ಗಾಳಿಯನ್ನು ಉಸಿರಾಡುವ ಮೀಸೆ ಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುರುಗೋಡು ಮೀನು (ಆಫ಼್ರಿಕಾದ ಮೀಸೆ ಮೀನು)

ಮೀಸೆ ಮೀನು ಅಥವಾ ಮುರುಗೋಡು ಮೀನು ಕ್ಲಾರಿಡೇ ಕುಟುಂಬಕ್ಕೆ ಸೇರಿದ ಮೀನುಗಳಾಗಿವೆ. ಇವುಗಳಲ್ಲಿ ೧೪ ಕುಲಗಳು ಮತ್ತು ಸುಮಾರು ೧೧೪ ಪ್ರಭೇದಗಳನ್ನು ಗುರುತಿಸಲಾಗಿದೆ. ಎಲ್ಲಾ ಕ್ಲಾರಿಡೆ ಮೀನುಗಳು ಸಿಹಿನೀರಿನಲ್ಲಿ ಕಂಡುಬರುತ್ತವೆ[೧]. ಇವುಗಳು ನೇರವಾಗಿ ಗಾಳೀಯನ್ನು ಉಸಿರಾಡಾಬಲ್ಲವು. ಆದ್ದರಿಂದ ಇವುಗಳನ್ನು ಗಾಳಿ-ಉಸಿರಾಡುವ ಮೀಸೆ ಮೀನುಗಳು ಎಂದೂ ಕರೆಯುತ್ತಾರೆ.

ವಿತರಣೆ[ಬದಲಾಯಿಸಿ]

ಭಾರತ, ಸಿರಿಯಾ, ದಕ್ಷಿಣ ಟರ್ಕಿ ಮತ್ತು ಆಗ್ನೇಯ ಏಷ್ಯಾದ ಹೆಚ್ಚಿನ ಭಾಗಗಳಲ್ಲಿ ಕ್ಲಾರೈಡ್‌ಗಳು ಕಂಡುಬಂದರೂ, ಅವುಗಳ ವೈವಿಧ್ಯತೆಯು ಆಫ್ರಿಕಾದಲ್ಲಿ ದೊಡ್ಡದಾಗಿದೆ. [೨]

ವಿವರಣೆ[ಬದಲಾಯಿಸಿ]

ಕ್ಲಾರಿಡ್ ಮೀನುಗಳನ್ನು ಉದ್ದವಾದ ದೇಹ, ನಾಲ್ಕು ಮೀಸೆಗಳು, ಉದ್ದವಾದ ಬೆನ್ನ ಮೇಲಿನ ಮತ್ತು ಗುದದ ರೆಕ್ಕೆಗಳು, ಮತ್ತು ಕಿವಿರುಗಳಲ್ಲಿರುವ ಎರಡನೇ ಮತ್ತು ನಾಲ್ಕನೇ ಕಮಾನುಗಳಲ್ಲಿ ರಚಿತವಾದ ಮೇಲಿನ ಶಾಖೆಯ ಕಮಾನುಗಳಿಂದ ಗುರುತಿಸಬಹುದು[೧][೨] ಈ ಮೇಲ್ಭಾಗದ ಶಾಖೆಯ ಅಂಗವು ಕೆಲವು ಪ್ರಭೇದಗಳಲ್ಲಿ ನೆಲದ ಮೇಲೆ ಸ್ವಲ್ಪ ದೂರ ಚಲಿಸುವ ಸಾಮರ್ಥ್ಯ ನೀಡುತ್ತದೆ.[೧]

ಬೆನ್ನಿನ ಈಜುರೆಕ್ಕೆ ತುಂಬಾ ಉದ್ದವಾಗಿದೆ ಮತ್ತು ಮೂಳೆಗಳಿಂದ ಕೂಡಿರುವುರುವುದಿಲ್ಲ. ಬೆನ್ನಿನ ಈಜುರೆಕ್ಕೆ ಬಾಲದ ರೆಕ್ಕೆಯೊಂದಿಗೆ ನಿರಂತರವಾಗಿರಬಹುದು ಅಥವಾ ಇರಲಿಕ್ಕಿಲ್ಲ. ಬಾಲದ ರೆಕ್ಕೆ ದುಂಡಾಗಿರುತ್ತದೆ. ಪೆಕ್ಟೋರಲ್ ಮತ್ತು ಶ್ರೋಣಿಯ ರೆಕ್ಕೆಗಳು ಕೆಲವು ಪ್ರಭೇದಗಳಲ್ಲಿ ಇರುವುದಿಲ್ಲ. ಕೆಲವು ಮೀನುಗಳು ಸಣ್ಣ ಕಣ್ಣುಗಳನ್ನು ಹೊಂದಿರುತ್ತವೆ. ಕೆಲವು ಪ್ರಭೇದಗಳು ಕುರುಡಾಗಿವೆ. [೩]

ಕ್ಲಾರಿಡೆ ಕುಟುಂಬದೊಳಗೆ, ದೇಹದ ರೂಪವು ಚೂಪಾದ ಆಕಾರದಿಂದ ಹಾವಿನ (ಈಲ್ ನಂತೆ) ಆಕಾರದವರೆಗೆ ಇರುತ್ತದೆ.

ಮನುಷ್ಯರೊಂದಿಗೆ ಸಂಬಂಧ[ಬದಲಾಯಿಸಿ]

ಅನೇಕ ಕ್ಲಾರಿಡ್ಗಳು ಕುಶಲಕರ್ಮಿ ಮೀನುಗಾರಿಕೆಯ ಹೆಚ್ಚಿನ ಪಾತ್ರ ವಹಿಸಿವೆ. ಕ್ಲಾರಿಯಸ್ ಗ್ಯಾರೀಪಿನಸ್ ಆಫ್ರಿಕಾದ ಅತ್ಯಂತ ಭರವಸೆಯ ಜಲಚರ ಸಾಕಣೆ ಪ್ರಭೇದಗಳಲ್ಲಿ ಒಂದಾಗಿದೆ. [೪]

ಈ ಮೀನುಗಳ ಗಾಳಿಯ ಉಸಿರಾಟದ ಸಾಮರ್ಥ್ಯವು ಕ್ಲಾರಿಯಾಸ್ ಬ್ಯಾಟ್ರಾಚಸ್‌ನಂತಹ ಮೀನುಗಳನ್ನು ಫ್ಲೋರಿಡಾದಲ್ಲಿ ಆಕ್ರಮಣಕಾರಿ ಪ್ರಭೇದವಾಗಿಸಲು ಅವಕಾಶ ಮಾಡಿಕೊಟ್ಟಿದೆ. [೩]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ Nelson, Joseph S. (2006). Fishes of the World. John Wiley & Sons, Inc. ISBN 0-471-25031-7.
  2. ೨.೦ ೨.೧ Devaere, Stijn; Adriaens, Dominique; Teugels, Guy G.; Verraes, Walter (2006). "Morphology of the cranial system of Platyclarias machadoi: interdependencies of skull flattening and suspensorial structure in Clariidae". Zoomorphology. 125 (2): 69. doi:10.1007/s00435-005-0012-7.
  3. ೩.೦ ೩.೧ Nelson, Joseph S. (2006). Fishes of the World. John Wiley & Sons, Inc. ISBN 0-471-25031-7.
  4. Skelton, Paul H.; Teugels, Guy G. (1991). "A review of the clariid catfishes (Siluroidei, Clariidae) occurring in southern Africa". Rev. Hydrobiol. Trop. 24 (3): 241–260.