर्णन पत्रिका इयम् ॥

(कीदृक्?)

इतः पूर्वं श्री मयूरवर्माख्यो राजा यात्रालुः श्री मद्गोकर्ण क्षेत्रमगात् । तत्र तावदाभीराभिः व्याप्तं महाबलं दृष्ट्वा अब्राह्मण्यं मन्वानो व्याकुल चित्तः सन् स्वविषयं प्रत्याजगाम । तदा कतिपयाहस्सु गतेषु ब्राह्मण्याधिष्ठितं पाञ्चालदेशमभिययौ । तत्र साग्निमतो विप्रानाहूय बहुशो द्रव्यवितरेण सन्तोष्य श्रीगोकर्णक्षेत्र निवासाय स्थितये च पर्यालोच्य तैः साकमागत्य तत्र स्थापयां चक्रे । ते वै शत शृंगोपत्यकासु निवसन्तः श्री महाबलेश्वरार्चनं बहुकालं निन्युः । ततश्चोरभीताः पलायनपराः सन्तो ब्रह्मदेशमेवाऽभिसेदुः । पुनस्तदब्राह्मण्यमासीत् । स एव चक्रवर्ती निशम्य छद्मना नैपथ्यान्तरं दधानो झटिति तमेव दक्षिण पांचालदेशमधिगम्य भूसुराणां वास्तुनि पृथक् पृथक् सुवर्णमेकैकं निधाय हायनं निन्ये । किमेतदिति सन्दिग्धास्तमन्वेषमाणाः स्युः । द्वित्रिदिने दृक्पथम् गतो मयूरवर्माऽपि ब्रह्मनिष्ठान् वशीकृत्य चतुर्विंशति संख्याकान् यजनशीलान् समादाय तेष्वष्टौ भार्गव प्रभृति चतुष्टय गोत्र प्रवरान् संगृह्य परिशिष्ट षोडश संस्कार युतेभ्यः महतः अग्रहार प्रवृत्ति प्रदानेन दक्षिण प्रान्तदेशे स्थापयित्वा पुनः पूर्ववत् गोकर्णे स्थापयांचक्रे । मुहुर्मुहुः क्षेत्रं हित्वा स्वदेशगतान् तान् देशीय वेष भाषाभ्यां च विनिमय्य तेभ्यो वृत्तिस्वाम्यं अदात् । वृत्तिस्तु- श्रीताम्रगौरीसमेतश्रीमन्महाबलेश्वरस्य त्रिषवणेषु महापूजोपचारं अग्रिम मान्यत्वं च भार्गव गोत्रोद्भवाय सर्वतन्त्रस्वतन्त्रत्वं,नियन्तृत्वं च, विश्वामित्र गोत्रोद्भवाय आचार्यत्वं दण्डनेतृत्वं च, अंगीरसगोत्रोद्भवाय समय निर्णेतृत्वं, वासिष्ठगोत्रोद्भवाय श्री सन्निधौ क्षेत्रवाशिनां चातुर्वर्ण्यानां नियोज्य योजकत्वं युष्मानेवाभिसरतु, इत्याज्ञापयित्वाऽगात् । अथ कस्मिंश्चित् समये हुब्बाइकाह्वयेन केनचित्सामन्तः चाण्डालेन बीबत्सवो भूत्वा भ्रष्टयाजनपरा निर्गत्य श्रीभट्टभास्कर पण्डित धुरीणं प्राप्य ते तु स्वोदन्तं व्यजिज्ञपुः- (तत्कथा वर्ण्यते)-
नर्मदा दक्षिणस्यां कर्नाटकदेशे तुंगभद्रानदीतीरे पंपानामसरः क्षेत्रं चास्ति अदावस्य विजयानगर इति । तत्र वैदिकमार्गप्रवर्तको बुक्क भूपालः सार्वभौमो बोभवीतिस्म । तत्कुलगुरुः मन्त्री राजकार्य दुरन्धरः माधवाचार्यः यः शास्त्रे लौकिके व्यवहारे च तस्य महती प्रतिष्ठाऽऽसीत् । तस्य जन्म, शा.शके १३००-१३१३? सूक्तकाले साक्षतोदक पूर्वकं मयूर वर्मप्रभृति लोकादित्य शास्त्रानुसारेणैव भुक्क भूपति समक्षं -वृत्तिं ताम्रशासनं च दत्तवान् । स्वयम् श्रीमत्सकल साम्राज्य दुरन्धरेण बुक्कभूपतिसूनोः हरिहरस्य मन्त्रीभूत्वा, अन्ते ऐहिक सुखनिरपेक्षेण माधवाचार्येण अपरस्मिन् वयसि चतुर्थाश्रमः स्वीकृतः । तस्मिन्नाश्रमेऽपि श्रीमद्भगवतः शंकराचार्यस्य शारदापीठे शृंगबेरपुरे तत्पट्टाधिकारमुररीकृत्य शंकराचार्यात् षड्विंशतितमो विद्यारण्यभारतिरासीत् । श्रीमच्छंकराचार्य भगवत्पादपूज्य शंकरानन्दभारति स्थिति समये भट्टभास्कर संज्ञको महापण्डितवर्यः शाक्तोऽभूत् । अथ तान् मिलित्वा श्री भास्करपण्डितवर्योऽपि श्री गॊकर्णमण्डलवासिनां-इक्केरि, बेळगि, सिद्धापुर, (बुधापुर) सोदापुर, मल्लापुरान्तवर्तिनां तद्राजाधिराजप्रभृतिभ्यः सामन्तेभ्यो दापितताम्रसाधनेन संगृहीत श्रीमन्महाबलेश्वर प्रसाद प्रसन्नानां प्रतिवर्षं वर्तमान वर्तिष्यमाण वर्षाशन भूस्वास्थ्यं सर्वकर्मसु बहुमान्यं च दत्तवान् । अद्य प्रभृति अविच्छिन्न सन्तति पारम्पर्य धर्मनिष्ठाः श्री गोकर्णक्षेत्रे आचन्द्रार्कं निवसन्तु । अलं पल्लवितैः अत्र साक्षिणः-
आदित्य चन्द्रावनिलोऽनलश्च द्यौर्भूमिरापो हृदयं यमश्च ।
अहश्च रात्रिश्च उभेच सन्ध्ये धर्मोऽपि जानाति नरस्य वृत्तम् ॥
॥ श्री रस्तु ॥
इदं- दत्तात्रेयेश्वरस्य पूर्वस्यां द्वादशधनुष्प्रमाणे शिलालेखनमस्ति ॥ शा.शके-१७९५ लब्धमेतत् ॥
॥ शुभमस्तु ॥

॥शिलालेखन पत्रिका ॥

Haledu_5.pdf

Nodi

ಗೋಕರ್ಣದ ತೀರ್ಥಗಳು

[ಬದಲಾಯಿಸಿ]

ಸ್ಕಂದ ಪುರಾಣಾಂತರ್ಗತ ಗೋಕರ್ಣ ಖಂಡ ಹೇಳುವಂತೆ ಗೋಕರ್ಣದಲ್ಲಿ ಅನೇಕ ತೀರ್ಥಗಳು ಅನೇಕ ಲಿಂಗಗಳೂ ಪ್ರಸಿದ್ಧವಾಗಿವೆ. ಅವುಗಳಲ್ಲಿ ೩೩ ಪ್ರದಾನ ಲಿಂಗಗಳು, ೩೩ ತೀರ್ಥಗಳು ಪ್ರಧಾನವಾಗಿವೆ. ಅವುಗಳಲ್ಲಿ ಕೆಲವು ಹೀಗಿವೆ=

ಗೋಕರ್ಣ ತೀರ್ಥ

[ಬದಲಾಯಿಸಿ]
  • ಗೋಕರ್ಣ ತೀರ್ಥ ಗರ್ಭ ಗುಡಿಯಲ್ಲಿದೆ

ಗೋಕರ್ಣದ ವಿದ್ವಾಂಸರುಗಳು

[ಬದಲಾಯಿಸಿ]
  • ೧] ದೈವರಾತರು, ೨] ಭಡ್ತಿ ದೇವರು ಶಾಸ್ಥ್ರಿಗಳು, ೩] ಭಡ್ತಿ ಗಣಪತಿ ಮಾಸ್ತರರು, ೪] ಭಡ್ತಿ ಶಿವರಾಮ ಶಾಸ್ತ್ರಿಗಳು, ೫] ಚಿತ್ರಿಗೆ ಗಣಪತಿ ಭಟ್, ೬] ಚಿತ್ರಿಗೆ ಗಜಾನನ ಭಟ್, ೭] ರಾಮಭಟ್ ಪನ್ನಿ, ೮] ಕೃಷ್ಣಭಟ್ ಪನ್ನಿ, ೯] ಪರಮೇಶ್ವರ ಭಟ್ ಬೈಲ್ ಕೇರಿ, ೧೦]ರಾಮಚಂದ್ರ ಭಟ್ ಕೊಡ್ಲೆಕೆರೆ, ೧೧] ಗಣಪತಿ ರಾಮಚಂದ್ರ ಭಟ್ ಹಿರೇ, ೧೨] ಕೃಷ್ಣ ರಾಮಚಂದ್ರ ಭಟ್ ಹಿರೇ, ೧೩]ಸುಬ್ರಾಯ ಭಟ್ ಕೊಡ್ಲೆಕೆರೆ, ೧೪]ಮಾರಿಗೋಳಿ ಪುಟ್ಟ ರಾಣಿಕರು, ೧೫]ಚಿಂತಾಮಣಿ ಗುಣಿ ಶಾಸ್ತ್ರಿಗಳು, ೧೬]ಉಮಾಶಿವ ಉಪಾಧ್ಯಾಯ, ೧೭]ಶಂಕರ ಭಟ್ ಷದಕ್ಷರಿ, ೧೮]ಸೀತಾರಾಮ ಭಟ್ ಗಾಯತ್ರಿ, ೧೯]ರಾಮಕೃಷ್ಣ ಭಟ್ ಗಾಯತ್ರಿ, ೨೦]ದಾಮೋದರ ದೀಕ್ಷಿತರು, ೨೧] ಅಗ್ನಿಹೋತ್ರಿಗಳು, ೨೨]ವಿಘ್ನೇಶ್ವರ ದಾಮೋದರ ದೀಕ್ಷಿತರು, ೨೩] ರಾಮಚಂದ್ರ ಶಾಸ್ತ್ರಿ ಹೊಸ್ಮನೆ, ೨೪] ವಿಘ್ನೇಶ್ವರ ಶಾಸ್ತ್ರಿ ಹೊಸ್ಮನೆ, ೨೫] ಯಜ್ಞ ನಾರಾಯಣ ಸಭಾಹಿತರು, ೨೬]ಸೀತಾರಾಮ ಭಟ್ ಶಂಕರಲಿಂಗ, ೨೭] ವಿಶ್ವನಾಥ ಉಪಾಧ್ಯಾಯರು, ೨೮] ರಾಮ ಉಪಾಧ್ಯಾಯರು, ೨೯] ಸೋನಿಭಟ್ ಜೋಗಳೇಕರ, ೩೦] ಕೃಷ್ಣಭಟ್ ಮಯ್ಯರ್, ೩೧] ಹರಿ ಭಟ್ ಮಯ್ಯರ್ ೩೨] ಸಾಂಬಾ ಭಟ್ ಗಾಯತ್ರೀ, ೩೩] ಅಣ್ಣ ಪಂಡಿತರು, ೩೪] ವೆಂಕಟರಮಣ ಪಂಡಿತ್, ೩೫] ರಾಮ ಪಂಡಿತ್, ೩೬]ಮಹಾಬಲೇಶ್ವರ ಜೋಶಿ (ವೈದಿಕ ಜೋಶಿ), ೩೭]ದಿನಕರ ಭಟ್ ಜೋಗಳೇಕರ ಶ್ರೌತ.೩೮] ಅನಂತ ಮಹಬಲೆಶ್ವರ ಉಪಾಧ್ಯಾಯ.

ಗೋಕರ್ಣದ ಬೀಚ್

[ಬದಲಾಯಿಸಿ]
  • ಧಾರ್ಮಿಕತೆ, ಆಧುನೀಕತೆ, ಸೌಂದರ್ಯ, ಮೂರೂ ಕೂಡಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಅಪಾರ ಪ್ರಮಾಣದ ವಿದೇಶಿಗರನ್ನು ಸೆಳೆಯುತ್ತಿರುವ ಕ್ಷೇತ್ರ ಎನ್ನಬಹುದು. ಇಲ್ಲಿಗೆ ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್, ಜರ್ಮನಿ, ಇಸ್ರೇಲ್ ಮತ್ತು ರಷ್ಯಾ ಪ್ರಜೆಗಳು ಬರುವುದು ಮಾಮೂಲು.
  • ಗೋಕರ್ಣದ ಬೀಚ್‌ಗಳಿಗೆ ವಿದೇಶಿಗರು ಬರುವುದು ಮೋಜು, ಮಸ್ತಿ ಮಾಡಲು, ಮಾದಕ ದ್ರವ್ಯ ಸೇವಿಸಲು ಎಂಬ ಕಲ್ಪನೆ ಬಹುತೇಕರಲ್ಲಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಅವರು ಮಾಡುತ್ತಿರುವ ಕೆಲಸಗಳು ಕುತೂಹಲ ಮೂಡಿಸುತ್ತವೆ. ಇಲ್ಲಿಯ ಜನರೊಂದಿಗೆ ಬೆರೆತು ಸ್ಥಳೀಯ ಉಡುಗೆ ತೊಡುಗೆ ರೂಢಿಸಿಕೊಂಡ ವಿದೇಶಿಗರ ದೊಡ್ಡ ದಂಡೇ ಇಲ್ಲಿದೆ. ರಾಮತೀರ್ಥದ ನೀರಿನಲ್ಲಿ ಸ್ನಾನ ಮಾಡಿ ಯೋಗ, ಧ್ಯಾನ ಮಾಡುವುದನ್ನು ಹೆಚ್ಚಿನ ವಿದೇಶಿಗರು ನಿತ್ಯದ ಕಾಯಕವಾಗಿಸಿಕೊಂಡಿದ್ದಾರೆ.

ಶಂಕರ ಪ್ರಸಾದ ಫೌಂಡೇಶನ್

[ಬದಲಾಯಿಸಿ]
Om beach rocks at Gokarna
  • ಇವೆಲ್ಲಕ್ಕೂ ಕಲಶಪ್ರಾಯವಿಟ್ಟಂತೆ ವಿದೇಶಿಗರಿಗಾಗಿಯೇ ಇಲ್ಲೊಂದು ಸಂಸ್ಥೆ ಹುಟ್ಟಿಕೊಂಡಿದೆ. ಸಮೀಪದ ಬಂಕಿಕೊಡ್ಲದಲ್ಲಿ ವಿದೇಶಿ ಸ್ವಾಮಿ ಯೋಗರತ್ನಾರವರು ‘ಶಂಕರ ಪ್ರಸಾದ ಫೌಂಡೇಶನ್’ ಎಂಬ ಸಂಸ್ಥೆ ಹುಟ್ಟುಹಾಕಿದ್ದಾರೆ. ಈ ಸಂಸ್ಥೆ, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬೀಚ್ ಸ್ವಚ್ಛತಾ ಅಭಿಯಾನ, ಐತಿಹಾಸಿಕ ಕೆರೆ, ತೀರ್ಥಗಳ ಅಭಿವೃದ್ಧಿ ಮತ್ತು ರಕ್ಷಣೆ ಕಾರ್ಯ, ಶ್ರಮದಾನದಂತಹ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದೆ. ವಿದೇಶಿಗರಿಗಾಗಿ ಯೋಗ, ಧ್ಯಾನ ಶಿಬಿರವನ್ನು ನಡೆಸುತ್ತಿದೆ. ಸ್ಥಳೀಯ ಆಡಳಿತ ಕೈಗೊಳ್ಳದ ಸ್ವಚ್ಛತೆಯನ್ನು ಗೋಕರ್ಣಕ್ಕೆ ಬರುವ ವಿದೇಶಿಯರು ಮಾಡುತ್ತಿರುವುದು ಸೋಜಿಗ.

ಜಾನಪದ ಜೀವನದೊಡನೆ ಸಹಯೋಗ

[ಬದಲಾಯಿಸಿ]
  • ದೇಶ ಸುತ್ತುವ ಸಲುವಾಗಿ ಬರುವ ಕೆಲವು ವಿದೇಶಿ ಪ್ರವಾಸಿಗರು ಹಾಲಕ್ಕಿಗಳೊಂದಿಗೆ ಬೆರೆತು ದವಸ ಧಾನ್ಯ ಬೆಳೆಯುವ, ತರಕಾರಿಗೆ ನೀರು ಹಾಕುವ, ಕೊಯ್ಯುವ ಹಾಗೂ ಭತ್ತ ಬೇರ್ಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಲಕ್ಕಿಗರ ಸಾಂಪ್ರದಾಯಿಕ ಅಡುಗೆ, ಉಡುಗೆ ತೊಡುಗೆಗಳಿಗೆ ಮಾರು ಹೋಗಿರುವ ಹಲವರು ಅದನ್ನೇ ಅನುಸರಿಸುತ್ತಿದ್ದಾರೆ. ಗೋಕರ್ಣ ಸಮೀಪದ ಭಾವಿಕೊಡ್ಲದ ರಾಮಗೌಡ ಎಂಬುವವರ ಮನೆಯಲ್ಲಿ ನೆಲೆಸಿದ್ದ ಸ್ಪೇನ್ ದೇಶದ ಕಾರ್ಲ್ ರಿಚಾರ್ಡೋ ಹಾಗೂ ಇಟಲಿಯ ರಿಜ್ವಾನ್ ಫೇಸ್, ಭತ್ತದ ಬಣವೆಯಿಂದ ಹುಲ್ಲು ಕಟ್ಟನ್ನು ಹಲಗೆ ಮೇಲೆ ಬಡಿದು ಭತ್ತ ಬೇರ್ಪಡಿಸುವುದನ್ನು ಬಹಳ ಆಸ್ಥೆಯಿಂದ ಕಲಿತಿದ್ದಾರೆ.

ಜರ್ಮನಿಯ ಮಹಿಳೆ ಡೆನಿಸ್ ದಾಸ್

[ಬದಲಾಯಿಸಿ]
  • ಪ್ರತಿವರ್ಷ ಗೋಕರ್ಣಕ್ಕೆ ಬರುವ ಜರ್ಮನಿಯ ಡೆನಿಸ್ ದಾಸ್ ಎಂಬ ಮಹಿಳೆ ಕೆಲವು ವರ್ಷಗಳಿಂದ ಬೀಡಾಡಿ ನಾಯಿಗಳು ಹಾಗೂ ಸಾಕು ನಾಯಿಗಳ ನಿಯಂತ್ರಿಸಲು ನೂರಾರು ನಾಯಿಗಳ ಸಂತಾನಹರಣ ಚಿಕಿತ್ಸೆಯನ್ನು ಉಚಿತವಾಗಿ ಮಾಡಿದ್ದಾರೆ. ಸ್ವಂತ ಖರ್ಚಿನಿಂದಲೇ ಗೋವಾಕ್ಕೆ ನಾಯಿಗಳನ್ನು ತೆಗೆದುಕೊಂಡು ಹೋಗಿ ಚಿಕಿತ್ಸೆ ನಡೆಸಿ ಪುನಃ ಗೋಕರ್ಣಕ್ಕೆ ತಂದುಬಿಡುತ್ತಿದ್ದಾರೆ!

ಶಿವ ಮೂವ್ಸ್ ಆನ್ –ಇನ್ ಗೋಕರ್ಣ

[ಬದಲಾಯಿಸಿ]
  • 1986ರಿಂದ ಪ್ರತಿ ವರ್ಷ ಗೋಕರ್ಣಕ್ಕೆ ಬರುತ್ತಿರುವ ಸ್ವೀಡನ್‌ನ ಹ್ಯಾರಿ ಪೆರೊನಿಯಸ್ ಎಂಬ ಪ್ರವಾಸಿಗ ಸ್ಥಳೀಯರ ಜೀವನಶೈಲಿ, ಉಡುಗೆ ತೊಡುಗೆ, ಆಚಾರ ವಿಚಾರಗಳಿಗೆ ಮನಸೋತು, ಗೋಕರ್ಣದ ವೈದಿಕ ಧರ್ಮ ಮತ್ತು ಹಾಲಕ್ಕಿ ಒಕ್ಕಲಿಗರ ಜೀವನ ಹಾಗೂ ಗೋಕರ್ಣದ ಬಗ್ಗೆ ಸಂಪೂರ್ಣವಾಗಿ ಅಭ್ಯಸಿಸಿದ್ದಾರೆ. ಈ ಅಧ್ಯಯನವನ್ನು ‘ಶಿವ ಮೂವ್ಸ್ ಆನ್ –ಇನ್ ಗೋಕರ್ಣ’ ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ. 1986ರಿಂದ ತೆಗೆದ ಛಾಯಾಚಿತ್ರಗಳನ್ನು ಅದರಲ್ಲಿ ದಾಖಲಿಸಿದ್ದು, ಗೋಕರ್ಣ ಹೇಗೆ ಬದಲಾಗುತ್ತಿದೆ ಎಂಬುದರ ಕುರಿತು ವಿವರಿಸಿದ್ದಾರೆ.
  • ಇಲ್ಲಿಯ ಕುಡ್ಲೆ ಕಡಲ ತೀರದ ಪಾದಚಾರಿ ಮಾರ್ಗಗಗಳಲ್ಲಿ ವಿದೇಶಿಯರೇ ಚಿಕ್ಕಚಿಕ್ಕ ಮಳಿಗೆ ಇಟ್ಟುಕೊಂಡಿದ್ದಾರೆ. ತೆಂಗಿನ ಕರಟದಿಂದ ಮಾಡಿದ ಕರಕುಶಲ ಸಾಮಗ್ರಿಗಳು, ಕಪ್ಪೆಚಿಪ್ಪನಿಂದ ತಯಾರಾದ ವಸ್ತುಗಳು, ವಿವಿಧ ಮಣಿಗಳ ಆಭರಣ, ವಿದೇಶಿ ತಿಂಡಿ ತಿನಿಸುಗಳು, ವಿವಿಧ ಸಂಗೀತ ವಾದನಗಳನ್ನು ಅವರು ಮಾರಾಟ ಮಾಡುತ್ತಿದ್ದಾರೆ. ಕೆಲವೊಮ್ಮೆ ಇಲ್ಲಿಯೇ ನೃತ್ಯ, ಸಂಗೀತ ಪ್ರದರ್ಶನವೂ ನಡೆಯುತ್ತದೆ. ಅನೇಕ ಸಲ ಯೋಗ ಪ್ರದರ್ಶನ, ಸರ್ಕಸ್‌ಗಳನ್ನೂ ಮಾಡುತ್ತಾರೆ.

ಸೂರ್ಯನಿಗೆ ಅರ್ಘ್ಯ- ಯೋಗ

[ಬದಲಾಯಿಸಿ]
  • ಸೂರ್ಯೋದಯವಾದ ಮೇಲೆ ಸಮುದ್ರದಲ್ಲಿ ಸ್ನಾನ ಮಾಡಿ, ಸೂರ್ಯನಿಗೆ ಅರ್ಘ್ಯ ಪ್ರಧಾನ ಮಾಡಿ ಯೋಗ, ಧ್ಯಾನ ಪೂರ್ತಿಗೊಳಿಸಿದ ನಂತರವೇ ತಮ್ಮ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು. ತಾವು ಕಲಿತ ಯೋಗ, ಧ್ಯಾನವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಇತರರಿಗೆ ಧಾರೆ ಎರೆಯುತ್ತಿದ್ದಾರೆ. ಗೋಕರ್ಣದ ಧಾರ್ಮಿಕತೆ, ಸಂಸ್ಕೃತಿಯನ್ನು ವಿದೇಶದಲ್ಲೂ ಪಸರಿಸಲು ಪ್ರಯತ್ನಿಸುತ್ತಿದ್ದಾರೆ.[]

ಚಿತ್ರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಕಡಲ ತಡಿಯಲಿ ವಿದೇಶಿಗರ ಕಾಯಕ;ರವಿ ಸೂರಿ;21 Mar, 2017". Archived from the original on 2017-03-27. Retrieved 2017-03-21.


"https://kn.wikipedia.org/w/index.php?title=ಗೋಕರ್ಣ&oldid=1228859" ಇಂದ ಪಡೆಯಲ್ಪಟ್ಟಿದೆ