ವಿಷಯಕ್ಕೆ ಹೋಗು

ಗುರುವಾಯೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಡ್ಡಹೆಸರು - ದಕ್ಷಿಣದ ದ್ವಾರಕೆ
ಗುರುವಾಯೂರು
ഗുരുവായൂർ
ಗುರುವಾಯುಪುರಮ್, ಗುರುಪಾವನಪುರಮ್
Nickname: 
Dwarka of the South
ದೇಶಭಾರತ
ರಾಜ್ಯಕೇರಳ
ಜಿಲ್ಲೆತ್ರಿಶೂರ್
Elevation
೨.೮೩ m (೯.೨೮ ft)
ಭಾಷೆ
 • ಅಧಿಕೃತಮಲಯಾಳಮ್, ಇಂಗ್ಲೀಷ್
Time zoneUTC+5:30 (IST)
ಪಿನ್
680101
ದೂರವಾಣಿ ಕೋಡ್91 (0)487
Vehicle registrationKL-46
ಹವಾಮಾನAm/Aw (Köppen)
ಸರಾಸರಿ ಬೇಸಗೆ ಉಷ್ಣತೆ35 °C (95 °F)
ಸರಾಸರಿ ಚಳಿಗಾಲದ ಉಷ್ಣತೆ20 °C (68 °F)

ಗುರುವಾಯೂರು, ಗುರುಪಾವನಪುರಿ ಎಂದೂ ಪರಿಚಿತವಾಗಿದೆ, ಭಾರತಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಒಂದು ಪುರಸಭಾ ಪಟ್ಟಣ. ಇದು, ದೈನಂದಿನ ಭಕ್ತಾದಿಗಳ ಸಂಖ್ಯೆಯ ದೃಷ್ಟಿಯಿಂದ, ಭಾರತದ ನಾಲ್ಕನೆ ಅತಿ ದೊಡ್ಡ ದೇವಸ್ಥಾನವೆನಿಸಿರುವ ಗುರುವಾಯೂರು ಶ್ರೀ ಕೃಷ್ಣ ದೇವಾಲಯದ ನೆಲೆಯಾಗಿದೆ. ಗುರುವಾಯೂರು, ದಂತಕಥೆಗಳ ಪ್ರಕಾರ, ಗುರುವಾಯೂರು ದೇವಸ್ಥಾನದ ಮೂರ್ತಿಯಷ್ಟು ಅಂದರೆ, ೫೦೦೦ ವರ್ಷಗಳಷ್ಟು ಹಳೆಯದಿರಬಹುದು.

ಐತಿಹ್ಯ[ಬದಲಾಯಿಸಿ]

8ನೆಯ ಶತಮಾನದವರೆಗೆ ಇದನ್ನು ಕುರುವಾಯೂರು ಎನ್ನಲಾಗಿತ್ತು. ಮೇಲ ಪೂಂತೂರ್ ಸಂತ ಇದನ್ನು ಗುರುವಾಯೂರು ಎಂದು ಕರೆದ. ಇಲ್ಲಿ ಗುರುವಾಯೂರಪ್ಪನ ದೇವಸ್ಥಾನವಿದೆ. ಇಲ್ಲಿಯ ವಿಷ್ಣು ವಿಗ್ರಹ ಶಂಖ, ಚಕ್ರ ಗದಾಪದ್ಮಧರನಾಗಿರುವುದರಿಂದ ಇದನ್ನು ಪೂರ್ಣಾವತಾರ ವಿಗ್ರಹವೆಂದು ಕರೆಯುತ್ತಾರೆ. ಇಂಥ ವಿಗ್ರಹಗಳು ಈಗ ಇತರ ಕಡೆಗಳಲ್ಲೂ ತುಂಬ ಸಾಮಾನ್ಯವಾಗಿವೆ. ಈ ವಿಗ್ರಹ ಸ್ಫಟಿಕ ಶಿಲೆಯಲ್ಲಿ ರಚಿತವಾಗಿರುವದರಿಂದ ಇದಕ್ಕೆ ಒಂದು ವೈಶಿಷ್ಟ್ಯ ಬಂದಿದೆ. ಈ ವಿಗ್ರಹವನ್ನು ಮಹಾವಿಷ್ಣುವಿನಿಂದ ಬ್ರಹ್ಮ, ಸುತಪ, ಕಶ್ಯಪ, ವಾಸುದೇವ, ಕೃಷ್ಣ-ಇವರು ಪರಂಪರೆಯಾಗಿ ಪಡೆದರೆಂದೂ ಕೃಷ್ಣ ಸ್ವರ್ಗಾರೋಹಣ ಮಾಡುವಾಗ ಇದನ್ನು ಅವನಿಗೆ ಕೊಡಲು ಉದ್ಧವನ ಮುಖೇನ ಬೃಹಸ್ಪತಿಗೆ ನಿರೂಪ ಕಳುಹಿಸಿದನೆಂದೂ ಆದರೆ ಬೃಹಸ್ಪತಿ ದ್ವಾರಕೆಗೆ ಬರುವದರೊಳಗೆ ಇದು ಸಮುದ್ರದಲ್ಲಿ ಮುಳಗಿ ಬಿಟ್ಟಿತ್ತೆಂದೂ ಬೃಹಸ್ಪತಿ ತನ್ನ ಶಿಷ್ಯ ವಾಯುವಿನ ಸಹಾಯದಿಂದ ಈ ವಿಗ್ರಹವನ್ನು ಮೇಲಕ್ಕೆ ತಂದು ಶಿವನ ಪ್ರೇರಣೆಯಂತೆ ಸಮುದ್ರದಂಡೆಯ ಮೇಲೆ ಪ್ರತಿಷ್ಠೆ ಮಾಡಿದನೆಂದೂ ಸ್ಥಳಪುರಾಣವಿದೆ. ವಾಯುವಿನ ನೆರವಿನಿಂದ ಗುರು ವಿಗ್ರಹವನ್ನು ಅಲ್ಲಿ ಪ್ರತಿಷ್ಠೆ ಮಾಡಿದ್ದರಿಂದ ಆ ಸ್ಥಳಕ್ಕೆ ಗುರುವಾಯೂರು ಎಂದು ಹೆಸರು ಬಂತು. ಹದಿನಾರನೆಯ ಶತಮಾನದಲ್ಲಿ ಈ ದೇವರ ಸ್ತೋತ್ರರೂಪವಾದ ನಾರಾಯಣೀಯಂ ಎಂಬ ಗೃಂಥ ಈ ಪ್ರಾಂತ್ಯದಲ್ಲಿ ಪ್ರಸಿದ್ಧಿ ಪಡೆಯಿತು. ಇಲ್ಲಿಯ ಪೂಜೆ ಇತರ ಪೂಜೆಯಂತಲ್ಲದೆ ನಿಷ್ಕಲ ಬ್ರಹ್ಮಪೂಜೆಯಾಗಿದೆ. ಭಗವಾನ್ ಶಂಕರಾಚಾರ್ಯರು ಕೆಲಕಾಲ ಇಲ್ಲಿದ್ದು ಇಲ್ಲಿನ ಪೂಜಾ ಪದ್ಧತಿಯಲ್ಲಿ ಸುಧಾರಣೆಗಳನ್ನು ಮಾಡಿದರೆಂದೂ ಪ್ರತೀತಿ.

ಇದು 17ನೆಯ ಶತಮಾನದಲ್ಲಿ ಕೇರಳದಲ್ಲಿ ಉದಯಿಸಿದ ಭಕ್ತಿ ಪಂಥದ ಕೇಂದ್ರ ಸ್ಥಾನವೆನಿಸಿದೆ. ಪೂಂತಾನಂ, ಮೇಲಪುಂತೂರ್, ಬಿಲ್ವಮಂಗಲಂ ಮತ್ತು ಮಾನವೇದನ್ ಎಂಬ ಸಂತರು ಇಲ್ಲಿದ್ದರೆಂದು ತಿಳಿದುಬರುತ್ತದೆ. ಈ ಸಂತರ ಪುಣ್ಯಸ್ಮರಣೆಗಾಗಿ ಪ್ರತಿವರ್ಷವೂ ಕೇರಳದ ಅನೇಕ ಹಿಂದೂಗಳು ಇಲ್ಲಿಗೆ ಬರುವುದರಿಂದ ಈ ಸ್ಥಳದ ಮಹತ್ತ್ವ ಹೆಚ್ಚಿದೆ.

ಇಲ್ಲಿಯ ಪೂಜಾ ವಿಶೇಷದಿಂದ ಭಕ್ತರ ರೋಗರುಜಿನಗಳೂ ಸಂಕಷ್ಟಗಳೂ ದೂರವಾಗುತ್ತವೆಂಬ ನಂಬಿಕೆಯುಂಟು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: