ವಿಷಯಕ್ಕೆ ಹೋಗು

ಖೈಬರ್ ಕಣಿವೆಮಾರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಕಣಿವೆಮಾರ್ಗವು ಲಾಂಡಿ ಕೋಟಾಲ್‍ನ್ನು ಪೇಶಾವರ್ ಕಣಿವೆಗೆ ಜೋಡಿಸುತ್ತದೆ.

ಖೈಬರ್ ಕಣಿವೆಮಾರ್ಗವು ಆಫ್ಫಾನಿಸ್ತಾನಕ್ಕೂ ಪಾಕಿಸ್ತಾನಕ್ಕೂ ನಡುವೆ, ಹಿಮಾಲಯ ಪರ್ವತಶ್ರೇಣಿಯ ಮಧ್ಯೆ ಇರುವ ಮುಖ್ಯ ಕಣಿವೆಮಾರ್ಗ; ಪೆಷಾವರಿಗೆ ಪಶ್ಚಿಮಕ್ಕೆ 10½ ಮೈ. ದೂರದಲ್ಲಿದೆ. ಈ ಕಣಿವೆಮಾರ್ಗ ಇರುವ ಬೆಟ್ಟಗಳಿಗೂ ಖೈಬರ್ ಎಂದೇ ಹೆಸರು. ಜಗತ್ತಿನ ಬೇರಾವ ಕಣಿವೆಗೂ ಇದಕ್ಕಿರುವ ಪ್ರಾಮುಖ್ಯವಿಲ್ಲ.[] ರಸ್ತೆ ಮತ್ತು ರೈಲುಮಾರ್ಗಗಳನ್ನು ಕೊರೆದಂತಿರುವ ಈ ಕಣಿವೆ ಮುಂದೆ ಪ್ರಪಾತದಿಂದಲೂ ಹಿಂದೆ 6,000`-10,000` ಎತ್ತರದ ಸುಣ್ಣಗಲ್ಲಿನ ಬಂಡೆಗಳಿಂದಲೂ ಕೂಡಿ ಇಕ್ಕಟ್ಟಾಗಿದೆ.

ಕಾಬೂಲಿನ ದಾರಿಯಲ್ಲಿರುವ ಈ ಕಣಿವೆಮಾರ್ಗ ಭಾರತದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸಿದೆ. ಬಹು ಪುರಾತನ ಕಾಲದಿಂದ 18ನೆಯ ಶತಮಾನದ ಮಧ್ಯದ ವರೆಗೆ ತರಂಗತರಂಗವಾಗಿ ಆರ್ಯನ್, ಪರ್ಷಿಯನ್, ಗ್ರೀಕ್, ಸಿಥಿಯನ್, ಹೂಣ ಮತ್ತು ಮುಸ್ಲಿಮ್ ಜನ ಭಾರತಕ್ಕೆ ಬಂದದ್ದು ಈ ಮಾರ್ಗವಾಗಿಯೇ.[]

ಉಲ್ಲೇಖಗಳು

[ಬದಲಾಯಿಸಿ]
  1. Wright, Colin. "Maliks of Khyber Pass". www.bl.uk. Archived from the original on 2023-03-07. Retrieved 2023-03-07.
  2. Wilde, Andreas (September 27, 2022). "KHYBER PASS". Brill – via referenceworks.brillonline.com.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: