ಗರ್ಭೋದಕಷಾಯಿ ವಿಷ್ಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗರ್ಭೋದಕಷಾಯಿ ವಿಷ್ಣು ಮಹಾವಿಷ್ಣುವಿನ ವಿಸ್ತರಣ. ಗೌಡೀಯ ವೈಷ್ಣವ ಪಂಥದಲ್ಲಿ, ಸಾತ್ವತ ತಂತ್ರವು ವಿಷ್ಣುವಿನ ಮೂರು ಭಿನ್ನ ರೂಪಗಳನ್ನು ವಿವರಿಸುತ್ತದೆ: ಮಹಾವಿಷ್ಣು, ಗರ್ಭೋದಕಷಾಯಿ ವಿಷ್ಣು ಮತ್ತು ಕ್ಷೀರೋದಕಷಾಯಿ ವಿಷ್ಣು (ಪರಮಾತ್ಮ). ಪ್ರತಿ ರೂಪವು ಬ್ರಹ್ಮಾಂಡದ ಮತ್ತು ಅದರ ನಿವಾಸಿಗಳ ಸುಸ್ಥಿತಿಯಲ್ಲಿ ಒಂದು ವಿಭಿನ್ನ ಪಾತ್ರ ಹೊಂದಿದೆ.

"ಪ್ರಾಪಂಚಿಕ ಸೃಷ್ಟಿಗಾಗಿ, ಕೃಷ್ಣನ ಸಮಗ್ರ ವಿಸ್ತರಣೆ ಮೂರು ವಿಷ್ಣುಗಳನ್ನು ಕಲ್ಪನೆ ಮಾಡಿಕೊಳ್ಳುತ್ತದೆ. ಮೊದಲನೆಯದಾದ, ಮಹಾವಿಷ್ಣುವು, ಮಹತ್ ತತ್ವ ಎಂದು ಕರೆಯಲಾದ ಒಟ್ಟು ಪ್ರಾಪಂಚಿಕ ಶಕ್ತಿಯನ್ನು ಸೃಷ್ಟಿಸುತ್ತದೆ. ಎರಡನೆಯದಾದ, ಗರ್ಭೋದಕಷಾಯಿ ವಿಷ್ಣುವು ಎಲ್ಲ ಬ್ರಹ್ಮಾಂಡಗಳೊಳಗೆ ಪ್ರವೇಶಿಸಿ ವಿವಿಧತೆಗಳನ್ನು ಸೃಷ್ಟಿಸುತ್ತದೆ, ಮತ್ತು ಮೂರನೆಯದಾದ ಕ್ಷೀರೋದಕಷಾಯಿ ವಿಷ್ಣುವು ಎಲ್ಲ ಬ್ರಹ್ಮಾಂಡಗಳಲ್ಲಿನ ಸರ್ವವ್ಯಾಪಕ ಪರಮಾತ್ಮವಾಗಿ ಪ್ರಸರಣವಾಗಿದೆ, ಪ್ರತಿ ಜೀವಿಯ ಹೃದಯದಲ್ಲಿ. ಅವನು ಪರಮಾಣುಗಳೊಳಗೂ ಇದ್ದಾನೆ. ಯೋಗದಲ್ಲಿ ಧ್ಯಾನದ ನಿಜವಾದ ಉದ್ದೇಶ ಪರಮಾತ್ಮ ಸ್ಥಿತಿಯನ್ನು ಸಾಧಿಸುವುದು. ಯಾರರು ಇವನ್ನು ಸಾದಿಸುತ್ತಾರೊ ಅವರು ಪ್ರಾಪಂಚಿಕ ಜಟಿಲತೆಯಿಂದ ಮುಕ್ತರಾಗಬಲ್ಲರು."[೧]

ಗರ್ಭೋಧಕಷಾಯಿ ವಿಷ್ಣುವು ಎರಡನೇ ಚತುರ್ವ್ಯೂಹದ ಮಹಾವಿಷ್ಣುವಿನ ವಿಸ್ತರಣೆ ಅಥವಾ ಅಪರಿಮಿತತೆ (ಸಂಕರ್ಷಣದ ವಿಸ್ತರಣೆ). ಇದು ವೈಕುಂಠದಲ್ಲಿನ ನಾರಾಯಣನಿಂದ ವಿಸ್ತರಿಸುತ್ತದೆ. ಕೊನೆಯದನ್ನು ಪ್ರದ್ಯುಮ್ನನ ವಿಸ್ತರಣೆಯಾಗಿ ಸಿದ್ಧಿಸಿಕೊಳ್ಳಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Quoted from the Sātvata-tantra Archived 2007-03-11 ವೇಬ್ಯಾಕ್ ಮೆಷಿನ್ ನಲ್ಲಿ. translation by A. C. Bhaktivedanta Swami Prabhupāda